ಹಾಲು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಈ ಸಂಗತಿಗಳು ತಿಳಿದಿರಲಿ...

By: manu
Subscribe to Boldsky

ಹಾಲು ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಪಾನೀಯವಾಗಿದೆ. ಬೆಳೆಯುವ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಪ್ರತಿಯೊಬ್ಬರಿಗೂ ಬೇಕಾಗುವ ಪೋಷಕಾಂಶಗಳು ಇದರಲ್ಲಿದೆ. ಕೆಲವರು ಹಾಲನ್ನು ಬೆಳಿಗ್ಗಿನ ಉಪಹಾರಕ್ಕೆ ಸೇವಿಸುತ್ತಾರೆ. ಇನ್ನು ಕೆಲವರು ಹಾಲನ್ನು ರಾತ್ರಿ ಊಟದ ಬಳಿಕ ಸೇವನೆ ಮಾಡುತ್ತಾರೆ. ಆದರೆ ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಎಂದು ತಿಳಿಯುವುದು ಅಗತ್ಯವಾಗಿದೆ.

ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಲಾಕ್ಟೋಸ್ ನಿಮ್ಮ ದೇಹಕ್ಕೆ ಆಗಿಬರದೇ ಇದ್ದಲ್ಲಿ ಖಂಡಿತವಾಗಿಯೂ ಹಾಲನ್ನು ಸೇವಿಸಬೇಡಿ. ಹಾಲನ್ನು ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಹಾಲಿನಿಂದ ಯಾವ ರೀತಿಯ ಲಾಭಗಳು ಬೇಕು ಎಂದು ತಿಳಿದುಕೊಂಡು ಹಾಲನ್ನು ಸೇವಿಸಿದರೆ ಆಗ ಯಾವ ಸಮಯದಲ್ಲಿ ಹಾಲನ್ನು ಸೇವಿಸಬಹುದು ಎಂದು ತಿಳಿಯಬಹುದು....  

ಬೆಳಗಿನ ಉಪಹಾರದ ಜೊತೆ

ಬೆಳಗಿನ ಉಪಹಾರದ ಜೊತೆ

ಉಪಹಾರದಲ್ಲಿ ಹೆಚ್ಚಿನ ಪ್ರೋಟೀನ್ ಬೇಕೆಂದು ನಿಮಗೆ ಅನಿಸಿದರೆ ಆಗ ಬೆಳಿಗ್ಗೆ ಹಾಲನ್ನು ಸೇವಿಸಿ. ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅನ್ನು ಹೊರತುಪಡಿಸಿ ಹಾಲಿನಲ್ಲಿ ಪೊಟಾಶೀಯಂ, ಮೆಗ್ನಿಶಿಯಂ, ಪ್ರೋಸ್ಪರಸ್ ಮತ್ತು ವಿಟಮಿನ್ ಲಭ್ಯವಿದೆ.

ಜಿಮ್‌ಗೆ ಹೋಗಿ ಬಂದ ನಂತರ

ಜಿಮ್‌ಗೆ ಹೋಗಿ ಬಂದ ನಂತರ

ಬೆಳಿಗ್ಗೆ ಜಿಮ್‌ಗೆ ಹೋಗಿ ವ್ಯಾಯಾಮ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದರೆ ಖಂಡಿತವಾಗಿಯೂ ನೀವು ಹಾಲನ್ನು ಕುಡಿಯಿರಿ. ಇದರಿಂದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಲಭ್ಯವಾಗುತ್ತದೆ. ಮೂಳೆ ಮತ್ತು ಸ್ನಾಯುಗಳಿಗೆ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಬೇಕಾಗುತ್ತದೆ. ಇದರಿಂದ ದೇಹವು ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಹಸಿವನ್ನು ನಿಯಂತ್ರಿಸಬೇಕೆಂದರೆ

ಹಸಿವನ್ನು ನಿಯಂತ್ರಿಸಬೇಕೆಂದರೆ

ಹೊಟ್ಟೆ ತುಂಬಿಸಿಕೊಂಡು ದಿನವಿಡೀ ಹಸಿವನ್ನು ನಿಯಂತ್ರಿಸಬೇಕೆಂದು ಇದ್ದರೆ ಬೆಳಿಗ್ಗೆ ಹಾಲು ಕುಡಿಯಿರಿ. ಹಾಲು ಕುಡಿದ ಬಳಿಕ ಹೊಟ್ಟೆಯುಬ್ಬರ ಕಾಣಿಸಿಕೊಂಡರೆ ಬೆಳಿಗ್ಗೆ ಹಾಲು ಕುಡಿಯುವುದನ್ನು ಕಡೆಗಣಿಸಿ.

ನಿದ್ರಾಹೀನತೆಯ ಸಮಸ್ಯೆಯಿದ್ದರೆ

ನಿದ್ರಾಹೀನತೆಯ ಸಮಸ್ಯೆಯಿದ್ದರೆ

ನಿಮಗೆ ನಿದ್ರಾಹೀನತೆಯ ಸಮಸ್ಯೆಯಿದ್ದರೆ ಸರಿಯಾದ ಸಮಯಕ್ಕೆ ನಿದ್ರೆ ಬರದೇ ಇದ್ದರೆ ರಾತ್ರಿ ಮಲಗುವ ಮೊದಲು ಬಿಸಿ ಹಾಲನ್ನು ಸೇವಿಸಿ. ಇದರಿಂದ ನಿಮಗೆ ಒಳ್ಳೆಯ ನಿದ್ರೆ ಬರುವುದು.

ಆಯಾಸವಾಗಿದ್ದರೆ ರಾತ್ರಿ ವೇಳೆ ಹಾಲು ಕುಡಿಯಿರಿ

ಆಯಾಸವಾಗಿದ್ದರೆ ರಾತ್ರಿ ವೇಳೆ ಹಾಲು ಕುಡಿಯಿರಿ

ದಿನವಿಡೀ ಕೆಲಸ ಮಾಡಿದ ಬಳಿಕ ತುಂಬಾ ಆಯಾಸವಾಗಿದ್ದರೆ ರಾತ್ರಿ ವೇಳೆ ಹಾಲು ಕುಡಿಯಿರಿ. ಇದರಲ್ಲಿ ಟ್ರಿಪ್ಟೊಫಾನ್ ಎನ್ನುವ ಅಮಿನೋ ಆಮ್ಲವಿದೆ. ಮೆದುಳು ಸೆರೊಟೊನಿನ್ ಬಿಡುಗಡೆ ಮಾಡಲು ಇದು ನೆರವಾಗುತ್ತದೆ. ಹಾಲು ನಿಮಗೆ ಆರಾಮವನ್ನು ಒದಗಿಸುತ್ತದೆ.

ತೂಕ ಇಳಿಸಿಕೊಳ್ಳಲು

ತೂಕ ಇಳಿಸಿಕೊಳ್ಳಲು

ತೂಕ ಕಳೆದುಕೊಳ್ಳಲು ಬಯಸುತ್ತಾ ಇದ್ದರೆ ರಾತ್ರಿ ವೇಳೆ ಹಾಲು ಕುಡಿಯಿರಿ. ರಾತ್ರಿ ವೇಳೆ ಹಾಲು ಕುಡಿದರೆ ಅದರಿಂದ ಕೆಲವರಿಗೆ ಅಜೀರ್ಣದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ದಿನನಿತ್ಯ ಒಂದು ಗ್ಲಾಸ್ ಹಾಲು ಕುಡಿಯಿರಿ-ತೂಕ ಇಳಿಸಿಕೊಳ್ಳಿ

ದಿನಕ್ಕೆ 150-200 ಮಿ.ಲೀ. ಹಾಲು ಕುಡಿದರೆ ತುಂಬಾ ಒಳ್ಳೆಯದು

ದಿನಕ್ಕೆ 150-200 ಮಿ.ಲೀ. ಹಾಲು ಕುಡಿದರೆ ತುಂಬಾ ಒಳ್ಳೆಯದು

ಯಾವ ಸಮಯವಾಗಿದ್ದರೂ ಸರಿ. ನಿಮಗೆ ಹಾಲು ಕುಡಿಯಬೇಕು ಎಂದು ಅನಿಸಿದರೆ ಬಿಸಿ ಹಾಲು ಕುಡಿಯಿರಿ. ಬಿಸಿ ಹಾಲು ಜೀರ್ಣಕ್ರಿಯೆಗೆ ಸಹಕಾರಿ. ಅತಿಯಾಗಿ ಹಾಲು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ದಿನಕ್ಕೆ 150-200 ಮಿ.ಲೀ. ಹಾಲು ಕುಡಿದರೆ ತುಂಬಾ ಒಳ್ಳೆಯದು.

English summary

What's The Best Time To Drink Milk: Morning Or Night?

Firstly, drinking milk is a good way to get some calcium and protein. Unless you are lactose intolerant, drinking milk surely helps irrespective of the time of the day you consume. But the time of consumption surely offers certain health benefits. Depending upon what kind of benefit you want from milk, you can time your consumption.
Subscribe Newsletter