For Quick Alerts
ALLOW NOTIFICATIONS  
For Daily Alerts

  ಬೂದುಗುಂಬಳದ ಬಗ್ಗೆ ಇರುವ ಹತ್ತು ಅಚ್ಚರಿಯ ಮಾಹಿತಿಗಳು

  |

  ಒಳ್ಳೆಯ ತರಕಾರಿಯನ್ನು ಬೇರೊಂದು ಉಪಮೆಯೊಂದಿಗೆ ಹೋಲಿಸಿ ಕಡೆಗಣಿಸುವುದು ಸಾಮಾನ್ಯವಾಗಿ ಎಲ್ಲೆಡೆ ಕಂಡುಬರುವ ವಿದ್ಯಮಾನವಾಗಿದೆ. ಉದಾಹರಣೆಗೆ ನೋಡಲಿಕ್ಕೆ ಕೋಲಿನಂತೆ ಕಾಣುತ್ತದೆ ಎಂದು ಉಪೇಕ್ಷಿಸಿ ನುಗ್ಗೇಕಾಯಿಯನ್ನು ತಿನ್ನದೇ ಹಾಗೇ ಕೆಳಗೆಸೆಯುವವರೇ ಹೆಚ್ಚು. ಇದೇ ರೀತಿಯಲ್ಲಿ ಪುಂಗಿಯನ್ನು ಮಾಡಲು ಬಳಸಲಾಗುತ್ತದೆ ಎಂಬ ಕಾರಣಕ್ಕೇ ಬೂದುಗುಂಬಳ ಕಾಯಿ (Butternut squash) ಯನ್ನು ಮನೆಗೇ ತರದವರಿದ್ದಾರೆ.

  ಆದರೆ ವಿಶ್ವದಾದ್ಯಂತ ಈ ತರಕಾರಿ ಜನರ ಅಚ್ಚುಮೆಚ್ಚಿನದ್ದಾಗಿದ್ದು ಅತ್ಯಂತ ಆರೋಗ್ಯಕರ ಹಾಗೂ ಸೌಂದರ್ಯವರ್ಧಕವೂ ಆಗಿದೆ. ಇಂದಿನ ಲೇಖನದಲ್ಲಿ ಈ ತರಕಾರಿಯ ಪ್ರಯೋಜನಗಳ ಬಗ್ಗೆ ಹಲವಾರು ವಿವರಗಳನ್ನು ನೀಡಲಾಗಿದೆ. ಗಾಢ ಬೂದು ಅಥವಾ ತಿಳಿಹಳದಿಬಣ್ಣದ ಸಿಪ್ಪೆಯ ಈ ಹಣ್ಣನ್ನು ಕತ್ತರಿಸಿದಾಗ ಹೊಂಬಣ್ಣದ ತಿರುಳು ಹಾಗೂ ನಡುವಿನಲ್ಲಿ ತರಬೂಜ ಹಣ್ಣುಗಳಲ್ಲಿರುವಂತೆ ಬೀಜಗಳಿರುವುದನ್ನು ಕಾಣಬಹುದು.

  ಇದರ ತಿರುಳು ತುಂಬಾ ಮೃದುವಾಗಿರುವ ಕಾರಣ ಹಲವಾರು ಖಾದ್ಯಗಳಲ್ಲಿ ಬಳಸಲಾಗುತ್ತದೆ ಹಾಗೂ ರುಚಿ ಮತ್ತು ಇದರಲ್ಲಿರುವ ಪೋಷಕಾಂಶಗಳಿಂದಾಗಿಯೇ ಹೆಚ್ಚಿನವರು ಈ ಹಣ್ಣಿನ ಖಾದ್ಯವನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಲ್ಲಿ ಪ್ರಮುಖವಾಗಿ ವಿಟಮಿನ್ ಎ, ವಿಟಮಿನ್ ಸಿ, ಕರಗದ ನಾರು, ಪ್ರೋಟೀನ್, ಸತು, ಫೋಲೇಟ್ ಮತ್ತು ಪೊಟ್ಯಾಶಿಯಂ ಹೆಚ್ಚಿನ ಸಾಂದ್ರತೆಯಲ್ಲಿದ್ದು ಇನ್ನೂ ಹಲವಾರು ಅವಶ್ಯಕ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿವೆ.

  Butternut Squash

  ಬೂದುಗುಂಬಳದಲ್ಲಿ ಹಲವಾರು ಮುಖ್ಯ ಆಂಟಿ ಆಕ್ಸಿಡೆಂಟುಗಳೂ ಇದ್ದು ಆರೋಗ್ಯಕರ ಆಹಾರವನ್ನು ಅರಸುವವರಿಗೆ ಸುಲಭವಾದ ಆಯ್ಕೆಯಾಗಿ ಪರಿಣಮಿಸಿದೆ. ಅಮೇರಿಕಾದ ಕೃಷಿ ವಿಭಾಗ USDA (United States Department Agriculture) ನೀಡಿರುವ ಮಾಹಿತಿಯ ಪ್ರಕಾರ ಒಂದು ಕಪ್ ನಷ್ಟು ಬೇಯಿಸಿದ ಬೂದುಗುಂಬಳದಲ್ಲಿ (ಸುಮಾರು 205 ಗ್ರಾಂ) ಎಂಭತ್ತೆರಡು ಕ್ಯಾಲೋರಿಗಳೂ, 1.8ಗ್ರಾಂ ಪ್ರೋಟೀನ್, ಕೇವಲ 0.18 ಗ್ರಾಂ ಕೊಬ್ಬು ಮತ್ತು 21.50 ಗ್ರಾಂ ನಷ್ಟು ಹೆಚ್ಚಿನ

  ಕಾರ್ಬೋಹೈಡ್ರೇಟುಗಳಿವೆ. ಅಂದರೆ ಒಂದು ಕಪ್ ನಶ್ಟು ಬೂದುಗುಂಬಳದ ತಿರುಳಿನ ತುಂಡುಗಳನ್ನು ಹಸಿಯಾಗಿ ಸೇವಿಸಿದರೆ ಮಿಲಿಗ್ರಾಂ ಪೊಟ್ಯಾಶಿಯಂ ಲಭಿಸುತ್ತದೆ, ಇದು ಪೊಟ್ಯಾಶಿಯಂ ನ ಆಗರ ಎಂಬ ಹೆಗ್ಗಳಿಕೆ ಪಡೆದಿರುವ ಬಾಳೆಹಣ್ಣಿನಲ್ಲಿರುವುದಕ್ಕಿಂತಲೂ ಹೆಚ್ಚು! ಬನ್ನಿ, ಈ ಅದ್ಭುತ ತರಕಾರಿಯ ಬಗ್ಗೆ ಅಚ್ಚರಿಯ ಮಾಹಿತಿಗಳನ್ನು ನೋಡೋಣ...

  ಅಧಿಕ ರಕ್ತದೊತ್ತಡ ಕಡಿಮೆಗೊಳಿಸಿ ಮತ್ತೆ ಆವರಿಸುವುದರಿಂದ ತಡೆಯುತ್ತದೆ

  ಹೃದಯದ ಆರೋಗ್ಯವನ್ನು ಪರಿಗಣಿಸಿದಾಗ ರಕ್ತದೊತ್ತಡ ಆರೋಗ್ಯಕರ ಮಿತಿಗಳಲ್ಲಿರುವುದು ಅವಶ್ಯ. ಬೂದುಗುಂಬಳದಲ್ಲಿರುವ ಅಧಿಕ ಪೊಟ್ಯಾಶಿಯಂ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುವುದು ಮಾತ್ರವಲ್ಲ, ಮತ್ತೊಮ್ಮೆ ಏರುವುದರಿಂದಲೂ ತಡೆಯೊಡ್ಡುತ್ತದೆ. ಹೇಗೆ, ಎಂದರೆ ಪೊಟ್ಯಾಶಿಯಂನಲ್ಲಿ ನರಗಳನ್ನು ಸಡಿಲಿಸುವ (vasodilator) ಗುಣವಿದ್ದು ರಕ್ತದ ಒತ್ತಡವನ್ನು ಸೆಳೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಈ ಮೂಲಕ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ತನ್ಮೂಲಕ ಅಥೆರೋಸ್ಕ್ರೆಲೋಸಿಸ್, ಹೃದಯ ಸ್ತಂಭನ ಹಾಗೂ ಇತರ ಹೃದಯಸಂಬಂಧಿ ತೊಂದರೆಗಳು ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

  ಕಣ್ಣುಗಳಿಗೂ ಒಳ್ಳೆಯದು

  ಈ ಹಣ್ಣಿನ ತಿರುಳು ಕಿತ್ತಳೆ ಬಣ್ಣ ಹೊಂದಿದ್ದು ಇದಕ್ಕೆ ಇದರಲ್ಲಿರುವ ವಿಟಮಿನ್ ಎ ಹೆಚ್ಚಿನ ಸಾಂದ್ರತೆಯಲ್ಲಿರುವುದೇ ಕಾರಣವಾಗಿದೆ. ಅಲ್ಲದೇ ಹಣ್ಣಿನ ತಿರುಳಿನಲ್ಲಿ ನಾಲ್ಕು ಅವಶ್ಯಕ ಕ್ಯಾರೋಟಿನಾಯ್ಡುಗಳಿವೆ. ಅವೆಂದರೆ ಬೀಟಾ ಕ್ಯಾರೋಟಿನ್, ಆಲ್ಫ-ಕ್ಯಾರೋಟಿನ್, ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್. ಇದರಲ್ಲಿ ಕಡೆಯ ಎರಡು ಕ್ಯಾರೋಟಿನಾಯ್ಡುಗಳು ಕಣ್ಣಿನ ಪಾಪೆಯ ಮೇಲೆ ನೇರವಾದ ಪ್ರಭಾವ ಬೀರುತ್ತದೆ ಹಾಗೂ ಉತ್ಕರ್ಷಣಶೀಲ ಒತ್ತಡದಿಂತ ರಕ್ಷಿಸುತ್ತದೆ ಮತ್ತು ಕಣ್ಣಿನ ಸ್ನಾಯುಗಳು ಶಿಥಿಲವಾಗುವುದನ್ನು ತಡವಾಗಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಆಲ್ಫಾ ಮತ್ತು ಬೀಟಾ ಕ್ಯಾರೋಟಿನಾಯ್ಡುಗಳು ರೆಟಿನಾಲ್ ಎಂಬ ಪೋಷಕಾಂಶವಾಗಿ ಪರಿವರ್ತನೆಗೊಳ್ಳುತ್ತವೆ, ಇದೊಂದು ಬಗೆಯ ವಿಟಮಿನ್ ಎ ಆಗಿದ್ದು ದೇಹದ ಹಲವಾರು ಕಾರ್ಯಗಳಲ್ಲಿ ನೆರವಾಗುತ್ತದೆ.

  ಜೀರ್ಣಾಂಗಗಳಿಗೂ ಒಳ್ಳೆಯದು

  ಬೂದುಗುಂಬಳದಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದೆ ಹಾಗೂ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಹೊಟ್ಟೆಯುಬ್ಬರಿಕೆ, ಮಲಬದ್ದತೆ ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ಅಲ್ಲದೇ ಹೊಟ್ಟೆ ಮತ್ತು ಕರುಳುಗಳಲ್ಲಿ ಎದುರಾಗುವ ಉರಿಯೂತವನ್ನು ಕಡಿಮೆಗೊಳಿಸಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳಲ್ಲಿ ಕಂಡುಕೊಳ್ಳಲಾಗಿದೆ. ಈ ಮೂಲಕ ಕರಗದ ನಾರು ಆಹಾರದಲ್ಲಿದ್ದಷ್ಟೂ ಹೃದಯಸಂಬಂಧಿ ತೊಂದರೆ, ಮಧುಮೇಹ, ಕ್ಯಾನ್ಸರ್ ಹಾಗೂ ಸ್ಥೂಲಕಾಯ ಆವರಿಸುವ ಸಾಧ್ಯತೆಗಳು ಕಡಿಮೆಯಾಗಿ ಆರೋಗ್ಯ ಉತ್ತಮಗೊಳ್ಳುತ್ತದೆ.

  ಹುಟ್ಟಿನಿಂದ ಬರುವ ದೋಶಗಳಿಂದ ರಕ್ಷಿಸುತ್ತದೆ

  ಗರ್ಭವತಿಯರಿಗೆ ಅವಶ್ಯಕವಾಗಿ ಬೇಕಾಗಿರುವ ಪೋಷಕಾಂಶವೊಂದು ಬೂದುಗುಂಬಳದಲ್ಲಿದೆ. ಇದೇ ಫೋಲಿಕ್ ಆಮ್ಲ! ಈ ಪೋಷಕಾಂಶದ ಇರುವಿಕೆಯಿಂದ ಗರ್ಭದಲ್ಲಿರುವ ಶಿಶುವಿಗೆ ಯಾವುದೇ ಹುಟ್ಟಿನಿಂದ ಬರುವ ದೋಶಗಳಿಲ್ಲದಂತೆ ರಕ್ಷಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ನರವ್ಯವಸ್ಥೆಯ ತೊಂದರೆ (neural tube issues). ಬೂದುಗುಂಬಳದಲ್ಲಿ ಫೋಲಿಕ್ ಆಮ್ಲ ಹಾಗೂ ಇತರ ಬಿ-ವಿಟಮಿನ್ನುಗಳು ಹೇರಳವಾಗಿದ್ದು ಗರ್ಭಾವಸ್ಥೆಯಲ್ಲಿ ಈ ತರಕಾರಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಹುಟ್ಟಲಿರುವ ಮಗು ಆರೋಗ್ಯವಂತವಾಗಿರುತ್ತದೆ. ಅಲ್ಲದೇ ಫೋಲಿಕ್ ಆಮ್ಲದ ಇರುವಿಕೆಯ ಮೂಲಕ ದೇಹದಲ್ಲಿ ಹೊಸ ಜೀವಕೋಶಗಳು ಹುಟ್ಟಲು ನೆರವಾಗುತ್ತದೆ, ವಿಶೇಷವಾಗಿ ಹೆಚ್ಚಿನ ಪ್ರಮಾಣದ ರಕ್ತಕಣಗಳು ಉತ್ಪತ್ತಿಯಾಗಲು ಫೋಲಿಕ್ ಆಮ್ಲ ಪ್ರಮುಖ ಪಾತ್ರ ವಹಿಸುತ್ತದೆ.

  ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ

  ಬೂದುಗುಂಬಳದಲ್ಲಿ ಖನಿಜಗಳಾದ ಪೊಟ್ಯಾಶಿಯಂ, ಮೆಗ್ನೇಶಿಯಂ, ಮ್ಯಾಂಗನೀಸ್ ಹಾಗೂ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿವೆ. ಇವೆಲ್ಲವೂ ಮೂಳೆಗಳ ದೃಢತೆಗೆ ಅವಶ್ಯಕವಾಗಿ ಬೇಕಾಗಿರುವ ಖನಿಜಗಳಾಗಿವೆ. ವಿಶೇಷವಾಗಿ ಮೂವತ್ತರ ಹರೆಯ ದಾಟಿದ ಬಳಿಕ ಮೂಳೆಗಳು ಕೊಂಚ ಶಿಥಿಲವಾಗಲು ಪ್ರಾರಂಭಗೊಳ್ಳುತ್ತವೆ. ಈ ಸಮಯದಲ್ಲಿ ಖನಿಜಯುಕ್ತ ಆಹಾರಗಳ ಸೇವನೆಯಿಂದ ಈ ಬಗೆಯ ಶಿಥಿಲವಾಗುವಿಕೆಯಿಂದ ರಕ್ಷಣೆ ಪಡೆಯಬಹುದು. ನಿತ್ಯದ ಆಹಾರದಲ್ಲಿ ಬೂದುಗುಂಬಳವನ್ನು ಅಳವಡಿಸುವುದು ಉತ್ತಮ ಕ್ರಮವಾಗಿದೆ ಹಾಗೂ ನಿಸರ್ಗ ವಯಸ್ಸಿನ ಮೂಲಕ ದೇಹವನ್ನು ಶಿಥಿಲವಾಗಿಸುವ ಕ್ರಿಯೆಯನ್ನು ನಿಧಾನಗೊಳಿಸಬಹುದು. ವಿಶೇಷವಾಗಿ ಮೂಳೆಗಳ ಸಾಂದ್ರತೆ ಕಡಿಮೆಯಾದರೆ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ ಓಸ್ಟಿಯೋಪೋರೋಸಿಸ್ ಎಂಬ ಸ್ಥಿತಿ ಬರದಂತೆ ತಡೆಗಟ್ಟಬಹುದು. ಅಲ್ಲದೇ, ರಜೋನಿವೃತ್ತಿ ಪಡೆದ ಮಹಿಳೆಯರು ಹಾಗೂ ವೃದ್ದ ಪುರುಷರಿಗೂ, ಮೂಳೆಗಳು ಈಗಾಗಲೇ ಶಿಥಿಲವಾಗಿದ್ದು ಮೂಳೆಗಳು ಸುಲಭವಾಗಿ ತುಂಡಾಗುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಗಳಿಗೂ ಬೂದುಗುಂಬಳ ಅತ್ಯುತ್ತಮವಾದ ಆಹಾರವಾಗಿದೆ.

  ತೂಕ ಇಳಿಸಲು ನೆರವಾಗುತ್ತದೆ

  ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಪೋಷಕಾಂಶಗಳಿರಬೇಕು ಹಾಗೂ ಅಗತ್ಯ ಪ್ರಮಾಣದಷ್ಟು ಮಾತ್ರವೇ ಕ್ಯಾಲೋರಿಗಳನ್ನು ಒದಗಿಸುವಂತಿರಬೇಕು. ಒಂದು ಪ್ರಮಾಣ ಬೂದುಗುಂಬಳದ ಖಾದ್ಯದಲ್ಲಿ ಸುಮಾರು 82ಕ್ಯಾಲೋರಿಗಳು ಮಾತ್ರವಿದ್ದು ಇದನ್ನು ನಿಮ್ಮ ನಿತ್ಯದ ಆಹಾರದ ಜೊತೆಗೆ ಹೆಚ್ಚುವರಿ ಆಹಾರದ ರೂಪದಲ್ಲಿ ಸೇವಿಸಬಹುದು. ಆ ಮೂಲಕ ದೇಹದ ಆಹಾರದ ಅಗತ್ಯತೆಯನ್ನು ಪೂರೈಸುವ ಜೊತೆಗೇ ಅನಗತ್ಯ ಕ್ಯಾಲೋರಿಗಳನ್ನು ಸೇವಿಸದಿರಲೂ ಸಾಧ್ಯವಾಗುತ್ತದೆ, ತನ್ಮೂಲಕ ಸ್ಥೂಲಕಾಯ ಆವರಿಸುವುದನ್ನು ತಡೆಗಟ್ಟುತ್ತದೆ. ಅಲ್ಲದೇ ಈ ತರಕಾರಿಯ ಸೇವನೆಯಿಂದ ದೇಹದಲ್ಲಿ ಹೊಸ ಕೊಬ್ಬಿನ ಜೀವಕೋಶಗಳು ಉತ್ಪತ್ತಿಯಾಗುವ ಸಾಧ್ಯತೆ ಕಡಿಮೆಯಾಗುತ್ತದೆ ಹಾಗೂ ಇದರ ಪೋಷಕಾಂಶಗಳನ್ನು ಬಳಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ಅನಿವಾರ್ಯವಾಗಿ ಬಳಸಿಕೊಳ್ಳಬೇಕಾಗಿ ಬರುವ ಮೂಲಕ ತೂಕ ಇಳಿಸಿಕೊಳ್ಳಬಯಸುವವರಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.

  ಕ್ಯಾನ್ಸರ್ ಆವರಿಸುವುದರಿಂದ ರಕ್ಷಿಸುತ್ತದೆ ಹಾಗೂ ಇದರ ವಿರುದ್ದ ಹೋರಾಡುತ್ತದೆ

  ಕ್ಯಾನ್ಸರ್ ವಿರುದ್ದ ಹೋರಾಡುವ ಆಹಾರಗಳನ್ನು ಸುಪರ್ ಫುಡ್ ಎಂದು ಕರೆಯುತ್ತಾರೆ. ಬ್ಲೂಬೆರಿ, ಬ್ರೋಕೋಲಿ ಮೊದಲಾದವು ಈ ಗುಣವನ್ನು ಹೊಂದಿವೆ. ಈ ಪಟ್ಟಿಯಲ್ಲಿ ಬೂದುಗುಂಬಳವನ್ನೂ ಧಾರಾಳವಾಗಿ ಸೇರಿಸಿಕೊಳ್ಳಬಹುದು. ಇದರ ಸೇವನೆಯಿಂದ ದೇಹದಲ್ಲಿ ಅಗತ್ಯ ಪೋಷಕಾಂಶಗಳು ಲಭಿಸುವಂತಾಗಿ ಕೆಲವಾರು ಸೋಂಕು ಮತ್ತು ರೋಗಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ. ವಿಶೇಷವಾಗಿ ಬೂದುಗುಂಬಳದಲ್ಲಿ ಕಂಡುಬರುವ ಪೋಷಕಾಂಶಗಳು ಚರ್ಮದ ಕ್ಯಾನ್ಸರ್ (ಮೆಲನೋಮಾ) ಗೆ ತುತ್ತಾಗಿರುವ ಜೀವಕೋಶಗಳನ್ನು ಇನ್ನಷ್ಟು ಬೆಳೆಯಲು ಬಿಡದೇ ಇದರ ಚಿಕಿತ್ಸೆಗೆ ನೆರವಾಗುತ್ತವೆ. ಅಲ್ಲದೇ ಬೂದುಗುಂಬಳದಲ್ಲಿರುವ ವಿಟಮಿನ್ ಸಿ ಶ್ವಾಸಕೋಶ ಮತ್ತು ಗರ್ಭಾಶಯಗಳ ಕ್ಯಾನ್ಸರ್ ಗಳನ್ನು ಗುಣಪಡಿಸಲೂ ನೆರವಾಗುತ್ತವೆ.

  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಹಾಗೂ ಉರಿಯೂತದ ವಿರುದ್ದ ಹೋರಾಡುತ್ತದೆ

  ಬೂದುಗುಂಬಳದಲ್ಲಿರುವ ಬೀಟಾ ಕ್ಯಾರೋಟಿನ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಹಲವಾರು ಕಾಯಿಲೆ ಮತ್ತು ಸೋಂಕುಗಳ ವಿರುದ್ದ ಹೋರಾಡುವ ಶಕ್ತಿ ಇನ್ನಷ್ಟು ಶೀಘ್ರವಾಗಿ ಸ್ಪಂದಿಸಲು ನೆರವಾಗುತ್ತದೆ. ವಿಶೇಷವಾಗಿ ಕೆಲವು ಪೋಷಕಾಂಶಗಳು ಕ್ಯಾನ್ಸರ್ ತಡೆಗಟ್ಟಲು ಹಾಗೂ ಸ್ವಯಂ ನಿರೋಧಕ ಶಕ್ತಿ ವೃದ್ದಿಸಲು ನೆರವಾಗುತ್ತವೆ. ಗಾಳಿಯಲ್ಲಿ ತೇಲಿಬರುವ ವೈರಸ್ಸುಗಳಿಂದ ಎದುರಾಗುವ ಸಾಮಾನ್ಯ ಶೀತ ಮತ್ತು ಇತರ ಚಿಕ್ಕಪುಟ್ಟ ಸೋಂಕುಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

  ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ

  ಬೂದುಗುಂಬಳದಲ್ಲಿ ಕಬ್ಬಿಣದ ಅಂಶ ಉತ್ತಮ ಪ್ರಮಾಣದಲ್ಲಿದ್ದು ಹೊಸ ಕೆಂಪು ರಕ್ತಕಣಗಳ ಉತ್ಪತ್ತಿಗೆ ನೆರವಾಗುತ್ತದೆ. ನಮ್ಮ ಅಹಾರದಲ್ಲಿ ಸಾಕಷ್ಟು ಕಬ್ಬಿಣ ಲಭಿಸದೇ ಹೋದರೆ ಇದರಿಂದ ರಕ್ತಹೀನತೆ ಎದುರಾಗುತ್ತದೆ ಹಾಗೂ ತನ್ಮೂಲಕ ನಿಃಶಕ್ತಿ ಹಾಗೂ ಸ್ಮರಣಶಕ್ತಿಯ ಕುಂದುವಿಕೆ, ದ್ವಂದ್ವ ಮೊದಲಾದವು ಎದುರಾಗುತ್ತವೆ. ಹಾಗಾಗಿ ನಮ್ಮ ದೇಹದಲ್ಲಿ ಉತ್ತಮ ಪ್ರಮಾಣದ ಕೆಂಪುರಕ್ತಕಣಗಳಿರುವುದು ಅವಶ್ಯವಾಗಿದ್ದು ರಕ್ತಪರಿಚಲನೆ ಮತ್ತು ಶ್ವಾಸಕೋಶಗಳಿಂದ ಆಮ್ಲಜನಕವನ್ನು ಕೊಂಡೊಯ್ಯುವ ಕ್ಷಮತೆ ಹೆಚ್ಚುತ್ತದೆ ಹಾಗೂ ಈ ಮೂಲಕ ಎಲ್ಲಾ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

  ತ್ವಚೆ ಮತ್ತು ಕೂದಲನ್ನು ಆರೋಗ್ಯಕರವಾಗಿಸುತ್ತದೆ

  ಬೂದುಗುಂಬಳದಲ್ಲಿರುವ ವಿಟಮಿನ್ ಎ ತ್ವಚೆ ಮತ್ತು ಕೂದಲ ಜೀವಕೋಶಗಳಿಗೆ ಅದ್ಭುತವಾದ ಆರೈಕೆ ನೀಡುತ್ತದೆ ಹಾಗೂ ಉತ್ತಮ ಆರೋಗ್ಯ ಪಡೆಯಲು ನೆರವಾಗುತ್ತದೆ. ಕೂದಲ ಬುಡದಲ್ಲಿ ಆರ್ದ್ರತೆಯನ್ನು ಒದಗಿಸುವ ಸ್ನಿಗ್ಧದ್ರವ(sebum)ದ ಉತ್ಪತ್ತಿಗೆ ವಿಟಮಿನ್ ಎ ಅಗತ್ಯವಾಗಿದ್ದು ಈ ಮೂಲಕ ಕೂದಲಿಗೆ ಅಗತ್ಯವಾದ ಆರ್ದ್ರತೆ ಒದಗುತ್ತದೆ. ಅಲ್ಲದೇ ದೇಹದ ಎಲ್ಲಾ ಅಂಗಾಂಶಗಳ ಬೆಳವಣಿಗೆಗೂ ವಿಟಮಿನ್ ಎ ಅಗತ್ಯವಾಗಿದೆ. ಇದರಲ್ಲಿ ಕೂದಲು ಮತ್ತು ತ್ವಚೆಯ ಜೀವಕೋಶಗಳು ಹೆಚ್ಚು ಹೆಚ್ಚಾಗಿ ಸವೆಯುವಂತಹದ್ದಾಗಿದ್ದು ಬೇಗಬೇಗನೇ ಇಲ್ಲಿನ ಜೀವಕೋಶಗಳು ಬೆಳೆಯಲು ವಿಟಮಿನ್ ಎ ನೆರವಾಗುತ್ತದೆ. ಒಂದು ಪ್ರಮಾಣ ಬೂದುಗುಂಬಳದ ಸೇವನೆಯಿಂದ ನಿತ್ಯದ ಅಗತ್ಯದ ಅರ್ಧಕ್ಕೂ ಹೆಚ್ಚು ಪ್ರಮಾಣದ ವಿಟಮಿನ್ ಸಿ ಲಭಿಸುತ್ತದೆ ಹಾಗೂ ಈ ವಿಟಮಿನ್ ತ್ವಚೆ ಮತ್ತು ಕೂದಲಿಗೆ ಸೆಳೆತ ನೀಡುವ ಕೊಲ್ಯಾಜೆನ್ ಕಣಗಳ ಉತ್ಪತ್ತಿಗೆ ನೆರವಾಗಿದ್ದು ಕಾಂತಿಯುಕ್ತ ತ್ವಚೆ ಮತ್ತು ನೀಳ ಕೂದಲನ್ನು ಪಡೆಯಲು ನೆರವಾಗುತ್ತದೆ.

  English summary

  10 Interesting Facts About Butternut Squash

  Butternut squash is the most beloved vegetable around the world due to its versatility and other myriad health benefits, which we are going to discuss here. The squash has a pale brown or a yellow skin with a rich orange flesh inside, along with a nutty flavour. Butternut squash has made its way into the culinary creations of certain countries. Apart from the ease of preparing butternut squash as a delicious meal, people love this squash for an ample number of nutrients that it offers.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more