Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಹೆಪಟೈಟಿಸ್ ಬಿ ಎಂಬ ಮೌನ ಹಂತಕ-ಇರಲಿ ಎಚ್ಚರ!
ದೇವರು ಸೃಷ್ಟಿಸಿರುವ ಮಾನವ ದೇಹದಲ್ಲಿರುವ ಪ್ರತಿಯೊಂದು ಅಂಗಾಂಗಗಳು ತುಂಬಾ ಸೂಕ್ಷ್ಮವೆನ್ನಬಹುದು. ಇದರ ಮರುಸೃಷ್ಟಿ ಅಸಾಧ್ಯವಾದರೂ ವೈದ್ಯಕೀಯ ಲೋಕದಲ್ಲಿ ಕೆಲವೊಂದು ಅಂಗಾಂಗಗಳನ್ನು ಮರುಸೃಷ್ಟಿ ಮಾಡಲು ಪ್ರಯತ್ನಿಸಲಾಗುತ್ತಾ ಇದೆ. ಕೆಲವು ಯಶಸ್ವಿಯಾದರೂ ಇನ್ನು ಕೆಲವು ಪ್ರಯತ್ನದ ಮಟ್ಟದಲ್ಲಿಯೇ ಇದೆ.
ದೇಹದಲ್ಲಿ ನಾವು ಹುಟ್ಟಿದಾಗಿನಿಂದ ಸಾಯುವ ತನಕ ವಿಶ್ರಾಂತಿಯಿಲ್ಲದ ಬಡಿದುಕೊಳ್ಳುವ ಹೃದಯ, ಕೋಟ್ಯಂತರ ಸಂವೇದನೆಗಳನ್ನು ಅರ್ಥಮಾಡಿಕೊಂಡು ದೇಹವನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಮೆದುಳು ದೇಹದ ಅತೀ ಸೂಕ್ಷ್ಮ ಅಂಗಾಂಗಗಳು. ಅದೇ ರೀತಿ ಯಕೃತ್ ಕೂಡ ಪ್ರಮುಖ ಭಾಗವಾಗಿದೆ.
ಯಕೃತ್‌ನ ಆರೋಗ್ಯ ಚೆನ್ನಾಗಿದ್ದರೆ ದೇಹವು ಆರೋಗ್ಯವಾಗಿರುವುದು. ಯಕೃತ್ ರಕ್ತದಲ್ಲಿರುವ ಸಕ್ಕರೆ, ಪ್ರೋಟೀನ್ ಮತ್ತು ಕೊಬ್ಬನ್ನು ನಿಯಂತ್ರಿಸಿ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ಇದು ಸ್ರವಿಸುವಂತಹ ಬಿಲಿರುಬಿನ್ ಕೆಂಪುರಕ್ತದ ಕಣಗಳನ್ನು ವಿಭಜಿಸುವುದು. ಕರುಳು ಹೀರಿಕೊಳ್ಳುವಂತಹ ಕೆಲವೊಂದು ಪೋಷಕಾಂಶಗಳನ್ನು ಯಕೃತ್ ಸಂಸ್ಕರಿಸುತ್ತದೆ ಮತ್ತು ದೇಹವು ಅದನ್ನು ಬಳಸಿಕೊಳ್ಳುತ್ತದೆ. ರಕ್ತ ಹೆಪ್ಪುಗಟ್ಟುವಂತಹ ಅಂಶವೊಂದನ್ನು ಬಿಡುಗಡೆ ಮಾಡುತ್ತದೆ. ಯಕೃತ್ ನ ಆರೋಗ್ಯ ಸರಿಯಾಗಿಲ್ಲದೆ ಇದ್ದರೆ ಹಲವಾರು ರೀತಿಯ ಅನಾರೋಗ್ಯಗಳು ಕಾಣಿಸಿಕೊಳ್ಳಬಹುದು.
ಇಂತಹ ರೋಗಗಳಲ್ಲಿ ಪ್ರಮುಖವಾಗಿ ಹೆಪಟೈಟಿಸ್ ಬಿ ತುಂಬಾ ಅಪಾಯಕಾರಿ ಕಾಯಿಲೆ. ಹೆಪಟೈಟಿಸ್ ಬಿ ಯ ವೈರಸ್ ನೇರವಾಗಿ ಯಕೃತ್ ಮೇಲೆ ದಾಳಿ ಮಾಡಬಹುದು. ಇದು ಯಕೃತ್‌ನಲ್ಲಿ ಉರಿಯೂತ ಉಂಟು ಮಾಡಿ ಸಮಸ್ಯೆ ಸೃಷ್ಟಿಸುವುದು. ಯಕೃತ್ ನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ ಮತ್ತು ಹೆಪಟೈಟಿಸ್ ಬಿ ಯನ್ನು ತಡೆಯುವುದು ಹೇಗೆ ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಆರೋಗ್ಯಕರ, ನಾರಿನಾಂಶ ಹೆಚ್ಚಿರುವ ಆಹಾರ
ಯಕೃತ್‌ನ ಆರೋಗ್ಯ ಕಾಪಾಡುವ ಪ್ರಮುಖ ವಿಧಾನವೆಂದರೆ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು. ಅತಿಯಾದ ತೂಕವು ಯಕೃತ್ ನ ಮೇಲೆ ಒತ್ತಡ ಹಾಕುವುದು. ಅತಿಯಾದ ತೂಕವೆಂದರೆ ಅತಿಯಾದ ಕೊಬ್ಬು ಎಂದರ್ಥ. ಇದರಿಂದ ಸಿರೋಸಿಸ್ ನಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಆರೋಗ್ಯಕರ, ನಾರಿನಾಂಶ ಅಧಿಕವಾಗಿರುವಂತಹ ಆಹಾರ ಸೇವಿಸುವುದು ಮತ್ತು ದೇಹದ ತೂಕ ನಿಯಂತ್ರಣದಲ್ಲಿಡುವುದು ಯಕೃತ್ ನ ಆರೋಗ್ಯಕ್ಕೆ ತುಂಬಾ ಸಹಕಾರಿ.

ಆಲ್ಕೋಹಾಲ್ ಸೇವನೆ ಕಡಿಮೆಗೊಳಿಸುವುದು
ಆಲ್ಕೋಹಾಲ್ ಸೇವನೆ ಮಾಡುವುದರಿಂದ ಅದು ನೇರವಾಗಿ ಯಕೃತ್ ನ ಮೇಲೆ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಯಕೃತ್ ನ ಕೋಶಗಳಿಗೆ ಹಾನಿಗೊಳಿಸಿ ಅದು ಸರಿಯಾಗಿ ಕಾರ್ಯನಿರ್ವಹಿಸದಂತೆ ಮಾಡುವುದು. ಈ ಸಮಯದಲ್ಲಿ ಯಕೃತ್ ಸಂಪೂರ್ಣವಾಗಿ ಕೆಟ್ಟು ಹೋಗಿ ಯಕೃತ್ ನ ಕಸಿ ಅಂತಿಮ ದಾರಿಯಾಗಬಹುದು. ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿದರೆ ಅದರಿಂದ ಯಕೃತ್ ನ ಆರೋಗ್ಯ ಒಳ್ಳೆಯದಾಗಿ ಹೆಪಟೈಟಿಸ್ ಬಿಯನ್ನು ತಡೆಯಬಹುದು.

ಧೂಮಪಾನ ತ್ಯಜಿಸಿ
ಧೂಮಪಾನದಿಂದ ಶ್ವಾಸಕೋಶ ಮತ್ತು ದೇಹದ ಪ್ರತಿರೋಧಕ ಶಕ್ತಿಯು ಕುಂದುವುದು. ಇದರಿಂದ ಯಾವುದೇ ಸೋಂಕು ದೇಹವನ್ನು ಬೇಗನೆ ಕಾಡಬಹುದು. ಪ್ರತಿರೋಧಕ ಶಕ್ತಿಯು ತುಂಬಾ ದುರ್ಬಲವಾಗಿದ್ದರೆ ದೇಹವು ಯಾವುದೇ ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಂಡಿರುತ್ತದೆ. ಯಕೃತ್ ನ ಆರೋಗ್ಯ ಮತ್ತು ಹೆಪಟೈಟಿಸ್ ಬಿ ಬರದಂತೆ ತಡೆಯಲು ಧೂಮಪಾನ ತ್ಯಜಿಸಿ.

ನಿಯಮಿತ ವ್ಯಾಯಾಮ
ಆರೋಗ್ಯಕರ ಆಹಾರದೊಂದಿಗೆ ನಿಯಮಿತವಾಗಿ ವ್ಯಾಯಾಮ ಮಾಡಿದರೆ ಯಕೃತ್ ನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವ್ಯಾಯಾಮ ಮಾಡಿದರೆ ಅತಿಯಾಗಿ ತೂಕ ಹೆಚ್ಚಿಸಿಕೊಳ್ಳುವುದನ್ನು ತಡೆಯಬಹುದು. ಇದರಿಂದ ಯಕೃತ್ ಆರೋಗ್ಯವಾಗಿರುವುದು.

ಅತಿಯಾದ ಔಷಧಿ ಅಥವಾ ಸ್ವ ಔಷಧಿ ತೆಗೆದುಕೊಳ್ಳಬೇಡಿ
ಇದು ತುಂಬಾ ಅಪಾಯಕಾರಿಯೆಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಅನಾರೋಗ್ಯ ಕಾಡಿದಾಗ ಎಷ್ಟು ಮಟ್ಟದ ಔಷಧಿ ಬೇಕೆಂದು ನಮಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ವೈದ್ಯರನ್ನು ಭೇಟಿಯಾಗಿ ಅವರಿಂದ ಚಿಕಿತ್ಸೆ ಪಡೆಯುವುದು ಸೂಕ್ತ. ಹೆಚ್ಚಿನ ನೋವು ನಿವಾರಕ ಔಷಧಿಗಳಲ್ಲಿ ರಕ್ತವನ್ನು ತೆಳುವಾಗಿಸುವ ಅಂಶವಿದೆ. ಇದನ್ನು ಅತಿಯಾಗಿ ಸೇವಿಸಿದರೆ ರಕ್ತವು ತೆಳುವಾಗಿ ಅಧಿಕ ರಕ್ತದೊತ್ತಡ ಉಂಟಾಗಬಹುದು ಮತ್ತು ಹೆಚ್ಚು ರಕ್ತ ಸ್ರವಿಸಬಹುದು.



Click it and Unblock the Notifications
