For Quick Alerts
ALLOW NOTIFICATIONS  
For Daily Alerts

ತೂಕ ಇಳಿಸುವ ಟಿಪ್ಸ್: ಬೆಲ್ಲ ಬೆರೆಸಿದ ಉಗುರುಬೆಚ್ಚನೆಯ ನೀರು ಕುಡಿಯಿರಿ

|

ತೂಕ ಇಳಿಸಬೇಕೆಂದು ಎಲ್ಲಾ ಸ್ಥೂಲಕಾಯ ವ್ಯಕ್ತಿಗಳ ಬಯಕೆಯಾಗಿದೆ, ವಿಶೇಷವಾಗಿ ಹದಿಹರೆಯದ ಯುವಜನತೆ ತೆಳ್ಳಗಿನ ಕಾಯ ಹೊಂದಬಯಸುತ್ತಾರೆ. ಇವರು ತಮ್ಮ ದೇಹ ಆರೋಗ್ಯಕರ, ಹುರಿಗಟ್ಟಿದಂತಿದ್ದು ಆಕರ್ಷಕವೂ ಆಗಿರಬೇಕೆಂದು ಬಯಸುತ್ತಾರೆ, ಆದರೆ ಶೀಘ್ರ ತೂಕ ಇಳಿಸಬಯಸಲು ತಪ್ಪು ವಿಧಾನಗಳನ್ನು ಅನುಸರಿಸುತ್ತಾರೆ. ಉದಾಹರಣೆಗೆ ಇವರ ಆಹಾರಕ್ರಮದಲ್ಲಿ ಆರೋಗ್ಯಕರ ಆಹಾರಗಳ ಸಮ್ಮಿಲನವಿರುವುದಿಲ್ಲ, ಬದಲಿಗೆ ಪೌಷ್ಟಿಕವಲ್ಲದ ಆಹಾರವನ್ನು ಸೇವಿಸುತ್ತಾರೆ. ಒಂದು ವೇಳೆ ತೂಕ ಇಳಿಸಲು ಆರೋಗ್ಯಕರ ವಿಧಾನವನ್ನು ಅನುಸರಿಸುವಿರಾದರೆ ಇದಕ್ಕೆ ಬೆಲ್ಲ ಮತ್ತು ಲಿಂಬೆ ಬೆರೆಸಿದ ಪಾನೀಯದ ಸೇವನೆ ಅತ್ಯುತ್ತಮ ಆಯ್ಕೆಯಾಗಿದೆ.

ವಿಶೇಷವಾಗಿ ಮಹಿಳೆಯರು, ತಮ್ಮ ದೇಹವನ್ನು ಬಳುಕುವ ಬಳ್ಳಿಯಂತಾಗಿಸಬೇಕಾದರೆ ನಿಮಗೆ ಕೆಲವು ವಿಷಯಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ. ಅವೆಂದರೆ ತಾಳ್ಮೆ, ಸಮರ್ಪಣೆ, ಬದ್ಧತೆ, ಮತ್ತು ಮುಖ್ಯವಾಗಿ ತೂಕ ಇಳಿಸುವ ಹಾದಿಯಿಂದ ಹೊರಳದಿರಲು ಅಪಾರವದ ಮನೋಬಲ! ಸೇವಿಸುವ ಆಹಾರದಲ್ಲಿ ಆರೋಗ್ಯಕರ ಆಹಾರಗಳೇ ಇರುವಂತೆ ನೋಡಿಕೊಳ್ಳುವುದು ಹಾಗೂ ಕೊಬ್ಬನ್ನು ಹೆಚ್ಚಾಗಿ ದಹಿಸುವಂತಹ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಆಯ್ದುಕೊಳ್ಳುವುದು ಅಗತ್ಯ. ಈ ಗುಣವನ್ನು ಹೊಂದಿರುವ ಆಹಾರವೆಂದರೆ ಖಾಲಿ ಹೊಟ್ಟೆಯಲ್ಲಿ ಬೆಲ್ಲ ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಕುಡಿಯುವುದು. ಇದರಿಂದ ತೂಕ ಇಳಿಯುವ ಜೊತೆಗೇ ಬೆಲ್ಲದ ಹಲವಾರು ಪ್ರಯೋಜನಗಳೂ ಲಭಿಸಿದಂತಾಗುತ್ತದೆ.

ಹಾಲಿಗೆ ಬೆಲ್ಲ ಹಾಕಿ ಕುಡಿಯುವುದರ ಆರೋಗ್ಯಕಾರಿ ಪ್ರಯೋಜನಗಳು

ಈ ಪಾನೀಯವನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬನ್ನು ದೇಹ ಬಳಸಲೇಬೇಕಾಗುತ್ತದೆ, ಇದೇ ಸೊಂಟದ ಸುತ್ತಳತೆಯನ್ನು ಕರಗಿಸಲು ನೆರವಾಗುತ್ತದೆ. ಬೆಲ್ಲ ಒಂದು ನೈಸರ್ಗಿಕ ಸಿಹಿವಸ್ತುವಾಗಿದ್ದು ಬಿಳಿ ಸಕ್ಕರೆ ಎಂಬ ಅಪಾಯಕಾರಿ ಅಹಾರಕ್ಕಿಂತ ಹೆಚ್ಚು ಸುರಕ್ಷಿತ ಹಾಗೂ ಸಕ್ಕರೆಯ ಬದಲಿಗೆ ಬಳಸಬಹುದಾದ ಪರ್ಯಾಯವಾಗಿದೆ. ಬೆಲ್ಲದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಪೊಟ್ಯಾಶಿಯಂ ಹಾಗೂ ಇತರ ವಿಟಮಿನ್ನುಗಳು ಹಾಗೂ ಖನಿಜಗಳಿವೆ, ಇವೆಲ್ಲವೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.

1.ತೂಕ ಇಳಿಸಲು ನೆರವಾಗುವ ಬೆಲ್ಲ

1.ತೂಕ ಇಳಿಸಲು ನೆರವಾಗುವ ಬೆಲ್ಲ

ಬೆಲ್ಲದಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದ್ದು ಇವು ಜೀವರಾಸಾಯನಿಕ ಕ್ರಿಯೆ ಉತ್ತಮಗೊಳಿಸಲು, ದೇಹದಲ್ಲಿ ಎಲೆಕ್ಟ್ರೋಲೈಟುಗಳ ಸಮತೋಲನವನ್ನು ಕಾಪಾಡಲು ಹಾಗೂ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ಈ ಕೆಲಸಗಳಿಗೆ ಹೆಚ್ಚಿನ ಕೊಬ್ಬನ್ನು ಬಳಸುವ ಮೂಲಕ ತೂಕ ಇಳಿಸಲೂ ನೆರವಾಗುತ್ತದೆ. ತೂಕ ಇಳಿಸಲು ಸಮತೋಲನ ಪ್ರಮಾಣದಲ್ಲಿ ಮಾತ್ರವೇ ಬೆಲ್ಲವನ್ನು ಸೇವಿಸುವುದು ಅಗತ್ಯವಾಗಿದೆ.

2. ಜೀರ್ಣಕ್ರಿಯೆಗೆ ನೆರವಾಗುತ್ತದೆ:

2. ಜೀರ್ಣಕ್ರಿಯೆಗೆ ನೆರವಾಗುತ್ತದೆ:

ಬೆಲ್ಲದ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ ಹಾಗೂ ಇದೇ ಕಾರಣಕ್ಕೆ ಮಲಬದ್ಧತೆಯ ತೊಂದರೆ ಇರುವ ವ್ಯಕ್ತಿಗಳಿಗೆ ಈ ಆಹಾರವನ್ನು ಸೇವಿಸುವಂತೆ ಸಲಹೆ ಮಾಡಲಾಗುತ್ತದೆ. ಬೆಲ್ಲ ಸೇರಿಸಿದ ಆಹಾರ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಒಟ್ಟಾರೆ ಜೀರ್ಣವ್ಯವಸ್ಥೆಯ ಕಾರ್ಯಕ್ಷಮತೆ ಉತ್ತಮ ಗೊಳ್ಳುತ್ತದೆ. ಮುಂದಿನ ಬಾರಿ ಅಜೀರ್ಣತೆ ಎದುರಾದರೆ, ಬೆಲ್ಲ ಸೇವಿಸಿ.

3. ರಕ್ತವನ್ನು ಶುದ್ಧೀಕರಿಸುತ್ತದೆ

3. ರಕ್ತವನ್ನು ಶುದ್ಧೀಕರಿಸುತ್ತದೆ

ಬೆಲ್ಲದ ಸೇವನೆಯಿಂದ ರಕ್ತ ಶುದ್ಧೀಕರಣಗೊಳ್ಳುತ್ತದೆ ಹಾಗೂ ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ರಕ್ತಪರಿಚಲನೆ ವ್ಯವಸ್ಥೆಯೂ ಉತ್ತಮಗೊಳ್ಳುತ್ತದೆ. ಅಲ್ಲದೇ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶ ಹೆಚ್ಚಿಸಲು ಹಾಗೂ ಈ ಮೂಲಕ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸಲೂ ನೆರವಾಗುತ್ತದೆ. ರಕ್ತಪರಿಚಲನೆ ಉತ್ತಮಗೊಳ್ಳುವ ಮೂಲಕ ಹೃದಯ ಸಂಬಂಧಿ ಮತ್ತು ರಕ್ತಸಂಬಂಧಿ ತೊಂದರೆಗಳಿಂದ ರಕ್ಷಣೆ ಪಡೆದಂತಾಗುತ್ತದೆ.

4. ಮಾಸಿಕ ದಿನಗಳ ತೊಂದರೆಯನ್ನು ಸರಿಪಡಿಸುತ್ತದೆ

4. ಮಾಸಿಕ ದಿನಗಳ ತೊಂದರೆಯನ್ನು ಸರಿಪಡಿಸುತ್ತದೆ

ಮಾಸಿಕ ದಿನಗಳಲ್ಲಿ ಎದುರಾಗುವ ತೊಂದರೆಗಳನ್ನು ಸರಿಪಡಿಸಲು ಬೆಲ್ಲ ಉತ್ತಮ ನೈಸರ್ಗಿಕ ಸಾಮಾಗ್ರಿಯಾಗಿದೆ. ಮಾಸಿಕ ದಿನಗಳ ಸಮಯದಲ್ಲಿ ಮಹಿಳೆಯರು ಬೆಲ್ಲವನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ಕೆಳಹೊಟ್ಟೆಯ ನೋವು ಮತ್ತು ಸೆಡೆತಕ್ಕೊಳಗಾಗುವುದನ್ನು ತಪ್ಪಿಸಬಹುದು. ಬೆಲ್ಲ ಸರಾಗ ರಕ್ತಪರಿಚಲನೆಗೆ ನೆರವಾಗುವ ಮೂಲಕ ಮಾಸಿಕ ದಿನಗಳನ್ನು ಸುಲಭವಾಗಿ ಕಳೆಯಲು ಸಾಧ್ಯವಾಗುತ್ತದೆ.

5. ರಕ್ತಹೀನತೆಯಿಂದ ರಕ್ಷಿಸುತ್ತದೆ

5. ರಕ್ತಹೀನತೆಯಿಂದ ರಕ್ಷಿಸುತ್ತದೆ

ಬೆಲ್ಲದ ಸೇವನೆಯಿಂದ ರಕ್ತಹೀನತೆಗೆ ರಕ್ಷಣೆ ಪಡೆಯಬಹುದೆಂದು ನಿಮಗೆ ಗೊತ್ತಿತ್ತೇ? ಬೆಲ್ಲದಲ್ಲಿ ಉತ್ತಮ ಪ್ರಮಾಣದ ಕಬ್ಬಿಣ ಹಾಗೂ ಫೋಲೇಟ್ ಇದೆ. ಇವು ರಕ್ತದಲ್ಲಿ ಉತ್ತಮ ಪ್ರಮಾಣದ ಕೆಂಪು ರಕ್ತಕಣಗಳಿರುವಂತೆ ನೋಡಿಕೊಳ್ಳುತ್ತವೆ. ಅಲ್ಲದೇ ಬೆಲ್ಲದ ಸೇವನೆಯಿಂದ ದೇಹಕ್ಕೆ ತಕ್ಷಣ ಶಕ್ತಿ ದೊರಕುತ್ತದೆ ಹಾಗೂ ರಕ್ತ ಹೀನಎಯಿಂದ ಎದುರಾಗುವ ಸುಸ್ತು, ನಿರಾಸಕ್ತಿ, ಆಯಾಸಗಳನ್ನು ಹೊಡೆದೋಡಿಸಿ ನವಚೈತನ್ಯ ಒದಗಿಸುತ್ತದೆ.

6. ನರವ್ಯವಸ್ಥೆಯ ತೊಂದರೆಗಳಿಂದ ರಕ್ಷಿಸುತ್ತದೆ

6. ನರವ್ಯವಸ್ಥೆಯ ತೊಂದರೆಗಳಿಂದ ರಕ್ಷಿಸುತ್ತದೆ

ಬೆಲ್ಲದಲ್ಲಿ ಹಲವಾರು ನೈಸರ್ಗಿಕ ಗುಣಗಳಿದ್ದು ಇವುಗಳು ನರವ್ಯವಸ್ಥೆಯನ್ನು ಉತ್ತಮವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಅಲ್ಲದೇ ನರವ್ಯವಸ್ಥೆಗೆ ಸಂಬಂಧಿಸಿದ ಪ್ರಮುಖ ತೊಂದರೆಗಳಿಂದ ರಕ್ಷಿಸುತ್ತದೆ. ತನ್ಮೂಲಕ ನಿಯಮಿತವಾಗಿ ಬೆಲ್ಲವನ್ನು ಸೇವಿಸುವ ವ್ಯಕ್ತಿಗಳು ಉತ್ತಮ ಆರೋಗ್ಯ ಹಾಗೂ ನರವ್ಯವಸ್ಥೆ ಹೊಂದಿರಲು ನೆರವಾಗುತ್ತದೆ.

7. ಉಸಿರಾಟದ ತೊಂದರೆಗಳಿಂದ ರಕ್ಷಿಸುತ್ತದೆ

7. ಉಸಿರಾಟದ ತೊಂದರೆಗಳಿಂದ ರಕ್ಷಿಸುತ್ತದೆ

ನಿಯಮಿತವಾಗಿ ಬೆಲ್ಲವನ್ನು ಸೇವಿಸುತ್ತಾ ಬರುವ ಮೂಲಕ ಅಸ್ತಮಾ ಹಾಗೂ ಬ್ರಾಂಕೈಟಿಸ್ ನಂತಹ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ಪ್ರಕಾರ ಎಳ್ಳು ಮತ್ತು ಬೆಲ್ಲವನ್ನು ಬೆರೆಸಿ ಸೇವಿಸುವ ಮೂಲಕ ಉಸಿರಾಟದ ತೊಂದರೆ ಇರುವ ವ್ಯಕ್ತಿಗಳಿಗೆ ಹೆಚ್ಚಿನ ಪ್ರಯೋಜನ ಪಡೆಯುತ್ತದೆ ಎಂಬ ಕಾರಣಕ್ಕೆ ಆರೋಗ್ಯ ತಜ್ಞರು ಇದನ್ನು ಸೇವಿಸಲು ಸಲಹೆ ಮಾಡುತ್ತಾರೆ. ಅಲ್ಲದೇ ದೇಹದ ತಾಪಮಾನವನ್ನು ಕಾಪಾಡಲೂ ಬೆಲ್ಲ ನೆರವಾಗುತ್ತದೆ. ಇದೇ ಕಾರಣಕ್ಕೆ ಬೇಸಿಗೆಯಲ್ಲಿ ಬರೆಯ ನೀರು ಕುಡಿಯುವ ಬದಲು ಬೆಲ್ಲದ ತುಂಡಿನೊಂದಿಗೆ ಸೇವಿಸಲು ಹಿರಿಯರು ಸಲಹೆ ಮಾಡುತ್ತಾರೆ.

8. ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ಧವಾಗಿದೆ

8. ಆಂಟಿ ಆಕ್ಸಿಡೆಂಟುಗಳಿಂದ ಸಮೃದ್ಧವಾಗಿದೆ

ಬೆಲ್ಲದಲ್ಲಿ ಹಲವಾರು ಆಂಟಿ ಆಕ್ಸಿಡೆಂಟುಗಳಿವೆ, ವಿಶೇಷವಾಗಿ ಸೆಲೆನಿಯಂ ದೇಹದ ಮೇಲೆ ಧಾಳಿ ಎಸಗಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡುತ್ತದೆ. ಈ ಆಂಟಿ ಆಕ್ಸಿಡೆಂಟುಗಳು ಹಲವಾರು ರೋಗಗಳಿಂದ ರಕ್ಷಣೆ ಒದಗಿಸುತ್ತದೆ ಹಾಗೂ ವೃದ್ದಾಪ್ಯದ ಸೂಚನೆಗಳನ್ನು ತಡವಾಗಿಸುತ್ತವೆ. ಟೀ ಅಥವಾ ಬಿಸಿನೀರಿನಲ್ಲಿ ಬೆಲ್ಲವನ್ನು ಬೆರೆಸಿ ಕುಡಿಯುವ ಮೂಲಕ ಶೀತ ಮತ್ತು ಕೆಮ್ಮು ತಕ್ಷಣ ಮಾಯವಾಗುತ್ತದೆ ಹಾಗೂ ಸಾಮಾನ್ಯ ತಲೆನೋವು ಮತ್ತು ಮೈಗ್ರೇನ್ ತಲೆನೋವು ಕಡಿಮೆಯಾಗಿಸಲೂ ನೆರವಾಗುತ್ತದೆ.

9. ಮೂಳೆಸಂಧುಗಳ ನೋವಿನಿಂದ ಶಮನ ನೀಡುತ್ತದೆ

9. ಮೂಳೆಸಂಧುಗಳ ನೋವಿನಿಂದ ಶಮನ ನೀಡುತ್ತದೆ

ಒಂದು ವೇಳೆ ನಿಮಗೆ ಸಂಧಿವಾತದ ತೊಂದರೆ ಇದ್ದರೆ ಬೆಲ್ಲ ಸೇವಿಸಲು ಪ್ರಾರಂಭಿಸಿ. ಆರೋಗ್ಯ ತಜ್ಞರ ಪ್ರಕಾರ ಒಂದು ಚಿಕ್ಕ ತುಂಡು ಹಸಿಶುಂಠಿಯೊಂದಿಗೆ ಬೆಲ್ಲವನ್ನು ಸೇವಿಸುವ ಮೂಲಕ ಸಂಧಿವಾತದ ನೋವು ಕಡಿಮೆಯಾಗುತ್ತದೆ. ಜೊತೆಗೇ, ಒಂದು ಲೋಟ ಬಿಸಿಹಾಲಿನಲ್ಲಿ ಒಂದು ದೊಡ್ಡ ಚಮಚದಷ್ಟು ಬೆಲ್ಲವನ್ನು ಬೆರೆಸಿ ಕುಡಿಯುವ ಮೂಲಕ ಮೂಳೆಗಳು ದೃಢಗೊಳ್ಳಲು ಹಾಗೂ ಮೂಳೆಗಳಿಗೆ ಸಂಬಂಧಿಸಿದ ತೊಂದರೆಗಳನ್ನು ದೂರವಿಡಲು ನೆರವಾಗುತ್ತದೆ.

10. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

10. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬೆಲ್ಲದಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಖನಿಜಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿ ಬಲಶಾಲಿಯಾಗಿದ್ದರೆ ವಿವಿಧ ರೋಗಗಳು ಹಾಗೂ ಇತರ ಸೋಂಕು ಎದುರಾಗುವ ಸಾಧ್ಯತೆಗಳೂ ಕಡಿಮೆಯಾಗುತ್ತವೆ. ಬೆಲ್ಲದಲ್ಲಿ ಸತು ಸಮೃದ್ಧವಾಗಿದ್ದು ಇದರೊಂದಿಗೆ ಸೆಲೆನಿಯಂ ಸಹಾ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಉತ್ಕರ್ಷಣಶೀಲ ಒತ್ತಡದ ಮೂಲಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳು ದೇಹದ ಮೇಲೆ ಎಸಗುವ ಹಾನಿಯಿಂದ ರಕ್ಷಣೆ ಒದಗಿಸಬಹುದು.

11. ಮೂತ್ರನಾಳದ ಸೋಂಕಿನಿಂದ ರಕ್ಷಣೆ ಒದಗಿಸುತ್ತದೆ

11. ಮೂತ್ರನಾಳದ ಸೋಂಕಿನಿಂದ ರಕ್ಷಣೆ ಒದಗಿಸುತ್ತದೆ

ಬೆಲ್ಲ ಒಂದು ನೈಸರ್ಗಿಕ ಮೂತ್ರವರ್ಧಕವಾಗಿದ್ದು ಮೂತ್ರದ ಪ್ರಮಾಣ ಹೆಚ್ಚಿಸಲು ನೆರವಾಗುತ್ತದೆ. ಈ ಗುಣ ಮೂತ್ರನಾಳದ ಸೋಂಕು ಹಾಗೂ ಮೂತ್ರವಿಸರ್ಜನೆಯ ತೊಂದರೆ ಇರುವ ವ್ಯಕ್ತಿಗಳಿಗೆ ವರದಾನವಾಗಿದೆ. ಮೂತ್ರನಾಳ ಹಾಗೂ ಮೂತ್ರಕೋಶದ ಸೋಂಕುಗಳನ್ನು ಬೆಲ್ಲ ಕಡಿಮೆಗೊಳಿಸುತ್ತದೆ. ಮೂತ್ರದ ಪ್ರಮಾಣ ಹೆಚ್ಚಿಸಲು ತಜ್ಞರು ಬೆಲ್ಲ ಬೆರೆಸಿದ ಬಿಸಿ ಹಾಲನ್ನು ಕುಡಿಯುವಂತೆ ಸಲಹೆ ಮಾಡುತ್ತಾರೆ.

12. ವೀರ್ಯಾಣುಗಳ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ

12. ವೀರ್ಯಾಣುಗಳ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ

ಆಯುರ್ವೇದದ ಪ್ರಕಾರ ಬೆಲ್ಲ ಮತ್ತು ನೆಲ್ಲಿಕಾಯಿಯನ್ನು ಬೆರೆಸಿ ಕುಡಿಯುವ ಮೂಲಕ ವೀರ್ಯಾಣುಗಳ ಗುಣಮಟ್ಟ ಹೆಚ್ಚುತ್ತದೆ. ಬೆಲ್ಲದ ಸೇವನೆಯಿಂದ ವೀರ್ಯಾ ಣುಗಳ ಸಂಖ್ಯೆಯೂ ಹೆಚ್ಚುತ್ತದೆ ಹಾಗೂ ದೇಹದ ಆಯಾಸವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ಮೂತ್ರನಾಳ ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದ ತೊಂದರೆ ಗಳಿಂದಲೂ ರಕ್ಷಣೆ ಲಭಿಸುತ್ತದೆ.

13. ಶಕ್ತಿಯ ಆಗರವಾಗಿದೆ

13. ಶಕ್ತಿಯ ಆಗರವಾಗಿದೆ

ಬೆಲ್ಲದಲ್ಲಿ ಸಂಯುಕ್ತ ಕಾರ್ಬೋಹೈಡ್ರೇಟುಗಳಿಂದ ಸಮೃದ್ಧವಾದ ಆಹಾರವಾಗಿದೆ. ಸಕ್ಕರೆ ಒಂದು ಸರಳ ಕಾರ್ಬೋಹೈಡ್ರೇಟ್ ಆಗಿದೆ. ಇದೇ ಕಾರಣಕ್ಕೆ ಸಕ್ಕರೆಯ ಸೇವನೆಯಿಂದ ತಕ್ಷಣವೇ ಶಕ್ತಿ ದೊರಕಿದರೆ ಬೆಲ್ಲದ ಸೇವನೆಯಿಂದ ನಿಧಾನವಾಗಿ, ಹೆಚ್ಚಿನ ಹೊತ್ತಿನವರೆಗೆ ನಿರಂತರವಾಗಿ ಶಕ್ತಿ ಒದಗಿಸುತ್ತದೆ. ಈ ಮೂಲಕ ರಕ್ತದಲ್ಲಿ ನಿಧಾನವಾಗಿ ಸಕ್ಕರೆ ಬೆರೆಯುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟ ಥಟ್ಟನೇ ಏರುವುದಿಲ್ಲ! ಇದೇ ಕಾರಣಕ್ಕೆ ಎಲ್ಲೆಲ್ಲಿ ಬಿಳಿ ಸಕ್ಕರೆಯ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಬೆಲ್ಲವನ್ನು ಬಳಸುವುದು ಜಾಣತಕರ ಕ್ರಮವಾಗಿದೆ. ಇಂದಿನಿಂದಲೇ ನಿಮ್ಮ ಟೀ ಕಾಫಿಗಳಲ್ಲಿ ಸಕ್ಕರೆಯ ಬದಲು ಬೆಲ್ಲ ಬೆರೆಸಲು ಪ್ರಾರಂಭಿಸಿ.

ತೂಕ ಇಳಿಸಲು ದಿನಕ್ಕೆಷ್ಟು ಬೆಲ್ಲ ಸೇವಿಸಬೇಕು?

ತೂಕ ಇಳಿಸಲು ದಿನಕ್ಕೆಷ್ಟು ಬೆಲ್ಲ ಸೇವಿಸಬೇಕು?

ಬೆಲ್ಲವನ್ನು ನಿತ್ಯದ ಆಹಾರದಲ್ಲಿ ಹಲವು ವಿಧಗಳಲ್ಲಿ ಸೇವಿಸಬಹುದು. ಊಟದ ಬಳಿಕ ಚಿಕ್ಕ ತುಂಡನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ನೆರವೇರಲು ಪ್ರಾರಂಭ ದೊರಕುತ್ತದೆ. ತೂಕ ಇಳಿಸಲು ಯತ್ನಿಸುತ್ತಿರುವ ವ್ಯಕ್ತಿಗಳು ಬೆಲ್ಲ, ಲಿಂಬೆನೀರು ಬೆರೆಸಿದ ಉಗುರುಬೆಚ್ಚನೆಯ ನೀರನ್ನು ಸೇವಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು. ಆದರೆ ಬೆಲ್ಲದ ಪ್ರಮಾಣ ಅಧಿಕ ವಾಗಬಾರದು, ಬದಲಿಗೆ ಚಿಕ್ಕ ತುಂಡು ಸಾಕಾಗುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಯಿತೇ? ಹೌದು ಎಂದಾದಲ್ಲಿ ನಿಮ್ಮ ಅಪ್ತರು ಹಾಗೂ ಸ್ನೇಹಿತರೊಂದಿಗೆ ಈ ಲೇಖನದ ಕೊಂಡಿಯನ್ನು ಹಂಚಿಕೊಳ್ಳಿ.

English summary

13 Awesome Health Benefits Of Jaggery You Didn't Know

One food that you should include in your weight loss diet is jaggery and to double up the benefits, combine warm water and jaggery and drink it on an empty stomach. This drink is considered to be the best fat-burning drink to reduce belly fat faster. The health benefits of jaggery are it treats digestion and anemia, cures cough and cold, promotes weight loss, etc.
X
Desktop Bottom Promotion