For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಲವಂಗ ಇದ್ರೆ ಸಾಕು, ಇಷ್ಟೊಂದು ಕಾಯಿಲೆಗಳನ್ನು ನಿಯಂತ್ರಿಸಬಹುದು!

By Manohar Shetty
|

ಭಾರತವು ಸಾಂಬಾರ ಪದಾರ್ಥಗಳ ತವರು ಎಂದು ಹೇಳಲಾಗುತ್ತದೆ. ಹಿಂದಿನಿಂದಲೂ ಭಾರತದಲ್ಲಿನ ಸಾಂಬಾರ ಪದಾರ್ಥಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು. ಸಾಂಬಾರ ಪದಾರ್ಥಗಳಲ್ಲಿ ಇರುವಂತಹ ಕೆಲವೊಂದು ಆರೋಗ್ಯ ಗುಣಗಳು ನಮ್ಮ ಹಿರಿಯರ ಒಳ್ಳೆಯ ಆರೋಗ್ಯಕ್ಕೆ ಕಾರಣವಾಗಿದೆ. ಪ್ರತಿಯೊಂದು ಸಾಂಬಾರದಲ್ಲೂ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದರಲ್ಲಿ ಲವಂಗ ಕೂಡ ಒಂದು.

ಲವಂಗ ಹೀಗೆ ಸೇವನೆ ಮಾಡಿದರೆ ಅದು ಸ್ವಲ್ಪ ಚುಮ್ಮೆನಿಸುವ ಅನುಭವ ನೀಡಿದರೂ ಅದರಿಂದ ಹಲವಾರು ಆರೋಗ್ಯ ಲಾಭಗಳು ಇವೆ. ಲವಂಗವು ಆಹಾರದ ರುಚಿ ಹಾಗೂ ಸುವಾಸನೆ ಹೆಚ್ಚಿಸುವುದು. ಗಂಟಲು ನೋವು ಮತ್ತು ಸಾಮಾನ್ಯ ಶೀತದೊಂದಿಗೆ ಇದು ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸುವುದು. ಇದರಲ್ಲಿ ಶಮನಕಾರಿ ಮತ್ತು ಕೆಲವೊಂದು ಆರೋಗ್ಯ ಗುಣಗಳು ಇವೆ. ಲವಂಗದ ಆರೋಗ್ಯ ಗುಣಗಳು ಯಾವುದು ಎಂದು ಈ ಲೇಖನದ ಮೂಲಕ ನೀವು ತಿಳಿಯಿರಿ....

ಆ್ಯಂಟಿಆಕ್ಸಿಡೆಂಟ್ ಮತ್ತು ಇತರ ಪ್ರಮುಖ ಪೋಷಕಾಂಶಗಳು

ಆ್ಯಂಟಿಆಕ್ಸಿಡೆಂಟ್ ಮತ್ತು ಇತರ ಪ್ರಮುಖ ಪೋಷಕಾಂಶಗಳು

ಇಷ್ಟು ಸಣ್ಣ ಹೂವಿನಲ್ಲಿ ಅದೆಷ್ಟೋ ಪೋಷಕಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್ ಇದೆ ಎಂದರೆ ಅದನ್ನು ನಂಬಲು ಸಾಧ್ಯವಾಗದು. ಲವಂಗದಲ್ಲಿ ಮ್ಯಾಂಗನೀಸ್, ವಿಟಮಿನ್ ಕೆ, ವಿಟಮಿನ್ ಸಿ, ಸಣ್ಣ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಇತರ ನಾರಿನಾಂಶಗಳು, ವಿಟಮಿನ್ ಗಳು ಮತ್ತು ಖನಿಜಾಂಶಗಳು ಇವೆ. ಮೆದುಳಿನ ಕ್ರಿಯೆ ಸರಾಗವಾಗಲು ಮತ್ತು ಮೂಳೆಗಳು ಬಲಗೊಳ್ಳಲು ಮ್ಯಾಂಗನೀಸ್ ಎನ್ನುವ ಖನಿಜಾಂಶವು ಅತೀ ಅಗತ್ಯ. ವಿಟಮಿನ್ ಸಿ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ವಿಟಮಿನ್ ಕೆ ರಕ್ತಹೆಪ್ಪುಗಟ್ಟಲು ಬೇಕಾಗುವ ಪ್ರಮುಖ ಪೋಷಕಾಂಶ. ಲವಂಗದಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದೆ. ಲವಂಗದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಆಕ್ಸಿಡೇಟಿವ್ ಸ ದೀರ್ಘಕಾಲಿನ ಸಮಸ್ಯೆಗೆ ಇದು ಪ್ರಮುಖ ಕಾರಣವಾಗಿದೆ. ಲವಂಗದಲ್ಲಿ ಇರುವಂತಹ ಯುಜೆನೊ ಎನ್ನುವ ಅಂಶವು ನೈಸರ್ಗಿಕ ಆ್ಯಂಟಿಆಕ್ಸಿಡೆಂಟ್ ನಂತೆ ಕೆಲಸ ಮಾಡುವುದು. ಇದರಿಂದ ಫ್ರೀ ರ್ಯಾಡಿಕಲ್ ನಿಂದ ಉಂಟಾಗುವ ಹಾನಿ ತಡೆಯಬಹುದು. ಲವಂಗದಲ್ಲಿ ಇರುವಂತಹ ವಿಟಮಿನ್ ಸಿ ಕೂಡ ಆ್ಯಂಟಿಆಕ್ಸಿಡೆಂಟ್ ರೀತಿಯಲ್ಲಿ ಕೆಲಸ ಮಾಡುವುದು. ಇದು ಫ್ರೀ ರ್ಯಾಡಿಕಲ್ ನ್ನು ತಟಸ್ಥಗೊಳಿಸುವುದು. ಫ್ರೀ ರ್ಯಾಡಿಕಲ್ ನಿಂದಾಗಿ ಹಾನಿಕಾರಕ ಆಕ್ಸಿಡೇಟಿವ್ ಒತ್ತಡ ಉಂಟಾಗಬಹುದು. ಇತರ ಆ್ಯಂಟಿಆಕ್ಸಿಡೆಂಟ್ ಆಹಾರಗಳೊಂದಿಗೆ ಲವಂಗ ಸೇರಿಸಿಕೊಂಡರೆ ಅದರಿಂದ ಸಂಪೂರ್ಣ ಆರೋಗ್ಯವು ಉತ್ತಮವಾಗುತ್ತದೆ.

ಹಾನಿಕಾರ ಬ್ಯಾಕ್ಟೀರಿಯಾ ಕೊಲ್ಲುವುದು

ಹಾನಿಕಾರ ಬ್ಯಾಕ್ಟೀರಿಯಾ ಕೊಲ್ಲುವುದು

ಲವಂಗದಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ ಮತ್ತು ಇದು ಸೆಳೆತ, ನಿಶ್ಯಕ್ತಿ ಮತ್ತು ಭೇದಿ ಉಂಟುಮಾಡುವ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆ ತಡೆಯುವುದು. ಲವಂಗದಿಂದ ಬಾಯಿಯ ಆರೋಗ್ಯವನ್ನು ಕಾಪಾಡಬಹುದು. ಲವಂಗದಲ್ಲಿ ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುವ ಗುಣಗಳು ಇವೆ. ಇದರಿಂದ ಹಲ್ಲು ಮತ್ತು ವಸಡಿನ ಸಮಸ್ಯೆ ಕಡಿಮೆಯಾಗುವುದು. ಚಹಾ ಮರದ ಎಣ್ಣೆ ಸಹಿತ ಇತರ ಕೆಲವೊಂದು ಗಿಡಮೂಲಿಕೆಗಳೊಂದಿಗೆ ಲವಂಗ ಬಳಸುವಂತೆ ಆಯುರ್ವೇದವು ಹೇಳುತ್ತದೆ.

ಯಕೃತ್ ಅನ್ನು ರಕ್ಷಿಸುವುದು

ಯಕೃತ್ ಅನ್ನು ರಕ್ಷಿಸುವುದು

ಲವಂಗದಲ್ಲಿ ಇರುವಂತಹ ಯುಜೆನೊ ಅಂಶವು ಯಕೃತ್ ಗೆ ತುಂಬಾ ಲಾಭಕಾರಿ ಎಂದು ನಂಬಲಾಗಿದೆ. ಇದನ್ನು ಹೊರತುಪಡಿಸಿ ಯಕೃತ್ ನ ಕ್ರಿಯೆಸುಧಾರಿಸುವುದು. ಯಕೃತ್ ಊದಿಕೊಂಡಿರುವುದಕ್ಕೆ ಲವಂಗವು ಒಳ್ಳೆಯ ಔಷಧಿ. ಇದು ಉರಿಯೂತ ಕಡಿಮೆ ಮಾಡುವುದು ಮತ್ತು ಯಕೃತ್ ನ ಸಂಪೂರ್ಣ ಆರೋಗ್ಯ ಕಾಪಾಡುವುದು. ಲವಂಗದಲ್ಲಿ ಇರುವಂತಹ ಅಧಿಕ ಮಟ್ಟದ ಆ್ಯಂಟಿಆಕ್ಸಿಡೆಂಟ್ ನಿಂದಾಗಿ ಇಷ್ಟೆಲ್ಲಾ ಲಾಭಗಳು ಸಿಗುವುದು.

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ಲವಂಗದಲ್ಲಿ ಇರುವಂತಹ ಕೆಲವೊಂದು ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡುವುದು. ಲವಂಗದಲ್ಲಿ ಇರುವಂತಹ ನೈಜೀರಿಕಿನ್ ಎನ್ನುವ ಅಂಸವು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೆರವಾಗುವುದು. ಯಾಕೆಂದರೆ ನೈಜೀರಿಕಿನ್ ಅಂಶವು ರಕ್ತದಲ್ಲಿನ ಸಕ್ಕರೆಯನ್ನು ಹೀರಿಕೊಳ್ಳಲು ಕೋಶಗಳ ಸಾಮರ್ಥ್ಯ ಸುಧಾರಿಸುವುದು ಮತ್ತು ಇನ್ಸುಲಿನ್ ಉತ್ಪತ್ತಿ ಮಾಡಲು ದೇಹಕ್ಕೆ ನೆರವಾಗುವುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಸರಿಯಾಗಿರುವುದು. ಲವಂಗವು ಮಧುಮೇಹ ನಿಯಂತ್ರಣದಲ್ಲಿಡಲು ಒಳ್ಳೆಯ ಮನೆಮದ್ದು. 6-8 ಲವಂಗಗಳನ್ನು ಬಿಸಿ ನೀರಿನ ಲೋಟಕ್ಕೆ ಹಾಕಿ 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಸೋಸಿಕೊಂಡು ನೀರನ್ನು ಕುಡಿಯಿರಿ. ಉಪಹಾರದ ಬಳಿಕ ಪ್ರತಿನಿತ್ಯ ಈ ನೀರನ್ನು ಸೇವಿಸಿ. ಕೆಲವೇ ತಿಂಗಳಲ್ಲಿ ವ್ಯತ್ಯಾಸ ಕಂಡುಬರುವುದು.

ಮೂಳೆಗಳ ಆರೋಗ್ಯ ಸುಧಾರಣೆ

ಮೂಳೆಗಳ ಆರೋಗ್ಯ ಸುಧಾರಣೆ

ಲವಂಗದ ಸಾರದಲ್ಲಿ ಯುಜೆನೊ ಎನ್ನುವ ಅಂಶವಿದೆ. ಇದು ಅಸ್ಥಿರಂಧ್ರತೆ ಸುಧಾರಣೆ ಮಾಡುವುದು ಮತ್ತು ಮೂಳೆಯ ಸಾಂದ್ರತೆ ಮತ್ತು ಬಲ ಹೆಚ್ಚಿಸುವುದು. ಇದರಿಂದ ಮೂಳೆಗಳು ಬೇಗನೆ ಮುರಿಯುವುದು ಅಥವಾ ಬಿರುಕುಬಿಡುವುದು ತಪ್ಪುವುದು. ಮೂಳೆಗಳ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಬೇಕಾಗಿರುವ ಮ್ಯಾಂಗನೀಸ್ ಕೂಡ ಇದರಲ್ಲಿದೆ. ಮೂಳೆಯ ಆರೋಗ್ಯ ಕಾಪಾಡಲು ಪ್ರತಿನಿತ್ಯ ಒಂದು ಚಮಚ ಲವಂಗವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ನೋವು ನಿವಾರಕವಾಗಿ ಕೆಲಸ ಮಾಡುವುದು

ನೋವು ನಿವಾರಕವಾಗಿ ಕೆಲಸ ಮಾಡುವುದು

ಸಂಧಿವಾತದ ನೋವನ್ನು ನಿವಾರಿಸಲು ಲವಂಗ ನೆರವಾಗುವುದು. ಲವಂಗದ ಎಣ್ಣೆ, ಅದರ ಪೇಸ್ಟ್ ನ್ನು ಗಂಟು ನೋವಿಗೆ ಹಚ್ಚಿಕೊಂಡರೆ ನೋವು ಶಮನವಾಗುವುದು. ಸಂಧಿವಾತ ಕಡಿಮೆ ಮಾಡಲು ಹಿಂದಿನ ಕಾಲದಿಂದಲೂ ಈ ಮನೆಮದ್ದನ್ನು ಬಳಸಲಾಗುತ್ತಿದೆ. ಹಲ್ಲು ನೋವು ಕಾಡಿದಾಗ ವೈದ್ಯರ ಬಳಿಗೆ ತೆರಳುವ ಮೊದಲು ಒಂದು ಲವಂಗ ಬಾಯಿಗೆ ಹಾಕಿಕೊಂಡು ಜಗಿದರೆ ಅದರಿಂದ ನೋವು ನಿವಾರಣೆಯಾಗುವುದು. ನೋವು ತೀವ್ರವಾಗದಂತೆ ಲವಂಗವು ತಡೆಯುವುದು.

ಲವಂಗ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಲವಂಗ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಲವಂಗದ ಸೇವನೆಯಿಂದ ಜೀರ್ಣರಸಗಳು ಹೆಚ್ಚು ಸ್ರವಿಸಲು ಪ್ರಚೋದನೆ ಪಡೆಯುತ್ತದೆ. ತನ್ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತದೆ.ಇದರೊಂದಿಗೆ ಲವಂಗ ವಾಯು ಪ್ರಕೋಪವನ್ನು ಶಮನಗೊಳಿಸುತ್ತದೆ ಹಾಗೂ ಹೊಟ್ಟೆಯ ಉರಿ, ವಾಕರಿಕೆ ಹುಳಿತೇಗು ಮೊದಲಾದವುಗಳಿಂದ ರಕ್ಷಿಸುತ್ತದೆ

ಇದರಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ

ಇದರಲ್ಲಿದೆ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣ

ಲವಂಗದ ಹಲವಾರು ಪೋಷಕಾಂಶಗಳಲ್ಲಿ phenylpropanoids ಎಂಬ ಸಂಯುಕ್ತಗಳೂ ಇದ್ದು ಇವುಗಳು ಅನುವಂಶಿಕ ಗುಣವನ್ನು ಬದಲಿಸುವ ಕಣಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೊಂದಿವೆ. ಸಾಮಾನ್ಯವಾಗಿ ಒಂದು ಬಗೆಯ ಜೀವಕೋಶಗಳು ತನ್ನ ಅನುವಂಶಿಕ ಸಂಯೋಜನೆಯಿಂದ ಒಂದು ಹಂತದವರೆಗೆ ಮಾತ್ರವೇ ಬೆಳೆಯಬೇಕು. ಒಂದು ವೇಳೆ ಈ ಜೀವಕೋಶಗಳು ನಿಯಂತ್ರಣ ಮೀರಿ ಬೆಳೆದರೆ ಇದು ಕ್ಯಾನ್ಸರ್ ರೂಪ ಪಡೆಯಬಹುದು. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಲವಂಗದಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಶ್ವಾಸಕೋಶದ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿದ್ದರೆ ಇದನ್ನು ನಿಯಂತ್ರಿಸುವ ಗುಣ ಹೊಂದಿದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ನಿಮ್ಮ ನಿತ್ಯದ ಆಹಾರದಲ್ಲಿ ನಿಯಮಿತವಾಗಿ ಲವಂಗವನ್ನು ಬೆರೆಸಿ ಸೇವಿಸುವ ಮೂಲಕ ಟೈಪ್ 1 ಮಧುಮೇಹವನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು. ಇದರಲ್ಲಿರುವ ಕೆಲವು ಪೋಷಕಾಂಶಗಳು ಇನ್ಸುಲಿನ್ ನಂತೆಯೇ ಕಾರ್ಯನಿರ್ವಹಿಸುತ್ತವೆ ಹಾಗೂ ತನ್ಮೂಲಕ ರಕ್ತದಲ್ಲಿರುವ ಅಧಿಕ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ.

ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ

ಬಿಳಿರಕ್ತಕಣಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ

ರಕ್ತದಲ್ಲಿರುವ ಬಿಳಿರಕ್ತಕಣಗಳು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುವ ಯೋಧರಾಗಿವೆ. ದೇಹವನ್ನು ಪ್ರವೇಶಿಸುವ ವೈರಾಣುಗಳನ್ನು ಕೊಂದು ದೇಹದಿಂದ ಹೊರಹಾಕುವ ಮೂಲಕ ಇವು ವಿವಿಧ ರೋಗಗಳಿಂದ ಸತತವಾಗಿ ರಕ್ಷಿಸುತ್ತಾ ಇರುತ್ತದೆ. ಆದ್ದರಿಂದ ನಮ್ಮ ರಕ್ತದಲ್ಲಿ ಉತ್ತಮ ಪ್ರಮಾಣದ ಬಿಳಿರಕ್ತಕಣಗಳಿರುವುದು ಅಗತ್ಯ. (ಒಂದು ಸಂದರ್ಭದಲ್ಲಿ ಬಿಳಿರಕ್ತಕಣಗಳು ವಿಪರೀತವಾಗಿದ್ದರೆ ಇದು ರಕ್ತದ ಕ್ಯಾನ್ಸರ್ ಗೂ ಕಾರಣವಾಗಬಹುದು). ಆದರೂ ಲವಂಗದ ಸೇವನೆಯಿಂದ ರಕ್ತದಲ್ಲಿ ಆರೋಗ್ಯಕರ ಮಟ್ಟದಲ್ಲಿ ಬಿಳಿರಕ್ತಕಣಗಳು ಉತ್ಪತ್ತಿಯಾಗುವಂತೆ ನೋಡಿಕೊಳ್ಳುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ವಿಶೇಷವಾಗಿ ಹಲವಾರು ಅಲರ್ಜಿಕಾರಕ ಪ್ರತಿಕ್ರಿಯೆಗಳಿಂದ ರಕ್ಷಿಸುತ್ತದೆ.

ಹಲ್ಲುನೋವು ಮತ್ತು ಒಸಡುಗಳ ನೋವಿನಿಂದ ರಕ್ಷಿಸುತ್ತದೆ

ಹಲ್ಲುನೋವು ಮತ್ತು ಒಸಡುಗಳ ನೋವಿನಿಂದ ರಕ್ಷಿಸುತ್ತದೆ

ಲವಂಗದಲ್ಲಿರುವ ಉರಿಯೂತ ನಿವಾರಕ ಗುಣ ವಿಶೇಷವಾಗಿ ಒಸಡುಗಳ ಸೋಂಕನ್ನು ನಿವಾರಿಸಿ ನೋವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಒಂದು ವೇಳೆ ನೀವು ಒಸಡುಗಳಲ್ಲಿ ನೋವು ಅಥವಾ ಹಲ್ಲು ನೋವಿನಿಂದ ಬಳಲುತ್ತಿದ್ದರೆ ಲವಂಗದ ಎಣ್ಣೆಯಲ್ಲಿ ಅದ್ದಿದ ಹತ್ತಿಯನ್ನು ಇಟ್ಟುಕೊಳ್ಳುವುದು ಒಂದು ವಿಧಾನವಾಗಿದೆ. ಅಷ್ಟೇ ಅಲ್ಲದೆ ಲವಂಗ ಬೆರೆಸಿ ಕುದಿಸಿದ ಟೀ ಅನ್ನು ಬಾಯಿಗೆ ಹಾಕಿಕೊಳ್ಳುವಷ್ಟು ತಣಿದ ಬಳಿಕ ಬಾಯಿಯಲ್ಲಿ ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಮುಕ್ಕಳಿಸಿ. ವಿಶೇಷವಾಗಿ ನೋವಿರುವ ಹಲ್ಲಿನ ಕಡೆ ಹೆಚ್ಚು ಕಾಲ ಮುಕ್ಕಳಿಸಿ. ಇದರಿಂದ ನೋವಿನಿಂದ ಮೊದಲ ವಿಧಾನಕ್ಕಿಂತಲೂ ಶೀಘ್ರವಾಗಿ ಮತ್ತು ಇನ್ನೂ ಉತ್ತಮವಾದ ಉಪಶಮನ ಸಿಗುತ್ತದೆ.

ಸೈನಸ್ (ಕುಹರ) ನ ಸೋಂಕಿನಿಂದ ರಕ್ಷಿಸುತ್ತದೆ

ಸೈನಸ್ (ಕುಹರ) ನ ಸೋಂಕಿನಿಂದ ರಕ್ಷಿಸುತ್ತದೆ

ಮೂಗಿನ ಮೇಲ್ಭಾಗದ, ಹಣೆಯ ಒಳಗಿರುವ ಟೊಳ್ಳು ಭಾಗದಲ್ಲಿ ಸೋಂಕು ಉಂಟಾಗಿ ಮೂಗು ಕಟ್ಟಿಕೊಂಡಿದ್ದು ತಲೆನೋವು ವಿಪರೀತವಾಗಿದ್ದರೆ ಒಂದು ಕಪ್ ಬಿಸಿಯಾದ ಲವಂಗದ ಪುಡಿ ಬೆರೆಸಿ ಮಾಡಿದ ಟೀ ಕುಡಿಯಿರಿ. ವಿಶೇಷವಾಗಿ ಬೆಳಗ್ಗಿನ ಪ್ರಥಮ ಆಹಾರ ಹಾಗೂ ಉಪಾಹಾರದ ಬಳಿಕ ಇನ್ನೊಂದು ಲೋಟ ಕುಡಿಯುವ ಮೂಲಕ ಸೈನಸ್ ಸೋಂಕು ಶೀಘ್ರವಾಗಿ ಇಲ್ಲವಾಗುತ್ತದೆ.

English summary

Amazing Health Benefits Of Clove

Clove, the flower buds of the evergreen clove tree, is a popular spice that renders its unique aroma to a dish. When using it as a spice, the unopened pink flower of the clove tree is dried and used to add flavour to the dish. However, clove does much more than just add aroma to any dish. Clove is a super food that comes with a host of health benefits. Take a look at some of the amazing health benefits of clove, below
X
Desktop Bottom Promotion