For Quick Alerts
ALLOW NOTIFICATIONS  
For Daily Alerts

  ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮಿಗೆ ಪವರ್ ಫುಲ್ ಮನೆಮದ್ದುಗಳು

  By Deepu
  |

  ಬೇಸಿಗೆಯಿಂದ ಮಳೆಗಾಲಕ್ಕೆ ಕಾಲಿಡುತ್ತಿದ್ದಂತೆ ವಾತಾವರಣದಲ್ಲಿ ಗಣನೀಯ ಬದಲಾವಣೆಯಾಗುತ್ತದೆ. ತಾಪದ ವಾತಾವರಣದಿಂದ ತಂಪಾದ ಹವಾಮಾನ ಆವರಿಸುತ್ತದೆ. ಒಮ್ಮಿಂದೊಮ್ಮೆಲೆ ಉಂಟಾಗುವ ಈ ಬಗೆಯ ಬದಲಾವಣೆಯಿಂದ ನಮ್ಮ ಆರೋಗ್ಯದಲ್ಲೂ ಏರುಪೇರು ಉಂಟಾಗುವುದು. ಅದರಲ್ಲೂ ಶೀತ ನೆಗಡಿ, ಕೆಮ್ಮು, ಗಂಟಲು ಕಿರಿಕಿರಿ ಮತ್ತು ಜ್ವರ ಸಾಮಾನ್ಯವಾಗಿ ಕಾಡುವ ಕಾಯಿಲೆಗಳು. ಇವು ಸಾಮಾನ್ಯವಾಗಿ ಬರುವ ಕಾಯಿಲೆ ಎನಿಸಿದರೂ ಇವುಗಳಿಂದ ದೇಹ ಬಹಳಷ್ಟು ದಣಿಯುತ್ತದೆ.

  ಈ ರೀತಿಯ ಚಿಕ್ಕ ಪುಟ್ಟ ಕಾಯಿಲೆಗಳಿಗೆ ದುಬಾರಿ ಬೆಲೆಯ ಔಷಧವನ್ನು ಸೇವಿಸಬೇಕೆಂದಿಲ್ಲ. ಮನೆಯಲ್ಲಿರುವ ಕೆಲವು ಆಯುರ್ವೇದದ ವಸ್ತುಗಳಿಂದಲೇ ಕಡಿಮೆ ಮಾಡಬಹುದು. ಇವುಗಳ ಸೇವನೆಯಿಂದ ಯಾವುದೇ ಅಡ್ಡ ಪರಿಣಾಮಗಳುಂಟಾಗದೇ, ಬಹು ಬೇಗ ಚೇತರಿಕೆಯಾಗುತ್ತದೆ. ಈ ಮಳೆಗಾಲದಲ್ಲಿ ಮನೆಯಲ್ಲೊಬ್ಬರಿಗಾದರೂ ಕೆಮ್ಮು, ಶೀತವಾಗಿರುತ್ತದೆ ಅವರ ಆರೈಕೆಗೆ ಅನುಕೂಲವಾಗುವ ಆಯುರ್ವೇದದ ಪರಿಹಾರ ಇಲ್ಲಿದೆ ನೋಡಿ....

  ಶುಂಠಿ

  ಶುಂಠಿ

  ಶೀತ ಮತ್ತು ಕೆಮ್ಮಿನ ಮುನ್ನೆಚ್ಚರಿಕೆಯ ಕ್ರಮವಾಗಿ, ಪುಡಿಮಾಡಿದ ಅಥವಾ ಪೇಸ್ಟ್ ರೂಪದಲ್ಲಿರುವ ಶುoಠಿಯನ್ನು ಪ್ರತಿಯೊಂದು ತರಕಾರಿ ಪದಾರ್ಥದೊoದಿಗೂ ಸೇರಿಸಿಕೊಳ್ಳಿರಿ. ಶುಂಠಿಯು ಕೇವಲ ಕಟುವಾದ ರುಚಿಯನ್ನು ಹೊಂದಿರುವುದು ಮಾತ್ರವೇ ಅಲ್ಲ, ಜೊತೆಗೆ, ಅದು ನೆಗಡಿಯ ವಿರುದ್ಧ ಹೋರಾಡಲೂ ಸಹ ನೆರವಾಗುತ್ತದೆ. ನಿಮ್ಮ ಚಹಾದ ನೀರಿನೊಂದಿಗೆ ಶುoಠಿಯನ್ನು ಹಾಕಿ ಕುದಿಸಿ ಶುoಠಿ ಸ್ವಾದದ ಚಹಾದ ಆನಂದವನ್ನು ಅನುಭವಿಸಿರಿ. ಇದು ಗಂಟಲ ಕೆರೆತವನ್ನು ಉಪಶಮನಗೊಳಿಸುತ್ತದೆ ಹಾಗೂ ನೆಗಡಿಗೆ ಕಾರಣವಾದ ವೈರಾಣುಗಳನ್ನು ಬೆನ್ನಟ್ಟಿ ಓಡಿಸುತ್ತದೆ.

  ತುಳಸಿ ಚಹಾ

  ತುಳಸಿ ಚಹಾ

  ಹೆಚ್ಚು ಕಡಿಮೆ ಪ್ರತಿಯೋರ್ವ ಭಾರತೀಯನ ಮನೆಯಲ್ಲಿಯೂ ಸಹ ತುಳಸಿಯ ಗಿಡವೊoದಿರುತ್ತದೆ. ತುಳಸಿಯ ಹಲವು ಆರೋಗ್ಯ ಸoಬoಧೀ ಪ್ರಯೋಜನಗಳ ಪೈಕಿ, ಸಾಮಾನ್ಯವಾದ ನೆಗಡಿಯನ್ನು ತಡೆಗಟ್ಟುವ ಮತ್ತು ಗುಣಪಡಿಸುವ ಪರಿಣಾಮಕಾರೀ ಪ್ರಯೋಜನವೂ ಒಂದು. ಅರಿಶಿನವು ರೋಗನಿರೋಧಕ ಶಕ್ತಿಯನ್ನು ನಿಯಮಿತಗೊಳಿಸಿ ಕಫವನ್ನು ನಿವಾರಿಸುತ್ತದೆ. ಅರಿಶಿನದ ಸೂಕ್ಷ್ಮಾಣು ಪ್ರತಿಬಂಧಕ ಹಾಗೂ ಫಂಗಸ್ ವಿರೋಧಿ ಗುಣಗಳು, ಶ್ವಾಸಕಾಂಗವ್ಯೂಹದ ಸೋಂಕು ರೋಗಗಳನ್ನು ಹೊಡೆದೋಡಿಸಲು ನೆರವಾಗುತ್ತವೆ.

  ತುಳಸಿ ಚಹಾ ತಯಾರಿಸಲು ಹೇಗೆ?

  *ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು 5-7 ತುಳಸಿ ಎಲೆಯನ್ನು ಸೇರಿಸಿ.

  *ಪಾತ್ರೆಗೆ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ. *ನಂತರ ಉರಿಯನ್ನು ಆರಿಸಿ, ಚಹಾವನ್ನು ತಣಿಯಲು ಬಿಡಿ.

  *ಉಗುರು ಬೆಚ್ಚಗಿರುವಾಗಲೇ ಸೇವಿಸಬಹುದು.

  *ಬೇಕಿದ್ದರೆ ಆರೋಗ್ಯ ಉತ್ಪನ್ನಗಳಾದ ಶುಂಠಿ, ಏಲಕ್ಕಿ, ಕರಿಮೆಣಸು, ಲವಂಗ ಹಾಗೂ ಕೆಲವು ಮಸಾಲೆ ಗಿಡಮೂಲಿಕೆಗಳನ್ನು ಸೇರಿಸಬಹುದು.

  *ಇದನ್ನು ನಿತ್ಯವೂ ಸೇವಿಸಬಹುದು. ಇಲ್ಲವೇ ಅಗತ್ಯವಿದ್ದಾಗ ಸೇವಿಸಬಹುದು.

  ಬಿಸಿ ನೀರು ಮತ್ತು ಬೆಳ್ಳುಳ್ಳಿ

  ಬಿಸಿ ನೀರು ಮತ್ತು ಬೆಳ್ಳುಳ್ಳಿ

  ಕೆಲವೊಂದು ಬೆಳ್ಳುಳ್ಳಿ ಎಸಲುಗಳನ್ನು ಚೆನ್ನಾಗಿ ಜಜ್ಜಿ ಒಂದು ಲೋಟ ಬಿಸಿ ನೀರಿಗೆ ಹಾಕಿ, ಚೆನ್ನಾಗಿ ಕಲಸುಕೊಂಡು ದಿನಾ ಸೇವಿಸುತ್ತಾ ಬನ್ನಿ, ಅಥವಾ ಕಚ್ಛಾ ಬೆಳ್ಳುಳ್ಳಿಯ ಒಂದು ತುಣುಕನ್ನು 3-4 ಗಂಟೆಗಳಿಗೊಮ್ಮೆ ಹಾಗೆಯೇ ಸೇವಿಸುವುದರಿಂದ, ಸುಲಭವಾಗಿ ಶೀತವನ್ನು ನಿವಾರಿಸಿಕೊಳ್ಳಬಹುದು. ಬೆಳ್ಳುಳ್ಳಿಯಲ್ಲಿರುವ ವೈರಸ್ ನಿರೋಧಕ ಅಂಶಗಳು, ಶೀತವನ್ನು ದೂರ ಮಾಡುತ್ತವೆ. ನಿಮಗೆ ಹಾಗೆಯೇ ಸೇವಿಸಲು ಕಷ್ಟವಾದಲ್ಲಿ, ಇದನ್ನು ಜಜ್ಜಿ, ಜೇನು ತುಪ್ಪದ ಜೊತೆಗೆ ಸೇವಿಸಬಹುದು.

  ಅರಿಶಿನಪುಡಿ ಬೆರೆಸಿದ ಅರಿಶಿನ ಹಾಲು

  ಅರಿಶಿನಪುಡಿ ಬೆರೆಸಿದ ಅರಿಶಿನ ಹಾಲು

  ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನಪುಡಿ ಸೇರಿಸಿ ಕುಡಿಯುವ ಮೂಲಕ ಕೆಮ್ಮು ಮತ್ತು ಶೀತಕ್ಕೆ ಉತ್ತಮ ಪರಿಹಾರ ದೊರಕುತ್ತದೆ.

  ತಯಾರಿಸುವುದು ಹೇಗೆ?

  *ಒಂದು ಕುಟ್ಟಾಣಿಯನ್ನು ತೆಗೆದುಕೊಂಡು ಅದಕ್ಕೆ ಸುಮಾರು 6-7 ಕರಿಮೆಣಸನ್ನು ಹಾಕಿ ಹುಡಿ ಮಾಡಿಕೊಳ್ಳಿ. ಈಗ ಒಂದು ಲೋಟ ಹಾಲನ್ನು ತೆಗೆದುಕೊಂಡು 5-10 ನಿಮಿಷಕುದಿಸಿ.

  *ಹಾಲು ಕುದಿಯುತ್ತಿರುವಂತೆ ಅರ್ಧ ಚಮಚ ಅರಿಶಿನ ಮತ್ತು ಸ್ವಲ್ಪ ಹುಡಿ ಮಾಡಿದ ಕರಿಮೆಣಸಿನ ಹುಡಿಯನ್ನು ಹಾಕಿ.

  *ಹಾಲಿಗೆ ಒಂದು ಚಮಚ ಸಕ್ಕರೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಬಳಿಕ ಗ್ಯಾಸ್‌ ಒಲೆ ಆಫ್ ಮಾಡಿ

  *ಬಿಸಿಯಾಗಿರುವಾಗಲೇ ಈ ಮಿಶ್ರಣವನ್ನು ಕುಡಿಯಿರಿ.

  *ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಮತ್ತು ರಾತ್ರಿ ನಿದ್ರಿಸುವ ಮೊದಲು ಇದನ್ನು ಸೇವಿಸಿ. ಇದು ಗಂಟಲು ಕೆರೆತವನ್ನು ನಿವಾರಿಸುತ್ತದೆ. ಈ ಮನೆಮದ್ದನ್ನು ಪ್ರಯತ್ನಿಸಿ ಫಲಿತಾಂಶ ಸಿಕ್ಕಿದೆಯಾ ಎಂದು ನಮಗೆ ಹೇಳಿ.

  ಜೇನು ಮತ್ತು ಬೆಳ್ಳುಳ್ಳಿಯ ಟೀ

  ಜೇನು ಮತ್ತು ಬೆಳ್ಳುಳ್ಳಿಯ ಟೀ

  ಒಂದೆರಡು ಬೆಳ್ಳುಳ್ಳಿಯ ಎಸಳುಗಳನ್ನು ಚಿಕ್ಕದಾಗಿ ಹೆಚ್ಚಿ ಸಾಮಾನ್ಯ ಪ್ರಮಾಣದ ಅರ್ಧದಷ್ಟು ಟೀಪುಡಿಯೊಂದಿಗೆ ನೀರಿನಲ್ಲಿ ಕೊಂಚ ಕಾಲ ಕುದಿಸಿ ಬಳಿಕ ಸಕ್ಕರೆಯ ಬದಲಿಗೆ ಜೇನು ಸೇರಿಸಿ ಟೀ ತಯಾರಿಸಿ. ಹಾಲು ಅಗತ್ಯವಿಲ್ಲ ಎನಿಸಿದರೆ ಮೊದಲು ಕೊಂಚಕಾಲ ಬೆಳ್ಳುಳ್ಳಿಯನ್ನು ಕುದಿಸಿ ನಂತರ ಟೀಪುಡಿಹಾಕಿ ಕೊಂಚವೇ ಕುದಿಸಿ ಸೋಸಿಬಿಡಿ. ಈ ಟೀ ಅನ್ನು ದಿನವಿಡೀ ಬಿಸಿಬಿಸಿಯಾಗಿ ನಿಧಾನವಾಗಿ ಗುಟುಕರಿಸಿ. ಇದರಿಂದ ಗಂಟಲಿನಲ್ಲಿದ್ದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ನಿವಾರಣೆಯಾಗಿ ಉತ್ತಮ ಪರಿಹಾರ ದೊರಕುತ್ತದೆ.

  ಜೇನುತುಪ್ಪ

  ಜೇನುತುಪ್ಪ

  ಜೇನು ತನ್ನ ಶುದ್ಧರೂಪದಲ್ಲಿ ಜೇನು ಅಗಣಿತವಾದ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ನೆಗಡಿಯ ವಿರುದ್ಧ ಹೋರಾಡುವ ಆಹಾರವಸ್ತುಗಳ ಪೈಕಿ ಜೇನು ಅರ್ಹತೆಯನ್ನು ಗಳಿಸಿಕೊಂಡಿದೆ. ಇದರಲ್ಲಿರುವ ನಂಜುಪ್ರತಿಬಂಧಕ, ಸೂಕ್ಷ್ಮಾಣುಪ್ರತಿಬಂಧಕ, ಹಾಗೂ ಆಂಟಿ ಆಕ್ಸಿಡೆಂಟ್ ಗುಣಧರ್ಮಗಳು ವೈರಾಣುಗಳು, ಸೂಕ್ಷ್ಮಾಣುಗಳು, ಹಾಗೂ ಫಂಗಸ್ ಗಳ ವಿರುದ್ಧ ಹೋರಾಡಲು ನೆರವಾಗುತ್ತವೆ. ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ಜೇನುತುಪ್ಪ, ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಗಂಟಲು ಕಟ್ಟುವುದು ಮತ್ತು ಕೆಮ್ಮು ಕಡಿಮೆಯಾಗುವುದು.

  ಕಾಳುಮೆಣಸು

  ಕಾಳುಮೆಣಸು

  ಇದು ಅತಿಯಾಗಿ ಖಾರವಾಗಿದ್ದು, ಗಂಟಲು ಉರಿಯುವ ಅನುಭವವನ್ನು ಉಂಟು ಮಾಡಿ, ನೀವು ಬಹಳ ಕೆಟ್ಟದಾಗಿ ಸೀನುವoತೆ ಮಾಡಿದರೂ ಸಹ, ಇದರಲ್ಲಿರುವ ತೈಲಾoಶವು ಮಳೆಗಾಲದಲ್ಲಿ ಕಾಡುವ ನೆಗಡಿ, ಕೆಮ್ಮು, ಜ್ವರ, ಹಾಗೂ ನೋವಿನಿಂದ ಬಿಡುಗಡೆಯನ್ನು ನೀಡಬಲ್ಲದು. ಕಾರಣ, ಕಾಳುಮೆಣಸಿನಲ್ಲಿ piperine ಎಂಬ ಬಹು ಪರಿಣಾಮಕಾರಿಯಾದ ರಾಸಾಯನಿಕ ವಸ್ತುವಿದೆ.

  ಬೆಳ್ಳುಳ್ಳಿ

  ಬೆಳ್ಳುಳ್ಳಿ

  ಬೆಳ್ಳುಳ್ಳಿಗಳ ನಿಯಮಿತವಾದ ಸೇವನೆಯು ನೆಗಡಿಯನ್ನು ದೂರವಿಡುತ್ತದೆ ಎಂದು ಸoಶೋಧನೆಗಳಿಂದ ಕಂಡುಬಂದಿದೆ. ಬೆಳ್ಳುಳ್ಳಿ ಅಗಾಧ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿದ್ದು ಈ ಕಾರಣಕ್ಕಾಗಿ, ಇದು ನೆಗಡಿಯ ವಿರುದ್ಧ ಹೋರಾಡುವ ಅತ್ಯುತ್ತಮವಾದ ಆಹಾರವಸ್ತುವಾಗಿದೆ. ಇದನ್ನು ಹಸಿಯಾಗಿಯೇ ತಿನ್ನಬಹುದಾದರೂ ಸಹ, ಇದರ ಕಟುವಾಸನೆಯ ಕಾರಣಕ್ಕಾಗಿ ಇದನ್ನು ಹಾಗೆಯೇ ತಿನ್ನಲು ಜನರು ಹಿಂದೇಟು ಹಾಕುತ್ತಾರೆ. ಅದ್ದರಿಂದ, ಅದರ ಬದಲಿಗೆ, ನೀವು ಅಡುಗೆಯ ವೇಳೆ ಇದನ್ನು ಹಲವಾರು ಆಹಾರಪದಾರ್ಥಗಳೊoದಿಗೆ ಸೇರಿಸಿಕೊಳ್ಳಬಹುದು.

  English summary

  Ayurvedic Remedies For Cold And Cough During Rains

  Everybody loves rain, especially the first showers of the season after you have witnessed a spate of hot and humid climate for a few months. You get drenched for a couple of times and then, you tend to catch a bad cough and cold. Generally, during this weather transition phase followed with sudden downpours, the immunity level among human beings tends to lower down. This isn't all. Here are five Ayurvedic remedies for cold and cough during rains and how they work:
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more