ಎಣ್ಣೆಗಳ ರಾಣಿ 'ಎಳ್ಳೆಣ್ಣೆ'ಯ ಆರೋಗ್ಯಕರ ಪ್ರಯೋಜನಗಳು

By: Arshad Hussain
Subscribe to Boldsky

ಎಳ್ಳಿನಿಂದ ಹಿಂಡಿ ತೆಗೆಯಲಾದ ಎಳ್ಳೆಣ್ಣೆ ಸರಿಸುಮಾರು ನೀರಿನಷ್ಟೇ ಸಾಂದ್ರತೆಯನ್ನು ಹೊಂದಿದೆ. Sesamum indicum ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಈ ಪುಟ್ಟ ಕಾಳುಗಳನ್ನು ಅತಿ ಪ್ರಾಚೀನ ಕಾಲದಿಂದ ಉಪಯೋಗಿಸುತ್ತಾ ಬರಲಾಗಿದೆ. ಕ್ರಿ. ಪೂ 1500 ಇಸವಿಯಲ್ಲಿ ಈಜಿಪ್ಷಿಯನ್ನರು ಎಳ್ಳನ್ನು ನೋವು ನಿವಾರಕವಾಗಿ ಬಳಸುತ್ತಿದ್ದುದಾಗಿ ಇತಿಹಾಸ ತಿಳಿಸುತ್ತದೆ. 3000ವರ್ಷಗಳಿಂದಲೂ ಚೀನಾದಲ್ಲಿ ಆಹಾರ ಮತ್ತು ಔಷಧಿಯಾಗಿ ಎಳ್ಳನ್ನು ಬಳಸಲಾಗುತ್ತಿದೆ. ಕಾಳುಗಳು ಪುಟ್ಟದಾದರೂ ಇದರ ಪೋಷಕಾಂಶಗಳು ದೊಡ್ಡವೇ ಇದೆ. ಪ್ರೋಟೀನ್, ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಇ, ಬಿ ಕಾಂಪ್ಲೆಕ್ಸ್ ಹಾಗೂ ಗಂಧಕ, ಮೆಗ್ನೇಶಿಯಂ ಹಾಗೂ ಕ್ಯಾಲ್ಸಿಯಂ ನಂತಹ ಖನಿಜಗಳೂ ಇವೆ.

ತ್ವಚೆಗೆ ಮೋಡಿ ಮಾಡುತ್ತೆ ಎಳ್ಳೆಣ್ಣೆ ಮಸಾಜ್

ಇದರ ಎಣ್ಣೆ ಆರೋಗ್ಯಕರ ಎಣ್ಣೆಯಾಗಿದ್ದು ಸೇವಿಸಲು ಹಾಗೂ ಅಡುಗೆಗೆ ಬಳಸಲು ಸುರಕ್ಷಿತವಾಗಿದೆ. ಎಣ್ಣೆಯನ್ನು ಮಸಾಜ್ ಮಾಡಲೂ ಬಳಸಬಹುದು. ಇದೇ ಕಾರಣಕ್ಕೆ ಆಯುರ್ವೇದದಲ್ಲಿ ಇದನ್ನು ಪ್ರಮುಖವಾಗಿ ಮಸಾಜ್ ಮೂಲಕ ನೋವು ಕಡಿಮೆ ಮಾಡುವ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದು ಆಮ್ಲೀಯವೂ ಅಲ್ಲದ, ಕ್ಷಾರೀಯವೂ ಅಲ್ಲದ ಗುಣ ಹೊಂದಿರುವ ಕಾರಣಕ್ಕೇ ಇದಕ್ಕೆ 'ಎಣ್ಣೆಗಳ ರಾಣಿ' ಎಂಬ ಬಿರುದನ್ನು ನೀಡಲಾಗಿದೆ. ಎಳ್ಳೆಣ್ಣೆಯ ಕೆಲವು ಪ್ರಯೋಜನಗಳನ್ನು ಇಂದು ವಿವರಿಸಲಾಗಿದೆ, ಬನ್ನಿ ನೋಡೋಣ:

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಈ ಎಣ್ಣೆಯನ್ನು ಇತರ ಅಡುಗೆ ಎಣ್ಣೆಗಳಿಗೆ ಆರೋಗ್ಯಕರ ಪರ್ಯಾಯವಾಗಿ ಬಳಸಬಹುದು, ಸಂಶೋಧನೆಯ ಮೂಲಕ ಕಂಡುಕೊಂಡಂತೆ ಇದರ ಸೇವನೆ ಅಧಿಕ ರಕ್ತದೊತ್ತಡವನ್ನು ಆರೋಗ್ಯಕರ ಮಟ್ಟಕ್ಕೆ ಇಳಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡವನ್ನು ಇಳಿಸಲು ಇದೊಂದು ನೈಸರ್ಗಿಕ ವಿಧಾನವೂ ಆಗಿದೆ.

ರಕ್ತದಲ್ಲಿನ ಅಧಿಕ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ರಕ್ತದಲ್ಲಿನ ಅಧಿಕ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ಇದರಲ್ಲಿರುವ ಮೆಗ್ನೀಶಿಯಂ ರಕ್ತದಲ್ಲಿನ ಅಧಿಕ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ವಿಟಮಿನ್ ಇ ಹಾಗೂ ವಿವಿಧ ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರಲು ನೆರವಾಗುತ್ತದೆ. ಕೆಲವು ಅಧ್ಯಯನಗಳಲ್ಲಿ ಕಂಡುಕೊಂಡಂತೆ ಈ ತೈಲದಿಂದ ತಯಾರಾದ ಆಹಾರವನ್ನು ಮಧುಮೇಹಿಗಳಿಗೆ ಒದಗಿಸಿದಾಗ ಅವರ ರಕ್ತದೊತ್ತಡದ ಮಟ್ಟದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ.

ತ್ವಚೆಯ ಪ್ರಯೋಜನಗಳು

ತ್ವಚೆಯ ಪ್ರಯೋಜನಗಳು

ಎಳ್ಳಿನ ಬಳಕೆಯಿಂದ ತ್ವಚೆಗೆ ತೇವಕಾರಕ ಫಲಿತಾಂಶ ದೊರಕುತ್ತದೆ. ಈ ಮೂಲಕ ತ್ವಚೆ ನುಣುಪಾಗಿ ಹಾಗೂ ನೆರಿಗೆಗಳಿಲ್ಲದೇ ಇರಲು ನೆರವಾಗುತ್ತದೆ. ತ್ವಚೆಯ ಹಲವಾರು ತೊಂದಗಳಿಗೆ ಎಳ್ಳೆಣ್ಣೆ ಉತ್ತಮ ಪರಿಹಾರವಾಗಿದೆ ಹಾಗೂ ಇದೊಂದು ನೈಸರ್ಗಿಕ ಸೂರ್ಯಕಿರಣ ವಿಕರ್ಷಕವೂ ಆಗಿದೆ. ಎಳ್ಳೆಣ್ಣೆ ಚರ್ಮದ ಸೂಕ್ಷ್ಮರಂಧ್ರಗಳಲ್ಲಿ ಸುಲಭವಾಗಿ ಇಳಿಯುವ ಮೂಲಕ ಕೆಳಪದರಕ್ಕೆ ಶೀಘ್ರವಾಗಿ ತಲುಪುತ್ತದೆ ಹಾಗೂ ಚರ್ಮದ ಆಳದಿಂದ ಪೋಷಣೆ ನೀಡುವ ಮೂಲಕ ತ್ವಚೆಯನ್ನು ಒಣಗುವುದರಿಂದ ಹಾಗೂ ಬಿರುಕುಗಳಿಂದ ರಕ್ಷಿಸುತ್ತದೆ.

ಮೂಳೆಗಳ ಬೆಳವಣಿಗೆ ಹೆಚ್ಚಿಸುತ್ತದೆ

ಮೂಳೆಗಳ ಬೆಳವಣಿಗೆ ಹೆಚ್ಚಿಸುತ್ತದೆ

ಎಳ್ಳೆಣ್ಣೆಯಲ್ಲಿರುವ ಕ್ಯಾಲ್ಸಿಯಂ ಮೂಳೆಗಳು ದೃಢಗೊಳ್ಳಲು ಅಗತ್ಯವಾದ ಖನಿಜವಾಗಿದೆ. ಅಲ್ಲದೇ ಜೊತೆಗೆ ತಾಮ್ರ, ಸತು ಮತ್ತು ಮೆಗ್ನೀಶಿಯಂಗಳೂ ಮೂಳೆಗಳ ದೃಢತೆ ಹೆಚ್ಚಿಸಲು ನೆರವಾಗುತ್ತವೆ. ಇದೇ ಕಾರಣಕ್ಕೆ ಆಯುರ್ವೇದ ಮೂಳೆಗಳ ದೃಢತೆಗೆ ಬಲಸಲಾಗುವ ಮಸಾಜ್ ಎಣ್ಣೆಯಾಗಿ ಎಳ್ಳೆಣ್ಣೆಯನ್ನು ಬಳಸುತ್ತದೆ. ಮೂಳೆಗಳ ಮೇಲೆ ಮಾಡಿದ ಎಳ್ಳೆಣ್ಣೆಯ ಮಸಾಜ್ ಮೂಳೆಗಳನ್ನು ಗಟ್ಟಿಗೊಳಿಸುವುದರ ಜೊತೆಗೇ ಬಹಳ ಹಳೆಯ ಮೂಳೆಯ ಶಿಥಿಲತೆಯನ್ನೂ ಸರಿಪಡಿಸಲು ನೆರವಾಗುತ್ತದೆ.

ಹಲ್ಲುಗಳ ತೊಂದರೆಯನ್ನು ಸರಿಪಡಿಸುತ್ತದೆ

ಹಲ್ಲುಗಳ ತೊಂದರೆಯನ್ನು ಸರಿಪಡಿಸುತ್ತದೆ

ಬಾಯಿಯ ಮತ್ತು ಹಲ್ಲುಗಳ ಸ್ವಚ್ಛತೆಗೆ ಎಳ್ಳೆಣ್ಣೆಯನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಾ ಬರಲಾಗಿದೆ. ಬಾಯಿಯಲ್ಲಿ ಕೊಂಚ ಎಳ್ಳೆಣ್ಣೆಯನ್ನು ಹಾಕಿ ಕೊಂಚ ಹೊತ್ತು ಮುಕ್ಕಳಿಸಿಕೊಳ್ಳುವ ಮೂಲಕ (ಈ ವಿಧಾನಕ್ಕೆ oil pulling ಎಂದು ಕರೆಯುತ್ತಾರೆ) ಬಾಯಿಯ ಸ್ವಚ್ಛತೆ ಹೆಚ್ಚುವುದಲ್ಲದೇ ಹಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಆಹಾರಕಣಗಳನ್ನು ಸೆಳೆದು ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ. ಹಲ್ಲುಗಳು ದೃಢವಾಗುತ್ತದೆ ಹಾಗೂ ಒಟ್ಟಾರೆ ಬಾಯಿಯ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಹೃದಯದ ಆರೋಗ್ಯ ಉಳಿಸಿಕೊಳ್ಳುತ್ತದೆ

ಹೃದಯದ ಆರೋಗ್ಯ ಉಳಿಸಿಕೊಳ್ಳುತ್ತದೆ

ಎಳ್ಳೆಣ್ಣೆಯಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟು ಗುಣವಿದ್ದು ಹೃದಯದ ಮೇಲೆ ಇದು ಧನಾತ್ಮಕ ಪರಿಣಾಮವನ್ನುಂಟುಮಾಡುತ್ತದೆ. ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ರಕ್ತಪರಿಚಲನೆ ಸುಗಮಗೊಳ್ಳಲು ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಸೆಸಮಾಲ್ ಮತ್ತು ಸೆಸಮಿನ್ ಎಂಬ ಕೊಬ್ಬಿನ ಆಮ್ಲಗಳು ರಕ್ತಪರಿಚಲನಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟಗಳನ್ನು ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ.

ಕೂದಲ ಹೊರಮೈಯನ್ನು ಉತ್ತಮಗೊಳಿಸುತ್ತದೆ

ಕೂದಲ ಹೊರಮೈಯನ್ನು ಉತ್ತಮಗೊಳಿಸುತ್ತದೆ

ಎಳ್ಳೆಣ್ಣೆ ಕೂದಲನ್ನು ರಕ್ಷಿಸುತ್ತದೆ ಹಾಗೂ ಪೋಷಿಸುತ್ತದೆ. ಇದರ ಬಳಕೆಯಿಂದ ಸೂರ್ಯನ ರಶ್ಮಿಯಿಂದ ಕೂದಲ ಮೇಲೆ ಆಗುವ ದುಷ್ಟರಿಣಾಮಗಳನ್ನು ತಡೆಯಬಹುದು. ವಿಶೇಷವಾಗಿ ಸೂರ್ಯನ ಅತಿನೇರಳೆ ಕಿರಣಗಳು ಹಾಗೂ ಪರಿಸರ ಮಾಲಿನ್ಯದ ಪರಿಣಾಮಗಳಿಂದ ರಕ್ಷಣೆ ಒದಗಿಸುತ್ತದೆ. ತಲೆಯ ಚರ್ಮ ಹಾಗೂ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ಒದಗಿಸುವ ಮೂಲಕ ಕೂದಲು ಆರೋಗ್ಯಕರ ಹಾಗೂ ಅಕಾಲಿಕ ಕೂದಲು ನೆರೆಯುವುದನ್ನು ತಡೆಯುತ್ತದೆ. ಎಳ್ಳೆಣ್ಣೆಯಿಂದ ತಲೆಯನ್ನು ಮಸಾಜ್ ಮಾಡುವ ಮೂಲಕ ತಲೆಯ ಚರ್ಮದಲ್ಲಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ ಹಾಗೂ ಕೂದಲ ಬೆಳವಣಿಗೆ ಶೀಘ್ರಗೊಳ್ಳುತ್ತದೆ.

ಉದ್ವೇಗ ಹಾಗೂ ಖಿನ್ನತೆ ಕಡಿಮೆ ಮಾಡಲು ನೆರವಾಗುತ್ತದೆ

ಉದ್ವೇಗ ಹಾಗೂ ಖಿನ್ನತೆ ಕಡಿಮೆ ಮಾಡಲು ನೆರವಾಗುತ್ತದೆ

ಎಳ್ಳೆಣ್ಣೆಯ ಬಳಕೆಯಿಂದ ಮನೋಭಾವ ಬದಲಿಸಲು ಸಾಧ್ಯವಾಗುತ್ತದೆ. ಮೆದುಳಿನ ಮೇಲಿನ ಒತ್ತಡ ಹಾಗೂ ಇತರ ಕಾರಣಗಳಿಂದ ಎದುರಾದ ಉದ್ವೇಗ ಹಾಗೂ ಖಿನ್ನತೆಯಿಂದ ಹೊರಬರಲು ಸಾಧ್ಯವಾಗುತ್ತದೆ. ಎಳ್ಳೆಣ್ಣೆಯಿಂದ ರಾತ್ರಿ ಮಲಗುವ ಮುನ್ನ ಪಾದಗಳನ್ನು ಮಸಾಜ್ ಮಾಡಿಕೊಂಡು ಮಲಗುವ ಮೂಲಕ ಸುಖನಿದ್ದೆ ಆವರಿಸಲು ಸಾಧ್ಯವಾಗುತ್ತದೆ. ಈ ಗುಣಗಳನ್ನು ಕಂಡ ನಮ್ಮ ಹಿರಿಯರು ಎಳ್ಳೆಣ್ಣೆಯನ್ನು ಬಹಳ ಹಿಂದಿನಿಂದಲೇ ಇದನ್ನು ಔಷಧೀಯ ರೂಪದಲ್ಲಿ ಬಳಸುತ್ತಾ ಬಂದಿದ್ದಾರೆ. ಈ ಪ್ರಬಲ ಹಾಗೂ ಆರೋಗ್ಯಕರ ಎಣ್ಣೆಯನ್ನು ಬಳಸುವ ಮೂಲಕ ನಮ್ಮ ಹಿರಿಯರು ಹೊಂದಿದ್ದ ಸೌಂದರ್ಯ ಹಾಗೂ ಆರೋಗ್ಯವನ್ನು ನಾವೂ ಪಡೆಯಬಾರದೇಕೆ?

ಗರ್ಭಾವಸ್ಥೆಯಲ್ಲಿರುವ ಗರ್ಭಿಣಿಯರಿಗೆ ಎಳ್ಳಿನ ಎಣ್ಣೆ ಎಷ್ಟು ಒಳ್ಳೆಯದು?

English summary

8 Health Benefits Of Sesame Oil

Sesame oil is extracted from sesame seeds. Sesamum indicum is the scientific name given for sesame seeds and is one of the oils which is used since ancient lore.The use of sesame seeds dates back to the ancient Egyptian era around 1500 B.C, when it was used to treat pain. In China, it is said to have been in use for food and medicinal purposes for more than 3000 years. Sesame seeds, though tiny, are packed with proteins, antioxidants, vitamin E, B complex vitamin, and minerals such as phosphorus, magnesium, and calcium.
Subscribe Newsletter