ಆಯುರ್ವೇದ ಟಿಪ್ಸ್: ಬೆಳಿಗ್ಗೆ ಬಿಸಿ ನೀರು ಕುಡಿಯುವುದನ್ನು ಮರೆಯದಿರಿ

By: manu
Subscribe to Boldsky

ನಾವು ಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿದ ಬಳಿಕ ಚಹಾ ಅಥವಾ ಕಾಫಿ ಕುಡಿಯುತ್ತೇವೆ. ಇನ್ನು ಕೆಲವರು ಯಾವುದಾದರೂ ಹಣ್ಣಿನ ಜ್ಯೂಸ್ ಕುಡಿಯುತ್ತಾರೆ. ಬಳಿಕ ಉಪಹಾರ ಸೇವಿಸುತ್ತೇವೆ. ಹಾಗಾದರೆ ನೀರು ಕುಡಿಯುವುದು ಯಾವಾಗ ಎನ್ನುವ ಪ್ರಶ್ನೆ ಕಾಡುತ್ತದೆ. ಬಿಸಿ ನೀರಿನಲ್ಲಿದೆ ಉತ್ತಮ ಆರೋಗ್ಯದ ಸೂತ್ರ

ಕೆಲವರು ಬೆಳಿಗ್ಗೆ ಎದ್ದು ತಣ್ಣೀರು ಕುಡಿಯುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಬೆಳಿಗ್ಗೆ ಬಿಸಿ ನೀರು ಕುಡಿಯಬೇಕು. ಬಿಸಿ ನೀರು ಕುಡಿಯುವುದರಿಂದ ದೇಹಕ್ಕೆ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಮತ್ತು ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ ಎಂದು ಆಯುರ್ವೇದವು ಹೇಳುತ್ತದೆ. ಬೆಳಿಗ್ಗೆ ಹಾಗೂ ರಾತ್ರಿ ವೆಳೆ ಬಿಸಿ ನೀರನ್ನು ಕುಡಿಯುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ನಿಮಗೆ ಸಿಗುವುದು.     ಆರೋಗ್ಯದ ದೃಷ್ಟಿಯಿಂದ, ದಿನನಿತ್ಯ ಬಿಸಿ ನೀರು ಸೇವಿಸಿ

ಬಿಸಿ ನೀರು ಕಫದ ಸಮತೋಲನವನ್ನು ಕಾಪಾಡುವುದರಿಂದ ಹಲವಾರು ರೀತಿಯ ಕಾಯಿಲೆಗಳನ್ನು ಇದು ನಿವಾರಿಸುತ್ತದೆ. ಬನ್ನಿ ಬೆಳಿಗ್ಗೆ ಬಿಸಿ ನೀರನ್ನು ಕುಡಿದರೆ ದೇಹಕ್ಕೆ ಯಾವೆಲ್ಲಾ ಲಾಭಗಳು ಸಿಗಲಿದೆ ಎನ್ನುವ ಬಗ್ಗೆ ನಾವು ಈ ಲೇಖನದಲ್ಲಿ ತಿಳಿದುಕೊಳ್ಳುವ.....  

ಜೀರ್ಣಕ್ರಿಯೆಗೆ ನೆರವು

ಜೀರ್ಣಕ್ರಿಯೆಗೆ ನೆರವು

ಊಟದ ಬಳಿಕ ನೀರು ಕುಡಿಯುವುದು ಹೆಚ್ಚಿನವರ ಅಭ್ಯಾಸವಾಗಿದ. ಆದರೆ ತಣ್ಣೀರು ಕುಡಿಯುವ ಬದಲು ಬಿಸಿ ನೀರು ಕುಡಿಯಿರಿ. ಇದು ಜೀರ್ಣಕ್ರಿಯೆಗೆ ನೆರವಾಗುವುದು.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ಬೆಳಿಗ್ಗೆ ಬೇಗನೆ ಬಿಸಿ ನೀರನ್ನು ಕುಡಿದರೆ ಅದರಿಂದ ಕರುಳಿನ ಕ್ರಿಯೆಗಳು ಸರಾಗವಾಗಿ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ.

ಗಂಟಲು ನೋವು ಶಮನ

ಗಂಟಲು ನೋವು ಶಮನ

ಗಂಟಲು ನೋವಿನಿಂದ ಬಳಲುತ್ತಿರುವವರು ನೈಸರ್ಗಿಕವಾಗಿ ಪರಿಹಾರ ಪಡೆಯಬೇಕಾದರೆ ಬೆಳಿಗ್ಗೆ ಬಿಸಿ ನೀರನ್ನು ಕುಡಿಯಬೇಕು. ಬಿಸಿ ನೀರು ಕುಡಿಯುವುದರಿಂದ ಶ್ವಾಸನಾಳದಲ್ಲಿರುವ ಲೋಳೆಯು ಹೊರಹೋಗುತ್ತದೆ ಮತ್ತು ಗಂಟಲಿನ ನೋವನ್ನು ನಿವಾರಿಸುತ್ತದೆ.

ಮುಟ್ಟಿನ ವೇಳೆ ಉಂಟಾಗುವ ಸ್ನಾಯು ಸೆಳೆತ ನಿವಾರಣೆ

ಮುಟ್ಟಿನ ವೇಳೆ ಉಂಟಾಗುವ ಸ್ನಾಯು ಸೆಳೆತ ನಿವಾರಣೆ

ಮುಟ್ಟಿನ ವೇಳೆ ಸ್ನಾಯು ಸೆಳೆತದ ಸಮಸ್ಯೆ ಎದುರಿಸುವವರು ಬಿಸಿ ನೀರನ್ನು ಕುಡಿದರೆ ಅದರಿಂದ ಪರಿಹಾರ ಪಡೆಯಬಹುದಾಗಿದೆ. ಇದು ಹೊಟ್ಟೆಯಲ್ಲಿನ ಸ್ನಾಯುಗಳ ಶಮನಗೊಳಿಸಿ, ರಕ್ತದ ಹರಿವನ್ನು ಹೆಚ್ಚಿಸಿ ಮತ್ತು ಸ್ನಾಯು ಸೆಳೆತದಿಂದ ವಿರಾಮ ಸಿಗುವುದು.

ವಿಷ ಹೊರಹಾಕುವುದು

ವಿಷ ಹೊರಹಾಕುವುದು

ಬೆಳಿಗ್ಗೆ ಬಿಸಿ ನೀರನ್ನು ಕುಡಿಯುವುದರಿಂದ ದೇಹದಲ್ಲಿರುವ ವಿಷವನ್ನು ಹೊರಹಾಕಲು ನೆರವಾಗುವುದು. ಬಿಸಿ ನೀರು ಬೇಗನೆ ಆಹಾರವನ್ನು ವಿಘಟಿಸುವುದು. ಆದರೆ ತಣ್ಣೀರು ಆಹಾರವನ್ನು ವಿಘಟಿಸಲು ಸಮಯ ತೆಗೆದುಕೊಳ್ಳುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುವುದು

ತೂಕ ಕಳೆದುಕೊಳ್ಳಲು ನೆರವಾಗುವುದು

ದಿನಾ ಬೆಳಿಗ್ಗೆ ಎದ್ದು ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು. ಇದು ಚಯಾಪಚಾಯ ಕ್ರಿಯೆಯನ್ನು ವೃದ್ಧಿಸಿ, ಕ್ಯಾಲರಿ ದಹಿಸಿ ತೂಕ ಕಳೆದುಕೊಳ್ಳಲು ನೆರವಾಗುವುದು.

ದೇಹದ ಬೊಜ್ಜು

ದೇಹದ ಬೊಜ್ಜು

ದೇಹದ ಬೊಜ್ಜು ಕರಗಿಸಬೇಕಾದರೆ ಊಟದ ನಂತರ ಲಿಂಬೆರಸ ಮಿಶ್ರಿತ ಬಿಸಿ ನೀರಿನ ಸೇವನೆ ಮಾಡುವುದು ಸೂಕ್ತ. ಅದರಲ್ಲೂ ಎಣ್ಣೆ ಅಥವಾ ಜಿಡ್ಡಿನ ಪದಾರ್ಥಗಳ ಸೇವನೆ ಮಾಡಿದರೆ ಬಿಸಿ ನೀರನ್ನು ಕುಡಿದರೆ ಉತ್ತಮ. ಆರೋಗ್ಯ ಟಿಪ್ಸ್: ಹೊಟ್ಟೆಯ ಬೊಜ್ಜು ಕರಗಿಸುವ, ಅದ್ಭುತ ಜ್ಯೂಸ್

ಜೇನು ಮತ್ತು ಲಿಂಬೆರಸ

ಜೇನು ಮತ್ತು ಲಿಂಬೆರಸ

ಬಿಸಿ ನೀರಿನೊಂದಿಗೆ ಜೇನು ಮತ್ತು ಲಿಂಬೆರಸ ಬೆರೆಸಿ ಕುಡಿದರೆ ದೇಹದ ತೂಕ ಕಡಿಮೆಯಾಗುವುದಲ್ಲದೆ ರೋಗ ನಿರೋಧಕ ಶಕ್ತಿಯೂ ಹೆಚ್ಚುವಂತೆ ಮಾಡುತ್ತದೆ.ಲಿಂಬೆ+ಜೇನು ಬೆರೆಸಿದ ನೀರು ಸೇವಿಸಿ-ತೂಕ ಇಳಿಸಿಕೊಳ್ಳಿ!

 
English summary

Ayurveda Suggests: Drink Hot Water And Get Rid Of These Diseases

Drinking hot water, especially early in the morning and at night, provides a lot of health benefits. In ayurveda it is believed that hot water brings about a balance in the 'kapha' which in turn helps in preventing several diseases. So today in this article we have listed how drinking hot water helps in getting rid of a few of the common health problems. Take a look.
Please Wait while comments are loading...
Subscribe Newsletter