For Quick Alerts
ALLOW NOTIFICATIONS  
For Daily Alerts

ಗೂಗಲ್ ನಲ್ಲಿ ಆರೋಗ್ಯ ವಿಚಾರಗಳನ್ನು ಓದುವಾಗ ಈ 6 ವಿಚಾರಗಳನ್ನು ನೆನಪಿಟ್ಟುಕೊಳ್ಳಿ

By Sushma Charhra
|

ಒಂದು ವೇಳೆ ನಾವು ಅನಾರೋಗ್ಯಕ್ಕೆ ಬಿದ್ದರೆ, ಮೊದಲು ಏನು ಮಾಡುತ್ತೀವಿ ಹೇಳಿ.. ಈಗೆಲ್ಲ ಅಂತರ್ಜಾಲ ಯುಗ ಅಲ್ವಾ? ಹೆಚ್ಚಿನವರು ಮೊದಲು ಮಾಡುವ ಕೆಲಸ ಗೂಗಲ್ ಮಹಾಶಯನ ಬಳಿ ತಮ್ಮ ಅನಾರೋಗ್ಯದ ವಿಚಾರವನ್ನು ಹುಡುಕಾಡಲು ಶುರು ಮಾಡುತ್ತಾರೆ. ಹೌದು, ಈಗಿನ ನಮ್ಮ ಇಂಟರ್ನೆಟ್ ಜಗತ್ತಿನಲ್ಲಿ ಗೂಗಲ್ ನಮ್ಮ ಅತ್ಯಂತ ಆಪ್ತ ಗೆಳೆಯನಾಗಿಬಿಟ್ಟಿದ್ದಾನೆ ಮತ್ತು ಇತರರಿಗಿಂತಲೂ ಹೆಚ್ಚು ಉತ್ತಮ ಸಲಹೆಗಾರ ಎಂಬ ಭಾವನೆ ಎಲ್ಲರಲ್ಲೂ ಇದೆ.

ನಮ್ಮ ದಿನನಿತ್ಯದ ಎಲ್ಲಾ ಚಟುವಟಿಕೆಗಳನ್ನು ಸದ್ಯ ಅಂತರ್ಜಾಲವೇ ನಿಯಂತ್ರಿಸುತ್ತಿದೆ. ನಮ್ಮ ದೈನಂದಿನ ಅವಶ್ಯಕತೆಗಳು ದಿನಸಿ, ಬಟ್ಟೆ, ಅಗತ್ಯ ವಸ್ತುಗಳು, ಯಾವುದೇ ಸ್ಥಳದ ಮಾಹಿತಿ ಹೀಗೆ ಎಲ್ಲದಕ್ಕೂ ಅಂತರ್ಜಾಲ ನಮಗೆ ಅತ್ಯವಶ್ಯಕ ಎಂಬಷ್ಟರ ಮಟ್ಟಿಗೆ ನಾವು ಅದಕ್ಕೆ ಅವಲಂಬಿಸುತ್ತಿದ್ದೇವೆ.

ಈಗಿನ ಜಮಾನದಲ್ಲಿ ನಮಗೆ ಯಾವುದೇ ಕಾಯಿಲೆ ಗುಣಲಕ್ಷಣಗಳು, ತಡೆಯುವ ವಿಧಾನ, ಚಿಕಿತ್ಸೆಯ ವಿಧಾನ, ಔಷದೋಪಚಾರ, ಪಥ್ಯ ಹೀಗೆ ಎಲ್ಲವನ್ನೂ ನಾವು ಕೇಳುವುದು ಗೂಗಲ್ ಬಳಿಯೇ ಆಗಿದೆ.

tips for googling health symptoms

ಆದರೆ ಹೀಗೆ ನಮಗೆ ಅಗತ್ಯವಿರುವ ವಿಚಾರವನ್ನು ಗೂಗಲ್ ನಲ್ಲಿ ಟೈಪ್ ಮಾಡಿ ಕೇಳಿದಾಗ ಅದೆಷ್ಟೋ ಸಂಖ್ಯೆಯ ನೀವು ಕೇಳಿದ ಮಾಹಿತಿಗೆ ಸಂಬಂಧವುಳ್ಳ ಪುಟಗಳು ತೆರೆದುಕೊಳ್ಳುತ್ತವೆ ಎಂಬುದು ನಮಗೆ ತಿಳಿದಿರುವ ವಿಚಾರವೇ ಆಗಿದೆ. ನೈಸರ್ಗಿಕ ಪರಿಹಾರಗಳಿಂದ ಹಿಡಿದು, ನೀವು ಎಂತಹ ಕಾಯಿಲೆಗೆ ಒಳಪಟ್ಟಿದ್ದೀರಿ ಎಂಬುದನ್ನು ಕೂಡ ಗೂಗಲ್ ನಿಂದ ತಿಳಿದುಕೊಳ್ಳಲು ಸಾಧ್ಯವಿದೆ. ಮತ್ತು ಮಾಹಿತಿಗಳು ಬೇರೆ ಬೇರೆ ಪುಟಗಳಲ್ಲಿ ಭಿನ್ನ ವಿಭಿನ್ನವಾಗಿ ಇರುತ್ತದೆ ಎಂಬುದು ಕೂಡ ಅಷ್ಟೇ ಸತ್ಯ.

ಆದರೆ ಗೂಗಲ್ ನಲ್ಲಿ ಬರುವ ಎಲ್ಲಾ ಮಾಹಿತಿಗಳನ್ನು ಸ್ವೀಕರಿಸಿ ಅಳವಡಿಸಿಕೊಳ್ಳಲು ಸಾಧ್ಯವೇ? ಖಂಡಿತ ಇಲ್ಲ.ನೀವು ಹೀಗೆ ಯಾವುದೇ ಕಾಯಿಲೆಯ ಬಗ್ಗೆ ಗೂಗಲ್ ಮಾಡುವಾಗ ಕೆಲವು ವಿಚಾರಗಳನ್ನು ಖಂಡಿತ ನೆನಪಿನಲ್ಲಿ ಇಟ್ಟುಕೊಳ್ಳಬೇಕು.ಹಾಗಾದ್ರೆ ಯಾವೆಲ್ಲ ವಿಚಾರಗಳ ಬಗ್ಗೆ ಗಮನ ಹರಿಸಬೇಕು. ಗೂಗಲ್ ಮಹಾಶಯ ಕೊಡುವ ಕಾಯಿಲೆಯ ಉತ್ತರಗಳ ಬಗ್ಗೆ ನೀವು ಏನನ್ನು ತಿಳಿದುಕೊಂಡಿರಬೇಕು ಎಂಬ ಕೆಲವು ಮಾಹಿತಿಗಳನ್ನು ಈ ಲೇಖನವು ಒಳಗೊಂಡಿದೆ. ದಯವಿಟ್ಟು ಮುಂದೆ ಓದಿ....

1. ದೃಢೀಕರಣವನ್ನು ಪರೀಕ್ಷಿಸಿ

2. ನೀವು ಓದುವುದೆಲ್ಲವನ್ನೂ ನಂಬಲು ಹೋಗಬೇಡಿ

3. "ನೊಸೆಬೋ" ಪರಿಣಾಮಕ್ಕೆ ಬೀಳಬೇಡಿ

4. ಯಾವಾಗಲೂ " ನಮ್ಮ ಬಗ್ಗೆ " ಎಂದಿರುವ ವಿಭಾಗವನ್ನು ಓದುವುದು ಮರೆಯಬೇಡಿ

5. ಹಿಂದೊಮ್ಮೆ ಕಾಣಿಸಿದ ಆರೋಗ್ಯ ಪರಿಸ್ಥಿತಿಯ ಸಲಹೆಗಳನ್ನೇ ಪಾಲಿಸಲು ಹೋಗಬೇಡಿ

6. ಭಯ ಪಡಬೇಡಿ

1. ದೃಢೀಕರಣವನ್ನು ಪರೀಕ್ಷಿಸಿ

ನಮಗೆಲ್ಲರಿಗೂ ತಿಳಿದಿರುವಂತೆ, ನಾವು ಯಾವುದೇ ಒಂದು ಸಣ್ಣ ಮಾಹಿತಿಯನ್ನು ಕಾಯಿಲೆಯ ಬಗ್ಗೆ ಕೇಳಿದರೆ, ಗೂಗಲ್ ನಲ್ಲಿ ಅದಕ್ಕೆ ಸಂಬಂಧಿಸಿ ಸಾಧ್ಯಾಸಾಧ್ಯತೆಗಳ ಎಲ್ಲ ಮಾಹಿತಿಗಳು ಹೊರ ಬರುತ್ತದೆ. ಅವುಗಳಲ್ಲಿ, ದೃಢೀಕರಣವಿಲ್ಲದ ಎಷ್ಟೋ ಸೈಟ್ ಗಳೂ ಕೂಡ ಇಂಟರ್ ನೆಟ್ ನಲ್ಲಿ ಬಂದು ತಪ್ಪು ಮಾಹಿತಿಯನ್ನು ನಿಮಗೆ ನೀಡುವ ಸಾಧ್ಯತೆಗಳಿರುತ್ತದೆ ಮತ್ತು ನೀವು ತಿಳಿದುಕೊಳ್ಳಬೇಕು ಎಂಬ ಕಾಯಿಲೆಯ ಬಗ್ಗೆ ಸುಳ್ಳು ಸುಳ್ಳಾದ ಚಿಹ್ನೆಗಳು, ಚಿಕಿತ್ಸೆಗಳ ಬಗೆಗಿನ ವಿವರಗಳು ಬರಬಹುದು. ಹಾಗಾಗಿ ಎಚ್ಚರದಿಂದ ಇರಿ. ಹಾಗಾಗಿ, ಯಾವಾಗಲೂ ಕೂಡ ವೆಬ್ ಸೈಟ್ ನ ದೃಢೀಕರಣವನ್ನು ಪರೀಕ್ಷಿಸುವುದು ಬಹಳ ಒಳ್ಳೆಯದು. ಅಷ್ಟೇ ಅಲ್ಲ, ಮೆಡಿಕಲ್ ಪ್ರೊಫೆಷನಲ್ ಗಳ ಬಳಿಯಲ್ಲಿ ನಿಮ್ಮ ಕಾಯಿಲೆಯ ಚಿಹ್ನೆಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಪ್ರಮುಖವಾದ ವಿಚಾರವಾಗಿದೆ.

2. ನೀವು ಓದುವುದೆಲ್ಲವನ್ನೂ ನಂಬಲು ಹೋಗಬೇಡಿ

ನಾವೆಲ್ಲರೂ ಒಪ್ಪಬೇಕಾಗಿರುವ ವಿಷಯವೆಂದರೆ ಗೂಗಲ್ ಮಹಾಶಯನ ಬಳಿ ಒಂದು ಪ್ರಶ್ನೆ ಕೇಳಿದರೆ ಅದಕ್ಕೆ ಹತ್ತು ಉತ್ತರಗಳು ಲಭ್ಯವಾಗುತ್ತದೆ. ಒಂದು ಕಾಯಿಲೆಗೆ ಹಲವು ಔಷಧಗಳ ವಿವರ ನಿಮಗಲ್ಲಿ ಸಿಕ್ಕಬಹುದು. ಆದರೆ ಅದೆಲ್ಲವನ್ನೂ ನಂಬಬೇಕಾಗಿಲ್ಲ. ಕೆಲವು ಮನೆಮದ್ದುಗಳು ನಿಮ್ಮ ಸಹಾಯಕ್ಕೆ ಬರುತ್ತವೆ ಎಂಬ ಭರವಸೆಯ ಮಾತುಗಳೂ ಕೂಡ ಅಲ್ಲಿರಬಹುದು. ಆದರೆ ಅದನ್ನು ನಂಬುವ ಅಗತ್ಯವಿಲ್ಲ. ಯಾಕೆಂದರೆ, ಎಷ್ಟೋ ಸಲ ಈ ಎಲ್ಲಾ ಔಷಧಗಳು ಯಾವುದೇ ಕೆಲಸ ಮಾಡದೇ ಇರಬಹುದು ಅಥವಾ ಕೆಟ್ಟದಾಗಿ ಮಾಡಬಹುದು ಅಥವಾ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡಬಹುದು.

3. "ನೊಸೆಬೋ" ಪರಿಣಾಮಕ್ಕೆ ಬೀಳಬೇಡಿ

ಯಾವಾಗ ವ್ಯಕ್ತಿಗಳು ಆರೋಗ್ಯ ಚಿಹ್ನೆಗಳನ್ನು ಗೂಗಲ್ ಮಾಡುತ್ತಾರೋ, ಆಗ ಹಲವಾರು ರೀತಿಯ ಅವರ ಅನಾರೋಗ್ಯಕ್ಕೆ ಸಂಬಂಧಿಸಿದ ಚಿಹ್ನೆಗಳನ್ನು ಅವರು ಓದುತ್ತಾರೆ ಮತ್ತು ಮಾನಸಿಕವಾಗಿ ತಮಗೂ ಆ ಕಾಯಿಲೆಯ ಚಿಹ್ನೆಗಳಿವೆ ಎಂದು ಭಾವಿಸಲು ಆರಂಭಿಸುತ್ತಾರೆ. ಜಸ್ಟ್ ಯಾಕೆಂದರೆ ಅವರು ಗೂಗಲ್ ನಲ್ಲಿ ಓದಿರುತ್ತಾರೆ! ಇದನ್ನೇ ನೊಸೆಬೋ ಎಫೆಕ್ಟ್ ಎಂದು ಹೇಳುವುದು. ಉದಾಹರಣೆಗೆ ನೀವು ಫ್ಲೂ ಜ್ವರ ಚಿಹ್ನೆಗಳನ್ನು ಓದುತ್ತೀರಿ ಮತ್ತು ಅದರಲ್ಲಿ ವಾಕರಿಕೆ ಕೂಡ ಫ್ಲೂ ಜ್ವರದ ಚಿಹ್ನೆಗಳಲ್ಲಿ ಒಂದು ಎಂದು ಬರೆಯಲಾಗಿರುತ್ತದೆ. ಇದನ್ನು ಓದಿದ ನಿಮಗೆ ಇಷ್ಟು ಹೊತ್ತು ವಾಕರಿಕೆ ಇಲ್ಲದೇ ಇದ್ದರೂ, ಈಗ ವಾಕರಿಗೆ ಬರಲು ಪ್ರಾರಂಭವಾಗುತ್ತದೆ. ಹಾಗಾಗಿ ಈ ಅಭ್ಯಾಸವು ನಿಮ್ಮನ್ನು ಬಹಳವಾಗಿ ಕೆಟ್ಟ ಪರಿಸ್ಥಿತಿಗೆ ತಳ್ಳುತ್ತದೆ.

4. ಯಾವಾಗಲೂ " ನಮ್ಮ ಬಗ್ಗೆ " ಎಂದಿರುವ ವಿಭಾಗವನ್ನು ಓದುವುದು ಮರೆಯಬೇಡಿ

ನೀವು ಯಾವಾಗಲೇ ಆಗಲಿ ಗೂಗಲ್ ವೆಬ್ ಸೈಟ್ ಗಳನ್ನು ಯಾವುದೇ ಒಂದು ನಿರ್ಧಿಷ್ಟ ಕಾಯಿಲೆಯ ಬಗೆಗಿನ ಆರೋಗ್ಯ ಸಲಹೆಗಳಿಗಾಗಿ ಅಥವಾ ಮಾಹಿತಿಗಳಿಗಾಗಿ ಗೂಗಲ್ ಮಾಡುತ್ತಿದ್ದರೆ, ಆಗ " ನಮ್ಮ ಬಗ್ಗೆ" ಎಂದು ಬರೆದಿರುವ ವಿಭಾಗವನ್ನು ತಪ್ಪದೇ ಪರೀಕ್ಷಿಸಿ. ಆ ಮೂಲಕ ವೆಬ್ ಸೈಟ್ ಎಷ್ಟು ದಿನಗಳಿಂದ ರನ್ ಆಗುತ್ತಿದೆ ಮತ್ತು ಅವರು ಮಾಹಿತಿಗಳನ್ನು ಎಲ್ಲಿಂದ ಪಡೆಯುತ್ತಾರೆ, ಹೇಗೆ ಪಡೆಯತ್ತಾರೆ ಎಂಬೆಲ್ಲ ವಿಚಾರವನ್ನು ತಿಳಿದುಕೊಳ್ಳಲು ಸಾಧ್ಯವಿದೆ. ಇದು ನಿಮಗೆ ವೆಬ್ ಸೈಟ್ ನ ಬಗ್ಗೆ ನಂಬಿಕೆ ಬರವುದಕ್ಕೆ ಮತ್ತು ಮಾಹಿತಿಯ ಸ್ಪಷ್ಟತೆಯ ಬಗ್ಗೆ ನಿಖರವಾಗಿ ತಿಳಿಯಲು ನೆರವಾಗುತ್ತದೆ.

5. ಹಿಂದೊಮ್ಮೆ ಕಾಣಿಸಿದ ಆರೋಗ್ಯ ಪರಿಸ್ಥಿತಿಯ ಸಲಹೆಗಳನ್ನೇ ಪಾಲಿಸಲು ಹೋಗಬೇಡಿ

ಆರೋಗ್ಯದ ವೆಬ್ ಸೈಟ್ ಗಳಲ್ಲಿ ಬರುವ ಹೆಚ್ಚಿನ ಮಾಹಿತಿಗಳು ಇಂದಿನ ದಿನಗಳಲ್ಲಿ ಜನರಿಕ್ ಆಗಿರುತ್ತದೆ ಮತ್ತು ನಿರ್ಧಿಷ್ಟ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ವಿನ್ಯಾಸ ಮಾಡಲಾಗಿರುತ್ತದೆ. ಹಾಗಾಗಿ,ನಿಮಗೆ ಈ ಮುಂಚೆ ಅಂತಹ ಪರಿಸ್ಥಿತಿ ಇದ್ದಲ್ಲಿ ಅಥವಾ ಸದ್ಯ ಅಂತಹ ಪರಿಸ್ಥಿತಿ ಇದ್ದಲ್ಲಿ ನೀವು ವೈದ್ಯರನ್ನು ಸಂಪರ್ಕಿಸಿ ಬಂದ ನಂತರ ಆರೋಗ್ಯ ಸಲಹೆಗಳನ್ನು ಗೂಗಲ್ ನಿಂದ ಪಡೆಯುವುದು ಒಳ್ಳೆಯದು.ಉದಾಹರಣೆಗೆ ಲೋ ಬಿಪಿ ಆದಾಗ ಗ್ಲೂ ಕೋಸ್ ನೀರನ್ನು ಸೇವಿಸುವುದು ಉತ್ತಮ ಮನೆಮದ್ದು ಎಂದು ಸಲಹೆ ನೀಡಲಾಗಿರುತ್ತದೆ, ಆದರೆ ನೀವು ಡಯಾಬಿಟಿಕ್ ರೋಗಿಯಾಗಿದ್ದಲ್ಲಿ ಗ್ಲುಕೋಸ್ ನೀರು ನಿಮಗೆ ಹಿತವಾಗಿಲ್ಲದೇ ಇರಬಹುದು!

6. ಭಯ ಪಡಬೇಡಿ

ಹೆಚ್ಚಿನ ಸಂದರ್ಭಗಳಲ್ಲಿ, ಕಾಯಿಲೆಯ ಬಗೆಗಿನ ಚಿಹ್ನೆಗಳನ್ನು ಗೂಗಲ್ ನಲ್ಲಿ ಓದಿದ ನಂತರ, ಕೇವಲ ಗೂಗಲ್ ಸಲಹೆ ನೀಡಿದೆ ಎಂಬ ಕಾರಣಕ್ಕಾಗಿ ಕೆಲವರು ಭಯಗೊಳ್ಳುತ್ತಾರೆ. ಕೆಲವು ಭಯಾನಕ ಕಾಯಿಲೆಗಳ ಚಿಹ್ನೆಗಳು ಅವರನ್ನು ಆತಂಕಕ್ಕೆ ತಳ್ಳುತ್ತದೆ. ಸಣ್ಣ ತಲೆನೋವಿನ ಸಮಸ್ಯೆಯೂ ಕೂಡ ಗೂಗಲ್ ನಲ್ಲಿ ಓದಿದ ನಂತರ ಅವರಿಗೆ ಅವರು ಬ್ರೈನ್ ಟ್ಯೂಮರ್ ಇರಬಹುದೇ ಎಂಬಂತೆ ಭಾಸವಾಗುತ್ತದೆ, ಯಾಕೆಂದರೆ ಗೂಗಲ್ ನಲ್ಲಿ ತಲೆನೋವಿಗೆ ಬಂದಿರುವ ಹಲವಾರು ರೀತಿಯ ಸಲಹೆಗಳು ಅವರನ್ನು ಹೀಗೆ ಭಯಗೊಳ್ಳುವಂತೆ ಮಾಡಿ ಬಿಡುತ್ತದೆ. ಹಾಗಾಗಿ, ಯಾವಾಗ ಈ ರೀತಿ ಆಗುತ್ತದೆಯೋ ವ್ಯಕ್ತಿಗಳು ಹೆಚ್ಚು ಆಲೋಚನಾ ಲಹರಿಗೆ ಹೋಗುತ್ತಾರೆ ಮತ್ತು ಭಯಗೊಳ್ಳುತ್ತಾರೆ. ಇದು ಅವರನ್ನು ಆತಂಕದ ಅಟ್ಯಾಕ್ ಗಳಿಗೂ ತಳ್ಳಬಹುದು. ಹಾಗಾಗಿ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕ ಮಾಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು.

English summary

6 Things You Must Never Do While Googling Health Symptoms!

Right from getting all sorts of information available under the sun, the Internet also helps us with our work, daily activities like ordering food, looking up places to go to and so on. Now, most of us would already know that if we want any information regarding diseases, symptoms or even treatments, all we have to do is go to Google!
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more