For Quick Alerts
ALLOW NOTIFICATIONS  
For Daily Alerts

ಟೊಮೆಟೊ ಹಣ್ಣಿನ ಉಪಯೋಗ ತಿಳಿದರೆ ಈಗಲೇ ತಿನೋಕ್ಕೆ ಶುರು ಮಾಡ್ತೀರ!

|

ಈ ಪುಟ್ಟದಾದ ಟೊಮೆಟೊದಲ್ಲಿ ಅಡಗಿರುವ ಗುಟ್ಟನ್ನು ರಟ್ಟು ಮಾಡಿ ಬಹಳಷ್ಟು ಪ್ರಯೋಜನಕಾರಿಯಾದ ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳೋಣವೇ? ಸೋಲೋನಮ್ ಲೈಕೊಪರ್ಸಿಕಮ್. ಇದೇನು ಟೊಮೆಟೋ ಬಗ್ಗೆ ತಿಳಿದುಕೊಳ್ಳೋಣ ಎಂದು ಇನ್ನೇನೋ ಹೇಳುತ್ತಿರುವಂತಿದೆ ಎಂದು ಯೋಚಿಸುತ್ತಿದ್ದೀರಾ ? ಇದು ಟೊಮೆಟೊವಿನ ವೈಜ್ಞಾನಿಕ ಹೆಸರು.

ವಿಶಿಷ್ಟ ರೀತಿಯ ಬಳ್ಳಿಯ ಸಸ್ಯವಾಗಿದೆ. ಪ್ರಾಸಂಗಿಕವಾಗಿ ಇದು ತರಕಾರಿ ಅಲ್ಲ, ಸಸ್ಯ ವಿಜ್ಞಾನ ದ ಪ್ರಕಾರ ಇದೊಂದು ರೀತಿಯ ಹಣ್ಣು. ಇದು ಬೆರ್ರಿಯಂತಹ ನಯವಾದ ಹಣ್ಣು. ಈ ಹಣ್ಣು ಅಂಡಾಶಯದಿಂದ ಬೆಳವಣಿಗೆಯಾಗುತ್ತದೆ ಮತ್ತು ಸಸ್ಯದ ಹೂವಿನಿಂದ ಬೀಜಗಳನ್ನು ಹೊಂದಿರುತ್ತದೆ. ಇದು ಮೂಲತಹ ಪಾಶ್ಚಿಮಾತ್ಯ ದೇಶ ಅಮೇರಿಕಾಕ್ಕೆ ಸೇರಿದ್ದು . ಆದರೆ ಇದನ್ನು ಮೆಕ್ಸಿಕನ್ನರು ಸಾಗುವಳಿ ಮಾಡಿದ ಹಣ್ಣಾಗಿ ಬಳಸಲಾರಂಭಿಸಿರು.

tomatoes

ಅಮೆರಿಕದ ಸ್ಪ್ಯಾನಿಷ್ ವಸಾಹತುಶಾಹಿ ನಂತರ ಟೊಮೆಟೊಗಳ ಕೃಷಿ ಹರಡಿತು. ಇಂದು ನಮಗೆ ದೊರಕುತ್ತಿರುವ ದೊಡ್ಡ ಕೆಂಪು ಬಣ್ಣದ ಟೊಮೇಟೊ ಗಳಿಗೆ ಹೋಲಿಸಿದರೆ, ಕೃಷಿ ಮಾಡದ ನಿಸರ್ಗ ಸಹಜ ಟೊಮೆಟೋ ಚಿಕ್ಕದಾಗಿದ್ದು ಹೆಚ್ಚು ಹಳದಿ ಬಣ್ಣದಿಂದ ಕೂಡಿತ್ತು.

ಪೋಷಕಾಂಶಗಳ ಸಂಗತಿ

ಟೊಮೆಟೊಗಳು 95% ನೀರಿನಿಂದ ಕೂಡಿರುತ್ತವೆ ! ಬೇಸಿಗೆಯ ದಾಹ ತಣಿಸಲು ಇದಕ್ಕಿಂತಲೂ ಉತ್ತಮ, ಆರೋಗ್ಯಪೂರ್ಣ, ಚೈತನ್ಯದಾಯಕವಾದ ಈ ಹಣ್ಣು ಬಿಟ್ಟರೆ ಇನ್ನೊಂದಿಲ್ಲ. ಇದಕ್ಕೆ ಕೆಲವು ತುಂಡು ಸೌತೆಕಾಯಿ ಸೇರಿಸಿ ಜ್ಯೂಸ್ ಮಾಡಿಕೊಂಡು ಕುಡಿದರೆ ಈ ಅತ್ಯುತ್ತಮ ಬೇಸಿಗೆ ಪಾನೀಯ ನಿಮ್ಮ ಆರೋಗ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಸಂತುಷ್ಟಗೊಳಿಸುವುದರಲ್ಲಿ ಸಂದೇಹವೇ ಇಲ್ಲ.

ಟೊಮೆಟೊದ ಉಳಿದ ಶೇಕಡಾ 5 ರಷ್ಟು ಭಾಗ ಕಾರ್ಬೋಹೈಡ್ರೇಟ್ ಗಳು, ಪ್ರೋಟೀನ್ ಮತ್ತು ಕೊಬ್ಬನ್ನು ಒಳಗೊಂಡಿರುತ್ತದೆ . ಇದು ಲಿಗ್ನಿನ್, ಸೆಲ್ಯುಲೋಸ್ ಮತ್ತು ಹೆಮಿಸೆಲ್ಲುಲೋಸ್ನಂತಹ 80% ಕರಗದ ನಾರುಗಳನ್ನು ಸಹ ಒಳಗೊಂಡಿದೆ. ಟೊಮೆಟೋಗಳು ಜೀವಸತ್ವಗಳು ಮತ್ತು ಖನಿಜಗಳಾದ ಫೋಲೇಟ್, ಪೊಟ್ಯಾಸಿಯಮ್, ವಿಟಮಿನ್ ಕೆ 1 ಮತ್ತು ವಿಟಮಿನ್ ಸಿ ನ ಉತ್ತಮ ಮೂಲವಾಗಿದೆ.

ಟೊಮೆಟೊಗಳಲ್ಲಿರುವ ಇತರ ಸಸ್ಯ ಸಂಯುಕ್ತಗಳು ಹೀಗಿವೆ:

• ಕ್ಲೋರೊಜೆನಿಕ್ ಆಸಿಡ್ - ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
• ನಾರ್ಸಿಜೆನಿನ್ - ಇದು ಇಲಿಗಳಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ.
• ಬೀಟಾ-ಕ್ಯಾರೋಟಿನ್ - ಇದು ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ.
• ಲೈಕೋಪೀನ್ - ಇದು ಟೊಮೆಟೊಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಟೊಮೆಟೊ ಎಷ್ಟು ಕೆಂಪಾಗಿರುತ್ತದೆ ಯೋ ಅಷ್ಟು ಹೆಚ್ಚು ಲೈಕೋಪೀನ್ ಹೊಂದಿರುತ್ತದೆ.

ಪ್ರಪಂಚದಾದ್ಯಂತ ಟೊಮೆಟೊ ಎಲ್ಲರ ಅಚ್ಚುಮೆಚ್ಚಿನ ಆಹಾರವಾಗಿದೆ. ಇದರಲ್ಲಿ ಅಂತಹ ವಿಶೇಷತೆಗಳೇನಿವೆ ಎನ್ನುತ್ತೀರಾ ?

ಮುಂದೆ ಓದಿ ನೋಡಿ.

1. ವಿರೋಧಿ ಕಾರ್ಸಿನೋಜೆನಿಕ್

ಟೊಮೆಟೊದಲ್ಲಿರುವ ಲಿಕೊಪೀನ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ವಿಶೇಷವಾಗಿ ಕೊಲೊನ್, ಸ್ತನಗಳು ಮತ್ತು ಶ್ವಾಸಕೋಶಗಳಲ್ಲಿ. ಆಂಟಿಆಕ್ಸಿಡೆಂಟ್ಗಳು ದೇಹದಲ್ಲಿ ಮತ್ತಷ್ಟು ಕಾರ್ಸಿನೋಜೆನಿಕ್ ಪ್ರತಿಕ್ರಿಯೆಗಳು ನಿಲ್ಲಿಸುತ್ತವೆ.

2. ಕಡಿಮೆ ಕೊಲೆಸ್ಟ್ರಾಲ್ ಮತ್ತು ಆರೋಗ್ಯಕರ ಹೃದಯ

ಟೊಮೆಟೊಗಳ ಬೀಜಗಳು ಕೊಲೆಸ್ಟರಾಲ್ ಅನ್ನು ಹೊಂದಿರುವುದಿಲ್ಲ. ಬದಲಾಗಿ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುವ ನಾರನ್ನು ಹೊಂದಿರುತ್ತವೆ. ಇದರಲ್ಲಿರುವ ಪೊಟ್ಯಾಶಿಯಂ ಯಾವುದೇ ಹೃದಯ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.

3. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ

ಟೊಮೆಟೊ ಬೀಜಗಳಲ್ಲಿ ಲಿಕೊಪೇನ್ ಮತ್ತು ಕ್ಲೋರೊಜೆನಿಕ್ ಆಸಿಡ್ ರಕ್ತದೊತ್ತಡದ ಮಟ್ಟವನ್ನು ಕಡಿಮೆಗೊಳಿಸಿ, ಅಧಿಕ ರಕ್ತದೊತ್ತಡವನ್ನು ತಡೆಗಟ್ಟುತ್ತವೆ.

4. ಉತ್ಕರ್ಷಣ ನಿರೋಧಕ ಗುಣಗಳು

ದೇಹದಲ್ಲಿನ ತಡೆಯಿಲ್ಲದೆ ಉತ್ಪಾದನೆಯಾಗುವ ರಾಡಿಕಲ್ ಉರಿಯೂತಕ್ಕೆ ಕಾರಣವಾಗಬಹುದು. ಇದು ಹಾಗೆಯೇ ಮುಂದುವರೆದಲ್ಲಿ ಎಥೆರೋಸ್ಕ್ಲೆರೋಸಿಸ್, ಆಸ್ಟಿಯೊಪೊರೋಸಿಸ್, ಆಲ್ಝೈಮರ್ನ ಕಾಯಿಲೆ ಮತ್ತು ಹೃದಯರಕ್ತನಾಳೀಯ ಕಾಯಿಲೆಗಳಿಗೆ ಕಾರಣವಾಗಬಹುದು. ಟೊಮೆಟೊ ಬೀಜಗಳಲ್ಲಿರುವ ಲಿಕೊಪೀನ್ ಮತ್ತು ಬೀಟಾ-ಕ್ಯಾರೊಟಿನ್ ಈ ನಿರ್ಬಾಧಿತ ರಾಡಿಕಲ್ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ಯಾವುದೇ ರೀತಿಯ ರೋಗವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

5. ರಕ್ತ ಹೆಪ್ಪುಗಟ್ಟುವಿಕೆ ತಡೆಗಟ್ಟುವಿಕೆ

ರಕ್ತದ ಹೆಪ್ಪುಗಟ್ಟುವಿಕೆಯಿಂದ ಉಂಟಾಗುವ ಹೃದಯ ಕಾಯಿಲೆಯಿಂದಾಗಿ ಅನೇಕ ಸಾವುಗಳು ಸಂಭವಿಸಿರುವ ವರದಿಗಳಿವೆ. ಟೊಮೆಟೊ ಈ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಟೊಮ್ಯಾಟೊ ಬೀಜಗಳು ಫ್ರಟ್ಲೋ ಎಂಬ ದಪ್ಪ ಲೋಳೆಯ ಪದರದಿಂದ ಸುತ್ತುವರಿದಿದೆ. ಲಿಕೊಪೀನ್ ಮತ್ತು ಫ್ರೂಟ್ಲೊವು ರಕ್ತದ ಯಾವುದೇ ಹೆಪ್ಪುಗಟ್ಟುವಿಕೆ ರಚನೆಯನ್ನು ತಡೆಗಟ್ಟಲು ಮತ್ತು ಅನಿರ್ಬಂಧಿಸುತ್ತದೆ.

6. ಜೀರ್ಣಕ್ರಿಯೆಯಲ್ಲೂ ಸಹಕಾರಿ

ಟೊಮೆಟೊಗಳಲ್ಲಿರುವ ನಾರು ಜೀರ್ಣಾಂಗದ ಸ್ನಾಯುಗಳ ಚಲನವಲನಗಳನ್ನು ಕ್ರಮಬದ್ಧಗೊಳಿಸುತ್ತದೆ. ಹೆಚ್ಚು ಜೀರ್ಣಕಾರಿ ರಸವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಈ ರಸಗಳು ಮತ್ತು ಸ್ನಾಯುಗಳ ಆರೋಗ್ಯಕರ ಚಲನೆಗಳು ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಿ, ಅತಿಸಾರ ಅಥವಾ ಮಲಬದ್ಧತೆಯ ಯಾವುದೇ ಸಂಭವವನ್ನು ತಡೆಯುತ್ತದೆ.

7. ಚರ್ಮದ ಆರೈಕೆ

ಟೊಮೆಟೊ ಚರ್ಮದ ಆರೋಗ್ಯಕ್ಕೆ ಸರ್ವಶ್ರೇಷ್ಠ. ಹಾಗೆಯೇ ತಿಂದರೂ ಸರಿ, ಚರ್ಮದ ಮೇಲೆ ಲೇಪಿಸಿ ಕೊಂಡರೂ ಸರಿ ಅದು ಒಳ್ಳೆಯ ಪರಿಣಾಮಗಳನ್ನು ಬೀರುವುದಂತೂ ಖಚಿತ. ಚರ್ಮವನ್ನು ಉಜ್ಜಿ ಸ್ವಚ್ಛ ಮಾಡಲು ಸ್ಕ್ರಬ್ ತರಹ ಬಳಸಿದರೆ, ಅದು ನಿಮಗೆ ಮೃದು ಚರ್ಮವನ್ನು ನೀಡುತ್ತದೆ, ಸತ್ತ ಕೋಶ ಗಳನ್ನೆಲ್ಲಾ ತೆಗೆದುಹಾಕುತ್ತದೆ. ಸೂರ್ಯನ ಬಿಸಿಲಿ ನಿಂದ ಕಂದಿದ ಚರ್ಮವನ್ನು ಉಪಶಮನಗೊಳಿಸಲು ಮೊಸರು ಜೊತೆ ಟೊಮೆಟೊವನ್ನು ಬಳಸಿದಲ್ಲಿ ಕಾಂತಿಯುತ ಚರ್ಮವನ್ನು ನಿಮ್ಮದಾಗಿಸಿಕೊಳ್ಳಬಹುದು. ಇದು ಅತ್ಯುತ್ತಮ ಶೈತ್ಯಕಾರಕವಾಗಿದ್ದು ನಿಮ್ಮ ಚರ್ಮವನ್ನು ತಂಪಾಗಿರಿಸಿ, ಆರ್ದ್ರತೆಯನ್ನು ಕಾಪಾಡುತ್ತದೆ. ಮೊಸರು ಸಹ ನಿಮ್ಮ ಚರ್ಮಕ್ಕೆ ಹೊಳಪನ್ನು ಕೊಡುತ್ತದೆ. ಬಿಸಿಲಿನಲ್ಲಿ ಅಡ್ಡಾಡಿ ಮನೆಗೆ ಬಂದ ಮೇಲೆ ನಿಮ್ಮ ಚರ್ಮವನ್ನು ಟೊಮೆಟೊ ತುಂಡಿನಿಂದ ತೊಳೆದರೆ ಚರ್ಮ ಕಂದಾಗುವುನ್ನು (ಸನ್ ಟ್ಯಾನ್) ತಪ್ಪಿಸಬಹುದು. ಟೊಮೆಟೊ ವಯಸ್ಸಾಗುವುದನ್ನು ವಿಳಂಬಿಸುತ್ತದೆ. ಇದು ಹೆಚ್ಚು ಆಮ್ಲಜನಕವನ್ನು ಹೀರಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಚರ್ಮವು ತಾರುಣ್ಯತೆಯನ್ನು ಕಾಪಾಡುವುದಲ್ಲದೆ, ತಾಜಾ ಹಾಗೂ ಉಲ್ಲಾಸಭರಿತವಾಗಿ ಕಾಣುವಂತೆ ಮಾಡುತ್ತದೆ.

8. ಕೂದಲಿನ ಸಂರಕ್ಷಣೆಗೂ ಪರಿಣಾಮಕಾರಿ

ತಲೆ ತುರಿಕೆ ಇದ್ದರೆ, ಹುಟ್ಟು ತುಂಬಿದ್ದರೆ, ಕಜ್ಜಿ ಗಳಾಗಿದ್ದರಾಗಲಿ, ನೆತ್ತಿಯ ಸೋರಿಯಾಸಿಸ್ ಮತ್ತು ಎಸ್ಜಿಮಾ ಚಿಕಿತ್ಸೆಗಳಿಗಾಗಲಿ ಟೊಮೆಟೊ ಅತ್ಯುತ್ತಮ ಪರಿಹಾರವಾಗಿದೆ. ಟೊಮೆಟೊಗಳಲ್ಲಿರುವ ವಿಟಮಿನ್ ಸಿ ತಲೆಹೊಟ್ಟು ಉತ್ಪಾದನೆಯಾಗದಂತೆ ಹೋರಾಡುತ್ತದೆ. ತಲೆಬುರುಡೆಯನ್ನು ತಲೆಹೊಟ್ಟಿನಿಂದ ಮುಕ್ತಗೊಳಿಸುತ್ತದೆ.

ಟೊಮೇಟೊ ತಲೆಬುರುಡೆಯ ಜೀವಕೋಶಗಳ ಸಹಜ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. 3-4 ಚಮಚ ನಿಂಬೆರಸವನ್ನು ಚೆನ್ನಾಗಿ ಹಣ್ಣಾದ 2-3 ಟೊಮೆಟೊಗಳಿಗೆ ಸೇರಿಸಿ ಪೇಸ್ಟ್ ತಯಾರಿಸಿ, ಅದನ್ನು ತಲೆಬುರುಡೆಗೆ ಹಚ್ಚಿಕೊಂಡರೆ ತಲೆಕೂದಲಿಗೆ ಹೊಳಪು ನೀಡುವ ಜೊತೆಗೆ ತಲೆಬುರುಡೆಯನ್ನು ಆರೋಗ್ಯವಾಗಿರಿಸುತ್ತದೆ. ಒಣ ಕೂದಲು ಚಿಕಿತ್ಸೆಯಲ್ಲೂ ಟೊಮ್ಯಾಟೊ ಸಹಾಯ ಮಾಡುತ್ತದೆ. ಟೊಮೆಟೊ ಪೇಸ್ಟ್ ಅನ್ನು ತೈಲದೊಂದಿಗೆ ತಲೆ ಕೂದಲಿಗೆ ಲೇಪಿಸಿಕೊಂಡರೆ ಕೂದಲಿಗೆ ಮಣಿಯು ವಿಕೆಯನ್ನು ಒದಗಿಸುತ್ತದೆ ಮತ್ತು ನಿಸ್ತೇಜವಾದ , ಶುಷ್ಕ ಕೂದಲಿಗೆ ಹೊಳಪನ್ನು ತುಂಬುತ್ತದೆ. ಕೂದಲಿಗೆ ಅನ್ವಯಿಸಬಹುದು. ಕೂದಲ ಗುಣಮಟ್ಟವನ್ನು ಸುಧಾರಿಸುವ ಈ ಪ್ರಕ್ರಿಯೆಯಲ್ಲಿ ಇದು ಶುಷ್ಕ ನೆತ್ತಿಗೆ ಉತ್ತಮ ಪ್ರಮಾಣದ ತೇವಾಂಶವನ್ನು ಒದಗಿಸುತ್ತದೆ. ಹೀಗಾಗಿ ಇದು ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿ ಕೆಲಸ ಮಾಡಿ ಕೂದಲನ್ನು ಆಕರ್ಷಕವಾಗಿರಿಸುತ್ತದೆ.

9. ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ

ಟೊಮೆಟೊಗಳಲ್ಲಿ ಯಥೇಚ್ಚವಾಗಿ ಕಂಡುಬರುವ ಬೀಟಾ-ಕ್ಯಾರೋಟಿನ್ನಿಂದ ಒದಗಿಸಲ್ಪಟ್ಟ ವಿಟಮಿನ್ ಎ, ಉತ್ತಮ ಉತ್ಕರ್ಷಣ ನಿರೋಧಕ ಕಣ್ಣಿನ ಕಾಯಿಲೆಗಳಿಗೆ ಚಿರಪರಿಚಿತ ಚಿಕಿತ್ಸೆಯಾಗಿದೆ. ರಾತ್ರಿಯ ಕುರುಡುತನ ಮತ್ತು ಮಕ್ಯುಲರ್ ಡಿಜೆನೇಶನ್ ತೊಂದರೆಗಳು ವಿಟಮಿನ್ ಎ ಕೊರತೆ ಮತ್ತು ಫ್ರೀ ರಾಡಿಕಲ್ಗಳಿಂದ ಉಂಟಾಗುತ್ತವೆ. ಟೊಮ್ಯಾಟೋಗಳ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಫ್ರೀ ರಾಡಿಕಲ್ಗಳನ್ನು ತೊಡೆದುಹಾಕುತ್ತವೆ ಮತ್ತು ಯಾವುದೇ ದೃಷ್ಟಿ-ಸಂಬಂಧಿತ ಕಾಯಿಲೆಗಳ ಅಪಾಯಗಳನ್ನು ಕಡಿಮೆಗೊಳಿಸುತ್ತವೆ.

10. ತೂಕ ಕಡಿಮೆ ಮಾಡುವಲ್ಲಿ ಸಹಕಾರಿ

ತೂಕ ಇಳಿಸಿಕೊಳ್ಳಲು ಹಾತೊರೆಯುತ್ತಿದ್ದೀರಾ? ತೂಕ ಕಮ್ಮಿಯಾಗದೇ ಹತಾಶರಾಗಿದ್ದೀರಾ? ನಿರಾಶರಾಗಬೇಡಿ. ನಿಮ್ಮ ನಿಯತ ಆಹಾರಕ್ಕೆ ಟೊಮೆಟೊಗಳನ್ನು ಸೇರಿಸಿ. ಅದು 95% ನೀರನ್ನು ಹೊಂದಿದ್ದು ಕ್ಯಾಲೋರಿಗಳು ಕಡಿಮೆ ಪ್ರಮಾಣದಲ್ಲಿರುತ್ತವೆ. ಒಂದು ಕಳಿತ ಟೊಮೆಟೊ 18-22 ಕ್ಯಾಲರಿಗಳನ್ನು (ಅವುಗಳ ಗಾತ್ರವನ್ನು ಅವಲಂಬಿಸಿ) ಹೊಂದಿರುತ್ತವೆ. ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿದ ಹಾಗೆ ಭಾಸವಾಗಿಸುವುದರ ಮೂಲಕ ಅನಗತ್ಯ ಬಯಕೆಗಳನ್ನು ತಡೆಗಟ್ಟುವಂತೆ ಮಾಡುತ್ತದೆ.ಇದರಿಂದ ಹಾಳುಮೂಳು ತಿನ್ನಬೇಕೆಂಬ ಹಂಬಲವೂ ತಪ್ಪುತ್ತದೆ. ಟೊಮೆಟೊಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುತ್ತದೆ ಮತ್ತು ಮನೆಯಲ್ಲೂ ಬೆಳೆಸಬಹುದು. 0.1% ಕ್ಕಿಂತ ಕಡಿಮೆ ಸಕ್ಕರೆ ಅಂಶ ಹೊಂದಿರುವ ಇದು ಅದ್ಭುತ ಹಣ್ಣಾಗಿದೆ. ಕೂದಲು, ಚರ್ಮ ಮತ್ತು ದೇಹಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿರುವುದರಿಂದ , ಇದನ್ನು ನೀವು ನಿಮ್ಮ ದೈನಂದಿನ ಆಹಾರದ ಒಂದು ಭಾಗವಾಗಿರಿಸಿಕೊಂಡರೆ ಒಳ್ಳೆಯದು.

ದೇಹಕ್ಕೇನೋ ಇದು ಒಳ್ಳೆಯ ಆಹಾರವೆಂಬುದು ನಿರ್ವಿವಾದ. ಆದರೆ ಚಿಂತೆಗೊಂದು ಆಹಾರ ಬೇಕಲ್ಲವೇ? "ಟೊಮೆಟೊವನ್ನು ಹಣ್ಣೆಂದು ವರ್ಗೀಕರಿಸಿದರೆ, ಕೆಚಪ್ ಅನ್ನು ತಾಂತ್ರಿಕವಾಗಿ 'ಸ್ಮೂದಿ'(ಒಂದು ಬಗೆಯ ಜನಪ್ರಿಯ ಪಾನೀಯ ) ಎನ್ನಬೇಕೇ ?"

ಈ ಲೇಖನವನ್ನೇನೋ ಓದಿದ್ದಾಯಿತು ಆದರೆ ಅನುಸರಿಸುವವರು ಯಾರು ಎಂದು ನಿರ್ಲಕ್ಷಿಸಬೇಡಿ. ಅಲ್ಲಗಳೆದಲ್ಲಿ, ಬಹಳಷ್ಟು ಪ್ರಯೋಜನಗಳಿಂದ ವಂಚಿತರಾಗುವುದು ನಾವೇ. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯದೆ, ಎಲ್ಲ ಕಾಲದಲ್ಲೂ ಲಭ್ಯವಿರುವ, ಸಾಮಾನ್ಯವಾಗಿ ಅಗ್ಗವಾಗಿಯೇ ದೊರೆಯುವ ಈ ಟೊಮೆಟೊವನ್ನು ತರತರಹದ ಪಾಕ ವಿಧಾನಗಳಲ್ಲಿ ಸೇರಿಸಿಕೊಳ್ಳಿ. ಸೌಂದರ್ಯವೇ ಆರೋಗ್ಯ ,ಆರೋಗ್ಯವೇ ಸೌಂದರ್ಯ. ಆರೋಗ್ಯ ಮತ್ತು ಸೌಂದರ್ಯ ಸಂತೋಷದ ಮೂಲಗಳು ಎಂದಾದ ಮೇಲೆ ಆರೋಗ್ಯ ಮತ್ತು ಸೌಂದರ್ಯವನ್ನು ನಿಮ್ಮದಾಗಿಸಿಕೊಂಡುವ ನಿಟ್ಟಿನಲ್ಲಿ, ಈ ಲೇಖನದಲ್ಲಿರುವ ಅಂಶಗಳನ್ನು ಅನುಸರಿಸಿ ಸದುಪಯೋಗ ಪಡೆದುಕೊಳ್ಳುತ್ತೀರಿ ಅಲ್ಲವೇ? ಹಾಗಾದರೆ, ಪ್ರಿಯ ಓದುಗರೆ ನೀವು ಈ ಪುಟವನ್ನು ಬುಕ್ ಮಾರ್ಕ್ ಮಾಡಿಟ್ಟುಕೊಳ್ಳುವುದನ್ನು ಮರೆಯುತ್ತಿದ್ದೀರಲ್ಲಾ!!!!!

English summary

10 Health Benefits Of Eating Tomatoes

Solanum lycopersicum. Sound big? Well, it's just the scientific name for tomatoes. The plant is a typical vine. And no, it's not a vegetable, it's botanically a fruit. It's is berry to be precise. The fruit develops from the ovary and contains the seeds from the flower of the plant. It roots back to western South America, but it started being used as a cultivated fruit by the Mexicans. The cultivation of tomatoes spread after the Spanish colonization of America. The wild varieties of tomatoes were smaller and more yellow compared to the big red ones you get today.
Story first published: Monday, July 2, 2018, 15:50 [IST]
X
Desktop Bottom Promotion