ವಿಶ್ವ ಏಡ್ಸ್ ದಿನಾಚರಣೆ: ಇದೇ ನೋಡಿ ಹೆಚ್‌ಐವಿ ರೋಗದ ಲಕ್ಷಣಗಳು

Posted By: Deepu
Subscribe to Boldsky

ಸಾಮಾನ್ಯವಾಗಿ ಇದುವರೆಗೆ ವಾಸಿಯಾಗದ ಹಾಗೂ ಔಷಧಿಯೇ ಇಲ್ಲದ ರೋಗವೆಂದರೆ ಏಡ್ಸ್ ಎಂದು ಹೇಳಲಾಗುತ್ತದೆ. ಇಂದು ಅದೆಷ್ಟೋ ಜನರಲ್ಲಿ ಈ ರೋಗ ಮನೆಮಾಡಿದೆ. ಆದರೆ ಇದು "ಎಚ್ ಐವಿ ಪಾಸಿಟೀವ್" ಲಕ್ಷಣ ಎಂಬುದೇ ಗೊತ್ತಿಲ್ಲದೆ ರೋಗದಿಂದ ಬಳಲುತ್ತಿರುವ ಹಲವರು ನಮ್ಮನಡುವಿದ್ದಾರೆ. ಯಾವುದೇ ಸಂದರ್ಭದಲ್ಲಿ ಅನುಮಾನಗಳು ಬಂದರೆ ಅಥವಾ ವೈದ್ಯರು ಹೇಳಿದರೆ ಎಚ್ ಐವಿ ತಪಾಸಣೆ ಮಾಡುವುದು ಅತೀ ಅಗತ್ಯ.ಈ ರೋಗದ ಸಾಮಾನ್ಯ ಲಕ್ಷಣಗಳನ್ನು ಇಲ್ಲಿ ಹೇಳಲಾಗಿದೆ.

ಏಡ್ಸ್ (ಪ್ರತಿರಕ್ಷಣ ಕೊರತೆಯ ರೋಗಲಕ್ಷಣ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೊಮ್ ನ ಸ್ವಾಧೀನ) ಎಚ್ಐವಿ (ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್) ಎಂಬ ವೈರಸ್ ನಿಂದ ಉಂಟಾಗುವ ಒಂದು ರೋಗ. ಇದರಿಂದ ಜನರಲ್ಲಿ ಅನಾರೋಗ್ಯದ ಲಕ್ಷಣಗಳು ಉಂಟಾಗಿ ಸೋಂಕುಗಳಿಂದ ಜನರು ದುರ್ಬಲರಾಗುತ್ತಾರೆ. ಹಾಗೂ ಅವರಲ್ಲಿ ರೋಗಗಳಿಗೆ ಪ್ರತಿರಕ್ಷಣ ಮಾಡುವ ವ್ಯವಸ್ಥೆಯೇ ಬದಲಾಗುತ್ತದೆ. ಇದರಿಂದ ಕಾಯಿಲೆಯು ಮುಂದುವರಿಯುತ್ತದೆ.

ಎಚ್ಐವಿ ಸೋಂಕಿತ ವ್ಯಕ್ತಿಯ (ವೀರ್ಯ ಮತ್ತು ಯೋನಿ ದ್ರವ ಪದಾರ್ಥಗಳು, ರಕ್ತ ಮತ್ತು ಎದೆ ಹಾಲು) ದೇಹದ ದ್ರವಗಳಲ್ಲಿ ಕಂಡುಬರುತ್ತದೆ. ಈ ವೈರಸ್ ಒಂದು ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ರಕ್ತ ಅಥವಾ ಲೈಂಗಿಕ ಸಂಪರ್ಕದಿಂದಾಗಿ ಹರಡುತ್ತದೆ. ಜೊತೆಗೆ, ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ, ಮತ್ತು ಸ್ತನ್ಯಪಾನ ಮಾಡುವುದರಿಂದ ಆಕೆಯ ಮಗುವಿಗೆ ಎಚ್ಐವಿ ಉಂಟಾಗುತ್ತದೆ. ಎಚ್ಐವಿ ಸೋಂಕು, ಯೋನಿ, ಮುಖ ಮೈಥುನ (oral sex) , ಗುದ ಸಂಭೋಗ (anal sex), ರಕ್ತ, ಮತ್ತು ಸೂಜಿಗಳಿಂದ ಹೀಗೆ ಅನೇಕ ರೀತಿಯಲ್ಲಿ ಹರಡಬಹುದಾಗಿದೆ... 

ಹೆಚ್ ಐ ವಿ ವೈರಸ್ಸುಗಳಲ್ಲಿ ಬಹಳ ವಿಧಗಳಿವೆ

ಹೆಚ್ ಐ ವಿ ವೈರಸ್ಸುಗಳಲ್ಲಿ ಬಹಳ ವಿಧಗಳಿವೆ

ಆದರೆ ಇವುಗಳ ಕಾರ್ಯಾಚರಣೆಯನ್ನು ಅನುಸರಿಸಿ ಸ್ಥೂಲವಾಗಿ ಎರಡು ವಿಭಾಗಗಳಾಗಿ ವಿಂಗಡಿಸಿ ಎಲ್ಲವನ್ನೂ ಉಪವಿಭಾಗಗಳಲ್ಲಿ ಹಂಚಲಾಗಿದೆ.

ಪ್ರಮುಖವಾದ ಎರಡು ಗುಂಪುಗಳೆಂದರೆ

ಪ್ರಮುಖವಾದ ಎರಡು ಗುಂಪುಗಳೆಂದರೆ

HIV-1: ಅತಿ ಸಾಮಾನ್ಯವಾಗಿ ಕಂಡುಬರುವ ವೈರಸ್ಸು

HIV-2: ಪಶ್ಚಿಮ ಆಫ್ರಿಕಾದಲ್ಲಿ ಅತಿ ಹೆಚ್ಚಾಗಿ ಮತ್ತು ಅಪರೂಪದಲ್ಲಿ ಭಾರತ ಮತ್ತು ಯೂರೋಪ್ ನಲ್ಲಿ ಕಂಡುಬರುವ ವೈರಸ್ಸು.

ಈ ವೈರಸ್ಸಿಗೆ ಇದುವರೆಗೆ ಸಮರ್ಥವಾದ ಮದ್ದನ್ನು ಕಂಡುಹಿಡಿಯಲಾಗಿಲ್ಲ!

ಈ ವೈರಸ್ಸಿಗೆ ಇದುವರೆಗೆ ಸಮರ್ಥವಾದ ಮದ್ದನ್ನು ಕಂಡುಹಿಡಿಯಲಾಗಿಲ್ಲ!

ಈ ವೈರಸ್ಸಿಗೆ ಇದುವರೆಗೆ ಸಮರ್ಥವಾದ ಮದ್ದನ್ನು ಕಂಡುಹಿಡಿಯಲಾಗಿಲ್ಲ. ಆದರೆ ಇದರ ಪ್ರಭಾವವನ್ನು ಕಡಿಮೆಗೊಳಿಸಿ ಇನ್ನಷ್ಟು ವೃದ್ದಿಯಾಗದಂತೆ ತಡೆಯುವ ಮದ್ದುಗಳು ಲಭ್ಯವಿವೆ. ಆದ್ದರಿಂದ ಯಾವಾಗ ಈ ವೈರಸ್ಸು ರಕ್ತದಲ್ಲಿ ಕಂಡುಬಂದಿತೋ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಈ ವೈರಸ್ಸಿನ ಬೆಳೆಯುವ ಗತಿಯನ್ನು ನಿಯಂತ್ರಿಸಿ ರೋಗವನ್ನು ಹತೋಟಿಯಲ್ಲಿಟ್ಟುಕೊಳ್ಳಬಹುದು. ಇದರಿಂದ ಸಾಮಾನ್ಯ ಜೀವನವನ್ನು ನಡೆಸಲು ಸಾಧ್ಯ.

ಈ ವೈರಸ್ಸಿಗೆ ಇದುವರೆಗೆ ಸಮರ್ಥವಾದ ಮದ್ದನ್ನು ಕಂಡುಹಿಡಿಯಲಾಗಿಲ್ಲ!

ಈ ವೈರಸ್ಸಿಗೆ ಇದುವರೆಗೆ ಸಮರ್ಥವಾದ ಮದ್ದನ್ನು ಕಂಡುಹಿಡಿಯಲಾಗಿಲ್ಲ!

ಈ ವೈರಸ್ಸಿಗೆ ದೇಹದ ದ್ರವಗಳೇ ಆಶ್ರಯದಾಣಗಳು. ಇವುಗಳಲ್ಲಿ ಪ್ರಮುಖವಾಗಿ ವೀರ್ಯ, ರಕ್ತ, ಮಹಿಳೆಯರ ಗುಪ್ತಾಂಗದ ಸ್ರಾವ, ಗುದದ್ವಾರದ ಒಳಗಿನ ದ್ರವ, ತಾಯಿಹಾಲು ಸೇರಿವೆ. ಈ ವೈರಸ್ಸು ದೇಹದ ಇತರ ದ್ರವಗಳಾದ ಬೆವರು, ಜೊಲ್ಲು, ಮೂತ್ರದ ಮೂಲಕ ಹರಡುವುದಿಲ್ಲ. ಇನ್ನು ಇದರ ಲಕ್ಷಣಗಳೇನು

ತೂಕ ಕಳಕೊಂಡರೆ

ತೂಕ ಕಳಕೊಂಡರೆ

ನಿಮ್ಮ ತೂಕದಲ್ಲಿ ಹಠಾತ್ ಬದಲಾವಣೆಯಾಗುವುದನ್ನು ನೀವು ಗಮನಿಸಿದರೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ವೇಗದಲ್ಲಿ ತೂಕ ಕಳಕೊಂಡರೆ, ಎಚ್ಚರಿಕೆ ವಹಿಸಿ. ಇದು ಎಚ್ ಐವಿಯ ಚಿಹ್ನೆಯಾಗಿರಬಹುದು. ತೂಕ ಕಳಕೊಳ್ಳುವುದು ಮುಂಬರುವ ಅನಾರೋಗ್ಯದ ಲಕ್ಷಣವೆಂದು ಪರಿಗಣಿಸಲಾಗಿದೆ. ನಿಮ್ಮ ಪ್ರತಿರೋಧಕ ವ್ಯವಸ್ಥೆಯು ತುಂಬಾ ಕೆಟ್ಟಿದೆ ಎಂದು ಇದರರ್ಥ.

ಯಾವಾಗಲೂ ಕೆಮ್ಮುತ್ತಿದ್ದರೆ

ಯಾವಾಗಲೂ ಕೆಮ್ಮುತ್ತಿದ್ದರೆ

ಒಣ ಕೆಮ್ಮು ಎಚ್ ಐವಿಯ ಒಂದು ಚಿಹ್ನೆ. ನೀವು ಇದನ್ನು ಧೂಳಿನ ಅಲರ್ಜಿಯಿಂದ ಬಂದಿರಬಹುದೆಂದು ಕಡೆಗಣಿಸುವ ಸಾಧ್ಯತೆ ಹೆಚ್ಚು. ಆದಾಗ್ಯೂ, ಸಮಯ ಹೋದಂತೆ ಇದು ತುಂಬಾ ಕೆಟ್ಟ ಮಟ್ಟಕ್ಕೆ ತಲುಪಬಹುದು.

ಉಗುರುಗಳು ಹೇಳುತ್ತದೆ!

ಉಗುರುಗಳು ಹೇಳುತ್ತದೆ!

ಎಚ್ ಐವಿ ಸೋಂಕಿನಿಂದ ನಿಮ್ಮ ಉಗುರುಗಳ ಮೇಲೆ ಪರಿಣಾಮ ಬೀರಬಹುದು. ಎಚ್ ಐವಿ ಚಿಹ್ನೆಗಳು ವಿಲಕ್ಷಣವಾಗಿರಬಹುದಾದರೂ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಉಗುರುಗಳು ವಿಭಜನೆಯಾಗಬಹುದು ಅಥವಾ ಬಣ್ಣ ಕಳಕೊಳ್ಳಬಹುದು. ಇಂತಹ ಯಾವುದೇ ಚಿಹ್ನೆ ಕಾಣಿಸಿದರೆ ಆರಂಭದಲ್ಲೇ ಪತ್ತೆ ಹಚ್ಚಿ.

 ಆಗಾಗ ನಿಮಗೆ ದಣಿವಾದರೆ

ಆಗಾಗ ನಿಮಗೆ ದಣಿವಾದರೆ

ದಿನಪೂರ್ತಿ ನಿಮಗೆ ಆಯಾಸ ಮತ್ತು ದಣಿವಾಗುತ್ತಿದ್ದರೆ ಇದರ ಬಗ್ಗೆ ಎಚ್ಚರ ವಹಿಸಿ, ಇದು ಎಚ್ ಐವಿ ಚಿಹ್ನೆಯಾಗಿರಬಹುದು. ದಣಿವು ಎಚ್ ಐವಿಯ ಆರಂಭಿಕ ಅಥವಾ ಕೊನೇ ಹಂತದ ಚಿಹ್ನೆಯಾಗಿರಬಹುದು.

ಮಾನಸಿಕವಾಗಿ ವರ್ತಿಸತೊಡಗುತ್ತಾರೆ

ಮಾನಸಿಕವಾಗಿ ವರ್ತಿಸತೊಡಗುತ್ತಾರೆ

ಜ್ಞಾನಕ್ಕೆ ಸಂಬಂಧಿಸಿದ ಬುದ್ಧಿ ಮಾಂದ್ಯತೆ ಸಮಸ್ಯೆಗಳು ನಂತರದ ಹಂತದಲ್ಲಿ ಉದ್ಭವಿಸುತ್ತದೆ. ಜೊತೆಗೆ ಮಾನಸಿಕ ಸಮಸ್ಯೆಗಳು ಸಿಟ್ಟು, ಕಿರಿಕಿರಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ವರ್ತನೆಗಳಲ್ಲಿ ಬದಲಾವಣೆಗಳಾಗುತ್ತವೆ. ಏಕಾಗ್ರತೆ,ಹೊಂದಾಣಿಕೆ ಮೊದಲಾದ ಲಕ್ಷಣಗಳು ಏಡ್ಸ್ ಬಾದಿತರಿಂದ ದೂರಾಗುತ್ತವೆ.

ತ್ವಚೆಯ ಸಮಸ್ಯೆ ಕೂಡ ಕಾಡಬಹುದು

ತ್ವಚೆಯ ಸಮಸ್ಯೆ ಕೂಡ ಕಾಡಬಹುದು

ಚರ್ಮ ತುರಿಕೆ ಸಾಮಾನ್ಯ ಮತ್ತು ರೋಗದ ಆರಂಭಿಕ ಅಥವಾ ಅಂತ್ಯದ ಘಟ್ಟಗಳಲ್ಲಿ ಇದು ಕಾಣಿಸಬಹುದು. ಚರ್ಮದಲ್ಲಿ ಗುಳ್ಳೆ ಅಥವಾ ನವೆ ಕಾಣಿಸಿಕೊಳ್ಳಬಹುದು. ಇದರಿಂದ ನಿಮ್ಮ ಚರ್ಮದ ಕಡೆ ಹೆಚ್ಚಿನ ಗಮನಹರಿಸಿ. ಪ್ರತೀ ವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. 2013ರ ವಿಶ್ವ ಏಡ್ಸ್ ದಿನದ ಘೋಷಣೆಯೆಂದರೆ ಪಡೆಯುವುದು ಶೂನ್ಯ: ಎಚ್ ಐವಿ ಸೋಂಕಿಗೆ ಶೂನ್ಯ. ಪ್ರತೀ ವರ್ಷ ಜನರಲ್ಲಿ ಜಾಗೃತಿ ಮೂಡಿಸಲು ಪ್ರಚಾರ ಕೈಗೊಳ್ಳ ಲಾಗುತ್ತದೆ. ಎಚ್ ಐವಿ ಸೋಂಕಿನ ವಿರುದ್ಧದ ಅಭಿಯಾನವು ಹೆಚ್ಚು ಪರಿಣಾಮಕಾರಿಯಾಗಲು ಕೆಲವೊಂದು ಸಾಧನ ಮತ್ತು ತಾಂತ್ರಿಕ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುತ್ತದೆ. ಎಚ್ ಐವಿ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಿ ಮತ್ತು ಚಿಕಿತ್ಸೆ ಪಡೆಯುವುದಕ್ಕಿಂತ ಬಾರದಂತೆ ತಡೆಯುವುದುಉತ್ತಮ.

English summary

world aids day 2017: Signs You May Have HIV

HIV can be transmitted in many ways, such as vaginal, oral sex, anal sex, blood transfusion, and contaminated hypodermic needles. Here are some common signs of HIV.