For Quick Alerts
ALLOW NOTIFICATIONS  
For Daily Alerts

ಶೀತ-ಕೆಮ್ಮಿನಿಂದ ರಕ್ಷಣೆ ನೀಡುತ್ತವೆ ಈ ಅದ್ಭುತ ಹತ್ತು ಸರಳ ಟ್ರಿಕ್ಸ್

|

ಶೀತ, ನೆಗಡಿ, ಕೆಮ್ಮು ಮೊದಲಾದವು ಸಾಂಕ್ರಾಮಿಕವಾಗಿದ್ದು ರೋಗಿಯ ಸೀನುವಿಕೆ, ಕೆಮ್ಮಿನ ಮೂಲಕ ಅಕ್ಕಪಕ್ಕದವರಿಗೂ ಹರಡಬಹುದು. ಕಛೇರಿಯಲ್ಲಿ ಪಕ್ಕದ ಕಿರುಕೋಣೆಯಲ್ಲಿಯೇ ಕೆಲಸ ಮಾಡುತ್ತಿರುವವರಿಗೆ ಶೀತ ನೆಗಡಿಯಾಗಿದ್ದರೆ? ಗಾಳಿಯಿಂದ ಇವರ ಸೀನಿದಾಗ ಹೊರದಬ್ಬಲ್ಪಡುವ ಕ್ರಿಮಿಗಳು ನಿಮಗೂ ದಾಟಬಹುದಲ್ಲವೇ? ಈ ಕಲ್ಪನೆಯೇ ಹೆಚ್ಚಿನವರಿಗೆ ಹೆದರಿಕೆ ಹುಟ್ಟಿಸುತ್ತದೆ. ಪರಿಣಾಮವಾಗಿ ಶೀತಪೀಡಿತ ವ್ಯಕ್ತಿಯ ಕೈಕುಲುಕಲು, ಮಾತುಕತೆ ನಡೆಸಲೂ ಹಿಂದೇಟು ಹಾಕುವಂತಾಗುತ್ತದೆ.

ಸಾಮಾನ್ಯವಾಗಿ ರೋಗಿಯೊಂದಿಗೆ ಕೈಕುಲುಕಿದ ಬಳಿಕ ವೈರಾಣುಗಳು ಇನ್ನೊಬ್ಬರಿಗೆ ಸುಲಭವಾಗಿ ದಾಟಿಕೊಳ್ಳುತ್ತವೆ. ಆರೋಗ್ಯ ತಜ್ಞರ ಸಲಹೆ ಪ್ರಕಾರ ಕೈ ಕುಲುಕುವುದನ್ನು ತಪ್ಪಿಸಲಾಗದಿದ್ದರೂ ಈ ಮೂಲಕ ಎದುರಾಗುವ ತೊಂದರೆಗಳಿಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಮೂಲಕ ಸಾಕಷ್ಟು ರಕ್ಷಣೆ ಪಡೆಯಬಹುದು. ತಮ್ಮ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನವರು ಮುಟ್ಟುವ ವಸ್ತುಗಳನ್ನು ಅನಿವಾರ್ಯವಾಗಿ ಮುಟ್ಟಿದ ಬಳಿಕ ಕೈ ತೊಳೆದುಕೊಳ್ಳುವುದು ಮೊದಲಾದ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕಾಗುತ್ತದೆ...

 ಶೀತ ಮತ್ತು ಫ್ಲೂ

ಶೀತ ಮತ್ತು ಫ್ಲೂ

ಇವೆರಡೂ ಕಾಯಿಲೆಗಳು ಗಾಳಿಯಲ್ಲಿ ತೇಲಿಬರುವ ವೈರಸ್ಸುಗಳ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಶೀತದ ಪರಿಣಾಮವಾಗಿ ಮೂಗು ಸೋರತೊಡಗುತ್ತದೆ, ಮೂಗು ಕಟ್ಟುದ್ದರೆ ಹಾಗೂ ಗಂಟಲ ಬೇನೆ, ಸತತ ಸೀನುವಿಕೆ, ಕೆಮ್ಮು, ತಲೆನೋವು ಹಾಗೂ ಕೊಂಚ ಸುಸ್ತೂ ಆವರಿಸುತ್ತದೆ. ಫ್ಲೂ ಲಕ್ಷಣಗಳೆಂದರೆ ಒಣಕೆಮ್ಮು, ಮಧ್ಯಮದಿಂದ ತೀವ್ರ ಪ್ರಮಾಣದ ಜ್ವರ, ಗಂಟಲ ಬೇನೆ, ತಲೆನೋವು, ಕಟ್ಟಿಕೊಂಡ, ಸೋರುವ ಮೂಗು, ಮೈ ಕೈ ನೋವು, ವಿಪರೀತ ಸುಸ್ತು, ವಾಕರಿಕೆ, ವಾಂತಿ ಮೊದಲಾದವು. ಬನ್ನಿ, ಈ ತೊಂದರೆಗಳಿಂದ ನೈಸರ್ಗಿಕವಾಗಿ ರಕ್ಷಣೆ ಪಡೆಯಲು ಯಾವ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕೆಂಬುದನ್ನು ನೋಡೋಣ:

ಉಗುರು ಕಚ್ಚುವುದನ್ನು ತಕ್ಷಣ ನಿಲ್ಲಿಸಿ

ಉಗುರು ಕಚ್ಚುವುದನ್ನು ತಕ್ಷಣ ನಿಲ್ಲಿಸಿ

ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ, ಉಗುರುಗಳನ್ನು ಕಚ್ಚುವ ಮೂಲಕ ಕ್ರಿಮಿಗಳನ್ನು ನಾವೇ, ನಮ್ಮ ಕೈಯಾರೆ ಬಾಯಿಗೆ ಉಣಿಸುತ್ತೇವೆ. ಉಗುರುಕಚ್ಚುವುದು ಹೆಚ್ಚಿನವರಿಗೆ ಒಂದು ವ್ಯಸನವಾಗಿದ್ದು ತಮಗರಿವಿಲ್ಲದಂತೆಯೇ ಇದು ನಡೆಯುತ್ತಿದ್ದು ಇದನ್ನು ನಿಲ್ಲಿಸುವುದು ತಕ್ಷಣಕ್ಕೆ ಸಾಧ್ಯವಾಗದೇ ಹೋದರೂ ಇದನ್ನು ತ್ಯಜಿಸುವತ್ತ ದೃಢ ನಿರ್ಧಾರ ತಳೆದರೆ ಅಸಾಧ್ಯವೇನಲ್ಲ. ಈ ಅಭ್ಯಾಸವನ್ನು ತ್ಯಜಿಸುವ ಮೂಲಕ ಹಲವು ರೀತಿಯ ಪ್ರಯೋಜನಗಳಿವೆ. ಸಾಮಾನ್ಯವಾಗಿ ಅನಾರೋಗ್ಯಕ್ಕೆ ಕಾರಣವಾಗುವ ಹೆಚ್ಚಿನ ಕ್ರಿಮಿಗಳು ಮೂಗು ಮತ್ತು ಬಾಯಿಯಿಂದಲೇ ದೇಹವನ್ನು ಪ್ರವೇಶಿಸುತ್ತವೆ. ನಮ್ಮ ಉಗುರುಗಳ ಕೆಳಭಾಗದಲ್ಲಿ ಹಲವು ರೀತಿಯ ಕ್ರಿಮಿಗಳು ಆಶ್ರಯ ಪಡೆದಿರುತ್ತವೆ. ಇದು ಹೇಗೆಂದರೆ ನಮ್ಮ ಕೈ ತೇವವಾದ ಬಳಿಕ ನಾವೆಷ್ಟೇ ಕೈ ಒರೆಸಿಕೊಂಡರೂ ಉಗುರುಗಳ ಒಳಭಾಗವನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಅಥವಾ ಅಷ್ಟು ಆಳವಾಗಿ ಸ್ವಚ್ಛಗೊಳಿಸಲು ಸಮಯವೂ ಇರುವುದಿಲ್ಲ. ಹಾಗಾಗಿ ಈ ತೇವದಲ್ಲಿ ಕ್ರಿಮಿಗಳು ಸುಲಭವಾಗಿ ಮನೆ ಮಾಡಿಕೊಂಡು ಬಿಡುತ್ತವೆ. ಮುಂದಿನ ಬಾರಿ ಉಗುರು ಕಚ್ಚಿದ ತಕ್ಷಣ ಇನ್ನೂ ಹೆಚ್ಚಿನ ತೇವವಿರುವ ಬಾಯಿಗೆ ಈ ಕ್ರಿಮಿಗಳು ಸಂತೋಷವಾಗಿ ದಾಟಿಕೊಳ್ಳುತ್ತವೆ ಹಾಗೂ ತಮ್ಮ ಸಂತಾನವೃದ್ದಿಸಿ ಮನೆಹಾಳು ಕೆಲಸ ಮುಂದುವರೆಸುತ್ತವೆ.

ನಾಕಷ್ಟು ನಡೆಯಿರಿ

ನಾಕಷ್ಟು ನಡೆಯಿರಿ

ಅಧ್ಯಯನಗಳಲ್ಲಿ ಸಾಬೀತುಪಡಿಸಿದ ಪ್ರಕಾರ, ರಜೋನಿವೃತ್ತಿಯ ಬಳಿಕ ಮಹಿಳೆಯರು ನಿಯಮಿತವಾಗಿ ಸಾಮಾನ್ಯಗತಿಯ ನಡಿಗೆ ಹಾಗೂ ಸುಲಭ ವ್ಯಾಯಾಮಗಳನ್ನು ಅನುಸರಿಸುವ ಮೂಲಕ ಶೀತ ಮತ್ತು ಫ್ಲೂ ಆವರಿಸುವ ಸಾಧ್ಯತೆಯನ್ನು ಕಡಿಮೆಯಾಗಿಸಿಕೊಳ್ಳಬಹುದು. ವಾರಕ್ಕೆ ಕನಿಷ್ಟ ಐದು ದಿನವಾದರೂ ಪ್ರತಿದಿನ ಸುಮಾರು ನಲವತ್ತೈದು ನಿಮಿಷದ ತೀವ್ರ ನಡಿಗೆ ನಡೆಯುವ ಮೂಲಕ ಹಲವು ವಿಧದ ಶೀತಗಳಿಂದ ರಕ್ಷಣೆ ಪಡೆಯಬಹುದು. ಸುಲಭವಾದ ವ್ಯಾಯಾಮಗಳನ್ನು ಅರ್ಧಘಂಟೆಯಿಂದ ಒಂದು ಘಂಟೆಯ ಕಾಲ ನಿರ್ವಹಿಸಿದರೆ ದೇಹದಲ್ಲಿ ಬಿಳಿರಕ್ತಕಣಗಳು ಹೆಚ್ಚು ಉತ್ಪತ್ತಿಯಾಗುತ್ತವೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸುತ್ತವೆ.

ನಿಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿ

ನಿಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿ

ನಿಮ್ಮ ಮನೆ ಹಾಗೂ ಕಛೇರಿಯ ಪರಿಸರವನ್ನು ಸಾಕಷ್ಟು ಸ್ವಚ್ಛವಾಗಿರಿಸಿಕೊಳ್ಳಬೇಕು. ಅಮೇರಿಕಾದ ರೋಗ ನಿಯಂತ್ರಣ ಮತ್ತು ರಕ್ಷಣಾ ವಿಭಾಗ ಸೂಚಿಸುವ ಪ್ರಕಾರ ನಿತ್ಯವೂ ಸ್ಪರ್ಶಿಸುವ ವಸ್ತುಗಳನ್ನು ನಿತ್ಯವೂ ಸ್ವಚ್ಛಗೊಳಿಸುವ ಮೂಲಕ ಫ್ಲೂ ಮೊದಲಾದ ಸಾಂಕ್ರಾಮಿಕ ರೋಗಗಳನ್ನು ಹರಡುವ ಕ್ರಿಮಿಗಳ ವೃದ್ಧಿಯನ್ನು ತಡೆಯಬಹುದು. ಇದಕ್ಕಾಗಿ ಕ್ರಿಮಿನಿವಾರಕ ದ್ರಾವಣಗಳನ್ನು ಬಳಸಿ ಹೆಚ್ಚಾಗಿ ಜನರು ಮುಟ್ಟುವ ಬಾಗಿಲ ಚಿಲಕ, ಕಂಪ್ಯೂಟರ್ ಕೀಬೋರ್ಡ್, ಶೌಚಾಲಯ, ಟೀವಿ ರಿಮೋಟ್, ದೀಪದ ಸ್ವಿಚ್ಚುಗಳು ಮೊದಲಾದವುಗಳನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರಬೇಕು.

ಸಾಕಷ್ಟು ನಿದ್ದೆ ಪಡೆಯಬೇಕು

ಸಾಕಷ್ಟು ನಿದ್ದೆ ಪಡೆಯಬೇಕು

ರಾಷ್ಟ್ರೀಯ ನಿದ್ದೆ ಸಂಸ್ಥೆ (National Sleep Foundation) ಒದಗಿಸುವ ವಿವರಗಳ ಪ್ರಕಾರ ದಿನಕ್ಕೆ ಏಳರಿಂದ ಒಂಭತ್ತು ಘಂಟೆಗಳ ಗಾಢ ನಿದ್ದೆಯಿಂದ ದೇಹ ವಂಚಿತವಾದರೆ ಹಲವಾರು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತದೆ. ದೇಹದ ಒಟ್ಟಾರೆ ಆರೋಗ್ಯಕ್ಕೆ ನಿದ್ದೆ ತುಂಬಾ ಅಗತ್ಯವಾಗಿದೆ ಹಾಗೂ ನಿದ್ರಿಸಿದರೂ ಸಾಕಷ್ಟು ಗಾಢ ನಿದ್ದೆ ಪಡೆಯದೇ ಇದ್ದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚುತ್ತದೆ. ಹಲವಾರು ನಂಬಲರ್ಹ ಸಂಶೋಧನೆಗಳಿಂದ ಈ ವಿಷಯ ಸಾಬೀತಾಗಿದ್ದು ನಿದ್ದೆಯ ಕೊರತೆ ಇದ್ದಾಗ ದೇಹ ರೋಗ ನಿರೋಧಕ ಶಕ್ತಿಯನ್ನು ಉಳಿಸಿಕೊಳ್ಳಲು ಉತ್ಪಾದಿಸಬೇಕಾದ ಜೀವಕೋಶಗಳನ್ನು ಉತ್ಪಾದಿಸದೇ ಹೋಗುತ್ತದೆ ಹಾಗೂ ನಿದ್ದೆಯ ಸಮಯದಲ್ಲಿ ಪ್ರೋಟೀನುಗಳನ್ನು ಬಳಸಿಕೊಳ್ಳಬೇಕಾಗಿದ್ದು ಇದೂ ಸಾಧ್ಯವಾಗದೇ ದೇಹ ಸೊರಗುತ್ತದೆ. ಆದ್ದರಿಂದ ನಿದ್ದೆಗೆ ಖೋತಾ ಸರ್ವಥಾ ಸಲ್ಲದು.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶೀತ ಮತ್ತು ಫ್ಲೂ ಗಳನ್ನು ದೂರವಿಡಲು ಬೆಳ್ಳುಳ್ಳಿ ಅತ್ಯುತ್ತಮ ಮಾಧ್ಯಮವಾಗಿದೆ. ಇದರ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟ್ ಗುಣಗಳು ರೋಗ ಗಳನ್ನು ದೂರವಿಡಲು ನೆರವಾಗುತ್ತವೆ. ಅಲ್ಲದೇ ಬೆಳ್ಳುಳ್ಳಿ ರೋಗಗಳ ವಿರುದ್ದ ಹೋರಾಡುವ ವ್ಯವಸ್ಥೆಯನ್ನು ಪ್ರಚೋದಿಸುತ್ತದೆ. ಇದರಲ್ಲಿರುವ ಸಂಯುಕ್ತಗಳು ಅಪಾಯದ ಸನ್ನಿವೇಶದಲ್ಲಿ ಬಿಳಿರಕ್ತಕಣಗಳು ಸ್ಪಂದಿಸುವ ವೇಗವನ್ನು ಹೆಚ್ಚಿಸುತ್ತವೆ ಹಾಗೂ ವಿಶೇಷವಾಗಿ ದೇಹಪ್ರವೇಶಿಸಿದ ವೈರಸ್ಸುಗಳನ್ನು ಕೊಲ್ಲಲು ಸಶಕ್ತವಾಗುತ್ತವೆ.

ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳನ್ನು ಸೇವಿಸಿ

ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳನ್ನು ಸೇವಿಸಿ

ನಮ್ಮ ದೇಹದ ಹಲವು ಭಾಗಗಳಲ್ಲಿ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿವೆ. ಹೊಟ್ಟೆ ಮತ್ತು ಕರುಳುಗಳಲ್ಲಿರುವ ಬ್ಯಾಕ್ಟೀರಿಯಾಗಳು ಜೀರ್ಣಕ್ರಿಯೆ ಸುಲಭಗೊಳಿಸುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಪರಿಣಾಮವಾಗಿ ಹಲವಾರು ಸೋಂಕು ಮತ್ತು ರೋಗಗಳಿಂದ ರಕ್ಷಣೆ ಒದಗಿಸುತ್ತವೆ. ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಹಲವಾರು ಬಗೆಯ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳು ಈಗಾಗಲೇ ಇರುವ ಬ್ಯಾಕ್ಟೀರಿಯಾಗಳೊಂದಿಗೆ ಕೈಜೋಡಿಸಿ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಉತ್ತಮವಾಗಿಸುತ್ತವೆ. ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾ ಅತಿ ಹೆಚ್ಚಾಗಿರುವ ಆಹಾರವೆಂದರೆ ಮೊಸರು! ಇದರ ಹೊರತಾಗಿ ಕಪ್ಪು ಚಾಕಲೇಟು, ಮೀಸೋ ಸಿರಪ್, ಉಪ್ಪಿನಕಾಯಿ, ಟೆಂಪೇ ಮೊದಲಾದವುಗಳಲ್ಲಿಯೂ ಇರುತ್ತವೆ.

ಸಾಕಷ್ಟು ನಾರು ಇರುವ ಆಹಾರಗಳನ್ನೇ ಸೇವಿಸಿ

ಸಾಕಷ್ಟು ನಾರು ಇರುವ ಆಹಾರಗಳನ್ನೇ ಸೇವಿಸಿ

ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾ ಸೇವನೆಯ ಜೊತೆಗೇ ಆಹಾರದಲ್ಲಿ ಸಾಕಷ್ಟು ನಾರು ಇರುವುದೂ ಅಗತ್ಯ. ನಮ್ಮ ಅಹಾರದಲ್ಲಿ ಕನಿಷ್ಟ ಮೂವತ್ತು ಗ್ರಾಂ ಆದರೂ ಕರಗದ ನಾರು ಇರಬೇಕೆಂದು ಆರೋಗ್ಯ ತಜ್ಞರು ಸಲಹೆ ಮಾಡುತ್ತಾರೆ. ನಾರು ಸಹಾ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಮೂಲವಾಗಿದೆ. ಈ ಮೂಲಕ ಜೀರ್ಣಾಂಗಗಳಲ್ಲಿ ಹಲವು ಬಗೆಯ ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳಿರಲು ಸಾಧ್ಯವಾಗುತ್ತದೆ ಹಾಗೂ ರೋಗ ನಿರೋಧಕ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತವೆ.

ಹಸಿಯಾಗಿ ತಿನ್ನಬಹುದಾದ ಹಣ್ಣು ತರಕಾರಿಗಳನ್ನು ಸೇವಿಸಿ

ಹಸಿಯಾಗಿ ತಿನ್ನಬಹುದಾದ ಹಣ್ಣು ತರಕಾರಿಗಳನ್ನು ಸೇವಿಸಿ

ಉಜ್ವಲ ಬಣ್ಣದ ಹಣ್ಣುಗಳು ಮತ್ತು ಹಸಿಯಾಗಿ ಸೇವಿಸಬಹುದಾದ ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವ ಮೂಲಕ ಇವುಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಬಲಪಡಿಸಲು ನೆರವಾಗುತ್ತವೆ. ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಸೇಬು ಮತ್ತು ಬೆರ್ರಿಗಳಲ್ಲಿರುವ ಫ್ಲೇವನಾಯ್ಡುಗಳನ್ನು ಸೇವಿಸಿದ ವ್ಯಕ್ತಿಗಳು ಇತರರಿಗಿಂತ ಶೀತಕ್ಕೊಳಗಾಗುವ ಸಾಧ್ಯತೆಯನ್ನು 33% ದಷ್ಟು ಕಡಿಮೆ ಹೊಂದಿರುತ್ತಾರೆ. ವಿಶೇಷವಾಗಿ ವಿಟಮಿನ್ ಸಿ ನಂತಹ ಆಂಟಿ ಆಕ್ಸಿಡೆಂಟುಗಳಿರುವ ಹಣ್ಣುಗಳು ಶೀತ ಮತ್ತು ಫ್ಲೂ ನಿಂದ ಶೀಘ್ರವೇ ಚೇತರಿಸಿಕೊಳ್ಳಲು ನೆರವಾಗುತ್ತವೆ.

ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಿ

ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಿ

ದಿನವಿಡೀ ಸಾಕಷ್ಟು ನೀರನ್ನು ಕುಡಿಯುವ ಮೂಲಕ ದೇಹದಿಂದ ಕಲ್ಮಶಗಳನ್ನು ಹೊರಹಾಕಿ ಸ್ವಚ್ಛಗೊಳಿಸಲು ಸಾಧ್ಯವಾಗುತ್ತದೆ ಹಾಗೂ ದೇಹದ ನೀರಿನ ಅಗತ್ಯತೆಯನ್ನೂ ಪೂರೈಸಲು ಸಾಧ್ಯವಾಗುತ್ತದೆ ಎಂದು ಅಮೇರಿಕಾದ ಕುಟುಂಬವೈದ್ಯರ ಅಕ್ಯಾಡೆಮಿ ತಿಳಿಸುತ್ತದೆ. ದೇಹದಲ್ಲಿ ಸಾಕಷ್ಟು ನೀರು ಇರುವಂತೆ ನೋಡಿಕೊಳ್ಳುವ ಮೂಲಕ ರೋಗ ನಿರೋಧಕ ವ್ಯವಸ್ಥೆಯೂ ಬಲವಾಗಿದ್ದು ಶೀತ ಮತ್ತು ಫ್ಲೋ ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ದಿನವಿಡೀ ಕೊಂಚ ಕೊಂಚವಾಗಿ ಒಟ್ಟು ಎಂಟು ಲೋಟಗಳಷ್ಟು ನೀರು ಕುಡಿಯಬೇಕೆಂದು ವೈದ್ಯರು ಸಲಹೆ ಮಾಡುತ್ತಾರೆ.

ಹಸಿರು ಟೀ

ಹಸಿರು ಟೀ

ಹಾಲಿಲ್ಲದ ಹಸಿರು ಟೀ ಮತ್ತು ಇದಕ್ಕೆ ಕೊಂಚ ಲಿಂಬೆರಸ ಮತ್ತು ಜೇನನ್ನು ಬೆರೆಸಿ ಕುಡಿಯುವ ಮೂಲಕವೂ ಶೀತ ಮತ್ತು ಫ್ಲೋ ಮೊದಲಾದ ತೊಂದರೆಗಳಿಂದ ರಕ್ಷಣೆ ಪಡೆಯಬಹುದು. ಹೇಗೆಂದರೆ, ಬಿಸಿಯಾದ ಹಸಿರು ಟೀ ಸೇವಿಸುವಾಗ ಇದರ ಹಬೆಯಲ್ಲಿಯೂ ಕೆಲವು ಪೋಷಕಾಂಶಗಳು ಮೂಗಿಗೆ ತಲುಪಿ ಇದು ಸಿಲಿಯಾ ಎಂಬ ಸೂಕ್ಷ್ಮ ರೋಮಗಳನ್ನು ಪ್ರಚೋದಿಸಲು ನೆರವಾಗುತ್ತದೆ. ಈ ಸಿಲಿಯಾ ರೋಮಗಳು ಕ್ರಿಮಿಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತವೆ. ಈ ಟೀಯಲ್ಲಿ ಸೇರಿಸುವ ಲಿಂಬೆ ಕಫವನ್ನು ಸಡಿಲಗೊಳಿಸಿ ಸುಲಭವಾಗಿ ನಿವಾರಿಸಲು ನೆರವಾಗುತ್ತದೆ ಹಾಗೂ ಜೇನಿನ ಬ್ಯಾಕ್ಟೀರಿಯಾ ನಿವಾರಕ ಗುಣ ಬ್ಯಾಕ್ಟೀರಿಯಾಗಳನ್ನು ಕೊಂದು ಹೊರಹಾಕಲು ನೆರವಾಗುತ್ತದೆ. ವಿಶೇಷವಾಗಿ ತೇವವಾಗಿರುವ ದಿನಗಳಲ್ಲಿ ಗಾಯ ಅಥವಾ ಇತರ ಸೋಂಕುಕಾರಕ ಕ್ರಿಮಿಗಳು ಸುಲಭವಾಗಿ ದೇಹ ಪ್ರವೇಶಿಸುವ ಸಾಧ್ಯತಯೆನ್ನು ಜೇನಿನ ಸ್ನಿಗ್ಧತೆಯ ಕಾರಣ ಈ ದಾರಿಗಳಿಗೆ ಅಡ್ಡಲಾಗಿ ದಪ್ಪನಾದ ಪರದೆಯಂತೆ ನಿರ್ಮಿಸಿ ರಕ್ಷಣೆ ಒದಗಿಸುತ್ತದೆ.

English summary

10 Mind-blowing Ways To Prevent Cold And Flu

What do you do when your colleague is suffering with cold and flu? You might be getting the phobia of yourself catching it because he or she sits next to your cubicle. You then start avoiding the person or stop shaking hands with your co-worker. Shaking hands is a common way of transferring germs from one person to another. Health experts have suggested that to avoid shaking hands, you could do a fist bump. While sometimes handshake is unavoidable and is not socially feasible, hand-washing afterwards could kill the germs that your hands have picked up.
Story first published: Friday, April 13, 2018, 20:22 [IST]
X
Desktop Bottom Promotion