ಮೂತ್ರವನ್ನು ಹಿಡಿದಿಟ್ಟುಕೊಂಡರೆ, ಆರೋಗ್ಯಕ್ಕೇ ಅಪಾಯಕಾರಿ

By: Arshad
Subscribe to Boldsky

ಉತ್ತಮ ಆರೋಗ್ಯಕ್ಕೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಮೂತ್ರ ವಿಸರ್ಜಿಸಬೇಕು ಎಂದು ವೈದ್ಯರು ಹೇಳುತ್ತಾರೆ....ಆದರೆ ಇದು ಎಲ್ಲರಿಗೂ, ಎಲ್ಲಾ ಸಮಯದಲ್ಲಿ ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಪ್ರಯಾಣದ ಸಮಯದಲ್ಲಿ, ಕೆಲಸದ ಒತ್ತಡ ಸಮಯದಲ್ಲಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಕುಳಿತೇ ಅಥವಾ ನಿಂತೇ ಇರಬೇಕಾಗಿರುವ ಕಾರಣ ನಿಸರ್ಗದ ಕರೆಗೆ ಓಗೊಡಲು ಸಾಧ್ಯವಾಗುವುದಿಲ್ಲ. ಮೂತ್ರದಲ್ಲಿ ಕಂಡುಬರುವ ಅಸಹ್ಯಕರ ದುರ್ವಾಸನೆಗೆ ಕಾರಣವೇನು?

ಆದರೆ ಹೀಗೆ ಮೂತ್ರವನ್ನು ಹೆಚ್ಚು ಕಾಲ ತಡೆಹಿಡಿದಿಟ್ಟುಕೊಳ್ಳುವುದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೆಚ್ಚು ಹೊತ್ತು ಮೂತ್ರ ತಡೆದು ಹಿಡಿದಿಟ್ಟುಕೊಳ್ಳುವ ಬಳಿಕ ಮೂತ್ರದ ಬಣ್ಣ ಗಾಢ ಹಳದಿ ಬಣ್ಣಕ್ಕೆ ತಿರುಗುತ್ತದೆ. ಮುಜುಗರ ತರುವ 'ಮೂತ್ರ ಸಮಸ್ಯೆ'! ಇನ್ನು ಚಿಂತೆ ಬಿಡಿ....

ಇದರ ಹೊರತಾಗಿ ಬೇರಾವುದೇ ತೊಂದರೆ ತಕ್ಷಣಕ್ಕೆ ಕಾಣದೇ ಇರುವ ಕಾರಣ ಹೆಚ್ಚಿನವರು ಇದನ್ನು ತಮ್ಮ ಸಾಮರ್ಥ್ಯವೆಂದೇ ತಿಳಿದು ತಮ್ಮ ಅಲಕ್ಷ್ಯತನವನ್ನು ಮುಂದುವರೆಸುತ್ತಾರೆ. ಆದರೆ ಈ ಅಭ್ಯಾಸ ಎಷ್ಟು ಅನಾರೋಗ್ಯಕರ ಎಂಬ ವಿಷಯಗಳ ಮೇಲೆ ಇಂದು ಬೋಲ್ಡ್ ಸ್ಕೈ ತಂಡ ಬೆಳಕು ಬೀರುತ್ತಿದೆ.....   

ಮೂತ್ರನಾಳದ ಸೋಂಕು (Urinary Tract Infection)

ಮೂತ್ರನಾಳದ ಸೋಂಕು (Urinary Tract Infection)

ಎರಡು ಗಂಟೆಗಳಿಗೂ ಹೆಚ್ಚು ಹೊತ್ತು ಮೂತ್ರ ಹೊರಹೋಗದೇ ಇದ್ದರೆ ಈ ಮೂತ್ರ ಹೆಚ್ಚು ಹೆಚ್ಚು ಸಾಂದ್ರೀಕೃತಗೊಳ್ಳುತ್ತಾ ಹೋಗುತ್ತದೆ. ಈ ಸಾಂದ್ರೀಕೃತ ಮೂತ್ರದಿಂದ ಅಪಾಯಕಾರಿ ಬ್ಯಾಕ್ಟೀರಿಯಾಗಳ ಸೋಂಕು ತಗಲುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಇದು ನೇರವಾಗಿ ಮೂತ್ರನಾಳದ ಸೋಂಕಿಗೆ ಕಾರಣವಾಗುತ್ತದೆ. ಉರಿಮೂತ್ರ ಕಡೆಗಣಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ

ನೋವುಭರಿತ ಮೂತ್ರವಿಸರ್ಜನೆ

ನೋವುಭರಿತ ಮೂತ್ರವಿಸರ್ಜನೆ

ಹೆಚ್ಚು ಹೊತ್ತು ತಡೆಹಿಡಿದ ಮೂತ್ರ ಹೆಚ್ಚು ಸಾಂದ್ರೀಕೃತ ಮತ್ತು ಹೆಚ್ಚು ಲವಣಯುಕ್ತವಾಗಿರುತ್ತದೆ. ಅಲ್ಲದೇ ಮೂತ್ರಕೋಶ ಸಾಮರ್ಥ್ಯಕ್ಕೂ ಮೀರಿ ತುಂಬಿಕೊಂಡಿದ್ದ ಕಾರಣದಿಂದ ನೋವು ಎದುರಾಗುತ್ತದೆ ಹಾಗೂ ಮೂತ್ರನಾಳದ ಮೂಲಕ ಅತಿಹೆಚ್ಚಿನ ಒತ್ತಡದಲ್ಲಿ ದ್ರವವನ್ನು ಹೊರದೂಡಲು ಯತ್ನಿಸುತ್ತದೆ.

ನೋವುಭರಿತ ಮೂತ್ರವಿಸರ್ಜನೆ

ನೋವುಭರಿತ ಮೂತ್ರವಿಸರ್ಜನೆ

ಈ ಯತ್ನ ಹೆಚ್ಚಿನ ನೋವು ನೀಡುತ್ತದೆ. ಕೆಲವೊಮ್ಮೆ ಮೂತ್ರ ಹೊರಹೋಗುವ ಭಾಗದಲ್ಲಿ ಬೆಂಕಿ ತಗುಲಿದಂತೆ ಉರಿಯನ್ನೂ ಉಂಟುಮಾಡಬಹುದು.

ಜ್ವರ

ಜ್ವರ

ಮೂತ್ರವಿಸರ್ಜನೆಯ ಮುಖ್ಯ ಉದ್ದೇಶವೆಂದರೆ ದೇಹದಿಂದ ಬ್ಯಾಕ್ಟೀರಿಯಾಗಳನ್ನು ಹೊರಹಾಕುವುದು. ಇದನ್ನು ತಡೆಹಿಡಿದಷ್ಟೂ ಬ್ಯಾಕ್ಟೀರಿಯಾಗಳು ದೇಹದಲ್ಲಿಯೇ ಉಳಿದು ಉಪಟಳ ಹೆಚ್ಚಿಸಲು ಕಾರಣವಾಗುತ್ತವೆ. ಈ ಉಪಟಳದಿಂದ ಪಾರಾಗಲು ದೇಹ ಅನಿವಾರ್ಯವಾಗಿ ದೇಹದ ತಾಪಮಾನವನ್ನು ಏರಿಸುತ್ತದೆ. ಇದೇ ಜ್ವರವಾಗಿ ಕಾಡುತ್ತದೆ.ಮನೆ ಔಷಧ- ಒಂದೆರಡು ದಿನಗಳಲ್ಲಿಯೇ 'ವೈರಲ್ ಜ್ವರ' ನಿಯಂತ್ರಣಕ್ಕೆ....

ಮೂತ್ರಪಿಂಡಗಳಲ್ಲಿ ಕಲ್ಲು

ಮೂತ್ರಪಿಂಡಗಳಲ್ಲಿ ಕಲ್ಲು

ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ನಿವಾರಿಸುವುದು ಮೂತ್ರಪಿಂಡಗಳ ಪ್ರಮುಖ ಕೆಲಸ. ಒಂದು ವೇಳೆ ಮೂತ್ರ ಹೊರಹೋಗದೇ ಮೂತ್ರಕೋಶದಲ್ಲಿ ಸಂಗ್ರಹವಾಗತೊಡಗಿದರೆ ಮೂತ್ರಪಿಂಡಗಳಿಗೂ ಶೋಧಿಸಿದ ಕಲ್ಮಶಗಳನ್ನು ಹೊರಹಾಕಲು ಸಾಧ್ಯವಾಗದೇ ಇವು ಒಳಗೇ ಉಳಿದುಬಿಡುತ್ತವೆ.

ಮೂತ್ರಪಿಂಡಗಳಲ್ಲಿ ಕಲ್ಲು

ಮೂತ್ರಪಿಂಡಗಳಲ್ಲಿ ಕಲ್ಲು

ಇವು ಸೋಂಕು ಹೆಚ್ಚಿಸುತ್ತವೆ, ಅಲ್ಲದೆ ಕಲ್ಮಶದಲ್ಲಿರುವ ಲವಣಗಳು ಸಾಂದ್ರೀಕೃತಗೊಂಡು ಚಿಕ್ಕ ಕಲ್ಲುಗಳ ರೂಪ ಪಡೆಯುತ್ತವೆ. ನಿಧಾನವಾಗಿ ಈ ಕಲ್ಲುಗಳು ಬೆಳೆದು ಮೂತ್ರಪಿಂಡಗಳ ಕಲ್ಲುಗಳಾಗಲು ಕಾರಣವಾಗುತ್ತವೆ. ಇದು ಮುಂದೆ ಭಾರೀ ನೋವನ್ನು ನೀಡಬಹುದು.

ಹೊಟ್ಟೆಯಲ್ಲಿ ಸೋಂಕು

ಹೊಟ್ಟೆಯಲ್ಲಿ ಸೋಂಕು

ಮೂತ್ರವನ್ನು ತಡೆದು ಹಿಡಿದಿಟ್ಟುಕೊಳ್ಳುವ ಮೂಲಕ ಮೂತ್ರವ್ಯವಸ್ಥೆ ಮಾತ್ರವಲ್ಲ, ನಮ್ಮ ಜೀರ್ಣಾಂಗಗಳಲ್ಲಿಯೂ ಸೋಂಕು ಹರಡುವ ಸಾಧ್ಯತೆ ಹೆಚ್ಚುತ್ತದೆ. ಏಕೆಂದರೆ ಮೂತ್ರ ಹೊರಹೋಗದೇ ಉಳಿಯುವಾಗ ಬ್ಯಾಕ್ಟೀರಿಯಾಗಳೂ ದೇಹದಲ್ಲಿಯೇ ಉಳಿದು ರಕ್ತದ ಮೂಲಕ ಜೀರ್ಣಾಂಗಗಳಿಗೂ ತಲುಪಿ ಸೋಂಕು ಹರಡಬಹುದು.

 
English summary

What Happens When You Hold Back Your Urine For Long

You are busy at your work doing something that is really important and then you get that nature's call. You try to hold back as long as you can so that you can complete your work and then attend to the call. But this is one of the most unhealthy practices that you are following.
Please Wait while comments are loading...
Subscribe Newsletter