For Quick Alerts
ALLOW NOTIFICATIONS  
For Daily Alerts

ಬೆಳ್ಳುಳ್ಳಿ ಎಷ್ಟು ಉಪಕಾರಿಯೋ, ಅಷ್ಟೇ ಅಪಾಯಕಾರಿಯೂ ಕೂಡ!

By Arshad
|

ಬೆಳ್ಳುಳ್ಳಿಯ ಒಂದೆರಡು ಎಸಳುಗಳನ್ನು ತಿನ್ನುವುದರಿಂದ ಕೆಲವಾರು ಲಾಭಗಳಿವೆ ಸರಿ, ಆದರೆ ಇದರಿಂದ ಕೆಲವು ಗಂಭೀರವಾದ ಅಡ್ಡ ಪರಿಣಾಮಗಳೂ ಇವೆ ಎಂದು ಇದಕ್ಕೂ ಮುನ್ನ ನಿಮಗೆ ಗೊತ್ತಿತ್ತೇ? ಇದರರ್ಥ ಬೆಳ್ಳುಳ್ಳಿ ಅನಾರೋಗ್ಯಕರ ಎಂದು ಸರ್ವಥಾ ಅಲ್ಲ. ಆದರೆ ಈ ಪ್ರಮಾಣ ಹೆಚ್ಚಾದರೆ ಮಾತ್ರ ಈ ಅಡ್ಡಪರಿಣಾಮಗಳೂ ಹೆಚ್ಚಾಗುತ್ತದೆ ಹಾಗೂ ಕೆಲವು ಆರೋಗ್ಯಕ್ಕೇ ಮಾರಕವಾಗಬಹುದು. ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ರುಚಿ ಮತ್ತು ಪರಿಮಳವನ್ನು ಹೆಚ್ಚಿಸಲು ಹೆಚ್ಚಾಗಿ ಉಪಯೋಗಿಸಲ್ಪಡುವ ಸಾಂಬಾರ ಪದಾರ್ಥವಾಗಿದೆ. ಇದರ ಬಳಕೆ ಕೇವಲ ಅಡುಗೆಗೆ ಸೀಮಿತವಾಗಿಲ್ಲ, ಹಲವು ಮನೆಮದ್ದುಗಳಲ್ಲಿಯೂ ಬೆಳ್ಳುಳ್ಳಿಯನ್ನು ಉಪಯೋಗಿಸಲಾಗುತ್ತದೆ.

ಬೆಳ್ಳುಳ್ಳಿಯಲ್ಲಿ ಸೆಲೆನಿಯಂ, ಕಬ್ಬಿಣ, ಅಯೋಡಿನ್, ಗಂಧಕ ಮೊದಲಾದ ಹಲವಾರು ಅವಶ್ಯಕ ಖನಿಜಗಳಿವೆ. ಇವು ಕೆಲವಾರು ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಕ್ತದೊತ್ತಡ ಕಡಿಮೆಗೊಳಿಸುವುದು, ಕೊಲೆಸ್ಟ್ರಾಲ್ ಮಟ್ಟ ಸರಿಪಡಿಸುವುದು, ಸೋಂಕುಗಳ ವಿರುದ್ದ ಹೋರಾಡುವುದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮೊದಲಾದವುಗಳ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕಾದರೆ ಬೆಳ್ಳುಳ್ಳಿಯ ಪ್ರಮಾಣ ಮಿತವಾಗಿರಬೇಕು. ಒಂದು ವೇಳೆ ಈ ಪ್ರಮಾಣ ಹೆಚ್ಚಿದರೆ ಇದರ ಅಡ್ಡಪರಿಣಾಮಗಳೇ ಪ್ರಯೋಜನಗಳನ್ನೆಲ್ಲಾ ನುಂಗಿ ಹಾಕಿ ಔಷಧಿರೂಪದ ಬೆಳ್ಳುಳ್ಳಿ ವಿಷದ ರೂಪ ಪಡೆಯುತ್ತದೆ.ಬನ್ನಿ, ಬೆಳ್ಳುಳ್ಳಿಯ ಅತಿಯಾದ ಸೇವನೆಯಿಂದ ಯಾವ ಅಡ್ಡಪರಿಣಾಮಗಳಿವೆ ಎಂಬುದನ್ನು ನೋಡೋಣ....

ಯಕೃತ್‌ಗೆ ಹಾನಿ ಎಸಗಬಹುದು

ಯಕೃತ್‌ಗೆ ಹಾನಿ ಎಸಗಬಹುದು

ಅತಿಯಾದ ಬೆಳ್ಳುಳ್ಳಿ ಸೇವನೆಯಿಂದ ಯಕೃತ್ ಗೆ ಘಾಸಿಯಾಗಬಹುದು. ಯಕೃತ್ ನಮ್ಮ ದೇಹದ ಅತ್ಯಂತ ಮುಖ್ಯವಾದ ಅಂಗವಾಗಿದೆ. ಭಾರತದಲ್ಲಿ ನಡೆಸಿದ ಒಂದು ಸಂಶೋಧನೆಯಲ್ಲಿ ಬೆಳ್ಳುಳ್ಳಿಯ ಅತಿಯಾದ ಸೇವನೆಯಿಂದ ಯಕೃತ್ ನಲ್ಲಿ ವಿಷಕಾರಿ ಅಂಶಗಳ ಸಂಗ್ರಹ ಹೆಚ್ಚುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಅತಿಸಾರ

ಅತಿಸಾರ

ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇದರ ಅಡ್ಡಪರಿಣಾಮವಗಿ ಅತಿಸಾರ ಎದುರಾಗಬಹುದು. ಕೆಲವು ವ್ಯಕ್ತಿಗಳಲ್ಲಿ ಬೆಳ್ಳುಳ್ಳಿ ವಾಯುಪ್ರಕೋಪವನ್ನು ಉಂಟುಮಾಡಬಹುದು ಹಾಗೂ ಇದರ ಮೂಲಕ ಅತಿಸಾರ ಎದುರಾಗಬಹುದು.

ವಾಕರಿಕೆ, ವಾಂತಿ ಹಾಗೂ ಎದೆಯುರಿ:

ವಾಕರಿಕೆ, ವಾಂತಿ ಹಾಗೂ ಎದೆಯುರಿ:

ರಾಷ್ಟ್ರೀಯ ಕ್ಯಾನ್ಸರ್ ವಿದ್ಯಾಸಂಸ್ಥೆಯ ಪ್ರಕಾರ ಹಸಿಬೆಳ್ಳುಳ್ಳಿಯನ್ನು ಅಥವಾ ಬೆಳ್ಳುಳ್ಳಿ ಎಣ್ಣೆಯನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವ ಮೂಲಕ ಎದೆಯುರಿ, ವಾಕರಿಕೆ ಹಾಗೂ ವಾಂತಿ ಎದುರಾಗುತ್ತದೆ. ಅಲ್ಲದೇ, ಹಾರ್ವರ್ಡ್ ವೈದ್ಯಕೀಯ ಶಾಲೆಯ ಮಾಧ್ಯಮದಲ್ಲಿ ಪ್ರಕಟವಾದ ವರದಿಯ ಪ್ರಕಾರ ಬೆಳ್ಳುಳ್ಳಿ ಸೇವನೆಯಿಂದ ಜಠರಗರುಳಿನ ಹಿಮ್ಮರಳುವಿಕೆ (gastroesophageal reflux) ಎಂಬ ತೊಂದರೆಯೂ ಎದುರಾಗಬಹುದು.

ರಕ್ತಸ್ರಾವವನ್ನು ಹೆಚ್ಚಿಸಬಹುದು

ರಕ್ತಸ್ರಾವವನ್ನು ಹೆಚ್ಚಿಸಬಹುದು

ಒಂದು ವೇಳೆ ನೀವು ರಕ್ತವನ್ನು ತಿಳಿಗೊಳಿಸುವ ಔಷಧಿಗಳನ್ನು ಸೇವಿಸುತ್ತಿದ್ದರೆ ನಿಮಗೆ ಬೆಳ್ಳುಳ್ಳಿ ಸರ್ವಥಾ ಸಲ್ಲದು ಎಂದು ಮೇರಿಲ್ಯಾಂಡ್ ವೈದ್ಯಕೀಯ ಕೇಂದ್ರ ವಿಶ್ವವಿದ್ಯಾಲಯದ ವರದಿಯೊಂದು ತಿಳಿಸಿದೆ. ಏಕೆಂದರೆ ಬೆಳ್ಳುಳ್ಳಿಯ ಸೇವನೆಯಿಂದ ರಕ್ತಸ್ರಾವದ ಸಾಧ್ಯತೆ ಹೆಚ್ಚುತ್ತದೆ ಹಾಗೂ ಒಂದು ವೇಳೆ ನೀವು ಈಗಾಗಲೇ ಶಸ್ತ್ರಕ್ರಿಯೆಗೆ ಒಳಗಾಗಿದ್ದರೆ ಕನಿಷ್ಠ ಎರಡು ವಾರಗಳವರೆಗಾದರೂ ಬೆಳ್ಳುಳ್ಳಿಯನ್ನು ಸೇವಿಸಬಾರದು.

ವಾಯುಪ್ರಕೋಪ ಎದುರಾಗಬಹುದು

ವಾಯುಪ್ರಕೋಪ ಎದುರಾಗಬಹುದು

ಬೆಳ್ಳುಳ್ಳಿಯನ್ನು ಹಸಿಯಾಗಿ ಹೆಚ್ಚುಪ್ರಮಾಣದಲ್ಲಿ ಸೇವಿಸಿದರೆ ಇದರ ಅಡ್ಡಪರಿಣಾಮವಾಗಿ ವಾಯುಪ್ರಕೋಪ ಎದುರಾಗಬಹುದು. ಜೀರ್ಣಕ್ರಿಯೆಯಲ್ಲಿ ಬೆಳ್ಳುಳ್ಳೀ ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಇದರ ಪ್ರಮಾಣ ಹೆಚ್ಚಾದರೆ ಜೀರ್ಣಕ್ರಿಯೆಯನ್ನೇ ಬಾಧಿಸಬಹುದು. ಆದ್ದರಿಂದ ಹಸಿಯಾಗಿ ಸೇವಿಸುವಾಗ ಬೆಳ್ಳುಳ್ಳಿಯ ಪ್ರಮಾಣ ಮಿತವಾಗಿರಬೇಕು.

ತಲೆಸುತ್ತುವಿಕೆ ಎದುರಾಗಬಹುದು

ತಲೆಸುತ್ತುವಿಕೆ ಎದುರಾಗಬಹುದು

ಕೆಲವು ವ್ಯಕ್ತಿಗಳಲ್ಲಿ ಬೆಳ್ಳುಳ್ಳಿಯ ಸೇವನೆಯ ಬಳಿಕ ತಲೆಸುತ್ತುವಿಕೆ ಕಂಡುಬರಬಹುದು. ತಜ್ಞರ ಪಕಾರ ಹಸಿ ಬೆಳ್ಳುಳ್ಳಿಯ ಪ್ರಮಾಣ ಹೆಚ್ಚಿದರೆ ರಕ್ತದೊತ್ತಡ ಅಪಾಯಕಾರಿ ಮಟ್ಟಕ್ಕಿಳಿಯಬಹುದು. ಆದ್ದರಿಂದ ರಕ್ತದೊತ್ತಡ ಸಾಮಾನ್ಯಕ್ಕಿಂತಲೂ ಕಡಿಮೆ ಇರುವ ವ್ಯಕ್ತಿಗಳಿಗೆ ಹಸಿಬೆಳ್ಳುಳ್ಳಿ ಸಲ್ಲದು.

ಚರ್ಮ ಕೆಂಪಗಾಗಿಸಬಹುದು

ಚರ್ಮ ಕೆಂಪಗಾಗಿಸಬಹುದು

ಒಂದು ವೇಳೆ ಹಸಿ ಬೆಳ್ಳುಳ್ಳಿಯ ಪ್ರಮಾಣ ಹೆಚ್ಚಾದರೆ ಇದು ಚರ್ಮದಲ್ಲಿ ತುರಿಕೆಯುಂಟುಮಾಡಿ ಕೆಲವೆಡೆ ಚರ್ಮವನ್ನು ಕೆಂಪಗಾಗಿಸಬಹುದು. ಇದಕ್ಕೆ ಬೆಳ್ಳುಳ್ಳಿಯಲ್ಲಿರುವ ಅಲೈಯಿನ್ ಲೈಸ್ ಎಂಬ ಕಿಣ್ವವೇ ಕಾರಣವಾಗಿದೆ. ಇದು ಚರ್ಮದಲ್ಲಿ ಅಲರ್ಜಿಯ ಮೂಲಕ ತುರಿಕೆಯುಂಟು ಮಾಡಬಹುದು.

ತಲೆನೋವು

ತಲೆನೋವು

ಕೆಲವು ವೇಳೆ ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ತಕ್ಷಣವೇ ಮೈಗ್ರೇನ್ ತಲೆನೋವಿಗೆ ಪ್ರಚೋದನೆ ದೊರಕಬಹುದು. ತಲೆನೋವಿಗೆ ಮೂಲವಾಗಿರುವ trigeminal ಎಂಬ ನರಕ್ಕೆ ಬೆಳ್ಳುಳ್ಳಿಯ ಪೋಷಕಾಂಶಗಳು ಪ್ರಚೋದನೆ ನೀಡುವ ಮೂಲಕ ಮೆದುಳಿನ ಪದರಕ್ಕೆ ನೋವಿನ ಸಂವೇದನೆ ನೀಡುವ ಕಣಗಳು ತಲೆನೋವಿಗೆ ಕಾರಣವಾಗುತ್ತದೆ.

ದೃಷ್ಟಿಯಲ್ಲಿ ಬದಲಾವಣೆಗೆ ಕಾರಣವಾಗಬಹುದು

ದೃಷ್ಟಿಯಲ್ಲಿ ಬದಲಾವಣೆಗೆ ಕಾರಣವಾಗಬಹುದು

ಒಂದು ವೇಳೆ ಹಸಿ ಬೆಳ್ಳುಳ್ಳಿಯ ಸೇವನೆ ಅತಿಯಾದರೆ ಇದು ಹೈಫೀಮಾ ಎಂಬ ಸ್ಥಿತಿಗೆ ಕಾರಣವಾಗಬಹುದು. ಈ ಸ್ಥಿತಿಯಲ್ಲಿ ಕಣ್ಣಿನ ಒಳಭಾಗದಲ್ಲಿ ರಕ್ತಸ್ರಾವವಾಗಬಹುದು. ಕಣ್ಣಿನ ಗುಡ್ಡೆಯ ಒಳಭಾಗದಲ್ಲಿ ರಕ್ತಸ್ರಾವವಾದರೆ ಇದು ದೃಷ್ಟಿಯನ್ನು ಮಂದವಾಗಿಸುವುದು ಮಾತ್ರವಲ್ಲ, ಕುರುಡುತನವನ್ನೂ ಎದುರಿಸಬೇಕಾಗಬಹುದು. ಬೆಳ್ಳುಳ್ಳಿಯ ಅಡ್ಡಪರಿಣಾಮಗಳಲ್ಲಿ ಇದು ಅತಿ ಘೋರವಾದ ಅಡ್ಡಪರಿಣಾಮವಾಗಿದೆ.

ಗರ್ಭಿಣಿಯರಿಗೆ ಸಲ್ಲದು

ಗರ್ಭಿಣಿಯರಿಗೆ ಸಲ್ಲದು

ಹಸಿಬೆಳ್ಳುಳ್ಳಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಗರ್ಭಿಣಿಯರು ಸೇವಿಸಿದರೆ ಇದು ಗರ್ಭಕ್ಕೂ ಮಾರಕವಾಗಬಲ್ಲುದು. ಆದ್ದರಿಂದ ಗರ್ಭಿಣಿಯರು ಹಾಗೂ ಹಾಲೂಡಿಸುತ್ತಿರುವ ತಾಯಂದಿರು ಬೆಳ್ಳುಳ್ಳಿಯ ಸೇವನೆಯಿಂದ ದೂರವಿರಬೇಕು. ಗರ್ಭಿಣಿಯರಿಗೆ ಇದು ಹೆರಿಗೆಯ ದಿನವನ್ನು ಹಿಂದೆ ತರುವ ಸಾಧ್ಯತೆಯೂ ಇದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

English summary

10 Side Effects Of Raw Garlic You Should Know

Have you ever thought that the small garlic pod could cause serious side effects? No, there's nothing to worry about! Having raw garlic or consuming too much of garlic can have side effects on the body which can be life-threatening. Garlic is a common ingredient used in all types of cooking, mostly Indian cooking to enhance the flavour and taste. Not only garlic is used in cooking, it is also used in traditional medicine.
X
Desktop Bottom Promotion