For Quick Alerts
ALLOW NOTIFICATIONS  
For Daily Alerts

ಜಾಣ್ಮೆ ಹೆಚ್ಚಿಸಿಕೊಳ್ಳುವ ಹತ್ತು ವಿಧಾನಗಳು

By Hemanth
|

ಮನುಷ್ಯ ಭೂಮಿ ಮೇಲಿನ ಇತರ ಎಲ್ಲಾ ಪ್ರಾಣಿಗಳಿಗಿಂತ ಬುದ್ಧಿವಂತ ಎಂದು ನಂಬಲಾಗಿದೆ. ಆದರೆ ಮನುಷ್ಯರ ಮಧ್ಯೆ ಯಾರು ತುಂಬಾ ಜಾಣರು ಎಂದು ತಿಳಿಯಲು ಐಕ್ಯೂ ಪರೀಕ್ಷೆ ನಡೆಸಲಾಗುತ್ತದೆ. ಇದು ಜಾಣ್ಮೆಗೆ ಅಂತಿಮ ಪರೀಕ್ಷೆಯೆಂದು ನಂಬಲಾಗಿತ್ತು. ಆದರೆ ಇತ್ತೀಚಿನ ವರದಿಯೊಂದರ ಪ್ರಕಾರ ಮನುಷ್ಯ ಜಾಣ್ಮೆಯು ಮೂರು ವಿಭಾಗಗಳಲ್ಲಿದೆ. ಮೊದಲನೇಯದಾಗಿ ಕಾರಣದ ಸಾಮರ್ಥ್ಯ, ಕಡಿಮೆ ಸಮಯದಲ್ಲಿ ನಿಮ್ಮ ನೆನಪಿನ ಬಲ ಮತ್ತು ಮಾತಿನ ಕೌಶಲ್ಯ.

ಮೆದುಳಿನ ಕ್ಷಮತೆ ಹಾಗೂ ಸ್ಮರಣಶಕ್ತಿ ಹೆಚ್ಚಿಸುವ ಆಹಾರಗಳು

ಈ ಮೂರು ಕೂಡ ಮೆದುಳಿನಲ್ಲಿ ತನ್ನದೇ ಆಗಿರುವ ಸ್ವತಂತ್ರ ಕೋಶಗಳನ್ನು ಹೊಂದಿದೆ. ಕೆಲವು ಜನರು ಈ ಮೂರರಲ್ಲಿ ಒಂದರಲ್ಲಿ ಹೆಚ್ಚು ಅಂಕಗಳಿಸಿದರೆ ಇನ್ನು ಎರಡರಲ್ಲಿ ವಿಫಲರಾಗುವರು. ಜಾಣ್ಮೆಯನ್ನು ಹೆಚ್ಚಿಸಬೇಕೆಂದರೆ ನೀವು ಪಾಲಿಸಬೇಕಾದ 10 ಕ್ರಮಗಳನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಅದನ್ನು ತಿಳಿಯಿರಿ....

ಕಲಿಯಿರಿ, ಕಲಿಯಿರಿ ಮತ್ತು ಇನ್ನು ಹೆಚ್ಚು ಕಲಿಯಿರಿ

ಕಲಿಯಿರಿ, ಕಲಿಯಿರಿ ಮತ್ತು ಇನ್ನು ಹೆಚ್ಚು ಕಲಿಯಿರಿ

ಮಾನವನ ಮೆದುಳು ಒಂದು ರೀತಿಯ ಪ್ಲಾಸ್ಟಿಕ್ ಇದ್ದಂತೆ. ಇದು ಮಾಹಿತಿಯನ್ನು ತೆಗೆದಿಟ್ಟುಕೊಳ್ಳುವುದು, ವೇಗವಾಗಿ ಬೆಳೆಯುವುದು. ಆದರೆ ಹೊಸ ಕೌಶಲ್ಯಗಳೊಂದಿಗೆ ಇದರ ಅಂಚನ್ನು ಚೂಪು ಮಾಡಲು ಮರೆತೆರೆ ಆಗ ಧೂಳು ಹಿಡಿದಂತೆ ಆಗುವುದು. ನಿಮ್ಮ ಜಾಣ್ಮೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ನಿಮಗೆ ಅನಿಸಿದ್ರೆ ಆಗ ನೀವು ಪ್ರತಿನಿತ್ಯ ಹೊಸ ಹೊಸ ವಿಚಾರ ಕಲಿಯಿರಿ. ಒಂದು ಲೇಖನ ಓದುವುದು ಅಥವಾ ನಿಮಗೆ ಇಷ್ಟವಾಗಿರುವ ವಿಚಾರದ ಬಗ್ಗೆ ಏನಾದರೂ ಹೊಸತನ್ನು ವೀಕ್ಷಿಸುವುದು.

ಓದಿ

ಓದಿ

ನಿಮಗೆ ಓದಲು ಇಷ್ಟವಿಲ್ಲವೆಂದಾದರೆ ಈ ವಿಚಾರ ತುಂಬಾ ಬೇಸರ ಮೂಡಿಸಬಹುದು. ಆದರೆ ಅಧ್ಯಯನಗಳ ಪ್ರಕಾರ ಓದುವುದರಿಂದ ಅದು ಮೆದುಳಿಗೆ ತುಂಬಾ ಒಳ್ಳೆಯದು. ಇದು ನಿಮ್ಮ ಕಲ್ಪನೆ ಮತ್ತು ಕ್ರಿಯಾತ್ಮಕತೆ ಹೆಚ್ಚಿಸುವುದು ಮಾತ್ರವಲ್ಲದೆ, ನಿಮ್ಮ ಭಾಷಾಜ್ಞಾನ, ಸಾಮರ್ಥ್ಯವನ್ನು ಹೆಚ್ಚಿಸುವುದು.

ಭಾವನಾತ್ಮಕ ಜಾಣ್ಮೆ ಸುಧಾರಿಸಿ

ಭಾವನಾತ್ಮಕ ಜಾಣ್ಮೆ ಸುಧಾರಿಸಿ

ಭಾವನಾತ್ಮಕವಾಗಿ ಯಾರು ತುಂಬಾ ಜಾಣರಾಗಿರುವರೋ ಅವರು ತುಂಬಾ ಒಳ್ಳೆಯ ನಾಯಕರಾಗುವರು ಎಂದು ಅಧ್ಯಯನಗಳು ಹೇಳಿವೆ. ಯಾಕೆಂದರೆ ಇವರಲ್ಲಿ ನಿಷ್ಠೆ ಮತ್ತು ಬೆಂಬಲಿಗರನ್ನು ಪ್ರೇರೇಪಿಸುವ ಶಕ್ತಿ ಇರುವುದು. ನಿಮ್ಮ ಐಕ್ಯೂ ಕಡಿಮೆ ಇದೆ ಎಂದಾದರೆ ಈಗಲೇ ನೀವು ಡೇನಿಯಲ್ ಗೊಲೆಮ್ಯಾನ್ ಅವರ ಪುಸ್ತಕ `ಇಮೋಷನಲ್ ಇಂಟೆಲಿಜೆನ್ಸ್: ವೈ ಇಟ್ ಕ್ಯಾನ್ ಮ್ಯಾಟರ್ ಮೋರ್ ದೆನ್ ಐಕ್ಯೂ' ಓದಿ. ನಿಮಗೆ ತುಂಬಾ ತಿಳಿಯುವುದು.

ದೈನಂದಿನ ಕಾರ್ಯಚಟುವಟಿಕೆ ಮಾಡುವ ರೀತಿ ಬದಲಾಯಿಸಿ

ದೈನಂದಿನ ಕಾರ್ಯಚಟುವಟಿಕೆ ಮಾಡುವ ರೀತಿ ಬದಲಾಯಿಸಿ

ಮೆದುಳು ಒಳ್ಳೆಯ ಕೆಲಸ ಮಾಡಲು ಇದು ಮತ್ತೊಂದು ರೀತಿ. ನಿಮ್ಮ ದೈನಂದಿಕ ಕೆಲಸಗಳನ್ನು ಮಾಡುವ ರೀತಿ ಬದಲಾಯಿಸಿ. ಉದಾಹರಣೆಗೆ ನೀವು ಬಲದ ಕೈಯಲ್ಲಿ ಹಲ್ಲುಜ್ಜುತ್ತಾ ಇದ್ದರೆ, ಅದನ್ನು ಎಡದ ಕೈಯಿಂದ ಮಾಡಿ. ಇದರಿಂದ ನಿಮ್ಮ ಮೆದುಳು ಅದೇ ಚಟುವಟಿಕೆಯಿಂದ ಹೊರಬರುವುದು.

ಯಾವಾಗಲೂ ಗೂಗಲ್ ನಂಬಿ ಕೂರಬೇಡಿ

ಯಾವಾಗಲೂ ಗೂಗಲ್ ನಂಬಿ ಕೂರಬೇಡಿ

ಗೂಗಲ್ ಮತ್ತು ಇತರ ಕೆಲವೊಂದು ತಂತ್ರಜ್ಞಾನಗಳು ನಮ್ಮ ಕೆಲವೊಂದು ಕೆಲಸಗಳನ್ನು ತುಂಬಾ ಸುಲಭಗೊಳಿಸಿವೆ. ಆದರೆ ಇವುಗಳಿಂದಾಗಿ ನಮ್ಮ ಮೆದುಳಿಗೆ ತರಬೇತಿ ನೀಡುವುದು ನಿಂತಿದೆ. ಮುಂದಿನ ಸಲ ಹೊಸ ಊರಿನಲ್ಲಿ ದಾರಿ ಹುಡುಕಬೇಕಾದರೆ ಜಿಪಿಎಸ್ ಬಳಸುವ ಬದಲು ಸ್ಥಳೀಯರಲ್ಲಿ ದಾರಿ ಹೇಳಿ. ಇದರ ಪರಿಣಾಮ ನಿಮ್ಮ ಮೆದುಳಿಗೆ ಕೆಲಸ ಸಿಗುವುದು. ಸೂಚನೆ: ನೀವು ಸಂಪೂರ್ಣವಾಗಿ ತಂತ್ರಜ್ಞಾನದ ಬಳಕೆ ನಿಲ್ಲಿಸಬೇಕೆಂದು ನಾವು ಹೇಳುತ್ತಿಲ್ಲ. ಆದರೆ ಕೆಲವೊಂದು ಸಂದರ್ಭದಲ್ಲಿ ಇಂತಹ ಕೆಲಸಗಳಿಂದ ಮೆದುಳಿಗೆ ಚುರುಕಾಗುವುದು.

ನಿಮಗೆ ವಿಷಯಗಳನ್ನು ವಿವರಿಸಿ

ನಿಮಗೆ ವಿಷಯಗಳನ್ನು ವಿವರಿಸಿ

ನಿಮಗೆ ಹೊಸ ವಿಚಾರ ತಿಳಿದುಬಂದರೆ ಅದರ ಬಗ್ಗೆ ನಿಮಗೆ ಸ್ವಲ್ಪ ಜೋರಾಗಿ ಹೇಳಿಕೊಳ್ಳಿ. ಒಂದು ಕನ್ನಡಿ ಮುಂದೆ ನಿಂತುಕೊಂಡು ಇದನ್ನು ಮಾಡಬಹುದು. ನೀವು ಇದರಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿಯಾಗಿರುವಿರಿ. ಹೀಗೆ ಹೇಳಿಕೊಳ್ಳುವುದರಿಂದ ಅದನ್ನು ನಿಮ್ಮ ಮೆದುಳು ತುಂಬಾ ಚೆನ್ನಾಗಿ ನೆನಪಿಟ್ಟುಕೊಳ್ಳುವುದು.

140 ಅಕ್ಷರಗಳಲ್ಲಿ ಸಾರಾಂಶ ಬರೆಯಿರಿ

140 ಅಕ್ಷರಗಳಲ್ಲಿ ಸಾರಾಂಶ ಬರೆಯಿರಿ

ನೀವು ಟ್ವಿಟ್ಟರ್ ಬಳಸುತ್ತಿದ್ದರೆ ಇದು ತುಂಬಾ ಆಸಕ್ತಿ ಮೂಡಿಸುವುದು. ದೊಡ್ಡ ವಿಚಾರಗಳನ್ನು ಕೇವಲ 140 ಅಕ್ಷರಗಳಲ್ಲಿ ಬರೆಯಿರಿ. ಇದರಿಂದ ನಿಮ್ಮ ವಿಚಾರಗಳಿಗೆ ಕತ್ತರಿ ಪ್ರಯೋಗ ಮಾಡಲು ಸಾಧ್ಯವಾಗುತ್ತದೆ. ಇದರಿಂದ ನಿಮ್ಮ ಸಂವಹನ ಸಾಮರ್ಥ್ಯವು ಹೆಚ್ಚಾಗುವುದು. ಟ್ವಿಟ್ಟರ್ ಬಳಸದೆ ಇದ್ದರೆ ಬೇರೆ ಯಾವುದರಲ್ಲಾದರೂ ಅಥವಾ ಕಾಗದದಲ್ಲಿ ಬರೆಯಿರಿ.

ಮೆದುಳಿಗೆ ಕೆಲಸ ನೀಡುವ ಆಟಗಳನ್ನು ಆಡಿ

ಮೆದುಳಿಗೆ ಕೆಲಸ ನೀಡುವ ಆಟಗಳನ್ನು ಆಡಿ

21ನೇ ಶತಮಾನದಲ್ಲಿ ಎಲ್ಲವೂ ತಂತ್ರಜ್ಞಾನದಿಂದ ತುಂಬಿಹೋಗಿದೆ. ನಮ್ಮ ಜೀವನ ಸುಗಮವಾಗಿಸುವಂತಹ ಕೆಲವೊಂದು ಆ್ಯಪ್ ಗಳನ್ನು ನಾವು ಬಳಸಿಕೊಳ್ಳಬೇಕು. ಇದರಲ್ಲಿ ಮೆದುಳಿಗೆ ಕೆಲಸ ನೀಡುವ ಆ್ಯಪ್ ಬಳಸಿಕೊಳ್ಳಿ. ಎಲೆವೇಟ್ (ಪ್ಲೇಸ್ಟೋರ್‌ನಲ್ಲಿ ಎಡಿಟರ್ ಚಾಯ್ಸ್) ನಿಂದ ಲುಮಾಸಿಟಿ ತನಕ ಹಲವಾರು ರೀತಿಯ ಮೆದುಳಿನ ಆಟಗಳನ್ನು ನೀವು ಡೌನ್ ಲೋಡ್ ಮಾಡಿಕೊಳ್ಳಬಹುದು.

ಜಾಣ ಜನರೊಂದಿಗೆ ಬೆರೆಯಿರಿ

ಜಾಣ ಜನರೊಂದಿಗೆ ಬೆರೆಯಿರಿ

ನೀವು ನಿಮ್ಮಷ್ಟೇ ಸರಾಸರಿಯಾಗಿರುವ ಐದು ಮಂದಿಯ ಜತೆಗೆ ಇದ್ದರೆ ಅದರಿಂದ ಯಾವುದೇ ಲಾಭವಿಲ್ಲ. ನೀವು ನಿಮಗಿಂತಲೂ ತುಂಬಾ ಜಾಣರಾಗಿರುವ ಜನರೊಂದಿಗೆ ಸಮಯ ಕಳೆಯಬೇಕು. ಇದರಿಂದ ನಿಮಗೆ ಹೊಸ ಆಲೋಚನೆಗಳು ಮತ್ತು ತಾಂತ್ರಿಕತೆಯನ್ನು ಯಾವ ರೀತಿ ಉಪಯೋಗಿಸಿಕೊಳ್ಳುವುದು ಎಂದು ತಿಳಿಯಲಿದೆ. ನಿಮ್ಮ ಗುಂಪಿನಲ್ಲಿ ನೀವೇ ಜಾಣರಾಗಿದ್ದರೆ ಆಗ ನೀವು ಇತರರಂತೆ ದಡ್ಡರಾಗುವಿರಿ.

ಆರೋಗ್ಯಕರ ತಿನ್ನಿ ಮತ್ತು ಬದುಕಿ

ಆರೋಗ್ಯಕರ ತಿನ್ನಿ ಮತ್ತು ಬದುಕಿ

ನೀವು ಏನು ತಿನ್ನುತ್ತೀರಿ ಎನ್ನುವುದು ನಿಮ್ಮ ಅಂಗಾಂಗಳು ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುವುದು. ನೀವು ಅನಾರೋಗ್ಯಕರ, ಸಂಸ್ಕರಿತ, ಕೃತಕ ಆಹಾರ ತಿನ್ನುತ್ತಿದ್ದರೆ ಆಗ ನಿಮ್ಮ ಮೆದುಳು ಕೂಡ ಅದೇ ರೀತಿ ಅನಾರೋಗ್ಯವಾಗಿರುವುದು ಮತ್ತು ಪದರಗಳು ರಚನೆಯಾಗುವುದು. ಧೂಮಪಾನದಂತಹ ಅನಾರೋಗ್ಯಕರ ಹವ್ಯಾಸ ಬೆಳೆಸಿದ್ದರೆ ಹೀಗೆ ಆಗುವುದಿದೆ. ಇದರಿಂದ ಆರೋಗ್ಯಕರವಾದದನ್ನು ತಿನ್ನಿ ಮತ್ತು ಆರೋಗ್ಯದಿಂದ ಇರಿ. ಇದು ನಿಮ್ಮ ಮೆದುಳನ್ನು ಚುರುಕುಗೊಳಿಸಿ, ನಿಮ್ಮ ಜಾಣ್ಮೆ ಹೆಚ್ಚಿಸುವುದು.ನಿಮ್ಮ ಅನಿಸಿಕೆಗಳು ಏನಾದರೂ ಇದ್ದರೆ ಅದನ್ನು ಕಮೆಂಟ್ ಬಾಕ್ಸ್ ಗೆ ಹಾಕಿ.

English summary

10 Simple Ways To Increase Your Intelligence

For a very long time, the IQ test was considered the final word on an individual's intelligence. Not anymore. Current research shows that true human intelligence is determined by 3 components of the mind - your reasoning ability, the strength of your short-term memory, and your verbal skills. And since all three components have independent circuits in your brain, most people score high in one component while they lag in others.
Story first published: Wednesday, February 28, 2018, 19:13 [IST]
X
Desktop Bottom Promotion