For Quick Alerts
ALLOW NOTIFICATIONS  
For Daily Alerts

ಅರಿಶಿನ ಮತ್ತು ಕಾಳುಮೆಣಸಿನ ಪುಡಿಗಳ ಮಿಶ್ರಣದ ಸೇವನೆಯ ಹತ್ತು ಪ್ರಯೋಜನಗಳು

By Arshad
|

ಸಾವಿರಾರು ವರ್ಷಗಳಿಂದ ಅರಿಶಿನವನ್ನು ಭಾರತದಲ್ಲಿ ಔಷಧೀಯ, ಸೌಂದರ್ಯಕಾರಕ, ಧಾರ್ಮಿಕ ಬಳಕೆಯಲ್ಲಿ ಬಳಸಲಾಗುತ್ತಾ ಬರಲಾಗಿದೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಅತ್ಯಂತ ಆರೋಗ್ಯಕಾರಕ ಪೋಷಕಾಂಶವೇ ಈ ಹೆಗ್ಗಳಿಕೆಗೆ ಮೂಲ. ಕಾಳುಮೆಣಸು ಸಹಾ ಇನ್ನೊಂದು ಔಷಧೀಯ ಸಾಮಾಗ್ರಿಯಾಗಿದ್ದು ಅಡುಗೆಯ ರುಚಿ ಹೆಚ್ಚಿಸುವ ಜೊತೆಗೇ ಆರೋಗ್ಯವನ್ನೂ ವೃದ್ಧಿಸುತ್ತದೆ. ಒಂದು ವೇಳೆ ಇವೆರಡೂ ಜೊತೆಯಾದರೆ ಇವುಗಳ ಒಟ್ಟು ಔಷಧೀಯ ಗುಣಗಳು ನೂರಾರು ಪಟ್ಟು ಹೆಚ್ಚುತ್ತವೆ.

ಅರಿಶಿನದಲ್ಲಿ ಉರಿಯೂತ ನಿವಾರಕ, ಗುಣಪಡಿಸುವ, ಶಿಲೀಂಧ್ರನಿವಾರಕ ಹಾಗೂ ಬ್ಯಾಕ್ಟೀರಿಯಾನಿವಾರಕ ಗುಣಗಳಿವೆ. ಕಾಳುಮೆಣಸಿನ ಪುಡಿಯನ್ನು ಚೆನ್ನಾಗಿ ಒಳಗಿನ ಕಾಳುಮೆಣಸುಗಳನ್ನು ಕುಟ್ಟಿ ಪುಡಿಮಾಡಿ ತಯಾರಿಸಲಾಗುತ್ತದೆ. ಕಾಳುಮೆಣಸು ಖಾರವಾಗಿದ್ದರೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡಲು ನರಗಳ ಸಂಕೇತಗಳನ್ನು ನಿಯಂತ್ರಿಸುತ್ತದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯನ್ನೂ ಚುರುಕುಗೊಳಿಸುತ್ತದೆ. ಬನ್ನಿ, ಈ ಜೋಡಿಯ ಹತ್ತು ಪ್ರಯೋಜನಗಳ ಬಗ್ಗೆ ಅರಿಯೋಣ:

ಅರಿಶಿನದಲ್ಲಿರುವ ಔಷಧೀಯ ಗುಣಗಳ ಪೂರ್ಣ ಪ್ರಯೋಜನ ಪಡೆಯಲು ಕಾಳುಮೆಣಸು ನೆರವಾಗುತ್ತದೆ

ಅರಿಶಿನದಲ್ಲಿರುವ ಔಷಧೀಯ ಗುಣಗಳ ಪೂರ್ಣ ಪ್ರಯೋಜನ ಪಡೆಯಲು ಕಾಳುಮೆಣಸು ನೆರವಾಗುತ್ತದೆ

ಅರಿಶಿನದಲ್ಲಿ ಅದ್ಭುತ ಔಷಧೀಯ ಗುಣಗಳಿದ್ದರೂ ಇವನ್ನು ಸುಲಭದಲ್ಲಿ ಪೂರ್‍ಣ ಪ್ರಮಾಣದಲ್ಲಿ ದೇಹ ಪಡೆದುಕೊಳ್ಳಲಾಗದಿರುವುದೇ ಒಂದು ಕೊರತೆಯಾಗಿದೆ. ಏಕೆಂದರೆ ಇದರ ಪೋಷಕಾಂಶಗಳು ದೇಹಕ್ಕೆ ಮೂಲರೂಪದಲ್ಲಿ ಸಿಗುವ ಮುನ್ನವೇ ಜೀರ್ಣಕ್ರಿಯೆಯಲ್ಲಿ ಚಯಾಪಚಯ ಕ್ರಿಯೆಗೆ ಒಳಗೊಂಡು ಪರಿವರ್ತಿತಗೊಳ್ಳುತ್ತವೆ. ಆದರೆ ಇದರೊಂದಿಗೆ ಕಾಳುಮೆಣಸನ್ನು ಸೇವಿಸಿದರೆ ಅರಿಶಿನದ ಪ್ರಯೋಜನಗಳನ್ನು ದೇಹ ಪಡೆಯಲು ಸಾಧ್ಯವಾಗುತ್ತದೆ.

ನೋವನ್ನು ಕಡಿಮೆಗೊಳಿಸುತ್ತದೆ

ನೋವನ್ನು ಕಡಿಮೆಗೊಳಿಸುತ್ತದೆ

ಕಾಳುಮೆಣಸಿನಲ್ಲಿ ಪೈಪರೈನ್ ಎಂಬ ಪೋಷಕಾಂಶವಿದೆ. ಇದೊಂದು ನೋವು ನಿವಾರಕ ಪೋಷಕಾಂಶವಾಗಿದ್ದು ದೇಹದಲ್ಲಿ TRPV1 (transient receptor potential vanilloid type-1) ಎಂಬ ವ್ಯವಸ್ಥೆಗೆ ಚಾಲನೆ ನೀಡುತ್ತದೆ. ಈ ಮೂಲಕ ದೇಹದಲ್ಲಿ ನೋವಿಗೆ ಕಾರಣವಾಗಿದ್ದ ತೊಂದರೆಯನ್ನು ಸರಿಪಡಿಸಲು ಹಾಗೂ ಈ ಮೂಲಕ ನೋವನ್ನು ಇಲ್ಲವಾಗಿಸಲು ನೆರವಾಗುತ್ತದೆ.

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತದೆ

ಪೈಪರೈನ್ ಮತ್ತು ಕುರ್ಕುಮಿನ್ ಇವೆರಡೂ ಆಹಾರದ ಮೂಲಕ ಸೇವಿಸಬಹುದಾದ ಪಾಲಿಫೆನಾಲ್ ಗಳಾಗಿದ್ದು ಇವುಗಳ ಇರುವಿಕೆಯಿಂದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಅರಿಶಿನ ಮತ್ತು ಕಾಳುಮೆಣಸಿನಲ್ಲಿರುವ ಇತರ ಪೋಷಕಾಂಶಗಳು ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳ ಉತ್ಪತ್ತಿಗೆ ತಡೆಯೊಡ್ದುವ ಮೂಲಕ ಸ್ತನ ಕ್ಯಾನ್ಸರ್ ಎದುರಾಗುವ ಸಾಧ್ಯತೆಯಿಂದ ರಕ್ಷಣೆ ಒದಗಿಸುತ್ತವೆ.

ಸ್ಥೂಲದೇಹದಿಂದ ರಕ್ಷಿಸುತ್ತದೆ

ಸ್ಥೂಲದೇಹದಿಂದ ರಕ್ಷಿಸುತ್ತದೆ

ಅರಿಶಿನ ಮತ್ತು ಕಾಳುಮೆಣಸು ಜೊತೆಯಾದಾಗ ಇದರು ಒಟ್ಟು ಗುಣಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳನ್ನು ನಿಯಂತ್ರಿಸಿ ಸ್ಥೂಲಕಾಯ ಹಾಗೂ ಮಧುಮೇಹದಿಂದ ರಕ್ಷಣೆ ಒದಗಿಸುತ್ತದೆ. ಈ ಸಂಯೋಜನೆಯನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಹಾಗೂ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹ ಹಲವಾರು ಇತರ ಅನಾರೋಗ್ಯಗಳಿಗೆ ಮೂಲವಾಗಿದೆ. ಇದರಲ್ಲಿ ಪ್ರಮುಖವಾದುದೆಂದರೆ ರಕ್ತನಾಳಗಳು ಶಿಥಿಲಗೊಳ್ಳುವುದು. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಅರಿಶಿನ ಮತ್ತು ಕಾಳುಮೆಣಸಿನ ಸೇವನೆಯಿಂದ ಉತ್ಕರ್ಷಣಶೀಲ ಒತ್ತಡ (oxidative stress) ವನ್ನು ಕಡಿಮೆ ಮಾಡಬಹುದು. ಈ ಒತ್ತಡವೇ ರಕ್ತನಾಳಗಳ ಶಿಥಿಲತೆಗೆ ಕಾರಣವಾಗಿದೆ.

ಉರಿಯೂತದ ವಿರುದ್ದ ಹೋರಾಡುತ್ತದೆ

ಉರಿಯೂತದ ವಿರುದ್ದ ಹೋರಾಡುತ್ತದೆ

ಅರಿಶಿನ ಮತ್ತು ಕಾಳುಮೆಣಸಿನ ಸೇವನೆಯಿಂದ ಉರಿಯೂತದ ಪ್ರಭಾವದಿಂದ ಎದುರಾದ ಏರುಪೇರುಗಳನ್ನು ಸರಿಪಡಿಸಬಹುದು. ಉದಾಹರಣೆಗೆ ಸಂಧಿವಾತ. ಈ ಎರಡೂ ಸಾಮಾಗ್ರಿಗಳು ಉತ್ತಮ ಉರಿಯೂತ ನಿವಾರಕ ಗುಣ ಹೊಂದಿವೆ ಹಾಗೂ ಉರಿಯೂತದ ಪರಿಣಾಮವಾಗಿ ಎದುರಾಗಿದ್ದ ಹಲವಾರು ತೊಂದರೆಗಳನ್ನು ಗುಣಪಡಿಸುತ್ತದೆ.

ಯಕೃತ್ ನ ಕಾಯಿಲೆಯಿಂದ ರಕ್ಷಿಸುತ್ತದೆ

ಯಕೃತ್ ನ ಕಾಯಿಲೆಯಿಂದ ರಕ್ಷಿಸುತ್ತದೆ

ಅರಿಶಿನದಲ್ಲಿರುವ ಕುರ್ಕುಮಿನ್ ಅತ್ಯುತ್ತಮ ಯಕೃತ್ ನ ಸ್ವಚ್ಛಕಾರಕವಾಗಿದೆ. ನಮ್ಮ ದೇಹದ ರಕ್ತವನ್ನು ಸೋಸಿ ಕಲ್ಮಶಗಳನ್ನು ಹೊರಹಾಕುವುದು ಯಕೃತ್ ನ ಪ್ರಮುಖ ಕಾರ್ಯವಾಗಿದೆ. ಅರಿಶಿನ ಈ ಕಲ್ಮಶಗಳು ದೇಹದಲ್ಲಿ ಉಳಿಯದಂತೆ ನೋಡಿಕೊಳ್ಳುವ ಮೂಲಕ ಯಕೃತ್ ಅತ್ಯುತ್ತಮ ಆರೋಗ್ಯದಲ್ಲಿರಲು ನೆರವಾಗುತ್ತದೆ.

ಆಲ್ಜೀಮರ್ಸ್ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ

ಆಲ್ಜೀಮರ್ಸ್ ಕಾಯಿಲೆಯಿಂದ ರಕ್ಷಣೆ ಒದಗಿಸುತ್ತದೆ

ಆಲ್ಜೀಮರ್ಸ್ ಕಾಯಿಲೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಯಾಗಿದ್ದು ರೋಗಿಯ ನಿತ್ಯದ ಚಟುವಟಿಕೆಗಳನ್ನೇ ಸ್ಥಗಿತಗೊಳಿಸುತ್ತದೆ. ಈ ಕಾಯಿಲೆಗೂ ಉರಿಯೂತವೇ ಮೂಲ ಕಾರಣವಾಗಿದೆ. ಅರಿಶಿನದಲ್ಲಿರುವ ಉತ್ತಮ ಉರಿಯೂತ ನಿವಾರಕ ಗುಣ ಉರಿಯೂತವನ್ನು ತಗ್ಗಿಸಿ ಆಲ್ಜೀಮರ್ಸ್ ಕಾಯಿಲೆ ಆವರಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಕರುಳುಗಳ ಹುಣ್ಣುಗಳಾಗದಂತೆ ರಕ್ಷಿಸುತ್ತದೆ

ಕರುಳುಗಳ ಹುಣ್ಣುಗಳಾಗದಂತೆ ರಕ್ಷಿಸುತ್ತದೆ

ಅರಿಶಿನ ಮತ್ತು ಕಾಳುಮೆಣಸಿನ ಸೇವನೆಯಿಂದ ಕರುಳುಗಳಿಗೆ ಎದುರಾಗುವ gastric mucous damage (ಸ್ಟೆರಾಯ್ಡುಗಳಲ್ಲದ ಔಷಧಿಯ ಸೇವನೆಯ ಒಂದು ಸಾಮಾನ್ಯ ಅಡ್ಡಪರಿಣಾಮ) ಎಂಬ ರೋಗದಿಂದ ರಕ್ಷಣೆ ದೊರಕುತ್ತದೆ. ಈ ತೊಂದರೆ ಎದುರಾದರೆ ಕರುಳುಗಳ ಒಳಭಾಗದಲ್ಲಿ ಭಾರೀ ಉರಿಯ ಹುಣ್ಣುಗಳಾಗುತ್ತವೆ (peptic ulcers). ಅರಿಶಿನ ಕರುಳುಗಳ ಒಳಭಾಗದಲ್ಲಿ ಕೆಲವು ಬಗೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ತಡೆಯೊಡ್ಡುವ ಮೂಲಕ ಈ ಹುಣ್ಣುಗಳಾಗದಂತೆ ತಡೆಯುತ್ತದೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ....

English summary

10 Health Benefits Of Turmeric And Black Pepper

Turmeric is an ancient spice which has been used in ayurvedic medicine for ages. Turmeric has a compound called curcumin, which offers numerous health benefits. Black pepper, on the other hand, is used for medicinal purposes and offers great health benefits too. So, when turmeric and black pepper are combined together, it provides immense benefits. Turmeric contains anti-inflammatory, antiseptic, anti-fungal and antibacterial properties. Black pepper is derived from black peppercorns, which has its own set of health benefits.
X
Desktop Bottom Promotion