Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೊಳಕೆ ಬರಿಸಿದ ಕಾಳುಗಳು-ಮೂರ್ತಿ ಚಿಕ್ಕದಾದರೂ-ಸಿಕ್ಕಾಪಟ್ಟೆ ಪವರ್!
ಮೊಳಕೆ ಬರಿಸಿದ ಕಾಳುಗಳಲ್ಲಿ ಪೌಷ್ಟಿಕಾಂಶ ಅಧಿಕವಿರುತ್ತದೆ ಅನ್ನುವುದು ವೈಜ್ಞಾನಿಕವಾದ ಸತ್ಯವಾಗಿದೆ. ಕಾಳುಗಳನ್ನು ಹಾಗೇ ತಿನ್ನುವ ಬದಲು ಮೊಳಕೆ ಬರಿಸಿ ತಿನ್ನುವುದು ಒಳ್ಳೆಯದು. ಇದರಿಂದ ಹೆಚ್ಚಿನ ಆರೋಗ್ಯಕರ ಲಾಭ ಪಡೆಯಬಹುದು.
ತರಕಾರಿ ಹಾಗೂ ಧಾನ್ಯಗಳಲ್ಲಿ ಸಿಗುವಂತಹ ಪೋಷಕಾಂಶಗಳು ಬೇರೆ ಯಾವುದರಲ್ಲೂ ಸಿಗುವುದಿಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ತರಕಾರಿಗಳು ಪ್ರಕೃತಿದತ್ತವಾಗಿ ಸಿಗುವಂತದ್ದಾಗಿದೆ. ತರಕಾರಿಗಳಿಗಿಂತಲೂ ಮೊಳಕೆ ಬರಿಸಿದ ಕಾಳುಗಳು (ಮೊಳಕೆ ಕಟ್ಟಿದ ಕಾಳು) ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ. ಸಂಶಯವೇ ಬೇಡ! ಮೊಳಕೆ ಕಟ್ಟಿದ ಕಾಳುಗಳು ಆರೋಗ್ಯದ ಖಜಾನೆ
ಇದು ದೇಹವನ್ನು ಎಲ್ಲಾ ರೋಗಗಳಿಂದ ಕಾಪಾಡಿ ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಿಂದ ದಿನನಿತ್ಯದ ಆಹಾರದಲ್ಲಿ ಮೊಳಕೆ ಭರಿಸಿದ ಕಾಳುಗಳನ್ನು ಬಳಸಿಕೊಂಡರೆ ಯಾವೆಲ್ಲಾ ಲಾಭಗಳು ದೇಹಕ್ಕೆ ಸಿಗುತ್ತದೆ ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದೆ... ಮುಂದೆ ಓದಿ....

ಕೂದಲಿನ ಬೆಳವಣಿಗೆ
ಪುರುಷರು ಹಾಗೂ ಮಹಿಳೆಯರಲ್ಲಿ ಕೂದಲು ಉದುರುವುದು ಇಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬೋಳು ತಲೆ ನಿಮಗೆ ಬೇಸರ ಮೂಡಿಸಬಹುದು. ಇದರಿಂದ ಆತ್ಮವಿಶ್ವಾಸ ಕೂಡ ಕಡಿಮೆಯಾಗುತ್ತದೆ. ಇದಕ್ಕಾಗಿ ವಿಟಮಿನ್ ಸಿ ಇರುವ ಆಹಾರ ಸೇವನೆ ಅಗತ್ಯವಾಗಿ ಬೇಕು. ಮೊಳಕೆಯೊಡೆದ ಕಾಳುಗಳಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ. ವಿಟಮಿನ್ ಸಿ ಫ್ರೀ ರ್ಯಾಡಿಕಲ್ ಅನ್ನು ನಾಶ ಮಾಡುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ.

ರಕ್ತಸಂಚಾರ ಉತ್ತಮವಾಗುವುದು
ಬೇರೆ ಯಾವುದೇ ಆಹಾರಗಳು ಮಾಡದಂತಹ ಕೆಲಸ ಮಾಡುವ ಮೊಳಕೆಯೊಡೆದ ಕಾಳುಗಳು ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಮೆದುಳು ಸರಿಯಾಗಿ ಕೆಲಸ ಮಾಡಲು ಮತ್ತು ಕೂದಲಿನ ಬೆಳವಣಿಗೆಗೆ ರಕ್ತಸಂಚಾರವು ಸರಿಯಾಗಿರುವುದು ಅತೀ ಅಗತ್ಯವಾಗಿದೆ.

ಚರ್ಮಕ್ಕೆ ಲಾಭಗಳು
ಮೊಳಕೆಯೊಡೆದ ಕಾಳುಗಳು ಫ್ರೀ ರ್ಯಾಡಿಕಲ್ ನ್ನು ಕೊಂದು ಹಾಕುತ್ತದೆ. ಇದರಿಂದ ಚರ್ಮದ ಕ್ಯಾನ್ಸರ್ ನಂತಹ ರೋಗವನ್ನು ತಡೆಯುತ್ತದೆ. ಮೊಳಕೆಯೊಡೆದ ಕಾಳುಗಳಲ್ಲಿ ಇರುವಂತಹ ವಿಟಮಿನ್ ಸಿ ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸುವುದು. ಇದರಿಂದ ಚರ್ಮದಲ್ಲಿ ಸ್ಥಿತಿಸ್ಥಾಪಕತ್ವವು ನಿರ್ಮಾಣವಾಗಿ ನೀವು ಯುವಕರಂತೆ ಕಾಣುತ್ತೀರಿ.

ಪ್ರೋಟೀನ್‌ನ ಮೂಲ
ದ್ವಿದಳ ಧಾನ್ಯಗಳು ಹಾಗೂ ಧಾನ್ಯಗಳನ್ನು ಮೊಳಕೆ ಭರಿಸಿದರೆ ಅದರಲ್ಲಿರುವ ಪ್ರೋಟೀನ್ ಗುಣಮಟ್ಟವು ಹೆಚ್ಚಾಗುತ್ತದೆ. ಕಾಳುಗಳನ್ನು ನೆನೆಸಿದಾಗ ಮತ್ತು ಮೊಳಕೆ ಭರಿಸಿದಾಗ ಅದರಲ್ಲಿರುವ ಪ್ರೋಟೀನ್ ಹೆಚ್ಚಾಗಿ ಪೋಷಕಾಂಶಗಳ ಗುಣಮಟ್ಟವು ವೃದ್ಧಿಯಾಗುವುದು. ಸ್ನಾಯುಗಳು ಬೆಳೆಯಲು ಮತ್ತು ಅವುಗಳ ಪುನರ್ ನಿರ್ಮಾಣಕ್ಕೆ ಪ್ರೋಟೀನ್ ಅಗತ್ಯವಾಗಿ ಬೇಕೇಬೇಕು. ಇದರಿಂದ ಮೊಳಕೆ ಭರಿಸಿದ ಕಾಳುಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಂಡು ಪ್ರೋಟೀನ್ ನ ಕೊರತೆಯನ್ನು ಕಡಿಮೆ ಮಾಡಿಕೊಳ್ಳಿ.

ಕ್ಯಾನ್ಸರ್ ತಡೆಗಟ್ಟುವುದು
ದೇಹದಲ್ಲಿ ಹೆಚ್ಚಿನ ಆಮ್ಲೀಯತೆ ಉಂಟಾಗುವುದರಿಂದ ಕ್ಯಾನ್ಸರ್ ನಂತಹ ಹಲವಾರು ರೋಗಗಳು ಬರುತ್ತದೆ. ಮೊಳಕೆ ಭರಿಸಿದ ಧಾನ್ಯಗಳು ದೇಹದಲ್ಲಿರುವ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ.

ತೂಕ ಇಳಿಕೆಗೆ ಒಳ್ಳೆಯದು
ಮೊಳಕೆ ಬರಿಸಿದ ಕಾಳುಗಳು ಹೆಚ್ಚಿನ ಪ್ರಮಾಣದ ನಾರಿನಂಶ ಹೊಂದಿದ್ದು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ. ಇದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಅತ್ಯಂತ ಸಹಕಾರಿಯಾಗಿದೆ.

ಪೋಷಕಾಂಶಗಳು ಸಮೃದ್ಧವಾಗಿರುತ್ತದೆ
ಮೊಳಕೆ ಕಾಳುಗಳಲ್ಲಿ ಎ ಜೀವಸತ್ವ, ಸಿ ಜೀವಸತ್ವ, B1 ಜೀವಸತ್ವ, B6 ಜೀವಸತ್ವ ಮತ್ತು ವಿಟಾಮಿನ್ ಕೆ ಅಧಿಕವಾಗಿ ಇರುತ್ತದೆ. ಅಲ್ಲದೇ ಕಬ್ಬಿಣ, ರಂಜಕ (ರಾಸಾಯನಿಕ ಮೂಲವಸ್ತು), ಮ್ಯಾಗ್ನಿಷಿಯಂ, ಪೊಟಾಷ್ಯಿಯಂ, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ಖನಿಜಾಂಶಗಳನ್ನು ಹೇರಳವಾಗಿ ಹೊಂದಿದೆ. ಇವುಗಳ ಜೊತೆಗೆ ಕಾಳುಗಳು ನಾರಿನಂಶ, ಫೋಲೆಟ್ ಮತ್ತು ಒಮೆಗಾ -3 ಕೊಬ್ಬಿನಂಶವನ್ನು ಹೊಂದಿರುತ್ತದೆ.

ವಿಟಮಿನ್‍ಗಳ ಆಗರ
ಮೊಳಕೆ ಕಟ್ಟುವ ಪ್ರಕ್ರಿಯೆಯಿಂದಾಗಿ ವಿಟಮಿನ್‍ಗಳು ವೃದ್ಧಿಗೊಳ್ಳುತ್ತವೆ. ಅದರಲ್ಲು ವಿಟಮಿನ್ ಎ, ಬಿ-ಕಾಂಪ್ಲೆಕ್ಸ್, ಸಿ ಮತ್ತು ಇ ಗಳು ವೃದ್ಧಿಗೊಳ್ಳುತ್ತವೆ. ಕೆಲವೊಂದು ಅಧ್ಯಯನಗಳ ಪ್ರಕಾರ ಮೊಳಕೆ ಕಟ್ಟಿದಾಗ ಆ ಕಾಳಿನಲ್ಲಿರುವ ವಿಟಮಿನ್ ಪ್ರಮಾಣವು ಅದರಲ್ಲಿನ ಮೂಲ ಪ್ರಮಾಣಕ್ಕಿಂತ 20 ಪಟ್ಟು ಹೆಚ್ಚಾಗುತ್ತದೆ ಎಂದು ತಿಳಿದು ಬಂದಿವೆ.

ಕೂದಲಿಗೆ ಅತ್ಯುತ್ತಮ
ನಿಮ್ಮ ಕೂದಲಿನ ಆರೋಗ್ಯಕ್ಕೆ ಮೊಳಕೆ ಕಾಳುಗಳು ಅತ್ಯುತ್ತಮವಾಗಿದೆ. ವಿಟಮಿನ್ ಸಿ ಅಂಶವನ್ನು ಇದು ಒಳಗೊಂಡಿದ್ದು, ಕೂದಲನ್ನು ಉದ್ದ ಮತ್ತು ದಟ್ಟವಾಗಿಸುತ್ತದೆ. ಮುಕ್ತ ರಾಡಿಕಲ್ಗಳ ಸಮಸ್ಯೆಯಿಂದ ಮುಕ್ತಿಗೊಳಿಸಿ ಕೂದಲನ್ನು ತೆಳ್ಳಗಾಗಿಸುವ ಅಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಬಿಳಿ ಕೂದಲಿನ ಸಮಸ್ಯೆಯನ್ನು ದೂರಗೊಳಿಸುತ್ತದೆ.



Click it and Unblock the Notifications