ಪುರುಷರ ಶಿಶ್ನದ ಆರೋಗ್ಯ ವೃದ್ಧಿಸುವ ಆಹಾರಗಳು

Posted By: Hemanth
Subscribe to Boldsky

ದೇವರ ಸೃಷ್ಟಿಯ ಮುಂದೆ ಯಾವ ಇಂಜಿನಿಯರ್ ಕೂಡ ಸರಿಸಾಟಿಯಾಗಲಾರ. ಭೂಮಿ ಮೇಲೆ ಗಂಡು ಹಾಗೂ ಹೆಣ್ಣನ್ನು ಸೃಷ್ಟಿಸಿದ ದೇವರು, ಅವರಿಬ್ಬರ ದೇಹದ ಅಂಗಾಂಗಗಳನ್ನು ಕೂಡ ತುಂಬಾ ಭಿನ್ನವಾಗಿ ರಚನೆ ಮಾಡಿದ್ದಾನೆ. ಇದರಿಂದಾಗಿಯೇ ಮಾನವ ಸಂತತಿ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳ ಸಂತತಿಯು ಬೆಳೆಯುತ್ತಾ ಇರುವುದು. ಗಂಡು ಹಾಗೂ ಹೆಣ್ಣಿನ ದೇಹಕ್ಕೆ ತಕ್ಕಂತೆ ಜನನೇಂದ್ರೀಯಗಳು ಕೂಡ ಭಿನ್ನವಾಗಿದೆ.

ಜನನೇಂದ್ರೀಯಗಳು ಸ್ರವಿಸುವಿಕೆ ಹಾಗೂ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೆಲವೊಂದು ಆರೋಗ್ಯ ಸಮಸ್ಯೆಯಿಂದಾಗಿ ಜನನೇಂದ್ರಿಯಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇದ್ದರೆ ಆಗ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಇದರಿಂದ ದೇಹದ ಇತರ ಅಂಗಾಂಗಗಳನ್ನು ಆರೈಕೆ ಮಾಡಿಕೊಳ್ಳುವಂತೆ ಜನನೇಂದ್ರೀಯವನ್ನು ಆರೈಕೆ ಮಾಡಿಕೊಳ್ಳಬೇಕು. ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ನಾವು ಕೆಲವೊಂದು ಆಹಾರ ಕ್ರಮಗಳನ್ನು ಪಾಲಿಸಿಕೊಂಡು ಹೋಗುತ್ತೇವೆ. ಅದೇ ರೀತಿ ಜನನೇಂದ್ರಿಯಗಳ ವಿಷಯದಲ್ಲೂ ಹೀಗೆ ಮಾಡಬೇಕು. ಕೆಲವೊಂದು ಆಹಾರಗಳು ಜನನೇಂದ್ರೀಯಗಳ ಕಾರ್ಯ ವೃದ್ಧಿಸಿ, ಅನಾರೋಗ್ಯ ಬರದಂತೆ ತಡೆಯುವುದು. ನಿಮ್ಮ ಜನನೇಂದ್ರೀಯದ ಕಾರ್ಯ ಹೆಚ್ಚಿಸಲು ಯಾವೆಲ್ಲಾ ಆಹಾರ ತಿನ್ನಬೇಕು ಎಂದು ಈ ಲೇಖನದ ಮೂಲಕ ತಿಳಿಯಿರಿ....

ಸೇಬು

ಸೇಬು

ದಿನಕ್ಕೊಂದು ಸೇಬು ತಿಂದರೆ ಅದರಿಂದ ಜನನೇಂದ್ರೀಯ ಆರೋಗ್ಯ ಹಾಗೂ ಸುರಕ್ಷಿತವಾಗಿರುವುದು. ಪುರುಷರಿಗೆ ಇದು ತುಂಬಾ ಒಳ್ಳೆಯ ಆಹಾರವಾಗಿದೆ. ಸೇಬಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಆರೋಗ್ಯಕಾರಿಯಾಗಿ ರಕ್ತವು ಜನನೇಂದ್ರೀಯಗಳಿಗೆ ಸಂಚಾರವಾಗುವಂತೆ ಮಾಡಿ ಕಾಮಾಸಕ್ತಿ ಹೆಚ್ಚಿಸುವುದು. ಇದರಿಂದ ಲೈಂಗಿಕ ಕ್ರಿಯೆ ವೇಳೆ ನಿಮ್ಮ ಪ್ರದರ್ಶನ ಉತ್ತಮವಾಗಿರುವುದು. ಸೇಬಿನಲ್ಲಿ ಕಂಡು ಬರುವಂತಹ ಫ್ಲಾವನಾಯ್ಡ್ ಶಿಶ್ನದ ಒಳಗಡೆ ಮತ್ತು ಸುತ್ತಲು ಗಡ್ಡೆ ಬೆಳೆಯುವುದನ್ನು ತಡೆಯುವುದು.

ಅವಕಾಡೋ

ಅವಕಾಡೋ

ಅವಕಾಡೋ ಸೇವನೆ ಮಾಡುವುದರಿಂದ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಇಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಇದು ತೂಕ ಇಳಿಸುವುದರಿಂದ ಹಿಡಿದು ಕ್ಯಾನ್ಸರ್ ತಡೆಗಟ್ಟುವ ತನಕ ನೆರವಾಗುವುದು. ದೈನಂದಿನ ಆಹಾರ ಕ್ರಮಕ್ಕೆ ಅವಕಾಡೋ ಸೇರಿಸಿದರೆ ಅದರಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲದಿಂದ ಶಿಶ್ನದ ಆರೋಗ್ಯವು ಉತ್ತಮವಾಗಿರುವುದು ಮತ್ತು ಕಾಮಾಸಕ್ತಿ ಸುಧಾರಣೆಯಾಗುವುದು.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣನ್ನು ಅದರ ರುಚಿ ಮತ್ತು ಪೋಷಕಾಂಶಗಳಿಂದ ಪ್ರತಿಯೊಬ್ಬರು ಇಷ್ಟಪಡುವರು. ಇದರಲ್ಲಿರುವ ಪೊಟಾಶಿಯಂನಿಂದಾಗಿ ಲೈಂಗಿಕ ಕ್ರಿಯೆ ವೇಳೆ ನಿಮಿರುವಿಕೆ ಸುಧಾರಿಸುವುದು. ಬ್ರೊಮೆಲೈನ್ ಎನ್ನುವ ಕಿಣ್ವವು ದೇಹದಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ನ ಉತ್ಪತ್ತಿಯನ್ನು ಹೆಚ್ಚಿಸುವುದು. ಈ ಹಾರ್ಮೋನು ಶಿಶ್ನದ ಆರೋಗ್ಯಕ್ಕೆ ಅಗತ್ಯವಾಗಿ ಬೇಕು.

ಬೀಟ್ ರೂಟ್

ಬೀಟ್ ರೂಟ್

ಶಿಶ್ನವು ಆರೋಗ್ಯಕಾರಿಯಾಗಿ ಇರಬೇಕೆಂದರೆ ನೀವು ಪ್ರತಿನಿತ್ಯದ ಆಹಾರದಲ್ಲಿ ಬೀಟ್ ರೂಟ್ ನ್ನು ಸಲಾಡ್ ರೂಪದಲ್ಲಿ ತಿನ್ನಿ. ಇದರಲ್ಲಿ ಇರುವಂತಹ ಉನ್ನತ ಮಟ್ಟದ ನೈಟ್ರೇಟ್ ನೈಸರ್ಗಿಕವಾಗಿ ಶಿಶ್ನದ ರಕ್ತನಾಳಗಳನ್ನು ಹಿಗ್ಗಿಸುವಂತಹ ಗುಣ ಹೊಂದಿದೆ. ರಕ್ತನಾಳಗಳು ಹಿಗ್ಗಿದಾಗ ಆಮ್ಲಜನಕವಿರುವ ರಕ್ತವು ಸರಿಯಾಗಿ ಸಂಚಾರವಾಗುವುದು. ಇದರಿಂದ ಕಾಮಾಸಕ್ತಿ ಮತ್ತು ಶಿಶ್ನದ ಆರೋಗ್ಯ ವೃದ್ಧಿಯಾಗುವುದು.

ಬ್ರಾಕೋಲಿ

ಬ್ರಾಕೋಲಿ

ಬ್ರಾಕೋಲಿ ಹೆಸರು ಇಂದು ಹೆಚ್ಚು ಜನಪ್ರಿಯವಾಗಿಲ್ಲ. ಅಧ್ಯಯನಗಳ ಪ್ರಕಾರ ಬ್ರಾಕೋಲಿ ಸೇವನೆ ಮಾಡಿದರೆ ಅದರಿಂದ ತೂಕ ಇಳಿಸುವುದು, ಜೀರ್ಣಕ್ರಿಯೆ ಸುಧಾರಣೆ ಮಾತ್ರವಲ್ಲದೆ ಶಿಶ್ನದ ಆರೋಗ್ಯ ಕೂಡ ಸುಧಾರಣೆ ಮಾಡಬಹುದು. ಬ್ರಾಕೋಲಿಯಲ್ಲಿ ಇರುವ ವಿಟಮಿನ್ ಸಿ ಜನನೇಂದ್ರೀಯಕ್ಕೆ ಸರಿಯಾಗಿ ರಕ್ತ ಸಂಚಾರವಾಗುವಂತೆ ಮಾಡುವುದು.

ಕ್ಯಾರೆಟ್

ಕ್ಯಾರೆಟ್

ಹಲವಾರು ಆರೋಗ್ಯ ಗುಣಗಳು ಹಾಗೂ ಪೋಷಕಾಂಶಗಳನ್ನು ಹೊಂದಿರುವಂತಹ ಕ್ಯಾರೆಟ್ ನ್ನು ಸಲಾಡ್ ರೂಪದಲ್ಲಿ, ಬೇಯಿಸಿ ತಿನ್ನಬಹುದು. ಕ್ಯಾರೆಟ್ ತಿನ್ನುವುದರಿಂದ ನಮ್ಮ ಕಣ್ಣಿನ ದೃಷ್ಟಿ ಉತ್ತಮವಾಗುವುದು ಮಾತ್ರವಲ್ಲದೆ ಪ್ರತಿರೋಧಕ ಶಕ್ತಿ ಹೆಚ್ಚಾಗುವುದು. ಕ್ಯಾರೆಟ್ ನಲ್ಲಿ ಇರುವ ವಿಟಮಿನ್ ಎ ಪುರುಷರಲ್ಲಿ ಹಾರ್ಮೋನು ಉತ್ಪತ್ತಿ ಹೆಚ್ಚಿಸುವುದು. ಇದರಿಂದ ಪುರುಷರ ಶಿಶ್ನವು ಆರೋಗ್ಯವಾಗಿರುವುದು.

 ಗೋಡಂಬಿ

ಗೋಡಂಬಿ

ಗೋಡಂಬಿ ಬೀಜಗಳು ತುಂಬಾ ಆರೋಗ್ಯಕಾರಿ ಮತ್ತು ನಿಯಮಿತವಾಗಿ ಅದರ ಸೇವನೆ ಮಾಡಿದರೆ ಹಲವಾರು ರೀತಿಯ ಆರೋಗ್ಯ ಲಾಭಗಳು ಅದರಿಂದ ಸಿಗುವುದು. ಗೋಡಂಬಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಮತ್ತು ಇದು ನೈಸರ್ಗಿಕವಾಗಿ ಖಿನ್ನತೆ ನಿವಾರಣೆ ಮಾಡುವುದು. ಗೋಡಂಬಿಯಲ್ಲಿ ಇರುವ ಸತುವಿನ ಅಂಶವು ಪುರುಷರಲ್ಲಿ ವೀರ್ಯದ ಗಣತಿ ಹೆಚ್ಚಿಸುವುದು. ಇದರಿಂದ ಜನನೇಂದ್ರೀಯವು ಆರೋಗ್ಯವಾಗಿರುವುದು.

ಚೆರ್ರಿಗಳು

ಚೆರ್ರಿಗಳು

ಚೆರ್ರಿಗಳನ್ನು ಹೆಚ್ಚಾಗಿ ಸಿಹಿ ತಿನಿಸುಗಳು ಮತ್ತು ಕೇಕ್ ಗಳಲ್ಲಿ ಅಲಂಕಾರಕ್ಕೆ ಬಳಸಿಕೊಳ್ಳುವರು. ಚೆರ್ರಿಯಲ್ಲಿ ಇರುವಂತಹ ಅಂಥೋಸಯಾನಿನ್ ಎನ್ನುವ ಅಂಶವು ಶಿಶ್ನದ ಆರೋಗ್ಯ ಕಾಪಾಡುವುದು. ಇದು ಪರಿಧಮನಿಗಳಲ್ಲಿ ಜಮೆಯಾಗುವ ಪದರವನ್ನು ತಗ್ಗಿಸುವುದು. ಇದರಿಂದ ರಕ್ತವು ಜನನೇಂದ್ರೀಯಗಳಿಗೆ ಸರಿಯಾಗಿ ಸಂಚಾರವಾಗುವುದು.

ಕೋಳಿ ಮಾಂಸ

ಕೋಳಿ ಮಾಂಸ

ನಿಮ್ಮ ಆಹಾರ ಕ್ರಮಕ್ಕೆ ಕೋಳಿ ಮಾಂಸ ಸೇರಿಸಿದರೆ ಅದರಿಂದ ಹಲವಾರು ಆರೋಗ್ಯ ಲಾಭಗಳು ಇವೆ. ಇದು ಸ್ನಾಯುಗಳು ಬೆಳೆಯಲು, ಕೊಬ್ಬು ವಿಘಟಿಸಲು, ಶಕ್ತಿ ಹೆಚ್ಚಿಸಲು ಇತ್ಯಾದಿಗಳಿಗೆ ನೆರವಾಗುವುದು. ಕೋಳಿಯಲ್ಲಿ ಉನ್ನತ ಮಟ್ಟದ ಪ್ರೋಟೀನ್ ಇದೆ. ಇದರಲ್ಲಿರುವ ವಿಟಮಿನ್ ಬಿ3 ಶಿಶ್ನಗಳಿಗೆ ರಕ್ತಸಂಚಾರ ಸರಾಗಗೊಳಿಸುವುದು. ಇದರಿಂದ ಜನನೇಂದ್ರೀಯದ ಆರೋಗ್ಯ ಚೆನ್ನಾಗಿರುವುದು ಮತ್ತು ಕಾಮಾಸಕ್ತಿ ಹೆಚ್ಚುವುದು.

English summary

9 Surprising Foods That Can Boost The Health Of Your Penis

So, here are a few surprising foods which help boost the health of a penis, which every man should know about.