For Quick Alerts
ALLOW NOTIFICATIONS  
For Daily Alerts

ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಈ 10 ಆಹಾರಗಳನ್ನು ಸೇವಿಸದಿರಿ

By Divya Pandit
|

ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಜನರು ಹೆಚ್ಚಾಗಿ ಚರ್ಚಿಸುವುದಿಲ್ಲ. ಒಂದು ಬಗೆಯ ಮುಜುಗರವನ್ನು ವ್ಯಕ್ತಪಡಿಸುತ್ತಾರೆ. ಜೊತೆಗೆ ಅಂತಹ ಆರೋಗ್ಯ ಸಮಸ್ಯೆಯು ಸಾಮಾನ್ಯ ಆರೋಗ್ಯ ಸಮಸ್ಯೆಯಂತೆ ಪರಿಗಣಿಸುವುದಿಲ್ಲ. ತಾವು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಯ ಬಗ್ಗೆ ಹೇಗೆ ಚರ್ಚಿಸಬೇಕು ಎನ್ನುವ ಗೊಂದಲಕ್ಕೆ ಒಳಗಾಗುತ್ತಾರೆ.

ಅಂತಹ ಒಂದು ಮುಜುಗರವನ್ನು ಸೃಷ್ಟಿಸುವಂತಹ ಆರೋಗ್ಯ ಸಮಸ್ಯೆಗಳಲ್ಲಿ ಮಲಬದ್ಧತೆಯು ಒಂದು. ಈ ಆರೋಗ್ಯ ಸಮಸ್ಯೆಯು ಮುಖ್ಯವಾಗಿ ಜೀರ್ಣಾಂಗ ವ್ಯವಸ್ಥೆಯನ್ನು ಅವಲಂಭಿಸಿರುತ್ತದೆ. ಕರುಳಿನ ವಿರಳವಾದ ಚಲನೆಯಿಂದ ಮಲಬದ್ಧತೆಯನ್ನು ಅನುಭವಿಸುತ್ತಾರೆ ಎಂದು ಹೇಳಲಾಗುತ್ತದೆ. ಮಲಬದ್ಧತೆ ಉಂಟಾದಾಗ ಅನುಪಯುಕ್ತ ವಸ್ತುವು ಸ್ಟೂಲ್ ಮೂಲಕ ಹಾದುಹೋಗುವಾಗ ಸಾಕಷ್ಟು ನೋವನ್ನು ಅನುಭವಿಸಬೇಕಾಗುವುದು.

cause constipation in adults

ಕೆಲವು ಸಂಶೋಧನೆ ಹಾಗೂ ಅಂಕಿ ಅಂಶದ ಪ್ರಕಾರ ದೇಶದ ವಯಸ್ಕರಲ್ಲಿ ಅಂದರೆ ಪ್ರತಿಶತ 22ಜನರಲ್ಲಿ ಮಲಬದ್ಧತೆಯ ಸಮಸ್ಯೆ ಇರುತ್ತದೆ ಎಂದು ಹೇಳಲಾಗುತ್ತದೆ. ಈ ಆರೋಗ್ಯ ಸಮಸ್ಯೆಯು ಎಲ್ಲಾ ವಯಸ್ಸಿನ ಜನರಲ್ಲೂ ಉಂಟಾಗಬಹುದು. ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಶೀತ ಮತ್ತು ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳಲ್ಲಿ ಮಲಬದ್ಧತೆಯೂ ಒಂದು ಸಮಸ್ಯೆ ಎಂದು ಹೇಳಲಾಗುವುದು.

ಅನುಚಿತ ಆಹಾರ ಸೇವನೆ, ನಮ್ಮಲ್ಲಿರುವ ಕೆಲವು ಕೆಟ್ಟ ಹವ್ಯಾಸಗಳು, ಫೋಷಕಾಂಶದ ಕೊರತೆ, ಕಡಿಮೆ ಮಟ್ಟದ ನೀರು ಸೇವನೆಯಿಂದಾಗಿ ಮಲಬದ್ಧತೆ ಉಂಟಾಗುವುದು. ಬಹುತೇಕ ಸಂದರ್ಭದಲ್ಲಿ ನಾವು ಆರೋಗ್ಯಕ್ಕೆ ಪೂರಕವಾದ ಆಹಾರ ಸೇವಿಸುವ ಬದಲು ಮನಸ್ಸಿಗೆ ಇಷ್ಟವಾಗುವಂತಹ ಆಹಾರವನ್ನು ಸೇವಿಸುತ್ತೇವೆ. ಹಾಗಾಗಿ ಮಲಬದ್ಧತೆಯು ಉಂಟಾಗುವುದು.

ಮಲಬದ್ಧತೆಯಂತಹ ಸಮಸ್ಯೆಯಿಂದ ದೂರ ಸರಿಯಲು ಸುಲಭ ಉಪಾಯವೆಂದರೆ ಮಲಬದ್ಧತೆಗೆ ಕಾರಣವಾಗುವ ಆಹಾರ ಪದಾರ್ಥಗಳಿಂದ ದೂರ ಸರಿಯುವುದು. ಹಾಗಾದರೆ ಆ ಆಹಾರ ಪದಾರ್ಥಗಳು ಯಾವವು? ಎನ್ನುವುದುನ್ನು ನೀವು ತಿಳಿದುಕೊಳ್ಳಬೇಕು ಎಂದು ಬಯಸುತ್ತಿದ್ದರೆ ಬೋಲ್ಡ್ ಸ್ಕೈ ಈ ಮುಂದೆ 10 ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡಿದೆ. ಅವುಗಳನ್ನು ಸೇವಿಸದೆ ಆದಷ್ಟು ಆರೋಗ್ಯದಿಂದ ಇರಿ.

ಬಾಳೆ ಕಾಯಿ

ಮಲಬದ್ಧತೆಗೆ ಕಾರಣವಾಗುವ ತರಕಾರಿಗಳಲ್ಲಿ ಬಾಳೆ ಕಾಯಿಯೂ ಒಂದು. ಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಿಷ್ಟಗಳು ಇರುತ್ತವೆ. ಇದನ್ನು ಹೆಚ್ಚು ಸೇವಿಸುವುದರಿಂದ ದೇಹದಲ್ಲಿ ಪಿಷ್ಟದ ಪ್ರಮಾಣ ಹೆಚ್ಚಾಗುವುದು. ಇದು ಮಲವನ್ನು ಗಟ್ಟಿಗೊಳಿಸಿ, ಮಲಬದ್ಧತೆ ಉಂಟಾಗುವಂತೆ ಮಾಡುವುದು. ಹಾಗಾಗಿ ಬಾಳೆ ಹಣ್ಣು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದು ಉತ್ತಮ ಫೈಬರ್‍ನೊಂದಿಗೆ ನಿಯಮಿತವಾದ ಕರುಳಿನ ಚಲನೆಗೆ ಉತ್ತೇಜನ ನೀಡುತ್ತದೆ.

ಕೆಂಪು ಮಾಂಸ

ಕೆಂಪು ಮಾಸದಲ್ಲಿ ಹಂದಿ, ಗೋವು ಮತ್ತು ಕುರಿಯ ಮಾಂಸ ಸೇರಿಕೊಂಡಿರುತ್ತದೆ. ಇವುಗಳಲ್ಲಿ ಅಧಿಕ ಪ್ರಮಾಣದ ಕಬ್ಬಿಣಾಂಶ ಇರುತ್ತದೆ. ಇವುಗಳನ್ನು ಅಧಿಕವಾಗಿ ಸೇವಿಸಿದರೆ ದೇಹದಲ್ಲಿ ಕಬ್ಬಿಣಾಂಶ ಅಧಿಕವಾಗಿ ಮಲಬದ್ಧತೆ ಉಂಟಾಗುವುದು. ಇದರಲ್ಲಿ ಯಾವುದೇ ರೀತಿಯ ನಾರಿನಂಶ ಇರುವುದಿಲ್ಲ. ಹಾಗಾಗಿ ಕರುಳು ಇವುಗಳನ್ನು ಸೂಕ್ತ ರೀತಿಯಲ್ಲಿ ಹೊರಹಾಕಲು ಕಷ್ಟಪಡುವುದು. ಆದ್ದರಿಂದ ಈ ಮಾಂಸ ಸೇವಿಸುವಾಗ ಅಧಿಕ ಪ್ರಮಾಣದ ಹಣ್ಣು ಮತ್ತು ತರಕಾರಿಯನ್ನು ಸಹ ಸೇವಿಸಬೇಕು.

ಸಂಸ್ಕರಿಸಿದ ಹಿಟ್ಟು

ಸಂಸ್ಕರಿಸಿದ ಹಿಟ್ಟಿನಲ್ಲಿ ವಿಟಮಿನ್ ಬಿ, ಡೈಯೆಟರಿ ಫೈಬರ್ ಅಂಶಗಳನ್ನು ಬೇರ್ಪಡಿಸಲಾಗಿರುತ್ತದೆ. ನಾರಿನಂಶ ಇರದ ಹಿಟ್ಟನ್ನು ಸೇವಿಸಿದಾಗ ಜೀರ್ಣಕ್ರಿಯೆಗೆ ಕಿರಿಕಿರಿ ಉಂಟಾಗುವುದು. ಹಾಗಾಗಿ ಆದಷ್ಟು ನಾರಿನಂಶ ಇರುವ ಧಾನ್ಯಗಳನ್ನು ಮತ್ತು ಹಿಟ್ಟನ್ನು ಬಳಸುವುದರಿಂದ ಮಲಬದ್ಧತೆಯನ್ನು ತಡೆಯಬಹುದು.

ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಆಹಾರದಲ್ಲಿ ಸಂಸ್ಕರಿಸಿದ ಸಕ್ಕರೆಗಳಿರುತ್ತವೆ. ಇದು ಆರೋಗ್ಯದ ಮೇಲೆ ಕೆಟ್ಟಪರಿಣಾಮವನ್ನು ಬೀರುವುದು. ಫೈಬರ್ ಕೊರತೆ ಇರುವ ಸಂಸ್ಕರಿಸಿದ ಆಹಾರವು ಮಲಬದ್ಧತೆಯನ್ನು ಸೃಷ್ಟಿಸುತ್ತದೆ. ಇವುಗಳೊಂದಿಗೆ ಕೆಲವು ಹಣ್ಣುಗಳು ಹಾಗೂ ಮನೆಯಲ್ಲಿ ತಯಾರಿಸಿದ ಹಣ್ಣಿನ ಜಾಮ್‍ಗಳನ್ನು ಸೇರಿಸಿ ಸೇವಿಸಿ.

ಕಾಫಿ

ಕಾಫಿ ಮುಂಜಾನೆಯಿಂದ ನಮ್ಮ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುವ ಒಂದು ನೈಸರ್ಗಿಕ ಉತ್ತೇಜಕ ಎಂದು ಕರೆಯಲಾಗುತ್ತದೆ. ಆದರೆ ಈ ಕಾಫಿಯೇ ನಮ್ಮ ಮಲಬದ್ಧತೆಗೆ ಕಾರಣವಾಗುವುದು. ಕಾಫಿ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಹಾಗೂ ಮಲಬದ್ಧತೆಗೆ ಕಾರಣವಾಗುವುದು. ಹಾಗಾಗಿ ದಿನದಲ್ಲಿ ಹೆಚ್ಚುವರಿ ನೀರನ್ನು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಬಿಳಿ ಅಕ್ಕಿ

ಬಿಳಿ ಅಕ್ಕಿ ಸಂಸ್ಕರಿಸಿದ ಧಾನ್ಯಗಳಲ್ಲಿ ಒಂದಾಗಿದೆ. ಇದು ಮಲಬದ್ಧತೆಗೆ ಕಾರಣವಾಗುವುದು. ಇದರ ಸಂಸ್ಕರಣೆಯ ಸಮಯದಲ್ಲಿ ಧಾನ್ಯಗಳ ಹೊಟ್ಟು ಮತ್ತು ಜೀವಾಣುಗಳನ್ನು ತೆಗೆದುಹಾಕಲಾಗುತ್ತದೆ. ಹಾಗಾಗಿ ಮಿತವಾಗಿ ಬಿಳಿ ಅಕ್ಕಿಯ ಸೇವನೆ ಮಾಡಿದರೆ ಸಮಸ್ಯೆ ಉಂಟಾಗದು.

ಡೈರಿ ಉತ್ಪನ್ನಗಳು

ಹಸುವಿನ ಹಾಲು ಮತ್ತು ಚೀಸ್ ನಂತರ ಡೈರಿ ಉತ್ಪನ್ನಗಳು ಮಲಬದ್ಧತೆಗೆ ಕಾರಣವಾಗುವುದು. ಡೈರಿ ಉತ್ಪನ್ನಗಳಲ್ಲಿ ಇರುವ ಪ್ರೋಟೀನ್‍ಗಳು ಕರುಳಿನ ಚಲನೆಯನ್ನು ಸಂಪೂರ್ಣವಾಗಿ ನಿಧಾನಗೊಳಿಸುವುದು. ಇದು ಮಲಬದ್ಧತೆಗೆ ಕಾರಣವಾಗುವುದು. ಹಸುವಿನ ಹಾಲು ಮತ್ತು ಚೀಸ್ ಮಲಬದ್ಧತೆಯನ್ನು ಉಂಟುಮಾಡುತ್ತದೆ ಎಂದೆನಿಸಿದರೆ ಸಸ್ಯ ಹಾಗೂ ಕಾಯಿ ಆಧಾರಿತ ಹಾಲನ್ನು ಪರ್ಯಾಯವಾಗಿ ಬಳಸಿ. ಆಗ ಸಮಸ್ಯೆ ದೂರವಾಗುವುದು.

ಅತಿಹೆಚ್ಚು ಕೊಬ್ಬು ಹೊಂದಿರುವ ಆಹಾರಗಳು

ಅತಿಯಾದ ಕೊಬ್ಬಿನಂಶ ಹೊಂದಿರುವ ಆಹಾರ ಪದಾರ್ಥಗಳು ಸಹ ಮಲಬದ್ಧತೆಯನ್ನು ಉತ್ತೇಜಿಸುತ್ತವೆ. ಮೊಟ್ಟೆ, ಕೊಬ್ಬಿನ ಮೀನು, ಬೀಜಗಳು, ಹೆಚ್ಚುವರಿ ವರ್ಜಿನ್ ಎಣ್ಣೆಗಳು ಕೊಬ್ಬಿನ ಆಹಾರ ಪದಾರ್ಥಗಳಲ್ಲಿ ಬರುತ್ತವೆ. ಅಧಿಕ ಕೊಬ್ಬು ದೇಹದ ಶಕ್ತಿಯನ್ನು ಶೇಖರಿಸಿಡಲು ಸಹಾಯಮಾಡುತ್ತದೆ. ಆದರೆ ಮಲಬದ್ಧತೆಯನ್ನು ಉಂಟುಮಾಡುವುದು. ಹಾಗಾಗಿ ನಿತ್ಯದ ಆಹಾರ ಸೇವನೆಯಲ್ಲಿ ಕೊಬ್ಬಿನ ಆಹಾರವನ್ನು ಸಮತೋಲನದ ರೀತಿಯಲ್ಲಿ ಸೇವಿಸಿದರೆ ತೊಂದರೆ ಉಂಟಾಗದು.

ಮದ್ಯಪಾನ

ಅಧಿಕ ಪ್ರಮಾಣದ ಮದ್ಯಪಾನ ಮಾಡುವುದರಿಂದಲೂ ದೇಹವು ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಇದು ದೀರ್ಘಕಾಲದ ಮಲಬದ್ಧತೆಯನ್ನು ಉಂಟುಮಾಡಬಹುದು. ಆಹಾರವು ಸೂಕ್ತ ರೀತಿಯಲ್ಲಿ ಜೀರ್ಣಗೊಂಡು ಕರುಳಿನ ಮೂಲಕ ತ್ಯಾಜ್ಯವಾಗಿ ಹೊರ ಹೋಗಲು ಸಾಧ್ಯವಾಗದು. ಹಾಗಾಗಿ ಮದ್ಯ ಸೇವನೆಯ ನಿಯಂತ್ರಣ ಹಾಗೂ ಸೂಕ್ತ ಆಹಾರ ಸೇವನೆ ಮಾಡುವುದರ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದು.

English summary

10 Foods That Cause Constipation

The survey also showed that after common cold and cough, constipation is one of the most common health problems faced by the Indians. Food consumption can help in promoting growth and development, it can give a dietary satisfaction but can also result in side effects for some people. Constipation gives you a bloating feeling and you can feel your entire lower abdomen cramping and you feeling gassy. This utter discomfort can distract you from your entire day. You should know about these foods that can cause constipation.
Story first published: Saturday, April 7, 2018, 10:36 [IST]
X
Desktop Bottom Promotion