For Quick Alerts
ALLOW NOTIFICATIONS  
For Daily Alerts

ಮೂತ್ರನಾಳದ ಸೋಂಕು: ಗುಣವಾಗುವವರೆಗೂ ಸೆಕ್ಸ್‌ನ್ನು ಮುಂದೂಡಬೇಕೇ?

|

ಮೂತ್ರನಾಳದ ಸೋಂಕು (urinary tract infection ಅಥವಾ (UTI)ಎದುರಾದರೆ ಇದನ್ನು ಗುಣಪಡಿಸಲು ಕೆಲವಾರು ದಿನಗಳವರೆಗೆ ಪ್ರತಿಜೀವಕ (ಆಂಟಿ ಬಯಾಟಿಕ್ಸ್) ಔಷಧಿಗಳ ಸಹಿತ ಇತರ ಔಷಧಿಗಳನ್ನೂ ಸೇವಿಸಬೇಕಾಗಿ ಬರುತ್ತದೆ. ಆದರೆ ಇದು ಪೂರ್ಣವಾಗಿ ಗುಣವಾಗುವವರೆಗೆ ಮಿಲನವನ್ನು ಮೂಂದೂಡಬೇಕೇ?

Can You Have Sex with a Urinary Tract Infection

ಸೋಂಕು ಇರುವ ವ್ಯಕ್ತಿಗಳು ಮಿಲನಗೊಂಡ ಸಮಯದಲ್ಲಿ ಈ ಸೋಂಕು ಸುಲಭವಾಗಿ ಸಂಗಾತಿಗೂ ಹರಡುತ್ತದೆ. ಸಾಮಾನ್ಯವಾಗಿ ಮೂತ್ರನಾಳದ ಸೋಂಕಿಗೆ ಇದು ಪ್ರಮುಖ ಕಾರಣ. ಈ ಸೋಂಕು ಎದುರಾದರೆ ಭಾರೀ ಉರಿ ಮತ್ತು ನೋವು ಎದುರಾಗುತ್ತದೆ. ವೈದ್ಯರು ಈ ಸೋಂಕಿನ ಇರುವಿಕೆಯನ್ನು ಖಚಿತಪಡಿಸಿಕೊಂಡು ನೀಡುವ ಔಷಧಿಗಳನ್ನು ಕನಿಷ್ಟ ಒಂದು ವಾರವಾದರೂ ಸತತವಾಗಿ ಸೇವಿಸಬೇಕು. ಈ ಅವಧಿಯಲ್ಲಿ ಸೋಂಕು ಕಡಿಮೆಯಾಗಿ ಉರಿ ಮತ್ತು ನೋವು ಸಹಾ ಮಾಯವಾಗಬೇಕು. ಕೆಲವೊಮ್ಮೆ ಒಂದೆರಡು ದಿನಗಳಲ್ಲಿಯೇ ಸೋಂಕು ಪೂರ್ಣವಾಗಿ ಇಲ್ಲವಾಗುವುದೂ ಇದೆ. ವಾಸ್ತವವಾಗಿ, ಸೋಂಕು ಎರಡು ದಿನಗಳಲ್ಲಿಯೇ ಇಲ್ಲವಾದ ತಕ್ಷಣ ಮಿಲನಕ್ಕೆ ಮನ ಹಾತೊರೆಯುತ್ತದೆ. ಆದರೆ ಈ ಮಿಲನ ಮೂತ್ರನಾಳದ ಸೋಂಕನ್ನು ಮತ್ತೆ ಉಲ್ಬಣಗೊಳಿಸಿಲ್ಲವೇ? ಮುಂದೆ ಓದಿ
ವೈದ್ಯರ ಸಲಹೆ ಪಡೆದುಕೊಳ್ಳಿ

ವೈದ್ಯರ ಸಲಹೆ ಪಡೆದುಕೊಳ್ಳಿ

ಮೂತ್ರನಾಳದ ಸೋಂಕು ಎದುರಾದ ಬಳಿಕ ನಿಮ್ಮ ವೈದ್ಯರಲ್ಲಿ ಚಿಕಿತ್ಸೆಯನ್ನು ಪಡೆದ ಬಳಿಕ ಮುಂದಿನ ಮಿಲನ ಯಾವಾಗ ಸುರಕ್ಷಿತ ಎಂಬುದನ್ನು ತಪ್ಪದೇ ಕೇಳಿಕೊಳ್ಳಿ. ಸಾಮಾನ್ಯವಾಗಿ ಈ ಸೋಂಕು ಮೂಲದವರೆಗೂ ಇಲ್ಲವಾಗುವವರೆಗೂ ಮಿಲನಕ್ರಿಯೆ ಸುರಕ್ಷಿತವಲ್ಲ. ಅಂದರೆ ನಿಮಗೆ ನೀಡಿದ ಪ್ರತಿಜೀವಕ ಔಷಧಿಗಳು ಪೂರ್ಣವಾಗಿ ತಮ್ಮ ಕಾರ್ಯವನ್ನು ಮುಗಿಸಿ ಈ ಸೋಂಕನ್ನು ಬುಡಸಹಿತ ಇಲ್ಲವಾಗಿಸಲು ಎರಡು ವಾರಗಳಾದರೂ ಬೇಕು. ಈ ಅವಧಿಯಲ್ಲಿ ನಡುವೆ ಒಂದೆರಡು ದಿನ ನಿಮಗೆ ನೀವೇ ಮೋಸ ಮಾಡಿಕೊಳ್ಳದೇ ಪ್ರಾಮಾಣಿಕರಾಗಿರಬೇಕು.

Most Read: ವೈದ್ಯರ ಪ್ರಕಾರ ದೇಹದ ಈ 7 ಅಂಗಗಳನ್ನು ಮುಟ್ಟಲೇಬಾರದಂತೆ! ಯಾಕೆ ಗೊತ್ತೇ?

ಇಂತಹ ಸಮಯದಲ್ಲಿ ಮಿಲನವೇಕೆ ಬೇಡ ಎನ್ನಲು ಇನ್ನಷ್ಟು ಕಾರಣಗಳು

ಇಂತಹ ಸಮಯದಲ್ಲಿ ಮಿಲನವೇಕೆ ಬೇಡ ಎನ್ನಲು ಇನ್ನಷ್ಟು ಕಾರಣಗಳು

ಅಲ್ಲದೇ ಇನ್ನೂ ಸೋಂಕಿನಿಂದ ಗುಣಹೊಂದುತ್ತಿರುವಾಗ ಮಿಲನವೇಕೆ ಬೇಡ ಎನ್ನಲು ಇನ್ನೂ ಕೆಲವು ಕಾರಣಗಳಿವೆ. ಮೊದಲ ಕಾರಣ ಮೇಲ್ನೋಟಕ್ಕೆ ಸೋಂಕು ಇಲ್ಲವಾದಂತೆ ಕಂಡುಬಂದರೂ ತಳಭಾಗದಲ್ಲಿ ಇನ್ನೂ ಹಸಿಯಾಗಿದ್ದು ಮಿಲನ ಕ್ರಿಯೆಯಿಂದ ಈ ಭಾಗದಲ್ಲಿ ತೀವ್ರವಾದ ಉರಿ ಪ್ರಾರಂಭವಾಗುತ್ತದೆ. ಅಲ್ಲದೇ ಸುಖಕರವಾಗಿರಬೇಕಾದ ಮಿಲನಕ್ರಿಯೆ ಬೆಂಕಿಕಡ್ಡಿ ಹಚ್ಚಿದಂತಾಗುತ್ತದೆ. ಅಲ್ಲದೇ ಗುಣವಾಗುವ ಹಂತದಲ್ಲಿದ್ದ ಸೋಂಕು ಮತ್ತೊಮ್ಮೆ ಗರಿಗೆದರಿ ಉಲ್ಬಣಾವಸ್ಥೆಗೆ ಹಿಂದಿರುಗಲೂಬಹುದು ಹಾಗೂ ಈಗಾಗಲೇ ಈ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದ ಅಂಗಾಂಶಗಳಿಗೂ ಘಾಸಿಯುಂಟುಮಾಡಬಹುದು.

ಹಾಗಾದರೆ ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಏನು ಮಾಡುವಿರಿ? ಇಲ್ಲಿವೆ ನಾಲ್ಕು ಸಲಹೆಗಳು

ಸೋಂಕು ಪೂರ್ಣವಾಗಿ ಇಲ್ಲವಾಗುವ ಅವಧಿಯಲ್ಲಿ ಮಿಲನಕ್ರಿಯೆ ಇಲ್ಲದೇ ಇರುವುದು ವಿರಹವನ್ನು ಹೆಚ್ಚಿಸಬಹುದು. ಹೆಚ್ಚಿನ ಸಂದರ್ಭಗಳಲ್ಲಿ ವಾರದ ಅವಧಿಯಲ್ಲಿಯೇ ಸೋಂಕು ಇಲ್ಲದಂತಾಗಿ ಮಿಲನಕ್ಕೆ ಹಾತೊರೆಯುವಂತಾಗಬಹುದು. ಆದರೆ ಇದಕ್ಕಾಗಿ ದಂಪತಿಗಳು ಪ್ರತ್ಯೇಕವಾಗಿ ಪವಡಿಸಬೇಕಾಗಿಲ್ಲ. ಇದಕ್ಕೆ ದಂಪತಿಗಳಿಬ್ಬರಿಗೂ ಶಯನಗೃಹದಲ್ಲಿಯೇ ಸಂತಸವನ್ನು ಹಂಚಿಕೊಳ್ಳಲು ಇನ್ನೂ ಕೆಲವಾರು ವಿಧಗಳಿವೆ.

Most Read: 25ರ ಹರೆಯಕ್ಕಿಂತ ಸಣ್ಣ ವಯಸ್ಸಿನ ಹುಡುಗಿಯರು ಸೆಕ್ಸ್ ಬಗ್ಗೆ ತಿಳಿಯಬೇಕಾದ ವಿಚಾರಗಳು

ಈ ಸಮಯದಲ್ಲಿ ಮಾನಸಿಕ ಒತ್ತಡವನ್ನು ಕಾಯ್ದುಕೊಳ್ಳಿ

ಈ ಸಮಯದಲ್ಲಿ ಮಾನಸಿಕ ಒತ್ತಡವನ್ನು ಕಾಯ್ದುಕೊಳ್ಳಿ

ಸಂಗಾತಿ ಹತ್ತಿರವಿದ್ದೂ ದೂರವನ್ನು ಕಾಯ್ದುಕೊಳ್ಳಲು ಮನಸ್ಸನ್ನು ಪಕ್ವಗೊಳಿಸುವುದೂ ಒಂದು ಬಗೆಯ ಆಟವಾಗಿದೆ. ಇದಕ್ಕಾಗಿ ಪರಸ್ಪರ ಕಚಗುಳಿ, ಚುಂಬನ, ಪೋಲಿ ಮಾತು, ಒಟ್ಟಾರೆ ಇಬ್ಬರಿಗೂ ಹಿತವೆನಿಸುವ ಏನನ್ನೂ ಆದರೆ ಮಿಲನಕ್ರಿಯೆಯನ್ನು ಬಿಟ್ಟು ಉಳಿದವನ್ನು ಪ್ರಯತ್ನಿಸಿ. ವಾಸ್ತವವಾಗಿ ಹೀಗೆ ಮಾನಸಿಕ ಬಯಕೆಯನ್ನು ಕೆಲವಾರು ದಿನಗಳವರೆಗೆ ಕಾಯ್ದುಕೊಂಡ ಬಳಿಕ ಮುಂದುವರೆಯುವ ಮಿಲನಕ್ರಿಯೆ ನಿಮ್ಮ ಮೊದಲ ರಾತ್ರಿಯನ್ನು ನೆನಪಿಗೆ ತರುವಷ್ಟು ಪ್ರಬಲವಾಗಿರುತ್ತದೆ.

ಚುಂಬಿಸಿ, ನಂತರ ಹೇಳಿ

ಚುಂಬಿಸಿ, ನಂತರ ಹೇಳಿ

ಪರಸ್ಪರ ಚುಂಬನಗಳನ್ನು ವರ್ಗಾಯಿಸಿಕೊಳ್ಳಿ. ಹೇಗೂ ಮುಖ್ಯ ಕಾರ್ಯಕ್ರಮ ರದ್ದಾಗಿರುವುದರಿಂದ ಈ ಚಿಲ್ಲರೆ ಕೆಲಸಗಳಿಗೆ ಹೆಚ್ಚಿನ ಮಹತ್ವ ನೀಡಿ. ನಿಮಗೆ ಇಷ್ಟವಿರುವುದೇನು, ಹೊಸತೇನನ್ನು ಪ್ರಯತ್ನಿಸುವಿರಿ ಎಂಬ ಬಗ್ಗೆ ಎಲ್ಲಾ ವಿಚಾರ ವಿಮರ್ಶಿಸಿಕೊಳ್ಳಲು ಈಗ ಕಾಲ ಪ್ರಶಸ್ತವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗ ಈ ಹೊಸಪ್ರಯೋಗಗಳನ್ನು ಪ್ರಯತ್ನಿಸಿ.

Most Read: ಬಂಗುಡೆ ಮೀನು ಕೇವಲ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು

ಮಾನಸಿಕವಾಗಿ ಒಟ್ಟಾಗಿ

ಮಾನಸಿಕವಾಗಿ ಒಟ್ಟಾಗಿ

ಕಾಮವಾಂಛಲ್ಯವಿಲ್ಲದೇ ಕೇವಲ ಪ್ರೇಮವನ್ನು ಪಡೆಯುವಷ್ಟೇ ಅನುರಕ್ತಗೊಳ್ಳಿ. ದೈಹಿಕ ಸಂಪರ್ಕವೇ ಇಲ್ಲದೆ ನಿಮ್ಮ ಸಂಗಾತಿಯ ಹತ್ತಿರ ಮಾನಸಿಕರಾಗಿ ಬರಲು ಯತ್ನಿಸಿ. ಅಷ್ಟಕ್ಕೂ ಅನ್ಯೋನ್ಯತೆ ಎಂಬ ಪದಕ್ಕೆ 'ಮಾನಸಿಕ ಆಪ್ತತೆ'ಎಂಬುದೇ ಅರ್ಥವಲ್ಲವೇ? ಈ ಸಮಯದಲ್ಲಿ ಪರಸ್ಪರರ ಮನದಾಳದಲ್ಲಿ ಹುದುಗಿರುವ ಭಯಗಳು, ನಿಮ್ಮ ಅತಿ ಮುಜುಗರದ ಸಂದರ್ಭಗಳು, ನಿಮ್ಮ ಗುಟ್ಟುಗಳು ಮೊದಲಾದವುಗಳನ್ನು ಹಂಚಿಕೊಳ್ಳಿ. ಏನೂ ಮಾಡದೇ ಸುಮ್ಮನೇ ಮಾತನಾಡಿ, ಹರಟೆ ಹೊಡೆಯಿರಿ, ಒಟ್ಟಾರೆ ಇದುವರೆಗೆ ನೀವು ಮಾತನಾಡದೇ ಇದ್ದ ವಿಷಯಗಳನ್ನೂ ಕೆದಕಿ ಬೇರಾರೂ ನಿಮ್ಮನ್ನು ಅರಿಯದಷ್ಟು ಬಗೆಯಲ್ಲಿ ವಿಮರ್ಶಿಸಿ.

ನಿಮ್ಮ ಶಕ್ತಿಯನ್ನು ಬೇರೊಂದು ಕಡೆ ವ್ಯಯಿಸಿ

ನಿಮ್ಮ ಶಕ್ತಿಯನ್ನು ಬೇರೊಂದು ಕಡೆ ವ್ಯಯಿಸಿ

ಹೇಗೂ ಮುಖ್ಯ ಕಾರ್ಯಕ್ರಮ ರದ್ದಾಗಿರುವ ಕಾರಣ ಇಲ್ಲಿ ವ್ಯಯಿಸಬೇಕಾಗಿದ್ದ ಶಕ್ತಿಯನ್ನು ಬೇರೊಂದು ರೂಪದಲ್ಲಿ ವ್ಯಯಿಸಿ. ಇಬ್ಬರೂ ಜೊತೆಯಾಗಿ ಪಾಲ್ಗೊಂಡು ಸಂತಸಗೊಳ್ಳುವ ಬೇರಾವುದೇ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಯಾವುದಾದರೊಂದು ಆಟವಾಡಿ, ನಡೆದಾಡಿ, ಈಜಾಡಿ, ಓಡಾಡಿ, ಒಟ್ಟಾರೆ ಪರಸ್ಪರರ ಸಾಂಗತ್ಯವನ್ನು ಇಷ್ಟಗೊಳಿಸುವ ಕ್ರಿಯೆಗೆ ಒಳಗಾಗಿ, ಇತ್ತ ಸೋಂಕಿಗೊಳಗಾಗಿದ್ದ ಮೂತ್ರನಾಳ ಮತ್ತು ಮೂತ್ರಕೋಶ ಗುಣವಾಗಿ ಪರಿಶುದ್ದವಾಗಲು ಅಗತ್ಯವಾಗಿರುವ ಸಮಯಾವಾಕಾಶವನ್ನು ನೀಡಿ.

English summary

Can You Have Sex with a Urinary Tract Infection

Having sex can introduce bacteria into the urinary tract — and this can lead to a urinary tract infection (UTI).UTI symptoms can be painful and annoying, but once you’ve seen your doctor about them and started a course of antibiotics (which generally lasts a week or so), your UTI symptoms should subside and you may start to feel much better — sometimes in just a day or two. In fact, you may feel so much better that you're ready to have sex again.
X
Desktop Bottom Promotion