For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ಏಲಕ್ಕಿ ಮೂರ್ತಿ ಸಣ್ಣದಾದರೂ, ಕಾರುಬಾರು ದೊಡ್ಡದು

|

ಸನ್ಮಾನ ಸಮಾರಂಭಗಳಲ್ಲಿ ಯಾರನ್ನಾದ್ರೂ ಶಾಲು ಹೊದಿಸಿ, ಒಂದು ಪದಕ ಕೊಟ್ಟು, ಗೌರವಿಸುವ ಸಂದರ್ಭದಲ್ಲಿ ಅವ್ರಿಗೆ ಘಮಘಮಿಸುವ ಏಲಕ್ಕಿಗಳನ್ನು ಪೋಣಿಸಿ ಅಲಂಕೃತವಾಗಿರುವ ಮಾಲೆ ಹಾಕೋದನ್ನು ಹೆಚ್ಚಿನವ್ರು ಗಮನಿಸಿರ್ತೀರಿ. ಅಂತ ಒಂದು ಮಾಲೆ ಸನ್ಮಾನಕಷ್ಟೇ ಸೀಮಿತವಾಗಿರದೇ ಪ್ರತಿಯೊಬ್ಬರ ಮನೆಯಲ್ಲೂ ಇದ್ರೆ ನಿಮ್ಮ ಕುಟುಂಬದ ಆರೋಗ್ಯ ವೃದ್ಧಿಯಾಗುತ್ತೆ ಅಂದ್ರೆ ನೀವು ನಂಬಲೇಬೇಕು. ಹೌದು ಎಲ್ಲರಿಗೂ ಗೊತ್ತಿರೋ ಹಾಗೆ ಏಲಕ್ಕಿ ಹಲವು ರೋಗಗಳಿಗೆ ಪರಿಹಾರ ನೀಡುವ ಸಾಮರ್ಥ್ಯ ಹೊಂದಿದೆ. ಒಂದು ಉತ್ತಮ ಸಾಂಬಾರ ಪದಾರ್ಥ ಎಂದು ಪ್ರಪಂಚದ ಮೂಲೆಮೂಲೆಯ ಜನರೂ ಅದನ್ನು ಪರಿಗಣಿಸಿದ್ದಾರೆ.

ಇನ್ನು ಏಲಕ್ಕಿಯಲ್ಲಿ ಹಸಿರು ಮತ್ತು ಕಂದು ಎಂಬ ಎರಡು ಬಗೆಗಳಿವೆ. ಹಸಿರು ಏಲಕ್ಕಿ ಕೊಂಚ ದುಬಾರಿಯಾಗಿದ್ದರೂ ಪರಿಮಳ ಹೆಚ್ಚು. ಇದರಲ್ಲಿರುವ ಪೋಷಕಾಂಶಗಳ ಪಟ್ಟಿ ನೋಡಿದರೆ ತಬ್ಬಿಬ್ಬಾಗುತ್ತದೆ. ಇದರಲ್ಲಿ ಉತ್ತಮ ಪ್ರಮಾಣದಲ್ಲಿ ವಿವಿಧ ಖನಿಜಗಳು, ಕ್ಯಾಲ್ಸಿಯಂ, ಗಂಧಕ, ವಿಟಮಿನ್‌ಗಳು ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳಿವೆ. ಆರೋಗ್ಯದ ದೃಷ್ಟಿಯಿಂದಲೂ ಏಲಕ್ಕಿ ಬಹಳ ಮಹತ್ವದ್ದಾಗಿದೆ. ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ಕ್ಯಾನ್ಸರ್ ಬರದಂತೆ ತಡೆಗಟ್ಟುವುದು, ಮುಪ್ಪು ಬೇಗನೇ ಆವರಿಸುವುದನ್ನು ತಡೆಗಟ್ಟುವುದು, ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವುದು, ಹಲ್ಲಿನ ತೊಂದರೆಗಳನ್ನು ಕಡಿಮೆ ಮಾಡುವುದು ಮೊದಲಾದ ಗುಣಗಳಿವೆ. ಪರಿಮಳದ ಮೂಲಕ ರೋಗವನ್ನು ನಿವಾರಿಸುವ ವಿಧಾನವಾದ ಆರೋಮಾಪಥಿಯಲ್ಲಿ ಏಲಕ್ಕಿಗೆ ಪ್ರಮುಖ ಸ್ಥಾನವಿದೆ. ಇದರ ಪರಿಮಳವನ್ನು ಹೀರುವುದರಿಂದ ಮನಸ್ಸು ನಿರಾಳ ಮತ್ತು ನಿರುದ್ವಿಗ್ನವಾಗುವುದನ್ನೂ ಕಂಡುಕೊಳ್ಳಲಾಗಿದೆ.

ಹೆಚ್ಚಿನವರಿಗೆ ಏಲಕ್ಕಿ ಎಂದರೆ ಕೇವಲ ಅಡುಗೆಗೆ ರುಚಿ ಮತ್ತು ಪರಿಮಳ ಹೆಚ್ಚಿಸುವ ಒಂದು ಸಾಂಬಾರ ಪದಾರ್ಥ ಮಾತ್ರ. ಇನ್ನೂ ಹೆಚ್ಚೆಂದರೆ ಅಪರಿಚಿತ ಸ್ಥಳದಲ್ಲಿ ಊಟ ಮಾಡಿದ ಬಳಿಕ ಊಟದಲ್ಲಿ ಔಷಧಿ (ಓರ್ವರನ್ನು ವಶಪಡಿಸಿಕೊಳ್ಳಲು ಉಪಯೋಗಿಸುವ ಮಾಟದ ವಸ್ತು) ಹಾಕಿರುವ ಅನುಮಾನವಿದ್ದರೆ ಬಳಿಕ ಕಡ್ಡಾಯವಾಗಿ ತಿನ್ನುವ ವಸ್ತುವಾಗಿದೆ. ಆದರೆ ವಾಸ್ತವವಾಗಿ ಏಲಕ್ಕಿ ಇದಕ್ಕೂ ಹೆಚ್ಚಿನ ಆರೋಗ್ಯಕರ ಆಹಾರವಾಗಿದೆ. ಇದರ ಸದ್ಗುಣಗಳಲ್ಲಿ ಪ್ರಮುಖವಾದ ಗುಣಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಡಿಫ್ರೆಷನ್ ಕಡಿಮೆ ಮಾಡುತ್ತೆ

ಡಿಫ್ರೆಷನ್ ಕಡಿಮೆ ಮಾಡುತ್ತೆ

ಈಗಿನ ಕಾಲದಲ್ಲಿ ಒತ್ತಡ ಅನ್ನೋದು ಯಾರಿಗೆ ಇರಲ್ಲ ಹೇಳಿ. ಅದ್ರಿಂದ ಪ್ರತಿ ಮನೆಯಲ್ಲೂ ಒಬ್ರಲ್ಲ ಒಬ್ಬ ಸದಸ್ಯ ಸಂಕುಚಿತಗೊಳ್ತಾರೆ. ಆದ್ರೆ ಹಾಗೆ ಆಗಬಾರದು, ಡಿಫ್ರೆಷನ್ ಸಮಸ್ಯೆ ದೂರವಾಗ್ಬೇಕು ಅಂದ್ರೆ ಮನೆಯಲ್ಲಿ ಪರಿಮಳಯುಕ್ತವಾದ ಒಂದು ಏಲಕ್ಕಿ ಮಾಲೆಯನ್ನು ಇಟ್ಟಿರಿ. ಅಡುಗೆ ಮನೆಯ ಸಾಂಬಾರ ಪದಾರ್ಥದ ಡಬ್ಬದಲ್ಲಿ 100 ಗ್ರಾಂನಷ್ಟೋ, 200 ಗ್ರಾಂನಷ್ಟೋ ಏಲಕ್ಕಿಯನ್ನು ಮುಚ್ಚುಳ ಹಾಕಿ ಡಬ್ಬದಲ್ಲಿ ಇಟ್ಟರೆ ಸಾಲದು. ಅದ್ರ ಘಮಘಮಿಸುವ ಸ್ವಾದ ಮನೆಯ ಮೂಲೆಮೂಲೆಯನ್ನು ಪಸರಿಸಿದ್ರೆ ಮನೆಯ ಸದಸ್ಯರಲ್ಲಿ ಡಿಫ್ರೆಷನ್ ಸಮಸ್ಯೆ ಬಾಧಿಸೋದಿಲ್ಲ.

ಹುಳಹುಪ್ಪಟೆಗಳ ನಿಯಂತ್ರಣ

ಹುಳಹುಪ್ಪಟೆಗಳ ನಿಯಂತ್ರಣ

ಸಕ್ಕರೆ ಡಬ್ಬಕ್ಕೆ ಆಗಾಗ ಇರುವೆ ಬರುತ್ತೆ ಅಂದ್ರೆ ಅದ್ರೊಳಗೆ ಒಂದು ಏಲಕ್ಕಿ ಹಾಕಿಡೋದು ಎಲ್ಲರಿಗೂ ಗೊತ್ತು. ಆಗ ಇರುವೆ ಆ ಕಡೆ ತಲೆಯೂ ಹಾಕಲ್ಲ. ಕೇವಲ ಒಂದು ಡಬ್ಬದಲ್ಲಿ ಕೆಲಸ ಮಾಡುವ ಏಲಕ್ಕಿಯನ್ನು ಇಡೀ ಮನೆಯ ವಾತಾವರಣವನ್ನು ಶುಚಿಯಾಗಿಡಲು ಬಳಸಿಕೊಳ್ಳಬಹುದು. ಯಾರ ಮನೆಯಲ್ಲಿ ಸೊಳ್ಳೆ, ನೊಣ, ಇತ್ಯಾದಿ ಕೀಟಗಳ ಕಾಟವಿರುತ್ತೋ ಅಂತವರು ಒಂದು ಏಲಕ್ಕಿ ಮಾಲೆಯನ್ನು ಮನೆಯಲ್ಲಿ ಅಲಂಕಾರಿಕ ವಸ್ತುವಾಗಿ ಇಟ್ಟು ನೋಡಿ. ಖಂಡಿತ ನಿಮ್ಮ ಮನೆಯಲ್ಲಿ ಹುಳಹುಪ್ಪಟೆಗಳ ಕಾಟ ನಿಯಂತ್ರಣಕ್ಕೆ ಬರುತ್ತೆ.

ಶೀತ, ಗಂಟಲ ಬೇನೆ, ಕೆಮ್ಮನ್ನು ಕಡಿಮೆಗೊಳಿಸುತ್ತದೆ

ಶೀತ, ಗಂಟಲ ಬೇನೆ, ಕೆಮ್ಮನ್ನು ಕಡಿಮೆಗೊಳಿಸುತ್ತದೆ

ಏಲಕ್ಕಿಯನ್ನು ಬಿಸಿನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಗಂಟಲ ಬೇನೆ ಮತ್ತು ಕೆಮ್ಮು ಕಡಿಮೆಯಾಗುತ್ತದೆಇದರಿಂದ ಶ್ವಾಸವ್ಯವಸ್ಥೆಗೆ ಹೆಚ್ಚಿನ ರಕ್ತಸಂಚಾರ ಲಭ್ಯವಾಗಿ ಶೀತ, ಕೆಮ್ಮು ಮತ್ತು ಗಂಟಲಬೇನೆಗೆ ಕಾರಣವಾದ ಕ್ರಿಮಿಗಳನ್ನು ದೇಹ ಹೊರದೂಡಲು ನೆರವಾಗುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಏಲಕ್ಕಿಯಲ್ಲಿ ಅಲ್ಪ ಪ್ರಮಾಣದ ಎಣ್ಣೆ ಇದೆ. ಊಟವಾದ ಬಳಿಕ ಒಂದೆರಡು ಏಲಕ್ಕಿಗಳನ್ನು ಜಗಿದು ನುಂಗುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಜಠರದ ಉರಿಯನ್ನು ಕಡಿಮೆಗೊಳಿಸುತ್ತದೆ. ಊಟದಲ್ಲಿ ಆಮ್ಲೀಯತೆ ಹೆಚ್ಚಿದ್ದರೆ ಉಂಟಾಗುವ ಉರಿಯಿಂದಲೂ ಈ ಎಣ್ಣೆ ರಕ್ಷಿಸುತ್ತದೆ. ಅಜೀರ್ಣ, ಮಲಬದ್ಧತೆಗೂ ಏಲಕ್ಕಿಯ ಸೇವನೆಉತ್ತಮವಾಗಿದೆ. ಒಂದು ವೇಳೆ ಹೊಟ್ಟೆ ಕೆಟ್ಟಿದ್ದರೆ ಹಾಲಿಲ್ಲದ ಒಂದು ಲೋಟ ಚಹಾದಲ್ಲಿ ಒಂದೆರಡು ಏಲಕ್ಕಿಗಳನ್ನು ಕುದಿಸಿ ಕುಡಿಯುವ ಮೂಲಕ ತಕ್ಷಣ ಪರಿಹಾರ ಪಡೆಯಬಹುದು.

 ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ

ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ

ಏಲಕ್ಕಿಯಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ಒಂದು ಉತ್ತಮ ಆಂಟಿ ಆಕ್ಸಿಡೆಂಟ್ ಆಗಿದ್ದು ರಕ್ತಸಂಚಾರವನ್ನು ಹೆಚ್ಚಿಸಲು ನೆರವಾಗುತ್ತದೆ. ತನ್ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ.

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ

ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸುತ್ತದೆ

ಏಲಕ್ಕಿಯಲ್ಲಿ ವಿಷಕಾರಿ ವಸ್ತುಗಳನ್ನು ನಿವಾರಿಸುವ ಗುಣವಿದೆ. ಏಲಕ್ಕಿಯ ಎಣ್ಣೆಯಲ್ಲಿ ಈ ವಿಷಗಳನ್ನು ದೇಹದಿಂದ ಹೊರಹಾಕುವ ಗುಣವಿದೆ. ಈ ಗುಣವೇ ಮೂತ್ರಪಿಂಡಗಳ ಕ್ಷಮತೆಯನ್ನು ಹೆಚ್ಚಿಸಿ ಮೂತ್ರಪಿಂಡಗಳಲ್ಲಿ ಈಗಾಗಲೇ ಶೇಖರವಾಗಿರಬಹುದಾದ ಕಲ್ಮಶಗಳನ್ನು ಹೊರಹಾಕಿ ಕಲ್ಲುಗಳಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಏಲಕ್ಕಿಯಲ್ಲಿರುವ ಸೂಕ್ಷ್ಮ ಪೋಷಕಾಂಶಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ (low density lipoproteins) ಅಥವಾ ಲಿಪಿಡ್ಸ್ ಎನ್ನುವ ಜಿಡ್ಡುಪದಾರ್ಥವನ್ನು ತೊಲಗಿಸಲು ನೆರವಾಗುತ್ತವೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಈ ಲಿಪಿಡ್ಸ್‌ಗಳನ್ನು ಆಕರ್ಷಿಸಿ ತಮ್ಮೊಂದಿಗೆ ದೇಹದಿಂದ ಹೊರಹೋಗುವಂತೆ ಮಾಡುತ್ತವೆ.

 ಅಸ್ತಮಾ ನಿಯಂತ್ರಣಕ್ಕೆ ಬರುತ್ತೆ

ಅಸ್ತಮಾ ನಿಯಂತ್ರಣಕ್ಕೆ ಬರುತ್ತೆ

ಯಾರ ಮನೆಯಲ್ಲಿ ಅಸ್ತಮಾ ಕಾಯಿಲೆ ಇರುವವರು ಇದ್ದಾರೋ ಅಂತವರ ಮನೆಯಲ್ಲಿ ಇರಲೇಬೇಕಾದ ವಸ್ತು ಏಲಕ್ಕಿ ಮಾಲೆ..ಏಲಕ್ಕಿ ಮಾಲೆಯಿಂದ ಹೊರಹೊಮ್ಮುವ ಪರಿಮಳ ಗಾಳಿಯಲ್ಲಿ ಬೆರೆಯುತ್ತೆ. ಅದು ಮನೆಯ ಎಲ್ಲಾ ಸದಸ್ಯರ ಉಸಿರಾಟಕ್ಕೆ ನೆರವಾಗುತ್ತೆ. ಅದ್ರಲ್ಲೂ ಪ್ರಮುಖವಾಗಿ ಅಸ್ತಮಾ ಕಾಯಿಲೆ ಇರುವವರಿಗೆ ಉತ್ತಮ ಉಸಿರಾಟಕ್ಕೆ ಇದು ಸಹಾಯ ಮಾಡಲಿದೆ.

ಮನೆಯಲ್ಲಿ ಯಾರಿಗೂ ವಾಂತಿ, ತಲೆಸುತ್ತುವಿಕೆ ಸಮಸ್ಯೆ ಇರೋದಿಲ್ಲ

ಮನೆಯಲ್ಲಿ ಯಾರಿಗೂ ವಾಂತಿ, ತಲೆಸುತ್ತುವಿಕೆ ಸಮಸ್ಯೆ ಇರೋದಿಲ್ಲ

ಗರ್ಭಿಣಿಯರಿಗೆ ವಾಂತಿ, ತಲೆಸುತ್ತುವಿಕೆ ಸಮಸ್ಯೆ ಇದ್ದಲ್ಲಿ ಏಲಕ್ಕಿ ಪರಿಮಳ ಸವಿದ್ರೆ ನಿಯಂತ್ರಣಕ್ಕೆ ಬರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಕೇವಲ ಅವರಿಗೆ ಮಾತ್ರವಲ್ಲ. ಆಹಾರದ ಏರುಪೇರಿನಿಂದ ಕೂಡ ಕೆಲವೊಮ್ಮೆ ವಾಂತಿ, ತಲೆಸುತ್ತುವಿಕೆಯಂತ ಸಮಸ್ಯೆ ಬಾಧಿಸಬಹುದು. ಆದ್ರೆ ಮನೆಯಲ್ಲಿ ಏಲಕ್ಕಿ ಮಾಲೆ ಇಟ್ಟಿದ್ರೆ ಇಂತಹ ಸಮಸ್ಯೆಗಳಿಗೆ ಕಡಿವಾಣ ಬೀಳಲಿದೆ.

ಉತ್ತಮ ಉಸಿರಾಟಕ್ಕೆ ಸಹಕಾರಿ

ಉತ್ತಮ ಉಸಿರಾಟಕ್ಕೆ ಸಹಕಾರಿ

ಕೆಲವರಿಗೆ ಉಸಿರಾಟ ಪ್ರಕ್ರಿಯೆ ಉತ್ತಮವಾಗಿರುವುದಿಲ್ಲ. ಉಸಿರಾಟದಲ್ಲಿ ವಾಸನೆಯಾಗುವ ಸಮಸ್ಯೆ ಇರುತ್ತೆ. ಬಾಯಿ ಬಿಟ್ರೆ ಇನ್ನೊಬ್ಬರಿಗೆ ಕಿರಿಕಿರಿಯನ್ನಿಸುವ ಸಮಸ್ಯೆ ಅದು. ಇಂತಹ ಸಮಸ್ಯೆ ಮನೆಯ ಯಾವ ಸದಸ್ಯರಿಗೂ ಬರಬಾರದು ಅಂದ್ರೆ ಅದಕ್ಕೆ ನೆರವಾಗುವುದು ಏಲಕ್ಕಿ ಮಾಲೆ. ಮನೆಯಲ್ಲಿರುವ ಏಲಕ್ಕಿ ಮಾಲೆಯ ಘಮ ಇಡೀ ಮನೆಯ ವಾತಾವರಣವನ್ನು ಬದಲಿಸುವುದು ಮಾತ್ರವಲ್ಲ ಬದಲಾಗಿ ಮನೆಯ ಎಲ್ಲಾ ಸದಸ್ಯರ ಸರಾಗವಾದ ಮತ್ತು ಸ್ವಚ್ಛ ಉಸಿರಾಟಕ್ಕೆ ಕಾರಣವಾಗುತ್ತೆ.

ಧನಾತ್ಮಕ ಶಕ್ತಿ ಹೆಚ್ಚಿಸುತ್ತೆ

ಧನಾತ್ಮಕ ಶಕ್ತಿ ಹೆಚ್ಚಿಸುತ್ತೆ

ಪ್ರತಿಯೊಬ್ಬರ ಮನೆಯಲ್ಲೂ ಪಾಸಿಟೀವ್ ಎನರ್ಜಿ ಇರಬೇಕು ಅಂತ ಬಯಸ್ತೀವಿ. ಈ ಪಾಸಿಟೀವ್ ಎನರ್ಜಿ ಕೇವಲ ವಾಸ್ತುಪ್ರಕಾರ ಮನೆಕಟ್ಟಿದಾಗ ಮಾತ್ರವಲ್ಲ ಬದಲಾಗಿ ನೀವು ಹೇಗೆ ನಿಮ್ಮ ಮನೆಯನ್ನು ಸ್ವಚ್ಛ ಮತ್ತು ಸುಂದರವಾಗಿ ಇಟ್ಟುಕೊಂಡಿದ್ದೀರಿ ಅನ್ನೋದ್ರ ಮೇಲೂ ಕೂಡ ಆಧಾರಿತವಾಗಿರುತ್ತೆ. ಆ ನಿಟ್ಟಿನಲ್ಲಿ ಸಹಾಯ ಮಾಡುವುದೇ ಏಲಕ್ಕಿ ಮಾಲೆ. ಮನೆಯಲ್ಲಿ ಏಲಕ್ಕಿ ಮಾಲೆ ಇದ್ರೆ ಆ ಮನೆಯಲ್ಲಿ ಧನಾತ್ಮಕ ಶಕ್ತಿಗೆ ಕೊರತೆಯೇ ಇರೋದಿಲ್ಲ.

English summary

Benefits of Cardamom and Uses that You Should Know

Cardamom, popularly known as Elaichi is an exotic spice used as a flavoring agent in Indian cuisine. It is regarded as the queen of all spices. It is one of the oldest and most expensive spices in the world after saffron and vanilla. Two types of cardamom exists; brown and green cardamom Cardamom seeds are added to various desserts to enhance its taste. It is one of the prime ingredients in garam masala.
X
Desktop Bottom Promotion