For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ಈ 10 ಲಾಭಗಳನ್ನು ಪಡೆಯಿರಿ

|

ಈ ಭೂಮಿಯ ಮೇಲೆ ಇರುವ ಪ್ರತಿ ಜೀವಿಯ ಆರೋಗ್ಯಕ್ಕೆ ಅತ್ಯಂತ ಪ್ರಮುಖವಾಗಿ ಬೇಕಾಗಿರುವ ಆಹಾರವೆಂದರೆ ನೀರು. ನೀರಿನ ಕೊರತೆಯನ್ನು ಬಾಯಾರಿಕೆಯ ಮೂಲಕ ಮೆದುಳು ಸೂಚಿಸುತ್ತದೆ. ಆಗೆಲ್ಲಾ ನಾವು ಒಂದು ಲೋಟ ನೀರು ಕುಡಿಯುತ್ತೇವೆ.ಊಟದ ನಡುವೆ ಅಥವಾ ಬಳಿಕ, ಖಾರ ತಿಂದ ಬಳಿಕ, ದಣಿವಾದಾಗ, ಉದ್ವೇಗ, ಹೆದರಿಕೆ ಉಂಟಾದಾಗ ಮೊದಲಾದ ಸಂದರ್ಭದಲ್ಲಿ ಬಾಯಾರಿಕೆಯಾಗಿ ನೀರು ಕುಡಿಯುತ್ತೇವೆ. ನಮ್ಮ ದೇಹಗಳ ಸುಮಾತು ಎಪ್ಪತ್ತರಿಂದ ಎಪ್ಪತ್ತೈದು ಶೇಖಡಾ ನೀರಿನಿಂದ ಕೂಡಿದೆ. ಆದ್ದರಿಂದ ನಮ್ಮ ದೇಹವನ್ನು ಆರೋಗ್ಯಕರವಾಗಿರಿಸಲು ದೇಹಕ್ಕೆ ನೀರಿನ ಪೂರೈಕೆಯನ್ನು ಸತತವಾಗಿರಿಸಬೇಕು. ಪ್ರತಿ ಹದಿನೈದು ಇಪ್ಪತ್ತು ನಿಮಿಷಗಳಿಗೊಮ್ಮೆಯಾದರೂ ಕೊಂಚ ನೀರು ಕುಡಿಯುತ್ತಿರುವ ಮೂಲಕ ಗರಿಷ್ಟ ಆರೋಗ್ಯ ಪಡೆಯಬಹುದು.

ಜಾಪಾನೀಯರು ಒಂದು ಸಂಪ್ರದಾಯದಂತೆ ಬೆಳಿಗ್ಗೆದ್ದ ತಕ್ಷಣವೇ ಒಂದು ಲೋಟ ನೀರು ಕುಡಿಯುತ್ತಾರೆ. ಇದೇ ಕಾರಣಕ್ಕೆ ಅವರ ದೇಹಗಳು ಆರೋಗ್ಯಕರ ಹಾಗೂ ಸ್ಥೂಲಕಾಯವಿಲ್ಲದೇ ಇದೆ. ಈ ಆರೋಗ್ಯ ಪಡೆಯಬೇಕಾದರೆ ನಾವು ಸಹಾ ಈ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಬೆಳಗ್ಗಿನ ಪ್ರಥಮ ಆಹಾರವಾಗಿ, ಖಾಲಿಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರು ಕುಡಿಯಬೇಕು.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?

ಉಗುರುಬೆಚ್ಚನೆಯ ನೀರು ಇಲ್ಲದಿದ್ದರೆ ತಣ್ಣನೆಯ ನೀರು ಸಹಾ ಸರಿ, ಆದರೆ ಬಿಸಿನೀರು ಬೇಡ. ಈ ಮೂಲಕ ರಾತ್ರಿಯ ಅನೈಚ್ಛಿಕ ಕಾರ್ಯಗಳ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ದೇಹದಿಂದ ಹೊರಹಾಕಲ್ಪಡಲು ನೆರವಾಗುತ್ತದೆ. ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗುತ್ತದೆ, ಮೂತ್ರವೂ ಹೊರಹರಿಯುತ್ತದೆ, ಹಸಿವು ಹೆಚ್ಚುತ್ತದೆ ಹಾಗೂ ತಲೆನೋವು ಆವರಿಸುವ ಸಾಧ್ಯತೆಯಿಂದ ರಕ್ಷಿಸುತ್ತದೆ. ಬನ್ನಿ, ಈ ಅಭ್ಯಾಸದಿಂದ ಲಭಿಸುವ ಹತ್ತು ಪ್ರಯೋಜನಗಳ ಬಗ್ಗೆ ಅರಿಯೋಣ....

ಜೀವ ರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ

ಜೀವ ರಾಸಾಯನಿಕ ಕ್ರಿಯೆ ಚುರುಕುಗೊಳ್ಳುತ್ತದೆ

ಒಂದು ವೇಳೆ ನೀವು ತೂಕ ಕಳೆದುಕೊಳ್ಳುವ ಆಹಾರಕ್ರಮ ಅನುಸರಿಸುತ್ತಿದ್ದರೆ ಬೆಳಗ್ಗಿನ ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ಜೀವರಾಸಾಯನಿಕ ಕ್ರಿಯೆ ಸರಿಸುಮಾರು 25% ದಷ್ಟು ಹೆಚ್ಚುತ್ತದೆ. ಇದು ಆಹಾರವನ್ನು ಇನ್ನಷ್ಟು ಶೀಘ್ರವಾಗಿ ಜೀರ್ಣಿಸಲು ಹಾಗೂ ಈ ಮೂಲಕ ಕೊಬ್ಬನ್ನು ಬಳಸಿಕೊಂಡು ತೂಕ ಇಳಿಯಲು ನೆರವಾಗುತ್ತದೆ. ಪರಿಣಾಮವಾಗಿ ದೀರ್ಘಾವಧಿಯಲ್ಲಿ ಈ ಅಭ್ಯಾಸ ಆರೋಗ್ಯವನ್ನು ವೃದ್ದಿಸುವ ಜೊತೆಗೇ ತೂಕವನ್ನು ಕಳೆದುಕೊಳ್ಳಲೂ ನೆರವಾಗುತ್ತದೆ. ಆದ್ದರಿಂದ ಇದುವರೆಗೆ ನೀರು ಕುಡಿಯುವ ಅಭ್ಯಾಸ ರೂಢಿಸಿಲ್ಲದಿದ್ದರೆ ಇಂದಿನಿಂದಲೇ ಪ್ರಾರಂಭಿಸಿ.

ಕರುಳುಗಳ ಕಲ್ಮಶಗಳನ್ನು ನಿವಾರಿಸುತ್ತದೆ

ಕರುಳುಗಳ ಕಲ್ಮಶಗಳನ್ನು ನಿವಾರಿಸುತ್ತದೆ

ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ಕರುಳುಗಳಲ್ಲಿದ್ದ ಕಲ್ಮಶ ಪ್ರಾತಃವಿಧಿಯ ಮೂಲಕ ಸುಲಭವಾಗಿ ವಿಸರ್ಜಿಸಲ್ಪಡುತ್ತದೆ. ನೀರು ಕುಡಿದ ಬಳಿಕ ಕೊಂಚ ಹೊತ್ತಿನಲ್ಲಿಯೇ ಬಹಿರ್ದೆಸೆಗೆ ಅವಸರವಾಗ್ತುತದೆ ಹಾಗೂ ಈ ಮೂಲಕ ಕರುಳುಗಳಲ್ಲಿ ಕಲ್ಮಶ ಉಳಿಯದೇ ಇರಲು ಈ ಅಭ್ಯಾಸ ನೆರವಾಗುತ್ತದೆ. ಅಲ್ಲದೇ ನಿತ್ಯವೂ ಕಲ್ಮಶಗಳು ಒಂದೇ ಸಮಯದಲ್ಲಿ ದೇಹದಿಂದ ವಿಸರ್ಜಿಸಲ್ಪಡುತ್ತಿದ್ದರೆ ಇವುಗಳಿಂದ ಎದುರಾಗಬಹುದಾದ ತೊಂದರೆಗಳೂ ಇಲ್ಲವಾಗುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ನಮ್ಮ ದೇಹದ ದ್ರವಭಾಗದ ಸಮತೋಲನವನ್ನು ಕಾಪಾಡಿಕೊಳ್ಳಲು ನೀರು ಅತಿ ಅಗತ್ಯವಾಗಿದೆ. ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ರೋಗ ನಿರೋಧಕ ಶಕ್ತಿಯೂ ಉತ್ತಮವಾಗಿರುತ್ತದೆ. ತನ್ಮೂಲಕ ದೇಹಕ್ಕೆ ಎದುರಾಗುವ ಹಲವಾರು ಸೋಂಕು ಮತ್ತು ರೋಗಗಳಿಂದ ರಕ್ಷಿಸುತ್ತದೆ. ಬೆಳಗ್ಗಿನಿಂದ ಪ್ರಾರಂಭಿಸಿ ದಿನವಿಡೀ ಸತತವಾಗಿ ನೀರು ಕುಡಿಯುತ್ತಾ ಇರುವ ಮೂಲಕ ಒಟ್ಟಾರೆ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ರೋಗಗಳು ದೂರವೇ ಉಳಿಯುತ್ತವೆ.

ಮೈಗ್ರೇನ್ ತಲೆನೋವಿನ ಆಘಾತದಿಂದ ರಕ್ಷಿಸುತ್ತದೆ

ಮೈಗ್ರೇನ್ ತಲೆನೋವಿನ ಆಘಾತದಿಂದ ರಕ್ಷಿಸುತ್ತದೆ

ಮೈಗ್ರೇನ್ ತಲೆನೋವಿನಿಂದ ಆಗಾಗ ಬಳಲುತ್ತಿರುವವರಿಗೆ ಅವರ ದೇಹದಲ್ಲಿ ನೀರಿನ ಕೊರತೆಯೇ ಪ್ರಮುಖ ಕಾರಣವಾಗಿದೆ. ನಿರ್ಜಲೀಕರಣ ಮೈಗ್ರೇನ್ ತಲೆನೋವು ಪ್ರಾರಂಭವಾಗಲು ಪ್ರಚೋದನೆ ನೀಡಬಹುದು. ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ಈ ಸಾಧ್ಯತೆಯನ್ನು ಇಲ್ಲವಾಗಿಸಬಹುದು ಹಾಗೂ ಹಲ್ಲುಗಳ ತೊಂದರೆಗಳನ್ನೂ ಕನಿಷ್ಠವಾಗಿಸಬಹುದು.

ಹಸಿವನ್ನು ಹೆಚ್ಚಿಸುತ್ತದೆ

ಹಸಿವನ್ನು ಹೆಚ್ಚಿಸುತ್ತದೆ

ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ಹಸಿವನ್ನು ಹೆಚ್ಚಿಸಬಹುದು ಎಂದು ಇದಕ್ಕೂ ಮೊದಲು ಗೊತ್ತಿತ್ತೇ? ಬೆಳಗ್ಗಿನ ಹೊತ್ತಿನಲ್ಲಿ ಜಠರದಲ್ಲಿ ಯಾವುದೇ ಆಹಾರ ಉಳಿದಿರುವುದಿಲ್ಲ ಹಾಗೂ ಈ ಸಮಯದಲ್ಲಿ ನೀರು ಕುಡಿಯುವ ಮೂಲಕ ಕರುಳುಗಳಲ್ಲಿ ಉಳಿಸಿದ್ದ ತ್ಯಾಜ್ಯಗಳನ್ನು ಹೊರಹಾಕಲು ಪ್ರೇರೇಪಿಸುತ್ತದೆ. ಈ ಕ್ರಿಯೆಯಿಂದ ಹಸಿವುಅ ಹೆಚ್ಚುತ್ತದೆ ಹಾಗೂ ಆರೋಗ್ಯಕರ ಆಹಾರ ಸೇವನೆಗೆ ಪ್ರೇರಣೆ ದೊರಕುತ್ತದೆ.

ತ್ವಚೆ ಸಹಜವರ್ಣ ಪಡೆಯುತ್ತದೆ

ತ್ವಚೆ ಸಹಜವರ್ಣ ಪಡೆಯುತ್ತದೆ

ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ತ್ವಚೆಗೂ ಹಲವಾರು ಪ್ರಯೋಜನಗಳಿವೆ. ಈ ಮೂಲಕ ತ್ವಚೆ ತನ್ನ ಸಹಜವರ್ಣವನ್ನು ಪಡೆಯಲು ಹಾಗೂ ಕಾಂತಿಯುಕ್ತವಾಗಿರಲು ಸಾಧ್ಯವಾಗುತ್ತದೆ. ಕಲ್ಮಶದ ಕಾರಣದಿಂದಾಗಿ ಎದುರಾಗಿದ್ದ ಕಲೆಗಳು, ಗೀರುಗಳ ಗುರುತುಗಳು ಮೊದಲಾದವುಗಳು ನಿಧಾನವಾಗಿ ಮಾಯವಾಗುತ್ತವೆ. ಆದ್ದರಿಂದ ಕಲೆರಹಿತ ಮತ್ತು ಕಾಂತಿಯುಕ್ತ ತ್ವಚೆಗಾಗಿ ನಿತ್ಯವೂ ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಕರುಳುಗಳ ಕಲ್ಮಶ ನಿವಾರಿಸುತ್ತದೆ

ಕರುಳುಗಳ ಕಲ್ಮಶ ನಿವಾರಿಸುತ್ತದೆ

ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ದೊಡ್ಡ ಕರುಳಿನಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ವಿಸರ್ಜಿಸಲ್ಪಡಲು ನೆರವಾಗುತ್ತದೆ ಹಾಗೂ ಕರುಳುಗಳಿಂದ ಪೋಷಕಾಂಶಗಳು ಹೀರಲ್ಪಡಲೂ ಸಾಧ್ಯವಾಗುತ್ತದೆ. ಪರಿಣಾಮವಾಗಿ ಕರುಳುಗಳು ಅತ್ಯುತ್ತಮ ಆರೋಗ್ಯ ಪಡೆಯುತ್ತವೆ ಹಾಗೂ ದೀರ್ಘಾವಧಿಯಲ್ಲಿ ಕರುಳಿನ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಇಲ್ಲವಾಗುತ್ತದೆ. ಕರುಳಿನ ಮತ್ತು ಮಲದ್ವಾರದ ಕ್ಯಾನ್ಸರ್ ಅಪಾಯಕರ ಕಾಯಿಲೆಗಳಾಗಿವೆ. ಇವೆರಡೂ ಬೆಳಿಗ್ಗೆ ನೀರು ಕುಡಿಯದ ಅಭ್ಯಾಸವಿಲ್ಲದ, ನಡುವಯಸ್ಸು ದಾಟಿದ ಪುರುಷರು ಮತ್ತು ಮಹಿಳೆಯರನ್ನೇ ಹೆಚ್ಚಾಗಿ ಆವರಿಸುತ್ತದೆ.

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ಬೆಳಿಗ್ಗೆದ್ದ ಬಳಿಕ ಆಯಾಸಗೊಂಡಿದ್ದರೆ ತಕ್ಷಣ ಒಂದು ಲೋಟ ಉಗುರುಬೆಚ್ಚನೆಯ ನೀರು ಕುಡಿಯಿರಿ. ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ರಕ್ತದಲ್ಲಿನ ಕಂಪುರಕ್ತಕಣಗಳಿಗೆ ಪ್ರಚೋದನೆ ದೊರಕುವ ಮೂಲಕ ಇವು ಇನ್ನಷ್ಟು ಹೆಚ್ಚು ಸಂಖ್ಯೆಯಲ್ಲಿ ವೃದ್ದಿಸುತ್ತವೆ ಹಾಗೂ ಹೆಚ್ಚಿನ ಆಮ್ಲಜನಕ ದೇಹದ ಎಲ್ಲಾ ಅಂಗಗಳಿಗೆ ದೊರಕುತ್ತದೆ. ಈ ಮೂಲಕ ದಿನದ ಇತರ ಚಟುವಟಿಕೆಗಳಿಗೆ ಅಗತ್ಯವಾದ ಶಕ್ತಿ ದೊರಕುವ ಮೂಲಕ ದಿನದ ಕೆಲಸಗಳನ್ನು ಹುಮ್ಮಸ್ಸಿನಿಂದ ಪೂರೈಸಲು ಸಾಧ್ಯವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ನೀರಿನಲ್ಲಿ ಕ್ಯಾಲೋರಿಗಳೇ ಇಲ್ಲವಾದುದರಿಂದ ನೀರನ್ನು ಎಷ್ಟು ಕುಡಿದರೂ ತೂಕ ಏರುವ ಪ್ರಶ್ನೆಯೇ ಇಲ್ಲ! ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ದೇಹಕ್ಕೆ ಹಲವಾರು ಪ್ರಯೋಜನಗಳು ದೊರಕುವ ಜೊತೆಗೇ ತೂಕ ಇಳಿಸಲೂ ನೆರವಾಗುತ್ತದೆ. ನೀರಿನ ಲಭ್ಯತೆಯಿಂದ ದೇಹ ಬೇರೆ ಆಹಾರಗಳಿಗೆ ಬೇಡಿಕೆ ಸಲ್ಲಿಸುವುದಿಲ್ಲ ಹಾಗೂ ಹೊಟ್ಟೆ ತುಂಬಿದ ಭಾವನೆಯಿಂದ ಅನಗತ್ಯವಾಗಿ ಅನಾರೋಗ್ಯಕರ ಆಹಾರ ಸೇವಿಸಲೂ ಮನಸ್ಸಾಗದೇ ತೂಕ ಏರುವುದರಿಂದ ತಡೆಯಬಹುದು. ಇದು ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಿ ಹೆಚ್ಚಿನ ಕ್ಯಾಲೋರಿಗಳನ್ನು ಬೇಗಬೇಗನೇ ದಹಿಸುವ ಮೂಲಕ ತೂಕ ಇಳಿಸಲು ನೆರವಾಗುತ್ತದೆ.

ಆರೋಗ್ಯಕರ ಕೂದಲ ಬೆಳವಣಿಗೆಗೆ ನೆರವಾಗುತ್ತದೆ

ಆರೋಗ್ಯಕರ ಕೂದಲ ಬೆಳವಣಿಗೆಗೆ ನೆರವಾಗುತ್ತದೆ

ಖಾಲಿಹೊಟ್ಟೆಯಲ್ಲಿ ನೀರು ಕುಡಿಯುವ ಮೂಲಕ ಕೂದಲಿಗೆ ಅಗತ್ಯವಿರುವ ಎಲ್ಲಾ ವಿಟಮಿನ್ನುಗಳು ಮತ್ತು ಪೋಷಕಾಂಶಗಳು ಲಭಿಸಲು ಸಾಧ್ಯವಾಗುತ್ತದೆ. ದೇಹ ನಿರ್ಜಲೀಕರಣಕ್ಕೆ ಒಳಗಾಗಿದ್ದರೆ ದೇಹ ಚರ್ಮ ಮತ್ತು ಕೂದಲುಗಳಿಗೆ ನೀರು ಒದಗಿಸುವುದಕ್ಕೆ ಕನಿಷ್ಟ ಪ್ರಾಮುಖ್ಯತೆ ನೀಡುತ್ತದೆ. ಪರಿಣಾಮವಾಗಿ ಕೂದಲ ಬುಡ ಶಿಥಿಲಗೊಂಡು ಸುಲಭವಾಗಿ ಉದುರಲು ಸಾಧ್ಯವಾಗುತ್ತದೆ. ಹೀಗಾಗಬಾರದು ಎಂದರೆ ಇಂದಿನಿಂದಲೇ ಖಾಲಿಹೊಟ್ಟೆಯಲ್ಲಿ ನೀರು ಕುಡಿಯಲು ಪ್ರಾರಂಭಿಸಿ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

Top 10 Benefits Of Drinking Water On An Empty Stomach

Do you know that the Japanese for generations regularly practice their morning ritual by drinking a glass of water? That's the reason their bodies are slender and healthy. And that's what exactly you should do too, drink a glass of water, preferably warm, in the morning, especially on an empty stomach. Drinking water on an empty stomach will help to flush out all the toxins that your body had accumulated overnight. A glass of lukewarm water can regularize your bowel movement, help to release toxins through the urine, increase appetite and prevent headache.
X
Desktop Bottom Promotion