For Quick Alerts
ALLOW NOTIFICATIONS  
For Daily Alerts

  ಸ್ತನ ಕಸಿಯು ನಿಮ್ಮ ಪ್ರಾಣಕ್ಕೆ ಕುತ್ತು ತರಬಹುದು!

  By Hemanth
  |

  ಪ್ರತಿಯೊಬ್ಬ ಮಹಿಳೆ ಕೂಡ ತಾನು ಅಂದವಾಗಿ ಕಾಣಿಸಬೇಕೆನ್ನುವ ಆಸೆಯಲ್ಲಿ ದೇಹದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವಳು. ಇದರಲ್ಲಿ ಪ್ರಮುಖವಾಗಿ ಮಹಿಳೆಯ ದೇಹಸೌಂದರ್ಯ ಹೆಚ್ಚಿಸುವಂತಹ ಸ್ತನಗಳು. ಇದು ಆಕರ್ಷಕವಾಗಿದ್ದರೆ ಮಹಿಳೆಯ ಸೌಂದರ್ಯ ಕೂಡ ಎದ್ದು ಕಾಣುವುದು. ಇಂತಹದ್ದಕ್ಕಾಗಿ ಇಂದಿನ ದಿನಗಳಲ್ಲಿ ಸ್ತನ ಕಸಿ ಮಾಡಲು ಆರಂಭಿಸಿದ್ದಾರೆ. ಆದರೆ ಇದು ತುಂಬಾ ಅಪಾಯಕಾರಿ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.

  ಸ್ತನ ಕಸಿ ಮಾಡಿಸಿಕೊಳ್ಳುವ ಸುಮಾರು ಮೂರು ಸಾವಿರದಲ್ಲಿ ಒಬ್ಬಳು ಮಹಿಳೆಯಲ್ಲಿ ಬಿಐಎ-ಎಎಲ್ ಸಿಎಲ್ (ಅನಾಪ್ಲಾಸ್ಟಿಕ್ ಲಾರ್ಜ್ ಸೆಲ್ ಲಿಂಫೋಮಾ) ಕಂಡುಬರುವುದು. ಇದು ಹಾಡ್ಗ್ಕಿನ್ಸ್ ಅಲ್ಲದ ಲಿಂಫೋಮಾವಾಗಿದ್ದು, ಇದು ಪ್ರತಿರೋಧಕ ಶಕ್ತಿ ಕ್ಯಾನ್ಸರ್ ಆಗಿದೆ. ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರೆ ಅದಕ್ಕೆ ಚಿಕಿತ್ಸೆ ನೀಡಬಹುದು. ಆದರೆ ವಿಳಂಬವಾದರೆ ಅದು ದೇಹಪೂರ್ತಿ ಹರಡಬಹುದು.

  Breast

  ಇತ್ತೀಚಿನ ಅಧ್ಯಯನ

  ಯೂನಿವರ್ಸಿಟಿ ಆಫ್ ಟ್ಯಾಕ್ಸಸ್ ನ ಎಂಡಿ ಆ್ಯಂಡರ್ಸನ್ ಕ್ಯಾನ್ಸರ್ ಸೆಂಟರ್ ನ ಡಾ. ಮಾರ್ಕ್ ಕ್ಲೆಮೆನ್ಸ್ ಹೇಳುವ ಪ್ರಕಾರ, ಸ್ತನ ಕಸಿಯಿಂದಾಗಿ ಪ್ರಾಣಹಾನಿಯಾಗಿರುವುದು ತುಂಬಾ ಅಪರೂಪ. ಆದರೆ ಇದು ಸಂಭವಿಸಬಹುದು. ಆಸ್ಟ್ರೇಲಿಯನ್ ಸ್ಕೂಲ್ ಆಫ್ ಅಡ್ವಾನ್ಸ್ ಮೆಡಿಸಿನ್ ನ ಪ್ರೊ. ಆನಂದ್ ದೇವ್ ಅವರ ಪ್ರಕಾರ ಬಿಐಎ-ಎಎಲ್ ಸಿಎಲ್ ಅಧ್ಯಯನ ಮತ್ತು ತನ್ನ ತಂಡ ಮಾಡಿದ ಸಮೀಕ್ಷೆಯಂತೆ ಶೇ.50ರಷ್ಟು ಇಂತಹ ಪ್ರಕರಣಗಳು ಹೆಚ್ಚಾಗಿದೆ.

  2018ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಸೌಂದರ್ಯದ ಸಭೆಯಲ್ಲಿ ಬಿಐಎ-ಎಎಲ್ ಸಿಎಲ್ ನ ಸುಮಾರು 529 ಪ್ರಕರಣಗಳು ವಿಶ್ವದಾದ್ಯಂತ ಪತ್ತೆಯಾಗಿದೆ ಮತ್ತು ಇದರಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ. ಇಂಗ್ಲೆಂಡಿನ ಮೆಡಿಸಿನ್ ಆ್ಯಂಟ್ ಹೆಲ್ತ್ ಕೇರ್ ರೆಗ್ಯೂಲೇಟರಿ ಪ್ರಕಾರ, ಬಿಐಎ-ಎಎಲ್ ಸಿಎಲ್ ನ ಸುಮಾರು 33 ಪ್ರಕರಣಗಳು ಪತ್ತೆಯಾಗಿದೆ ಮತ್ತು ಇದರಲ್ಲಿ ಒಬ್ಬಳು ಮಹಿಳೆ ಸಾವನ್ನಪ್ಪಿದ್ದಾಳೆ.

  ಸ್ತನ ಕಸಿ ಅಪಾಯಕಾರಿ ಯಾಕೆ?

  ಕೆಲವೊಂದು ರೀತಿಯ ಕಚ್ಚಾ ಕಸಿಗಳಿಂದಾಗಿ ಅಪಾಯವಿದ್ದು, ಇದಕ್ಕೆ ಗಡಸು ಮೇಲ್ಮೈ ಅಳವಡಿಸಲಾಗುತ್ತದೆ. ಶೇ. 99ರಷ್ಟು ಸ್ತನ ವರ್ಧನೆ ಕಸಿಯಲ್ಲಿ ಇದನ್ನು ಬಳಸಲಾಗುವುದು. ಸ್ತನ ಕಸಿ ಮಾಡಿಕೊಂಡು ಎರಡು ವರ್ಷದಿಂದ 28 ವರ್ಷದ ತನಕ ಯಾವಾಗ ಬೇಕಿದ್ದರೂ ಈ ಕಾಯಿಲೆಯು ಕಾಣಿಸಿಕೊಳ್ಳಬಹುದು. ಇಂಗ್ಲೆಂಡಿನಲ್ಲಿ ನಡೆಸುವಂತಹ ಕಸಿಯು ಪಾಲಿಯುಥೇರೆನ್ ಬಳಸಿ ಮಾಡಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಸ್ತನಕಸಿಗೆ ಏನನ್ನು ಬಳಸಿಕೊಳ್ಳುತ್ತಾರೆ ಎಂದು ತಿಳಿಯುವುದೇ ತುಂಬಾ ಕಷ್ಟವಾಗಿದೆ. ಬಳಸುವ ಸಾಮಗ್ರಿಗಳ ಬಗ್ಗೆ ಯಾವುದೇ ಸಂಪೂರ್ಣ ಮಾಹಿತಿ ನೀಡಲಾಗುವುದಿಲ್ಲ.  ಸಿಲಿಕಾನ್ ಸ್ತನ ಕಸಿಯಲ್ಲಿ ಯಾವಾಗಲೂ ಪ್ಲಾಟಿನಂ ನ್ನು ಬಳಸಲಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದು, ಇದು ಅನಾರೋಗ್ಯಕ್ಕೆ ಕಾರಣವಾಗುವುದು. ಸ್ತನ ಕಸಿಗೆ ಒಳಗಾಗಿರುವಂತಹ ಮಹಿಳೆಯ ದೇಹದಲ್ಲಿ ಪ್ಲಾಟಿನಂನ ಮಟ್ಟವು ಅತಿಯಾಗಿ ಸೇರುವ ಸಾಧ್ಯತೆಯಿದೆ. ಆಕಸ್ಮಿಕವಾಗಿ ಅಥವಾ ಸ್ತನದ ಚರ್ಮ ಹರಿದು ಸಿಲಿಕಾನ್ ದೇಹವಿಡಿ ಹರಡುವಂತಹ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತದೆ.

  Breast

  ಸ್ತನ ಕಸಿಯಿಂದ ಆಗುವ ಇತರ ಅಪಾಯಗಳು

  ಸ್ತನ ಕಸಿ ಬಳಿಕ ಮಹಿಳೆಯು ತನ್ನ ಸೌಂದರ್ಯ ನೋಡಿಕೊಂಡು ತುಂಬಾ ಖುಷಿ ಪಡಬಹುದು. ಆದರೆ ಇದರ ಹಿಂದಿರುವಂತಹ ಹಲವಾರು ರೀತಿಯ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ವಿಷಯಗಳನ್ನು ತಿಳಿದುಕೊಳ್ಳಬೇಕು. ಸಂಧಿವಾತ, ಫೈಬ್ರೊಮ್ಯಾಲ್ಗಿಯಾ, ನಿಶ್ಯಕ್ತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ನ್ಯಾನ್ಸಿ ಬರ್ನಿಂಗ್ ಎಂಬವರು ಸ್ತನ ಕಸಿ ಬಗ್ಗೆ ಬರೆದಿರುವ ಪುಸ್ತಕ ಬ್ರೆಸ್ಟ್ ಇಂಪ್ಲಾಟ್ಸ್- ಆಲ್ ಯು ನೀಡ್ ಟು ನೋ' ದಲ್ಲಿ ಸ್ತನ ಕಸಿಯಿಂದಾಗಿ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ಸವಿವರವಾಗಿ ಹೇಳಿದ್ದಾರೆ. ಸ್ತನ ಕಸಿಯಿಂದಾಗಿ ಕಸಿ ಮಾಡಿದ ಜಾಗದಲ್ಲಿಅಸ್ವಸ್ಥತೆ, ಸ್ತನದ ಕೋಶಗಳು ಗಟ್ಟಿಯಾಗುವುದು, ಸ್ನಾಯುಗಳ ನೋವು, ವಿವರಿಸಲು ಸಾಧ್ಯವಾಗದೆ ಇರುವ ನಿಶ್ಯಕ್ತಿ, ಕೈ ಹಾಗೂ ಕಾಲುಗಳು ಊದಿಕೊಳ್ಳುವುದು, ಚರ್ಮ ಗಡುಸಾಗುವುದು, ಮಾನಸಿಕ ಮಂದತನ, ಸಂಧಿವಾತ, ಬಾಯಿ ಮತ್ತು ಕಣ್ಣುಗಳು ಒಣಗುವುದು ಇತ್ಯಾದಿ....

  ಸ್ತನ ವರ್ಧನೆ ಮಾಡಲು ನೈಸರ್ಗಿಕ ವಿಧಾನಗಳು

  ಅನುವಂಶೀಯ, ದೇಹದ ತೂಕ ಮತ್ತು ಜೀವನಶೈಲಿಯು ಸ್ತನದ ಗಾತ್ರವನ್ನು ಅವಲಂಬಿಸಿರುವುದು. ಶಸ್ತ್ರಚಿಕಿತ್ಸೆ ಇಲ್ಲದೆ ಸ್ತನದ ಗಾತ್ರ ಹೆಚ್ಚಿಸಬೇಕೆಂದು ನಿಮಗನಿಸಿದ್ದರೆ ಆಗ ಆಯ್ಕೆಗಳು ಕಡಿಮೆ. ಸ್ತನ ಕಸಿಯು ನಿಮಗೆ ತಕ್ಷಣ ಪರಿಣಾಮ ತೋರಿಸಬಹುದು. ಆದರೆ ಇತಂಹ ಶಸ್ತ್ರಚಿಕಿತ್ಸೆಯಿಂದ ಹಲವಾರು ಅಡ್ಡಪರಿಣಾಮಗಳು ಇವೆ. ಇದರಿಂದ ನೈಸರ್ಗಿಕವಾಗಿ ಸ್ತನ ವರ್ಧನೆ ಮಾಡಲು ಪ್ರಯತ್ನಿಸಿ. ಇದು ಫಲಿತಾಂಶ ನೀಡಲು ವರ್ಷಗಳನ್ನು ತೆಗೆದುಕೊಳ್ಳಬಹುದು. ಆದರೆ ಯಾವುದೇ ಅಡ್ಡಪರಿಣಾಮಗಳಿಲ್ಲ. ಇದು ನಿಮ್ಮ ಸ್ತನದ ಗಾತ್ರ ಹೆಚ್ಚಿಸುವುದು. ಯಾವುದೇ ರೀತಿಯ ಅಡ್ಡಪರಿಣಾಮಗಳು ಇಲ್ಲದೆ.

  ಕೆಲವೊಂದು ವ್ಯಾಯಾಮ ಮತ್ತು ಯೋಗ

  ಕೆಲವೊಂದು ವ್ಯಾಯಾಮಗಳಾದ ತೂಕ ಎತ್ತುವುದರಿಂದಾಗಿ ಅದು ಎದೆಪಟ್ಟಿಕೆಗಳು, ಭುಜದ ಸ್ನಾಯುಗಳು ಮತ್ತು ಸ್ತನದ ಹಿಂಭಾಗದ ಎದೆಯ ಸ್ನಾಯುಗಳು ಬಿಗಿ ಹಾಗೂ ಬಲವಾಗಲು ನೆರವಾಗುವುದು. ಇದನ್ನು ತಜ್ಞರಿಂದ ತಿಳಿದುಕೊಂಡು ಬಳಿಕ ಮನೆಯಲ್ಲಿ ಮಾಡಬಹುದು. ಸರಿಯಾದ ಕ್ರಮದಲ್ಲಿ ಮಾಡುವುದರಿಂದಾಗಿ ನೀವು ಗಾಯಾಳುವಾಗುವುದನ್ನು ತಡೆಯಬಹುದು. ಕೆಲವೊಂದು ರೀತಿಯ ಯೋಗದ ಭಂಗಿಯು ಜೋತಾಡುವ ಸ್ತನಗಳನ್ನು ಬಿಗಿಗೊಳಿಸಲು ನೆರವಾಗುವುದು.

  ಹಾಲು ಮತ್ತು ಸೋಯಾ ಉತ್ಪನ್ನಗಳು

  ಕೆಲವೊಂದು ಹೈನುಗಾರಿಕೆ ಉತ್ಪನ್ನಗಳಾದದ ಹಾಲು, ಬೆಣ್ಣೆ, ತುಪ್ಪ, ಗಿಣ್ಣು ಮತ್ತು ಪನೀರ್ ನಲ್ಲಿ ಹೆಚ್ಚಿನ ಕೊಬ್ಬಿನಾಂಶವಿದೆ. ಆದರೆ ಹಾರ್ಮೊನುಗಳಾದ ಒಸ್ಟ್ರೋಜನ್, ಪ್ರೊಲ್ಯಾಕ್ಟಿನ್ ಮತ್ತು ಪ್ರೊಜೆಸ್ಟೆರಾನ್ ಸ್ತನದ ಕೋಶಗಳು ಬೆಳೆಯಲು ಪ್ರಮುಖ ಪಾತ್ರ ವಹಿಸುವುದು. ಸೋಯಾ ಉತ್ಪನ್ನಗಳಾದ ಸೋಯಾ ಬೀನ್ಸ್, ಸೋಯಾ ಹಾಲು ಮತ್ತು ತೊಫೌನಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಾಂಶಗಳೂ ಇವೆ. ಇದು ಒಸ್ಟ್ರೋಜನ್ ನ ಅಂಶದಷ್ಟೇ ಪೋಷಕಾಂಶಗಳನ್ನು ಹೊಂದಿದೆ. ಒಸ್ಟ್ರೋಜನ್ ಕೊರತೆಯು ಸ್ತನ ಸಣ್ಣದಾಗಿರಲು ಕಾರಣ.

  ಬೀಜ ಮತ್ತು ಕಾಯಿಗಳು

  ನಿಮಗೆ ದೊಡ್ಡದಾಗಿರುವ ಸ್ತನ ಬೇಕಾದರೆ ಆಗ ನಿಮಗೆ ಉತ್ತಮ ವಿಧಾನವೆಂದರೆ ಫ್ಲ್ಯಾಕ್ಸ್ ಸೀಡ್ಸ್, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಜೀರಿಗೆ ಮತ್ತು ಮೆಂತೆಯು ಒಳ್ಳೆಯದು. ಈ ಬೀಜಗಳಲ್ಲಿ ಫೈಥೋಸ್ಟ್ರೋಜನ್ ಇದೆ. ಇದು ದೇಹದಲ್ಲಿ ಒಸ್ಟ್ರೋಜನ್ ಉತ್ಪತ್ತಿ ಹೆಚ್ಚಿಸುವುದು. ಕಾಯಿಗಳು ಕೂಡ ತುಂಬಾ ಒಳ್ಳೆಯದು. ಇದರಲ್ಲಿ ಆರೋಗ್ಯಕಾರಿ ಕೊಬ್ಬುಗಳು ಮತ್ತು ಪ್ರೋಟೀನ್ ಗಳಿವೆ. ವಾಲ್ ನಟ್ಸ್ ಮತ್ತು ಪಿಸ್ತಾನ ದಲ್ಲಿ ಫೈಥೋಸ್ಟ್ರೋಜನ್ ಇದೆ. ಇದು ದೇಹದಲ್ಲಿ ನೈಸರ್ಗಿಕ ಒಸ್ಟ್ರೋಜನ್ ಮಟ್ಟ ಹೆಚ್ಚಿಸಿ, ಸುಂದರ ಸ್ತನಗಳನ್ನು ನೀಡುವುದು.

  ನೈಸರ್ಗಿಕವಾಗಿ ಸ್ತನಗಳಿಗೆ ಮಸಾಜ್

  ಸ್ತನಗಳ ಗಾತ್ರ ದೊಡ್ಡದು ಮಾಡಲು ನೀವು ಅವುಗಳಿಗೆ ಮಸಾಜ್ ಮಾಡುವುದು ಸರಿಯಾದ ಕ್ರಮ. ಸರಿಯಾದ ಮಸಾಜ್ ನಿಂದಾಗಿ ಸ್ನಾಯುಗಳು ಬಲಗೊಳ್ಳುವುದು ಮತ್ತು ಈ ಭಾಗದಲ್ಲಿ ರಕ್ತ ಸಂಚಾರ ಉತ್ತಮಪಡಿಸುವುದು. ಇದರಿಂದ ಸ್ತನದ ಆರೋಗ್ಯವು ಉತ್ತಮವಾಗಿರುವುದು. ಮನೆಯಲ್ಲೇ ನೀವು ತೈಲ ಅಥವಾ ಕ್ರೀಮ್ ನಿಂದ ಸ್ತನದ ಮಸಾಜ್ ಮಾಡಬಹುದು. ಪರಿಣಾಮಕಾರಿಯಾಗಲು ಆಲಿವ್ ತೈಲ ಮತ್ತು ತಾಳೆಮರದ ಸಾರ ಬಳಸಿ. ಈ ಸಾರದಲ್ಲಿ ಕೊಬ್ಬಿನಾಮ್ಲಗಳು ಮತ್ತು ಫೈಟೊಸ್ಟೆರಾಲ್ಸ್ ಗಳಿವೆ. ಇದು ಸ್ತನಗಳಿಗೆ ಪೋಷಣೆ ಮತ್ತು ಕೋಶಗಳನ್ನು ಹಿಗ್ಗಿಸುವುದು. 4-5 ಹನಿಯಷ್ಟು ತಾಳೆಮರದ ಸಾರವನ್ನು ಆಲಿವ್ ತೈಲದ ಜತೆಗೆ ಹಾಕಿಕೊಂಡು ಸ್ತನಗಳಿಗೆ ಮಸಾಜ್ ಮಾಡಿಕೊಳ್ಳಿ. ಮನೆಮದ್ದುಗಳನ್ನು ನೀವು ಬಳಸುವಾಗ ತುಂಬಾ ತಾಳ್ಮೆ ವಹಿಸಬೇಕು. ಯಾಕೆಂದರೆ ಒಂದೆರಡು ದಿನಗಳಲ್ಲಿ ಇದು ಫಲಿತಾಂಶ ನೀಡುವುದಿಲ್ಲ. ಆದರೆ ಇದರಿಂದ ಯಾವುದೇ ಅಪಾಯಗಳಿಲ್ಲ. ಸ್ತನಕಸಿಯಿಂದ ಉಂಟಾಗುವಂತಹ ಅಡ್ಡಪರಿಣಾಮಗಳಿಗಿಂತ ಇದು ತುಂಬಾ ಪರಿಣಾಮಕಾರಿ.

  English summary

  Breast Implants Can Be Fatal, Research Claims

  According to latest data, the disease is now more common than imagined. According to findings revealed last week, atleast one in 3000 women undergoing a breast implant has been associated with BIA-ALCL (Anaplastic Large Cell Lymphoma), which is a form of non-Hodgkin's lymphoma, a cancer of the immune system. Although curable if detected early, any delay can lead to spreading of the disease throughout the body.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more