For Quick Alerts
ALLOW NOTIFICATIONS  
For Daily Alerts

ಊಟದ ಮಧ್ಯೆ ನೀರು ಕುಡಿಯಬಾರದು ಏಕೆ?

By Manu
|

ಸಾಮಾನ್ಯವಾಗಿ ನಾವು ಊಟ ಮಾಡುವಾಗ ನಮ್ಮ ತಟ್ಟೆಯ ಪಕ್ಕದಲ್ಲಿಯೇ ಒಂದು ದೊಡ್ಡ ನೀರಿನ ಗ್ಲಾಸನ್ನು ಇಟ್ಟುಕೊಂಡಿರುತ್ತೇವೆ. ಕೆಲವು ಜನರು ಊಟ ಮಾಡುವಾಗ ನೀರು ಕುಡಿಯುವುದು ಅತ್ಯಗತ್ಯ ಎಂದು ಸಹ ಭಾವಿಸಿರುತ್ತಾರೆ. ಅದರಲ್ಲೂ ಊಟದ ಜೊತೆಗೆ ವಿಶೇಷವಾಗಿ ತಂಪಾದ ನೀರನ್ನು ಕುಡಿಯಬೇಕು ಎಂದುಕೊಂಡಿರುತ್ತಾರೆ.

ಆದರೆ ಈ ಅಭ್ಯಾಸವು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಏಕೆ ನಾವು ಊಟ ಮಾಡುವಾಗ ನೀರನ್ನು ಸೇವಿಸಬಾರದು ಎಂದು ಹೇಳಲು ಇಲ್ಲಿ ಕಾರಣಗಳನ್ನು ನಾವು ನೀಡಿದ್ದೇವೆ ಓದಿ ತಿಳಿದುಕೊಳ್ಳಿ....

ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ

ನಿಮ್ಮ ಜಠರದಲ್ಲಿ ಜೀರ್ಣ ಶಕ್ತಿ ಹೆಚ್ಚಿಸುವ ಆಮ್ಲಗಳು ಇರುತ್ತವೆ. ಇವು ನೀವು ಸೇವಿಸುವ ಆಹಾರವನ್ನು ವಿಘಟನೆ ಮಾಡಿ, ಜೀರ್ಣ ಕ್ರಿಯೆಯನ್ನು ಸರಾಗವಾಗಿ ಮಾಡುತ್ತವೆ. ಇದರ ಜೊತೆಗೆ ಆಹಾರದ ಜೊತೆಯಲ್ಲಿಯೇ ಬರುವ ಇನ್‍ಫೆಕ್ಷನ್‍ಕಾರಕ ಅಂಶಗಳನ್ನು ಇವು ಕೊಲ್ಲುತ್ತವೆ. ಈ ಇನ್‍ಫೆಕ್ಷನ್‍ಕಾರಕ ಅಂಶಗಳನ್ನು "ಜೀರ್ಣ ಅಗ್ನಿ" (ಆಯುರ್ವೇದದ ಪ್ರಕಾರ) ಎಂದು ಕರೆಯಲಾಗುತ್ತದೆ. ಈ ಜೀರ್ಣಕಾರಿ ಕಿಣ್ವಗಳು ನಾವು ಸೇವಿಸುವ ಆಹಾರವು ಸರಿಯಾಗಿ ಜೀರ್ಣಗೊಂಡು ಅದರ ಪೋಷಕಾಂಶಗಳು ನಮ್ಮ ಆರೋಗ್ಯವನ್ನು ವರ್ಧಿಸುವಂತೆ ಮಾಡಲು ಸಹಕಾರಿ. ಆದರೆ ಈ ನಾವು ಸೇವಿಸುವ ನೀರು ಈ ಜೀರ್ಣಾಗ್ನಿಯನ್ನು ಆರಿಸಿಬಿಡುತ್ತದೆ, ಅದಷ್ಟೇ ಅಲ್ಲದೆ ಇದು ಇಡೀ ಜೀರ್ಣ ವ್ಯವಸ್ಥೆಯನ್ನೆ ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ ಹಾಗು ಕರುಳಿನ ಗೋಡೆಗಳನ್ನು ಹಾನಿ ಮಾಡಿ ಬಿಡುತ್ತದೆ. ಹೀಗೆ ಈ ವ್ಯವಸ್ಥೆಯು ಬುಡಮೇಲಾಗುವುದರಿಂದ ಜೀರ್ಣವಾಗಬೇಕಾದ ಆಹಾರವು ಕರುಳಿನಲ್ಲಿ ಸುಮಾರು ಹೊತ್ತು ಕೊಳೆಯುತ್ತದೆ. ಜೀರ್ಣಕ್ರಿಯೆಯು ನಿಧಾನಗೊಳ್ಳುತ್ತದೆ. ಸಣ್ಣ ಕರುಳಿನಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯು ಸಹ ಇದರಿಂದ ಕುಂಠಿತಗೊಳ್ಳುತ್ತದೆ.

ಲಾಲಾರಸದ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ಲಾಲಾರಸದ ಪ್ರಮಾಣವನ್ನು ಕಡಿಮೆ ಮಾಡುತ್ತದೆ

ನಿಮ್ಮ ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸವು ನಿಮ್ಮ ಜೀರ್ಣ ಕ್ರಿಯೆಯ ಮೊದಲ ಹಂತವಾಗಿರುತ್ತದೆ. ಇದು ಆಹಾರವನ್ನು ವಿಘಟಿಸುವ ಕಿಣ್ವಗಳನ್ನಷ್ಟೇ ಹೊಂದಿರುವುದಿಲ್ಲ, ಜೊತೆಗೆ ಜಠರವು ಸಹ ಜೀರ್ಣ ಕ್ರಿಯೆಗೆ ಸಹಕರಿಸುವ ಕಿಣ್ವಗಳನ್ನು ಬಿಡುಗಡೆ ಮಾಡಲು ನೆರವಾಗುತ್ತದೆ. ನೀವು ಆಹಾರವನ್ನು ಸೇವಿಸುವಾಗ ನೀರನ್ನು ಕುಡಿದರೆ, ಅದು ನಿಮ್ಮ ಲಾಲಾರಸವನ್ನು ಕರಗಿಸಿ ಬಿಡುತ್ತದೆ. ಇದು ಮುಂದೆ ಜಠರಕ್ಕೆ ಕಳುಹಿಸುವ ಸಂಕೇತವನ್ನು ಸಹ ಕುಂಠಿತಗೊಳಿಸುವುದುರ ಜೊತೆಗೆ ಬಾಯಿಯಲ್ಲಿ ಆಹಾರವು ವಿಘಟನೆಯಾಗುವುದನ್ನು ಸಹ ನಿಲ್ಲಿಸುತ್ತದೆ. ಇದರಿಂದ ಜೀರ್ಣ ಕ್ರಿಯೆಯು ಕಷ್ಟವಾಗುತ್ತದೆ.

ಆಸಿಡಿಟಿ ಸಮಸ್ಯೆಯನ್ನು ತಂದೊಡ್ಡುತ್ತದೆ

ಆಸಿಡಿಟಿ ಸಮಸ್ಯೆಯನ್ನು ತಂದೊಡ್ಡುತ್ತದೆ

ಒಂದು ವೇಳೆ ನೀವು ನಿಯಮಿತವಾಗಿ ಆಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರೆ, ನಿಮ್ಮ ಅಭ್ಯಾಸವನ್ನೇ ನೀವು ಟೀಕಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಆಹಾರ ಸೇವಿಸುವ ನಡುವೆ ನೀರನ್ನು ಸೇವಿಸುವ ಅಭ್ಯಾಸವಿರಿಸಿಕೊಂಡಿದ್ದಲ್ಲಿ, ಅದು ಹಲವಾರು ದುಷ್ಪರಿಣಾಮಗಳಿಗೆ ಎಡೆ ಮಾಡಿಕೊಡುತ್ತದೆ. ಶೋನಾಲಿ ಸಬೆರ್‌ವಾಲ್‌ರವರ ಪ್ರಕಾರ ನಮ್ಮ ಜಠರವು ತಾನು ಸ್ಯಾಚುರೇಟೆಡ್ ಆಗುವವರೆಗು ನೀರನ್ನು ಹೀರಿಕೊಳ್ಳುತ್ತದೆ. ಇದಾದ ನಂತರ ಜಠರದಲ್ಲಿರುವ ನೀರು ಗ್ಯಾಸ್ಟ್ರಿಕ್ ದ್ರವಗಳನ್ನು ಕರಗಿಸಲು ಆರಂಭಿಸುತ್ತದೆ. ಆ ಮಿಶ್ರಣವು ಸಾಮಾನ್ಯವಾಗಿ ಇರಬೇಕಾದ ಪ್ರಮಾಣಕ್ಕಿಂತ ಸ್ವಲ್ಪ ಗಡುಸಾಗಿರುತ್ತದೆ. ಇದು ಜಠರದಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಕಿಣ್ವಗಳು ಬಿಡುಗಡೆಯಾಗುವಂತೆ ಮಾಡುತ್ತದೆ. ಇದರಿಂದ ಜೀರ್ಣ ಕ್ರಿಯೆ ಏರುಪೇರಾಗಿ ಆಸಿಡ್ ರಿಫ್ಲಕ್ಸ್ ಮತ್ತು ಎದೆ ಉರಿ ಸಮಸ್ಯೆ ಕಂಡು ಬರುತ್ತದೆ.

ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ

ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ

ಶೋನಾಲಿ ಸಬೆರ್‌ವಾಲ್‌ರವರ ಪ್ರಕಾರ ನೀವು ಆಹಾರ ಸೇವಿಸುವಾಗ ಕುಡಿಯುವ ನೀರು ನಿಮ್ಮ ಆಹಾರದಲ್ಲಿರು ಗ್ಲೈಕೆಮಿಕ್ ಆಹಾರದಂತಹ ಇನ್ಸುಲಿನ್ ಪ್ರಮಾಣಗಳನ್ನು ಹೆಚ್ಚಿಸುತ್ತದೆ. ಯಾವಾಗ ನಿಮ್ಮ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವು ನಿಮ್ಮ ಜಠರಕ್ಕೆ ಇಲ್ಲವಾಗುತ್ತದೋ, ಆಗ ಆ ಆಹಾರವು ಕೊಬ್ಬಾಗಿ ಪರಿವರ್ತನೆಯಾಗಲು ತೊಡಗುತ್ತದೆ. ಇದೆಲ್ಲದರ ಪರಿಣಾಮವಾಗಿ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವು ಅಧಿಕವಾಗುತ್ತ ಹೋಗುತ್ತದೆ.

ತೂಕ ಹೆಚ್ಚಿಸುತ್ತದೆ

ತೂಕ ಹೆಚ್ಚಿಸುತ್ತದೆ

ಆಹಾರದ ಮಧ್ಯೆ ನೀರನ್ನು ಸೇವಿಸುವುದರಿಂದ ಉಂಟಾಗುವ ಒಂದು ಪ್ರಮುಖ ದುಷ್ಪರಿಣಾಮವೆಂದರೆ, ಅದು ನಿಮ್ಮ ತೂಕದ ಏರಿಕೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ಆಹಾರ. ಈ ಮುಂದೆ ತಿಳಿಸಿದಂತೆ ಆಹಾರ ಸೇವಿಸುವುದರ ನಡುವೆ ನೀರು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಪ್ರಮಾಣವು ಅಧಿಕಗೊಳ್ಳುತ್ತದೆ. ಇದರ ಜೊತೆಗೆ ಆಯುರ್ವೇದದಲ್ಲಿ ತಿಳಿಸಿದಂತೆ ಜೀರ್ಣಾಗ್ನಿಯು ಸಹ ಕುಂಠಿತಗೊಳ್ಳುತ್ತದೆ. ಇದರಿಂದ ಸ್ಥೂಲ ಕಾಯ ಬರುವ ಸಾಧ್ಯತೆಗಳು ಹೆಚ್ಚುತ್ತದೆ. ಇದು ವಾತ, ಪಿತ್ತ ಮತ್ತು ಕಫಗಳ ನಡುವೆ ಸಮತೋಲನವನ್ನು ಹಾಳು ಮಾಡುವುದರ ಜೊತೆಗೆ ದೇಹವು ಕಾರ್ಯ ನಿರ್ವಹಿಸುವ ಬಗೆಯನ್ನೆ ಹಾಳು ಮಾಡಿ ಬಿಡುತ್ತದೆ.

ಈ ಅಭ್ಯಾಸವು ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಹಾಗಾದರೆ ಈ ಅಭ್ಯಾಸವನ್ನು ಬಿಡುವ ಬಗೆ ಹೇಗೆ ಎನ್ನಲು ನಾವು ನಿಮಗಾಗಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡುತ್ತಿದ್ದೇವೆ, ಬನ್ನಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ..

ಕಡಿಮೆ ಉಪ್ಪು ಹಾಕಿದ ಊಟವನ್ನು ಸೇವಿಸಿ

ಕಡಿಮೆ ಉಪ್ಪು ಹಾಕಿದ ಊಟವನ್ನು ಸೇವಿಸಿ

ಉಪ್ಪು ತಿಂದವನು ನೀರು ಕುಡಿಯಬೇಕು ಎಂಬ ಗಾಗದೆ ಕೇಳಿಲ್ಲವೆ. ಹಾಗಾಗಿ ಉಪ್ಪು ಕಡಿಮೆ ಹಾಕಿದ ಆಹಾರವನ್ನು ಸೇವಿಸುವುದರಿಂದ ನೀರನ್ನು ಊಟ ಮಾಡುವ ನಡುವೆ ಸೇವಿಸುವುದನ್ನು ತಡೆಯಬಹುದು.

ಒಂದೇ ಸಲಕ್ಕೆ ಆಹಾರವನ್ನು ನುಂಗಬೇಡಿ

ಒಂದೇ ಸಲಕ್ಕೆ ಆಹಾರವನ್ನು ನುಂಗಬೇಡಿ

ಒಂದೇ ಸಲಕ್ಕೆ ಆಹಾರವನ್ನು ನುಂಗಬೇಡಿ, ಬದಲಿಗೆ ಅಗಿದು ನುಂಗಿ. ಆಹಾರವನ್ನು ಅಗಿಯುವುದರಿಂದ ಬಾಯಿಯಲ್ಲಿ ಲಾಲಾ ರಸವು ಉತ್ಪತ್ತಿಗೊಳ್ಳುತ್ತದೆ. ಇದರಿಂದ ಜೀರ್ಣಕ್ರಿಯೆಯು ಸರಾಗವಾಗುತ್ತದೆ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ಅದು ನಿಮ್ಮ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದರ ಜೊತೆಗೆ ಲಾಲಾರಸವು ಬಾಯಿಯಲ್ಲಿ ಹೆಚ್ಚಾಗಿ ಉತ್ಪತ್ತಿಗೊಳ್ಳುವುದರಿಂದ ನೀರನ್ನು ಸೇವಿಸಬೇಕು ಎಂಬ ತುಡಿತವು ಕಡಿಮೆ ಯಾಗುತ್ತದೆ.

ಊಟಕ್ಕೆ 30 ನಿಮಿಷ ಮೊದಲು ನೀರನ್ನು ಸೇವಿಸಿ

ಊಟಕ್ಕೆ 30 ನಿಮಿಷ ಮೊದಲು ನೀರನ್ನು ಸೇವಿಸಿ

ವಿಟಾ ಆಯುರ್ವೇದ ಮತ್ತು ಯೋಗ ಕೇಂದ್ರದ ಸಿಇಓ ಆದ ಡಾ.ಗೌತಮ್‌ರವರ ಪ್ರಕಾರ ಒಬ್ಬ ವ್ಯಕ್ತಿಯು ಊಟ ಮಾಡುವ ಮೊದಲು ಕೊಠಡಿಯ ಉಷ್ಣಾಂಶದಲ್ಲಿರುವ ನೀರನ್ನು ಕುಡಿಯಬೇಕು. ಇದರಿಂದ ಅವರ ತೂಕವು ಕಡಿಮೆಯಾಗುತ್ತದೆ ಮತ್ತು ಜೀರ್ಣ ಕ್ರಿಯೆಯು ಸುಗಮವಾಗುತ್ತದೆ. ಹೀಗೆ ಮಾಡುವುದರಿಂದ ಊಟದ ನಡುವೆ ನೀರನ್ನು ಸೇವಿಸಬೇಕು ಎಂಬ ತುಡಿತವು ಉಂಟಾಗುವುದಿಲ್ಲ.

English summary

Reasons why drinking water during your meals is bad

Probably one of the most common sights you see on a daily basis is that tall glass of water next to your plate of food Probably one of the most common sights you see on a daily basis is that tall glass of water next to your plate of food. Probably one of the most common sights you see on a daily basis
X
Desktop Bottom Promotion