For Quick Alerts
ALLOW NOTIFICATIONS  
For Daily Alerts

ತಿಂಗಳಲ್ಲಿ ಒಂದೆರಡು ಬಾರಿ, ಒಂದು ಗ್ಲಾಸ್ ಬಿಯರ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು!

|

ಬೇಸಿಗೆ ಈಗಾಗಲೇ ಆಗಮಿಸಿ ಸೆಖೆ ಮತ್ತು ಬೆವರನ್ನು ಉಡುಗೊರೆಯಾಗಿ ನೀಡುತ್ತಿದೆ. ಬಿಯರ್ ಸೇವಿಸುವ ಎಲ್ಲರೂ ತಣ್ಣಗಿನ ಬಿಯರ್ ಬಾಟಲಿಯೊಂದನ್ನೂ ಈಗಾಗಲೇ ಚಪ್ಪರಿಸಿರಬಹುದು. ಬಿಯರ್ ದೇಹಕ್ಕೆ ತಂಪು ನೀಡುವ ಕಾರಣ ಬೇಸಿಗೆಯಲ್ಲಿ ಸೇವಿಸಲು ಉತ್ತಮವಾದ ಆಯ್ಕೆಯಾಗಿದೆ. ಯುವಜನತೆ ಅತಿ ಹೆಚ್ಚು ಮೆಚ್ಚುವ ಮದ್ಯಭರಿತ ಪಾನೀಯ ಬಿಯರ್ ಆಗಿದ್ದು ನೀರು ಮತ್ತು ಟೀ ಬಳಿಕ ಭಾರತದಲ್ಲಿ ಸೇವಿಸಲ್ಪಡುವ ಅತಿ ಹೆಚ್ಚಿನ ಪೇಯವಾಗಿದೆ.

ಬಾರ್ಲಿ ಧಾನ್ಯಗಳನ್ನು ಹುಳಿ ಬರಿಸಿ ಭಟ್ಟಿ ಇಳಿಸಿ ತಯಾರಿಸಲಾಗುತ್ತದೆ. ಬಾರ್ಲಿ ಅತ್ಯುತ್ತಮ ಪೌಷ್ಟಿಕ ಆಹಾರವಾಗಿದ್ದು ಇದರ ಆಹಾರದ ಅಂಶಗಳೆಲ್ಲವೂ ಬಿಯರ್ ನಲ್ಲಿ ಮೇಳೈಸುತ್ತದೆ. ಸಾಮಾನ್ಯವಾಗಿ ಬಿಯರ್ ಪ್ರಿಯರು ಕುರುಕು ತಿಂಡಿಗಳ ಜೊತೆ ಸೇವಿಸಲು ಇಷ್ಟಪಡುತ್ತಾರೆ. ಬಿಯರ್ ನಲ್ಲಿ ವೈನ್ ಗಿಂತಲೂ ಹೆಚ್ಚಿನ ಪ್ರಮಾಣದ ಪ್ರೋಟೀನ್, ವಿಟಮಿನ್ ಬಿ ಇರುತ್ತವೆ ಹಾಗೂ ವೈನ್ ನಷ್ಟೇ ಆಂಟಿ ಆಕ್ಸಿಡೆಂಟುಗಳಿರುತ್ತವೆ.

ಕೂದಲಿಗೆ ಮತ್ತು ತ್ವಚೆಗೆ ಬಿಯರ್! ಕೇಳಿ ಅಚ್ಚರಿಯಾಯಿತೇ?

ಬಿಯರ್ ನಲ್ಲಿ ಹೆಚ್ಚಿನ ಪ್ರಮಾಣದ ಖನಿಜಗಳಿವೆ. ಮೆಗ್ನೀಶಿಯಂ, ಸೆಲೆನಿಯಂ, ಪೊಟ್ಯಾಶಿಯಂ, ಗಂಧಕ ಹಾಗೂ ಬಯೋಟಿನ್ ಇರುತ್ತವೆ. ಇವು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸಿ ಆರೋಗ್ಯವನ್ನು ಹಲವು ಬಗೆಯಲ್ಲಿ ಉತ್ತಮಗಳಿಸುತ್ತದೆ. ಎಚ್ಚರಿಕೆ: ಬಿಯರ್ ಮದ್ಯವಾದ ಕಾರಣ ಇದರ ಪ್ರಮಾಣ ಮಿತವಾಗಿದ್ದರೆ ಮಾತ್ರವೇ ಇದರ ಪ್ರಯೋಜನ ಪಡೆಯಬಹುದು. ಈ ಪ್ರಮಾಣ ಹೆಚ್ಚಿದರೆ ಮಾತ್ರ ಆರೋಗ್ಯಕ್ಕೆ ಮಾರಕವಾಗಿದೆ. ಬನ್ನಿ, ಬಿಯರ್ ಸೇವನೆಯ ಹತ್ತು ಪ್ರಯೋಜನಗಳನ್ನು ನೋಡೋಣ...

ಕ್ಯಾನ್ಸರ್ ತಡೆಯುತ್ತದೆ

ಕ್ಯಾನ್ಸರ್ ತಡೆಯುತ್ತದೆ

ಬಿಯರ್ ತಯಾರಿಸುವಾಗ ಲಭಿಸುವ ಫ್ಲೇವನಾಯ್ಡುಗಳಲ್ಲಿ ಕ್ಯಾನ್ಸರ್ ತಡೆಗಟ್ಟುವ ಶಕ್ತಿಯಿದೆ. ಸ್ತನ ಹಾಗೂ ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತವೆ. ಬಿಯರ್ ನಲ್ಲಿ ಉತ್ತಮ ಪ್ರಮಾಣದ ಪಾಲಿಫೆನಾಲ್ ಗಳೂ ಇವೆ ಹಾಗೂ ಇವು ಸಹಾ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ರಕ್ತಹೀನತೆಯಿಂದ ರಕ್ಷಿಸುತ್ತದೆ

ರಕ್ತಹೀನತೆಯಿಂದ ರಕ್ಷಿಸುತ್ತದೆ

ಬಿಯರ್ ವಿಟಮಿನ್ B12 ಹಾಗೂ ಫೋಲಿಕ್ ಆಮ್ಲದಿಂದ ಸಮೃದ್ದವಾಗಿದೆ. ಇ ಪೋಷಕಾಂಶಗಳ ಕೊರತೆಯಿಂದ ರಕ್ತಹೀನತೆ ಎದುರಾಗುತ್ತದೆ. ವಿಟಮಿನ್ B12 ನ ಇರುವಿಕೆಯಿಂದ ದೇಹ ಹಲವಾರು ಬಗೆಯ ರೋಗಗಳಿಂದ ರಕ್ಷಣೆ ಪಡೆಯುತ್ತದೆ ಹಾಗೂ ಸಾಮಾನ್ಯ ಬೆಳವಣಿಗೆಗೂ ಇದು ಅಗತ್ಯವಾಗಿದೆ. ಮೆದುಳಿನ ಏಕಾಗ್ರತೆ ಹಾಗೂ ಉತ್ತಮ ಸ್ಮರಣಶಕ್ತಿಗೂ ಈ ಪೋಷಕಾಂಶ ನೆರವಾಗುತ್ತದೆ.

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ವೃದ್ಧಾಪ್ಯವನ್ನು ದೂರಾಗಿಸುತ್ತದೆ

ಬಿಯರ್ ಸೇವನೆಯಿಂದ ವೃದ್ಧಾಪ್ಯ ದೂರಾಗುತ್ತದೆ ಎಂದು ನಿಮಗೆ ಇದಕ್ಕೂ ಮೊದಲು ಗೊತ್ತಿತ್ತೇ? ಹೌದು, ಬಿಯರ್ ಸೇವನೆಯಿಂದ ವಿಟಮಿನ್ ಇ ನ ಸಾಮರ್ಥ್ಯ ಹೆಚ್ಚುತ್ತದೆ ಹಾಗೂ ಒಂದು ಬಗೆಯ ಆಂಟಿ ಆಕ್ಸಿಡೆಂಟ್ ತರಹ ಕೆಲಸ ಮಾಡುತ್ತದೆ. ವಿಟಮಿನ್ ಇ ಆರೋಗ್ಯಕರ ತ್ವಚೆಗೆ ಅಗತ್ಯವಾಗಿದೆ ಹಾಗೂ ಈ ಮೂಲಕ ವೃದ್ಧಾಪ್ಯವನ್ನು ತಡವಾಗಿಸುತ್ತದೆ.

ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ

ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸುತ್ತದೆ

ದೇಹ ಒಂದು ವೇಳೆ ನಿರ್ಜಲೀಕರಣಕ್ಕೆ ಒಳಗಾದರೆ ಮೂತ್ರಪಿಂಡಗಳು ಹಾಗೂ ಪಿತ್ತಕೋಶಗಳಲ್ಲಿ ಕಲ್ಲುಗಳಾಗುವ ಸಾಧ್ಯತೆ ಹೆಚ್ಚುತ್ತದೆ. ಬಿಯರ್ ಸೇವನೆಯಿಂದ ದೇಹಕ್ಕೆ ಉತ್ತಮ ಪ್ರಮಾಣದ ನೀರು ಲಭಿಸುವ ಕಾರಣ ದೇಹ ನಿರ್ಜಲೀಕರಣಕ್ಕೆ ಒಳಗಾಗುವ ಸಾಧ್ಯತೆ ಕಡಿಮೆಯಾಗಿ ಈ ತೊಂದರೆಗಳೂ ಇಲ್ಲವಾಗುತ್ತವೆ.

ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ

ಮೆದುಳಿನ ಆರೋಗ್ಯ ಹೆಚ್ಚಿಸುತ್ತದೆ

ವ್ಯಕ್ತಿಗಳ ವಯಸ್ಸು ಹೆಚ್ಚಿದಂತೆಲ್ಲಾ ಮೆದುಳಿನ ಕಾರ್ಯಕ್ಷಮತೆಯೂ ಕುಗ್ಗುತ್ತಾ ಬರುತ್ತದೆ. ಸ್ಮರಣಶಕ್ತಿ, ಏಕಾಗ್ರತೆ ಹಾಗೂ ಇತರ ಮೆದುಳಿನ ಸಂಬಂಧಿತ ಚಟುವಟಿಕೆಗಳಿಗೆ ಮೆದುಳಿನ ಸವೆತ ಹಿನ್ನಡೆ ನೀಡುತ್ತದೆ. ನಿಯಮಿತ ಬಿಯರ್ ಸೇವನೆಯಿಂದ ಮೆದುಳಿನ ಸವೆತ ನಿಧಾನವಾಗುತ್ತದೆ ಹಾಗೂ ಈ ಮೂಲಕ ಮೆದುಳಿನ ಚುರುಕುತನ ಕುಗ್ಗುವುದು ಹಾಗೂ ಆಲ್ಜೀಮರ್ಸ್ ಕಾಯಿಲೆ ಆವರಿಸುವ ಸಾಧ್ಯತೆಯೂ ಕಡಿಮೆಯಾಗುತ್ತದೆ.

ಆರೋಗ್ಯಕರ ಹೃದಯ

ಆರೋಗ್ಯಕರ ಹೃದಯ

ನಿಯಮಿತವಾಗಿ ಬಿಯರ್ ಕುಡಿಯುವುದರಿಂದ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆ ಮೂವತ್ತು ಶೇಖಡಾದಷ್ಟು ಕಡಿಮೆಯಾಗುತ್ತದೆ. ಅಲ್ಲದೇ ಬಿಯರ್ ನಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಪ್ಪಿಸುವ ಗುಣವಿದೆ. ಇದು ರಕ್ತನಾಳಗಳನ್ನು ಶುದ್ದವಾಗಿರಿಸಲು ನೆರವಾಗುತ್ತದೆ. ಆದ್ದರಿಂದ ಮಿತಪ್ರಮಾಣದ ಬಿಯರ್ ಸೇವನೆಯಿಂದ ರಕ್ತಪರಿಚಲನೆ ಸುಲಭವಾಗಿ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ.

ಮಧುಮೇಹದ ಸಾಧ್ಯತೆ ಕಡಿಮೆಯಾಗಿಸುತ್ತದೆ

ಮಧುಮೇಹದ ಸಾಧ್ಯತೆ ಕಡಿಮೆಯಾಗಿಸುತ್ತದೆ

ಮಿತಪ್ರಮಾಣದಲ್ಲಿ ಬಿಯರ್ ಸೇವಿಸುವುದರಿಂದ ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಅಧ್ಯಯನಗಳ ಮೂಲಕ ಕಂಡುಕೊಂಡಂತೆ ಮಿತಪ್ರಮಾಣದ ಬಿಯರ್ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣದ ಮಟ್ಟ ಕಡಿಮೆಗೊಳಿಸುವ ಮೂಲಕ ಟೈಪ್ ೨ ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ

ಕೆಲವು ಅಧ್ಯಯನಗಳ ಮೂಲಕ ಕಂಡುಕೊಂಡಂತೆ ಬಿಯರ್ ಸೇವಿಸುವ ವ್ಯಕ್ತಿಗಳ ರಕ್ತದೊತ್ತಡ ಸಾಮಾನ್ಯ ಮಟ್ಟದಲ್ಲಿಯೇ ಇರುತ್ತದೆ. ಅಂದರೆ ಬಿಯರ್ ಅಧಿಕ ರಕ್ತದೊತ್ತಡ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ನೀವು ಒಂದರೆಡು ಚಿಕ್ಕ ಲೋಟದಷ್ಟು ಬಿಯರ್ ಸೇವಿಸುವ ಮೂಲಕ ರಕ್ತದೊತ್ತಡದ ಮಟ್ಟ ತಹಬಂದಿಯಲ್ಲಿರುತ್ತದೆ.

ಹೃದಯಸ್ತಂಭನದ ಸಾಧ್ಯತೆಯಿಂದ ರಕ್ಷಿಸುತ್ತದೆ

ಹೃದಯಸ್ತಂಭನದ ಸಾಧ್ಯತೆಯಿಂದ ರಕ್ಷಿಸುತ್ತದೆ

ಸಂಶೋಧನೆಗಳ ಮೂಲಕ ಕಂಡುಕೊಂಡಂತೆ ಮಿತಪ್ರಮಾಣದಲ್ಲಿ ಬಿಯರ್ ಸೇವನೆಯಿಂದ ರಕ್ತ ಹೆಪ್ಪುಗಟ್ಟುವುದರಿಂದ ತಪ್ಪಿಸಿಕೊಂಡಂತಾಗುತ್ತದೆ. ಈ ಮೂಲಕ ರಕ್ತಪರಿಚಲನೆ ಸುಲಭವಾಗುತ್ತದೆ ಹಾಗೂ ಹೃದಯಸ್ತಂಭನ ಹಾಗೂ ಇತರ ಸಂಬಂಧಿತ ತೊಂದರೆಯಿಂದ ರಕ್ಷಣೆ ನೀಡುತ್ತದೆ.

ಮೂಳೆಗಳು ದೃಢಗೊಳ್ಳುತ್ತವೆ

ಮೂಳೆಗಳು ದೃಢಗೊಳ್ಳುತ್ತವೆ

ಮಿತಪ್ರಮಾಣದ ಬಿಯರ್ ಸೇವನೆಯಿಂದ ಮೂಳೆಗಳು ದೃಢಗೊಳ್ಳುತ್ತವೆ. ಇದಕ್ಕೆ ಬಿಯರ್ ನಲ್ಲಿರುವ ಸಿಲಿಕಾನ್ ಪ್ರಮಾಣವೇ ಕಾರಣ. ಸಿಲಿಕಾನ್ ಮೂಳೆಗಳ ಕಣಗಳನ್ನು ಬೆಳೆಸುವ ಜೀವಕೋಶಗಳಿಗೆ ಪ್ರಚೋದನೆ ನೀಡುತ್ತವೆ ಹಾಗೂ ಬಿಯನ್ ನ ಈಸ್ಟ್ರೋಜನ್ ಪರಿಣಾಮದ ಮೂಲಕ ವಿಶೇಷವಾಗಿ ಮಹಿಳೆಯರ ಮೂಳೆಗಳೂ ದೃಢಗೊಳ್ಳುತ್ತವೆ. ಒಂದು ವೇಳೆ ಈ ಮಾಹಿತಿ ನಿಮಗೆ ಉಪಯುಕ್ತವೆಂದು ಕಂಡುಬಂದರೆ ನಿಮ್ಮ ಸ್ನೇಹಿತರು ಮತ್ತು ಆಪ್ತರೊಂದಿಗೆ ಇದರ ಕೊಂಡಿಯನ್ನು ಹಂಚಿಕೊಳ್ಳುವ ಮೂಲಕ ಹೆಚ್ಚು ಜನರಿಗೆ ಪ್ರಯೋಜನವಾಗಲು ನೆರವಾಗಿ.

ಸೂಚನೆ

ಸೂಚನೆ

ಒಂದು ದಿನದಲ್ಲಿ ಎಷ್ಟು ಪ್ರಮಾಣದ ಬಿಯರ್ ಸುರಕ್ಷಿತವಾಗಿದೆ?

4% ರಿಂದ 6% ರಷ್ಟು ಮದ್ಯವಿರುವ (alcohol by volume (ABV) ಪೇಯವನ್ನು ಒಂದು ದಿನಕ್ಕೆ 350ಮಿಲೀ ನಷ್ಟು ಮಾತ್ರ ಕುಡಿಯುವುದು ಸುರಕ್ಷಿತವಾಗಿದೆ.

ಆಲ್ಕೋಹಾಲ್ ಪ್ರಮಾಣ ಹೆಚ್ಚಿದಷ್ಟೂ ಈ ಮಿತಿಯನ್ನೂ ಅದೇ ಪ್ರಕಾರ ಕಡಿಮೆ ಮಾಡಬೇಕಾಗುತ್ತದೆ.

English summary

10 Amazing Health Benefits Of Beer

Beer is the ultimate rescuer, as it helps to cool down the body during the summer time. Beer is the most popularly consumed alcoholic beverage among the youth and the third most popular drink preceded by tea and water. Beer is brewed from cereal grains which are responsible for its nutritional value. People usually drink beer by munching on snacks. Beer has high amounts of protein and vitamin B content than wine and the antioxidant content is equal to wine.
X
Desktop Bottom Promotion