For Quick Alerts
ALLOW NOTIFICATIONS  
For Daily Alerts

ಥೈರಾಯ್ಡ್ ಸಮಸ್ಯೆಯ ಮೌನ ಲಕ್ಷಣಗಳು-ನಿಮಗೂ ಶಾಕ್ ಆಗಬಹುದು!!

By Hemanth
|

ದೇಹದಲ್ಲಿರುವ ಪ್ರತಿಯೊಂದು ಗ್ರಂಥಿಗಳು, ನರಗಳು ಹಾಗೂ ಅಂಗಾಂಗಗಳು ನಮ್ಮ ದೈಹಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವುದು. ಅದೇ ರೀತಿ ಥೈರಾಯ್ಡ್ ಗ್ರಂಥಿಗಳ ಪಾತ್ರ ಕೂಡ ಮಹತ್ವದ್ದಾಗಿದೆ. ಥೈರಾಯ್ಡ್ ಗ್ರಂಥಿಗಳು ಬಿಡುಗಡೆ ಮಾಡುವ ಹಾರ್ಮೋನುಗಳು ಹೆಚ್ಚಾದಾಗ ಅಥವಾ ಕಡಿಮೆಯಾದಾಗ ಥೈರಾಯ್ಡ್ ಸಮಸ್ಯೆಯು ಕಾಣಿಸಿಕೊಳ್ಳುವುದು. ಇದನ್ನು ಹೈಪರ್ ಥೈರಾಡಿಸಮ್ ಅಥವಾ ಹೈಪೊಥೈರಾಡಿಸಂ ಎಂದು ಕರೆಯಲಾಗುತ್ತದೆ. ಈ ಲೇಖನದಲ್ಲಿ ಥೈರಾಯ್ಡ್ ಸಮಸ್ಯೆಯ ಕೆಲವೊಂದು ಮೌನ ಲಕ್ಷಣಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಥೈರಾಯ್ಡ್ ಗ್ರಂಥಿಗಳು ಟಿ4(ಥೈರಾಕ್ಸಿನ್) ಮತ್ತು ಟಿ3(ಟ್ರಿಯೋಡೊಥೈರೋನೈನ್) ಎನ್ನುವ ಹಾರ್ಮೊನು ಬಿಡುಗಡೆ ಮಾಡುವುದು. ಕ್ಯಾಲ್ಸಿಟೋನಿನ್ ಎನ್ನುವ ಹಾರ್ಮೋನು ದೇಹದಲ್ಲಿ ಕ್ಯಾಲ್ಸಿಯಂ ನಿಯಂತ್ರಿಸಲು ಪ್ರಮುಖ ಪಾತ್ರ ವಹಿಸುವುದು. ಇದು ದೇಹದಲ್ಲಿ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರುವುದು. ಪಿಟ್ಯುಟರಿ ಗ್ರಂಥಿ (ಮೆದುಳಿನ ತಳದಲ್ಲಿ ಕಂಡುಬರುವ ಸಣ್ಣ ಅಂಗ) ಥೈರಾಯ್ಡ್ ಉತ್ತೇಜಿಸುವ ಹಾರ್ಮೋನ್ ನ್ನು ಬಿಡುಗಡೆ ಮಾಡಿ ಥೈರಾಯ್ಡ್ ಹಾರ್ಮೋನು ಉತ್ಪತ್ತಿ ನಿಯಂತ್ರಿಸಲು ನೆರವಾಗುವುದು.

hyperthyroidism symptoms

ಥೈರಾಯ್ಡ್ ಬಗ್ಗೆ ತಿಳಿಯದೆ ಇರುವ ವಿಚಾರಗಳು

*ಪಿಟ್ಯುಟರಿ ಗ್ರಂಥಿಯು ನಿಷ್ಕ್ರೀಯ ಥೈರಾಯ್ಡ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.
*ಮೂತ್ರಜನಕಾಂಗದ ಗ್ರಂಥಿಯು ನಿಷ್ಕ್ರೀಯ ಥೈರಾಯ್ಡ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವುದು.
* ಪುರುಷರಿಗಿಂತ ಹೆಚ್ಚು ಮಹಿಳೆಯರು ಥೈರಾಯ್ಡ್ ಸಮಸ್ಯೆಗೆ ಸಿಲುಕುವರು.
* ಟಿ3 ಮತ್ತು ಟಿ4 ಹಾರ್ಮೋನು ಉತ್ಪತ್ತಿಗೆ ಐಯೋಡಿನ್ ಪ್ರಮುಖವಾಗಿ ಬೇಕು. ಐಯೋಡಿನ್ ಪ್ರಮಾಣ ಕಡಿಮೆಯಾದರೆ ಥೈರಾಯ್ಡ್ ಸಮಸ್ಯೆ ಉಂಟಾಗುವುದು.
* ಥೈರಾಯ್ಡ್ ಸಮಸ್ಯೆಗೆ ಒತ್ತಡವು ಪರಿಣಾಮ ಬೀರುವುದು.
* ಋತುಚಕ್ರಕ್ಕೆ ಮೊದಲು ಮತ್ತು ಗರ್ಭಧಾರಣೆ ವೇಳೆ ಥೈರಾಯ್ಡ್ ನ ಕೆಲವು ಅಸಹಜತೆಗಳು ಕಾಣಿಸಿಕೊಳ್ಳುವುದು.

ಥೈರಾಯ್ಡ್ ಕಾಯಿಲೆಗೆ ಕಾರಣಗಳು ಏನು?

ದೀರ್ಘಕಾಲದ ಲಿಂಫೋಸಿಟಿಕ್ ಥೈರಾಯ್ಡಿಟಿಸ್ ಅಥವಾ ಆಟೊಇಮ್ಯೂನ್ ಥೈರಾಯ್ಡಿಟಿಸ್ ಎಂದೂ ಕರೆಯಲ್ಪಡುವ ಹಶಿಮೊಟೊನ ಥೈರಾಯ್ಡೈಟಿಸ್, ಇದು ಹೈಪೋಥೈರಾಯ್ಡಿಸಮ್ ನ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಹೈಪೋಥೈರಾಯ್ಡಿಸಮ್ ನ ಪ್ರಮುಖ ಕಾರಣವೆಂದರೆ ಐಯೋಡಿನ್ ಕೊರತೆ. ಐಯೋಡಿನ್ ಸೇವನೆ ಕಡಿಮೆಯಾದಾಗ ಈ ಸಮಸ್ಯೆ ಬರುವುದು.

ಆರೋಗ್ಯಕರ ಥೈರಾಯ್ಡ್ ಗ್ರಂಥಿಯ ಕಾರ್ಯಗಳೇನು?

1. ಪ್ರೋಟೀನ್ ಸಂಶ್ಲೇಷಣೆ ಪ್ರಚೋದಿಸುತ್ತದೆ
2. ದೇಹದ ಸಾಮಾನ್ಯ ಉಷ್ಣತೆ ಕಾಪಾಡುವುದು.
3. ಎಲ್ಲಾ ಕೋಶಗಳಲ್ಲಿ ಬಿಎಂಆರ್(ಮೂಲ ಚಯಾಪಚಯ ಮೌಲ್ಯ) ಹೆಚ್ಚಿಸುವುದು.
4. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು.
5. ಶಕ್ತಿ ಉತ್ಪಾದನೆಗೆ ಗ್ಲುಕೋಸ್ ಮತ್ತು ಕೊಬ್ಬಿನ ಬಳಕೆ ಹೆಚ್ಚಿಸುವುದು.
6. ದೇಹದ ಬೆಳವಣಿಗೆಗೆ ನೆರವಾಗುವುದು.
7. ಅಡ್ರಿನಾಲಿನ್ ಮತ್ತು ನಾರಾಡ್ರಿನಾಲಿನ್ ಪರಿಣಾಮ ಹೆಚ್ಚಿಸುವುದು.

ಥೈರಾಯ್ಡ್ ಸಮಸ್ಯೆಯ 12 ಮೌನ ಲಕ್ಷಣಗಳು

ವಿಶ್ವದಲ್ಲಿ ಸುಮಾರು 12 ಮಿಲಿಯನ್ ಮಹಿಳೆಯರಿಗೆ ಥೈರಾಯ್ಡ್ ಸಮಸ್ಯೆ ಬಗ್ಗೆ ತಿಳಿದಿಲ್ಲ.

1. ಬೇಸರ ಮತ್ತು ಖಿನ್ನತೆ

1. ಬೇಸರ ಮತ್ತು ಖಿನ್ನತೆ

ಥೈರಾಯ್ಡ್ ಸಮಸ್ಯೆಯ ಪ್ರಮುಖ ಮೌನ ಲಕ್ಷಣವಿದು. ಈ ಸಮಯದಲ್ಲಿ ಮೆದುಳಿನಲ್ಲಿ ಹೆಚ್ಚಿನ ಉತ್ತೇಜನ ಕಾರ್ಯಗಳು ನಡೆಯುವುದು. ಇದರಿಂದ ನಿಮಗೆ ಒಳ್ಳೆಯ ಭಾವನೆಯಾಗಳು ಬರಲ್ಲ. ಬೇಸರ ಉಂಟಾಗುವುದು.

2. ಮಲಬದ್ಧತೆ

2. ಮಲಬದ್ಧತೆ

ನಿಯಮಿತ ಮಲಬದ್ಧತೆಯು ಮತ್ತೊಂದು ಮೌನ ಲಕ್ಷಣವಾಗಿದೆ. ಥೈರಾಯ್ಡ್ ಹಾರ್ಮೋನುಗಳು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯು ಕಾರ್ಯನಿರ್ವಹಿಸುವಂತೆ ಮಾಡುವುದು. ಅತಿಯಾದ ಥೈರಾಯ್ಡ್ ಗ್ರಂಥಿಯ ಚಟುವಟಿಕೆಯು ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ನಿಧಾನಗೊಳಿಸಿ ಮಲಬದ್ಧತೆಗೆ ಕಾರಣವಾಗಬಹುದು.

3. ಅತಿಯಾದ ನಿದ್ರೆ

3. ಅತಿಯಾದ ನಿದ್ರೆ

ಹಗಲಿನಲ್ಲಿ ನಿಮಗೆ ತುಂಬಾ ಸುಸ್ತಾಗುವುದು ನಿಷ್ಕ್ರೀಯ ಥೈರಾಯ್ಡ್ ನ ಲಕ್ಷಣವಾಗಿದೆ. ಥೈರಾಯ್ಡ್ ಗ್ರಂಥಿಗಳು ಸರಿಯಾಗಿ ಥೈರಾಯ್ಡ್ ಹಾರ್ಮೋನು ಬಿಡುಗಡೆ ಮಾಡದೇ ಇರುವಾಗ ಹೀಗೆ ಆಗುವುದು.

4. ಕೂದಲು ಉದುರುವಿಕೆ ಮತ್ತು ಚರ್ಮ ಒಣಗುವುದು

4. ಕೂದಲು ಉದುರುವಿಕೆ ಮತ್ತು ಚರ್ಮ ಒಣಗುವುದು

ಕಣ್ಣಿನ ರೆಪ್ಪೆ ಸಹಿತ ಕೂದಲು ಉದುರುವಿಕೆಯು ಥೈರಾಯ್ಡ್ ನ ಲಕ್ಷಣಗಳಲ್ಲಿ ಒಂದಾಗಿದೆ. ಅತಿಯಾದ ಚಟುವಟಿಕೆ ಮತ್ತು ನಿಷ್ಕ್ರೀಯ ಥೈರಾಯ್ಡ್ ಕೂದಲಿನ ಬೆಳವಣಿಗೆ ಮೇಲೆ ಪರಿಣಾಮ ಬೀರುವುದು. ಥೈರಾಯ್ಡ್ ಹಾರ್ಮೋನುಗಳು ಸಮತೋಲನ ಕಳಕೊಂಡಾಗ ಕೂದಲು ಉದುರುವುದು.

5. ಹಠಾತ್ ತೂಕ ಹೆಚ್ಚಳ

5. ಹಠಾತ್ ತೂಕ ಹೆಚ್ಚಳ

ನಿಷ್ಕ್ರೀಯ ಥೈರಾಯ್ಡ್ ನಿಂದಾಗಿ ಹಠಾತ್ ಆಗಿ ತೂಕ ಹೆಚ್ಚಳವಾಗುವುದು. ಯಾಕೆಂದರೆ ಥೈರಾಯ್ಡ್ ಹಾರ್ಮೋನುಗಳು ಚಯಾಪಚಯ ಕ್ರಿಯೆ ಕುಗ್ಗಿಸುವುದು ಮತ್ತು ಕ್ಯಾಲರಿ ಕಡಿಮೆ ದಹಿಸುವುದು.

 6. ಲೈಂಗಿಕಾಸಕ್ತಿ ಕುಗ್ಗುವುದು

6. ಲೈಂಗಿಕಾಸಕ್ತಿ ಕುಗ್ಗುವುದು

ನಿಷ್ಕ್ರೀಯ ಥೈರಾಯ್ಡ್ ನಿಂದಾಗಿ ಲೈಂಗಿಕಾಸಕ್ತಿಯು ಕುಂದುವುದು. ಕಾಮಾಸಕ್ತಿ ಕಡಿಮೆ ಅಥವಾ ಮಹಿಳೆಯರಲ್ಲಿ ಕಾಮೋದ್ರೇಕ ಕಡಿಮೆಯಾಗುವುದು.

7. ಸ್ನಾಯು ನೋವು ಅಥವಾ ಬಿಗಿತ

7. ಸ್ನಾಯು ನೋವು ಅಥವಾ ಬಿಗಿತ

ನಿಷ್ಕ್ರೀಯ ಥೈರಾಯ್ಡ್ ಅಥವಾ ಅತಿಯಾಗಿ ಕಾರ್ಯನಿರ್ವಹಿಸುವ ಥೈರಾಯ್ಡ್ ನಿಂದಾಗಿ ಸ್ನಾಯುಗಳ ನೋವು ಅಥವಾ ದುರ್ಬಲತೆಯು ಕಂಡುಬರುವುದು. ಥೈರಾಯ್ಡ್ ಸಮಸ್ಯೆ ಹೊಂದಿರುವ ಜನರಲ್ಲಿ ಸ್ನಾಯುಗಳ ಸೆಳೆತ, ನೋವು ಮತ್ತು ಬಿಗಿತ ಕಂಡುಬರುವುದು.

8. ಹೃದಯ ಸಮಸ್ಯೆಗಳು

8. ಹೃದಯ ಸಮಸ್ಯೆಗಳು

ಥೈರಾಯ್ಡ್ ಹಾರ್ಮೋನುಗಳು ಅತಿಯಾಗಿ ಬಿಡುಗಡೆಯಾದರೆ ಆಗ ಹೃದಯ ಬಡಿತ, ಎದೆನೋವು ಮತ್ತು ಹೃದಯಾಘಾತ ಉಂಟಾಗಬಹುದು.

9. ಮಂಕು ಕವಿಯುವುದು

9. ಮಂಕು ಕವಿಯುವುದು

ಮಂಕು ಕವಿದಂತೆ ಆಗುವುದು ನಿಮ್ಮ ಥೈರಾಯ್ಡ್ ಮತ್ತು ಮೆದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಅರ್ಥ. ನಿಷ್ಕ್ರೀಯ ಥೈರಾಯ್ಡ್ ಮೆದುಳಿಗೆ ಮಂಕು ಕವಿದಂತೆ ಮಾಡಬಹುದು ಮತ್ತು ಮಾನಸಿಕ ನಿಶ್ಯಕ್ತಿ ಕಾಣಿಸಬಹುದು.

10. ಅಧಿಕ ರಕ್ತದೊತ್ತಡ

10. ಅಧಿಕ ರಕ್ತದೊತ್ತಡ

ಥೈರಾಯ್ಡ್ ಸಮಸ್ಯೆಯ ಮತ್ತೊಂದು ಲಕ್ಷಣವೆಂದರೆ ಅದು ಅಧಿಕ ರಕ್ತದೊತ್ತಡ. ಅತಿ ಚಟುವಟಿಕೆಯಲ್ಲಿರುವ ಥೈರಾಯ್ಡ್ ಅಥವಾ ನಿಷ್ಕ್ರೀಯ ಥೈರಾಯ್ಡ್ ನಿಂದ ಅಧಿಕ ರಕ್ತದೊತ್ತಡ ಕಾಣಿಸುವುದು. ಇದರಿಂದ ಆಯಾಸ, ಬೆವರುವುದು ಇತ್ಯಾದಿ ಕಂಡುಬರಬಹುದು.

11. ಕುತ್ತಿಗೆ ಅಥವಾ ಗಂಟಲಿನ ಸಮಸ್ಯೆ

11. ಕುತ್ತಿಗೆ ಅಥವಾ ಗಂಟಲಿನ ಸಮಸ್ಯೆ

ಕುತ್ತಿಗೆ ಅಥವಾ ಗಂಟಲಿನ ಭಾಗದಲ್ಲಿ ಊತ, ಮೆತ್ತಗೆ ಆಗುವುದು, ಬಿಗಿಯಾಗುವುದು ಅಥವಾ ತುಂಬಿದ ಭಾವನೆಯಾಗುವುದು. ಥೈರಾಯ್ಡ್ ಗಂಟುಗಳು ದೊಡ್ಡದಾಗಿ ಬೆಳೆದರೆ ಆಗ ಕುತ್ತಿಗೆಯಲ್ಲಿ ಊತ ಕಾಣಿಸುವುದು. ಇದರಿಂದ ಆಹಾರ ಸೇವಿಸುವುದು ಕಷ್ಟವಾಗುವುದು.

12. ಹಸಿವು ಹೆಚ್ಚಾಗುವುದು ಮತ್ತು ರುಚಿಯು ಬದಲಾಗುವುದು

12. ಹಸಿವು ಹೆಚ್ಚಾಗುವುದು ಮತ್ತು ರುಚಿಯು ಬದಲಾಗುವುದು

ಅತಿಯಾಗಿ ಚಟುವಟಿಕೆಯಲ್ಲಿರುವ ಥೈರಾಯ್ಡ್ ನಿಂದ ಚಯಾಪಚಯ ಕ್ರಿಯೆ ಹೆಚ್ಚಾಗುವುದು ಮತ್ತು ಇದರಿಂದ ಹಸಿವು ಜಾಸ್ತಿಯಾಗಿ ಹೆಚ್ಚು ತಿನ್ನಬೇಕೆಂದು ಆಗಬಹುದು.

13. ನಿಶ್ಯಕ್ತಿ ಮತ್ತು ಕಿರಿಕಿರಿ

13. ನಿಶ್ಯಕ್ತಿ ಮತ್ತು ಕಿರಿಕಿರಿ

ಥೈರಾಯ್ಡ್‌ ನಿಂದ ನಮ್ಮ ಭಾವನೆಗಳು ಮತ್ತು ದೇಹದ ಶಕ್ತಿಯ ಮೇಲೆ ಪರಿಣಾಮ ಉಂಟಾಗುವುದು. ಹೈಪೋಥೈರಾಯ್ಡಿಸಮ್ ನಿಂದ ಆಯಾಸ ಮತ್ತು ದೇಹದ ಶಕ್ತಿಯಲ್ಲಿ ಕೊರತೆ ಕಾಣಿಸಿಕೊಳ್ಳುವುದು. ಇದರಿಂದ ಯಾವಾಗಲೂ ಮನಸ್ಸಿಗೆ ಕಿರಿಕಿರಿ ಮತ್ತು ನಿದ್ರೆಯ ಸಮಸ್ಯೆ ಉಂಟಾಗಬಹುದು.

14. ಅನಿಯಮಿತ ತೂಕ ಹೆಚ್ಚಳ ಅಥವಾ ಕಡಿಮೆಯಾಗುವುದು

14. ಅನಿಯಮಿತ ತೂಕ ಹೆಚ್ಚಳ ಅಥವಾ ಕಡಿಮೆಯಾಗುವುದು

ದೇಹದ ತೂಕದಲ್ಲಿ ಬದಲಾವಣೆಯಾಗುವುದು ಥೈರಾಯ್ಡ್ ನಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಯಾಗಿದೆ. ದೇಹದ ತೂಕದಲ್ಲಿ ಅತೀ ಕಡಿಮೆ ಸಮಯದಲ್ಲಿ ತೂಕ ಅತಿಯಾಗಿ ಕಡಿಮೆಯಾಗುವುದು ಅಥವಾ ಹೆಚ್ಚಳವಾಗುವುದು ಥೈರಾಯ್ಡ್‌ನ ಲಕ್ಷಣವಾಗಿದೆ. ಇದು ಥೈರಾಯ್ಡ್ ಹಾರ್ಮೋನ್ ತುಂಬಾ ಕಡಿಮೆ ಅಥವಾ ಹೆಚ್ಚಾಗಿರುವ ಸೂಚನೆಯಾಗಿದೆ. ಇದು ಥೈರಾಯ್ಡ್ ನ ಲಕ್ಷಣಗಳಲ್ಲಿ ಒಂದಾಗಿದೆ.

15. ತುರಿಕೆ ಸಮಸ್ಯೆ ಉಂಟಾದರೆ

15. ತುರಿಕೆ ಸಮಸ್ಯೆ ಉಂಟಾದರೆ

ಒಣ ಹಾಗೂ ತುರಿಕೆ ಉಂಟು ಮಾಡುವ ಚರ್ಮವು ಥೈರಾಯ್ಡ್ ಗ್ರಂಥಿಯ ಸಮಸ್ಯೆಯ ಪ್ರಮುಖ ಲಕ್ಷಣವಾಗಿದೆ. ಉಗುರು ಉದ್ದಗಿನ ಗೆರೆಯಂತೆ ಒಡೆದುಹೋಗಿದ್ದರೆ ಇದರ ಬಗ್ಗೆ ನೀವು ಚಿಂತಿಸಬೇಕು. ಇದು ಥೈರಾಯ್ಡ್ ಗ್ರಂಥಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ.

English summary

15 Silent Signs Of Thyroid Problems, will shock you!

Thyroid disorders occur when the thyroid gland either produces excess or less thyroid hormones which are called hyperthyroidism or hypothyroidism respectively. This article will explain about the silent signs of thyroid problems. The thyroid gland produces hormones which are called T4 (thyroxine) and T3(triiodothyronine) and another one called calcitonin which helps regulate calcium stores in the body. These hormones have an impact the metabolic processes in the body. The pituitary gland (a tiny organ found at the base of the brain) releases thyroid stimulating hormones to regulate the production of thyroid hormones.
X
Desktop Bottom Promotion