For Quick Alerts
ALLOW NOTIFICATIONS  
For Daily Alerts

ರಾತ್ರಿ ಮಲಗುವ ಮುನ್ನ ಶುಂಠಿ ಜ್ಯೂಸ್‌ಗೆ ಲಿಂಬೆ ಬೆರೆಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು

By Hemanth
|

ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲಿ ಕಂಡುಬರುವಂತಹ, ಹಲವಾರು ಆರೋಗ್ಯ ಲಾಭ ನೀಡುವಂತಹ ಶುಂಠಿಯು ಗಿಡಮೂಲಿಕೆಯ ಬೇರು. ಖಾದ್ಯಗಳ ರುಚಿ ಹೆಚ್ಚಿಸುವ ಸಲುವಾಗಿ ಇದನ್ನು ಬಳಸಲಾಗುತ್ತದೆ. ಅದೇ ರೀತಿ ಇದನ್ನು ಹಲವಾರು ರೀತಿಯ ಮನೆಮದ್ದುಗಳನ್ನು ಬಳಸುವರು. ಶುಂಠಿಯು ತೂಕ ತಗ್ಗಿಸಲು, ಜೀರ್ಣಕ್ರಿಯೆ ಸುಧಾರಣೆ, ಚಯಾಪಚಯಾ ಕ್ರಿಯೆ ಹೆಚ್ಚಿಸಲು, ಕೊಬ್ಬು ದಹಿಸಲು ಪ್ರಮುಖವಾಗಿ ನೆರವಾಗುವುದು. ಇದರೊಂದಿಗೆ ಲಿಂಬೆರಸ ಸೇರಿಸಿಕೊಂಡರೆ ಏನಾಗಬಹುದು ಎಂದು ಯೋಚಿಸಿ.

ಆಗ ನಿಮಗೆ ಅದ್ಭುತವಾದ ಫಲಿತಾಂಶ ಸಿಗುವುದು ಖಚಿತ. ಲಿಂಬೆಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಗಳು ಹಲವಾರು ರೀತಿಯಿಂದ ಆರೋಗ್ಯಕ್ಕೆ ನೆರವಾಗುವುದು. ಈ ಲೇಖನದಲ್ಲಿ ಲಿಂಬೆರಸದೊಂದಿಗೆ ಶುಂಠಿರಸ ಬೆರೆಸಿಕೊಂಡು ರಾತ್ರಿ ವೇಳೆ ಕುಡಿದರೆ ಏನಾಗುತ್ತದೆ ಎಂದು ನಾವು ಹೇಳಲಿದ್ದೇವೆ. ಶುಂಠಿಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಜೀರ್ಣಕ್ರಿಯೆಗೆ ನೆರವಾಗುವುದು. ನೈಸರ್ಗಿಕವಾಗಿ ದೇಹದ ತೂಕ ಕಡಿಮೆ ಮಾಡುವ ಲಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ನಮ್ಮ ದೇಹದಲ್ಲಿರುವಂತಹ ಕಲ್ಮಷ ಮತ್ತು ವಿಷಕಾರಿ ಅಂಶವನ್ನು ಹೊರಹಾಕುವುದು, ದ್ರವ ಶೇಖರಣೆ ವಿರುದ್ಧ ಹೋರಾಡುವುದು ಮತ್ತು ಹೊಟ್ಟೆಯ ಊತ ಕಡಿಮೆ ಮಾಡುವುದು.

benefits of ginger juice with lemon in the night

ಶುಂಠಿ ಮತ್ತು ಲಿಂಬೆಯಿಂದ ತೂಕ ಕಳೆದುಕೊಳ್ಳಲು ಸಾಧ್ಯವೇ?

ಈ ಎರಡು ಸಾಮಗ್ರಿಗಳಲ್ಲಿ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕುವ ಗುಣಗಳು ಇವೆ. ಇದರಿಂದ ನೀವು ಇದನ್ನು ತೂಕ ಇಳಿಸಿಕೊಳ್ಳಲು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದಾಗಿದೆ.
ಶುಂಠಿ ಮತ್ತು ಲಿಂಬೆ ನೀರಿನ ಲಾಭಗಳು ಏನು?

1. ಪ್ರತಿರೋಧಕ ಶಕ್ತಿ ಹೆಚ್ಚಳ

ಮಳೆಗಾಲ ಮತ್ತು ಚಳಿಗಾಲದಲ್ಲಿ ಗಾಳಿಯಲ್ಲಿ ಸೂಕ್ಷ್ಮಾಣು ಜೀವಿಗಳು ಹೆಚ್ಚಿರುವ ಕಾರಣದಿಂದಾಗಿ ಅನಾರೋಗ್ಯ ಕಾಡುವುದು ಹೆಚ್ಚು. ಇದರಿಂದ ಶೀತ ಹಾಗೂ ಜ್ವರ ಕಾಡುವುದರಿಂದ ನಮ್ಮನ್ನು ನಾವು ಕಾಪಾಡಲು ಸರಿಯಾದ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಆಹಾರ ಕ್ರಮದಲ್ಲಿ ಶುಂಠಿ ಮತ್ತು ಲಿಂಬೆ ರಸ ಸೇರಿಸಿ. ಇದರಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದರಿಂದ ಅದು ಬಾಹ್ಯ ಮತ್ತು ಒಳಗಿನ ಬ್ಯಾಕ್ಟೀರಿಯಾ ಕೊಲ್ಲುವ ಶಕ್ತಿ ಹೊಂದಿದೆ.

2. ಕೆರಳಿಸುವ ಕರುಳಿನ ಸಹಲಕ್ಷಣಗಳು(ಐಬಿಡಿ) ಇರುವವರಿಗೆ ಶುಂಠಿ ಸಹಕಾರಿ

ಐಬಿಡಿಯಿಂದಾಗಿ ಸೆಳೆತ, ವಾಕರಿಕೆ, ವಾಂತಿ, ಭೇದಿ ಮತ್ತು ಇತರ ಜೀರ್ಣಕ್ರಿಯೆ ಸಮಸ್ಯೆ ಕಾಣಿಸುವುದು. ಈ ಲಕ್ಷಣಗಳನ್ನು ತಡೆಯಲು ವೈದ್ಯರು ಕೂಡ ಶುಂಠಿಯನ್ನು ರೋಗಿಗಳಿಗೆ ಸಲಹೆ ಮಾಡುವರು. ಅದಾಗ್ಯೂ, ಈ ಲಕ್ಷಣಗಳನ್ನು ಸಂಪೂರ್ಣವಾಗಿ ಶಮನಗೊಳಿಸಲು ಶುಂಠಿ ಎಷ್ಟು ನೆರವಾಗುತ್ತದೆ ಎಂದು ತಿಳಿದಿಲ್ಲ.

3. ಚಯಾಪಚಾಯ ಹೆಚ್ಚಿಸುವುದು

ಶುಂಠಿಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವುದು. ಶುಂಠಿ ಮತ್ತು ಲಿಂಬೆ ಜತೆಯಾಗಿ ಸೇರಿಸಿದಾಗ ಇದು ಚಯಾಪಚಾಯ ಕ್ರಿಯೆಯನ್ನು ದ್ವಿಗುಣಗೊಳಿಸುವುದು. ಶುಂಠಿಯು ಚಯಾಪಚಾಯ ಕ್ರಿಯೆಗೆ ವೇಗ ನೀಡಿ ಹೊಟ್ಟೆಯು ಹೆಚ್ಚು ಆಮ್ಲ ಬಿಡುಗಡೆ ಮಾಡುವಂತೆ ಮಾಡುವುದು. ಇದರಿಂದ ಹಸಿವು ಹೆಚ್ಚಾಗುವುದು ಮತ್ತು ತೂಕ ಹೆಚ್ಚಿಸಲು ನೆರವಾಗುವುದು. ಇನ್ನೊಂದು ಬದಿಯಲ್ಲಿ ತೂಕ ಕಳೆದುಕೊಳ್ಳಲು ಬಯಸುವವರಿಗೂ ಇದು ಸಹಕಾರಿ. ಹೊಟ್ಟೆಯೊಳಗಡೆ ಆಮ್ಲವು ಚಯಾಪಚಾಯ ಹೆಚ್ಚಿಸುವುದು. ಇದರಿಂದ ಕ್ಯಾಲರಿ ಮತ್ತು ಕೊಬ್ಬು ದಹಿಸುವುದು.

4. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ

ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವು ಒಮ್ಮೆಲೇ ಏರಿಕೆಯಾಗುವುದು ಸಾಮಾನ್ಯ ವಿಚಾರ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಲು ಶುಂಠಿಯು ತುಂಬಾ ಪರಿಣಾಮಕಾರಿಯಾಗಿದೆ. ಇದು ರಕ್ತದಲ್ಲಿನ ಅಧಿಕ ಸಕ್ಕರೆ ಮತ್ತು ಕಡಿಮೆ ಸಕ್ಕರೆ ಮಟ್ಟ ಕಾಪಾಡುವುದು.

ಈಗ ಲಿಂಬೆಯ ಲಾಭಗಳ ಬಗ್ಗೆ ತಿಳಿಯುವ

*ಲಿಂಬೆಯು ಕಿಡ್ನಿ ಕಲ್ಲು ಬರದಂತೆ ತಡೆಯುವುದು

ರಾತ್ರಿ ವೇಳೆ ಶುಂಠಿ ಮತ್ತು ಲಿಂಬೆ ಜ್ಯೂಸ್ ಕುಡಿದರೆ ಅದರಿಂದ ಕಿಡ್ನಿಯಲ್ಲಿ ಕಲ್ಲು ಆಗುವುದನ್ನು ತಡೆಯಬಹುದು. ಲಿಂಬೆಯು ಮೂತ್ರದಲ್ಲಿ ಸಿಟ್ರಸ್ ಮಟ್ಟವನ್ನು ಹೆಚ್ಚಿಸುವುದು. ಇದರಿಂದ ಕಿಡ್ನಿಯಲ್ಲಿ ಜಮೆಯಾಗಿರುವಂತಹ ಕ್ಯಾಲ್ಸಿಯಂನ ಕಲ್ಲುಗಳು ಒಡೆಯುವುದು. ಈ ಕ್ಯಾಲ್ಸಿಯಂ ಕಲ್ಲನ್ನು ಕಿಡ್ನಿ ಕಲ್ಲುಗಳು ಎನ್ನಲಾಗುತ್ತದೆ.

*ಗಂಟಲು ಊತಕ್ಕೆ ಒಳ್ಳೆಯದು

ಶುಂಠಿ ಮತ್ತು ಲಿಂಬೆ ಜ್ಯೂಸ್ ಮಳೆಗಾಲ ಮತ್ತು ಚಳಿಗಾಲಕ್ಕೆ ತುಂಬಾ ಒಳ್ಳೆಯದು. ಈ ವೇಳೆ ಪ್ರತಿರೋಧಕ ಶಕ್ತಿಯು ಕಡಿಮೆ ಇರುವುದು. ಲಿಂಬೆ ಹಾಕಿರುವಂತಹ ಶುಂಠಿ ಚಹಾ ಕುಡಿದರೆ ಅದು ಶೀತ, ಕೆಮ್ಮು ಮತ್ತು ಗಂಟಲಿನ ಊತ ಕಡಿಮೆ ಮಾಡಲು ನೆರವಾಗುವುದು.

*ತೂಕ ಕಳೆದುಕೊಳ್ಳಲು

ಲಿಂಬೆಯು ತೂಕ ಕಳೆದುಕೊಳ್ಳಲು ಸಹಕಾರಿ ಮತ್ತು ಜೀರ್ಣಕ್ರಿಯೆಗೆ ತುಂಬಾ ಲಾಭಕಾರಿ. ಲಿಂಬೆಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಜೀರ್ಣಕ್ರಿಯೆ ವ್ಯವಸ್ಥೆ ಮತ್ತು ಯಕೃತ್ ನ್ನು ಶುದ್ಧೀಕರಿಸುವುದು. ನೀವು ತೂಕ ಇಳಿಸಿಕೊಳ್ಳಲು ಬಯಸಿದ್ದರೆ ಆಗ ನೀವು ಆಹಾರ ಕ್ರಮದಲ್ಲಿ ಲಿಂಬೆ ಸೇರಿಸಿಕೊಳ್ಳಿ ಮತ್ತು ಇದರಿಂದ ದೇಹದಲ್ಲಿರುವ ಕಲ್ಮಷ ಹಾಗೂ ವಿಷ ಹೊರಬರುವುದು ಮತ್ತು ಹೊಟ್ಟೆಯ ಕೊಬ್ಬು ಕರಗುವುದು.

*ಲಿಂಬೆ ರಸದೊಂದಿಗೆ ಕ್ಷಾರೀಯವಾಗಿರಿ

ನಿಮ್ಮ ದೇಹವು ಕ್ಷಾರೀಯವಾಗಿದ್ದರೆ ಆಗ ಆಸಿಡಿಟಿಗೆ ಹೋಲಿಸಿದರೆ ಇದು ಸರಿಯಾದ ಸಮತೋಲನ. ನಿಮ್ಮ ದೇಹವು ತುಂಬಾ ಆಸಿಡಿಟಿಯಾಗಿದ್ದರೆ ಆಗ ಅದು ವಿಷಕಾರಿಯಾಗಿ ಮೊಡವೆ, ತೂಕ ಹೆಚ್ಚಳ, ಶಕ್ತಿ ಕುಂದುವುದು ಇತ್ಯಾದಿಗಳಿಗೆ ಕಾರಣವಾಗುವುದು. ಲಿಂಬೆ ಹೊಂದಿರುವಂತಹ ಜ್ಯೂಸ್ ದೇಹದಲ್ಲಿ ಪಿಎಚ್ ಮಟ್ಟ ಕಾಪಾಡಲು ನೆರವಾಗುವುದು. ಇದರಿಂದ ಚರ್ಮವು ಶುದ್ಧವಾಗಿರುವುದು, ಹೆಚ್ಚಿನ ಶಕ್ತಿ ಮತ್ತು ಆರೋಗ್ಯಕರ ತೂಕವು ನಿಮ್ಮದಾಗುವುದು.

*ಲಿಂಬೆ ಮತ್ತು ಶುಂಠಿ ಜ್ಯೂಸ್ ಮಾಡಿಕೊಳ್ಳುವುದು ಹೇಗೆ

ಲಿಂಬೆರಸ ಮಾಡಿಕೊಂಡು ಅದಕ್ಕೆ ಸಿಹಿಗೆ ಜೇನುತುಪ್ಪ ಹಾಕಿ. ಎರಡನೇಯದಾಗಿ ಒಂದು ಚಮಚ ತುರಿದ ಶುಂಠಿ ಇದಕ್ಕೆ ಹಾಕಿ. ರಾತ್ರಿ ವೇಳೆ ಇದನ್ನು ಕುಡಿಯಿರಿ. ಈ ಲೇಖನವು ನಿಮಗೆ ಇಷ್ಟವಾಗಿದ್ದರೆ, ಇದರ ಲಾಭ ನಿಮ್ಮ ಪ್ರೀತಿಪಾತ್ರರಿಗೂ ಸಿಗಬೇಕಿದ್ದರೆ ಇದನ್ನು ಶೇರ್ ಮಾಡಿ. ನಿಮ್ಮ ಅನಿಸಿಕೆಗಳಿದ್ದರೆ ಕಮೆಂಟ್ ಬಾಕ್ಸ್ ಗೆ ಹಾಕಿ.

ಶುಂಠಿ-ಲಿಂಬೆ ರಸದ ಜ್ಯೂಸ್ ತಯಾರಿಸುವ ಇನ್ನೊಂದು ವಿಧಾನ

ಶುಂಠಿಯ ಆರೋಗ್ಯವಂತ ಭಾಗದ ಸಿಪ್ಪೆ ಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ. ಈ ತುಂಡುಗಳನ್ನು ಮಿಕ್ಸಿಯಲ್ಲಿ ಹಾಕಿ ತುಂಡುಗಳು ಅರ್ಧ ಮುಳುಗುವಷ್ಟು ನೀರು ಹಾಕಿ ಸುಮಾರು ಒಂದರಿಂದ ಎರಡು ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ನೀರನ್ನು ಚಹಾ ಸಾಣಿಸುವ ಜರಡಿಯಲ್ಲಿ ಸೋಸಿ ನಾರನ್ನು ಹೊರತೆಗೆಯಿರಿ. ಈ ನೀರಿಗೆ ನಿಮಗೆ ಇಷ್ಟವಾದ ಸ್ವಾದವನ್ನು ಸೇರಿಸಿ. ಉಪ್ಪು, ಮೆಣಸಿನ ಪುಡಿ ಲಿಂಬೆ ಸೇರಿಸಿ ಖಾರವಾದ ಜ್ಯೂಸ್ ಮಾಡಬಹುದು. ಅಥವಾ ಬೆಲ್ಲ ಅಥವಾ ಸಕ್ಕರೆ ಸೇರಿಸಿ ಸಿಹಿಯಾದ ಜ್ಯೂಸ್ ಸಹಾ ಮಾಡಬಹುದು. ಅಗತ್ಯಕ್ಕೆ ತಕ್ಕಷ್ಟು ನೀರು ಸೇರಿಸಿ ತಣ್ಣಗಿರುವಂತೆಯೇ

English summary

Benefits Of Drinking Ginger Juice With Lemon In The Night

Ginger is a well-known spice which is widely used in cooking for bringing in flavour and taste; it is also used for medicinal purposes. On the other hand, lemon is rich in antioxidants that promote health in many ways. In this article, we will be writing about the benefits of drinking ginger juice with lemon in the night.
Story first published: Friday, July 6, 2018, 17:16 [IST]
X
Desktop Bottom Promotion