For Quick Alerts
ALLOW NOTIFICATIONS  
For Daily Alerts

ಬಾಯಿಯ ಶುಚಿತ್ವವನ್ನು ಕಾಪಾಡಿಕೊಳ್ಳಲು, ಇಂತಹ ಆಹಾರಗಳನ್ನು ಸೇವಿಸಿ

|

ನಮ್ಮ ದೇಹದ ಸೌಂದರ್ಯದಲ್ಲಿ ಬಾಯಿಯ ಪಾತ್ರವು ಇದೆ. ಯಾಕೆಂದರೆ ನೀವು ತುಂಬಾ ಸುಂದರವಾಗಿದ್ದು, ಬಾಯಿಯಿಂದ ದುರ್ವಾಸನೆ ಬರುತ್ತಲಿದ್ದರೆ ಆಗ ಯಾರೂ ನಿಮ್ಮೊಂದಿಗೆ ಮಾತನಾಡಲು ಮುಂದಾಗಲ್ಲ. ಇಂತಹ ಸಮಯದಲ್ಲಿ ನೀವು ಸಾಮಾಜಿಕವಾಗಿ ಬೆರೆಯಲು ಹಿಂಜರಿಯುವಿರಿ. ದುರ್ವಾಸನೆಗೆ ಪ್ರಮುಖವಾಗಿ ಬಾಯಿಯ ಆರೋಗ್ಯವು ಕಾರಣವಾಗಿರುವುದು. ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಹಲ್ಲುಗಳು ಹಾಗೂ ಒಸಡುಗಳು ಆರೋಗ್ಯವಾಗಿರಬೇಕು. ಹಲ್ಲುಗಳ ಆರೋಗ್ಯಕ್ಕೆ ಯಾವೆಲ್ಲಾ ಆಹಾರಗಳನ್ನು ಸೇವಿಸಬೇಕು? ಹಲ್ಲು ಹಾಗೂ ಒಸಡನ್ನು ಬಲಿಷ್ಠವಾಗಿರಿಸಲು ಏನು ಮಾಡಬೇಕು?

ದಂತಕುಳಿಯನ್ನು ತಪ್ಪಿಸುವುದು ಹೇಗೆ? ದೀರ್ಘಕಾಲದಿಂದ ದಂತ ಸಮಸ್ಯೆಯಿದೆ. ಹಲವಾರು ಚಿಕಿತ್ಸೆ ಮಾಡಿದರೂ ಯಾವುದೂ ಉತ್ತಮ ಪರಿಹಾರ ನೀಡಲಿಲ್ಲವೆಂದು ಹೇಳುವರು. ಆದರೆ ನೀವು ಕೆಲವೊಂದು ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡರೆ ಅದರಿಂದ ಬಾಯಿಯ ಆರೋಗ್ಯ ಕಾಪಾಡಿಕೊಳ್ಳಬಹುದು. ಬಾಯಿಯ ಆರೋಗ್ಯಕ್ಕಾಗಿ ಕೆಲವೊಂದು ಅದ್ಭುತ ಆಹಾರಗಳಿವೆ. ಇದು ಯಾವುದು ಎಂದು ನೀವು ತಿಳಿಯಿರಿ.

ದೊಣ್ಣೆ ಮೆಣಸು

ದೊಣ್ಣೆ ಮೆಣಸು

ದೊಣ್ಣೆ ಮೆಣಸು ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ದೊಣ್ಣೆ ಮೆಣಸಿನಲ್ಲಿ ಹಸಿರು, ಕೆಂಪು ಮತ್ತು ಹಳದಿ ಹೀಗೆ ವಿಭಿನ್ನವಾದ ವಿಧಗಳಿವೆ. ಇದು ನಮ್ಮ ದೇಹಕ್ಕೆ ತುಂಬಾ ಆರೋಗ್ಯಕಾರಿ. ಒಸಡು ತುಂಬಾ ದುರ್ಬಲವಾಗಿದ್ದರೆ ಇದು ಅದಕ್ಕೆ ಪರಿಹಾರ ನೀಡುವುದು. ಇನ್ನು ಕೆಂಪು ದೊಣ್ಣೆ ಮೆಣಸಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಸಮೃದ್ಧವಾಗಿದೆ ಮತ್ತು ಪೊಟಾಶಿಯಂ ಕಡಿಮೆಯಿದೆ. ಇದರಲ್ಲಿ ಫಾಲಿಕ್ ಆಮ್ಲ ಮತ್ತು ನಾರಿನಾಂಶವು ಸಮೃದ್ಧವಾಗಿದೆ. ಇದು ಕಿಡ್ನಿಯ ಕಾರ್ಯಚಟುವಟಿಕೆಗೆ ನೆರವಾಗುವುದು. ಕೆಂಪು ದೊಣ್ಣೆ ಮೆಣಸನ್ನು ಅಡುಗೆಯನ್ನು ಬಳಸಿ ಕಿಡ್ನಿ ಸಮಸ್ಯೆ ನಿವಾರಿಸಿ.

Most Read: ಅಡುಗೆಮನೆಯ 'ಅಡುಗೆ ಸೋಡಾ' ದ ಆರೋಗ್ಯಕಾರಿ ಪ್ರಯೋಜನಗಳು

ಸಿಹಿ ಗೆಣಸು

ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ವಿಟಮಿನ್ ಸಿ, ಇ, ಬಿ, ಬೆಟಾ ಕ್ಯಾರೋಟಿನ್, ಕೊಬ್ಬು, ಖನಿಜಾಂಶಗಳಾಗಿರುವ ಸತು, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕಾರ್ಬ್ರೋಹೈಡ್ರೇಟ್ಸ್ ಗಳಿಂದ ಸಮೃದ್ಧವಾಗಿದೆ. ಇದು ಬಲಿಷ್ಠ ಹಲ್ಲುಗಳು ಹಾಗೂ ಒಸಡುಗಳಿಗೆ ತುಂಬಾ ಪರಿಣಾಮಕಾರಿ. ಇನ್ನು ಸಿಹಿಗೆಣಸಿನ ಬಗ್ಗೆ ನಡೆಸಿದ ಅಧ್ಯಯನಗಳಲ್ಲಿ ಕಂಡುಕೊಂಡ ಪ್ರಕಾರ ಸಿಹಿಗೆಣಸಿನ ಸೇವನೆಯಿಂದ ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಅಲ್ಲದೇ ಇದರಲ್ಲಿರುವ ಪೋಷಕಾಂಶಗಳು ಹಾಗೂ ಆಂಟಿ ಆಕ್ಸಿಡೆಂಟುಗಳು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ನೆನಪಿನ ಶಕ್ತಿ ಹೆಚ್ಚಿಸಲಾದರೂ ಗೆಣಸನ್ನು ಆಗಾಗ ತಿನ್ನುತ್ತಿರಬೇಕು.

ಒಣ ದ್ರಾಕ್ಷಿ

ಒಣ ದ್ರಾಕ್ಷಿ

ಒಣದ್ರಾಕ್ಷಿ ಎಂದರೆ ಹೆಸರೇ ಹೇಳುವಂತೆ ಬಿಸಿಲಿನಲ್ಲಿ ಒಣಗಿಸಿದ ದ್ರಾಕ್ಷಿ. ಸಾಮಾನ್ಯವಾಗಿ ಬಿಳಿದ್ರಾಕ್ಷಿಯನ್ನೇ ಒಣದ್ರಾಕ್ಷಿಯನ್ನಾಗಿಸುತ್ತದೆ. ಆದರೆ ಇಂದು ಕಪ್ಪು ದ್ರಾಕ್ಷಿಯ ಒಣದ್ರಾಕ್ಷಿಯೂ ದೊರಕುತ್ತಿದೆ. ದ್ರಾಕ್ಷಿಗಳ ತಳಿಯನ್ನು ಅನುಸರಿಸಿ ಕಪ್ಪು, ಹಸಿರು, ಕಪ್ಪು, ಕಂದು, ಚಿನ್ನದ ಹಳದಿ ಮೊದಲಾದ ಬಣ್ಣಗಳಲ್ಲಿ ಇವು ಲಭ್ಯವಿವೆ. ನಾವೆಲ್ಲರೂ ದ್ರಾಕ್ಷಿಯನ್ನು ಸಿಹಿತಿಂಡಿಯ ಸೊಗಡು ಹೆಚ್ಚಿಸುವ ಪದಾರ್ಥವೆಂದೇ ಪರಿಗಣಿಸಿದ್ದೇವೆ. ಇಂತಹ ಒಣದ್ರಾಕ್ಷಿಯಲ್ಲಿ ಒಲೆನೊಲಿಕ್ ಎನ್ನುವ ಫೈಥೋಕೆಮಿಕಲ್ ಇದ್ದು, ದಂತ ಕುಳಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾವನ್ನು ಇದು ನಾಶ ಮಾಡುವುದು. ಕೆಲವೊಂದು ದಂತ ಸಂಬಂಧಿ ಉತ್ಪನ್ನಗಳನ್ನು ಒಣದ್ರಾಕ್ಷಿಯಿಂದ ತಯಾರಿಸಲಾಗುತ್ತದೆ.

ಸಾಲ್ಮನ್

ಸಾಲ್ಮನ್

ಹಲ್ಲಿನ ಆರೋಗ್ಯಕ್ಕೆ ಮುಂದಿನ ಆಹಾರವೆಂದರೆ ಅದು ಸಾಲ್ಮನ್. ನೀವು ಸಾಲ್ಮನ್ ನ್ನು ಸೇವಿಸಿದರೆ ಅದರಲ್ಲಿರುವಂತಹ ಪೋಷಕಾಂಶಗಳು ದಂತವನ್ನು ರಕ್ಷಿಸುವುದು. ಸಾಲ್ಮನ್ ನಲ್ಲಿ ಒಮೆಗಾ-3 ಕೊಬ್ಬಿನಾಮ್ಲ, ಪ್ರೋಟೀನ್, ಕೊಲೆಸ್ಟ್ರಾಲ್ ಮತ್ತು ವಿಟಮಿನ್ ಡಿ ಇದೆ. ಇನ್ನು ಈ ಸ್ನಾಯುಭರಿತ ಮೀನಿನಲ್ಲಿ ಉತ್ತಮ ಪ್ರಮಾಣದ ಒಮೆಗಾ-3 ಕೊಬ್ಬಿನ ಆಮ್ಲವಿದ್ದು ಈ ಪೋಷಕಾಂಶ ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಸಾಲ್ಮನ್ ಮೀನಿನಲ್ಲಿ ಸೆಲೆನಿಯಂ ಸಹಾ ಇದ್ದು ಇದು ಹೃದಯ ಸಂಬಂಧಿ ಆರೋಗ್ಯವನ್ನು ಉತ್ತಮಗೊಳಿಸುವ ಆಂಟಿ ಆಕ್ಸಿಡೆಂಟಾಗಿದೆ. ಈ ಮೀನಿನ ಸೇವನೆಯಿಂದ ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ.

ಈರುಳ್ಳಿ

ಈರುಳ್ಳಿ

ಒಂದು ಉತ್ತಮ ಅಡುಗೆ ಸಿದ್ಧ ಪಡಿಸಬೇಕು ಎಂದರೆ ಈರುಳ್ಳಿ ಅತ್ಯಗತ್ಯ.ಈರುಳ್ಳಿ ಇಲ್ಲದ ಖಾದ್ಯದಲ್ಲಿ ರುಚಿ ಕಾಣುವುದಿಲ್ಲ.ಹಬ್ಬ ಹರಿದಿನಗಳನ್ನು ಬಿಟ್ಟರೆ ಉಳಿದೆಲ್ಲ ದಿನಗಳು ಈರುಳ್ಳಿ ಪ್ರತಿಯೊಬ್ಬರಿಗೂ ಬೇಕೇಬೇಕು. ಈರುಳ್ಳಿ ಬೆಲೆ ಗಗನಕ್ಕೆ ಏರಿರಬಹುದು, ಉಳ್ಳಾಗಡ್ಡಿ ಹೆಚ್ಚುವವರ ಜೊತೆ ಕೊಳ್ಳುವವರಿಗೂ ಕಣ್ಣೀರು ತರಿಸುತ್ತಿರಬಹುದು.ಆದರೆ ಈರುಳ್ಳಿಯಲ್ಲಿ ಎಷ್ಟೊಂದು ಔಷಧೀಯ ಗುಣಗಳಿವೆ ಎಂಬುದರ ಬಗ್ಗೆ ಗಮನ ಹರಿಸಲೇ ಬೇಕು. ಈರುಳ್ಳಿ ಒಂದು ಉತ್ತಮ ಮನೆಮದ್ದು. ಇದರಿಂದ ಸಾಕಷ್ಟು ರೋಗಗಳನ್ನು ತಡೆಗಟ್ಟಬಹುದು. ಆರೋಗ್ಯವನ್ನು ಕಾಪಾಡುವಲ್ಲಿ ಈರುಳ್ಳಿಯ ಪಾತ್ರ ಮಹತ್ವಪಡೆದಿದೆ. ಸ್ವಲ್ಪ ಘಾಟು ವಾಸನೆಯಿದ್ದರೂ ತುಂಬಾ ಪೋಷಕಾಂಶಗಳನ್ನು ಹೊಂದಿರುವಂತಹ ಆಹಾರವೇ ಈರುಳ್ಳಿ. ಈರುಳ್ಳಿ ಸೇವನೆ ಮಾಡಿದರೆ ಅದರಿಂದ ಅಸ್ಥಿರಂಧ್ರತೆ ತಡೆಯಬಹುದು, ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕಿ ಉರಿಯೂತ ಕಡಿಮೆ ಮಾಡುವುದು.

Most Read: ಖರ್ಜೂರ ತಿಂದರೂ ಸಾಕು, ದೇಹದ ತೂಕ ಇಳಿಸಿಕೊಳ್ಳಬಹುದು!

ಅಣಬೆ

ಅಣಬೆ

ಪ್ರಕೃತಿದತ್ತವಾಗಿ ಸಿಗುವಂತಹ ಕೆಲವೊಂದು ಆಹಾರಗಳಲ್ಲಿ ಸಹಜವಾಗಿಯೇ ಮನುಷ್ಯನಿಗೆ ಬೇಕಾಗಿರುವಂತಹ ಪೌಷ್ಠಿಕಾಂಶಗಳಿರುತ್ತದೆ. ಅಂತಹ ಆಹಾರಗಳಲ್ಲಿ ಅಣಬೆ ಕೂಡ ಒಂದು. ಇಂದಿನ ದಿನಗಳಲ್ಲಿ ಅಣಬೆಯನ್ನು ಅದರ ಬೇಡಿಕೆಗೆ ಅನುಗುಣವಾಗಿ ಕೃತಕವಾಗಿ ಬೆಳೆಯಲಾಗುತ್ತಿದೆ. ಅಣಬೆ ಇಂದು ಜನಪ್ರಿಯ ಆಹಾರವಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಅಣಬೆಯಲ್ಲಿ ವಿವಿಧ ರೀತಿಯ ಪ್ರಮುಖ ಪೌಷ್ಠಿಕಾಂಶಗಳು ಮತ್ತು ನಾರಿನಾಂಶವು ಅದ್ಭುತವಾಗಿದ್ದು, ಇದನ್ನು ಶತಮಾನಗಳಿಂದಲೂ ಔಷಧಿಗಾಗಿ ಬಳಸಲಾಗುತ್ತಿದ್ದು. ಇದರಲ್ಲಿರುವ ನಾರಿನಾಂಶವು ದೈನಂದಿನ ಆಹಾರಕ್ರಮಕ್ಕೆ ಮಹತ್ವದ್ದಾಗಿದೆ. ಇತರ ಯಾವುದೇ ಆಹಾರದಲ್ಲಿ ಇರದಂತಹ ಖನಿಜಾಂಶಗಳು ಮತ್ತು ವಿಟಮಿನ್‌ಗಳು ಅಣಬೆಯಲ್ಲಿರುವುದು ಇದರ ಹೆಗ್ಗಳಿಕೆ. ಇನ್ನುಅಣಬೆಯಲ್ಲಿ ಹಲವಾರು ವಿಧಗಳಿಗೆ. ಆದರೆ ಆಹಾರಕ್ಕಾಗಿ ಬಳಸುವಂತಹ ಅಣಬೆಯು ಹಲ್ಲಿನ ಆರೋಗ್ಯ ಕಾಪಾಡುವುದು. ಅಣಬೆಯನ್ನು ಫ್ರೈ, ಬೇಯಿಸಿ ಅಥವಾ ಗ್ರಿಲ್ ಮಾಡಿ ಸೇವಿಸಬಹುದು. ಸಲಾಡ್ ನಲ್ಲಿಯೂ ನೀವು ಈ ಅದ್ಭುತ ಆಹಾರ ಬಳಸಬಹುದು.

Most Read: ಲಿಂಬೆ ಬಳಸಿ ಕಪ್ಪು ತುಟಿಗಳ ಸಮಸ್ಯೆ ನೈಸರ್ಗಿಕವಾಗಿ ಬಗೆಹರಿಸಿ

ಕಿತ್ತಳೆ

ಕಿತ್ತಳೆ

ಕಿತ್ತಳೆ ಕೂಡ ದಂತರಕ್ಷಣೆಗೆ ತುಂಬಾ ಪರಿಣಾಮಕಾರಿ. ಕಿತ್ತಳೆ ಹಣ್ಣನ್ನು ತಿಂದ ಬಳಿಕ ನೀವು ಬ್ರಷ್ ಮಾಡಿಕೊಳ್ಳಿ. ಯಾಕೆಂದರೆ ಇದರಲ್ಲಿ ಸಿಟ್ರಸ್ ಗುಣವಿದೆ. ಕಿತ್ತಳೆ ಹಣ್ಣನ್ನು ಸೇವಿಸಿದ ಬಳಿಕ ಬಾಯಿಗೆ ನೀರು ಹಾಕಿಕೊಂಡರೂ ಸಾಕು. ಇನ್ನು ಕಿತ್ತಳೆ ಹಣ್ಣುಗಳಲ್ಲಿ ಸಿಟ್ರಸ್ ಲಿಮೊನೋಯ್ಡ್ ಗಳು ಅಗಾಧ ಪ್ರಮಾಣದಲ್ಲಿದ್ದು, ಇವು ಚರ್ಮ, ಶ್ವಾಸಕೋಶ, ಸ್ತನ, ಹೊಟ್ಟೆ, ಹಾಗೂ ಕರುಳಿನ ಕ್ಯಾನ್ಸರ್‌ಗಳನ್ನೊಳಗೊ೦ಡ೦ತೆ ನಾನಾ ಬಗೆಯ ಕ್ಯಾನ್ಸರ್‌ಗಳ ವಿರುದ್ಧ ಹೋರಾಡುವಲ್ಲಿ ಸಹಕರಿಸುತ್ತವೆ ಎ೦ದು ಸಾಬೀತಾಗಿದೆ.

ಬ್ಲ್ಯಾಕ್ ಟೀ

ಬ್ಲ್ಯಾಕ್ ಟೀ

ಬ್ಯಾಕ್ಟೀರಿಯಾ ಕಿಣ್ವವಾಗಿರುವಂತಹ ಗ್ಲುಕೊಸೈಲ್ಟ್ರಾನ್ಫರೇಸ್ ದಂತಗಳಿಗೆ ಹಾನಿಯುಂಟು ಮಡುವುದು. ಬ್ಲ್ಯಾಕ್ ಟೀ ಸೇವನೆ ಮಾಡಿದರೆ ಇದನ್ನು ನಿವಾರಣೆ ಮಾಡಬಹುದು. ಹಾನಿಕಾರಕ ಪಾನೀಯ ಮತ್ತು ತಂಪುಪಾನೀಯ ಸೇವನೆ ಮಾಡುವ ಬದಲು ಚಾ ಕುಡಿಯಲು ದಂತ ವೈದ್ಯರು ಸಲಹೆ ಮಾಡುತ್ತಾರೆ.

English summary

Best Superfoods to maintain Oral Hygiene

What are the foods that you must not eat if you to want to have better oral condition? What the things that should kept in mind for the need of having stronger gum and teeth along with preventing any cases of tooth decay? I am suffering from oral issues for a long time and have tried many solutions without much success, so can you help me find natural solutions in the form of superfoods which can help to counter and problems in relation to teeth?
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more