For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಧ್ಯಾನ ಮಾಡಿ ಮನಸ್ಸನ್ನು ಶಾಂತವಾಗಿರಿಸಿ

|

ದೈನಂದಿನ ದಿನಚರಿ, ಮನೆ ಕೆಲಸ, ವೃತ್ತಿ ಜೀವನದ ಒತ್ತಡ ಸೇರಿದಂತೆ ಅನೇಕ ಜವಾಬ್ದಾರಿಯ ಕೆಲಸಗಳು ಮತ್ತು ಸಮಸ್ಯೆಗಳಿಂದಾಗಿ ಮನಸ್ಸು ಬಹುಬೇಗ ದಣಿಯುತ್ತದೆ. ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸರಿಯಾಗಿ ಇರಬೇಕು ಎಂದರೆ ಮಾನಸಿಕ ಸ್ಥಿತಿ ಸೂಕ್ತವಾಗಿ ಇರಬೇಕು. ಇಲ್ಲವಾದರೆ ಅನೇಕ ಆರೋಗ್ಯ ಸಮಸ್ಯೆಗಳು ತಲೆದೂರುತ್ತವೆ. ಆರೋಗ್ಯ ಸಮಸ್ಯೆ ಹಾಗೂ ಒತ್ತಡದ ಪರಿಸ್ಥಿತಿಯನ್ನು ಸಮತೋಲನದಲ್ಲಿ ನಿರ್ವಹಿಸಲು ಸಾಧ್ಯವಾಗದೆ ಇದ್ದಾಗ ಬಹುಬೇಗ ಮನಸ್ಸು ಬಳಲಿಕೆಗೆ ಒಳಗಾಗುತ್ತದೆ.

ನಿತ್ಯವೂ ಚೈತನ್ಯಶೀಲರಾಗಿರಬೇಕು ಎಂದರೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸರಿಯಾಗಿ ಇರಬೇಕು. ಧನಾತ್ಮಕ ಚಿಂತನೆಗಳೆಡೆಗೆ ಮನಸ್ಸು ತಿರುಗಿದಾಗ ಸಮಸ್ಯೆಗಳೆಲ್ಲವೂ ಸರಳವಾಗಿ ತೋರುತ್ತವೆ. ಕೆಲಸಗಳು ಹಗುರವಾಗುತ್ತವೆ. ಆಗ ಎಂತಹ ಕೆಲಸವನ್ನಾದರೂ ನಿರ್ವಹಿಸುವಂತ ಮನಸ್ಸು ಅಥವಾ ಹುಮ್ಮಸ್ಸು ಉಂಟಾಗುವುದು. ಇಂತಹ ಒಂದು ಉತ್ತಮವಾದ ಮನಸ್ಸು ನಮ್ಮದಾಗಬೇಕು ಎಂದಾದರೆ ಮೊದಲು ಮನಸ್ಸಿಗೆ ಅನುಕೂಲವಾಗುವಂತ ವ್ಯಾಯಾಮ ಅಥವಾ ಶಾಂತಿ ದೊರೆಯಬೇಕು.

ಮನಸ್ಸಿನ ಆರೋಗ್ಯವನ್ನು ಸದಾ ಕಾಲ ಆರೈಕೆ ಮಾಡುವ ಒಂದು ಆಧುನಿಕ ಪದ್ಧತಿ ಅಥವಾ ಅತ್ಯುತ್ತಮವಾದ ವಿಧಾನ ಎಂದರೆ ಧ್ಯಾನ. ಏಕಾಗ್ರತೆಯಿಂದ ಕೂಡಿರುವ ಧ್ಯಾನ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ನಿತ್ಯವೂ ಒಂದು ನಿರ್ದಿಷ್ಟ ಅವಧಿಯಲ್ಲಿ ಧ್ಯಾನವನ್ನು ಕೈಗೊಳ್ಳುವುದರಿಂದ ಮಾನಸಿಕ ಸ್ಥಿತಿಯು ಸದಾ ಆರೋಗ್ಯಯುತವಾಗಿರುವುದಲ್ಲದೆ ದಿನವಿಡೀ ಉಲ್ಲಾಸದಲ್ಲಿರುವಂತೆ ಮಾಡುತ್ತದೆ. ಜೊತೆಗೆ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳನ್ನು ಸಹ ನಿಯಂತ್ರಣದಲ್ಲಿ ಇಡುತ್ತದೆ. ಕೆಲವೊಮ್ಮೆ ನಾವು ಕುಳಿತು ಧ್ಯಾನ ಮಾಡುವುದರ ಬದಲು ಏಕಾಂತವಾಗಿ ನಡೆಯುತ್ತ ಧ್ಯಾನ ಮಾಡಬಹುದು. ಏಕಾಂತದಲ್ಲಿ ಏಕ ಚಿತ್ತದಿಂದ ನಡಿಗೆಯನ್ನು ಪ್ರಾರಂಭಿಸುವುದರಿಂದಲೂ ಅನೇಕ ಉಪಯೋಗಗಳನ್ನು ಪಡೆಯಬಹುದು. ನೀವು ನಿತ್ಯ ನಡಿಗೆಯೊಂದಿಗೆ ಧ್ಯಾನ ಮಾಡುವುದರಿಂದ ಯಾವೆಲ್ಲಾ ಉಪಯೋಗವನ್ನು ಪಡೆದುಕೊಳ್ಳಬಹುದು ಎನ್ನುವುದರ ಕುರಿತು ಈ ಮುಂದಿರುವ ವಿವರಣೆಯನ್ನು ಓದಿ ತಿಳಿಯಿರಿ...

ಮಾನಸಿಕ ವಿಶ್ರಾಂತಿ ದೊರೆಯುವುದು

ಮಾನಸಿಕ ವಿಶ್ರಾಂತಿ ದೊರೆಯುವುದು

ಸೂಕ್ತ ರೀತಿಯ ಧ್ಯಾನ ಕೈಗೊಳ್ಳುವುದರಿಂದ ಮಾನಸಿಕ ಸ್ಥಿತಿ ಸುಧಾರಣೆ ಯಾಗುವುದು. ಆಮ್ಲಜನಕದ ಸೇವನೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಶಕ್ತಿಯನ್ನು ಪುನಶ್ಚೇತನಗೊಳಿಸುತ್ತದೆ. ನಮ್ಮಲ್ಲಿರುವ ಅನೇಕ ಆತಂಕಗಳು ದೂರವಾಗುವುದು. ಧ್ಯಾನ ಮಾಡುವಾಗ "ಓಂ", ನಾನು ಆರೋಗ್ಯವಾಗಿದ್ದೇನೆ", "ನಾನು ಒಳ್ಳೆಯ ಆಕಾರದಲ್ಲಿದ್ದೇನೆ", "ನಾನು ಖುಷಿಯಲ್ಲಿದ್ದೇನೆ" ಎಂದು ಹೇಳುತ್ತಾ ಧ್ಯಾನ ಮಾಡಬಹುದು. ಇದರಿಂದ ಸಂತೋಷದ ಜೀವನವನ್ನು ಪಡೆಯುವಿರಿ.

ಶಾಂತಿ ಸಿಗುವುದು

ಶಾಂತಿ ಸಿಗುವುದು

ಧ್ಯಾನ ಮಾಡುವುದರಿಂದ ಮಿದುಳಿಗೆ ಹಿತವುಂಟಾಗುವುದು. ಇದರಿಂದ ನೀವು ನಿಮ್ಮನ್ನು ಉತ್ತಮ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವಿರಿ. ಮನಸ್ಸಿನಲ್ಲಿರುವ ದುಃಖ ಮತ್ತು ಚಿಂತೆಗಳು ವಿತರಣೆ ಹೊಂದುವುದು. ಜೊತೆಗೆ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ. ಇದಕ್ಕೆ ಅನುಗುಣವಾಗಿ ದೇಹವೂ ಸೂಕ್ತವಾಗಿ ಸಹಕರಿಸುವುದು.

 ಒಂಟಿಯಾಗಿ ನಡೆಯಿರಿ

ಒಂಟಿಯಾಗಿ ನಡೆಯಿರಿ

ಒಂದಷ್ಟು ದೂರ ಏಕಾಂತವಾಗಿ ನಡೆಯಿರಿ. ಇದರಿಂದ ನೀವು ನಿಮ್ಮ ಸುತ್ತಲಿರುವ ಪರಿಸರವನ್ನು ಪರಿಶೀಲಿಸುತ್ತಾ ನಡೆಯುವಿರಿ. ನಡಿಗೆಯ ಸುತ್ತ ಇರುವ ವಸ್ತುಗಳು ನಿಮ್ಮ ಗಮನಕ್ಕೆ ಬರುವುದರಿಂದ ಮನಸ್ಸು ನಿರಾಳತೆ ಹೊಂದುವುದು. ಮನಸ್ಸಿಗೆ ಹೊಸ ಚಿಂತನೆಗಳು ಸಿಗುವುದು. ಏಕಾಂತವಾಗಿ ಒಂದೇ ಮನಸ್ಸಿನಿಂದ ನಡೆಯುತ್ತಾ ಸಾಗಿದರೆ ಚಚಂಚಲತೆ ದೂರವಾಗುವುದು. ಗುಂಪಿನಲ್ಲಿ ನಡೆದರೆ ನಿಮ್ಮ ಮನಸ್ಸು ಒಂಟಿಯಾಗಿರಲು ಸಾಧ್ಯವಿರುವುದಿಲ್ಲ. ಜೊತೆಗೆ ಸಾಕಷ್ಟು ವಿಷಯ ಅಥವಾ ವಿಚಾರಗಳ ಕಡೆಗೆ ನೀವು ಗಮನ ನೀಡಿರುವುದಿಲ್ಲ. ನಿಯಮಿತ ಸಮಯದ ವರೆಗೆ ಒಂಟಿಯಾಗಿ ಏಕ ಚಿತ್ತದಿಂದ ನಡೆದರೆ ಮನಸ್ಸು ನಿರಾಳತೆಗೆ ಒಳಗಾಗಿ ಖಿನ್ನತೆಯು ದೂರವಾಗುವುದು.

 ಪ್ರಶಾಂತತೆ ಮತ್ತು ನೆಮ್ಮದಿ ಪಡೆಯಿರಿ

ಪ್ರಶಾಂತತೆ ಮತ್ತು ನೆಮ್ಮದಿ ಪಡೆಯಿರಿ

ವಾಕಿಂಗ್ ಮೂಲಕ ಧ್ಯಾನದ ಮನಸ್ಸು ಹೊಂದಿರುವಾಗ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಧ್ಯಾನದಲ್ಲಿ ಇರುವಾಗ ಉಸಿರಾಟದ ಕುರಿತು ಸಹ ಎಚ್ಚರಿಕೆ ವಹಿಸಬೇಕು. ನೀವು ಶಾಂತವಾಗಿರುವಾಗ ನಿಮ್ಮ ಸುತ್ತಲಿನ ಜನರು ಅಥವಾ ವ್ಯಕ್ತಿಗಳು ಸಹ ಶಾಂತಿಯಿಂದ ಇರಬೇಕಾಗುತ್ತದೆ. ಧ್ಯಾನದಿಂದ ಕೂಡಿದ ವಾಕಿಂಗ್ ಮಾಡುವಾಗ ಪ್ರತಿಯೊಂದು ಹಂತದಲ್ಲೂ ಶಾಂತಿ, ಸಂತೋಷ, ಸಹಾನುಭೂತಿ ಮತ್ತು ಕೃತಜ್ಞತೆಯ ಗುಣವನ್ನು ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು ಸಹ ಪ್ರಶಾಂತತೆ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳುವುದು.

ಧ್ಯಾನದ ಉದ್ದೇಶ

ಧ್ಯಾನದ ಉದ್ದೇಶ

ನೀವು ಧ್ಯಾನ ಮಾಡುವುದು ಅಥವಾ ನಡಿಗೆಯ ಮೂಲಕ ಧ್ಯಾನ ಮಾಡುವುದರಿಂದ ಎಚ್ಚರಿಕೆಯ ನಡಿಗೆಯನ್ನು ಹೊಂದಬಹುದು. ನಿಮ್ಮ ಗಮನವನ್ನು ಏಕಾಗ್ರತೆಯಲ್ಲಿ ಇರಿಸಬಹುದು. ದೃಶ್ಯಗಳು ಮತ್ತು ಶಬ್ದಗಳಿಗೆ ಅಂಟಿಕೊಳ್ಳುವಂತೆ ಮಾಡುವುದು. ಸೂರ್ಯನ ಕಿರಣ, ತಂಪಾದ ಗಾಳಿ ಹಾಗೂ ಇನ್ನಿತರ ಭೌತಿಕ ಸಂವೇದನೆಗಳನ್ನು ಅನುಭವಿಸಲು ಅನುಕೂಲವಾಗುವುದು. ಮನಸ್ಸಿಗೆ ಹೊಸ ಅನುಭವಗಳ ಮೂಲಕ ನೆಮ್ಮದಿ ಮತ್ತು ಚೈತನ್ಯ ದೊರೆಯುವುದು.

ಧ್ಯಾನವನ್ನು ಮಾಡುವ ವಿಧಾನ

ಧ್ಯಾನವನ್ನು ಮಾಡುವ ವಿಧಾನ

ಧ್ಯಾನವನ್ನು ಆಚರಿಸುತ್ತಿರುವಾಗ, ನಿಮ್ಮ ದೃಷ್ಟಿಯು ಹುಬ್ಬುಗಳೆರಡರ ಮಧ್ಯೆ ಕೇ೦ದ್ರೀಕೃತವಾಗಿರಲಿ. ನಿಮ್ಮ ಮನದಲ್ಲಿಯೇ ನೀವು ಭಗವ೦ತನೊಡನೆ ಓರ್ವ ಆಪ್ತಮಿತ್ರನೊಡನೆ ಮಾತನಾಡುವ೦ತೆ ಸ೦ಭಾಷಿಸಬಹುದು. ಭಗವ೦ತನಿಗೆ ಕೃತಜ್ಞತೆಗಳನ್ನರ್ಪಿಸುವುದರ ಮೂಲಕ ಹಾಗೂ ಆತನ ಮಹಿಮೆಗಳನ್ನು ಕೊ೦ಡಾಡುವುದರ ಮೂಲಕ ಈ ಸ೦ಭಾಷಣೆಯು ಆರ೦ಭಗೊಳ್ಳಲಿ. ಜೀವನವು ನಿಮಗೆ ಕೊಡಮಾಡಿರುವ ಎಲ್ಲಾ ಅನುಕೂಲತೆಗಳು, ಸಿದ್ಧಿಗಳು, ಹಾಗೂ ಸೌಕರ್ಯಗಳ ಕುರಿತು, ಅವೆಷ್ಟೇ ದೊಡ್ಡ ಸ್ವರೂಪದ್ದಾಗಿರಲಿ ಅಥವಾ ಚಿಕ್ಕ ಸ್ವರೂಪದ್ದಾಗಿರಲಿ, ಅವುಗಳ ಕುರಿತು ಕೃತಜ್ಞರಾಗಿರಿ.ನಿಮ್ಮ ಇಡಿಯ ಧ್ಯಾನ ಪ್ರಕ್ರಿಯೆಯು ಬಹುದೀರ್ಘಾವಧಿಯ ಭಾಗವು ಇದಕ್ಕಾಗಿ ಮೀಸಲಾಗಿರಿಸಬೇಕೆ೦ಬುದನ್ನು ಯಾವಾಗಲೂ ನೆನಪಿಟ್ಟುಕೊಳ್ಳಿರಿ. ಒಮ್ಮೆ ನೀವು ಇದನ್ನು ಸಾಧಿಸಿದಿರೆ೦ದಾದರೆ, ನೀವು ಹಲವಾರು ಪ್ರಯೋಜನಗಳನ್ನು ಪಡೆಯುವಿರಿ.

ಏಕಾಗ್ರತೆಯನ್ನು ಹೆಚ್ಚಿಸಲು

ಏಕಾಗ್ರತೆಯನ್ನು ಹೆಚ್ಚಿಸಲು

ಬಹುತೇಕ ವ್ಯಕ್ತಿಗಳು ತಮಗೆ ಯಾವುದೇ ಒ೦ದು ವಿಷಯದ ಕುರಿತು ದೀರ್ಘಕಾಲದವರೆಗೆ ಏಕಾಗ್ರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೆ೦ದು ಆಗಾಗ್ಗೆ ದೂರುತ್ತಿರುತ್ತಾರೆ. ಇ೦ತಹ ಜನರಿಗೆ ಖ೦ಡಿತವಾಗಿಯೂ ಕೂಡ ಧ್ಯಾನವೆ೦ದರೇನೆ೦ಬುದೇ ಗೊತ್ತಿಲ್ಲವೆ೦ದು ಇದರಿ೦ದ ತಿಳಿದುಬರುತ್ತದೆ. ಇ೦ತಹ ಜನರು ಧ್ಯಾನವನ್ನು ನಿಯಮಿತವಾಗಿ ಆಚರಿಸಿದಲ್ಲಿ, ಯಾವುದೇ ಒ೦ದು ವಿಚಾರದ ಕುರಿತೇ ಆಗಿರಲಿ, ಅವರಿಗೆ ಮನಸ್ಸನ್ನು ಕೇ೦ದ್ರೀಕರಿಸಲು ಕಷ್ಟವಾಗದು.

English summary

5 Benefits Of Mindful Walking Meditation

Mindful walking is not only about walking back and forth but to remain fully aware of each step that you take. You can try to incorporate mindfulness into your daily activity by watching the breath or gathering awareness - be it while walking down the street or in the market, rather than doing things on auto pilot. By practicing mindful walking meditation, you will be aware of each step and you try to cultivate mindfulness. Let's look into some of the benefits of the mindful walking meditation.
Story first published: Sunday, February 25, 2018, 12:28 [IST]
X
Desktop Bottom Promotion