For Quick Alerts
ALLOW NOTIFICATIONS  
For Daily Alerts

ಅಡುಗೆ ಸೋಡಾ ಬೆರೆತ ನೀರು ಕುಡಿಯುವ ಮೂಲಕ ಕ್ಯಾನ್ಸರ್ ಗುಣಪಡಿಸಬಹುದು!

|

ಪ್ರತಿ ಕಾಯಿಲೆಗೂ ನಮ್ಮ ದೇಹದ ಕೆಲವು ಜೀವಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲದಿರುವುದೇ ಪ್ರಮುಖ ಕಾರಣವಾಗಿದೆ. ಕಾಯಿಲೆ ಯಾವುದೇ ಇರಬಹುದು, ಶೀತದಂತಹ ಸಾಮಾನ್ಯ ಕಾಯಿಲೆಯಾಗಿರಬಹುದು ಅಥವಾ ಮಾನಸಿಕ ಕಾಯಿಲೆ ಅಥವಾ ಗಂಭೀರ ಸ್ವರೂಪದ ಕ್ಯಾನ್ಸರ್ ನಂತಹ ಕಾಯಿಲೆಯೂ ಆಗಿರಬಹುದು. ಜೀವಕೋಶಗಳ ಅಸಮರ್ಪಕ ಕಾರ್ಯನಿರ್ವಹಣೆಗೆ ಕೆಲವು ಕೊರತೆ ಅಥವಾ ಹೆಚ್ಚುವರಿಗಳು ಕಾರಣವಾಗಿರಬಹುದು, ಉದಾಹರಣೆಗೆ ಪೋಷಕಾಂಶಗಳ ಕೊರತೆ ಅಥವಾ ವಿಷಪದಾರ್ಥಗಳ ಇರುವಿಕೆ.

ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಬರುವ ಕ್ಯಾನ್ಸರ್ ಎಂದರೆ ಸ್ತನ ಮತ್ತು ಶ್ವಾಸಕೋಶದ ಕ್ಯಾನ್ಸರ್ ಆಗಿವೆ. ಪುರುಷರಲ್ಲಿ ಪ್ರಾಸ್ಟೇಟ್, ಶ್ವಾಸಕೋಶ ಹಾಗೂ ಕರುಳಿನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತದೆ. ಇದರ ಹೊರತಾಗಿ ಗರ್ಭಕೋಶ, ಮೂತ್ರಪಿಂಡ ಹಾಗೂ ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಸಹಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಣಬರುತ್ತಿದೆ

baking soda cancer cure recipe in kannada

ಕ್ಯಾನ್ಸರ್ ಆವರಿಸಲು ಹಲವಾರು ಅಂಶಗಳು ಪೂರಕವಾಗಿವೆ. ಧೂಮಪಾನ, ಸ್ಥೂಲಕಾಯ, ಮದ್ಯಪಾನ, ಅನಾರೋಗ್ಯಕರ ಜೀವನಕ್ರಮ ಮೊದಲಾದವು ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದಕ್ಕೊಂದು ಸರಳ ಪರಿಹಾರವಿದೆ, ಅದೆಂದರೆ, ನೀರಿನಲ್ಲಿ ಅಡುಗೆ ಸೋಡಾ ಬೆರೆಸಿ ಕುಡಿಯುವ ಮೂಲಕ ದೇಹದಲ್ಲಿ ಈಗಾಗಲೇ ಬೆಳೆಯಲು ಆರಂಭಿಸಿದ್ದ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತದೆ. ಇತ್ತೀಚಿನ ಹೊಸ ಸಂಶೋಧನೆಯಲ್ಲಿ ಅಡುಗೆ ಸೋಡಾ ಕೆಲವು ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆಗೆ ತಡೆಯೊಡ್ಡಿ ಕೊಲ್ಲುವ ಮೂಲಕ ಕ್ಯಾನ್ಸರ್ ಗುಣಪಡಿಸಲು ಸಾಧ್ಯ ಎಂದು ಕಂಡುಕೊಳ್ಳಲಾಗಿದೆ. ಅಲ್ಲದೇ ಒಂದು ವೇಳೆ ಈಗಾಗಲೇ ಕ್ಯಾನ್ಸರ್ ಪೀಡಿತ ಅಂಗಾಂಶ ಸಾಕಷ್ಟು ಬೆಳೆದಿದ್ದರೆ ಅಡುಗೆ ಸೋಡಾ ಈ ಜೀವಕೋಶಗಳಿಗೆ ಪ್ರಚೋದನೆ ನೀಡುವ ಮೂಲಕ ಕ್ಯಾನ್ಸರ್ ನ ಇರುವಿಕೆಯನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಮಾಡುತ್ತದೆ ಅಲ್ಲದೇ ಬೆಳವಣಿಗೆಯ ಗತಿಯನ್ನು ನಿಧಾನಗೊಳಿಸುತ್ತದೆ.

ಅಡುಗೆ ಸೋಡಾ ಅಥವಾ ಸೋಡಿಯಂ ಬೈಕಾರ್ಬೋನೇಟ್, ಮೆಗ್ನೀಶಿಯಂ ಕ್ಲೋರೈಡ್, ಅಯೋಡಿನ್ ಹಾಗೂ ವಿಟಮಿನ್ ಸಿ ಮೊದಲಾದವುಗಳು ಪ್ರಬಲ ಔಷಧಿಗಳಿಗಿಂತ ಯಾವುದೇ ಅಡ್ಡಪರಿಣಾಮವಿಲ್ಲದೇ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನೇ ಉಂಟುಮಾಡುತ್ತವೆ. ಕೆಲವು ಔಷಧಿಗಳು ಪ್ರಬಲವಾಗಿದ್ದು ಅಲ್ಪ ಪ್ರಮಾಣದಲ್ಲಿ ಸೇವಿಸಿದರೂ ಇದರ ಅಡ್ಡ ಪರಿಣಾಮ ಭಯಂಕರವೇ ಆಗಿರುತ್ತದೆ. ಅಡುಗೆ ಸೋಡಾ ನೈಸರ್ಗಿಕವಾಗಿ ಲಭಿಸುವ ಲವಣವಾಗಿದ್ದು ನಿತ್ಯದ ಹಲವು ಕಾರ್ಯಗಳಲ್ಲಿ ಮತ್ತು ಅಡುಗೆಗಳಲ್ಲಿ ಬಳಸಲ್ಪಡುತ್ತದೆ. ಈ ಸುಲಭ ಸಾಮಾಗ್ರಿ ಕ್ಯಾನ್ಸರ್ ನಂತಹ ಭಯಂಕರ ರೋಗಕ್ಕೆ ಸುಲಭ ಮದ್ದಾಗಬಲ್ಲುದು ಎಂದು ಇದುವರೆಗೆ ಯಾರಿಗೂ ತಿಳಿದೇ ಇರಲಿಲ್ಲ!

ಒಂದು ಅಂಗಾಂಶಕ್ಕೆ ಸಂಬಂಧಿಸಿದ ಜೀವಕೋಶಗಳ ಸಂಖ್ಯೆ ಒಂದು ಮಿತಿಯೊಳಗಿರಬೇಕು, ಒಂದು ವೇಳೆ ಈ ಸಂಖ್ಯೆ ಮಿತಿಮೀರಿ ಆ ಅಂಗಾಂಶ ಬೆಳೆದರೆ, ಇದು ಅಂಗಾಂಶದ ಪ್ರಮುಖ ಕಾರ್ಯಕ್ಕೇ ಅಡ್ಡಿಯುಂಟುಮಾಡಿದರೆ ಅಥವಾ ಬೇರೆ ರೂಪದಲ್ಲಿ ಆರೋಗ್ಯಕ್ಕೆ ಮಾರಕವಾದರೆ ಇದನ್ನೇ ಕ್ಯಾನ್ಸರ್ ಎನ್ನುತ್ತೇವೆ. ಸಾಮಾನ್ಯವಾಗಿ ಈ ಬೆಳವಣಿಗೆ ಒಂದು ಭಾಗದಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ ಹಾಗೂ ಗಡ್ಡೆಯ ರೂಪ ತಳೆಯುತ್ತದೆ. ಈ ಅನಗತ್ಯ ಜೀವಕೋಶಗಳನ್ನು ಅಕ್ಕಪಕ್ಕದ ಅಗತ್ಯ ಜೀವಕೋಶಗಳು ನಿವಾರಿಸಲು ಸಾಧ್ಯವಾಗದೇ ಹೋಗುತ್ತದೆ ಬದಲಿಗೆ ಗಡ್ಡೆಯೇ ಅಂಗದ ಕಾರ್ಯಕ್ಷಮತೆಯನ್ನು ಕಸಿಯುತ್ತದೆ. ಅದರಲ್ಲೂ ಮೆದುಳು, ಶ್ವಾಸಕೋಶ ಮೊದಲಾದ ಸೂಕ್ಷ್ಮ ಅಂಗಗಳಲ್ಲಿ ಎದುರಾಗುವ ಕ್ಯಾನ್ಸರ್ ಅಂಗದ ಒಳಭಾಗವನ್ನೆಲ್ಲಾ ಆಕ್ರಮಿಸಿ ಪ್ರಾಣಾಪಾಯ ಎದುರಾಗುವಂತೆ ಮಾಡುತ್ತದೆ. ಒಂದು ಸಂಶೋಧನೆಯಲ್ಲಿ ಕಂಡುಕೊಂಡಂತೆ ಅಡುಗೆಸೋಡಾ ಬೆರೆತ ನೀರನ್ನು ಕುಡಿಯುವ ಮೂಲಕ ಈ ಗಡ್ಡೆಯಲ್ಲಿರುವ ಜೀವಕೋಶಗಳೂ ತಮ್ಮ ಮೂಲ ಕೆಲಸವನ್ನು ಮಾಡುವಂತೆ ಪ್ರಚೋದಿಸುತ್ತದೆ ಹಾಗೂ ಈ ಮೂಲಕ ಖೀಮೋಥೆರಪಿ ಮೊದಲಾದ ಕ್ಯಾನ್ಸರ್ ನ ಗಡ್ಡೆಯನ್ನು ಕೊಲ್ಲುವ ಚಿಕಿತ್ಸೆ ಇನ್ನಷ್ಟು ಫಲಕಾರಿಯಾಗುವಂತೆ ಮಾಡುತ್ತದೆ. ಈ ಸಂಶೋಧನೆ ನಡೆಸಿದ ಲುಡ್ವಿಗ್ ಕ್ಯಾನ್ಸರ್ ಸಂಶೋಧನಾಲಯದ ವಿಜ್ಞಾನಿಗಳ ಪ್ರಕಾರ ನಮ್ಮ ಸರಳ ಅಡುಗೆ ಸೋಡಾ ಕ್ಯಾನ್ಸರ್ ನ ಚಿಕಿತ್ಸೆಗೆ ಸೂಕ್ತ ಫಲ ನೀಡುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ಪೀಡಿತ ಜೀವಕೋಶಗಳು ಆಮ್ಲೀಯವಾಗಿದ್ದು ಕ್ಷಾರೀಯವಾಗಿರುವ ಅಡುಗೆ ಸೋಡಾ ಇದಕ್ಕೆ ವಿರುದ್ದವಾದ ಪರಿಣಾಮವನ್ನು ಒದಗಿಸಿ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಬನ್ನಿ, ಅಡುಗೆ ಸೋಡಾವನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ:

ಕ್ಷಾರೀಯ ಗುಣ:

ಕ್ಷಾರೀಯ ಗುಣ:

ಕ್ಯಾನ್ಸರ್ ಉಂಟಾಗಲು ಕ್ಯಾಂಡಿಡಾ ಎಂಬ ವಿಷಕಾರಿ ಬ್ಯಾಕ್ಟೀರಿಯಾ ಕಾರಣವಾಗಿದೆ. ಸೋಡಿಯಂ ಬೈಕಾರ್ಬೋನೇಟ್ ಅಥವಾ ಅಡುಗೆ ಸೋಡಾದ ಕ್ಷಾರೀಯ ವಾತಾವರಣದಲ್ಲಿ ಈ ಕ್ಯಾಂಡಿಡಾ ಬ್ಯಾಕ್ಟೀರಿಯಾ ಸತ್ತು ಹೋಗುತ್ತದೆ. ದೇಹ ಹೆಚ್ಚು ಹೆಚ್ಚು ಆಮ್ಲೀಯವಾದಷ್ಟೂ ಈ ಕ್ಯಾಂಡಿಡಾ ಪ್ರಬಲವಾಗುತ್ತಾ ಹೋಗುತ್ತದೆ ಹಾಗೂ ಇಡಿಯ ದೇಹವನ್ನೇ ತನ್ನ ಪ್ರಭಾವಕ್ಕೊಳಪಡಿಸಬಹುದು. ಆದರೆ ಕ್ಷಾರೀಯ ವಾತಾವರಣದಲ್ಲಿ ಈ ಬ್ಯಾಕ್ಟೀರಿಯಾಕ್ಕೆ ಮೂಗುದಾರ ತೊಡಿಸಿದಂತಾಗುತ್ತದೆ. ಆದ್ದರಿಂದ ದೇಹವನ್ನು ಸೂಕ್ತ ಪ್ರಮಾಣದಲ್ಲಿ ಕ್ಷಾರೀಯಗೊಳಿಸುವ ಮೂಲಕ ಈ ಬ್ಯಾಕ್ಟೀರಿಯಾವನ್ನು ಸಮರ್ಥವಾಗಿ ನಿಭಾಯಿಸಿ ನಿವಾರಿಸಬಹುದು.

ಜೀವಕೋಶಗಳ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ:

ಜೀವಕೋಶಗಳ ಚಟುವಟಿಕೆಯನ್ನು ಚುರುಕುಗೊಳಿಸುತ್ತದೆ:

ದೇಹದಲ್ಲಿ ಆಮ್ಲೀಯ ಮಟ್ಟದ ತೊಂದರೆಯನ್ನು ಅನುಭವಿಸುವ ವ್ಯಕ್ತಿಗಳು ಜೀವಕೋಶಗಳ ಶರೀರಶಾಸ್ತ್ರದಲ್ಲಿ ಕೆಲವು ತೊಂದರೆಗಳನ್ನು ಹೊಂದಿರುತ್ತಾರೆ. ಈ ಸ್ಥಿತಿಗೆ ಬಹುತೇಕವಾಗಿ ಅನಾರೋಗ್ಯಕರ ಆಹಾರಕ್ರಮವೇ ಕಾರಣವಾಗಿದ್ದು ದೇಹದಲ್ಲಿನ ಪಿಎಚ್ ಮಟ್ಟ ಆಮ್ಲೀಯತೆಯಿಂದಿರಲು ಸಾಧ್ಯವಾಗುತ್ತದೆ. ಯಾವಾಗ ದೇಹದ ಪಿ ಎಚ್ ಮಟ್ಟ (ಆಮ್ಲೀಯ-ಕ್ಷಾರೀಯ ಮಟ್ಟವನ್ನು ನಿರ್ಧರಿಸುವ ಗುಣಾಂಕ) ಏರುಪೇರಾಗುತ್ತದೆಯೋ ಆಗ ದೇಹದ ಎಲ್ಲಾ ಜೀವಕೋಶಗಳ ಚಟುವಟಿಕೆಗಳೂ ಏರುಪೇರಿಗೆ ಒಳಗಾಗುತ್ತವೆ ಹಾಗೂ ಕ್ಯಾನ್ಸರ್, ಮಧುಮೇಹ, ಎದೆಯುರಿಯಂತಹ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ನಮ್ಮ ದೇಹದ ಎಲ್ಲಾ ಕಾರ್ಯಗಳು ಸುಲಲಿತವಾಗಿ ಜರುಗಬೇಕಾದರೆ ದೇಹದ ಪಿಎಚ್ ಮಟ್ಟ ಸಂತುಲತೆಯಿಂದ ಅಂದರೆ ನೀರಿನ ಮಟ್ಟದಲ್ಲಿರಬೇಕು (ಅತ್ತ ಕ್ಷಾರೀಯವೂ ಅಲ್ಲ, ಇತ್ತ ಆಮ್ಲೀಯವೂ ಅಲ್ಲದ), ನೆನಪಿರಲಿ, ನಮ್ಮ ದೇಹ ೭೧% ಅಪ್ಪಟ ನೀರಿನಿಂದ ಕೂಡಿದೆ! ಹಾಗಾಗಿ ಆಮ್ಲೀಯತೆಯಲ್ಲಿರುವ ದೇಹದ ಪಿ ಎಚ್ ಮಟ್ಟವನ್ನು ಸಂತುಲತೆಯ ಮಟ್ಟಕ್ಕೆ ತರಲು ಕ್ಷಾರೀಯ ದ್ರವವನ್ನು ಸೇರಿಸಬೇಕು. ಈ ಕಾರ್ಯವನ್ನು ಅಡುಗೆ ಸೋಡಾಕ್ಕಿಂತ ಉತ್ತಮವಾಗಿ ನಿರ್ವಹಿಸಬಲ್ಲ ಸಾಮಾಗ್ರಿ ಇನ್ನೊಂದಿಲ್ಲ! ಸೋಡಿಯಂ ಬೈಕಾರ್ಬೋನೇಟ್ ಅಥವಾ ಅಡುಗೆ ಸೋಡಾ ಒಂದು ನೈಸರ್ಗಿಕ ಲವಣವಾಗಿದ್ದು ದೇಹದ ಆರೋಗ್ಯವನ್ನು ವೃದ್ದಿಸಲು ಹಲವಾರು ಬಗೆಯಲ್ಲಿ ನೆರವಾಗುತ್ತದೆ. ಅಡುಗೆ ಸೋಡಾ ಬೆರೆಸಿದ ನೀರನ್ನು ಕುಡಿಯುವ ಮೂಲಕ ಕ್ಯಾನ್ಸರ್ ಗೆ ತುತ್ತಾಗಿರುವ ಗಡ್ಡೆಯ ಜೀವಕೋಶಗಳ ಚಟುವಟಿಕೆ ಚುರುಕುಗೊಳ್ಳುತ್ತದೆ.

ಜೀವಕೋಶಗಳ ಆರೋಗ್ಯ ವೃದ್ದಿಸುತ್ತದೆ:

ಜೀವಕೋಶಗಳ ಆರೋಗ್ಯ ವೃದ್ದಿಸುತ್ತದೆ:

ಪ್ರತಿ ರಾತ್ರಿಯೂ ಕ್ಷಾರೀಯ ದ್ರವವನ್ನು ಸೇವಿಸುವ ವ್ಯಕ್ತಿಗಳಲ್ಲಿ ರಾಸಾಯನಿಕ ಸೂಕ್ಷ್ಮತೆಯ ಲಕ್ಷಣಗಳನ್ನು ಕಡಿಮೆಯಾಗಿರುವುದನ್ನು ಕಂಡುಕೊಳ್ಳಲಾಗಿದೆ. ಈ ಮೂಲಕ ದೇಹದಲ್ಲಿ ಎದುರಾಗುವ ಉರಿಯೂತದಿಂದ ರಕ್ಷಣೆ ಒದಗಿಸಿದಂತಾಗುತ್ತದೆ ಹಾಗೂ ಕ್ಯಾನ್ಸರ್ ಪೀಡಿತ ಜೀವಕೋಶಗಳು ಇತರ ಅಂಗಗಳ ಒಳಗೆ ತೂರಿಕೊಂಡು ತಮ್ಮ ವಿಷಕಾರಿ ಪ್ರಭಾವವನ್ನು ಆ ಅಂಗಗಳಿಗೂ ಹರಡುವುದರಿಂದ ರಕ್ಷಣೆ ದೊರಕುತ್ತದೆ. ಕ್ಯಾನ್ಸರ್ ಎದುರಾಗಲು ಹಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಫ್ರೀ ರ್‍ಯಾಡಿಕಲ್ ಎಂಬ ಕಣಗಳ ಪ್ರಭಾವ, ಅತಿನೇರಳೆ ಕಿರಣಗಳು ಹಾಗೂ ಜೀವಕೋಶಗಳ ಕಾರ್ಯಶೀಲತೆಯನ್ನು ಬದಲಿಸಬಲ್ಲ ಕೆಲವು ವಿಷಕಾರಿ ರಾಸಾಯನಿಕಗಳು.

ಆರೋಗ್ಯವನ್ನು ವೃದ್ದಿಸುತ್ತದೆ:

ಆರೋಗ್ಯವನ್ನು ವೃದ್ದಿಸುತ್ತದೆ:

ಅಚ್ಚರಿಯ ವಿಷಯವೆಂದರೆ ಅಡುಗೆ ಸೋಡಾ ಸೇವನೆಯಿಂದ ಆರೋಗ್ಯ ವೃದ್ದಿಸುತ್ತದೆ. ಸುಮಾರು ಎಂಟು ಔನ್ಸ್ ಅಥವಾ ಕಾಲು ಲೀಟನ್ ನೀರಿನಲ್ಲಿ ಒಂದು ಚಿಕ್ಕ ಚಮಚ ಅಡುಗೆ ಸೋಡಾ ಕದಡಿ ಕುಡಿಯುವ ಮೂಲಕ ಜೀವಕೋಶಗಳು ಹಾನಿಗೊಳಗಾಗುವುದನ್ನು ತಪ್ಪಿಸಬಹುದು. ವಾರಕ್ಕೆರಡು ಬಾರಿ ಈ ನೀರನ್ನು ಕುಡಿಯುವುದರಿಂದ ದೇಹದ ಜೀವಕೋಶಗಳು ಕ್ಯಾನ್ಸರ್ ಗೆ ಪ್ರಚೋದನೆ ನೀಡುವ ಮಾರಕ ಕಣಗಳ ಪ್ರಭಾವಕ್ಕೆ ಒಳಗಾಗದೇ ಇರಲು ಸಾಧ್ಯವಾಗುತ್ತದೆ. ಅಡುಗೆ ಸೋಡಾವನ್ನು ಎಂದಿಗೂ ಹಾಗೇ ಸೇವಿಸಬಾರದು, ಕೇವಲ ನೀರಿನಲ್ಲಿ ಕರಗಿಸಿಯೇ ಸೇವಿಸಬೇಕು. ಹೆಚ್ಚಿನವರಿಗೆ ಇದರ ರುಚಿ ಇಷ್ಟವಾಗದಿರಬಹುದು. ರುಚಿಗಾಗಿ ಕೊಂಚ ಲಿಂಬೆ ಅಥವಾ ಜೇನನ್ನು ಬೆರೆಸಿ ಸೇವಿಸಬಹುದು.

ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಶಿಲೀಂಧ್ರದ ಮೇಲೆ ಧಾಳಿ ಇಡುತ್ತದೆ:

ಶಿಲೀಂಧ್ರದ ಮೇಲೆ ಧಾಳಿ ಇಡುತ್ತದೆ:

ಕ್ಯಾನ್ಸರ್ ಗೆ ಚಿಕಿತ್ಸೆಯ ರೂಪದಲ್ಲಿ ದೇಹವನ್ನು ಕ್ಷಾರೀಯಗೊಳಿಸುವುದು ಒಂದು ವಿಧಾನ ಹಾಗೂ ಇದನ್ನು ಅಡುಗೆ ಸೋಡಾ ಬೆರೆತ ನೀರಿನ ಸೇವನೆಯಿಂದ ಸಾಧ್ಯವಾಗಿಸಬಹುದು ಎಂದು ಈಗಾಗಲೇ ಅರಿತುಕೊಂಡಿದ್ದೇವೆ. ಈ ನೀರಿನ ಇನ್ನೊಂದು ಗುಣವೆಂದರೆ ದೇಹದಲ್ಲಿರುವ ಶಿಲೀಂಧ್ರಗಳ ಮೇಲೆ ನೇರವಾಗಿ ಧಾಳಿ ಇಡುವುದಾಗಿದೆ. ಇದೊಂದು ನೈಸರ್ಗಿಕ ಲವಣವಾಗಿದ್ದು ಮಕ್ಕಳಿನಿಂದ ತೊಡಗಿ ಹಿರಿಯರವರೆಗೂ ಎಲ್ಲರಿಗೂ ಸುರಕ್ಷಿತವಾಗಿದ್ದು ವಾತಾವರಣವನ್ನೂ ಯಾವುದೇ ರೀತಿಯಲ್ಲಿ ಕಲುಶಿತಗೊಳಿಸುವುದಿಲ್ಲ. ಇಂದಿನ ದಿನಗಳಲ್ಲಿ ನಮ್ಮ ವಾತಾವರಣ, ಆಹಾರ ಹಾಗೂ ಪರಿಸರ ಎಲ್ಲವೂ ದೇಹವನ್ನು ಹೆಚ್ಚು ಹೆಚ್ಚು ಆಮ್ಲೀಯಗೊಳಿಸುತ್ತದೆ ಹಾಗೂ ಈ ಸಂದರ್ಭದಲ್ಲಿ ಅಡುಗೆ ಸೋಡಾ ಈ ಆಮ್ಲೀಯತೆಯನ್ನು ಸಂತುಲಿತಗೊಳಿಸುವ ಅತ್ಯುತ್ತಮ ತಟಸ್ಥಕಾರಕವಾಗಿದೆ (neutralizer).

ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ:

ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ:

ಸಂಶೋಧನೆಯಲ್ಲಿ ಕಂಡುಕೊಂಡಿರುವ ಪ್ರಕಾರ ಅಡುಗೆ ಸೋಡಾ ತಟಸ್ಥಕಾರಕ ಲವಣವಾಗಿದ್ದು ದೇಹದಲ್ಲಿ ಈಗಾಗಲೇ ಬೆಳೆದಿರುವ ಕ್ಯಾನ್ಸರ್ ಗಡ್ಡೆಯ ಚಟುವಟಿಕೆಯನ್ನು ಕಡಿಮೆಗೊಳಿಸುತ್ತದೆ ಹಾಗೂ ಇದರೊಳಗಿದ್ದ ಸುಪ್ತ ಜೀವಕೋಶಗಳನ್ನು ಮತ್ತೆ ಚಟುವಟಿಕೆ ಪ್ರಾರಂಭಿಸಲು ಪ್ರಚೋದನೆ ನೀಡುತ್ತದೆ. ಮಧುಮೇಹ, ಹೃದ್ರೋಗ ಕ್ಯಾನ್ಸರ್ ಮೊದಲಾದ ಕಾಯಿಲೆಗಳಿಂದ ಈಗಾಗಲೇ ಬಳಲುತ್ತಿರುವ ವ್ಯಕ್ತಿಗಳು ಈ ನೈಸರ್ಗಿಕ ತಟಸ್ಥಕಾರಕ ಲವಣದ ಪ್ರಯೋಜನವನ್ನು ಖಂಡಿತಾ ಪಡೆದು ತಮ್ಮ ಆರೋಗ್ಯವನ್ನು ಉತ್ತಮಗೊಳಿಸಬಹುದು.

English summary

Cancer Could Be Cured By Drinking Baking Soda With Water

A study has found that baking soda can fight cancer as it tries to make the cells inside the tumor to function better and makes it easier for chemotherapy drugs to kill. Scientists at Ludwig Institute for Cancer Research have proved that baking soda, which is precisely used in the kitchen is an effective ingredient for cancer treatment. It helps the body to fight against the acidic effects of cancer tumors.
Story first published: Friday, June 29, 2018, 17:07 [IST]
X
Desktop Bottom Promotion