ನೆನಪಿಡಿ, ಊಟ ಮಾಡುವಾಗ ನೀರು ಕುಡಿಯಬೇಡಿ...

By: manu
Subscribe to Boldsky

ದೇಹದ ಮುಕ್ಕಾಲು ಭಾಗದಲ್ಲಿ ನೀರಿನಾಂಶವಿದೆ ಎನ್ನುತ್ತದೆ ವೈದ್ಯಕೀಯ ಲೋಕ. ದಿನದಲ್ಲಿ ಏಳರಿಂದ ಎಂಟು ಲೋಟದಷ್ಟು ನೀರು ಕುಡಿದರೆ ಮಾತ್ರ ನಮ್ಮ ದೇಹವು ತೇವಾಂಶದಿಂದ ಕೂಡಿರುತ್ತದೆ. ಇಲ್ಲವಾದಲ್ಲಿ ದೇಹವು ನಿರ್ಜಲೀಕರಣಕ್ಕೆ ತುತ್ತಾಗುತ್ತದೆ. ಅತಿಯಾದ ಉಷ್ಣಾಂಶವಿರುವ ಕಡೆ ಮತ್ತು ಬಿಸಿಲಿನಲ್ಲಿ ಹೆಚ್ಚು ಒಡಾಡುವ ಸಮಯದಲ್ಲಿ ಇನ್ನು ಹೆಚ್ಚಿನ ನೀರು ಕುಡಿಯಬೇಕಾಗುತ್ತದೆ. ಕುಡಿಯುವ ನೀರನ್ನು ಈ ಹತ್ತು ವಿಧಾನಗಳಲ್ಲಿ ರುಚಿಯಾಗಿಸಿ! 

ನಾವು ತಿನ್ನುವಂತಹ ಆಹಾರದಲ್ಲಿ ಕೂಡ ನೀರಿನಾಂಶವಿರುತ್ತದೆ. ಆದರೂ ನಾವು ನೀರು ಕುಡಿಯಲೇಬೇಕಾಗುತ್ತದೆ. ನೀರು ಸರಿಯಾಗಿ ಕುಡಿಯದೆ ಇದ್ದರೆ ಚರ್ಮವು ಒಣಗಿ ಹೋಗುವುದು ಮತ್ತು ದೇಹದಲ್ಲಿ ಕಾಂತಿಯು ಮಾಯವಾಗುವುದು. ದೇಹದಲ್ಲಿ ಸರಿಯಾಗಿ ನೀರಿನಾಂಶ ಇಲ್ಲದೆ ಇದ್ದರೆ ಅದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅಗತ್ಯವಾಗಿ ನೀರು ಸೇವಿಸಲೇಬೇಕು.  ಊಟದ ಮಧ್ಯೆ ನೀರು ಕುಡಿಯಬಾರದು ಏಕೆ?

ಆದರೆ ಊಟ ಮಾಡುವಾಗ ನೀರು ಕುಡಿಯಬೇಕೇ ಅಥವಾ ಬೇಡವೇ ಎನ್ನುವ ವಾದ ನಡೆಯುತ್ತಲೇ ಇದೆ. ಕೆಲವೊಂದು ವಾದದ ಪ್ರಕಾರ ಊಟ ಮಾಡುವ ವೇಳೆ ನೀರು ಕುಡಿದರೆ ಅದು ಜೀರ್ಣಕ್ರಿಯೆಗೆ ನೆರವಾಗುತ್ತದೆ ಮತ್ತು ಹೊಟ್ಟೆ ತುಂಬಿದಂತೆ ಆಗಿ ಹೆಚ್ಚು ಆಹಾರ ಸೇವಿಸಲು ಆಗಲ್ಲ. ತೂಕ ಕಳೆದುಕೊಳ್ಳಲು ಬಯಸುವವರಿಗೆ ಇದು ಒಳ್ಳೆಯದು. ಆಯುರ್ವೇದ ಟಿಪ್ಸ್: ಬೆಳಿಗ್ಗೆ ಬಿಸಿ ನೀರು ಕುಡಿಯುವುದನ್ನು ಮರೆಯದಿರಿ

ಊಟಕ್ಕೆ ಸ್ವಲ್ಪ ಮೊದಲು ಒಂದು ಲೋಟ ನೀರು ಕುಡಿದರೆ ಹಸಿವು ಕಡಿಮೆಯಾಗಿ ತಿನ್ನುವ ಪ್ರಮಾಣವು ಕಡಿಮೆಯಾಗುತ್ತದೆ. ಊಟ ಮಾಡುವಾಗ ನೀರು ಕುಡಿಯಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ.....  

ಜೀರ್ಣಕ್ರಿಯೆಗೆ ಸಮಸ್ಯೆ!

ಜೀರ್ಣಕ್ರಿಯೆಗೆ ಸಮಸ್ಯೆ!

ಊಟ ಮಾಡುವಾಗ ನೀರು ಕುಡಿಯುವುದು ಹೆಚ್ಚಿನವರ ಅಭ್ಯಾಸವಾಗಿದೆ. ಆದರೆ ಕೆಲವೊಂದು ಅಧ್ಯಯನಗಳ ಪ್ರಕಾರ ಊಟ ಮಾಡುವಾಗ ನೀರು ಕುಡಿದರೆ ಆಹಾರದೊಂದಿಗೆ ನೀರು ಕೂಡ ಹೊಟ್ಟೆಯನ್ನು ಸೇರಿಕೊಳ್ಳುತ್ತದೆ. ಇದರಿಂದ ಹೊಟ್ಟೆಯಲ್ಲಿ ಆಹಾರವನ್ನು ವಿಭಜಿಸುವಂತಹ ಹೈಡ್ರೋಕ್ಲೋರಿಕ್ ಆಮ್ಲವು ದುರ್ಬಲಗೊಳ್ಳುತ್ತದೆ. ಆಹಾರವು ಸರಿಯಾಗಿ ವಿಭಜನೆಯಾಗದೆ ಇರುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ.

ಮಲಬದ್ಧತೆ

ಮಲಬದ್ಧತೆ

ದೇಹದಲ್ಲಿ ಅಜೀರ್ಣವಾದರೆ ಮಲಬದ್ಧತೆಗೆ ತುತ್ತಾಗಬೇಕಾಗುತ್ತದೆ. ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ಇಲ್ಲದೆ ಇದ್ದರೆ ನಿಶ್ಯಕ್ತಿಯು ಕಾಡುತ್ತದೆ.ಮಲಬದ್ಧತೆಗೆ ಬದ್ಧ ವೈರಿಗಳಾಗಿರುವ ಪ್ರಮುಖ ಆಹಾರಗಳು....

ಹೊಟ್ಟೆಯುಬ್ಬರ ಮತ್ತು ಅಜೀರ್ಣ

ಹೊಟ್ಟೆಯುಬ್ಬರ ಮತ್ತು ಅಜೀರ್ಣ

ಊಟದ ವೇಳೆ ನೀರು ಕುಡಿದರೆ ಅರೆಅಜೀರ್ಣತೆ, ಹೊಟ್ಟೆಯುಬ್ಬರ ಮತ್ತು ಅಜೀರ್ಣ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆಗಲು ಯಾವ ಸಮಯದಲ್ಲಿ ನೀರು ಕುಡಿಯಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ ಊಟಕ್ಕೆ ಅರ್ಧಗಂಟೆ ಮೊದಲು ಅಥವಾ ಊಟವಾದ ಒಂದು ಗಂಟೆ ಬಳಿಕ ನೀರು ಕುಡಿಯಬೇಕು.

ಹೊಟ್ಟೆಯುಬ್ಬರ ಮತ್ತು ಅಜೀರ್ಣ

ಹೊಟ್ಟೆಯುಬ್ಬರ ಮತ್ತು ಅಜೀರ್ಣ

ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗಿ ವಾಯು, ಹೊಟ್ಟೆಯುಬ್ಬರ ಮತ್ತು ಅಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ. ಊಟ ಮಾಡುವಾಗ ನೀರನ್ನು ಸ್ವಲ್ಪ ಕುಡಿಯಬಹುದು. ಅದರಲ್ಲೂ ಬಿಸಿ ನೀರು ಕುಡಿದರೆ ಜೀರ್ಣ ಕ್ರಿಯೆ ಸರಾಗವಾಗುತ್ತದೆ.

ತೂಕ ಹೆಚ್ಚಿಸುತ್ತದೆ

ತೂಕ ಹೆಚ್ಚಿಸುತ್ತದೆ

ಆಹಾರದ ಮಧ್ಯೆ ನೀರನ್ನು ಸೇವಿಸುವುದರಿಂದ ಉಂಟಾಗುವ ಒಂದು ಪ್ರಮುಖ ದುಷ್ಪರಿಣಾಮವೆಂದರೆ, ಅದು ನಿಮ್ಮ ತೂಕದ ಏರಿಕೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ಆಹಾರ. ಈ ಮುಂದೆ ತಿಳಿಸಿದಂತೆ ಆಹಾರ ಸೇವಿಸುವುದರ ನಡುವೆ ನೀರು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣವು ಅಧಿಕಗೊಳ್ಳುತ್ತದೆ.

ಆಯುರ್ವೇದದಲ್ಲಿ ತಿಳಿಸಿದಂತೆ....

ಆಯುರ್ವೇದದಲ್ಲಿ ತಿಳಿಸಿದಂತೆ....

ಆಯುರ್ವೇದದಲ್ಲಿ ತಿಳಿಸಿದಂತೆ ಜೀರ್ಣಾಗ್ನಿಯು ಸಹ ಕುಂಠಿತಗೊಳ್ಳುತ್ತದೆ. ಇದರಿಂದ ಸ್ಥೂಲ ಕಾಯ ಬರುವ ಸಾಧ್ಯತೆಗಳು ಹೆಚ್ಚುತ್ತದೆ. ಇದು ವಾತ, ಪಿತ್ತ ಮತ್ತು ಕಫಗಳ ನಡುವೆ ಸಮತೋಲನವನ್ನು ಹಾಳು ಮಾಡುವುದರ ಜೊತೆಗೆ ದೇಹವು ಕಾರ್ಯ ನಿರ್ವಹಿಸುವ ಬಗೆಯನ್ನೆ ಹಾಳು ಮಾಡಿ ಬಿಡುತ್ತದೆ

 
English summary

Why Should You Not Drink Water With Your Meals?

Drinking at least eight glasses of water every day is essential for the proper hydration of the body. In case of a hot climate or if the person exercises or runs in the hot sun, more intake of water is required. But is drinking water along with your food good for health? This is what we shall discuss in this article.
Please Wait while comments are loading...
Subscribe Newsletter