Related Articles
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಶೀಘ್ರ ಸ್ಖಲನದ ಸಮಸ್ಯೆಯ ಪರಿಹಾರಕ್ಕೆ ಆಯುರ್ವೇದ ಸಲಹೆಗಳು
ಶೀಘ್ರಸ್ಖಲನದ ತೊಂದರೆ ಎಂದರೇನು? ದಾಂಪತ್ಯ ಮಿಲನದ ಲೈಂಗಿಕ ಕ್ರಿಯೆಯ ಕಡೆಯ ಹಂತದಲ್ಲಿ ಪಡೆಯಬೇಕಾಗಿದ್ದ ಕಾಮಪರಾಕಾಷ್ಠೆಯನ್ನು ಅವಧಿಗೂ ಮುನ್ನವೇ ಸ್ಖಲನದ ಮೂಲಕ ಪಡೆಯುವುದಾಗಿದೆ. ಅಥವಾ ಜನನಾಂಗ ಸಂವೇದನೆಯನ್ನು ಪಡೆಯಲು ತೊಡಗಿದ ಕೆಲವೇ ನಿಮಿಷಗಳಲ್ಲಿ ಸ್ಖಲನಗೊಳ್ಳುವುದನ್ನೂ ಶೀಘ್ರಸ್ಖಲನ ಎಂದು ಕರೆಯಬಹುದು. ಶೀಘ್ರಸ್ಖಲನದ ಮೂಲಕ ಕಾಮಪರಾಕಾಷ್ಠೆಯನ್ನು ಶೀಘ್ರವೇ ಪಡೆದು ಕಾಮಸುಖದಿಂದ ವಂಚಿತರಾಗಬೇಕಾಗುತ್ತದೆ.
ವೈದ್ಯಕೀಯ ಪದಗಳಲ್ಲಿ ವಿವರಿಸುವುದಾದರೆ ಲೈಂಗಿಕ ಕ್ರಿಯೆಯನ್ನು ಪ್ರಾರಂಭಿಸಿದ ಬಳಿಕ ಒಂದು ನಿಮಿಷದೊಳಗೆ ಸ್ಖಲನವಾದರೆ ಇದನ್ನು ಶೀಘ್ರಸ್ಖಲನ ಎಂದು ಕರೆಯಬಹುದು. ಆಯುರ್ವೇದ ಈ ತೊಂದರೆಗೆ ನೀಡಿರುವ ಪರಿಹಾರಗಳು ಪರಿಣಾಮಕಾರಿಯಾಗಿದ್ದು ಯಾವುದೇ ಬಗೆಯ ಕಾರಣವಿದ್ದರೂ ಸರಿಪಡಿಸಬಲ್ಲ ಕ್ಷಮತೆ ಹೊಂದಿವೆ. ಆಯುರ್ವೇದ ಪ್ರಸ್ತುತಪಡಿಸುವ ಅತ್ಯುತ್ತಮ ಪರಿಹಾರಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ...
ಮೂಲಿಕೆಗಳು
ಅಶ್ವಗಂಧ, ಬಾಳ ಮತ್ತು ವಿದರಿ ಎಂಬ ಮೂರು ಬಗೆಯ ಮೂಲಿಕೆಗಳನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ನಿತ್ಯವೂ ಒಂದು ದೊಡ್ಡ ಚಮಚದಷ್ಟು ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯಬೇಕು. ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸಲು ಔಷಧಿ ಅಂಗಡಿಯಲ್ಲಿ ದೊರಕುವ ಸ್ಪೆಪನ್ (peman tablets) ಎಂಬ ಮಾತ್ರೆಗಳು ಉತ್ತಮವಾಗಿದೆ. ಇದರ ಜೊತೆಗೇ ಆಹಾರದಲ್ಲಿ ಶತಾವರಿ, ಜಾತಿಫಲ, ಬೆಳ್ಳುಳ್ಳಿ ಮತ್ತು ನುಗ್ಗೇಕಾಯಿಯನ್ನು ಸೇವಿಸಬೇಕು.
ಆಹಾರದಲ್ಲಿ ಬದಲಾವಣೆ
ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸಲು ಆಹಾರಕ್ರಮದಲ್ಲಿಯೂ ಆಯುರ್ವೇದದ ಕಟ್ಟುಪಾಡುಗಳಿಗೆ ಒಳಪಡುವಂತಹ ಕೆಲವಾರು ಬದಲಾವಣೆಗಳು ಅಗತ್ಯವಾಗಿವೆ. ನಿತ್ಯದ ಆಹಾರದಲ್ಲಿ ಸಾಕಷ್ಟು ಧಾನ್ಯಗಳು, ಬಾಳೆಹಣ್ಣು, ಒಣಫಲಗಳು, ಹಸಿಯಾಗಿ ಸೇವಿಸಬಹುದಾದ ಸೊಪ್ಪುಗಳು, ಮೃದ್ವಂಗಿ, ಮೆಂತೆಸೊಪ್ಪು, ಹಸಿನೀರುಳ್ಳಿ ಹಾಗೂ ಸೆಲೆರಿ ಎಲೆಗಳು ಮೊದಲಾವುಗಳನ್ನು ಸೇವಿಸಬೇಕು. ಜೇನು ಅಗತ್ಯವಾಗಿದ್ದು ನಿತ್ಯವೂ ಕೊಂಚ ಪ್ರಮಾಣದಲ್ಲಿ ಸೇವಿಸಬೇಕು. ಆದರೆ ಕೆಲವು ಆಹಾರಗಳನ್ನು ಅನಿವಾರ್ಯವಾಗಿಯಾದರೂ ಸರಿ, ವರ್ಜಿಸಬೇಕು. ಕಾಫಿ, ಟೀ, ಮದ್ಯ, ಸಂಸ್ಕರಿಸಿದ ಆಹಾರ, ಅತಿ ಹೆಚ್ಚಿನ ಪ್ರಮಾಣದ ಬಿಳಿ ಸಕ್ಕರೆ ಇರುವ ಆಹಾರಗಳು, ಮೈದಾ ಮತ್ತು ಪೋಷಕಾಂಶಗಳನ್ನು ನಿವಾರಿಸಿ ತಯಾರಿಸಿದ ಸಿದ್ದ ಆಹಾರಗಳನ್ನು ವರ್ಜಿಸಬೇಕು.
ಜೀವನಕ್ರಮದಲ್ಲಿ ಬದಲಾವಣೆ
ಆಯುರ್ವೇದ ಧೂಮಪಾನವನ್ನು ಕಟ್ಟುನಿಟ್ಟಾಗಿ ವರ್ಜಿಸಲು ಸಲಹೆ ಮಾಡುತ್ತದೆ. ಧೂಮಪಾನದಿಂದ ಶೀಘ್ರಸ್ಖಲನದ ತೊಂದರೆ ಹೆಚ್ಚುತ್ತದೆ. ಅಲ್ಲದೇ ಹಸ್ತಮೈಥುನದ ಅವಧಿಯನ್ನು ಹೆಚ್ಚಿಸುವುದು ಮತ್ತು ಲೈಂಗಿಕ ಕ್ರಿಯೆಯಲ್ಲಿ ಅತಿಯಾಗಿ ಒಳಗೊಳ್ಳುವುದನ್ನೂ ನಿಷೇಧಿಸುತ್ತದೆ.
Most Read:ಪುರುಷರ ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ನೆರವಾಗುವ ಅದ್ಭುತ ಆಹಾರಗಳು
ಕೇಸರಿ ಮತ್ತು ಹಾಲು
ಆಯುರ್ವೇದದ ಪ್ರಕಾರ ಲೈಂಗಿಕ ಆರೋಗ್ಯಕ್ಕೆ ಬಿಸಿ ಹಾಲು ಅತ್ಯುತ್ತಮವಾಗಿದ್ದು ಇದರೊಂದಿಗೆ ಕೊಂಚ ಕೇಸರಿಯನ್ನು ಬೆರೆಸಿ ಜೊತೆಗೇ ಬಾದಾಮಿಯೊಂದನ್ನು ಪುಡಿಮಾಡಿ ಕಲಕಿ ಕುಡಿಯುವುದು ಉತ್ತಮವಾಗಿದೆ. ಬಾದಾಮಿಯನ್ನು ಒಂದು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಮರುದಿನ ತೇದಿ ಹಾಲಿನೊಂದಿಗೆ ಬೆರೆಸಿ ಕುಡಿದರೆ ಅತ್ಯುತ್ತಮ ಪರಿಣಾಮ ದೊರಕುತ್ತದೆ. ಈ ಹಾಲಿಗೆ ಕೊಂಚ ಏಲಕ್ಕಿ ಮತ್ತು ಹಸಿಶುಂಠಿಯನ್ನೂ ಬೆರೆಸಿ ಸೇವಿಸಬಹುದು.
ಆಯುರ್ವೇದೀಯ ಮಸಾಜ್
ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸಲು ಆಯುರ್ವೇದದ ಚಿಕಿತ್ಸೆಯೊಂದು ಲಭ್ಯವಿದೆ. ಎಲಾಕಿಳಿ (Elakizhi)ಎಂಬ ಹೆಸರಿನ ಈ ಚಿಕಿತ್ಸೆಯಲ್ಲಿ ವಿಶೇಷ ಎಲೆಗಳನ್ನು ಬಟ್ಟೆಯಲ್ಲಿ ಕಟ್ಟಿ ಬಿಸಿ ಎಣ್ಣೆಯಲ್ಲಿ ಮುಳುಗಿಸಿ ಮಸಾಜ್ ಮಾಡಲಾಗುತ್ತದೆ. ಈ ಚಿಕಿತ್ಸೆಯನ್ನು ಕೇವಲ ಆಯುರ್ವೇದ ತಜ್ಞ ಚಿಕಿತ್ಸಕರಲ್ಲಿ ಮಾತ್ರವೇ ಪಡೆದುಕೊಳ್ಳಬೇಕು.
ಯೋಗಾಭ್ಯಾಸ
ನಿತ್ಯವೂ ಯೋಗಾಭ್ಯಾಸದ ಮೂಲಕ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳುವ ಮೂಲಕವೂ ಶೀಘ್ರಸ್ಖಲನದ ತೊಂದರೆಯನ್ನು ನಿವಾರಿಸಬಹುದು. ಸರ್ವಾಂಗಾಸನ, ಮತ್ಸ್ಯಾಸನ, ಹಾಲಾಸನ ಮೊದಲಾದ ಯೋಗಾಸನಗಳನ್ನು ನಿತ್ಯವೂ ಅನುಸರಿಸುವ ಮೂಲಕ ಒಟ್ಟಾರೆ ಆರೋಗ್ಯವನ್ನು ವೃದ್ದಿಸುವ ಜೊತೆಗೇ ಶೀಘ್ರಸ್ಖಲನದ ತೊಂದರೆಯೂ ದೂರವಾಗುತ್ತದೆ ಹಾಗೂ ಆರೋಗ್ಯಕರ ಲೈಂಗಿಕ ಜೀವನ ನಡೆಸಲು ಸಾಧ್ಯವಾಗುತ್ತದೆ.