For Quick Alerts
ALLOW NOTIFICATIONS  
For Daily Alerts

ಪುರುಷರ ಶಿಶ್ನದಲ್ಲಿ ಕಾಣಿಸುವ ಖತರ್ನಾಕ್ ಕಾಯಿಲೆ ಇದು!

|

ವಕ್ರ ಹಾಗೂ ನೋವಿನ ಉದ್ರೇಕವು ಪೆರೋನಿಯಾ ಕಾಯಿಲೆಯ ಲಕ್ಷಣವಾಗಿದೆ. ಈ ಕಾಯಿಲೆಯಲ್ಲಿ ಶಿಶ್ನದ ಒಳಗಡೆ ತಂತು ಗಾಯದ ಅಂಗಾಂಶಗಳು ಬೆಳವಣಿಗೆಯಾಗುವುದು. ಕೆಲವು ಪುರುಷರಲ್ಲಿ ಈ ಕಾಯಿಲೆಯು ತುಂಬಾ ಚಿಂತೆ ಉಂಟು ಮಾಡುವುದು. ಯಾಕೆಂದರೆ ಉದ್ರೇಕದ ವೇಳೆ ಅತಿಯಾದ ನೋವು ಹಾಗೂ ವಕ್ರತೆ ಕಾಣಿಸುವುದು. ಈ ಕಾಯಿಲೆಯಿಂದಾಗಿ ಲೈಂಗಿಕ ಕ್ರಿಯೆಯು ತುಂಬಾ ಕಠಿಣವಾಗಿ ಪುರುಷರಲ್ಲಿ ಆತಂಕ ಮತ್ತು ಒತ್ತಡ ನಿರ್ಮಾಣವಾಗಬಹುದು. ತಂತುವಿನ ಪದರ ನಿರ್ಮಾಣದಿಂದಾಗಿ ಶಿಶ್ನದಲ್ಲಿ ರಕ್ತಸ್ರಾವವಾಗಬಹುದು. ಕೆಲವೊಂದು ಸಂದರ್ಭದಲ್ಲಿ ಇದು ಅನುವಂಶೀಯವಾಗಿಯು ಬರಬಹುದು.

ಪೆರೋನಿ ಕಾಯಿಲೆಯ ಕೆಲವೊಂದು ಲಕ್ಷಣಗಳು ಹಾಗೂ ಚಿಹ್ನೆಗಳು

ಪೆರೋನಿ ಕಾಯಿಲೆಯ ಕೆಲವೊಂದು ಲಕ್ಷಣಗಳು ಹಾಗೂ ಚಿಹ್ನೆಗಳು

ಈ ಕಾಯಿಲೆಯ ಲಕ್ಷಣಗಳು ಮತ್ತು ಚಿಹ್ನೆಗಳು ಹಠಾತ್ ಆಗಿ ಅಥವಾ ನಿಧಾನವಾಗಿ ಕಾಣಿಸಿಕೊಳ್ಳಬಹುದು. ಕೆಲವೊಂದು ಲಕ್ಷಣಗಳು ಮತ್ತು ಚಿಹ್ನೆಗಳು ಈ ಕೆಳಗಿನಂತಿವೆ.

•ಶಿಶ್ನದಲ್ಲಿ ವಕ್ರತೆ

•ಶಿಶ್ನದಲ್ಲಿ ವಕ್ರತೆ

ಶಿಶ್ನವು ಒಂದು ಕಡೆಗೆ ವಾಲಿರಬಹುದು ಅಥವಾ ಕೆಳಗಡೆ ಅಥವಾ ಮೇಲ್ಗಡೆ ವಕ್ರವಾಗಿರಬಹುದು. ಶಿಶ್ನವು ನಿಮಿರಿದಾಗ ಅದು ಗಾಜಿನ ನೋಟವನ್ನು ಹೊಂದಿರಬಹುದು.

Most Read:ಅಂಗೈಯಲ್ಲಿ ನಕ್ಷತ್ರದ ಆಕೃತಿಯಿದ್ದರೆ ಅವರು ತುಂಬಾನೇ ಅದೃಷ್ಟವಂತರು!

•ನಿಮಿರುವಿಕೆಯಲ್ಲಿ ಸಮಸ್ಯೆ

•ನಿಮಿರುವಿಕೆಯಲ್ಲಿ ಸಮಸ್ಯೆ

ಈ ಕಾಯಿಲೆಯಿಂದಾಗಿ ನಿಮಿರುವಿಕೆಯಲ್ಲಿ ಸಮಸ್ಯೆ ಕಾಣಿಸಬಹುದು.

•ಗಾಯಗೊಂಡ ಅಂಗಾಂಶ

•ಗಾಯಗೊಂಡ ಅಂಗಾಂಶ

ಶಿಶ್ನದ ಚರ್ಮದ ಒಳಗೊಂಡ ಗಾಯಗೊಂಡಿರುವ ಅಂಗಾಂಶವು ಕಂಡುಬರಬಹುದು. ಇದು ಗಡಸು ಅಂಗಾಂಶ ಅಥವಾ ಗಡ್ಡೆಯಂತಿರಬಹುದು.

ನಿಮಿರುವಿಕೆ ಇಲ್ಲದೆ ಅಥವಾ ಇರುವಾಗ ನೋವು ಕಂಡುಬರಬಹುದು.

ನಿಮಿರುವಿಕೆ ಇಲ್ಲದೆ ಅಥವಾ ಇರುವಾಗ ನೋವು ಕಂಡುಬರಬಹುದು.

ಶಿಶ್ನವು ಸಣ್ಣದಾಗುವಂತೆ ಮಾಡಬಹುದು. ಇನ್ನು ಶಿಶ್ನದ ವಕ್ರತೆಯು ಈ ಕಾಯಿಲೆಯಿಂದಾಗಿ ತುಂಬಾ ಕೆಟ್ಟದಾಗಬಹುದು. ಅದಾಗ್ಯೂ, ಕೆಲವೊಂದು ಸಂದರ್ಭದಲ್ಲಿ ಇದು ಸ್ಥಿರವಾಗಬಹುದು. ನೀವು ವೈದ್ಯರನ್ನು ಭೇಟಿಯಾಗಿ ಆದಷ್ಟು ಬೇಗ ಪೆರೋನಿ ಕಾಯಿಲೆಗೆ ಚಿಕಿತ್ಸೆ ಪಡೆಯುವುದು ಅಗತ್ಯ.

ಪೆರೋನಿ ಕಾಯಿಲೆಗೆ ಚಿಕಿತ್ಸೆ ಹೇಗೆ?

ಪೆರೋನಿ ಕಾಯಿಲೆಗೆ ಚಿಕಿತ್ಸೆ ಹೇಗೆ?

ಕೆಲವೊಂದು ಸಲ ಈ ಕಾಯಿಲೆಯ ಲಕ್ಷಣಗಳು ಅದಾಗಿಯೇ ಮಾಯವಾಗುವುದು. ನೀವು ವೈದ್ಯರನ್ನು ಭೇಟಿಯಾದಾಗಲೂ ಒಂದು ಅಥವಾ ಎರಡು ವರ್ಷಗಳ ಕಾಲ ಕಾದು ನೋಡುವಂತೆ ಸೂಚಿಸಲಾಗುತ್ತದೆ.ಈ ಕಾಯಿಲೆಯು ಮಧ್ಯಮವಾಗಿದ್ದರೆ ಆಗ ಯಾವುದೇ ರೀತಿಯ ಚಿಕಿತ್ಸೆ ಅಗತ್ಯವಿಲ್ಲ. ಲೈಂಗಿಕ ಕ್ರಿಯೆ ವೇಳೆ ನಿಮಗೆ ಯಾವುದೇ ರೀತಿಯ ಸಮಸ್ಯೆ ಕಂಡುಬರದೇ ಇದ್ದರೆ ಆಗ ನೀವು ಇದನ್ನು ಕಡೆಗಣಿಸಬಹುದು.

ಔಷಧಿ ಅಥವಾ ಶಸ್ತ್ರಚಿಕಿತ್ಸೆ

ಔಷಧಿ ಅಥವಾ ಶಸ್ತ್ರಚಿಕಿತ್ಸೆ

ಅದಾಗ್ಯೂ, ಕಾಯಿಲೆಯು ತುಂಬಾ ತೀವ್ರವಾಗಿದ್ದರೆ ಆಗ ನೀವು ಇದನ್ನು ಔಷಧಿ ಅಥವಾ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕಾಗ ಬಹುದು. ಚಿಕಿತ್ಸೆಯ ಆರಂಭಿಕ ಹಂತದಲ್ಲಿ ಇದಕ್ಕೆ ಪೆಂಟೊಕ್ಸಿಫ್ಲೈನ್ ಅಥವಾ ಪೊಟ್ಯಾಸಿಯಮ್ ಪ್ಯಾರಾ-ಅಮೈನೋಬೆನ್ಜೋಟ್ ನೀಡಲಾಗುತ್ತದೆ. ಔಷಧಿಯು ಯಾವುದೇ ಕೆಲಸ ಮಾಡದೆ ಇದ್ದರೆ ಆಗ ವೈದ್ಯರು, ಶಿಶ್ನದ ಗಾಯದ ಅಂಗಾಂಶದ ಭಾಗಕ್ಕೆ ಕಾಲಜಿನೇಸ್ ಅಥವಾ ವೆರಪಾಮಿಲ್ ನೀಡಬಹುದು. ಅಂತಿಮವಾಗಿ ಇದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗಬಹುದು. ಆದರೆ ಲೈಂಗಿಕ ಕ್ರಿಯೆಯಲ್ಲಿ ನಿಮಗೆ ತೊಡಗಲು ಸಾಧ್ಯವಾಗದೆ ಇದ್ದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಿಸಿ.

Most Read:ಥಾಯ್ಲೆಂಡ್‌ನ ಈ ದೇವಾಲಯವನ್ನು ನೆನಪಿಸಿಕೊಂಡಾಗಲೇ ಚಳಿ-ಜ್ವರ ಶುರುವಾಗುತ್ತದೆ!!

ಪೆರೋನಿ ಕಾಯಿಲೆ ನಿವಾರಿಸಬಹುದೇ?

ಪೆರೋನಿ ಕಾಯಿಲೆ ನಿವಾರಿಸಬಹುದೇ?

ವಕ್ರ ಶಿಶ್ನವೆಂದು ಕರೆಯಲ್ಪಡುವಂತಹ ಈ ಕಾಯಿಲೆಯು ಕೆಲವೊಂದು ಸಲ ತನ್ನಿಂದ ತಾನೇ ಗುಣವಾಗುವುದು. ಇನ್ನು ಕೆಲಸವು ಸಲ ಚಿಕಿತ್ಸೆ ಮಾಡಬೇಕಾಗಬಹುದು. ಚಿಕಿತ್ಸೆಗೆ ತೆರಳುವ ಮೊದಲು ಒಂದು ಅಥವಾ ಎರಡು ವರ್ಷ ತನಕ ಕಾದರೆ, ಇದು ತಾನಾಗಿಯೇ ಗುಣಮುಖವಾಗುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಶೇ.10ರಷ್ಟು ಮಾತ್ರ ಪೆರೋನಿ ಕಾಯಿಲೆಯು ಗುಣಮುಖವಾಗದೆ ಇರಬಹುದು. ಆದರೆ ಇದು ಬಲು ಅಪರೂಪ. ಆದರೆ ಇದನ್ನು ತಪಾಸಣೆ ಮಾಡಬೇಕು. ವೈದ್ಯರು ಸಣ್ಣ ಮಟ್ಟದ ಪರೀಕ್ಷೆಯಿಂದ ಇದನ್ನು ಪತ್ತೆ ಮಾಡುವರು. ಅಸಾಮಾನ್ಯ ವಕ್ರತೆ ಮತ್ತು ಗಾಯವಾಗುವುದು ಇದರ ಪ್ರಮುಖ ಲಕ್ಷಣವಾಗಿದೆ. ಕೆಲವು ಸಪ್ಲಿಮೆಂಟ್ ಮತ್ತು ವಿಟಮಿನ್ ಗಳನ್ನು ಬಳಸಿಕೊಂಡು ಇದನ್ನು ನಿವಾರಿಸಬಹುದು.

ಪೆರೋನಿ ಕಾಯಿಲೆ ಅನುವಂಶೀಯವೇ?

ಪೆರೋನಿ ಕಾಯಿಲೆ ಅನುವಂಶೀಯವೇ?

ಕೆಲವೊಂದು ಅಧ್ಯಯನಗಳು ಮತ್ತು ವೈದ್ಯಕೀಯ ಸಲಹೆಗಳ ಪ್ರಕಾರ ತಂದೆ ಅಥವಾ ಸಹೋದರರಿಗೆ ಈ ಕಾಯಿಲೆಯು ಇದ್ದರೆ ಆಗ ಇದು ನಿಮಗೂ ಬರಬಹುದು. ಈ ಕಾಯಿಲೆಗೆ ಅನುವಂಶೀಯತೆಯ ಜತೆಗೆ ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುವುದು. ಅದಾಗ್ಯೂ, ಇದೊಂದು ಸಂಬಂಧಿತ ಅಂಗಾಂಶಗಳ ಅಸ್ವಸ್ಥತೆ ಎಂದು ಹೇಳಲಾಗುತ್ತದೆ ಮತ್ತು ಇದು ಆಘಾತದಿಂದ ಉಂಟಾಗುವುದು ಎಂದು ಕೆಲವೊಂದು ವರದಿಗಳು ಹೇಳಿವೆ. ಪೆರೋನಿ ಕಾಯಿಲೆಯು ಅನುವಂಶೀಯತೆಯಿಂದ ಬರುವಂತಹ ಶಿಶ್ನದ ವಕ್ರತೆ ಎನ್ನಲಾಗುತ್ತದೆ.

ಶಿಶ್ನಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಶಿಶ್ನಗಳನ್ನು ಕಾಪಾಡಿಕೊಳ್ಳುವುದು ಹೇಗೆ?

ಪೆರೋನಿ ಕಾಯಿಲೆಗೆ ಆಘಾತವು ಪ್ರಮುಖ ಕಾರಣವೆಂದು ನಿಮಗೆ ಈಗಾಗಲೇ ತಿಳಿದಿರುವ ಕಾರಣದಿಂದಾಗಿ ನಿಮ್ಮ ಶಿಶ್ನಗಳನ್ನು ಕಾಪಾಡಿಕೊಳ್ಳಬೇಕು. ಯಾವುದೇ ರೀತಿಯ ಸ್ಪಷ್ಟ ಕ್ರಮಗಳು ಇದಕ್ಕೆ ಇಲ್ಲವಾದರೂ ನೀವು ಕೆಳಗಿನ ಕಾರಣಗಳಿಂದ ಶಿಶ್ನ ರಕ್ಷಿಸಬಹುದು.

ಹೊಟ್ಟೆಯ ಮೇಲೆ ಮಲಗಬೇಡಿ

ಹೊಟ್ಟೆಯ ಮೇಲೆ ಮಲಗಬೇಡಿ

ಸಂತಾನೋತ್ಪತ್ತಿ ತಜ್ಞರ ಪ್ರಕಾರ ವಯಸ್ಕ ಪುರಷರು ಹೊಟ್ಟೆ ಮೇಲೆ ಮಲಗಬಾರದು. ಹೊಟ್ಟೆ ಮೇಲೆ ಮಲಗಿದರೆ ಆಗ ಶಿಶ್ನದ ರಕ್ತನಾಳಗಳ ಮೇಲೆ ಒತ್ತಡ ಬೀಳುವುದು. ಇದರಿಂದ ಶಿಶ್ನದ ಅಂಗಾಂಶಗಳಿಗೆ ರಕ್ತ ಪರಿಚಲನೆ ಕಡಿಮೆಯಾಗುವುದು.

ಲೈಂಗಿಕ ಕ್ರಿಯೆ ವೇಳೆ ಜಾಗೃತೆ ವಹಿಸಿ

ಲೈಂಗಿಕ ಕ್ರಿಯೆ ವೇಳೆ ಜಾಗೃತೆ ವಹಿಸಿ

ಗಾಯದಿಂದಾಗಿ ಈ ಕಾಯಿಲೆಯು ಬರುವುದು. ಲೈಂಗಿಕ ಕ್ರಿಯೆ ವೇಳೆ ಈ ಗಾಯವು ಕಾಣಿಸಬಹುದು. ನೀವು ಲೈಂಗಿಕ ಕ್ರಿಯೆ ವೇಳೆ ತುಂಬಾ ಎಚ್ಚರಿಕೆ ವಹಿಸಬೇಕು.

Most Read:ತನ್ನ ತಾಯಿ ಶವವನ್ನು ತಿಂಗಳುಗಟ್ಟಲೆ ಜೊತೆಗಿಟ್ಟುಕೊಂಡವಳ ಖತರ್ನಾಕ್ ಸ್ಟೋರಿ ಇದು!

ನಿಮ್ಮ ಆಹಾರ ಕ್ರಮದಲ್ಲಿ ವಿಟಮಿನ್ ಇ ಸಪ್ಲಿಮೆಂಟ್ ಬಳಸಿ

ನಿಮ್ಮ ಆಹಾರ ಕ್ರಮದಲ್ಲಿ ವಿಟಮಿನ್ ಇ ಸಪ್ಲಿಮೆಂಟ್ ಬಳಸಿ

ವಿಟಮಿನ್ ಇ ಸಪ್ಲಿಮೆಂಟ್ ಸೇವನೆ ಮಾಡುವುದರಿಂದ ಈ ರೋಗದ ಲಕ್ಷಣಗಳು ಕಡಿಮೆಯಾಗುವುದು ಎಂದು ಕೆಲವೊಂದು ಅಧ್ಯಯನಗಳು ಕಂಡುಕೊಂಡಿವೆ.

ಶಿಶ್ನ ಎಳೆಯುವ ಸಾಧನ ಬಳಕೆ

ಶಿಶ್ನ ಎಳೆಯುವ ಸಾಧನ ಬಳಕೆ

ಇದರ ಬಳಕೆಯಿಂದಾಗಿ ಶಿಶ್ನದ ಗಾತ್ರವು ದೊಡ್ಡದಾಗುವುದು ಎಂದು ಅಧ್ಯಯನಗಳು ಹೇಳಿವೆ. ಆದರೆ ಇದರಿಂದಾಗಿ ಶಿಶ್ನದಲ್ಲಿ ವಕ್ರತೆಯನ್ನು ಕಡಿಮೆ ಮಾಡಬಹುದು. ಲಕ್ಷಣವಿರುವಂತಹ ಭಾಗಕ್ಕೆ ಇದನ್ನು ಅಳವಡಿಸಬೇಕು.

English summary

Can Peyronie's Disease Be Cured?

Peyronie's disease is a condition where the penis is curved. This may be a cause of worry for some men where the disease can lead to anxiety and stress. The occurrence of the fibrous plaque can be the result of a trauma that could cause bleeding in the penis. Avoid sleeping on your stomach, consume vitamin E supplements, use traction-based penis stretchers, etc.
X
Desktop Bottom Promotion