ಎಳ್ಳಿನ ಬೀಜ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

Posted By: Hemanth
Subscribe to Boldsky

ಸಾವಿರಾರು ವರ್ಷಗಳಿಂದಲೂ ಭಾರತೀಯರು ತಮ್ಮ ಅಡುಗೆ ರುಚಿ ಹೆಚ್ಚಿಸಲು ಬಳಸಿಕೊಂಡು ಬಂದಿರುವಂತಹ ಎಳ್ಳು ತುಂಬಾ ಆರೋಗ್ಯಕಾರಿ ಎಂದು ಹಲವಾರು ಸಂಶೋಧನೆಗಳಿಂದ ತಿಳಿದುಬಂದಿದೆ. ಎಳ್ಳಿನಲ್ಲಿ ಇರುಂತಹ ಪೋಷಕಾಂಶಗಳು ಹಾಗೂ ವಿಟಮಿನ್‌ಗಳು ನಮ್ಮ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿ.

ಎಳ್ಳಿನಲ್ಲಿ ಇರುವಂತಹ ಹಲವಾರು ಅಂಶಗಳು ಕ್ಯಾನ್ಸರ್, ಮಧುಮೇಹ, ಅಧಿಕರಕ್ತದೊತ್ತಡ ನಿಯಂತ್ರಿಸಿ, ಎಲುಬುಗಳನ್ನು ಬಲಶಾಲಿಯಾಗಿಸುವುದು. ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ ಇತರ ಹಲವಾರು ಕಾಯಿಲೆಗಳನ್ನು ಇದು ತಡೆಯುವುದು. ಇದರಿಂದ ತಯಾರಿಸಲ್ಪಡುವಂತಹ ಎಣ್ಣೆಯು ಆರೋಗ್ಯಕ್ಕೆ ತುಂಬಾ ಲಾಭಕರ. ಇದರಲ್ಲಿ ಕ್ಯಾಲ್ಸಿಯಂ, ಸತು, ಕಬ್ಬಿನಾಂಶ, ಮೆಗ್ನಿಶಿಯಂ, ಫ್ರೊಸ್ಪರಸ್, ಮ್ಯಾಂಗನೀಸ್, ನಾರಿನಾಂಶ, ವಿಟಮಿನ್ ಬಿ6 ಇತ್ಯಾದಿಗಳಿವೆ. ಎಳ್ಳಿನಲ್ಲಿರುವ ಆರೋಗ್ಯ ಲಾಭದ ಬಗ್ಗೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದೆ...  

ಜೀರ್ಣಕ್ರಿಯೆ ಸುಧಾರಿಸುವುದು

ಜೀರ್ಣಕ್ರಿಯೆ ಸುಧಾರಿಸುವುದು

ಆರೋಗ್ಯಕರ ಜೀರ್ಣಕ್ರಿಯೆ ವ್ಯವಸ್ಥೆಗೆ ಬೇಕಾಗಿರುವಂತಹ ನಾರಿನಾಂಶವು ಎಳ್ಳಿನಲ್ಲಿದೆ. ಕರುಳಿನ ಕ್ರಿಯೆಯನ್ನು ಸುಧಾರಿಸುವ ಮೂಲಕ ಇದು ಆರೋಗ್ಯಕರ ಜೀರ್ಣಕ್ರಿಯೆಗೆ ನೆರವಾಗುವುದು. ಎಳ್ಳು ಮಲಬದ್ಧತೆ ಮತ್ತು ಅತಿಸಾರವನ್ನು ತಡೆಯುವುದು. ಕರುಳಿನ ಹಲವಾರು ರೋಗಗಳು ಮತ್ತು ಕ್ಯಾನ್ಸರ್ ತಡೆಯುವುದು.

ಅಧಿಕ ರಕ್ತದೊತ್ತಡ ತಡೆಯುವುದು

ಅಧಿಕ ರಕ್ತದೊತ್ತಡ ತಡೆಯುವುದು

ಎಳ್ಳು ಅಧಿಕ ರಕ್ತದೊತ್ತಡವನ್ನು ತಡೆಯುವ ಮೂಲಕ ಹೃದಯದ ಒತ್ತಡ ಕಡಿಮೆ ಮಾಡುವುದು. ಇದು ಹಲವಾರು ರೀತಿಯ ಹೃದಯದ ಕಾಯಿಲೆ ತಡೆಯುವುದು. ಎಳ್ಳಿನಲ್ಲಿ ಇರುವಂತಹ ಮೆಗ್ನಿಶಿಯಂ ಅಧಿಕ ರಕ್ತದೊತ್ತಡ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಎಳ್ಳಿನಲ್ಲಿ ಶೇ. 25ರಷ್ಟು ಮೆಗ್ನಿಶಿಯಂ ಇದೆ.

ಕ್ಯಾನ್ಸರ್ ತಡೆಯುವುದು

ಕ್ಯಾನ್ಸರ್ ತಡೆಯುವುದು

ರಕ್ತ, ಸ್ತನ, ಕರುಳು, ಶ್ವಾಸಕೋಶ ಮತ್ತು ಜನನೇಂದ್ರಿಯದ ಕ್ಯಾನ್ಸರ್ ನ್ನು ಎಳ್ಳು ತಡೆಯುವುದು. ಮೆಗ್ನಿಶಿಯಂ ಮತ್ತು ಫೈಟೇಟ್ ಇರುವಂತಹ ಕ್ಯಾನ್ಸರ್ ವಿರೋಧಿ ಗುಣಗಳು ಫ್ರೀ ರ್ಯಾಡಿಕಲ್ ನ್ನು ತಗ್ಗಿಸುವ ಕಾರಣ ಎಳ್ಳಿನಲ್ಲಿ ಕ್ಯಾನ್ಸರ್ ತಡೆಯುವ ಗುಣಗಳಿವೆ.

ಹಾನಿಕಾರಕ ವಿಕಿರಣಗಳಿಂದ ತಡೆಯುವುದು

ಹಾನಿಕಾರಕ ವಿಕಿರಣಗಳಿಂದ ತಡೆಯುವುದು

ಹಾನಿಕಾರಕ ವಿಕಿರಣಗಳಿಂದ ಡಿಎನ್ ಎ ರಕ್ಷಿಸುವಂತಹ ಸಾಮರ್ಥ್ಯವು ಎಳ್ಳಿನಲ್ಲಿದೆ. ಕ್ಯಾನ್ಸರ್ ಚಿಕಿತ್ಸೆ ವೇಳೆ ವಿಕಿರಣಗಳು ಬರುವುದು. ಕಿಮೋಥೆರಪಿ ಮತ್ತು ರೇಡಿಯೋಥೆರಫಿ ಚಿಕಿತ್ಸೆ ವೇಳೆ ವಿಕಿರಣಗಳು ದೇಹದೊಳಗೆ ಬರುವುದು. ಎಳ್ಳನ್ನು ಸೇವಿಸುವುದರಿಂದ ನಿಮಗೆ ಶಕ್ತಿ ಬರುವುದು ಮತ್ತು ಕ್ಯಾನ್ಸರ್ ಸಾಧ್ಯತೆ ಕಡಿಮೆಯಾಗುವುದು.

ಚಯಾಪಚಯಾ ಕ್ರಿಯೆ ವೃದ್ಧಿಸುವುದು

ಚಯಾಪಚಯಾ ಕ್ರಿಯೆ ವೃದ್ಧಿಸುವುದು

ಎಳ್ಳಿನಲ್ಲಿ ಇರುವಂತಹ ಪ್ರೋಟೀನ್ ಸ್ನಾಯುಗಳ ಕೋಶ ಬಲಪಡಿಸುವುದು ಮಾತ್ರವಲ್ಲದೆ ಅದನ್ನು ಸರಿಪಡಿಸುವುದು. ಇದು ಕೋಶಗಳ ಸಂಪೂರ್ಣ ಬೆಳವಣಿಗೆ, ಶಕ್ತಿಯ ಮಟ್ಟ, ಆರೋಗ್ಯವನ್ನು ಸುಧಾರಿಸುವುದು. ಇದರಿಂದ ಚಯಾಪಚಯ ಕ್ರಿಯೆ ಸರಾಗವಾಗುವುದು.

ಮಧುಮೇಹ ನಿಯಂತ್ರಣದಲ್ಲಿಡಲು

ಮಧುಮೇಹ ನಿಯಂತ್ರಣದಲ್ಲಿಡಲು

ಎಳ್ಳಿನಲ್ಲಿ ಇರುವಂತಹ ಮೆಗ್ನಿಶಿಯಂ ಮಧುಮೇಹದ ಸಾಧ್ಯತೆ ತಗ್ಗಿಸುವುದು ಮತ್ತು ಮಧುಮೇಹದ ಲಕ್ಷಣಗಳನ್ನು ನಿಯಂತ್ರಣದಲ್ಲಿಡಲು ನೆರವಾಗುವುದು. ಟೈಪ್ 2 ಮಧುಮೇಹದಿಂದ ಬಳಲುತ್ತಾ ಇರುವವರು ತಮ್ಮ ಆರೋಗ್ಯ ಕ್ರಮದಲ್ಲಿ ಎಳ್ಳು ಅಥವಾ ಎಳ್ಳಿನೆಣ್ಣೆ ಸೇರಿಸಿಕೊಳ್ಳಬಹುದು. ಇದು ದೇಹದಲ್ಲಿ ಇನ್ಸುಲಿನ್ ಮತ್ತು ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ನೆರವಾಗುವುದು.

ಮೂಳೆಗಳ ಆರೋಗ್ಯ ವೃದ್ಧಿಸುವುದು

ಮೂಳೆಗಳ ಆರೋಗ್ಯ ವೃದ್ಧಿಸುವುದು

ಎಳ್ಳಿನಲ್ಲಿ ಕೆಲವು ಪ್ರಮುಖ ಖನಿಜಾಂಶಗಳಾದ ಪ್ರೋಸ್ಪರಸ್, ಕ್ಯಾಲ್ಸಿಯಂ ಮತ್ತು ಸತು ಇದೆ. ಮೂಳೆಗಳ ಆರೋಗ್ಯ ಹಾಗೂ ಬಲಪಡಿಸಲು ಇವುಗಳು ಸಹಕಾರಿ. ಈ ಖನಿಜಾಂಶಗಳು ಮೂಳೆಯ ಪದರ ನಿರ್ಮಾಣ ಮಾಡಿ ಅದನ್ನು ಬಲಗೊಳಿಸುವುದು. ಅಪಘಾತ ಅಥವಾ ಅಸ್ಥಿರಂಧ್ರತೆಯಿಂದ ಹಾನಿಗೀಡಾಗಿರುವ ಮೂಳೆಯನ್ನು ಇದು ಬಲಪಡಿಸುವುದು.

ದೇಹದಲ್ಲಿ ಉರಿಯೂತ ಕಡಿಮೆ ಮಾಡುವುದು

ದೇಹದಲ್ಲಿ ಉರಿಯೂತ ಕಡಿಮೆ ಮಾಡುವುದು

ಎಳ್ಳಿನಲ್ಲಿ ತಾಮ್ರದ ಅಂಶವಿರುವ ಕಾರಣ ಇದು ಗಂಟು, ಸ್ನಾಯುಗಳು ಮತ್ತು ಮೂಳೆಯಲ್ಲಿರುವ ಉರಿಯೂತ ಕಡಿಮೆ ಮಾಡುವುದು. ಇದು ರಕ್ತನಾಳ, ಗಂಟುಗಳು ಮತ್ತು ಮೂಳೆಗಳಿಗೆ ಬಲ ನೀಡುವುದು. ಇದರಿಂದ ರಕ್ತ ಸಂಚಾರವು ಸರಿಯಾಗಿ ಆಗುವುದು ಮತ್ತು ದೇಹದ ಪ್ರತಿಯೊಂದು ಭಾಗಕ್ಕೆ ಸರಿಯಾದ ಆಮ್ಲಜನಕ ಸಿಗುವುದು.

ತ್ವಚೆ ಹಾಗೂ ಕೂದಲಿನ ಆರೈಕೆಗೆ

ತ್ವಚೆ ಹಾಗೂ ಕೂದಲಿನ ಆರೈಕೆಗೆ

ಎಳ್ಳಿನಲ್ಲಿ ಇರುವಂತಹ ಅಧಿಕ ಮಟ್ಟದ ಸತುವಿನಿಂದ ಕೂದಲು, ಚರ್ಮ ಮತ್ತು ಸ್ನಾಯುಗಳ ಕೋಶಗಳು ಬಲಗೊಳ್ಳುವುದು. ಎಳ್ಳೆಣ್ಣೆಯು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು, ವಯಸ್ಸಾಗುವ ಲಕ್ಷಣ ಮತ್ತು ಚರ್ಮದಲ್ಲಿನ ಸುಟ್ಟ ಕಲೆಯ ಗುರುತುಗಳನ್ನು ನಿವಾರಿಸುವುದು.

ಬಾಯಿಯ ಆರೋಗ್ಯಕ್ಕೆ

ಬಾಯಿಯ ಆರೋಗ್ಯಕ್ಕೆ

ಎಳ್ಳಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸಂಕೋಚನ ಗುಣಗಳು ಇವೆ. ಬಾಯಿಯ ಆರೋಗ್ಯಕ್ಕೆ ಇದು ಒಳ್ಳೆಯದು. ಎಳ್ಳಿನ ಎಣ್ಣೆಯಿಂದ ಬಾಯಿ ಮುಕ್ಕಳಿಸಿಕೊಂಡರೆ ಅದರಿಂದ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಮಾಯವಾಗುವುದು ಮತ್ತು ಸಂಪೂರ್ಣ ಬಾಯಿಯ ಆರೋಗ್ಯ ಕಾಪಾಡುವುದು.

ಆತಂಕ ನಿವಾರಿಸಲು

ಆತಂಕ ನಿವಾರಿಸಲು

ಎಳ್ಳಿನಲ್ಲಿ ವಿಟಮಿನ್ ಬಿ1 ಇದ್ದು, ನರಗಳು ಸರಿಯಾಗಿ ಕಾರ್ಯನಿರ್ವಹಿಸಲು ಇದು ತುಂಬಾ ಸಹಕಾರಿ. ವಿಟಮಿನ್ ಬಿ1 ಕೊರತೆಯಿಂದ ಖಿನ್ನತೆ, ಮನಸ್ಸು ಬದಲಾಗುವುದು ಮತ್ತು ಸ್ನಾಯು ಸೆಳೆತ ಉಂಟಾಗುವುದು.

English summary

11 Health Benefits Of Sesame Seeds

Sesame seeds have the powerful ability to prevent various types of cancers, diabetes, lower blood pressure, build strong bones, improve heart health and also help to cure sleep disorders among others.Even the oil extracted from the sesame seeds is beneficial for health. It has a high nutritional content of calcium, iron, zinc, magnesium, phosphorous, manganese, copper, fibre, vitamin B6, etc.Now, let us have a look at the health benefits of sesame seeds.