ಪ್ರತಿ ದಿನ ಒಂದು ಗ್ಲಾಸ್ ಲಸ್ಸಿ ಕುಡಿದರೆ, ಹತ್ತಾರು ಲಾಭಗಳು...

Posted By: Arshad
Subscribe to Boldsky

ಲಸ್ಸಿ ಎಂದರೆ ಯಾರಿಗೆ ಇಷ್ಟವಿಲ್ಲ? ಸೆಖೆಯ ಕಾಲದಲ್ಲಿ ತಣ್ಣಗಿನ ಸಿಹಿ ಲಸ್ಸಿ ಇಷ್ಟವಾದರೆ ಚಳಿಗಾಲದಲ್ಲಿ ಕೊಂಚ ಖಾರವಾದ ಲಸ್ಸಿ ಇಷ್ಟವಾಗುತ್ತದೆ. ಲಸ್ಸಿ ಮೊದಲಿಗೆ ಪಂಜಾಬ್ ನಲ್ಲಿ ಪ್ರಾರಂಭವಾದರೂ ಇಂದು ಭಾರತದಾದ್ಯಂತ ಎಲ್ಲಾ ಜನರ ಮೆಚ್ಚಿನ ಪೇಯವಾಗಿದೆ.

ಲಸ್ಸಿಯನ್ನು ದಣಿವಾರಿಸುವ ಸಿಹಿ ಪೇಯವಾಗಿ ಮೊದಲು ತಯಾರಿಸುತ್ತಿದ್ದರೂ ಇಂದು ಉಪ್ಪು, ಖಾರ, ಹುಳಿ, ಪುದೀನಾ, ಕೊತ್ತಂಬರಿ ಸೊಪ್ಪು ಮೊದಲಾದವುಗಳನ್ನು ಸೇರಿಸಿದ ವಿವಿಧ ರೂಪಗಳಲ್ಲಿ ಲಭ್ಯವಿದೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಒಣಫಲಗಳು, ಮಾವು, ಗುಲಾಬಿ, ಕೇಸರಿ, ಗಸಗಸೆ ಮೊದಲಾದ ಹೆಚ್ಚುವರಿ ಸ್ವಾದಗಳನ್ನೂ ಸೇರಿಸಿ ವಿಶೇಷವಾದ ಲಸ್ಸಿಗಳನ್ನೂ ತಯಾರಿಸಲಾಗುತತ್ದೆ.

ಲಸ್ಸಿಯನ್ನು ಶತಮಾನಗಳಿಂದ ತಯಾರಿಸಲಾಗುತ್ತಿದ್ದು ಕೃಷಿಕರು ದಣಿವಾರಿಸಲೆಂದು ಪ್ರಮುಖವಾಗಿ ಮೊಸರನ್ನು ಬಳಸಲಾಗುತ್ತಿತ್ತು. ಇದರಲ್ಲಿರುವ ಬಿ ಕಾಂಪ್ಲೆಕ್ಸ್, ವಿಟಮಿನ್ನುಗಳು, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಗಂಧಕ ಹಾಗೂ ಫೋಲಿಕ್ ಆಮ್ಲ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳಾಗಿವೆ. ಅಲ್ಲದೇ ಮೊಸರಿನಲ್ಲಿರುವ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳು ಲಸ್ಸಿಯಲ್ಲಿಯೂ ಲಭ್ಯವಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ ಹಾಗೂ ಮಾರಕ ವೈರಸ್ಸುಗಳನ್ನು ಕೊಲ್ಲುತ್ತದೆ. ಸಾಮಾನ್ಯವಾಗಿ ಪಂಜಾಬ್ ನಲ್ಲಿ ಯಾವುದೇ ಬಗೆಯ ಊಟವಾದರೂ ಲಸ್ಸಿ ಇಲ್ಲದ ಊಟ ಅವರ ಮಟ್ಟಿಗೆ ಅಪೂರ್ಣ. ಲಸ್ಸಿಯ ನಿಯಮಿತ ಸೇವನೆಯಿಂದ ಲಭಿಸುವ ಹೆಚ್ಚಿನ ಪ್ರೋಟೀನುಗಳು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತವೆ. ಬನ್ನಿ, ಲಸ್ಸಿ ಕುಡಿಯುವುದರಿಂದ ಪಡೆಯಬಹುದಾದ ಹತ್ತು ಪ್ರಮುಖ ಪ್ರಯೋಜನಗಳನ್ನು ನೋಡೋಣ...

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ

ಲಸ್ಸಿಯನ್ನು ಮೊಸರನ್ನು ಕಡೆಯುವ ಮೂಲಕ ತಯಾರಿಸಲಾಗುತ್ತದೆ, ಇದು ಜೀರ್ಣಕ್ರಿಯೆಗೆ ಉತ್ತಮ ನೆರವು ನೀಡುತ್ತದೆ. ಲಸ್ಸಿಯಲ್ಲಿರುವ ಬ್ಯಾಕ್ಟೀರಿಯಾಗಳು ಈಗಾಗಲೇ ಹಾಲಿನ ಅಂಶಗಳನ್ನು ಅರ್ಧಕ್ಕೂ ಹೆಚ್ಚು ಜೀರ್ಣಿಸಿರುವ ಕಾರಣ ಇದನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಹೆಚ್ಚು ಶ್ರಮದ ಅಗತ್ಯವಿಲ್ಲ. ಅಲ್ಲದೆ ಈ ಬ್ಯಾಕ್ಟೀರಿಯಾಗಳು ಆರೋಗ್ಯ ಸ್ನೇಹಿಯಾಗಿದ್ದು ಕರುಳುಗಳ ಒಳಭಾಗದಲ್ಲಿ ಜಾರುಕದ ಪರಿಣಾಮವನ್ನುಂಟು ಮಾಡಿ ಆಹಾರವನ್ನು ಸುಲಭವಾಗಿ ಚಲಿಸುವಂತೆ ಮಾಡುತ್ತದೆ. ಇದೇ ಕಾರಣಕ್ಕೆ ಊಟದ ಬಳಿಕ ಲಸ್ಸಿ ಕುಡಿಯುವುದು ಉತ್ತಮ.

ಹೊಟ್ಟೆಯ ತೊಂದರೆಗಳಿಂದ ರಕ್ಷಿಸುತ್ತದೆ

ಹೊಟ್ಟೆಯ ತೊಂದರೆಗಳಿಂದ ರಕ್ಷಿಸುತ್ತದೆ

ಒಂದು ವೇಳೆ ನೀವು ಮಲಬದ್ದತೆ ಅಥವಾ ಹೊಟ್ಟೆಯುಬ್ಬರಿಕೆಯ ತೊಂದರೆ ಅನುಭವಿಸುತ್ತಿದ್ದರೆ ಲಸ್ಸಿ ನಿಮಗೆ ಹೇಳಿ ಮಾಡಿಸಿದ ಪೇಯವಾಗಿದೆ. ಇದು ಅತ್ಯಂತ ಆರೋಗ್ಯಕರ ಹಾಗೂ ಸಾವಯವ ಪಾನೀಯವಾಗಿದ್ದು ಹೊಟ್ಟೆಯುಬ್ಬರಿಕೆ ಮತ್ತು ಮಲಬದ್ದತೆಯಿಂದ ತಡೆಯುತ್ತದೆ. ಆದ್ದರಿಂದ ಈ ತೊಂದರೆ ಇದ್ದವರು ಲಸ್ಸಿಯನ್ನು ತಮ್ಮ ನಿತ್ಯದ ಆಹಾರದ ಒಂದು ಭಾಗವಾಗಿಸುವುದು ಉತ್ತಮ.

ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿದೆ

ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚಿನ ಪ್ರಮಾಣದಲ್ಲಿದೆ

ಮೊಸರಿನಲ್ಲಿರುವಂತೆಯೇ ಲಸ್ಸಿಯಲ್ಲಿಯೂ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿದ್ದು ಇವು ಹೊಟ್ಟೆಯಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯಾಗದಂತೆ ನೋಡಿಕೊಳ್ಳುತ್ತದೆ. ಅಲ್ಲದೇ ಇವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವಂತೆಯೂ ನೋಡಿಕೊಳ್ಳುತ್ತದೆ. ಆದ್ದರಿಂದ ನಿತ್ಯವೂ ಸಂತೋಷದಿಂದ ಲಸ್ಸಿ ಕುಡಿಯಿರಿ.

ತೂಕ ಇಳಿಕೆಗೆ ನೆರವಾಗುತ್ತದೆ

ತೂಕ ಇಳಿಕೆಗೆ ನೆರವಾಗುತ್ತದೆ

ತೂಕದ ಬಗ್ಗೆ ಕಾಳಜಿ ಇರುವ ವ್ಯಕ್ತಿಗಳಿಗೆ ಲಸ್ಸಿ ಹೇಳಿ ಮಾಡಿಸಿದ ಆಹಾರವಾಗಿದೆ. ಇದರಲ್ಲಿ ಕಡಿಮೆ ಕ್ಯಾಲೋರಿಗಳು ಹಾಗೂ ಹೆಚ್ಚಿನ ಪೋಷಕಾಂಶಗಳಿರುವ ಕಾರಣಕ್ಕೆ ತೂಕ ಇಳಿಸುವವರಿಗೆ ಸಲಹೆ ಮಾಡುವ ಆಹಾರದಲ್ಲಿ ಸ್ಥಾನ ಪಡೆದಿದೆ. ಅಲ್ಲದೇ ಸೊಂಟದ ಕೊಬ್ಬನ್ನು ಕರಗಿಸಲು ಹಾಗೂ ಡೊಳ್ಳು ಹೊಟ್ಟೆಯನ್ನು ಕಡಿಮೆ ಮಾಡಲೂ ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಿತ್ಯವೂ ಲಸ್ಸಿಯನ್ನು ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿರುತ್ತದೆ. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲ ಹಾಗೂ ವಿಟಮಿನ್ ಡಿ ಲಸ್ಸಿಯನ್ನು ಒಟ್ಟಾರೆ ಆರೋಗ್ಯಕರ ಆಹಾರವಾಗಿಸಿವೆ. ತನ್ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಹಲವಾರು ರೋಗಗಳ ವಿರುದ್ಧ ರಕ್ಷಣೆ ಪಡೆಯುತ್ತದೆ.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ಲಸ್ಸಿಯಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ದೃಢತೆ ಹೆಚ್ಚಿಸುವ ಪೋಷಕಾಂಶವಾಗಿದೆ. ಲಸ್ಸಿಯ ಸೇವನೆಯಿಂದ ಮೂಳೆಗಳು ದೃಢಗೊಳ್ಳಲು ಹಾಗೂ ಉತ್ತಮ ಆರೋಗ್ಯದಲ್ಲಿರಲು ನೆರವಾಗುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ನಿತ್ಯದ ಲಸ್ಸಿ ಸೇವನೆಯಿಂದ ಅಧಿಕ ರಕ್ತದೊತ್ತಡ ತಹಬಂದಿಗೆ ಬರುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಹಾಗೂ ರೈಬೋಫ್ಲೇವಿನ್ ಎಂಬ ಪೋಷಕಾಂಶಗಳು ದೇಹದ ಕಲ್ಮಶಗಳನ್ನು ನಿವಾರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ತನ್ಮೂಲಕ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ.

ಆಮ್ಲೀಯತೆ ಕಡಿಮೆ ಮಾಡುತ್ತದೆ

ಆಮ್ಲೀಯತೆ ಕಡಿಮೆ ಮಾಡುತ್ತದೆ

ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾಗಿ ಉಂಟಾಗುವ ಹೊಟ್ಟೆಯುರಿ, ಹುಳಿತೇಗು, ಎದೆಯುರಿ ಮೊದಲಾದ ತೊಂದರೆಗಳಿಗೆ ಮೊಸರು ಉತ್ತಮ ಶಮನ ನೀಡುತ್ತದೆ. ವಿಶೇಷವಾಗಿ ಮಸಾಲೆ ವಸ್ತುಗಳನ್ನು ಸೇವಿಸಿದ ಬಳಿಕ ಎದುರಾಗುವ ಹೊಟ್ಟೆಯ ಉರಿಯನ್ನು ಒಂದು ಲೋಟ ಲಸ್ಸಿ ಕುಡಿಯುವ ಮೂಲಕ ಶಮನಗೊಳಿಸಬಹುದು. ಲಸ್ಸಿ ಕ್ಷಾರೀಯವಾಗಿರುವ ಕಾರಣ ಹೊಟ್ಟೆಯುರಿ, ಅಜೀರ್ಣತೆಗೆ ಎದುರಾಗುವ ಆಮ್ಲೀಯತೆಯನ್ನು ಸಂತುಲಿತಗೊಳಿಸುವ ಮೂಲಕ ಹೊಟ್ಟೆಯ ಉರಿಯನ್ನು ಕಡಿಮೆ ಮಾಡುತ್ತದೆ.

ವೃದ್ಧಾಪ್ಯವನ್ನು ನೈಸರ್ಗಿಕವಾಗಿ ಮುಂದೂಡುತ್ತದೆ

ವೃದ್ಧಾಪ್ಯವನ್ನು ನೈಸರ್ಗಿಕವಾಗಿ ಮುಂದೂಡುತ್ತದೆ

ಲಸ್ಸಿಯಲ್ಲಿ ಹೆಚ್ಚಿನ ಪ್ರಮಾಣದ ಲ್ಯಾಕ್ಟಿಕ್ ಆಮ್ಲವಿರುವ ಕಾರಣ ಪ್ರಸಾದನಗಳ ಉದ್ಯಮದಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ನಿಯಮಿತವಾಗಿ ಲಸ್ಸಿ ಕುಡಿಯುವುದರಿಂದ ತ್ವಚೆಯ ನುಣುಪು ಉತ್ತಮಗೊಳ್ಳುತ್ತದೆ ಹಾಗೂ ತಾರುಣ್ಯ ಹೆಚ್ಚು ಕಾಲ ಉಳಿಯಲು ನೆರವಾಗುತ್ತದೆ. ಲ್ಯಾಕ್ಟಿಕ್ ಆಮ್ಲ ತ್ವಚೆಯ ನೆರಿಗೆಗಳನ್ನು ಹಾಗೂ ಕಲೆಗಳನ್ನು ನಿವಾರಿಸುವ ಮೂಲಕ ವೃದ್ಧಾಪ್ಯವನ್ನು ಮುಂದೂಡುತ್ತದೆ.

ದೇಹದ ತಾಪಮಾನವನ್ನು ಸಮತೋಲನದಲ್ಲಿರಿಸುತ್ತದೆ

ದೇಹದ ತಾಪಮಾನವನ್ನು ಸಮತೋಲನದಲ್ಲಿರಿಸುತ್ತದೆ

ಲಸ್ಸಿ ತಂಪುಗೊಳಿಸುವ ಪಾನೀಯವಾಗಿದ್ದು ದೇಹದ ತಾಪಮಾನವನ್ನು ಇಳಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಕುಡಿಯಲು ಲಸ್ಸಿ ಅತ್ಯಂತ ಸಮರ್ಪಕವಾದ ಪೇಯವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಎಲೆಕ್ಟ್ರೋಲೈಟುಗಳು ನಿರ್ಜಲೀಕರಣದಿಂದ ದೇಹವನ್ನು ರಕ್ಷಿಸುತ್ತದೆ. ಅಲ್ಲದೇ ನಿತ್ಯವೂ ಲಸ್ಸಿಯನ್ನು ಕುಡಿಯುವ ಮೂಲಕ ದೇಹದ ತಾಪಮಾನ ಆರೋಗ್ಯಕರ ಮಟ್ಟದಲ್ಲಿರಲು ಸಾಧ್ಯವಾಗುತ್ತದೆ.

ಮಜ್ಜಿಗೆ ಮತ್ತು ಲಸ್ಸಿ: ಇವೆರಡರಲ್ಲಿ ಆರೋಗ್ಯಕ್ಕೆ ಯಾರು ಹಿತವರು?

English summary

Amazing Health Benefits Of Drinking Lassi

Everyone loves to drink lassi which refreshes your body instantly whether you drink it during summer season or winter season. Lassi is a refreshing drink which is loved and relished by many people across India.From sweet to salty, there are many variations of lassi and it tastes the best when garnished with dry fruits. Additional flavours are also added like rose syrup, mango, kesar or khus khus to enhance the flavour.