For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಅವಧಿಯಲ್ಲಿ ಕಾಡುವ ಸ್ತನ ನೋವಿಗೆ ಇಲ್ಲಿದೆ ಸರಳ ಮನೆಮದ್ದುಗಳು

By Divya Pandith
|

ಮಹಿಳೆಯರಿಗೆ ಸಾಮಾನ್ಯವಾಗಿ ತಮ್ಮ ಸ್ತನದ ಮೇಲೆ ತೀವ್ರವಾದ ನೋವು ಅಥವಾ ಗಂಟಲಿನ ನೋವನ್ನು ಅನುಭವಿಸುತ್ತಾರೆ. ಇದನ್ನು ಮಾಸ್ಟಲ್ಜಿಯಾ ಎಂದು ಕರೆಯಲಾಗುತ್ತದೆ. ಋತುಚಕ್ರದ ಸಮಯದಲ್ಲಿ ಅನುಭವಿಸುವುದು ಮಹಿಳೆಯರಿಗೆ ಇದು ತುಂಬಾ ಸಾಮಾನ್ಯವಾಗಿದೆ. ಕ್ಯಾಲಿಫೋರ್ನಿಯಾ ಪೆಸಿಫಿಕ್ ಮೆಡಿಕಲ್ ಸೆಂಟರ್ನ ಪ್ರಕಾರ ಸ್ತನ ನೋವು 50 ರಿಂದ 70 ರಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಸ್ತನ ನೋವು ಕಾರಣಗಳು ಸ್ತನದ ಉರಿಯೂತದ ರಚನೆ, ಹಾರ್ಮೋನುಗಳು, ಸ್ತನ್ಯಪಾನ, ಬಾಲಕಿಯರ ಆರಂಭಿಕ ಗರ್ಭಾವಸ್ಥೆಯಲ್ಲಿ, ಗರ್ಭಾವಸ್ಥೆ, ಋತುಬಂಧ, ಸ್ತನ ಶಸ್ತ್ರಚಿಕಿತ್ಸೆ, ಅಸಮರ್ಪಕವಾದ ಸ್ತನಬಂಧವನ್ನು ಬಳಸುವುದು ಹೀಗೆ ಅನೇಕ ಕಾರಣಗಳಿಂದ ನೋವನ್ನು ಅನುಭವಿಸಬೇಕಾಗುವುದು.

ಸಾಮಾನ್ಯವಾಗಿ ಎರಡು ಬಗೆಯ ಸ್ತನ ನೋವುಗಳನ್ನು ಕಾಣಬಹುದು. ಒಂದು ಸೈಕ್ಲಿಕ್ ಸ್ತನನೋವು, ಇನ್ನೊಂದು ನಾನ್ ಸೈಕ್ಲಿಕ್ ಸ್ತನನೋವು. ಸೈಕ್ಲಿಕ್ ಸ್ತನನೋವು ಋತುಚಕ್ರದ ಪೂರ್ವದಲ್ಲಿ ಮತ್ತು ನಂತರದಲ್ಲಿ ಕಾಣಿಸಿಕೊಳ್ಳುತ್ತದೆ. ನಾನ್ ಸೈಕ್ಲಿಕ್ ಸ್ತನನೋವು ಕ್ಯಾನ್ಸರ್ ಉಬ್ಬುಗಳು, ನರಗಳ ಸಂಕೀರ್ಣತೆಯಿಂದ ಉಂಟಾಗುತ್ತದೆ. ಈ ಎದೆನೋವುಗಳು ಉಂಟಾದಾಗ ಸ್ತನಗಳ ಪ್ರದೇಶವು ನೋವು, ಭಾರ ಮತ್ತು ಮೃದುತ್ವವನ್ನು ಹೊಂದಿರುತ್ತದೆ. ಋತುಚಕ್ರದ ಸಮಯದಲ್ಲಿ ಹೊಂದುವ ನೋವನ್ನು ಕೆಲವು ಮನೆ ಔಷಧಿಗಳ ಸಹಾಯದಿಂದ ನಿವಾರಿಸಬಹುದು. ಅವು ಯಾವವು? ಎನ್ನುವುದನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ.

ಮಸಾಜ್:

ಮಸಾಜ್:

ಸ್ತನಗಳ ಮಸಾಜ್ ಮಾಡುವುದರಿಂದ ಉರಿಯೂತವನ್ನು ಕಡಿಮೆಮಾಡುವುದು. ಜೊತೆಗೆ ರಕ್ತಪರಿಚಲನೆಯು ಸುಧಾರಿಸುತ್ತದೆ.

- 2 ಟೇಬಲ್ ಚಮಚ ಆಲಿವ್ ಎಣ್ಣೆಯನ್ನು ಬೆಚ್ಚಗೆ ಮಾಡಿ ದಿನಕ್ಕೆ ಎರಡು ಬಾರಿ ಸ್ತನಗಳಿಗೆ ಅನ್ವಯಿಸಿ ಮಸಾಜ್ ಮಾಡಿ.

ಕ್ಯಾಸ್ಟರ್ ಎಣ್ಣೆ

ಕ್ಯಾಸ್ಟರ್ ಎಣ್ಣೆ

ಕ್ಯಾಸ್ಟರ್ ಎಣ್ಣೆ ಕಿರಿನೋಲಿಕ್ ಆಮ್ಲವನ್ನು ಒಳಗೊಂಡಿದೆ ಇದು ಎದೆಉರಿ, ಸ್ತನ ನೋವು ನಿವಾರಣೆಗೆ ಸಹಾಯ ಮಾಡುತ್ತದೆ.

- 1 ಟೇಬಲ್ ಚಮಚ ಕ್ಯಾಸ್ಟರ್ ಎಣ್ಣೆಗೆ 2 ಟೇಬಲ್ ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ ಸೇರಿಸಿ, ಮಿಶ್ರಗೊಳಿಸಿ.

- ಎಣ್ಣೆಯನ್ನು ಸ್ತನಗಳಿಗೆ ಅನ್ವಯಿಸಿ, ಮಸಾಜ್ ಮಾಡಿ.

- ನಿತ್ಯವೂ ಗಣನೀಯವಾಗಿ ಅನ್ವಯಿಸುವುದರಿಂದ ಉತ್ತಮ ಫಲಿತಾಂಶ ದೊರೆಯುವುದು.

ಚಾಸ್ಟ್ ಬೆರಿ

ಚಾಸ್ಟ್ ಬೆರಿ

ಇದು ಪ್ರೊಲ್ಯಾಕ್ಟಿನ್ ಬಿಡುಗಡೆಯ ವಿಚಾರದಲ್ಲಿ ಹಾಗೂ ಪಿಟ್ಯುಟರಿ ಗ್ರಂಥಿಯ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಉತ್ತಮ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.

- ಚಾಸ್ಟ್ ಬೆರಿಯ ರಸವನ್ನು ತೆಗೆದುಕೊಳ್ಳಿ.

- ಒಂದು ಗ್ಲಾಸ್ ನೀರಿಗೆ ಸುಮರು 40 ಹನಿಯಷ್ಟು ಚಾಸ್ಟ್ ಬೆರಿ ರಸವನ್ನು ಸೇರಿಸಿ.

- ಪ್ರತಿನಿತ್ಯ ಮುಂಜಾನೆ ಇದನ್ನು ಸೇವಿಸಿ.

ಇವನಿಂಗ್ ಪ್ರೈಮ್ ರೋಸ್ ಎಣ್ಣೆ

ಇವನಿಂಗ್ ಪ್ರೈಮ್ ರೋಸ್ ಎಣ್ಣೆ

ಸ್ತನ ನೋವು ನಿವಾರಣೆಗೆ ಗುಲಾಬಿ ಎಣ್ಣೆಯು ಅತ್ಯುತ್ತಮ ಸಹಾಯ ನೀಡುತ್ತದೆ.

- ಇವನಿಂಗ್ ಪ್ರೈಮ್ ರೋಸ್ ಎಣ್ಣೆಯನ್ನು ಸ್ತನಕ್ಕೆ ಅನ್ವಯಿಸಿ.

- 5 ನಿಮಿಷಗಳ ಕಾಲ ಮೃದುವಾಗಿ ಮಸಾಜ್ ಮಾಡಿ.

ಫೆನ್ನೆಲ್ ಸೀಡ್

ಫೆನ್ನೆಲ್ ಸೀಡ್

ಫೆನ್ನೆಲ್ ಸೀಡ್ ಸ್ತ್ರೀ ಹಾರ್ಮೋನ್‌ಗಳನ್ನು ಸಮತೋಲನಗೊಳಿಸುತ್ತದೆ. ಜೊತೆಗೆ ನೀರಿನ ಧಾರಣೆಯನ್ನು ತಡೆಯುವುದು. ಸ್ತನ ನೋವು ನಿವಾರಣೆಗೂ ಸಹಾಯ ಮಾಡುವುದು.

- ಒಂದು ಕಪ್ ಬಿಸಿ ನೀರಿಗೆ ಒಂದು ಟೀ ಚಮಚ ಫೆನ್ನೆಲ್ ಬೀಜಗಳನ್ನು ಸೇರಿಸಿ.

- ಇದನ್ನು 10 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.

- ಬಳಿಕ ಬೀಜವನ್ನು ಸೋಸಿ, ಚಹಾವನ್ನು ಸೇವಿಸಿ.

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್

ಆಪಲ್ ಸೈಡರ್ ವಿನೆಗರ್ ಹಾರ್ಮೋನ್‌ಗಳನ್ನು ನಿಯಂತ್ರಿಸುವುದು ಹಾಗೂ ನೋವು ನಿವಾರಣೆಗೆ ಅತ್ಯುತ್ತಮವಾದ ಆರೈಕೆ ಮಾಡುವುದು.

- ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ 2 ಟೀಚಮಚ ಆಪಲ್ ವಿನೆಗರ್ ಅನ್ನು ಸೇರಿಸಿ.

- ಕೆಲವು ಹನಿ ಜೇನುತುಪ್ಪವನ್ನು ಸೇರಿಸಿ ಕುಡಿಯಿರಿ.

- ದಿನಕ್ಕೆ ಎರಡು ಬಾರಿ ಇದನ್ನು ಸೇವಿಸಿ.

ವಿಟಮಿನ್ ಇ

ವಿಟಮಿನ್ ಇ

ವಿಟಮಿನ್ ಇ ಹಾರ್ಮೋನ್ ಗಳ ಸಮತೋಲನ ಹಾಗೂ ಸ್ತನನೋವು ನಿವಾರಣೆಗೆ ಅತ್ತುತ್ತಮ ರೀತಿಯಲ್ಲಿ ಸಹಕರಿಸುವುದು.

- ವಿಟಮಿನ್ ಇ ಇರುವ ಸೂರ್ಯಕಾಂತಿ ಬೀಜ, ಬಾದಾಮಿ, ಆಲಿವ್ ಎಣ್ಣೆ, ಬಸಳೆ, ಬೆಣ್ಣೆ ಹಣ್ಣು, ಬೀಟ್ರೂಟ್ ಸೇರಿದಂತೆ ಇನ್ನಿತರ ತರಕಾರಿ ಸೊಪ್ಪುಗಳನ್ನು ಸೇವಿಸಿ.

ಮೆಗ್ನೀಸಿಯಮ್

ಮೆಗ್ನೀಸಿಯಮ್

ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಸ್ತನ ನೋವು, ಮೃದುತ್ವ ಹಾಗೂ ಇನ್ನಿತರ ಸಮಸ್ಯೆಗಳನ್ನು ನಿವಾರಿಸಲು ಸಹಾಯಮಾಡುತ್ತದೆ.

ಸಮೃದ್ಧವಾದ ಮೆಗ್ನೀಶಿಯಮ್ ಹೊಂದಿರುವ ಸೊಪ್ಪು, ತರಕಾರಿ, ಬೀಜಗಳು, ಬೆಣ್ಣೆ ಹಣ್ಣು, ಬಾಳೆಹಣ್ಣು, ಡಾರ್ಕ್ ಚಾಕೋಲೇಟ್ಅನ್ನು ಸೇವಿಸಿ.

ಐಸ್ ಪ್ಯಾಕ್/ಮಂಜುಗಡ್ಡೆ

ಐಸ್ ಪ್ಯಾಕ್/ಮಂಜುಗಡ್ಡೆ

ಸ್ತನನೋವು ಕಾಣಿಸಿಕೊಂಡ ಭಾಗದಲ್ಲಿ ಐಸ್ ಪ್ಯಾಕ್ಗಳಿಂದ ಮೃದುವಾದ ಮಸಾಜ್ ಮಾಡಿದರೆ ನೋವು ನಿವಾರಣೆಯಾಗುವುದು.

- ಒಂದು ಟವೆಲ್ನಲ್ಲಿ ಒಂದಿಷ್ಟು ಐಸ್ ಕ್ಯೂಬ್ಅನ್ನು ಹಾಕಿ.

- ಟವೆಲ್ನಲ್ಲಿ ಕಟ್ಟಿರುವ ಐಸ್ ಕ್ಯೂಬ್ಅನ್ನು ಪೀಡಿತ ಪ್ರದೇಶದಲ್ಲಿ 10 ನಿಮಿಷ ಇಡಿ.

- ನೋವು ಕಾಣಿಸಿಕೊಂಡಾಗ ದಿನದಲ್ಲಿ ಆಗಾಗ ಪುನರಾವರ್ತಿಸಿ.

ದಾಂಡೇಲಿಯನ್

ದಾಂಡೇಲಿಯನ್

ಸ್ತನ ನೋವು ಮತ್ತು ಮೃದುತ್ವ ನಿವಾರಣೆಗೆ ದಾಂಡೇಲಿಯನ್ ಸಹಾಯಮಾಡುವುದು. ಇದರಲ್ಲಿ ಪೊಟ್ಯಾಸಿಯಮ್ ಅಧಿಕ ಪ್ರಮಾಣದಲ್ಲಿ ಇರುವುದರಿಂದ ನೈಸರ್ಗಿಕವಾಗಿ ನೋವು ನಿವಾರಕವಾಗಿ ಸಹಕರಿಸುವುದು.

- ಒಂದು ಕಪ್ ನೀರಿಗೆ 1 ಟೀಚಮಚ ದಾಂಡೇಲಿಯನ್ ಬೇರನ್ನು ಸೇರಿಸಿ.

- 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ.

- ದ್ರಾವಣವನ್ನು ಸೋಸಿ, ಕೆಲವು ಹನಿ ಜೇನುತುಪ್ಪವನ್ನು ಸೇರಿಸಿ.

- ದಿನಕ್ಕೊಮ್ಮೆ ಇದನ್ನು ಕುಡಿಯಿರಿ.

English summary

10 Home Remedies To Cure Breast Pain

There are two types of breast pain - cyclic breast pain and non-cyclic breast pain. Cyclic breast pain occurs before or after the periods and non-cyclic breast pain is caused by injuries, cancerous lumps and nerve complexity.One can feel the signs and symptoms of breast pain which include stabbing pain, heaviness, tenderness, etc., in the breast region. Those women who can't bear the pain can actually try out some home remedies.
Story first published: Thursday, March 15, 2018, 19:22 [IST]
X
Desktop Bottom Promotion