For Quick Alerts
ALLOW NOTIFICATIONS  
For Daily Alerts

  ಆರೋಗ್ಯ ಟಿಪ್ಸ್: ಈ ಪುಟ್ಟ ಜೀರಿಗೆಯಲ್ಲಿದೆ, ಬೆಟ್ಟದಷ್ಟು ಗುಣಗಳು...

  By Arshad
  |

  ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಾರ್ಯದಲ್ಲಿ ದೊಡ್ಡದನ್ನು ಸಾಧಿಸುವ ಯಾವುದೇ ಕ್ರಿಯೆ ಅಥವಾ ವ್ಯಕ್ತಿಯನ್ನು ಜೀರಿಗೆಯೊಂದಿಗೆ ಹೋಲಿಸಲಾಗುತ್ತದೆ. ಅಷ್ಟೇ ಏಕೆ ಅತಿ ಖಾರವಾದ ಪುಟ್ಟಮೆಣಸಿನ ಹೆಸರೂ ಜೀರಿಗೆ ಮೆಣಸು. ಇದೇನೂ ಉತ್ಪ್ರೇಕ್ಷೆಯಲ್ಲ. ಏಕೆಂದರೆ ಈ ಪುಟ್ಟ ಜೀರಿಗೆಯಲ್ಲಿ ಆರೋಗ್ಯಕರ ಗುಣಗಳ ಗಣಿಯೇ ಇದೆ. ಆರೋಗ್ಯಕರ ಮಾತ್ರವಲ್ಲ, ರುಚಿಕರವೂ ಆದುದರಿಂದ ಭಾರತದ ಬಹುತೇಕ ಎಲ್ಲಾ ಮಸಾಲೆಯ ಅಡುಗೆಗಳಲ್ಲಿ ಒಗ್ಗರಣೆ, ಮಸಾಲೆಗಳಲ್ಲಿ ಉಪಯೋಗಿಸಲಾಗುತ್ತದೆ.

  ಜೀರಿಗೆಯ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾದುದನ್ನು ಹೆಸರಿಸುವುದಾದರೆ ಮಧುಮೇಹವನ್ನು ತಡೆಗಟ್ಟುವುದು, ದುರ್ಮಾಂಸ, ಶಿಲೀಂಧ್ರದ ಸೋಂಕು ಮೊದಲಾದವನ್ನು ಪರಿಗಣಿಸಬಹುದು. ಇದರ ಆರೋಗ್ಯಕರ ಪರಿಣಾಮಗಳನ್ನು ಕಂಡುಕೊಂಡ ನಮ್ಮ ಹಿರಿಯರು ಪ್ರತಿದಿನ ಒಂದು ಔಷಧಿಯಂತೆ ಉಪಯೋಗಿಸುತ್ತಿದ್ದರು. ಕೇರಳ ಮತ್ತು ತಮಿಳುನಾಡುಗಳಲ್ಲಂತೂ ಹೋಟೆಲುಗಳಲ್ಲಿ ಮತ್ತು ಮನೆಗಳಲ್ಲಿ ಕುಡಿಯಲು ಜೀರಿಗೆ ಕುದಿಸಿ ಸೋಸಿದ ನೀರನ್ನೇ ಕುಡಿಯಲು ನೀಡುತ್ತಾರೆ. ಈ ನೀರನ್ನು ತಯಾರಿಸುವುದೇನೂ ಕಷ್ಟಕರವಲ್ಲ.

  Cumin

  ಕೊಂಚ ನೀರನ್ನು ಕುದಿಯಲು ಪ್ರಾರಂಭಿಸಿದ ಬಳಿಕ ಹತ್ತು ನಿಮಿಷದವರೆಗೆ ಕುದಿಯಲು ಬಿಟ್ಟು ಬಳಿಕ ಕೊಂಚ ಜೀರಿಗೆಯನ್ನು ಹಾಕಿ ಮತ್ತೂ ಹತ್ತು ನಿಮಿಷ ಕುದಿಯಲು ಬಿಡಬೇಕು. ಬಳಿಕ ಜೀರಿಗೆಯನ್ನು ಸೋಸಿ ತಣಿಯಲು ಬಿಡಿ, ಉಗುರು ಬೆಚ್ಚಗಿರುವಂತೆಯೇ ಕುಡಿಯಲು ಪ್ರಾರಂಭಿಸಿ. ಈ ನೀರನ್ನು ಊಟಕ್ಕೂ ಮೊದಲು ಸೂಪ್‌ನಂತೆಯೂ ಸೇವಿಸಬಹುದು. ಈ ನೀರಿನ ಗುಣವನ್ನು ಹೆಚ್ಚಿಸಲು ಪ್ರಮುಖವಾದ ಪೋಷಕಾಂಶವೆಂದರೆ cuminaldehyde ಎಂಬ ಫೈಟೋಕೆಮಿಕಲ್. ಜೀರಿಗೆಯ ರುಚಿಗೂ ಈ ಪೋಷಕಾಂಶವೇ ಕಾರಣ. ಬನ್ನಿ, ಈ ಪುಟ್ಟ ಜೀರಿಗೆಯ ದೊಡ್ಡ ಗುಣಗಳನ್ನು ನೋಡೋಣ...ಅಸ್ತಮಾ ಅಥವಾ ಉಬ್ಬಸ ರೋಗಕ್ಕಾಗಿ ಉಬ್ಬಸ ರೋಗಕ್ಕೆ ದಾರಿ ಮಾಡಿಕೊಡಬಲ್ಲ ಉರಿಯೂತವನ್ನು ಶಮನಗೊಳಿಸುವ ಸಾಮರ್ಥ್ಯವು ಜೀರಿಗೆಕಾಳುಗಳಿಗಿರುವುದರಿ೦ದ, ಉಬ್ಬಸ ರೋಗದಿ೦ದ ಬಳಲುತ್ತಿರುವವರ ಪಾಲಿಗೆ ಜೀರಿಗೆಯು ಅತ್ಯುತ್ತಮವಾದುದಾಗಿದೆ. 

  ಜೀರಿಗೆಯ ಆರೋಗ್ಯಕಾರಿ ಪ್ರಯೋಜನಗಳು

  1, ಮುಪ್ಪಾಗುವ ಪ್ರಕ್ರಿಯೆಯನ್ನು ಮು೦ದೂಡುತ್ತದೆ

  ಕಾಲಕ್ರಮೇಣವಾಗಿ ನಿಮ್ಮ ಶರೀರವು ಮುಪ್ಪಾಗುವ ಪ್ರಕ್ರಿಯೆಯನ್ನು ಮ೦ದಗತಿಗೊಳಿಸುವಲ್ಲಿ ಜೀರಿಗೆಕಾಳುಗಳು ನಿಜಕ್ಕೂ ಅದ್ಭುತ ಕೆಲಸವನ್ನು ಮಾಡಬಲ್ಲವು. ತ್ವಚೆಯ ನೆರಿಗೆಗಳ ವಿರುದ್ಧ ಸೆಣಸಾಡುವಲ್ಲಿ ಜೀರಿಗೆಯು ಮಹತ್ತರ ಕಾರ್ಯನಿರ್ವಹಿಸುತ್ತದೆ. 

  Cumin water

  2, ರಕ್ತವನ್ನು ಶುದ್ಧೀಕರಣಗೊಳಿಸುತ್ತದೆ

  ರಕ್ತವನ್ನು ಶುದ್ಧೀಕರಿಸುವ ವಿಚಾರದಲ್ಲಿಯೂ ಸಹ ಜೀರಿಗೆ ಕಾಳುಗಳು ಮಹತ್ತರ ಭೂಮಿಕೆಯನ್ನು ನಿಭಾಯಿಸಬಲ್ಲವು. ನಿಮ್ಮ ಆಹಾರಕ್ರಮದ ಮೂಲಕ ಪುಡಿಯ ರೂಪದಲ್ಲಿ ಜೀರಿಗೆಯನ್ನು ಸೇವಿಸುವುದು ನಿಮ್ಮ ರಕ್ತದ ಸ್ವಾಸ್ಥ್ಯದ ದೃಷ್ಟಿಯಿ೦ದ ಒಳ್ಳೆಯದು. 

  3. ಉಸಿರಾಟ ಸ೦ಬ೦ಧಿ ಸಮಸ್ಯೆಗಳಿಗಾಗಿ

  ಜೀರಿಗೆ ಕಾಳುಗಳು ಫ೦ಗಸ್ ಪ್ರತಿಬ೦ಧಕ ಗುಣಲಕ್ಷಣಗಳುಳ್ಳವುಗಳಾಗಿವೆ. ಜೊತೆಗೆ, ಜೀರಿಗೆ ಕಾಳುಗಳು ಕೆಲವೊ೦ದು ಉಸಿರಾಟ ಸ೦ಬ೦ಧೀ ಸಮಸ್ಯೆಗಳನ್ನು ಗುಣಪಡಿಸಬಲ್ಲವು. 

  4. ನಿದ್ರಾಹೀನತೆಯನ್ನು ತೊಡೆಯುತ್ತದೆ

  ನಿದ್ದೆ ಬರದೇ ಹೊರಳಾಡುವ ತೊಂದರೆಯಿಂದ ಮುಕ್ತಿ ಪಡೆಯಲು ರಾತ್ರಿ ಊಟದ ಬಳಿಕ ಸಾಕಷ್ಟು ಜೀರಿಗೆ ನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮಲಗಿದರೆ ತಡೆರಹಿತ ನಿದ್ದೆ ಆವರಿಸುತ್ತದೆ. 

  Cumin water

  5. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ದೇಹಕ್ಕೆ ಹಾನಿಕರವಾದ ಫ್ರೀ ರ್‍ಯಾಡಿಕಲ್ ಕಣಗಳನ್ನು ಮತ್ತು ಕೆಲವು ಸೋಂಕುಗಳನ್ನು ತಡೆಗಟ್ಟುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ. 

  6. ವಾಕರಿಕೆಯನ್ನು ತಡೆಗಟ್ಟುತ್ತದೆ

  ವಾಕರಿಕೆಯ ಲಕ್ಷಣಗಳನ್ನು ಜೀರಿಗೆಯು ಉಪಶಮನಗೊಳಿಸಬಲ್ಲದು. ಜೀರಿಗೆಯ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದು.

  7. ಗಂಟಲ ಬೇನೆ ಕಡಿಮೆಗೊಳಿಸುತ್ತದೆ

  ಗಂಟಲ ಬೇನೆ, ಗಂಟಲ ಕೆರೆತ ಮೊದಲಾದ ತೊಂದರೆಗಳಿಗೆ ಜೀರಿಗೆ ನೀರನ್ನು ಕುಡಿಯುವುದರಿಂದ ಕೊಂಚ ಪರಿಹಾರ ದೊರಕುತ್ತದೆ. ಆದರೆ ಉತ್ತಮ ಪರಿಹಾರ ಬೇಕೆಂದರೆ ಕೊಂಚ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಜೀರಿಗೆಯನ್ನು ಹೆಚ್ಚು ಕಾಲ ಕುದಿಸಿ ಗಾಢವಾಗಿಸಿ ಬಳಿಕ ಸೋಸಿ ಉಗುರುಬೆಚ್ಚಗಾಗುವಷ್ಟು ತಣಿಸಿ ಗಳಗಳ ಮಾಡಿ ಉಗುಳಬೇಕು. ಇದು ಗಂಟಲಕೆರೆತವನ್ನು ತಕ್ಷಣವೇ ನಿಲ್ಲಿಸುತ್ತದೆ.

  throat pain

  ಜೀರಿಗೆ ನೀರು ತಯಾರಿಸುವ ವಿಧಾನ

  ಒಂದು ಲೀಟರ್ ನೀರಿಗೆ ಎರಡು ದೊಡ್ಡ ಚಮಚ ಜೀರಿಗೆ ಹಾಕಿ ಕುದಿಸಿ. ಕುದಿಯಲು ಪ್ರಾರಂಭಿಸ ಬಳಿಕ ಸುಮಾರು ನಾಲ್ಕೈದು ನಿಮಿಷಗಳವರೆಗೆ ನೀರನ್ನು ಗಮನಿಸಿ. ಒಂದು ಹಂತದಲ್ಲಿ ಜೀರಿಗೆಯಿಂದ ಬಣ್ಣ ಹೊರಬರಲು ಪ್ರಾರಂಭವಾಗುತ್ತದೆ. ಈಗ ಉರಿಯನ್ನು ಆರಿಸಿ ತಣಿಯಲು ಬಿಡಿ.ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಇಡಿಯ ದಿನ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ. ಇದು ಕೊಂಚವೇ ಬಿಸಿಯಾಗಿರಬೇಕೇ ಹೊರತು ತೀರಾ ತಣ್ಣಗೂ ಇರಬಾರದು, ತೀರಾ ಬಿಸಿಯಾಗಿಯೂ ಇರಬಾರದು. ನಿತ್ಯವೂ ಈ ನೀರನ್ನು ಕುಡಿಯುವ ಮೂಲಕ ಅಜೀರ್ಣತೆಯಿಂದ ಎದುರಾಗುವ ಹುಳಿತೇಗು, ಎದೆಯುರಿ, ಹೊಟ್ಟೆನೋವು, ವಾಕರಿಕೆ, ಬೆಳಗ್ಗಿನ ಸುಸ್ತು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.

  1. ರಕ್ತದೊತ್ತಡದ ತೊಂದರೆಗೂ ರಾಮಬಾಣ

  ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಹಾಗೂ ಹೃದಯ ಸಂಬಂಧಿ ತೊಂದರೆಗಳಿದ್ದರೆ ಪ್ರತಿದಿನ ಖಾಲಿಹೊಟ್ಟೆಯಲ್ಲಿ ಕೊಂಚ ಜೀರಿಗೆ ಕುದಿಸಿದ ನೀರನ್ನು ಬೆಳಿಗ್ಗೆ ಕುಡಿಯುವುದು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಇತರ ಖನಿಜಗಳು ಹೃದಯದ ಬಡಿತವನ್ನೂ ಸೂಕ್ತಮಟ್ಟದಲ್ಲಿರಿಸಿ ಹೃದಯದ ಕ್ಷಮತೆ ಹೆಚ್ಚಿಸುತ್ತದೆ.

  2. ಜೀರಿಗೆ ಹಾಗೂ ಬೆಲ್ಲ!

  ಹೌದು ಜೀರಿಗೆ ಹಾಗೂ ಬೆಲ್ಲವನ್ನು ಕುದಿಸಿ ತಣಿಸಿದ ನೀರನ್ನು ನಿತ್ಯವೂ ಕುಡಿಯುವ ಮೂಲಕ ದೇಹಕ್ಕೆ ಕೆಲವಾರು ಬಗೆಯ ಪ್ರಯೋಜನಗಳು ದೊರಕುತ್ತವೆ. ಈ ನೀರನ್ನು ತಯಾರಿಸಲು ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಎರಡು ಚಿಕ್ಕ ಚಮಚ ಜೀರಿಗೆ ಹಾಗೂ ಒಮ್ದು ಚಿಕ್ಕ ಚಮಚ ಬೆಲ್ಲವನ್ನು ಬೆರೆಸಿ ಸುಮಾರು ಮೂರು ನಿಮಿಷ ಚಿಕ್ಕ ಉರಿಯಲ್ಲಿ ಕುದಿಸಿ ಬಳಿಕ ತಣಿಸಿ ಸೋಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಬೇಕು. ಸುಮಾರು ಮುಕ್ಕಾಲು ಘಂಟೆಯ ಬಳಿಕ ಉಪಾಹಾರ ಸೇವಿಸಬೇಕು

  3. ಜೀರ್ಣಕ್ರಿಯೆಗೆ ಸಹಕರಿಸುತ್ತದೆ

  ಜೀರಿಗೆಯಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಹಾಗೂ ಕ್ಯೂಮಿನ್ ಎಣ್ಣೆ ಜೀರ್ಣರಸದಲ್ಲಿ ಹೆಚ್ಚಿನ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಜೀರ್ಣಕ್ರಿಯೆ ಸರಾಗವಾಗುವಲ್ಲಿ ಸಹಕರಿಸುತ್ತದೆ. ತನ್ಮೂಲಕ ಆಮ್ಲೀಯತೆ, ಅಜೀರ್ಣತೆ, ವಾಯುಪ್ರಕೋಪ ಮೊದಲಾದ ತೊಂದರೆಗಳನ್ನು ಇಲ್ಲವಾಗಿಸುತ್ತದೆ. ಒಂದು ವೇಳೆ ಊಟ ರುಚಿಸಿತೆಂದು ಕೊಂಚ ಹೆಚ್ಚೇ ಸೇವಿಸಿದರೆ ಊಟದ ಬಳಿಕವೂ ಈ ನೀರನ್ನು ಕುಡಿಯುವ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಸಾಗಲು ನೆರವಾಗುತ್ತದೆ. 

  4. ಮಲಬದ್ಧತೆಯನ್ನು ನಿವಾರಿಸುತ್ತದೆ

  ಪ್ರತಿದಿನವೂ ಬೆಳಿಗ್ಗೆ ಪ್ರಥಮ ಆಹಾರವಾಗಿ ಬಿಸಿಯಾದ ಜೀರಿಗೆ-ಬೆಲ್ಲದ ನೀರನ್ನು ಕುಡಿದಾಗ ಮಲಬದ್ದತೆಯ ತೊಂದರೆ ನೀಗಿಸಲು ಸಹಾಯವಾಗುತ್ತದೆ. ಇದರಲಿರುವ ಖನಿಜಗಳು ಹಾಗೂ ನೈಸರ್ಗಿಕ ಪೋಷಕಾಂಶಗಳು ಬಿಸಿನೀರಿನೊಂದಿಗೆ ಹೊಟ್ಟೆಯನ್ನು ಸೇರಿ ಕರುಳುಗಳಿಗೆ ಮುಂದುವರೆದಾಗ ವಿಶೇಷವಾಗಿ ದೊಡ್ಡ ಕರುಳಿನಲ್ಲಿ ಗಟ್ಟಿಯಾಗಿ ಮುಂದುವರೆಯಲು ಕಷ್ಟಕರವಾಗಿದ್ದ ತ್ಯಾಜ್ಯಗಳನ್ನು ಮುಂದೂಡಲು ಕರುಳಿನ ಒಳಗೋಡೆಗಳಲ್ಲಿ ಜಾರುಕದಂತಹ ದ್ರವದಂತೆ ಸಹಕರಿಸುವ ಮೂಲಕ ವಿಸರ್ಜನಾ ಕಾರ್ಯವನ್ನು ಸುಲಭವಾಗಿ ನಿರ್ವಹಿಸಲು ನೆರವಾಗುತ್ತದೆ. 

  English summary

  Amazing Benefits Of Cumin Water You Never Know

  Jeera is the Indian name for cumin seeds. These seeds contain medicinal properties. Though they have a slightly spicy taste, they have many health benefits. In fact, cumin seeds are part of many Indian recipes. There is a compound known as cuminaldehyde present in cumin seeds which is a phytochemical. In fact, the peculiar taste and smell of cumin seeds come from this compound. Now, let us know about the benefits of jeera water.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more