ಆರೋಗ್ಯ ಟಿಪ್ಸ್: ಕೆಮ್ಮು, ಶೀತ, ಜ್ವರಕ್ಕೆಲ್ಲಾ ಆಲ್ಕೋಹಾಲ್ ಚಿಕಿತ್ಸೆ!

By: Hemanth
Subscribe to Boldsky

ಗ್ರಾಮೀಣ ಪ್ರದೇಶಗಳಲ್ಲಿ ಶೀತ, ಜ್ವರ ಹಾಗೂ ಇತರ ಸಣ್ಣ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ಆಗ ಮನೆಮದ್ದು ಮಾಡುವುದು ಸಾಮಾನ್ಯವಾಗಿದೆ. ವೈದ್ಯರು ತುಂಬಾ ದೂರವಿರುವ ಕಾರಣ ಮತ್ತು ಕೆಲವೊಂದು ಸಲ ರಾತ್ರಿ ವೇಳೆ ವೈದ್ಯರು ಲಭ್ಯರಾಗದೆ ಇರುವ ಕಾರಣದಿಂದಾಗಿ ಮನೆಮದ್ದನ್ನು ಬಳಸುವುದು ಸಾಮಾನ್ಯ. ಕೆಲವೊಂದು ಸಲ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ.

ಹೊಟ್ಟೆಯ ಹೊಕ್ಕಳು: ನೀವು ತಿಳಿದಿರದ ಅಮೋಘ ಸಂಗತಿಗಳು

ನಾಭಿಯ (ಹೊಕ್ಕಳು) ಮೇಲೆ ಕೆಲವು ಹನಿ ಎಣ್ಣೆ ಉಜ್ಜಿಕೊಂಡರೆ ಅದರಿಂದ ಹಲವಾರು ಅನಾರೋಗ್ಯಗಳು ದೂರವಾಗುವುದು. ಆಲ್ಕೋಹಾಲ್ ಅನ್ನು ನಾಭಿಗೆ ಹಾಕಿಕೊಂಡು ಯಾವ ರೀತಿಯ ಅನಾರೋಗ್ಯ ಸಮಸ್ಯೆ ನಿವಾರಣೆ ಮಾಡಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಇದು ಹೇಗೆ ಚಿಕಿತ್ಸೆ ನೀಡುವುದು?

ಇದು ಹೇಗೆ ಚಿಕಿತ್ಸೆ ನೀಡುವುದು?

ನಿಮಗೆ ಕೆಮ್ಮು, ಶೀತ, ಜ್ವರ ಅಥವಾ ಹೊಟ್ಟೆ ನೋವು ಕಾಣಿಸಿಕೊಂಡಿದ್ದರೆ ಇದನ್ನು ಪ್ರಯತ್ನಿಸಬಹುದು. ಈ ಮನೆಮದ್ದನ್ನು ಬಳಸಿಯೂ ಸಮಸ್ಯೆ ಹಾಗೆ ಉಳಿದಿದ್ದರೆ ವೈದ್ಯರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆಯುವುದು ಸರಿಯಾದ ವಿಧಾನವಾಗಿದೆ.

 ಮನೆಮದ್ದನ್ನು ಬಳಸುವುದು ಹೇಗೆ?

ಮನೆಮದ್ದನ್ನು ಬಳಸುವುದು ಹೇಗೆ?

ಆಲ್ಕೋಹಾಲ್ ನಲ್ಲಿ ಅದ್ದಿರುವಂತಹ ಹತ್ತಿಯ ಉಂಡೆಯನ್ನು ನಾಭಿಯ ಮೇಲಿಡಬೇಕು. (ನಾಭಿಯ ಸುತ್ತ ಯಾವುದೇ ರೀತಿಯ ಗಾಯ ಅಥವಾ ತರುಚಿದ ಗುರುತು ಇದ್ದರೆ ಆಲ್ಕೋಹಾಲ್ ನಿಂದಾಗಿ ಉರಿ ಉಂಟಾಬಹುದು.)

 ಎಷ್ಟು ಆಲ್ಕೋಹಾಲ್ ಬೇಕು?

ಎಷ್ಟು ಆಲ್ಕೋಹಾಲ್ ಬೇಕು?

ಎರಡು ಚಮಚ ಆಲ್ಕೋಹಾಲ್‌ನಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಳ್ಳ. ಇದನ್ನು ನಾಭಿಯ ಮೇಲಿಡಿ. ಸ್ವಲ್ಪ ಸಮಯ ವಿಶ್ರಾಂತಿ ಮಾಡಿ 10-20 ನಿಮಿಷ ಬಿಟ್ಟು ಇದನ್ನು ತೆಗೆಯಿರಿ.

ಇದನ್ನು ಯಾರು ಮಾಡಬಾರದು?

ಇದನ್ನು ಯಾರು ಮಾಡಬಾರದು?

ನಿಮ್ಮ ಚರ್ಮವು ತುಂಬಾ ಸೂಕ್ಷ್ಮವಾಗಿದ್ದರೆ ಮತ್ತು ಆಲ್ಕೋಹಾಲ್ ನಿಂದಾಗಿ ಅಲರ್ಜಿ ಉಂಟಾಗುತ್ತಾ ಇದ್ದರೆ ಈ ಮನೆಮದ್ದನ್ನು ಬಳಸಬೇಡಿ.

ಇದರಿಂದ ಯಾವುದೇ ಅಡ್ಡಪರಿಣಾಮವಿದೆಯಾ?

ಇದರಿಂದ ಯಾವುದೇ ಅಡ್ಡಪರಿಣಾಮವಿದೆಯಾ?

ಆರೋಗ್ಯವಾಗಿರುವಂತಹ ವ್ಯಕ್ತಿಗಳಲ್ಲಿ ಇದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ಅಡ್ಡಪರಿಣಾಮದ ಬಗ್ಗೆ ನಿಮಗೆ ಚಿಂತೆಯಾಗುತ್ತಾ ಇದ್ದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

English summary

Why Rub Alcohol In Navel For Cold?

In rural areas, where there are no adequate medical facilities, people first try folk remedies. They may not sound rational or seem like logical practices but some reports say that they do work.
Story first published: Wednesday, July 26, 2017, 23:31 [IST]
Subscribe Newsletter