For Quick Alerts
ALLOW NOTIFICATIONS  
For Daily Alerts

ಮಾನಸಿಕ ಒತ್ತಡ ಅತಿಯಾದರೆ ಈ ಏಳು ಬಗೆಯ ಕಾಯಿಲೆಗಳು ನಿಮ್ಮನ್ನು ಕಾಡಬಹುದು!

|

ಒತ್ತಡ, ಇದು ಸರ್ವವ್ಯಾಪಿ. ಪ್ರತಿಯೊಬ್ಬರಿಗೂ ತಮ್ಮದೇ ಆದ ಮಾನಸಿಕ ಒತ್ತಡಗಳಿರುತ್ತವೆ ಹಾಗೂ ಒತ್ತಡವಿರಲೂಬೇಕು. ಆದರೆ ವಿಶ್ವದ ಒಟ್ಟು ಜನತೆಯ 80% ಕ್ಕೂ ಹೆಚ್ಚು ಜನರರು ನಿತ್ಯವೂ ಅಗತ್ಯಕ್ಕೂ ಹೆಚ್ಚು ಒತ್ತಡಕ್ಕೊಳಗಾಗುತ್ತಿದ್ದಾರೆ ಎಂದು ವರದಿ ಮಾಡಲಾಗಿದೆ. ಅದರಲ್ಲೂ ಹದಿನೈದರಿಂದ ಇಪ್ಪತ್ತೈದರ ಹರೆಯದಲ್ಲಿರುವ ವ್ಯಕ್ತಿಗಳು ಮಾನಸಿಕ ಒತ್ತಡವನ್ನು ಹೇಗೆ ನಿರ್ವಹಿಸಬೇಕೆಂಬ ತರಬೇತಿಯನ್ನು ಪಡೆಯುವುದು ಅವಶ್ಯ ಹಾಗೂ ಈ ವಯಸ್ಸಿನಲ್ಲಿ ಒತ್ತಡದ ನಿರ್ವಹಣೆಯನ್ನು ಕಲಿಯದಿದ್ದರೆ ಮುಂದಿನ ದಿನಗಳಲ್ಲಿ ಇದನ್ನು ನಿರ್ವಹಿಸುವುದು ಕಷ್ಟ.

ಇದರಲ್ಲಿ ಬಹುತೇಕ ಸಂದರ್ಭಗಳು ಕೆಲಸದ ಸ್ಥಳದಲ್ಲಿಯೇ ಆಗುತ್ತವೆ ಎಂದು ವರದಿ ತಿಳಿಸುತ್ತದೆ. ಏರುತ್ತಲೇ ಹೋಗುವ ಒತ್ತಡದ ಪ್ರಮಾಣಕ್ಕೆ ಹೆಚ್ಚಾಗಿ ಯುವಜನತೆಯೇ ಗುರಿಯಾಗುತ್ತಾರೆ ಎಂದೂ ಹೇಳಲಾಗಿದೆ. ಅಲ್ಲದೇ ಒತ್ತಡ ಸಾಂಕ್ರಾಮಿಕ! ಹೌದು, ನೀವು ಸರಿಯಾಗಿಯೇ ಓದಿದಿರಿ, ಈ ಬಗ್ಗೆ ನಡೆದ ಅಧ್ಯಯನದಲ್ಲಿ ಮಾನಸಿಕ ಒತ್ತಡಕ್ಕೆ ಒಳಗಾಗ ವ್ಯಕ್ತಿಯ ಒಡನಾಟದಲ್ಲಿರುವವರ ಮೆದುಳಿನಲ್ಲಿನ ನರತಂತುಗಳೂ ಒತ್ತಡಕ್ಕೆ ತಕ್ಕಂತೆಯೇ ವರ್ತಿಸುತ್ತಾ ಆ ವ್ಯಕ್ತಿಯ ಒತ್ತಡದೊಂದಿಗೇ ವರ್ತಿಸಲು ತೊಡಗುತ್ತಾರೆ.

how does stress affect the body

ಹಾಗಾದರೆ ಒತ್ತಡ ಎಂದರೇನು?

ವ್ಯಕ್ತಿಗೆ ಎದುರಾಗುವ ಸಂದರ್ಭ, ಅಪಾಯ ಅಥವಾ ಬೆದರಿಕೆಗೆ ದೇಹ ನೀಡುವ ಪ್ರತಿಕ್ರಿಯೆಯೇ ಒತ್ತಡ! ಒಂದರ್ಥದಲ್ಲಿ ಇದು ನಮ್ಮ ದೇಹವನ್ನು ಅಪಾಯರಿಂದ ರಕ್ಷಿಸುವುದೂ ಆಗಿದೆ. ಒತ್ತಡವಿದ್ದರೆ ಹೊಸ ಸವಾಲುಗಳನ್ನು ಸ್ವೀಕರಿಸಲು, ಏಕಾಗ್ರತೆ ಪಡೆಯಲು, ಜಾಗರೂಕರಾಗಿರಲು ಹಾಗೂ ಉಲ್ಲಾಸದಿಂದ ಆರೋಗ್ಯಕರವಾಗಿ ಕಾರ್ಯವನ್ನು ಪೂರ್ಣಗೊಳಿಸಲು ನೆರವಾಗುತ್ತದೆ. ಹಾಗಾಗಿ ಒತ್ತಡಕ್ಕೂ ಒಂದು ಮಿತಿ ಇದೆ, ಯಾವಾಗ ಒತ್ತಡ ಈ ಮಿತಿಯನ್ನು ಮೀರುತ್ತದೆಯೋ ಆಗ ಉದ್ವೇಗ, ಚಡಪಡಿಕೆ, ತಲೆನೋವು, ಎದೆನೋವು, ಖಿನ್ನತೆ, ಲೈಂಗಿಕ ಬಯಕೆಯಿಂದ ವಂಚಿತರಾಗುವುದು, ಸುಸ್ತು, ಸಿಟ್ಟು, ಸಿಡಿಮಿಡಿ ಮೊದಲಾದವು ಎದುರಾಗುತ್ತವೆ. ಮಾನಸಿಕ ಒತ್ತಡ ಹೆಚ್ಚಾದರೆ ಇದರಿಂದ ದೇಹದ ಎಲ್ಲಾ ವ್ಯವಸ್ಥೆಗಳೂ ಪ್ರಭಾವ ಕ್ಕೊಳಗಾಗುತ್ತವೆ, ಹೇಗೆಂದರೆ:

1. ರೋಗ ನಿರೋಧಕ ವ್ಯವಸ್ಥೆ

2. ಸಂತಾನೋತ್ಪತ್ತಿ ವ್ಯವಸ್ಥೆ

3. ಸ್ನಾಯುಗಳ ವ್ಯವಸ್ಥೆ

4. ಜೀರ್ಣ ವ್ಯವಸ್ಥೆ

5. ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆ

6. ಉಸಿರಾಟದ ವ್ಯವಸ್ಥೆ

7. ಕೇಂದ್ರ ನರಮಂಡಲ ವ್ಯವಸ್ಥೆ

1.ರೋಗ ನಿರೋಧಕ ವ್ಯವಸ್ಥೆ:

ನಾವೆಲ್ಲರೂ ಈಗಾಗಲೇ ತಿಳಿದಿರುವಂತೆ ಒತ್ತಡದ ಸಮಯದಲ್ಲಿ ರೋಗ ನಿರೋಧಕ ವ್ಯವಸ್ಥೆ ತಕ್ಷಣವೇ ಕಾರ್ಯನಿರತವಾಗಲು ಪ್ರಚೋದನೆ ಪಡೆಯುತ್ತದೆ. ಸೋಂಕು ಹರಡುವ ಅಥವಾ ತೆರೆದ ಗಾಯಗಳಾದ ಸಂದರ್ಭದಲ್ಲಿ ಇದಕ್ಕೆ ತಕ್ಷಣವೇ ಏನಾದರೂ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಎದುರಾಗುತ್ತದೆ. ಒಂದು ವೇಳೆ ಕಾಲಕ್ರಮೇಣ ಈ ಒತ್ತಡ ಸತತವಗುತ್ತಾ ಹೋದರೆ ಈ ಪ್ರಭಾವ ವಿರುದ್ದ ದಿಕ್ಕಿನತ್ತ ಹೊರಳಬಹುದು. ಸಾಮಾನ್ಯವಾಗಿ ಸದಾ ಮಾನಸಿಕ ಒತ್ತಡಲ್ಲಿಯೇ ಇರುವ ವ್ಯಕ್ತಿಗಳು ಹೆಚ್ಚು ಹೆಚ್ಚು ಶೀತ ಮತ್ತು ಫ್ಲೂ ಜ್ವರಕ್ಕೆ ಸುಲಭವಾಗು ತುತ್ತಾಗುತ್ತಾರೆ. ಮಾನಸಿಕ ಒತ್ತಡದ ಸಂದರ್ಭದಲ್ಲಿ ಬಿಡುಗಡೆಯಾಗುವ ಕೆಲವು ರಸದೂತಗಳು ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತವೆ ಹಾಗೂ ತಕ್ಷಣವೇ ಸ್ಪಂದಿಸಲು ವಿಫಲಗೊಳ್ಳುತ್ತವೆ. ಚಿಕ್ಕ ಪುಟ್ಟ ಕಾಯಿಲೆಗಳಿಂದ ಚೇತರಿಸಿಕೊಳ್ಳಳು ಸಹಾ ದೇಹ ಅಗತ್ಯಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.್

2. ಸಂತಾನೋತ್ಪತ್ತಿ ವ್ಯವಸ್ಥೆ:

ಮಾನಸಿಕ ಒತ್ತಡದ ಪ್ರಭಾವದಲ್ಲಿ ಟೆಸ್ಟೋಸ್ಟೆರಾನ್ ರಸದೂತ ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ ಹಾಗೂ ಇದರಿಂದ ಲಭಿಸಬೇಕಾಗಿದ್ದ ಲೈಂಗಿಕ ಬಯಕೆಗಳೂ ಇಲ್ಲವಾಗುತ್ತವೆ. ಇದು ಹೇಗೆ ಎಂದರೆ ಒತ್ತಡಕ್ಕೆ ಒಳಗಾದ ಶರೀರ ಯಾವಾಗಲು ಸುಸ್ತಾಗಿದ್ದು ಹೆಚ್ಚಿನ ಶಕ್ತಿಯ ಅಗತ್ಯತೆಯಲ್ಲಿರುತ್ತದೆ. ಕೆಲವು ವಿಪರೀತ ಸಂದರ್ಭಗಳಲ್ಲಿ, ಈ ಸಂದರ್ಭದಲ್ಲಿ ನಿಮಿರುದೌರ್ಬಲ್ಯಕ್ಕೂ ಕಾರಣವಾಗಬಹುದು. ಮಹಿಳೆಯರಲ್ಲಿ ಮಾನಸಿಕ ಒತ್ತಡ ಅನಿಯಮಿತ ಮಾಸಿಕ ರಜಾದಿನ ಹಾಗೂ ಸಾಮಾನ್ಯಕ್ಕೂ ಹೆಚ್ಚಿನ ನೋವು ಅನುಭವಿಸುತ್ತಾರೆ ಹಾಗೂ ಲೈಂಗಿಕ ಬಯಕೆಗಳ ಉದ್ದೀಪನವಾಗದೇ ಹೋಗಬಹುದು.

3. ಸ್ನಾಯುಗಳ ವ್ಯವಸ್ಥೆ:

ಮಾನಸಿಕ ಒತ್ತಡದ ಸಂದರ್ಭದಲ್ಲಿ ದೇಹದ ಪ್ರತಿ ಸ್ನಾಯುಗಳೂ ಇದರ ಪ್ರಭಾವಕ್ಕೆ ಒಳಗಾಗುತ್ತವೆ ಹಾಗು ಸೆಟೆದುಕೊಂಡೇ ಇರುತ್ತವೆ. ಒತ್ತಡದಿಂದ ನಿರಾಳರಾದ ಬಳಿಕವೇ ಸ್ನಾಯುಗಳೂ ಸಡಿಲಗೊಳ್ಳುತ್ತವೆ. ಆದರೆ ಒತ್ತಡ ಸತತವಾಗಿದ್ದರೆ ಸ್ನಾಯುಗಳೂ ಸತತವಾಗಿಯೇ ಸೆಳೆತದ ಪ್ರಭಾವದಲ್ಲಿಯೇ ಇರುತ್ತವೆ. ಪರಿಣಾಮವಾಗಿ ತಲೆನೋವು, ಸಂಧುಗಳಲ್ಲಿ ನೋವು, ಸ್ನಾಯುಗಳ ಸೆಡೆತ, ಬೆನ್ನು ನೋವು, ಭುಜ ನೋವು ಅಥವಾ ಇಡಿಯ ದೇಹದಲ್ಲಿ ನೋವು ಆವರಿಸುತ್ತದೆ. ಈ ಸಂದರ್ಭವಿದ್ದರೆ ವ್ಯಾಯಾಮ ಮಾಡಬಾರದು ಹಾಗೂ ತಕ್ಷಣವೇ ವೈದ್ಯಕೀಯ ನೆರವನ್ನು ಪಡೆಯಬೇಕು.

4. ಜೀರ್ಣ ವ್ಯವಸ್ಥೆ:

ದೇಹದಲ್ಲಿ ಆಹಾರ ಜೀರ್ಣವ್ಯವಸ್ಥೆಯ ಮೂಲಕ ಹಲವು ಹಂತಗಳಲ್ಲಿ ಚಲಿಸುತ್ತದೆ. ಮಾನಸಿಕ ಒತ್ತಡ ಈ ಚಲನೆಯ ಮೇಲೂ ತನ್ನ ಪ್ರಭಾವ ಬೀರುತ್ತದೆ. ಪರಿಣಾಮವಾಗಿ ಮಲಬದ್ದತೆ, ಅತಿಸಾರ, ವಾಂತಿ, ಹೊಟ್ಟೆಯಲ್ಲಿ ನೋವು, ವಾಕರಿಕ ಮೊದಲಾದವು ಎದುರಾಗುತ್ತವೆ. ಮಾನಸಿಕ ಒತ್ತಡದಲ್ಲಿದ್ದಾಗ, ಯಕೃತ್ ಅಗತ್ಯಕ್ಕೂ ಹೆಚ್ಚು ಸಕ್ಕರೆಯನ್ನು ಒಡೆಯುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಧಿಡೀರನೇ ಏರುತ್ತದೆ. ಏಕೆಂದರೆ ಒತ್ತಡದ ಸಮಯದಲ್ಲಿ ದೇಹಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿದ್ದು ಇದನ್ನು ನಿರ್ವಹಿಸಲು ಹೆಚ್ಚಿನ ಸಕ್ಕರೆಯ ಅಗತ್ಯ ಬೀಳುತ್ತದೆ. ಒಂದು ವೇಳೆ ಈ ಹೆಚ್ಚುವರಿ ಸಕ್ಕರೆ ಒಂದು ಮಿತಿಯನ್ನು ಮೀರಿತೋ, ಆಗ ವ್ಯಕ್ತಿ ಮಧುಮೇಹಕ್ಕೆ ಒಳಗಾಗುವ ಸಾಧ್ಯತೆಯೂ ಅಪಾರವಾಗುತ್ತದೆ. ಈ ಸಮಯದಲ್ಲಿ ಉಸಿರಾಟ ತೀವ್ರವಾಗುವುದು, ಹೃದಯದ ಬಡಿತ ಏರುವುದು ಹಾಗೂ ದೇಹದಲ್ಲಿ ಹೆಚ್ಚು ಸ್ರವಿಸಲ್ಪಡುವ ರಸದೂತಗಳು ಜೀರ್ಣರಸಗಳ ಮೇಲೆ ಪ್ರಭಾವ ಬೀರಿ ಎದೆಯುರಿ, ಹೊಟ್ಟೆಯುರಿ, ಆಮ್ಲೀಯತೆ ಮೊದಲಾದವುಗಳಿಗೂ ಕಾರಣವಾಗಬಹುದು.

5. ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆ:

ಒತ್ತಡದ ಸಮಯದಲ್ಲಿ ಹೃದಯದ ಬಡಿತದ ವೇಗ ಹೆಚ್ಚುತ್ತದೆ! ಒತ್ತಡವನ್ನು ನಿರ್ವಹಿಸಲು ಹೆಚ್ಚಿನ ರಕ್ತದ ಅಗತ್ಯತೆ ಎದುರಾಗುತ್ತದೆ ಹಾಗೂ ಇದನ್ನು ಪೂರೈಸಲು ಹೃದಯ ಬಡಿತವನ್ನೂ ಹೆಚ್ಚಿಸಬೇಕಾಗುತ್ತದೆ. ಪರಿಣಾಮವಾಗಿ ಪ್ರತಿ ಜೀವಕೋಶಗಳೂ ತಮ್ಮ ಗರಿಷ್ಟ ಕ್ಷಮತೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ವಿಶೇಷವಾಗಿ ಸ್ನಾಯುಗಳು ಹೆಚ್ಚಿನ ಆಮ್ಲಜನಕ ಬೇಡುತ್ತವೆ, ಮೆದುಳಿನ ಜೀವಕೋಶಗಳೂಳಿಗೂ ಹೆಚ್ಚಿನ ಆಮ್ಲಜನಕ ಬೇಕಾಗಿದ್ದು ಪರಿಣಾಮವಾಗಿ ರಕ್ತದೊತ್ತಡವೂ ಏರುತ್ತದೆ. ಇವು ಹೃದಯ ಸಂಬಂಧಿ ರೋಗಗಳು ಆವರಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

6.ಉಸಿರಾಟದ ವ್ಯವಸ್ಥೆ

ಒತ್ತಡದ ಸಮಯದಲ್ಲಿ ಬಿಡುಗಡೆಯಾಗುವ ರಸದೂತಗಳು ಉಸಿರಾಟದ ವ್ಯವಸ್ಥೆಯನ್ನೇ ಕಲಸು ಮಲಸು ಮಾಡಿಬಿಡಬಲ್ಲವು. ಈ ಸಮಯದಲ್ಲಿ ಉಸಿರಾಟ ತೀವ್ರವಾಗುವುದನ್ನು ಗಮನಿಸಲಾಗಿದೆ. ಒತ್ತಡದ ಸಮಯದಲ್ಲಿ ಹೆಚ್ಚಿನ ಆಮ್ಲಜನಕವನ್ನು ಹೊತ್ತು ರಕ್ತ ದೇಹದ ವಿವಿಧ ಅಂಗಗಳಿಗೆ ಪೂರೈಸಬೇಕಾಗುತ್ತದೆ. ಅಂದರೆ ಶ್ವಾಸಕೋಶಗಳೂ ತಮ್ಮ ಸಾಮರ್ಥ್ಯಕ್ಕೂ ಮೀರಿ ಹೆಚ್ಚಿನ ಆಮ್ಲಜನಕವನ್ನು ಗಾಳಿಯಿಂದ ಹೀರಿ ನೀಡಬೇಕಾಗುತ್ತದೆ. ಒಂದು ವೇಳೆ ರೋಗಿ ಈಗಾಗಲೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ಈ ಅಗತ್ಯತೆ ಆತನ ಶ್ವಾಸವ್ಯವಸ್ಥೆಗೇ ಮಾರಕವಾಗಿ ಪರಿಣಮಿಸಬಹುದು.

7. ಕೇಂದ್ರ ನರಮಂಡಲ ವ್ಯವಸ್ಥೆ:

ನಮ್ಮ ದೇಹದ ಎಲ್ಲಾ ವ್ಯವಸ್ಥೆಗಳಲ್ಲಿ ಈ ವ್ಯವಸ್ಥೆ ಪ್ರಧಾನವಾಗಿದ್ದು ಬೇರೆಲ್ಲಾ ವ್ಯವಸ್ಥೆಗಳನ್ನು ನಿರ್ವಹಿಸುತ್ತದೆ. ಒತ್ತಡ ಸಮಯದಲ್ಲಿ ದೇಹದ ಎಲ್ಲಾ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸಬೇಕು ಹಾಗೂ ಯಾವ ವ್ಯವಸ್ಥೆಗಳು ಎಷ್ಟರ ಮಟ್ಟಿಗೆ ತಮ್ಮ ಕಾರ್ಯವನ್ನು ಹೆಚ್ಚಿಸಬೇಕು ಎಂದು ನಿರ್ಧರಿಸುತ್ತದೆ. ಮೆದುಳಿನಲ್ಲಿರುವ ಹೈಪೋಥಲಮಸ್ ಎಂಬ ಭಾಗ ಒತ್ತಡದ ಸಮಯದಲ್ಲಿ ಕಾರ್ಟೀಸೋಲ್ ಮತ್ತು ಅಡ್ರಿನಲಿನ್ ಎಂಬ ರಸದೂತಗಳನ್ನು ಥಟ್ಟನೇ ಬಿಡುಗಡೆ ಮಾಡುತ್ತದೆ. ಈ ರಸದೂತಗಳು ದೇಹದದ ವಿವಿಧ ಭಾಗಗಳಿಗೆ ಚಲಿಸಿ ರಕ್ತದಲ್ಲಿ ಹೆಚ್ಚಿನ ಆಮ್ಲಜನಕ ಲಭಿಸುವಂತೆ, ಈ ಆಮ್ಲಜನಕ ಕ್ಷಿಪ್ತ್ರವಾಗಿ ದೇಹದ ವಿವಿಧ ಭಾಗಗಳಿಗೆ ತಲುಪುವಂತೆ ಹಾಗೂ ಕ್ಷಿಪ್ರವಾಗಿ ಅಗತ್ಯತೆಗಳಿಗೆ ಸ್ಪಂದಿಸುವಂತೆ ಮಾಡುತ್ತವೆ. ಒತ್ತಡ ಕಡಿಮೆಯಾದ ಬಳಿಕ ಹೈಪೋಥಲಮಸ್ ಈ ಕ್ರಿಯೆಯನ್ನು ನಿಧಾನಗೊಳಿಸಿ ಸಾಮಾನ್ಯ ಸ್ಥಿತಿಗೆ ಬರುವಂತೆ ಮರುಸೂಚನೆಗಳನ್ನು ನೀಡುತ್ತದೆ. ಅತಿಯಾದ ಒತ್ತಡದ ಭಾರದಲ್ಲಿ ಕೆಲವೊಮ್ಮೆ ದೇಹದ ಅಂಗಗಳು ಆ ಅಗತ್ಯತೆಯನ್ನು ಪೂರೈಸಲಾಗಗೇ ಸೋಲುತ್ತವೆ. ಇದು ಇಡಿಯ ದೇಹಕ್ಕೆ ಮಾರಕವಾಗಿ ಪರಿಣಮಿಸಬಲ್ಲುದು. ಹಾಗಾಗಿ, ಅತಿಯಾದ ಒತ್ತಡದ ಸಂದರ್ಭದಲ್ಲಿ ಕೆಲಸ ಮಾಡುವಷ್ಟೂ ಹೊತ್ತು ದೇಹ ಅಪಾಯದ ಅಂಚಿನಲ್ಲಿಯೇ ಇರುತ್ತದೆ. ಆದ್ದರಿಂದ ಒತ್ತಡ ಮಿತಿಮೀರದಂತಿದ್ದು ಆರೋಗ್ಯಕರ ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವುದು ಅಗತ್ಯ.

ಮಾನಸಿಕ ಒತ್ತಡದಿಂದ ಪಾರಾಗಲು ಕೆಳಗಿನ ವಿಧಾನಗಳು ನೆರವಾಗಬಲ್ಲವು:

* ಈ ಸಂದರ್ಭದಲ್ಲಿ ಧ್ಯಾನ ಮಾಡಿ, ಕನಿಷ್ಟ ಐದು ನಿಮಿಷಗಳವರೆಗಾದರೂ ದೀರ್ಘವಾಗಿ ಉಸಿರಾಡಿ.

* ಒತ್ತಡದ ಸಂದರ್ಭದಲ್ಲಿ ಕ್ಷಿಪ್ರವಾಗಿ ಸ್ಪಂದಿಸದೇ ಆ ಸಂದರ್ಭದಲ್ಲಿ ಪೂರ್ಣವಾಗಿ ಭಾಗಿಯಾಗಿ.

* ಅಗತ್ಯವಿದ್ದರೆ ವೃತ್ತಿಪರರ ಅಥವಾ ಆತ್ಮೀರಯರ ಸಹಾಯವನ್ನು ಪಡೆದುಕೊಳ್ಳಿ.

* ಅಗತ್ಯಕ್ಕೆ ತಕ್ಕಂತೆ ಸ್ಪಂದಿಸಲು ನಿಮ್ಮ ದೇಹವನ್ನು ಆ ಸಂದರ್ಭಕ್ಕೆ ಸೂಕ್ತವಾಗಿ ಬದಲಿಸಿಕೊಳ್ಳಿ

* ನಿಮಗೆ ಈಗಾಗಲೇ ಲಭಿಸಿರುವುದಕ್ಕೆ ಧನ್ಯತೆಯ ಭಾವ ಅನುಭವಿಸಿ ಹಾಗೂ ದೇಹಕ್ಕೆ ಒತ್ತಡದ ಮೂಲಕ ಹಾನಿ ತರಬಹುದಾದ ಅಗತ್ಯತೆಗಳ ಮೋಹ ತ್ಯಜಿಸಿ. ಆದಷ್ಟೂ ಒತ್ತಡರಹಿತರಾಗಿರಿ ಹಾಗೂ ದೇಹವನ್ನು ಉತ್ತಮವಾಗಿ ಪೋಷಿಸಿ. ಅಷ್ಟಕ್ಕೂ ಜೀವಮಾನವಿಡೀ ನಿಮ್ಮೊಂದಿಗೆ ಇರುವ ದೇಹ ಆರೋಗ್ಯಕರವಾಗಿರುವುದು ಎಲ್ಲರ ಪ್ರಮುಖ ಆದ್ಯತೆಯಾಗಬೇಕು.

English summary

7 Ways Stress Affects Your Body And Tips To Get Rid Of It

Did you know stress is contagious and one should avoid it. Having healthy levels of stress aids in making you stay focused, alert & energetic while helping you in meeting challenges. Stress adversely affects your immune system, reproductive system, muscular system, digestive system, cardiovascular system, respiratory system, and central nervous system.
Story first published: Tuesday, July 3, 2018, 7:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more