For Quick Alerts
ALLOW NOTIFICATIONS  
For Daily Alerts

  ಮುಟ್ಟಿನ ಹೊಟ್ಟೆ ನೋವಿಗೆ, ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಕುಡಿಯಿರಿ

  |

  ಮಾಸಿಕ ದಿನಗಳಲ್ಲಿ ಎದುರಾಗುವ ಕೆಳಹೊಟ್ಟೆಯ ಸೆಡೆತದ ನೋವನ್ನು ಕಡಿಮೆ ಮಾಡಲು ನೀವೇನು ಮಾಡುತ್ತೀರಿ? ಸಾಮಾನ್ಯವಾಗಿ ನೋವು ನಿವಾರಕ ಗುಳಿಗೆಗಳನ್ನು ಸೇವಿಸಿ ಈ ನೋವಿನಿಂದ ಮುಕ್ತಿ ಪಡೆಯುವುದು ಹೆಚ್ಚಿನವರು ಕಂಡುಕೊಂಡಿರುವ ಸುಲಭ ಮಾರ್ಗವಾಗಿದೆ. ಅಲ್ಲದೇ ಮಾಸಿಕ ದಿನಗಳು ಪ್ರಾರಂಭವಾಗಲಿವೆ ಎನ್ನಲಿದ್ದಾಗಲೇ ಈ ಗುಳಿಗೆಗಳನ್ನು ಮುಂಚಿತವಾಗಿಯೇ ಸೇವಿಸಿ ನೋವಿನಿಂದ ಪಾರಾಗಬಹುದು ಎಂದು ಚಿಂತಿಸುತ್ತಿದ್ದಿರಾ?

  ಇನ್ನೊಮ್ಮೆ ಯೋಚಿಸಿ, ಏಕೆಂದರೆ ಈ ವಿಧಾನಗಳು ಅಲ್ಪಾವಧಿಗೆ ಮಾತ್ರವೇ ತಮ್ಮ ಪ್ರಭಾವ ತೋರುತ್ತವೆಯೇ ಹೊರತು ಇವು ಸರ್ವಥಾ ನಿಮ್ಮ ಸಮಸ್ಯೆಗೆ ಪರಿಹಾರವಲ್ಲ, ಅಲ್ಲದೇ ದೀರ್ಘಾವಧಿಯಲ್ಲಿ ಇವು ಶರೀರದ ಮೇಲೆ ಹಲವಾರು ಪರೋಕ್ಷ ಅಡ್ಡಪರಿಣಾಮಗಳನ್ನುಂಟುಮಾಡಬಹುದು.

  ಆದರೆ ಮಹಿಳೆಯರೇ! ಈಗ ಈ ತೊಂದರೆಗೆ ನಮ್ಮಲ್ಲಿ ಒಂದು ಸುಲಭ ಪರಿಹಾರವಿದೆ. ನಿಮ್ಮ ಮನೆಯಲ್ಲಿ ಅಡುಗೆಗೆ ಬಳಕೆಯಾಗುವ ಬೀಟ್ರೂಟ್ ಒಂದರ ತಿರುಳನ್ನು ಅರೆದು ಹಿಂಡಿ ತೆಗೆದ ರಸವೇ ನಿಮ್ಮ ಮಾಸಿಕ ದಿನಗಳ ನೋವು ಹಾಗೂ ಸೆಡೆತಗಳನ್ನು ಕಡಿಮೆ ಮಾಡಲು ಸಿದ್ಧೌಷಧಿಯಾಗಿದ್ದು ಇದರ ಸೇವನೆಯಿಂದ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚಿ ಮಾಸಿಕ ದಿನಗಳನ್ನು ನೈಸರ್ಗಿಕವಾಗಿಯೇ ಎದುರಿಸಲು ನೆರವಾಗುತ್ತದೆ.

  ಮಹಿಳೆಯರು ಮಾಸಿಕ ದಿನಗಳಲ್ಲಿ ಹೆಚ್ಚು ರಕ್ತವನ್ನು ಕಳೆದುಕೊಳ್ಳುವ ಮೂಲಕ ಹೆಚ್ಚು ನಿತ್ರಾಣರಾಗುತ್ತಾರೆ ಹಾಗೂ ಸುಸ್ತು, ಸೆಡೆತ, ಕೆಳಹೊಟ್ಟೆಯಲ್ಲಿ ನೋವು, ವಾಕರಿಕೆ ಮೊದಲಾದವುಗಳನ್ನೂ ಎದುರಿಸುತ್ತಾರೆ. ದೈನಂದಿನ ಕೆಲಸಗಳಲ್ಲಿ ತೊಡಗಿಕೊಳ್ಳಲು ನಿರುತ್ಸಾಹಿಗಳಾಗಿರುತ್ತಾರೆ ಹಾಗೂ ಹೆಚ್ಚು ಹೊತ್ತು ಮಲಗಿಯೇ ಇರುವಂತಾಗುತ್ತದೆ. ಆದರೆ ಇಡಿಯ ದಿನ ಮಲಗಿಯೇ ಇದ್ದರೆ ನಿತ್ಯದ ಅವಶ್ಯಕ ಕೆಲಸಗಳನ್ನು ಪೂರೈಸುವುದಾದರೂ ಹೇಗೆ? ಅಲ್ಲದೇ ಹೆಚ್ಚು ಹೆಚ್ಚು ಮಲಗಿದ್ದಷ್ಟೂ ಹೆಚ್ಚು ಹೆಚ್ಚು ಸುಸ್ತು ಆವರಿಸುತ್ತಲೇ ಹೋಗುತ್ತದೆ.

  Beetroot Juice

  ಆದ್ದರಿಂದ ಈ ಸಮಯದಲ್ಲಿ ಪೂರ್ಣವಾಗಿ ವಿಶ್ರಾಂತಿ ತೆಗೆದುಕೊಳ್ಳದೇ ಕೊಂಚ ಪ್ರಮಾಣದಲ್ಲಿಯಾದರೂ ಚಲನವಲನ ನಡೆಸಬೇಕು ಹಾಗೂ ಈ ಸಮಯದಲ್ಲಿ ಒಂದು ಲೋಟ ಬೀಟ್ರೂಟ್ ರಸವನ್ನು ಸೇವಿಸುವ ಮೂಲಕ ನಿಮ್ಮ ತ್ರಾಣವನ್ನು ಮರುದುಂಬಿಸಲು ಸಾಧ್ಯವಾಗುತ್ತದೆ ಹಾಗೂ ನೋವು ಸಹಾ ಕನಿಷ್ಟವಾಗಿದ್ದು ಸೆಡೆತವೂ ಸಹಿಸುವ ಮಟ್ಟಕ್ಕಿಳಿಯುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಬೀಟ್ರೂಟ್ ರಸದಲ್ಲಿ ಅದ್ಭುತ ಪ್ರಮಾಣದ ಪೊಟ್ಯಾಶಿಯಂ ಮತ್ತು ನೈಟ್ರೇಟುಗಳಿವೆ. ಇವೆರಡೂ ರಕ್ತದ ಒತ್ತಡವನ್ನು ನಿರ್ವಹಿಸಲು ಅಗತ್ಯವಾಗಿವೆ. ಈ ದಿನದಲ್ಲಿ ಕೇವಲ ನೂರು ಮಿಲಿಗ್ರಾಂ ಬೀಟ್ರೂಟ್ ರಸವನ್ನು ಸೇವಿಸಿದರೂ ಸಾಕು, ನಿಮಗೆ ಇಡಿಯ ದಿನಕ್ಕೆ ಅಗತ್ಯವಿರುವ ಶಕ್ತಿ ಮತ್ತು ಪೋಷಕಾಂಶಗಳು ದೊರಕುತ್ತವೆ.

  ಮಾಸಿಕ ದಿನಗಳಲ್ಲಿ ಬೀಟ್ರೂಟ್ ರಸವನ್ನು ಸೇವಿಸುವ ಪ್ರಯೋಜನಗಳು

  ಬೀಟ್ಸ್ ಎಂದು ಇಂದು ಹೃಸ್ವರೂಪದಲ್ಲಿ ಕರೆಯಲಾಗುವ ಈ ತರಕಾರಿಯ ಬಳಕೆ ಸಾವಿರ ವರ್ಷಕ್ಕಿಂತಲೂ ಹಿಂದಿನದು. ಬರೆಯ ಗಡ್ಡೆ ಮಾತ್ರವಲ್ಲ, ಇದರ ಎಲೆಗಳೂ ರುಚಿಕರ ಹಾಗೂ ಆರೋಗ್ಯಕರವಾಗಿವೆ. ಬೀಟ್ರೂಟ್ ಗಡ್ಡೆಯನ್ನು ಕತ್ತರಿಸಿದಾಗ ಒಸರುವ ರಸ ಗಾಢ ಕೆಂಪು ಬಣ್ಣ ಪಡೆಯಲು ಇದರಲ್ಲಿರುವ ಬಿಟಾನಿನ್ ಎಂಬ ಹೆಸರಿನ ಬೀಟಾಲೈನ್ ಪ್ರಬೇಧದ ವರ್ಣದ್ರವ್ಯವೇ ಕಾರಣವಾಗಿದೆ.

  ಬೀಟ್ರೂಟ್ ನಲ್ಲಿ ಹಲವು ವಿಧದ ವಿಟಮಿನ್ನುಗಳು, ಖನಿಜಗಳು ಹಾಗೂ ನಿಯಾಸಿನ್, ಪ್ಯಾಂಟೋಥೆನಿಕ್ ಆಮ್ಲ, ಫೋಲೇಟ್, ರೈಬೋಫ್ಲೇವಿನ್, ವಿಟಮಿನ್ ಬಿ೬, ವಿಟಮಿನ್ ಬಿ೧, ಥಿಯಾಮಿನ್ ಮೊದಲಾದ ಆಂಟಿ ಆಕ್ಸಿಡೆಂಟುಗಳಿವೆ. ಜೊತೆಗೇ ಥಿಯಾಮಿನ್, ಕಬ್ಬಿಣ, ಸತು, ಮೆಗ್ನೇಶಿಯಂ, ಪೊಟ್ಯಾಶಿಯಂ, ವಿಟಮಿನ್ ಸಿ, ಗಂಧಕ ಹಾಗೂ ಕರಗುವ ನಾರು ಸಹಾ ಇವೆ.

  ಮುಖ್ಯವಾಗಿ, ಇದರಲ್ಲಿರುವ ನೈಟ್ರೇಟುಗಳು ದೇಹದಲ್ಲಿ ಜೀರ್ಣಕ್ರಿಯೆಯ ಬಳಿಕ ನೈಟ್ರಿಕ್ ಆಕ್ಸಿಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ನರಗಳನ್ನು ಸಡಿಲಿಸಲು ನೆರವಾಗುತ್ತದೆ ಹಾಗೂ ದೇಹದಾದ್ಯಂತ, ವಿಶೇಷವಾಗಿ ಗರ್ಭಕೋಶದ ಭಾಗಗಳು ಉತ್ತಮ ರಕ್ತಪರಿಚಲನೆ ಪಡೆಯಲು ನೆರವಾಗುತ್ತದೆ. ಅಲ್ಲದೇ ಬೀಟ್ರೂಟ್ ನಲ್ಲಿ ಅಧಿಕ ಪ್ರಮಾಣದಲ್ಲಿರುವ ಕಬ್ಬಿಣ ಒಂದು ಅವಶ್ಯಕ ಖನಿಜವಾಗಿದ್ದು ಕೆಂಪು ರಕ್ತಕಣಗಳ ಉತ್ಪತ್ತಿಗೆ ಅವಶ್ಯವಾಗಿದೆ.

  Beetroot Juice

  ಮಾಸಿಕ ಸೆಡೆತವನ್ನು ಬೀಟ್ರೂಟ್ ರಸ ಹೇಗೆ ಕಡಿಮೆ ಮಾಡುತ್ತದೆ?

  ಈ ದಿನಗಳಲ್ಲಿ ಒಂದು ಲೋಟ ಬೀಟ್ರೂಟ್ ರಸವನ್ನು ಸೇವಿಸುವ ಮೂಲಕ ಮಾಸಿಕ ದಿನಗಳ ನೋವನ್ನು ಹಾಗೂ ಸುಸ್ತು ಮತ್ತು ವಾಕರಿಕೆಯನ್ನು ಕನಿಷ್ಟವಾಗಿಸಬಹುದು. ಅಲ್ಲದೇ ದೇಹ ಕಳೆದುಕೊಂಡಿದ್ದ ಚೈತನ್ಯವನ್ನು ಶೀಘ್ರವೇ ಮರುತುಂಬಿಸಲೂ ನೆರವಾಗುತ್ತದೆ. ಬೀಟ್ರೂಟಿನಲ್ಲಿರುವ ಕಬ್ಬಿಣ ರಕ್ತದಲ್ಲಿರುವ ಕೆಂಪು ರಕ್ತಕಣಗಳ ಸಂಖ್ಯೆಯನ್ನು ವೃದ್ದಿಸುವ ಜೊತೆಗೇ ರಕ್ತದ ಹರಿವನ್ನೂ ಹೆಚ್ಚಿಸುತ್ತದೆ. ಕೆಂಪು ರಕ್ತಕಣಗಳು ಹೆಚ್ಚಿದ್ದಷ್ಟೂ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೆಚ್ಚುತ್ತದೆ.

  ಬೀಟ್ರೂಟ್ ರಸದಲ್ಲಿ ಬೀಟಾ ಕ್ಯಾರೋಟಿನ್ ಹಾಗೂ ವಿವಿಧ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿದ್ದು ಗರ್ಭಕೋಶಗಳತ್ತ ಹೆಚ್ಚಿನ ಪ್ರಮಾಣದ ಆಮ್ಲಜನಕಭರಿತ ರಕ್ತವನ್ನು ಒದಗಿಸಲು ನೆರವಾಗುತ್ತದೆ. ತನ್ಮೂಲಕ ಮಾಸಿಕ ದಿನಗಳಲ್ಲಿ ಎದುರಾಗುವ ಉರಿಯೂತವನ್ನು ಕಡಿಮೆ ಮಾಡಿ ಈ ದಿನಗಳಲ್ಲಿ ಆವರಿಸುವ ತೊಂದರೆಗಳಿಂದ ರಕ್ಷಿಸುತ್ತದೆ.

  ಇವೆಲ್ಲಾ ಕಾರಣಗಳಿಂದ ಮಾಸಿಕ ದಿನಗಳಲ್ಲಿ ಸೇವಿಸಲು ಬೀಟ್ರೂಟ್ ರಸ ಅತ್ಯುತ್ತಮವಾದ ದ್ರವವಾಗಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಪರ್ಯಾಯವಾಗಿ, ಮಾಸಿಕ ದಿನಗಳ ನೋವನ್ನು ಕಡಿಮೆ ಮಾಡಲು ಜೀರಿಗೆ ಪುಡಿಯನ್ನು ಈ ರಸದಲ್ಲಿ ಕದಡಿಯೂ ಸೇವಿಸಬಹುದು. ಜೀರಿಗೆ ಸೆಡೆತವನ್ನು ನಿರಾಳಗೊಳಿಸುವ ಗುಣವನ್ನು ಹೊಂದಿದೆ ಹಾಗೂ ಇದರ ಉರಿಯೂತ ನಿವಾರಕ ಮತ್ತು ತಡೆತಡೆದು ಬರುವ ನೋವನ್ನು ನಿವಾರಿಸುವ ಗುಣಗಳು ಮಾಸಿಕ ದಿನಗಳ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ.

  Beetroot Juice

  ಬೀಟ್ರೂಟ್ ರಸವನ್ನು ತಯಾರಿಸುವ ವಿಧಾನ:

  ಅಗತ್ಯವಿರುವ ಸಾಮಾಗ್ರಿಗಳು:

  ಒಂದು ದೊಡ್ಡ ಗಾತ್ರದ ಬೀಟ್ರೂಟ್.

  ಅರ್ಧ ಚಿಕ್ಕಚಮಚ ಜೀರಿಗೆ ಪುದಿ

  ವಿಧಾನ: ಮೊದಲು ಬೀಟ್ರೂಟ್ ಅನ್ನು ಚೆನ್ನಾಗಿ ತೊಳೆದು ಸಿಪ್ಪೆ ಸುಲಿಯಿರಿ ಹಾಗೂ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ

  ಬಳಿಕ ಜ್ಯೂಸರ್ ನ ಬ್ಲೆಂಡರ್ ನಲ್ಲಿ ಜೀರಿಗೆ ಪುಡಿಯ ಜೊತೆಗೆ ಹಾಕಿ ಅರ್ಧ ಕಪ್ ನೀರು ಸೇರಿಸಿ, ನುಣ್ಣಗೆ ಕಡೆಯಿರಿ. ಈ ನೀರನ್ನು ಸೋಸದೇ ಹಾಗೇ ಕುಡಿಯಿರಿ.

  ಬಣ್ಣ ಕೆಂಪಗಿದೆ ಎಂಬ ಒಂದೇ ಕಾರಣಕ್ಕೆ ಹೆಚ್ಚಿನವರು ಬೀಟ್‌ರೂಟ್ ಗಡ್ಡೆಯನ್ನು ಸೇವಿಸುವುದರಿಂದ ದೂರ ಉಳಿಯುತ್ತಾರೆ. ಆದರೆ ವಾಸ್ತವವಾಗಿ ಬೀಟ್‌ರೂಟ್ ಒಂದು ಅತ್ಯುತ್ತಮವಾದ ಆಹಾರವಾಗಿದ್ದು ಇದರ ಸೇವನೆಯಿಂದ ಹಲವು ಪೋಷಕಾಂಶಗಳು ಮತ್ತು ಕರಗುವ ನಾರು ಜೀರ್ಣಕ್ರಿಯೆ ಹಾಗೂ ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ. ಬನ್ನಿ ಬೀಟ್‌ರೂಟ್ ಗಡ್ಡೆಯ ಜ್ಯೂಸ್ ನ ಇನ್ನಷ್ಟು ಪ್ರಯೋಜನಗಳನ್ನು ಮುಂದೆ ಓದಿ... 

  ಲೈಂಗಿಕ ಶಕ್ತಿಯನ್ನು ವೃದ್ಧಿಸುತ್ತದೆ

  ದೇಹದ ರಕ್ತದಲ್ಲಿ ನೈಟ್ರಿಕ್ ಆಮ್ಲದ ಕೊರತೆಯಿಂದ ರಕ್ತಪರಿಚಲನೆಯಲ್ಲಿ ಕೊಂಚ ಕಡಿತ ಕಂಡುಬರುತ್ತದೆ. ಲೈಂಗಿಕ ಶಕ್ತಿಯನ್ನು ಈ ಕೊರತೆ ಬಹುವಾಗಿ ತಗ್ಗಿಸುತ್ತದೆ. ಬೀಟ್ರೂಟಿನಲ್ಲಿ ಉತ್ತಮ ಪ್ರಮಾಣದ ನೈಟ್ರೇಟುಗಳಿದ್ದು ಇದು ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ರಕ್ತದಲ್ಲಿ ನೈಟ್ರಸ್ ಆಕ್ಸೈಡ್ ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತಪರಿಚಲನೆಯನ್ನು ಸುಲಭಗೊಳಿಸುತ್ತದೆ. ಇದು ವಿಶೇಷವಾಗಿ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಿ ಲೈಂಗಿಕ ಶಕ್ತಿಯನ್ನು ಬಹುವಾಗಿ ಹೆಚ್ಚಿಸುತ್ತದೆ. ಇದು ದಂಪತಿಗಳಲ್ಲಿ ಪ್ರೀತಿ ವಿಶ್ವಾಸ ಹೆಚ್ಚಲು ಭದ್ರ ಬುನಾದಿಯಾಗಿದೆ. 

  Beetroot Juice

  ರಕ್ತವನ್ನು ಶುದ್ಧೀಕರಿಸುತ್ತದೆ

  Nursing and Health Science ಎಂಬ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ರಕ್ತಹೀನತೆಯಿಂದ ಬಳಲುತ್ತಿದ್ದ ಹದಿಹರೆಯದ ಹಣ್ಣುಮಕ್ಕಳ ರಕ್ತದಲ್ಲಿ ಬ್ರೀಟ್ರೂಟ್ ರಸವನ್ನು ಸೇವಿಸಲು ಪ್ರಾರಂಭಿಸಿದ ಇಪ್ಪತ್ತೇ ದಿನದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣದ ಅಂಶ ಇರುವ ಕಾರಣ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶ ಉತ್ಪತ್ತಿಗೊಳ್ಳಲು ನೆರವಾಗುತ್ತದೆ. ರಕ್ತದ ಕೆಂಪು ರಕ್ತಕಣಗಳಲ್ಲಿರುವ ಪ್ರಮುಖ ಪ್ರೋಟೀನ್ ಆಗಿರುವ ಈ ಹೀಮೋಗ್ಲೋಬಿನ್ ಶ್ವಾಸಕೋಶಗಳಿಂದ ರಕ್ತವನ್ನು ದೇಹದ ಇತರ ಭಾಗಗಳಿಗೆ ಕೊಂಡೊಯ್ಯಲು ಅತ್ಯಂತ ಅಗತ್ಯವಾಗಿದೆ. ಇದು ವಿಶೇಷವಾಗಿ ಗರ್ಭಿಣಿಯರಿಗೆ ನೆರವಾಗುತ್ತದೆ. ಗರ್ಭಾವಸ್ಥೆಯಲ್ಲಿ ಒಡಲಲ್ಲಿ ಬೆಳೆಯುತ್ತಿರುವ ಕಂದನಿಗಾಗಿ ಹೆಚ್ಚಿನ ಪ್ರಮಾಣದ ಕಬ್ಬಿಣದ ಅವಶ್ಯವಿದೆ. ಅಲ್ಲದೇ ಮಾಸಿಕ ರಜಾದಿನಗಳ ಬಳಿಕ ಮಹಿಳೆಯರ ದೇಹದಲ್ಲಿ ಉಂಟಾಗಿದ್ದ ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ. 

  ಹೃದಯವನ್ನು ಉತ್ತಮ ಆರೋಗ್ಯದಲ್ಲಿರಿಸುತ್ತದೆ

  ಬೀಟ್ರೂಟ್ ರಸದಲ್ಲಿರುವ ನೈಟ್ರೇಟುಗಳು ರಕ್ತಪರಿಚಲನೆಯನ್ನು ಉತ್ತಮಗೊಳಿಸುವ ಜೊತೆಗೇ ಹೃದಯದ ಆರೋಗ್ಯವನ್ನೂ ವೃದ್ಧಿಸುತ್ತದೆ. ವಿಶೇಷವಾಗಿ ಅಧಿಕ ರಕ್ತದೊತ್ತಡದಿಂದ ಬಳಲುವ ರೋಗಿಗಳಿಗೆ ಇದು ವರದಾನವಾಗಿದೆ. ಇದರ ನಿತ್ಯದ ಸೇವನೆಯಿಂದ ರಕ್ತನಾಳಗಳು ಸಡಿಲಗೊಂಡು ರಕ್ತಪರಿಚಲನೆ ಸುಗಮಗೊಳ್ಳುತ್ತದೆ. ಒಂದು ಸಂಶೋಧನೆಯ ಪ್ರಕಾರ ಎರಡು ವಾರಗಳ ಕಾಲ ಪ್ರತಿದಿನ ಅರ್ಧ ಕೇಜಿ ಬೀಟ್ರೂಟಿನಿಂದ ತೆಗೆದ ರಸವನ್ನು ಕುಡಿದ ಬಳಿಕ ಅಧಿಕ ರಕ್ತದೊತ್ತಡ ಸೇವನೆಯ ಕೇವಲ ಆರು ಗಂಟೆಗಳಲ್ಲಿ ಆರೋಗ್ಯಕರ ಮಟ್ಟಕ್ಕಿಳಿಸಿದೆ. 

  ಹೃದಯವನ್ನು ಉತ್ತಮ ಆರೋಗ್ಯದಲ್ಲಿರಿಸುತ್ತದೆ

  ಒಂದು ಸಂಶೋಧನೆಯ ಪ್ರಕಾರ ಎರಡು ವಾರಗಳ ಕಾಲ ಪ್ರತಿದಿನ ಅರ್ಧ ಕೇಜಿ ಬೀಟ್ರೂಟಿನಿಂದ ತೆಗೆದ ರಸವನ್ನು ಕುಡಿದ ಬಳಿಕ ಅಧಿಕ ರಕ್ತದೊತ್ತಡ ಸೇವನೆಯ ಕೇವಲ ಆರು ಗಂಟೆಗಳಲ್ಲಿ ಆರೋಗ್ಯಕರ ಮಟ್ಟಕ್ಕಿಳಿಸಿದೆ. 

  ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

  ಒಂದು ಸಂಶೋಧನೆಯ ಪ್ರಕಾರ ಮೆದುಳಿಗೆ ಹರಿಯುವ ರಕ್ತದಲ್ಲಿ ನೈಟ್ರೇಟ್ ಆಕ್ಸೈಡ್ ಕೊರತೆಯ ಕಾರಣ ಮೆದುಳಿನ ಕ್ಷಮತೆ ಕಡಿಮೆಯಾಗುತ್ತದೆ. ಇದರಿಂದ ಮೆದುಳಿನ ಜೀವಕೋಶಗಳಾದ ನ್ಯೂರಾನುಗಳು ಅಧಿಕ ಸಂಖ್ಯೆಯಲ್ಲಿ ಸಾಯುತ್ತವೆ. 

  ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

  ಬೀಟ್ರೂಟ್ ರಸವನ್ನು ನಿತ್ಯವೂ ಕುಡಿಯುವ ಮೂಲಕ ಈ ಕೊರತೆ ನೀಗುತ್ತದೆ. ವಿಶೇಷವಾಗಿ ಮೆದುಳಿನ ಮುಂಭಾಗದ ಹೊದಿಕೆ (frontal cortex) ಸವೆತದಿಂದ ಚೇತರಿಸಿಕೊಳ್ಳುತ್ತದೆ. ಇದರಿಂದ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. 

  Beetroot Juice

  ಮಧುಮೇಹವನ್ನು ನಿಯಂತ್ರಿಸುತ್ತದೆ

  ಬೀಟ್ರೂಟ್ ರಸ ಸಿಹಿಯಾಗಿರುವುದರಿಂದ ಮಧುಮೇಹಿಗಳಿಗೆ ತಕ್ಕುದಲ್ಲ ಎಂದು ಹೆಚ್ಚಿನವರು ತಿಳಿದಿದ್ದಾರೆ. ಆದರೆ ಇದು ಸತ್ಯವಲ್ಲ, ಇದರ ರಸದ ಸೇವನೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಅದರಲ್ಲೂ ಊಟದ ಬಳಿಕ ಕುಡಿದ ರಸ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಇದಕ್ಕೆ ಕಾರಣ ಈ ರಸದಲ್ಲಿರುವ betalain ಮತ್ತು neo betanin ಎಂಬ ಪೋಷಕಾಂಶಗಳು. ಇವು ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಹೆಚ್ಚಾಗದಂತೆ ನೋಡಿಕೊಳ್ಳಲು ನೆರವಾಗುತ್ತವೆ. ಜೊತೆಗೇ ಇನ್ಸುಲಿನ್ ಬಳಕೆಯಾಗಲು ನೆರವಾಗುತ್ತವೆ ಮತ್ತು ಮಧುಮೇಹಿಗಳಿಗೆ ಸಿಂಹಸ್ವಪ್ನವಾಗಿರುವ ಮಾಗುವ ಗುಣವನ್ನು ವೃದ್ಧಿಸುತ್ತದೆ. ಗಾಯಗಳಾದರೆ ಮಧುಮೇಹಿಗಳಿಗೆ ಮಾಗಲು ಬಲು ಹೆಚ್ಚಿನ ಸಮಯ ತೆಗೆದುಕೊಳ್ಳಲು ಇದೇ ಕಾರಣ. 

  ಕ್ಯಾನ್ಸರ್ ನಿಂದ ರಕ್ಷಿಸುತ್ತದೆ

  ಬೀಟ್ರೂಟ್ ನಲ್ಲಿ betanin ಎಂಬ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ಇದೊಂದು ವಿಷಕಾರಿ ವಸ್ತುಗಳನ್ನು ನಿವಾರಿಸುವ ಕಣಗಳಾದ ಬೀಟಾಸಯಾನಿನ್ (betacyanin)ನ ಮುಖ್ಯ ಘಟಕವಾಗಿದ್ದು ದೇಹದಲ್ಲಿ ಕ್ಯಾನ್ಸರ್ ಕಾರಕ ಕಣಗಳು ವೃದ್ಧಿಯಾಗುವುದರಿಂದ ರಕ್ಷಿಸುತ್ತದೆ. 

  English summary

  Beetroot Juice For Preventing Menstrual Cramps

  Menstruation makes a woman less energetic and weak due to all the blood loss, fatigue, and cramps. Women feel less enthusiastic doing their day-to-day activities and they end up staying in bed. But staying in bed the whole day will affect your daily chores and you will start feeling weaker. So to bring back all your strength, and prevent the painful period cramps, beetroot juice is what you need. Research says that beetroot juice is an excellent source of potassium and nitrates, both of which are necessary for managing blood pressure.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more