For Quick Alerts
ALLOW NOTIFICATIONS  
For Daily Alerts

ಮುಂಜಾನೆ ಎದ್ದ ತಕ್ಷಣ ಒಂದು ಗ್ಲಾಸ್ ನೀರು ಕುಡಿದ್ರೆ, ಹತ್ತಾರು ಲಾಭಗಳಿವೆ

By Manu
|

ಒಂದು ಹಳೆಯ ನಾಣ್ಣುಡಿಯಲ್ಲಿ "ಜಲ ಈ ವಿಶ್ವದ ಆತ್ಮ"ಎಂದು ಹೇಳಲಾಗಿದೆ. ಇದು ಅಪ್ಪಟ ಸತ್ಯ. ನೀರಿಲ್ಲದೇ ಜೀವಜಾಲವೇ ಇಲ್ಲ. ನೀರಿನ ಇರುವಿಕೆಯೇ ಈ ಭೂಮಿಯನ್ನು ನಭೋಮಂಡಲದ ಏಕಮಾತ್ರ ಜೀವಗೋಳವಾಗಿಸಿದೆ. ಯಾವುದೇ ಜೀವಿಯ ಉಳಿವಿಗೂ ನೀರು ಅತ್ಯಗತ್ಯ. ಏಕಾಣು ಜೀವಿಯಿಂದ ತೊಡಗಿ ಮನುಷ್ಯರು, ವಿಶ್ವದ ದೊಡ್ಡ ನೀಲಿ ತಿಮಿಂಗಿಲದವರೆಗೂ ಪ್ರತಿ ಜೀವಿಗೂ ನೀರು ಅಗತ್ಯವಾಗಿದೆ. ಆಹಾರವಿಲ್ಲದೇ ಯಾವುದೇ ಜೀವಿ ಹೆಚ್ಚು ಹೊತ್ತು ಬದುಕಿರಬಹುದು, ಆದರೆ ನೀರಿಲ್ಲದೇ ಅಷ್ಟು ಹೊತ್ತು ಬದುಕಿರಲು ಸಾಧ್ಯವೇ ಇಲ್ಲ.

ನೀರನ್ನೇ ಕುಡಿಯದೇ ಬರೆಯ ಘನ ಆಹಾರವನ್ನೇ ತಿಂದರೇನಾಗುತ್ತದೆ? ಕೆಲವು ದಿನಗಳ ಬಳಿಕ ಸಾವು ಖಚಿತ. ಏಕೆಂದರೆ ನಮ್ಮ ಪ್ರಮುಖ ಅಂಗಗಳಿಗೆ ನೀರು ಅಗತ್ಯವಾಗಿದ್ದು ಕೆಲವೇ ಗಂಟೆಗಳಲ್ಲಿ ನಮ್ಮ ಸೂಕ್ಷ್ಮ ಅಂಗಗಳು ಒಂದೊಂದಾಗಿ ವಿಫಲಗೊಳ್ಳುತ್ತಾ ಹೋಗುತ್ತವೆ. ಯಾವುದೋ ಘಳಿಗೆಯಲ್ಲಿ ಪ್ರಮುಖ ಅಂಗವೊಂದು ಕುಸಿದು ಸಾವು ಆಗಮಿಸುತ್ತದೆ. ನಾವೆಲ್ಲಾ ತಿಳಿದಿರುವಂತೆ ನಮ್ಮ ದೇಹದ 78% ಭಾಗ ನೀರಿನಿಂದ ಕೂಡಿದೆ. ಈ ಅಂಶವೊಂದೇ ಸಾಕು ನೀರು ನಮ್ಮ ದೇಹಕ್ಕೆ ಎಷ್ಟು ಅಗತ್ಯವೆಂದು ತಿಳಿದುಕೊಳ್ಳಲು.

ಬುದ್ಧಿ ತಿಳಿದಾಗಿನಿಂದಲೂ ನಾವೆಲ್ಲಾ ನಮ್ಮ ಗುರುಹಿರಿಯರಿಂದ ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರುವಂತೆ ಸಲಹೆ ಪಡೆಯುತ್ತಾ ಬಂದಿದ್ದೇವೆ. ಸಾಮಾನ್ಯ ಮೈಕಟ್ಟಿನ ವ್ಯಕ್ತಿಗಳಿಗೆ ಪ್ರತಿದಿನ ಸುಮಾರು ಎರಡು ಲೀಟರ್ ನೀರು ಅಗತ್ಯವಿರುತ್ತದೆ. ಶೀತ, ನೆಗಡಿ ಮೊದಲಾದ ಕಾಯಿಲೆ ಆವರಿಸಿದ್ದರೆ ಅಥವಾ ವ್ಯಾಯಾಮದಿಂದ ದೇಹ ಬಳಲಿದ್ದರೆ ಈ ಪ್ರಮಾಣ ಮೂರು ಲೀಟರಿನಷ್ಟಾಗುತ್ತದೆ. ಒಂದು ವೇಳೆ ಅಗತ್ಯವಿದ್ದಷ್ಟು ನೀರು ಕುಡಿಯದೇ ಇದ್ದರೆ ದೇಹ ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ದೇಹದ ಹಲವು ಕಾಯಿಲೆಗಳಿಗೆ ನಿರ್ಜಲೀಕರಣ ಪ್ರಮುಖ ಕಾರಣವಾಗಿದೆ. ಈ ಕಾಯಿಲೆಗಳಲ್ಲಿ ಪ್ರಮುಖವಾದವು ಎಂದರೆ ತಲೆನೋವು, ಹೃದಯದ ತೊಂದರೆಗಳು, ಮೂತ್ರಪಿಂಡದಲ್ಲಿ ಕಲ್ಲು, ಚರ್ಮ ಒಣಗುವುದು ಇತ್ಯಾದಿ. ಆದ್ದರಿಂದ ಪ್ರತಿದಿನವೂ ಸಾಕಷ್ಟು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಅಗತ್ಯವಾಗಿದೆ.

ಉಪ್ಪು ಬೆರೆಸಿದ ಉಗುರು ಬೆಚ್ಚಗಿನ ನೀರು, ಆಯಸ್ಸು ನೂರು!

ಅದರಲ್ಲೂ ಮುಂಜಾನೆ ಮೊದಲು ನೀರು ಕುಡಿಯುವುದರಿಂದ ದೇಹವು ಹೈಡ್ರೇಟ್‍ನಿಂದ ದಿನವನ್ನು ಆರಂಭಿಸುತ್ತದೆ. ನಾವು ನಿದ್ದೆಯಿಂದ ಎದ್ದ ಸಮಯದಲ್ಲಿ ನಮ್ಮ ದೇಹದಲ್ಲಿ ನೀರಿನಂಶ ಕಡಿಮೆಯಾಗಿರುತ್ತದೆ. ಆ ಸಮಯದಲ್ಲಿ ನೀರನ್ನು ಕುಡಿದರೆ ದೇಹದ ಕೆಲಸ ಕಾರ್ಯಗಳು ಸುಲಭವಾಗಿ ಆಗುತ್ತವೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ದೇಹವು ಪುನರ್ಭರ್ತಿಯನ್ನು ಹೊಂದಿ ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ. ಅದರಲ್ಲೂ ಬೆಳಗ್ಗೆ ಎದ್ದು 60 ಸೆಕೆಂಡ್‍ಗಳಲ್ಲಿ ನೀರನ್ನು ಕುಡಿದರೆ ಅನೇಕ ಆರೋಗ್ಯ ಪ್ರಯೋಜನಗಳು ಉಂಟಾಗುವುದು. ಅವುಗಳ ವಿವರಣೆ ಈ ಕೆಳಗಿನಂತಿದೆ...

ಬೆಳಿಗೆದ್ದ ತಕ್ಷಣವೇ ನೀರು ಕುಡಿಯುವುದು

ಬೆಳಿಗೆದ್ದ ತಕ್ಷಣವೇ ನೀರು ಕುಡಿಯುವುದು

ಬೆಳಿಗ್ಗೆದ್ದು ಕುಳಿತ ತಕ್ಷಣವೇ, ಅಂದರೆ ಹಾಸಿಗೆಯನ್ನು ಬಿಟ್ಟು ಏಳುವ ಮುನ್ನವೇ ಒಂದು ಲೋಟ ನೀರನ್ನು ಕುಡಿದರೆ ಇನ್ನೂ ಉತ್ತಮ. ಏಕೆಂದರೆ ಈ ಮೂಲಕ ನಿದ್ರಾವಸ್ಥೆಯಲ್ಲಿ ಚಟುವಟಿಕೆ ರಹಿತವಾಗಿದ್ದ ಅಂಗಗಳೂ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಈ ನೀರು ಹೆಚ್ಚಿನ ಚೇತನ ನೀಡುವ ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ ಹಾಗೂ ಉಪಾಹಾರಕ್ಕೂ ಮುನ್ನವೇ ಶೌಚಕ್ರಿಯೆ ಸುಲಭವಾಗಿ ಜರುಗಲು ಸಾಧ್ಯವಾಗುತ್ತದೆ. ಅಲ್ಲದೇ ಬೆಳಗ್ಗಿನ ಉಪಾಹಾರ ಅಥವಾ ದಿನತ ಇತರ ಹೊತ್ತಿನಲ್ಲಿ ಊಟದ ಹೊರತು ಬೇರೆ ಹೊತ್ತಿನಲ್ಲಿ ಸೇವಿಸುವ ಲಘು ಉಪಾಹಾರಗಳನ್ನು ಸೇವಿಸುವಾಗ ನಡುನಡುವೆ ಕೊಂಚ ನೀರನ್ನು ಗುಟುಕರಿಸುವುದು ಉತ್ತಮ. ಇದರಿಂದ ಆಹಾರ ಸುಲಭವಾಗಿ ಜೀರ್ಣಗೊಳ್ಳಲು ನೆರವಾಗುತ್ತದೆ ಹಾಗೂ ಆಹಾರ ಗಂಟಲಲ್ಲಿ ಸಿಲುಕಿಕೊಳ್ಳುವುದರಿಂದ ತಪ್ಪಿಸಿದಂತಾಗುತ್ತದೆ.

ಜೀರ್ಣ ಕ್ರಿಯೆ ಸುಲಭವಾಗುವುದು

ಜೀರ್ಣ ಕ್ರಿಯೆ ಸುಲಭವಾಗುವುದು

ಮುಂಜಾನೆ ಒಂದು ದೊಡ್ಡ ಗ್ಲಾಸ್ ನೀರನ್ನು ಕುಡಿದರೆ ಸುಮಾರು 1.5 ಗಂಟೆಯೊಳಗೆ ಶೇ.24 ರಷ್ಟು ವೇಗದಲ್ಲಿ ಕೆಲಸ ನಿರ್ವಹಿಸುತ್ತದೆ. ಜೊತೆಗೆ ಆಹಾರವು ಬಹು ಬೇಗ ಜೀರ್ಣಗೊಳಿಸಲು ಸಹಾಯವಾಗುವುದು.

ತ್ಯಾಜ್ಯಗಳ ಹೊರಹಾಕುವಿಕೆಗೆ ಸುಲಭ

ತ್ಯಾಜ್ಯಗಳ ಹೊರಹಾಕುವಿಕೆಗೆ ಸುಲಭ

ಮೂತ್ರ ಪಿಂಡಗಳು ರಕ್ತದಲ್ಲಿ ಜೋಡಿಸುವ ವಿಷವನ್ನು ರಕ್ಯದ ಮೂಲಕ ಹೊರಹಾಕುತ್ತದೆ. ಜೊತೆಗೆ ದೇಹಕ್ಕೆ ಅನಗತ್ಯವಾದ ಕಲ್ಮಶಗಳನ್ನು ದೇಹದಿಂದ ಹೊರ ನೂಕಲು ನೀರು ಸಹಾಯ ಮಾಡುವುದು.

ಕಡಿಮೆ ತಿನ್ನಲು ಪ್ರಚೋದಿಸುತ್ತದೆ

ಕಡಿಮೆ ತಿನ್ನಲು ಪ್ರಚೋದಿಸುತ್ತದೆ

ಬಾಯಾರಿಕೆಯು ಹಸಿವೆಯನ್ನು ನೀಗಿಸುತ್ತದೆ. ಹಾಗೆಯೇ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರನ್ನು ಕುಡಿದರೆ ದೇಹವನ್ನು ಶುದ್ಧಿಕರಿಸಿ, ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸುವಂತೆ ಮಾಡುತ್ತದೆ.

ದೇಹದ ಪ್ರತಿರೋಧಕವನ್ನು ಹೆಚ್ಚಿಸಲು ಸಹಾಯ ಮಾಡುವುದು

ದೇಹದ ಪ್ರತಿರೋಧಕವನ್ನು ಹೆಚ್ಚಿಸಲು ಸಹಾಯ ಮಾಡುವುದು

ದೇಹದಲ್ಲಿ ನೀರಿನಂಶವು ಹೆಚ್ಚಿನ ಪ್ರಮಾಣದಲ್ಲಿರುವಂತೆ ಮಾಡುತ್ತದೆ. ದೇಹದಲ್ಲಿರುವ ದುದ್ಗರಸವನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ. ಇದು ನಿಮ್ಮ ಖಾಯಿಲೆಯ ವಿರುದ್ಧ ಹೋರಾಡಲು ಸಹಾಯ ಮಾಡುವುದು.

ತ್ವಚೆಯ ಆರೈಕೆಗೆ ಪೂರಕವಾಗಿರುತ್ತದೆ

ತ್ವಚೆಯ ಆರೈಕೆಗೆ ಪೂರಕವಾಗಿರುತ್ತದೆ

ನೀರಿನ ಸೇವನೆಯಿಂದ ದೇಹವು ಹೈಡ್ರೀಕರಣಗೊಂಡು, ತ್ವಚೆಯಲ್ಲಿ ತೇವಾಂಶಗಳಿರುವಂತೆ ಮಾಡುತ್ತದೆ. ಹಾಗಾಗಿ ಚರ್ಮವು ಹೆಚ್ಚು ತಾಜಾ ಹಾಗೂ ಆರೋಗ್ಯ ಪೂರ್ಣವಾಗಿರುತ್ತದೆ.

ಒಳಾಂಗಗಳಿಗೆ ಅನುಕೂಲವಾಗುವುದು

ಒಳಾಂಗಗಳಿಗೆ ಅನುಕೂಲವಾಗುವುದು

ದಿನವಿಡೀ ಸಾಕಷ್ಟು ನೀರನ್ನು ಕುಡಿಯುವುದರಿಂದ ಕರುಳಿನಲ್ಲಿ ಶೇಖರಣೆಗೊಳ್ಳುವ ತ್ಯಾಜ್ಯ ವಸ್ತುಗಳನ್ನು ಹೊರಹಾಕುವುದು. ಕೊಲೊನ್ ಹೆಚ್ಚುವರಿ ನೀರನ್ನು ಸೆಳೆಯುತ್ತದೆ. ಇದು ಅಡಚಣೆಗೆ ಕಾರಣವಾಗುತ್ತದೆ. ನೀವು ಚೆನ್ನಾಗಿ ಹೈಡ್ರೀಕರಿಸಿದಲ್ಲಿ ಕೊಲೋನ್ ಆದರ್ಶ ಪ್ರಾಯವಾಗಿ ಕೆಲಸ ನಿರ್ವಹಿಸುವುದು.

ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿಯಿರಿ!

ಬೆಳ್ಳಿ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿದ ನೀರು ಕುಡಿಯಿರಿ!

ಸಾಧ್ಯವಾದರೆ ನೀರನ್ನು ಬೆಳ್ಳಿಯ ಅಥವಾ ತಾಮ್ರದ ಪಾತ್ರೆಗಳಲ್ಲಿ ಸಂಗ್ರಹಿಸಿ. ತಾಮ್ರ ಮತ್ತು ಬೆಳ್ಳಿ ಅತ್ಯಲ್ಪ ಪ್ರಮಾಣದಲ್ಲಿ ನೀರಿನಲ್ಲಿ ಕರಗುವ ಗುಣ ಹೊಂದಿದ್ದು ಹೀಗೆ ಕರಗಿರುವ ನೀರು ಬ್ಯಾಕ್ಟೀರಿಯಾ ನಿವಾರಕ ಹಾಗೂ ಆಂಟಿ ಆಕ್ಸಿಡೆಂಟು ಗುಣ ಪಡೆದಿರುತ್ತದೆ. ಉತ್ತಮ ಪರಿಣಾಮಕ್ಕಾಗಿ ಕನಿಷ್ಠ ಹನ್ನೆರಡು ಗಂಟೆಗಳಾದರೂ ನೀರು ಈ ಪಾತ್ರೆಯಲ್ಲಿರಬೇಕು. ಈ ನೀರಿನ ನಿಯಮಿತ ಸೇವನೆಯಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳಿವೆ.

ಮಲವಿಸರ್ಜನೆ ಸುಲಭವಾಗುತ್ತದೆ

ಮಲವಿಸರ್ಜನೆ ಸುಲಭವಾಗುತ್ತದೆ

ಖಾಲಿಹೊಟ್ಟೆಯಲ್ಲಿ ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿಯುವುದರಿಂದ ಕರುಳುಗಳಿಗೆ ಹೆಚ್ಚಿನ ಪ್ರಚೋದನೆ ದೊರಕುತ್ತದೆ ಹಾಗೂ ಮಲವಿಸರ್ಜನೆಯ ಕೆಲಸ ಸುಲಭವಾಗಿ ಆಗುತ್ತದೆ. ಅಲ್ಲದೇ ದಿನದ ಮುಂದಿನ ಅವಧಿಗಳಲ್ಲಿ ಸೇವಿಸುವ ಆಹಾರವನ್ನು ಜೀರ್ಣೀಸಿಕೊಳ್ಳಲು ಕರುಳುಗಳನ್ನು ಸಿದ್ಧವಾಗಿಸಿಟ್ಟುಕೊಳ್ಳಲು ನೆರವಾಗುತ್ತದೆ. ಖಾಲಿಹೊಟ್ಟೆಯಲ್ಲಿ ಉಗುರುಬೆಚ್ಚನೆಯ ನೀರು ಕುಡಿಯುವ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಗಂಟಲ ನೋವು ಸಮಸ್ಯೆ ಇದ್ದವರು ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ

ಗಂಟಲ ನೋವು ಸಮಸ್ಯೆ ಇದ್ದವರು ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ

ಒಂದು ವೇಳೆ ಗಂಟಲ ಒಳಗೆ ಕಫವಾಗಿದ್ದು ನೋವು ಉಂಟಾಗಿದ್ದರೆ ಉಗುರುಬೆಚ್ಚನೆಯ ನೀರನ್ನು ಕುಡಿಯುವ ಮೂಲಕ ಈ ಕಫ ಕರಗಿ ನೋವು ಕಡಿಮೆಯಾಗಲು ನೆರವಾಗುತ್ತದೆ. ವಿಶೇಷವಾಗಿ ಗಂಟಲಲ್ಲಿ ಕಿರಿಕಿರಿ ಇದ್ದರೆ ಈ ನೀರು ಅದ್ಭುತವಾದ ಶಮನವನ್ನು ನೀಡುತ್ತದೆ. ಅಲ್ಲದೇ ರಾತ್ರಿಯ ನಿದ್ದೆಯ ಬಳಿಕ ಬೆಳಿಗ್ಗೆದ್ದಾಗ ಗಂಟಲ ಒಳಭಾಗ ಹೆಚ್ಚೂಕಡಿಮೆ ಒಣಗಿದ್ದು ನೀರು ಕುಡಿಯದೇ ಆಹಾರ ಸೇವಿಸಲು ಯತ್ನಿಸಿದರೆ ಇದು ಒಣಗಂಟಲಲ್ಲಿ ಇಳಿಯಲು ಕಷ್ಟವಾಗಿಸುತ್ತದೆ ಹಾಗೂ ಇದರ ಒತ್ತಡ ಗಂಟಲಿಗೆ ಇನ್ನಷ್ಟು ನೋವು ಉಂಟುಮಾಡಬಹುದು.

ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ

ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ

ಪ್ರತೀ ದಿನ ನಾವು ಆಹಾರ ಅಥವಾ ಉಸಿರಾಟದ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶಗಳನ್ನು ನೀರು ಹೊರಹಾಕುತ್ತದೆ. ನೀವು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ದೇಹದಲ್ಲಿನ ವಿಷಕಾರಿ ಅಂಶ ಹೊರಹೋಗುತ್ತದೆ.

ಕರುಳನ್ನು ಸ್ವಚ್ಛಗೊಳಿಸುತ್ತದೆ

ಕರುಳನ್ನು ಸ್ವಚ್ಛಗೊಳಿಸುತ್ತದೆ

ಕರುಳಿನಲ್ಲಿ ಸಂಗ್ರಹವಾಗಿರುವ ಜಿಡ್ಡನ್ನು ನೀರು ಸ್ವಚ್ಛಗೊಳಿಸುತ್ತದೆ. ಇದರಿಂದ ದೇಹವು ಪೌಷ್ಠಿಕಾಂಶಗಳನ್ನು ಬೇಗನೆ ಹೀರಿಕೊಳ್ಳಲು ನೆರವಾಗುತ್ತದೆ.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ನೀವು ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದರಿಂದ ನೀವು ವಿಷಕಾರಿ ಟ್ರಾನ್ಸ್ ಫ್ಯಾಟ್ಸ್ ನ್ನು ಹೊರಹಾಕಲು ನೆರವಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆಯ ಮಟ್ಟ ಹೆಚ್ಚುತ್ತದೆ.

English summary

you must drink a glass of water sixty seconds after you wake-up

Drinking water on an empty stomach helps refine the body. It also recharges the body and kick-starts all other body processes with vigour. In this article, we have listed some of the main reasons on why drinking water in the morning is good for health. So, continue reading to know why you must drink water on an empty stomach, at least 60 seconds after you wake up.
X
Desktop Bottom Promotion