For Quick Alerts
ALLOW NOTIFICATIONS  
For Daily Alerts

ಕುಡಿಯುವ ನೀರನ್ನು ಈ ಹತ್ತು ವಿಧಾನಗಳಲ್ಲಿ ರುಚಿಯಾಗಿಸಿ!

By Super
|

ಕುಡಿಯುವ ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದಿದ್ದರು ಅದನ್ನು ನೀವು ಇಷ್ಟಪಡುವುದಿಲ್ಲವೇ? ಹಾಗಾದರೆ ನೀವು ನೀರಿನ ರುಚಿಯನ್ನು ಇಷ್ಟಪಡುವುದಿಲ್ಲ ಎಂದು ಭಾವಿಸುತ್ತೇವೆ. ಮುಖ ಗಂಟಿಕ್ಕಿಕೊಳಬೇಡಿ, ಸುಮಾರು ಜನ ರುಚಿಯಿಲ್ಲದ ನೀರನ್ನು ತಿರಸ್ಕರಿಸುತ್ತಾರೆ. ಅದರಲ್ಲೂ ಚಿಕ್ಕ ಮಕ್ಕಳು ಈ ರುಚಿಯಿಲ್ಲದ ನೀರನ್ನು ತಿರಸ್ಕರಿಸುವುದು ಹೆಚ್ಚು. ಹಾಗಾದರೆ ನೀರಿಗೆ ರುಚಿಯನ್ನು ತರುವ ಅತ್ಯುತ್ತಮ ಮಾರ್ಗಗಳು ಯಾವುವು? ನೀವು ನೀರನ್ನು ಕುಡಿಯಲೇ ಬೇಕು, ಏಕೆಂದರೆ ಅದು ಜೈವಿಕ ಅಗತ್ಯತೆ.

ಹಾಗಾಗಿ ನೀವು ನೀರಿಗೆ ರುಚಿಗಳನ್ನು ತರುವ ಆರೋಗ್ಯಕಾರಿ ಮಾರ್ಗಗಳನ್ನು ಪ್ರಯತ್ನಿಸಬೇಕು. ಬಹುತೇಕ ಜನರು ನೀರನ್ನು ಕುಡಿಯಲು ಇರುವ ನವೀನ ಮಾರ್ಗಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಏಕೆಂದರೆ ನಮ್ಮಲ್ಲಿ ಕೆಲವರು ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಗಳನ್ನು ಮಾಡುವುದಿಲ್ಲ. ಆದರೂ ನೀರಿನಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳನ್ನು ನಾವು ಯಾರು ತಳ್ಳಿ ಹಾಕುವುದಿಲ್ಲ. ಆದ್ದರಿಂದ ನೀವು ನೀರನ್ನು ರುಚಿಗೊಳಿಸುವ ಪ್ರಯತ್ನಗಳನ್ನು ಮಾಡಿ, ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಊಟದ ಮಧ್ಯೆ ನೀರು ಕುಡಿಯಬಾರದು ಏಕೆ?

ಯಾವಾಗ ನೀವು ನೀರನ್ನು ರುಚಿಕರಗೊಳಿಸುವ ಮಾರ್ಗಗಳನ್ನು ಪ್ರಯತ್ನಿಸುತ್ತೀರೋ, ಆಗ ನೀವು ನಿಮಗೆ ತಿಳಿಯದಂತೆ ನೀರನ್ನು ಬೇರೆ ರುಚಿಯಿರುವ ಪಾನೀಯವಾಗಿ ಬದಲಾಯಿಸುತ್ತೀರಿ. ಒಮ್ಮೆ ನೀವು ಇದನ್ನು ಮಾಡಿದರೆ, ನಿರಾಯಾಸವಾಗಿ ನೀವು ನೀರನ್ನು ಕುಡಿಯಲು ಆರಂಭಿಸುತ್ತೀರಿ. ಹಾಗಾದರೆ ಬನ್ನಿ ನಿಮ್ಮನ್ನು ನೀರು ಕುಡಿಯಲು ಹಚ್ಚುವ ಕೆಲವೊಂದು ರುಚಿಕರ ಸಲಹೆಗಳು ನಿಮಗಾಗಿ ಕಾದು ಕುಳಿತಿವೆ ಓದಿ

ಹೊಳೆಯುವಂತೆ ಮಾಡಿ

ಹೊಳೆಯುವಂತೆ ಮಾಡಿ

ನಿಂತ ನೀರಿಗಿಂತ ಹೊಳೆಯುವ ನೀರು ಉತ್ತಮ ರುಚಿಯನ್ನು ಹೊಂದಿರುತ್ತದೆ. ಅದಕ್ಕಾಗಿ ನೀವು ನೊರೆ ನೊರೆಯಂತೆ ನೀರನ್ನು ಚಿಮ್ಮಿಸುವ ಒಂದು ಒಳ್ಳೆಯ ಡಿಸ್ಪೆನ್ಸರನ್ನು ಹೊಂದಿರಬೇಕಾಗುತ್ತದೆ.

ನಿಂಬೆರಸವನ್ನು ಹಿಂಡಿ

ನಿಂಬೆರಸವನ್ನು ಹಿಂಡಿ

ನೀರಿಗೆ ರುಚಿಯನ್ನು ತರಲು ಮಾಡಬಹುದಾದ ಮತ್ತೊಂದು ಸುಲಭವಾದ ವಿಧಾನ, ನೀರಿಗೆ ನಿಂಬೆಹಣ್ಣನ್ನು ಹಿಂಡುವುದು. ಇದರಿಂದ ನೀರಿನ ರುಚಿ ಉತ್ತಮಗೊಳ್ಳುತ್ತದೆ. ಇದರಿಂದಾಗಿ ನೀವು ಸ್ವಲ್ಪ ಹೆಚ್ಚಿನ ತಾಜಾ ವಿಟಮಿನ್ ಸಿಯನ್ನು ಪಡೆದುಕೊಳ್ಳಬಹುದು.

ಮಂಜುಗಡ್ಡೆಯನ್ನು ಹಾಕಿ

ಮಂಜುಗಡ್ಡೆಯನ್ನು ಹಾಕಿ

ಬೇಸಿಗೆಯ ದಿನಗಳಲ್ಲಿ ನೀರಿಗೆ ಮತ್ತಷ್ಟು ತಂಪನ್ನು ಒದಗಿಸುವ ಸಲುವಾಗಿ, ಮಂಜುಗಡ್ಡೆಯನ್ನು ಹಾಕಿಕೊಳ್ಳಿ. ಮಂಜುಗಡ್ಡೆಗಳು ಬಾಯಾರಿಕೆಯಾದಾಗ ತಂಪಿನ ಜೊತೆಗೆ ರುಚಿಯನ್ನು ಸಹ ನೀಡುತ್ತವೆ.

ಜೀರಿಗೆಯ ಸ್ವಾದ

ಜೀರಿಗೆಯ ಸ್ವಾದ

ಕೇರಳದಲ್ಲಿ ಬಿಸಿ ನೀರಿಗೆ ಜೀರಿಗೆಯನ್ನು ಹಾಕುವುದು ಒಂದು ಸಂಪ್ರದಾಯ. ಜೀರಿಗೆ ಮಿಶ್ರಿತ ನೀರು ನಿಮ್ಮ ಗಂಟಲು ಕಟ್ಟುವುದನ್ನು ನಿವಾರಿಸುತ್ತದೆ ಮತ್ತು ಜೀರ್ಣ ಕ್ರಿಯೆಯನ್ನು ಸಹ ಹೆಚ್ಚಿಸುತ್ತದೆ. ಮಲಗುವ ಮೊದಲು ಈ ನೀರನ್ನು ಸೇವಿಸುವುದರಿಂದ ನಿಮ್ಮ ನರಗಳು ತಟಸ್ಥಗೊಳ್ಳುತ್ತವೆ ಮತ್ತು ನಿದ್ದೆಯು ಚೆನ್ನಾಗಿ ಬರುತ್ತದೆ.

ಬೆರ್ರಿ ಬೆರ್ರಿ

ಬೆರ್ರಿ ಬೆರ್ರಿ

ನೀರಿಗೆ ತಾಜಾ ಬೆರ್ರಿಗಳನ್ನು ಹಾಕಿ ಮತ್ತು ಅದನ್ನು 2 ಗಂಟೆಗಳ ಕಾಲ ಹಾಗೆಯೇ ಬಿಡಿ. ಈ ನೀರು ಸ್ವಾಭಾವಿಕವಾಗಿ ಬೆರ್ರಿಗಳಿಂದ ಸುವಾಸನೆಯನ್ನು ಮತ್ತು ರುಚಿಗಳನ್ನು ಪಡೆದುಕೊಳ್ಳುತ್ತದೆ.

ಪುದಿನಾ ನೀರು

ಪುದಿನಾ ನೀರು

ನೀರಿಗೆ ತಾಜಾ ಪುದಿನಾಗಳನ್ನು ಸೇರಿಸಿ. ಪುದಿನಾ ಸೊಪ್ಪನ್ನು ಜಜ್ಜಿ, ಅದನ್ನು ನೀರಿನಲ್ಲಿ ನೆನೆಯಲು ಬಿಡಿ. ಒಂದು ಗಂಟೆ ನೆನೆದ ನಂತರ ನೀವು ಆಹ್ಲಾದಕರವಾದ ಮತ್ತು ತಂಪಾದ ರುಚಿಯನ್ನು ಹೊಂದಿರುವ ನೀರನ್ನು ಪಡೆಯುವಿರಿ.

ತರಕಾರಿ ಬೇಯಿಸಿದ ನೀರು

ತರಕಾರಿ ಬೇಯಿಸಿದ ನೀರು

ತರಕಾರಿಗ ಬೇಯಿಸಿದ ನೀರನ್ನು ಬಳಸಿ. ತರಕಾರಿಗಳನ್ನೆಲ್ಲ ಬೇಯಿಸಿದ ನಂತರ ಉಳಿಯುವ ನೀರನ್ನು ಸೇವಿಸಿ. ಇದು ರುಚಿಕರವಷ್ಟೇ ಅಲ್ಲ, ಆರೋಗ್ಯಕರವು ಸಹ ಹೌದು.

ಗಿಡ ಮೂಲಿಕೆಗಳನ್ನು ಹೊಂದಿರುವ ಟೀ ಬ್ಯಾಗ್

ಗಿಡ ಮೂಲಿಕೆಗಳನ್ನು ಹೊಂದಿರುವ ಟೀ ಬ್ಯಾಗ್

ಗಿನ್ಸೆಂಗ್ ಮತ್ತು ದಾಸವಾಳಗಳಂತಹ ಗಿಡ ಮೂಲಿಕೆಗಳ ಟೀಯನ್ನು ಒಮ್ಮೆ ಪ್ರಯತ್ನಿಸಿ. ಇದಕ್ಕಾಗಿ ನೀವು ಪ್ಲೇನ್ ಗ್ರೀನ್ ಟಿಯನ್ನು ಸಹ ಬಳಸಬಹುದು.

ಗುಲಾಬಿಯ ಎಸಳುಗಳು

ಗುಲಾಬಿಯ ಎಸಳುಗಳು

ನೀವು ಸೇವಿಸುವ ನೀರು ರುಚಿಕರವಾಗಿಯು ಮತ್ತು ಸುವಾಸನೆ ಭರಿತವಾಗಿಯು ಇರಬೇಕು ಎಂದಾದಲ್ಲಿ ಅದಕ್ಕೆ ಸ್ವಲ್ಪ ಗುಲಾಬಿ ಹೂಗಳ ಎಸಳುಗಳನ್ನು ಹಾಕಿ. ಗುಲಾಬಿಯ ನೀರು ನಿಮ್ಮ ತ್ವಚೆಗೆ ತುಂಬಾ ಒಳ್ಳೆಯದು, ಅದು ನಿಮ್ಮ ಅಂಗುಳಿನ ಮೇಲೆ ತಂಪಾದ ಪರಿಣಾಮವನ್ನು ಬೀರುತ್ತದೆ.

ತುಳಸಿ ನೀರು

ತುಳಸಿ ನೀರು

ನೀವು ಸೇವಿಸಬೇಕಾದ ನೀರಿಗೆ ಸ್ವಲ್ಪ ತುಳಸಿಯನ್ನು ಜಜ್ಜಿ ಹಾಕಿ. ಹಿಂದೂ ಸಂಪ್ರದಾಯದ ಪ್ರಕಾರ ತುಳಸಿಯನ್ನು ಬೆರೆಸಿದ ನೀರು "ಪವಿತ್ರ" ಮತ್ತು "ಶುದ್ಧ"ಗೊಳ್ಳುತ್ತದೆಯಂತೆ. ಇದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಶೀತ, ಇನ್‍ಫೆಕ್ಷನ್ ವಿರುದ್ಧ ಹೋರಾಡುತ್ತದೆ.

English summary

10 Ways To Make Water Taste Better

Do you hate drinking water though you know it is healthy and a necessity? Then you probably do not like the taste of water. Don't frown, many people dislike the tastelessness of water. However, no one can deny that water has innumerable health benefits. So you must try ways to make water taste better so that you can reap its benefits.
X
Desktop Bottom Promotion