ಕಣ್ಣುಗಳ ಬಣ್ಣದಲ್ಲಿ ಏರುಪೇರಾದರೆ-ಖಂಡಿತ ಸಮಸ್ಯೆಯಿದೆ ಎಂದರ್ಥ!

By: Arshad
Subscribe to Boldsky

ಕಣ್ಣುಗಳು ಆತ್ಮಗಳ ಕನ್ನಡಿ ಇದ್ದಂತೆ ಎಂಬ ನಾಣ್ಣುಡಿಯೊಂದಿದೆ. 'ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು' ಎಂದು ಕವಿ ಬಣ್ಣಿಸಬೇಕಾದರೆ ಕಣ್ಣುಗಳ ನೋಡದ ಮೂಲಕ ವ್ಯಕ್ತಪಡಿಸುವ ಭಾವನೆಗಳನ್ನು ಕಂಡಿರಲೇಬೇಕು. ಅಂತೆಯೇ ಕಣ್ಣುಗಳ ಬದಲಾದ ಬಣ್ಣವೂ ಅನಾರೋಗ್ಯ ಅಥವಾ ಬರಲಿರುವ ಅನಾರೋಗ್ಯದ ಬಗ್ಗೆ ಮುನ್ಸೂಚನೆಯನ್ನು ನೀಡುತ್ತದೆ. ಆರೋಗ್ಯದ ಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುವ ಕಣ್ಣುಗಳ ಬಣ್ಣ!

ಒಂದು ವೇಳೆ ಕಣ್ಣುಗಳ ಬಣ್ಣ ಸಾಮಾನ್ಯಕ್ಕಿಂತಲೂ ಹೆಚ್ಚಾಗಿ ನೀಲಿ, ಬೂದು, ನಸುಗಂದು ಮೊದಲಾದ ಬಣ್ಣಗಳಲ್ಲಿ ಕಾಣತೊಡಗಿದರೆ ಇದು ಅಂತರಿಕ ಆರೋಗ್ಯದ ತೊಂದರೆಯ ಸೂಚನೆಯಾಗಿರಬಹುದು. ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸೂಕ್ತ ಚಿಕಿತ್ಸೆ ಪಡೆದಲ್ಲಿ ಈ ತೊಂದರೆ ಉಲ್ಬಣಗೊಳ್ಳುವುದರಿಂದ ರಕ್ಷಣೆ ಪಡೆಯಬಹುದು. ಇಂದಿನ ಲೇಖನದಲ್ಲಿ ವಿವರಿಸಲಾದ ಮಾಹಿತಿಗಳನ್ನು ಓದಿದ ಬಳಿಕ ಆಶ್ಚರ್ಯಚಕಿತರಾಗಿರದೇ ಇರಲು ಸಾಧ್ಯವಿಲ್ಲ.  ನಿಜಕ್ಕೂ ಕಣ್ಣಿನ ಬಣ್ಣ ವ್ಯಕ್ತಿಯ ವ್ಯಕ್ತಿತ್ವವನ್ನು ಬಣ್ಣಿಸುತ್ತದೆಯೇ?

ಅಷ್ಟೇ ಅಲ್ಲ, ಬಣ್ಣಗಳು ಕಣ್ಣುಗಳ ಕಾಯಿಲೆ ಅಥವಾ ಇನ್ನೇನು ಆವರಿಸಲಿರುವ ಕಾಯಿಲೆಯ ಬಗ್ಗೆಯೂ ಕೆಲವು ಸೂಚನೆಯನ್ನು ನೀಡುತ್ತದೆ. ಉದಾಹರಣೆಗೆ ಕಣ್ಣಿನಲ್ಲಿ ಹೂವು ಬರುವುದು (ಕ್ಯಾಟರಾಕ್ಟ್), ಯಕೃತ್‌ನ ತೊಂದರೆ, ಕ್ಯಾನ್ಸರ್, ಮೊದಲಾದ ತೊಂದರೆಗಳ ಮುನ್ಸೂಚನೆ ನೀಡುತ್ತದೆ. ಆದ್ದರಿಂದ ಕಣ್ಣುಗಳ ಬಣ್ಣದಲ್ಲಿ ಯಾವುದೇ ಬಗೆಯ ವ್ಯತ್ಯಾಸ ಕಂಡುಬಂದರೂ ತಕ್ಷಣವೇ ತಪಾಸಣೆಗೊಳಗಾಗುವುದು ಅಗತ್ಯ.

ತಿಳಿಗಣ್ಣುಗಳು

ತಿಳಿಗಣ್ಣುಗಳು

ಒಂದು ವೇಳೆ ನಿಮ್ಮ ಕಣ್ಣಿನ ಪಾಪೆಯ ಬಣ್ಣ ನಿಧಾನವಾಗಿ ಬಣ್ಣ ಕಳೆದುಕೊಳ್ಳುತ್ತಾ ಬಂದು ತನ್ನ ಮೂಲ ಬಣ್ಣಕ್ಕಿಂತಲೂ ತಿಳಿಯಾಗಿದ್ದರೆ ಇದು ಕಣ್ಣುಗಳ ಸವೆತ (degeneration) ದ ಲಕ್ಷಣವಾಗಿದೆ. ಇದು ವಯೋಸಹಜವಾಗಿ ಆಗುವ ಕ್ರಿಯೆಯಾಗಿದ್ದು ಅರವತ್ತು ದಾಟಿದ ಬಳಿಕ ಈ ಬಗೆಯ ಪರಿವರ್ತನೆ ಸಾಮಾನ್ಯವಾಗಿದೆ. ಆದರೆ ನಡುವಯಸ್ಸಿನಲ್ಲಿ ಆದರೆ ಮಾತ್ರ ಇದು ಅಂಧತ್ವದತ್ತ ಸಾಗುತ್ತಿರುವ ಲಕ್ಷಣವಾಗಿದೆ.

ತಿಳಿಹಳದಿ - ಯಕೃತ್ ತೊಂದರೆಯ ಸೂಚನೆ

ತಿಳಿಹಳದಿ - ಯಕೃತ್ ತೊಂದರೆಯ ಸೂಚನೆ

ಒಂದು ವೇಳೆ ಹಠಾತ್ತಾಗಿ ಕಣ್ಣುಗಳ ಪಾಪೆಯ ಬಣ್ಣದಲ್ಲಿ ಹಳದಿ ಮಿಶ್ರಣವಾದಂತೆ ಕಂಡುಬಂದರೆ ಇದು ಅತ್ಯಂತ ಪ್ರಮುಖ ಕಾಯಿಲೆಯ ಸೂಚನೆಯಾಗಿದೆ. ಇದು ಕಾಮಾಲೆ ಅಥವಾ ಯಕೃತ್‌ನ ತೊಂದರೆಯ ಸ್ಪಷ್ಟ ಸೂಚನೆಯಾಗಿದೆ.

ಕಣ್ಣುಗಳ ಗಾಢಬಣ್ಣ

ಕಣ್ಣುಗಳ ಗಾಢಬಣ್ಣ

ಒಂದು ಸಂಶೋಧನೆಯ ಪ್ರಕಾರ ಹೆಚ್ಚೂ ಕಡಿಮೆ ಕಪ್ಪು ಬಣ್ಣದ ಪಾಪೆ ಹೊಂದಿರುವ ವ್ಯಕ್ತಿಗಳಿಗೆ ತಮ್ಮ ವೃದ್ಧಾಪ್ಯದಲ್ಲಿ ಕಣ್ಣುಗಳಲ್ಲಿ ಹೂವು ಅಥವಾ ಕ್ಯಾಟರಾಕ್ಟ್ ತೊಂದರೆ ಎದುರಿಸುವ ಸಾಧ್ಯತೆ ಇತರರಿಗಿಂತ ಹೆಚ್ಚಿರುತ್ತದೆ. ಇದರಿಂದ ದೃಷ್ಟಿ ಮಂಜಾಗುವುದು ಮತ್ತು ದೃಷ್ಟಿಹೀನತೆಯೂ ಕಾಣಿಸಿಕೊಳ್ಳುತ್ತದೆ.

ನೀಲಿ ಕಣ್ಣುಗಳು

ನೀಲಿ ಕಣ್ಣುಗಳು

ನೀಲಿ ಕಣ್ಣುಗಳ ವ್ಯಕ್ತಿಗಳಿಗೆ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇತರರಿಗಿಂತಲೂ ಹೆಚ್ಚಾಗಿರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತುಪಡಿಸಲಾಗಿದೆ. ಏಕೆಂದರೆ ಇವರ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯಲ್ಲಿ ಕ್ಯಾನ್ಸರ್ ಕಣಗಳಿಗೆ ಪ್ರತಿರೋಧ ಒಡ್ಡುವ ಶಕ್ತಿ ಇತರರಿಗಿಂತ ಕಡಿಮೆ ಇರುತ್ತದೆ. ಪದೇ ಪದೇ ಕಾಡುವ ಕಣ್ಣಿನ ನೋವಿಗೆ ಕಾರಣ ತಿಳಿದುಕೊಳ್ಳಿ

ಕಂದು, ಬೂದು ಅಥವಾ ಹಸಿರು ಬಣ್ಣದ ಕಣ್ಣುಗಳು

ಕಂದು, ಬೂದು ಅಥವಾ ಹಸಿರು ಬಣ್ಣದ ಕಣ್ಣುಗಳು

ಬೂದು, ಕಂದು ಅಥವಾ ಹಸಿರು ಕಣ್ಣಿನ ವ್ಯಕ್ತಿಗಳು ಚರ್ಮದ ಬಣ್ಣ ಬದಲಾಗುವ ತೊನ್ನು ರೋಗಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು. ಇದಕ್ಕೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಚರ್ಮದ ವಿರುದ್ಧ ಮುಗಿಬೀಳುವುದೇ ಕಾರಣ. ಆದರೆ ಇದನ್ನು ತಡೆಯುವ ಔಷಧಿ ಇನ್ನೂ ಲಭ್ಯವಿಲ್ಲ. ಆದರೆ ಈ ಬಣ್ಣದ ಕಣ್ಣಿನವರು ನಿಯಮಿತವಾಗಿ ತಪಾಸಣೆಗೊಳಗಾಗುತ್ತಿರುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

English summary

'Unknown' Risks Your Eye Colour Reveals About Your Health

The colour of your eyes such as blue, hazel, light brown, etc, can reveal what your internal health condition is and what precautions you have to take, in order to avoid it. In this article, you will be surprised to know what your eye colour can reveal about the related health condition.
Please Wait while comments are loading...
Subscribe Newsletter