For Quick Alerts
ALLOW NOTIFICATIONS  
For Daily Alerts

ಮಣ್ಣಿನ ಪಾತ್ರೆಯಲ್ಲಿ ತಯಾರಿಸಿದ ಆಹಾರ-ಆರೋಗ್ಯಕ್ಕೆ ಬಹಳ ಒಳ್ಳೆಯದು

|

ಪುರಾತನ ಕಾಲದಲ್ಲಿ ಹೆಚ್ಚಾಗಿ ಮಣ್ಣಿನ ಪಾತ್ರೆಗಳನ್ನು ಅಡುಗೆ ಮಾಡಲು ಬಳಸುತ್ತಾ ಇದ್ದರು. ಇದು ಆಹಾರಕ್ಕೆ ರುಚಿ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು ಎಂದು ನಂಬಲಾಗಿತ್ತು. ಆದರೆ ಸಮಯ ಕಳೆದಂತೆ ಮಣ್ಣಿನ ಪಾತ್ರೆಗಳು ವಿನಾಶದ ಅಂಚಿಗೆ ಹೋಗಿ ಬಿಟ್ಟವು!

ಇದಕ್ಕೆಲ್ಲಾ ಕಾರಣ ಮಾರುಕಟ್ಟೆಯಲ್ಲಿ ಸಿಗುತ್ತಿರುವ ವೆರೈಟಿ ಶೈಲಿಯ ಪಾತ್ರೆಗಳು! ಒಂದಾನೊಂದು ಕಾಲದಲ್ಲಿ ಇಷ್ಟೆಲ್ಲ ವೆರೈಟಿ ಪಾತ್ರೆಗಳು ಮಾರುಕಟ್ಟೆಯಲ್ಲಿ ಸಿಗುತ್ತಲೇ ಇರಲಿಲ್ಲ. ಆದ್ರೆ ಈಗ ಕಾಲ ಬದಲಾಗಿದೆ. ಸಿಕ್ಕಾಪಟ್ಟೆ ಆಯ್ಕೆಗಳು ಮಹಿಳೆಯರನ್ನು ಕೈ ಬೀಸಿ ಕರೆಯುತ್ತೆ. ಶಾಪಿಂಗ್ ಅಂತ ಹೋಗುವ ಮಹಿಳೆಯರು ತಮ್ಮ ಅಡುಗೆ ಮನೆಗೆಂದೇ ಖರೀದಿಸುವ ಪಾತ್ರೆಗಳು ಅನೇಕ. ಒಂದು ಇದ್ರೆ ಇನ್ನೊಂದು ಬೇಕು ಅನ್ನಿಸುತ್ತೆ. ಇನ್ನೊಂದು ಇದ್ರೆ ಮತ್ತೊಂದು ಬೇಕು ಅನ್ನಿಸುತ್ತೆ. ಅಷ್ಟೊಂದು ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ತುಂಬಿಸಿಕೊಳ್ತಲೇ ಹೋಗುವ ಮಹಿಳೆಯರಿಗೇನು ಕಡಿಮೆ ಇಲ್ಲ. ಪ್ರತಿ ಪಾತ್ರೆಯಲ್ಲೂ ಮಹಿಳೆಯರನ್ನು ಆಕರ್ಷಿಸುವ ಏನಾದರೊಂದು ಗುಣ ಇದ್ದೇ ಇರುತ್ತೆ. ಹಾಗಾಗಿ ಮಹಿಳೆಯರ ಮನಸೆಳೆಯರು ಹಲವಾರು ಪಾತ್ರೆ ತಯಾರಿಕಾ ಕಂಪೆನಿಗಳೂ ಕೂಡ ಈಗ ಮುಗಿಬಿದ್ದಿವೆ. ಉದಾಹರಣೆಗೆ ನಾನ್ ಸ್ಟಿಕ್ ಪಾತ್ರೆಗಳು, ಪ್ಲಾಸ್ಟಿಕ್ ಪಾತ್ರೆಗಳು...

ಆದರೆ ಇಂತಹ ಪಾತ್ರೆಗಳ ಬಣ್ಣ ಬಯಲಾದ ಮೇಲೆ ಕೆಲವರು ಆರೋಗ್ಯದ ದೃಷ್ಟಿಯಿಂದ ಮಣ್ಣಿನ ಪಾತ್ರೆಯನ್ನು ಬಳಸುತ್ತಿದ್ದಾರೆ. ಮಣ್ಣಿನ ಪಾತ್ರೆಯಲ್ಲಿ ಮಾಡುವ ಅಡುಗೆಯಿಂದ ದೇಹಕ್ಕೆ ಹೆಚ್ಚಿನ ಪೋಷಕಾಂಸಗಳು ಲಭ್ಯವಾಗುವುದು ಮತ್ತು ಇದಕ್ಕೆ ಎಣ್ಣೆ ಮತ್ತು ಕೊಬ್ಬು ಕಡಿಮೆ ಬೇಕಾಗಿರುವ ಕಾರಣದಿಂದ ಆಹಾರವು ಆರೋಗ್ಯವಾಗಿರುವುದು.

ಕೊಬ್ಬಿನಾಂಶ ಕಡಿಮೆ

ಕೊಬ್ಬಿನಾಂಶ ಕಡಿಮೆ

ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವಾಗ ಎಣ್ಣೆ ಅಥವಾ ನೀರನ್ನು ಹೆಚ್ಚು ಬಳಸಬೇಕಾಗಿಲ್ಲ. ಯಾಕೆಂದರೆ ಮಣ್ಣಿನ ಪಾತ್ರೆಗಳು ಬಿಸಿಯಿರುವ ತನಕ ಹಬೆಯಾಡುತ್ತಿರುತ್ತದೆ.

ಪೋಷಕಾಂಶಗಳನ್ನು ಉಳಿಸಿಕೊಳ್ಳುವುದು

ಪೋಷಕಾಂಶಗಳನ್ನು ಉಳಿಸಿಕೊಳ್ಳುವುದು

ಸಾಮಾನ್ಯವಾಗಿ ಪ್ರತಿಯೊಬ್ಬರು ತಮಗೆ ಒಪ್ಪುವಂತಹ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಏಕೆಂದರೆ ಎಲ್ಲಾ ಆಹಾರ ಪದಾರ್ಥಗಳು ಎಲ್ಲರಿಗೂ ಒಪ್ಪಿಗೆಯಾಗುವುದಿಲ್ಲ. ಇದು ವ್ಯಕ್ತಿ ಮತ್ತು ಆತನಿಗಿರುವ ಕಾಯಿಲೆ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಅವುಗಳನ್ನೆಲ್ಲ ಗಮನಿಸಿ, ನಂತರ ನೀವು ಸೇವಿಸ ಬೇಕಾದ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ. ಅದಕ್ಕೆ ಹೇಳುವುದು "ಊಟ ಬಲ್ಲವನಿಗೆ ರೋಗವಿಲ್ಲ" ಎಂದು. ಕೆಲವೊಂದು ಆಹಾರ ಪದಾರ್ಥಗಳು, ಕೆಲವೊಂದು ನಿರ್ದಿಷ್ಟ ರೋಗಗಳನ್ನು ಗುಣಪಡಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಅದಕ್ಕೆ ಸೂಕ್ತವಾದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದು ಏನೇ ಇರಲಿ ಆದರೆ ಮಣ್ಣಿನ ಪಾತ್ರೆಯಲ್ಲಿಆಹಾರ ತಯಾರಿಸುವಾಗ ಬರುವಂತಹ ಹಬೆಯನ್ನು ಕೂಡ ಮಣ್ಣಿನ ಪಾತ್ರೆಗಳು ಹೀರಿಕೊಳ್ಳುವುದು. ಈ ಕಾರಣದಿಂದಾಗಿ ಆಹಾರಕ್ಕೆ ಮತ್ತಷ್ಟು ಪೋಷಕಾಂಶಗಳು ಸಿಗುವುದು. ಇತರ ಪಾತ್ರೆಗಳಿಗಿಂತ ಇದು ತುಂಬಾ ಆರೋಗ್ಯಕಾರಿ.

ಮಣ್ಣಿನ ಪಾತ್ರೆಗಳು

ಮಣ್ಣಿನ ಪಾತ್ರೆಗಳು

ಮಣ್ಣಿನ ಪಾತ್ರೆಗಳನ್ನು ತಯಾರಿಸಲು ಬಳಸುವಂತಹ ಮಣ್ಣಿನಲ್ಲಿ ಕೆಲವೊಂದು ಒಳ್ಳೆಯ ಗುಣಮಟ್ಟದ ಪೋಷಕಾಂಶಗಳಾದ ವಿಟಮಿನ್ ಬಿ12, ಕ್ಯಾಲ್ಸಿಯಂ, ಫೋಸ್ಪರಸ್, ಕಬ್ಬಿನಾಂಶ ಮತ್ತು ಮೆಗ್ನಿಶಿಯಂ ಇದೆ. ಇದರಿಂದ ಬೇರೆ ಪಾತ್ರೆಗಳಿಗಿಂತ ಮಣ್ಣಿನ ಪಾತ್ರೆ ಆಯ್ಕೆ ಒಳ್ಳೆಯದು.

ಆಹಾರದ ಪಿಎಚ್ ಮಟ್ಟ ಕಾಪಾಡುವುದು

ಆಹಾರದ ಪಿಎಚ್ ಮಟ್ಟ ಕಾಪಾಡುವುದು

ಮಣ್ಣು ನೈಸರ್ಗಿಕವಾಗಿ ಕ್ಷಾರೀಯ ಗುಣ ಹೊಂದಿದ್ದು, ಇದು ನೈಸರ್ಗಿಕ ನಿರ್ವಿಷಕಾರಿಯಾಗಿ ಕೆಲಸ ಮಾಡುವುದು. ಈ ಗುಣಗಳಿಂದಾಗಿ ಮಣ್ಣಿನ ಪಾತ್ರೆಯು ಆಹಾರದಲ್ಲಿ ಇರುವಂತಹ ಆಸಿಡಿಟಿ ಅಂಶದ ಮಧ್ಯಪ್ರವೇಶ ಮಾಡಿ ಆಹಾರವನ್ನು ತಟಸ್ಥಗೊಳಿಸುವುದು. ಇದರಿಂದ ಆಹಾರ ರುಚಿ ಹಾಗೂ ಪೋಷಕಾಂಶಗಳು ಹೆಚ್ಚಾಗುವುದು. ಸಾಮಾನ್ಯವಾಗಿ ಮಣ್ಣಿನ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರು ತಂಪಾಗಿರುವುದು ನೀವು ಗಮನಿಸಿರಬಹುದು, ಇದಕ್ಕೆಲ್ಲಾ ಕಾರಣ ವಾಸ್ತವವಾಗಿ ಮಣ್ಣಿನಲ್ಲಿರುವ ಲವಣಗಳು ಕ್ಷಾರೀಯವಾಗಿವೆ. ಯಾವುದೇ ಸೆಲೆಯಿಂದ ಬಂದ ನೀರು ಕೊಂಚವಾದರೂ ಆಮ್ಲೀಯತೆ ಹೊಂದಿರುತ್ತದೆ. ಮಣ್ಣಿನಲ್ಲಿರುವ ಲವಣಗಳು ಈ ಆಮ್ಲಗಳನ್ನು ತಟಸ್ಥಗೊಳಿಸಿ ನೀರಿನ ಪಿಎಚ್ ಮಟ್ಟವನ್ನು ಸೊನ್ನೆಗಿಳಿಸುತ್ತವೆ. ಇದೇ ಕಾರಣಕ್ಕೆ ನೆಲದಿಂದ ಉಕ್ಕಿದ ಅಥವಾ ಬಂಡೆಗಳ ನಡುವೆ ಜಿನುಗುವ ನೀರು ಅಪ್ಪಟವಾಗಿದೆ. ಮಣ್ಣಿನ ಮಡಿಕೆಯಲ್ಲಿಯೂ ಇದೇ ರೀತಿಯ ಕಾರ್ಯ ಜರುಗುತ್ತದೆ. ಮಣ್ಣಿನ ಮಡಿಕೆಯಲ್ಲಿಟ್ಟ ನೀರು ಥಟ್ಟನೇ ಅಪ್ಪಟವಾಗುವುದಿಲ್ಲ, ಒಂದು ರಾತ್ರಿಯಾದರೂ ಇಡಬೇಕು. ಬಳಿಕ ಸೇವಿಸಿದರೆ ಉತ್ತಮ. ಬರೆಯ ನೀರು ಮಾತ್ರವಲ್ಲ, ಆಮ್ಲೀಯವಾಗಿರುವ ಇತರ ಆಹಾರ, ಹಾಲು ಮೊದಲಾದವುಗಳನ್ನೂ ಮಣ್ಣಿನ ಮಡಕೆಯಲ್ಲಿ ಬಿಸಿಮಾಡುವುದೂ ಆರೋಗ್ಯಕರ.

ದೀರ್ಘಕಾಲ ತನಕ ಆಹಾರ ಬಿಸಿಯಾಗಿರುವುದು

ದೀರ್ಘಕಾಲ ತನಕ ಆಹಾರ ಬಿಸಿಯಾಗಿರುವುದು

ಮಣ್ಣಿನ ಪಾತ್ರೆಗಳು ಯಾವಾಗಲೂ ಆಹಾರವನ್ನು ಬಿಸಿಯಾಗಿರುವಂತೆ ಮಾಡುವುದು. ಇದರಿಂದಾಗಿ ಆಹಾರದಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳು ನಾಶವಾಗದೆ ಹಾಗೆ ಉಳಿಯುವುದು. ದೀರ್ಘಕಾಲದ ತನಕ ಆಹಾರದಲ್ಲಿರುವ ಬಿಸಿಯು ಹಾಗೆ ಉಳಿಯುವ ಕಾರಣದಿಂದಾಗಿ ಪದೇ ಪದೇ ಇದನ್ನು ಬಿಸಿ ಮಾಡಬೇಕೆಂದಿರುವುದಿಲ್ಲ.

 ಅಡುಗೆ ಮಾಡಲು ಮಣ್ಣಿನ ಪಾತ್ರೆ ಬಳಸುತ್ತಲಿದ್ದರೆ ಪಾಲಿಸಬೇಕಾದ ಕ್ರಮಗಳು

ಅಡುಗೆ ಮಾಡಲು ಮಣ್ಣಿನ ಪಾತ್ರೆ ಬಳಸುತ್ತಲಿದ್ದರೆ ಪಾಲಿಸಬೇಕಾದ ಕ್ರಮಗಳು

1. ಹೊಳಪಿಲ್ಲದ ಮಣ್ಣಿನ ಪಾತ್ರೆಗಳನ್ನು ಬಳಸಿ. ಇದು ಸುರಕ್ಷಿತ ಮತ್ತು ಲೆಡ್ ಇರಲ್ಲ. ಇದು ಆಹಾರವನ್ನು ಕಲ್ಮಷಗೊಳಿಸದು.

2. ಅಡುಗೆ ಮಾಡುವ ಮೊದಲು ನೀವು ಮಣ್ಣಿನ ಪಾತ್ರೆಯನ್ನು 15 ನಿಮಿಷ ಕಾಲ ನೀರಿನಲ್ಲಿ ನೆನೆಸಿಡಿ.

3. ಮಣ್ಣಿನ ಪಾತ್ರೆಯನ್ನು 400-475 ಡಿಗ್ರಿ ಉಷ್ಣಾಂಶದಲ್ಲಿ ಬೇಕ್ ಮಾಡಿ. ಇದರಿಂದ ಹೀರಿದ ನೀರು ಸರಿಯಾಗುವುದು.

4. ಮೊದಲೇ ಬಿಸಿ ಮಾಡಿದಂತಹ ಓವನ್ ಬಳಸಬೇಡಿ. ಇದರಿಂದ ಮಣ್ಣಿನ ಪಾತ್ರೆ ಒಡೆದುಹೋಗಬಹುದು.

5. ತಣ್ಣಗಿರುವ ಜಾಗದಲ್ಲಿ ಇದನ್ನು ಇಡಬೇಡಿ. ಇದರಿಂದ ಪಾತ್ರೆಗಳಲ್ಲಿ ಬಿರುಕು ಕಾಣಿಸಬಹುದು. ಮರದ ಹಿಡಿಯನ್ನು ಬಳಸಿ.

6. ಮೀನಿನಂತಹ ಸ್ವಲ್ಪ ವಾಸನೆ ಬರುವ ಪದಾರ್ಥ ಮಾಡುತ್ತಲಿದ್ದರೆ ಆಗ ಪಾತ್ರೆಯನ್ನು ಸ್ವಲ್ಪ ಹೆಚ್ಚು ಸಮಯ ನೀರಿನಲ್ಲಿ ನೆನೆಸಿ. ಆಗ ಅದು ವಾಸನೆಯನ್ನು ಹೀರಿಕೊಳ್ಳುವುದು.

7. ಮಣ್ಣಿನಿಂದ ಮಾಡಿದ ಯಾವುದೇ ಪಾತ್ರೆಗಳು ಸುಲಭವಾಗಿ ಒಡೆಯುವುದರಿಂದ ತುಂಬಾ ಕಾಳಜಿ ಅಗತ್ಯ. ಅಲ್ಲದೇ ಮಣ್ಣಿನಿಂದ ಮಾಡಿದ ಪಾತ್ರೆ ಚೆನ್ನಾಗಿ ಸುಟ್ಟಿರಬೇಕು. ಸುಡದ ಅಥವಾ ಬಿಸಿಲಿನಲ್ಲಿ ಒಣಗಿಸಿದ ಮಡಿಕೆಯಲ್ಲಿ ನೀರು ತಣ್ಣಗಾಗುವುದಿಲ್ಲ. ಸುಟ್ಟ ಪಾತ್ರೆಯಲ್ಲಿ ಮಾತ್ರ ಸೂಕ್ಷ್ಮ ರಂಧ್ರಗಳು ಮೂಡಿದ್ದು ಇದರಿಂದ ಹೊರಹೋಗುವ ನೀರಿನ ಪಸೆ ಆವಿಯಾಗುವಾಗ ತನ್ನೊಂದಿಗೆ ಕೊಂಚ ತಾಪಮಾನವನ್ನೂ ಕೊಂಡು ಹೋಗುತ್ತದೆ.

8. ಯಾವುದೇ ಕಾರಣಕ್ಕೂ ಮಣ್ಣಿನ ಹೊರಭಾಗಕ್ಕೆ ಬಣ್ಣ ಹೊಡೆಯಬಾರದು. ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿದ ನಂತರ ಒಳಭಾಗವನ್ನು ಉಜ್ಜಿ ಸ್ವಚ್ಛಗೊಳಿಸಬೇಕು.

English summary

Benefits Of Cooking In Earthen Vessels

Cooking in earthen vessels is an ancient method of cooking. Although we have started cooking in other types of vessels over a period of time, it is always better to go back to this old method of cooking due to various reasons. Cooking in clay pots has various health benefits. It also makes cooking easier and it helps in sautéing meats and veggies delicately. Compared to the conventional style of preparing food, the meals prepared in earthen pots are more delicious too!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more