ಮಹಿಳೆಯರಿಗೆ ಕಾಡುವ ಸ್ತನ ತೊಟ್ಟುಗಳ ತುರಿಕೆಗೆ ಕಾರಣಗಳು

Posted By: Hemanth Amin
Subscribe to Boldsky

ಮಹಿಳೆಯರಲ್ಲಿ ಕೆಲವೊಂದು ಸಾಮಾನ್ಯ ಸಮಸ್ಯೆಗಳು ದೇಹದಲ್ಲಿ ಕಾಣಿಸಿಕೊಳ್ಳುವುದು. ಇದಕ್ಕೆ ಹಲವಾರು ರೀತಿಯ ಕಾರಣಗಳು ಇರಬಹುದು. ಮಹಿಳೆಯರ ಸೌಂದರ್ಯದ ಪ್ರತೀಕವೆಂದೇ ಪರಿಗಣಿಸಲಾಗಿರುವ ಸ್ತನದ ತೊಟ್ಟುಗಳು ಆಗಾಗ ತುರಿಸಿಕೊಳ್ಳುವುದು ಕೂಡ ಒಂದು ಸಮಸ್ಯೆ.

ಇದು ಕೇಳಲು ಸ್ವಲ್ಪ ವಿಚಿತ್ರವೆಂದನಿಸಿದರೂ ಹೆಚ್ಚಿನ ಮಹಿಳೆಯರಿಗೆ ಈ ಸಮಸ್ಯೆ ಇರುವುದು. ಸ್ತನದ ತೊಟ್ಟುಗಳು ತುರಿಕೆ ಆರಂಭಿಸಿದರೆ ಆಗ ಅದು ತುಂಬಾ ಕಿರಿಕಿರಿ ಕೂಡ ಉಂಟು ಮಾಡುವುದು. ಇದಕ್ಕೆ ಪ್ರಮುಖ ಕಾರಣವೇನೆಂದು ಈ ಲೇಖನ ಮೂಲಕ ತಿಳಿದುಕೊಳ್ಳುವ.

ಹವಾಮಾನ ಶುಷ್ಕವಾಗಿರುವುದು

ಹವಾಮಾನ ಶುಷ್ಕವಾಗಿರುವುದು

ಹವಾಮಾನವು ವಿಪರೀತವಾಗಿ ಶುಷ್ಕವಾಗಿರುವ ಕಾರಣದಿಂದ ನಿಮ್ಮ ತುಟಿಗಳು ಹಾಗೂ ಚರ್ಮವು ಒಡೆಯುತ್ತಾ ಇದ್ದರೆ ಆಗ ಕಾಕತಾಳೀಯವೆನ್ನುವಂತೆ ಮೊಳೆಯ ತೊಟ್ಟುಗಳಲ್ಲಿ ಕೂಡ ತುರಿಕೆ ಕಾಣಿಸಿಕೊಳ್ಳುವುದು. ಇದಕ್ಕೆ ಸ್ವಲ್ಪ ಮಾಯಿಶ್ಚರೈಸರ್ ಬೇಕು.

ತುರಿಕೆಯನ್ನು ದೂರವಿಡುವಂತಹ ಮಾಯಿಶ್ಚರೈಸರ್ ಇಲ್ಲಿದೆ.

*ಸ್ವಲ್ಪ ಮೈಗೆ ಹಾಕಿಕೊಳ್ಳುವ ಎಣ್ಣೆ ಅಥವಾ ಮೊಶ್ಚಿರೈಸರ್ ನಿಂದ ತೊಟ್ಟುಗಳನ್ನು ಉಜ್ಜಿಕೊಳ್ಳಿ.

*10 ನಿಮಿಷಕ್ಕಿಂತ ಹೆಚ್ಚು ಕಾಲ ಸ್ನಾನ ಮಾಡಬೇಡಿ.

*ಮನೆಯಲ್ಲಿ ಗಾಳಿಗೆ ಮಾಯಿಶ್ಚರೈಸರ್ ಬರಲು ತೇವಗೊಳಿಸುವ ಸಾಧನೆ ಬಳಸಿ.

ಇಸುಬು ಆಗಿರಬಹುದು

ಇಸುಬು ಆಗಿರಬಹುದು

ನಿಮಗೆ ಈ ಮೊದಲು ಇಸುಬು ಬಂದಿದ್ದರೆ ಮತ್ತು ಕಜ್ಜಿಗಳು ಕಾಣಿಸಿಕೊಳ್ಳುತ್ತಾ ಇದ್ದರೆ, ತೊಟ್ಟಿನಲ್ಲಿ ತುರಿಕೆ ಕಂಡು ಬಂದರೆ ಆಗ ನೀವು ಇಸುಬು ತಡೆಯಲು ಮೊದಲೇ ಕ್ರಮ ತೆಗೆದುಕೊಳ್ಳುವುದು ಅತೀ ಅಗತ್ಯ. ತೊಟ್ಟು ಒಡೆದಿರುವುದು ಮತ್ತು ಸ್ರವಿಸುವಿಕೆ ತುಂಬಾ ಹೆಚ್ಚಾಗಿದ್ದರೆ ನೀವು ವೈದ್ಯರನ್ನು ಭೇಟಿಯಾಗಿ. ಸ್ರವಿಸುವಿಕೆ ಮತ್ತು ಊದಿಕೊಂಡಿರುವುದು ಬೇರೆ ಯಾವುದೇ ರೋಗದ ಲಕ್ಷಣವಾಗಿರಲೂಬಹುದು.

ಹೊಸ ಸೋಪ್ ಅಥವಾ ಬಾಡಿ ವಾಶ್ ಬಳಸುತ್ತಿದ್ದರೆ

ಹೊಸ ಸೋಪ್ ಅಥವಾ ಬಾಡಿ ವಾಶ್ ಬಳಸುತ್ತಿದ್ದರೆ

ಚರ್ಮದಲ್ಲಿ ಕಾಣಿಸಿಕೊಳ್ಳೂವ ಅಲರ್ಜಿಗಳಿಗೆ ಪ್ರಮುಖ ಕಾರಣವೆಂದರೆ ರಾಸಾಯನಿಕ ಹಾಗೂ ಇತರ ಕೆಲವು ಅಂಶಗಳು. ತೊಟ್ಟುಗಳಲ್ಲಿ ತುರಿಕೆ ಮತ್ತು ಬೊಕ್ಕೆ ಇದ್ದರೆ ನೀವು ಸೋಪ್ ಅಥವಾ ಬಾಡಿ ವಾಶ್ ಬದಲಾಯಿಸಿರಬಹುದು. ಹೊಸ ಉತ್ಪನ್ನದಿಂದ ನಿಮಗೆ ಅಲರ್ಜಿಯಾಗಿರಬಹುದು. ಈ ಉತ್ಪನ್ನ ಬಳಸುವುದನ್ನು ನಿಲ್ಲಿಸಿ ಮತ್ತು ಬೊಕ್ಕೆಗಳು ಹಾಗೆ ಇದೆಯಾ ಎಂದು ಗಮನಿಸಿ.

ಹೊಸ ಬ್ರಾ ಒಗೆಯದೇ ಹಾಕಿಕೊಂಡಿರುವುದು

ಹೊಸ ಬ್ರಾ ಒಗೆಯದೇ ಹಾಕಿಕೊಂಡಿರುವುದು

ಹೊಸ ಬ್ರಾಗಳು ನಿಮಗೆ ಮೇಲಿನಿಂದ ತುಂಬಾ ಸ್ವಚ್ಛವಾಗಿ ಕಾಣಿಸಬಹುದು. ಒಳ ಉಡುಪುಗಳನ್ನು ಹೆಚ್ಚಾಗಿ ರಾಶಿಗಟ್ಟಲೆ ತಯಾರಿಸಲಾಗುತ್ತದೆ. ಇದರಿಂದ ಪ್ಯಾಕ್ ಮಾಡಿ ಅಂಗಡಿಗೆ ಕಳುಹಿಸುವ ಮೊದಲು ಇದು ಫ್ಯಾಕ್ಟರಿಯಲ್ಲಿ ಬೇರೆ ಯಾವುದೋ ಕಲ್ಮಷ ಅಥವಾ ಮಣ್ಣೆನ ಸಂಪರ್ಕಕಕ್ಕೆ ಬಂದಿರಬಹುದು. ಇದರಿಂದ ಹೊಸ ಬ್ರಾ ಅಥವಾ ಒಳ ಉಡುಪುಗಳನ್ನು ಒಗೆಯದೆ ಧರಿಸಬಾರದು. ಇದರಿಂದ ಸೋಂಕು ಉಂಟಾಗಬಹುದು. ಕೆಲವೊಂದು ಸಲ ಇದರಿಂದ ಪರಾವಲಂಬಿ ಹುಳು ಮುತ್ತಿಕೊಳ್ಳುವಿಕೆ ಉಂಟಾಗಬಹುದು. ಇದು ತೊಟ್ಟಿನಲ್ಲಿ ತುರಿಕೆ ಉಂಟು ಮಾಡುವುದು.

ಬ್ರಾ ತುಂಬಾ ಗಡುಸಾಗಿರಬಹುದು

ಬ್ರಾ ತುಂಬಾ ಗಡುಸಾಗಿರಬಹುದು

ನೀವು ಬ್ರಾ ಧರಿಸುವ ಮೊದಲು ಸೂಕ್ಷ್ಮ ಚರ್ಮದ ಭಾಗಕ್ಕೆ ಪೆಟ್ರೋಲಿಯಂ ಜೆಲ್ ಹಚ್ಚಬೇಕು ಮತ್ತು ಇದರ ಬಳಿಕ ಬ್ರಾ ಧರಿಸಿ. ಬ್ರಾ ಧರಿಸಲು ತುಂಬಾ ಕೆಟ್ಟದ್ದಾಗಿದ್ದರೆ ಆಗ ಹೊಸ ಬ್ರಾ ತೆಗೆದುಕೊಳ್ಳಿ.

ದಿನನಿತ್ಯ ಬ್ರಾ ಧರಿಸಿದರೆ, ಅಪಾಯ ಬೆನ್ನೇರಿ ಕಾಡಲಿದೆ ಎಚ್ಚರ!

 ನೀವು ಗರ್ಭಿಣಿಯಾಗಿರಬಹುದು

ನೀವು ಗರ್ಭಿಣಿಯಾಗಿರಬಹುದು

ಗರ್ಭಿಣಿಯರಿಗೆ ಬೆಳಗ್ಗಿನ ಸಮಸ್ಯೆಗಳು ಮತ್ತು ಕಾಲು ಊದಿಕೊಳ್ಳುವುದು ಪರಿಸ್ಥಿತಿ ಕೆಡಿಸಬಹುದು. ದುರಾದೃಷ್ಟದಿಂದ ತೊಟ್ಟುಗಳಲ್ಲಿ ತುರಿಕೆ ಕೂಡ ಕಾಣಿಸಿಕೊಳ್ಳುವುದು. ನಿಮಗೆ ಮತ್ತೊಂದು ಸಮಸ್ಯೆ ಕಾಡುವ ಮೊದಲು ನೀವು ಇದರೊಂದಿಗೆ ಹೇಗೆ ಹೊಂದಿಕೊಳ್ಳಬಹುದು ಎಂದು ತಿಳಿಯಿರಿ.

ಮಗುವಿಗೆ ಹಾಲುಣಿಸುತ್ತಿದ್ದೀರಾ?

ಮಗುವಿಗೆ ಹಾಲುಣಿಸುತ್ತಿದ್ದೀರಾ?

ಹಾಲುಣಿಸುವುದು ತುಂಬಾ ಸುಲಭವೆಂದು ಕಾಣಿಸಬಹುದು. ಆದರೆ ಮಗು ಹಾಲಿಗಾಗಿ ಮೊಳೆ ತೊಟ್ಟುಗಳನ್ನು ಚೀಪುವಾಗ ಅದು ತುಂಬಾ ವಿಚಿತ್ರ ಅನುಭವವಾಗಿರುವುದು. ಸೂಕ್ಷ್ಮವಾಗಿರುವ ಮೊಳೆಗಳನ್ನು ಚೀಪುತ್ತಾ ಇರುವಾಗ ಅದು ಬೆನ್ನಹುರಿಯನ್ನು ಹಿಂಡಿದಂತಾಗುತ್ತದೆ. ಇದು ನೋಡಿದಷ್ಟು ಸುಲಭವಲ್ಲವೆಂದು ಆಗ ನಿಮಗನಿಸುವುದು. ಮೊಳೆಯು ತುಂಬಾ ಊದಿಕೊಂಡು ತುರಿಕೆ ಉಂಟು ಮಾಡುತ್ತಾ ಇದ್ದರೆ ಆಗ ನೀವು ನಿಪ್ಪಲ್ ಬಟರ್ ಖರೀದಿಸಿದರೆ ಅದರಿಂದ ಹಾಲುಣಿಸುವ ಪ್ರಕ್ರಿಯೆ ಸುಲಭವಾಗುವುದು.

ಶಿಲೀಂಧ್ರಿಯ ಸೋಂಕು

ಶಿಲೀಂಧ್ರಿಯ ಸೋಂಕು

ದೇಹದಲ್ಲಿ ನೀರಿನಾಂಶವಿರುವ ಭಾಗಕ್ಕೆ ಶೀಲೀಂಧ್ರಿಯ ದಾಳಿ ಮಾಡುತ್ತದೆ. ಅದರಲ್ಲೂ ಸ್ವಚ್ಛತೆ ಕಾಪಾಡದೆ ಇದ್ದರೆ ಪ್ರಮುಖವಾಗಿ ನಾಲಗೆಗೆ ಇದು ಪರಿಣಾಮ ಬೀರುವುದು. ಮೊಳೆ ತೊಟ್ಟಿನ ಮೇಲೆ ಬಿಳಿಯ ಬೊಕ್ಕೆಗಳು ಕಾಣಿಸಿಕೊಂಡಿದ್ದರೆ ಅದು ಶಿಲೀಂಧ್ರಿಯದ ಸೋಂಕು ಎನ್ನಬಹುದು. ಇದಕ್ಕೆ ನೀವೇ ಔಷಧಿ ಮಾಡಲು ಹೋಗಬೇಡಿ. ನೀವು ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯುವುದು ಸೂಕ್ತ.

ಋತುಬಂಧ

ಋತುಬಂಧ

ಋತುಬಂಧದಿಂದಾಗಿ ಚರ್ಮವು ಒಣ ಹಾಗೂ ತುರಿಕೆ ಉಂಟು ಮಾಡಬಹುದು. ಬಿಸಿ ಬೊಕ್ಕೆಗಳು ಮತ್ತು ತುರಿಕೆ ಕಾಣಿಸಿಕೊಂಡರೆ ಇದು ಋತುಬಂಧದಿಂದ ಆಗಿರುವಂತಹ ಸಮಸ್ಯೆಯಾಗಿದೆ.

ಸ್ತನದ ಒಳಗಡೆ ಗಡ್ಡೆಯಾಗಿರಬಹುದು

ಸ್ತನದ ಒಳಗಡೆ ಗಡ್ಡೆಯಾಗಿರಬಹುದು

ತುರಿಕೆ, ಬೊಕ್ಕೆ ಇರುವಂತಹ ಮೊಳೆಯ ತೊಟ್ಟುಗಳು ಸ್ತನ ಕ್ಯಾನ್ಸರ್‌‌ನ ಆರಂಭಿಕ ಲಕ್ಷಣವಾಗಿರಬಹುದು. ನೀವು ಇದರ ಬಗ್ಗೆ ಚಿಂತೆ ಮಾಡುವುದನ್ನು ಬಿಟ್ಟು ತಜ್ಞ ವೈದ್ಯರಿಂದ ಸಲಹೆ ಪಡೆಯಿರಿ. ಇದು ವೈದ್ಯರಿಂದ ಮಾತ್ರ ಕಂಡುಹಿಡಿಯಲು ಸಾಧ್ಯ.

English summary

10 Reasons Why Your Nipples Itch All The Time

If your nipples have been giving you some tough time of late, don't worry. You are not alone. Our naughty bits have always annoyed us from time to time to get our attention. So here are 10 reasons why your nipples itch all the time.