For Quick Alerts
ALLOW NOTIFICATIONS  
For Daily Alerts

ನಿಜಕ್ಕೂ ಕಣ್ಣಿನ ಬಣ್ಣ ವ್ಯಕ್ತಿಯ ವ್ಯಕ್ತಿತ್ವವನ್ನು ಬಣ್ಣಿಸುತ್ತದೆಯೇ?

|

ಮಾತುಗಳು ಹೇಳದ ಎಷ್ಟೋ ವಿಷಯಗಳನ್ನು ಕಣ್ಣುಗಳು ಹೇಳುತ್ತವೆ. ನಿನ್ನ ಕಣ್ಣ ನೋಟದಲ್ಲಿ ನೂರು ಆಸೆ ಕಂಡೆನು ಎಂದು ಬಬ್ರುವಾಹನ ಚಿತ್ರದಲ್ಲಿ ಡಾ. ರಾಜ್ ಹಾಡುತ್ತಿದ್ದಾಗ ಕಾಂಚನಾರವರ ಕಣ್ಣುಗಳು ನಿಜಕ್ಕೂ ಹೊಳೆಯುತ್ತಿದ್ದವು.

ತನ್ನ ಪ್ರಿಯಕರನ ಪ್ರೀತಿಯನ್ನು ಪಡೆಯಲು ತವಕಿಸುವ ಹೃದಯವನ್ನು ಆ ಕಣ್ಣುಗಳು ಬಿಂಬಿಸುವಂತೆಯೇ ಇತರ ಭಾವಗಳನ್ನೂ ಕಣ್ಣುಗಳು ಬಿಂಬಿಸಬಲ್ಲವು. ಕೋಪ, ಹತಾಶೆ, ದುಃಖ, ದ್ವೇಶ ಮೊದಲಾದ ಭಾವನೆಗಳನ್ನು ಯಾವೊಂದೂ ಪದದ ಬಳಕೆಯಿಲ್ಲದೇ ಕಣ್ಣುಗಳ ಮೂಲಕ ವ್ಯಕ್ತಪಡಿಸಬಹುದು. ಆದರೆ ಕಣ್ಣುಗಳ ಬಣ್ಣವೂ ವ್ಯಕ್ತಿಯ ವ್ಯಕ್ತಿತ್ವವನ್ನು ಬಿಂಬಿಸಬಹುದು ಎಂಬುದು ನಿಮಗೆ ತಿಳಿದಿತ್ತೇ?

ಇದೊಂದು ಸೋಜಿಗದ ಆದರೆ ನಿಜವಾದ ಸಂಗತಿ. ನಮ್ಮ ಬೆರಳಚ್ಚುಗಳಂತೆಯೇ ನಮ್ಮ ಕಣ್ಣುಗಳ ಅತಿಸೂಕ್ಷ್ಮ ವಿನ್ಯಾಸವೂ ಪ್ರತಿಯೊಬ್ಬ ವ್ಯಕ್ತಿಗೂ ಭಿನ್ನವಾಗಿದೆ. ನಮ್ಮ ಕಣ್ಣುಗಳಿಗೆ ಬಣ್ಣ ನೀಡುವ ಪಾಪೆಯ ವಿನ್ಯಾಸ ಇದಕ್ಕೆ ಕಾರಣ. ಇದರಲ್ಲಿರುವ ವರ್ಣತಂತುಗಳು ಕಣ್ಣಿಗೆ ಬಣ್ಣವನ್ನು ನೀಡಲು ಕಾರಣವಾಗಿವೆ. ಅಂತೆಯೇ ಕಪ್ಪು, ಕಂದು, ಹಸಿರು, ಬೆಕ್ಕಿನ ಕಣ್ಣು ಮೊದಲಾದ ಬಣ್ಣಗಳು ಕಣ್ಣಿನ ಸೌಂದರ್ಯವನ್ನು ವರ್ಧಿಸುತ್ತವೆ.

ಸಂಗಾತಿಯನ್ನು ಆಕರ್ಷಿಸಲೂ ಕಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಣ್ಣಿನ ಈ ಬಣ್ಣ ಮತ್ತು ವಿನ್ಯಾಸ ಪ್ರತಿ ವ್ಯಕ್ತಿಯನ್ನು ಗುರುತಿಸಲೂ ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿ ಇಂದು ಪ್ರತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವ್ಯಕ್ತಿಯ ಕಣ್ಣುಪಾಪೆಯ (iris) ಚಿತ್ರವನ್ನು ಶಾಶ್ವತ ಗುರುತಿನ ರೂಪದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ನಿಮ್ಮ ಕಣ್ಣಿನ ಬಣ್ಣ ನಿಮ್ಮ ಬಗ್ಗೆ ಏನು ಹೇಳುತ್ತದೆ ಎಂಬುದನ್ನು ನೋಡೋಣ. ನಿಮ್ಮ ದೇಹದಲ್ಲಿರುವ ಮಚ್ಚೆಯು ಏನನ್ನು ಪ್ರತಿಪಾದಿಸುತ್ತದೆ?

ಕಂದುಬಣ್ಣದ ಕಣ್ಣುಗಳು

ಕಂದುಬಣ್ಣದ ಕಣ್ಣುಗಳು

ವಿಶ್ವದಲ್ಲಿ ಅತಿಹೆಚ್ಚು ಕಣ್ಣಿನ ಬಣ್ಣ ಎಂದರೆ ಕಂದು ಅಥವಾ ಗಾಢ ಕಾಫಿ ಬಣ್ಣವಾಗಿದೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಭಾವಾತ್ಮಕರಾಗಿದ್ದು ಉತ್ತಮ ಸ್ವಭಾವವನ್ನು ಹೊಂದಿರುತ್ತಾರೆ. ಆಕರ್ಷಕ ಮೈಕಟ್ಟು ಮತ್ತು ಸ್ನೇಹಪರರಾದ ಇವರು ಸದಾ ಎಲ್ಲರೊಂದಿಗೆ ಬೆರೆತು ಉತ್ತಮ ಸಂಬಂಧ ಹೊಂದಿರಲು ಬಯಸುತ್ತಾರೆ. ಇವರ ವರ್ತನೆಗಳು ಕ್ರಿಯಾತ್ಮಕವಾಗಿಯೂ ಪ್ರಾಯೋಗಿಕವಾಗಿಯೂ ಇರುತ್ತದೆ. ಇವರು ತಮಗಿಂಗಲೂ ತಮ್ಮ ಪ್ರೀತಿಪಾತ್ರರಿಗೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾರೆ. ಅಗತ್ಯಬಿದ್ದರೆ ತಮ್ಮವರಿಗಾಗಿ ಸಕಲ ತ್ಯಾಗಕ್ಕೂ ಸಿದ್ದರಾಗುತ್ತಾರೆ. ಇವರನ್ನು ಸ್ನೇಹಿತರನ್ನಾಗಿ ಪಡೆಯಲು ಎಲ್ಲರೂ ಬಯಸುತ್ತಾರೆ.

ಬೂದುಬಣ್ಣದ ಕಣ್ಣುಗಳು

ಬೂದುಬಣ್ಣದ ಕಣ್ಣುಗಳು

ಥಟ್ಟನೇ ನೋಡಿದಾಗ ಕಣ್ಣಿನಲ್ಲಿ ಪೊರೆಬಂದಂತೆ ಕಾಣುವ ಈ ವ್ಯಕ್ತಿಗಳು ವಿರಳವಾಗಿದ್ದು ಅತ್ಯಂತ ಶಾಂತ ಮನೋಭಾವವನ್ನು ಹೊಂದಿರುತ್ತಾರೆ. ಎಂತಹ ಪರಿಸ್ಥಿತಿಯಲ್ಲಿಯೂ ಶಾಂತತೆಯನ್ನು ಕಾಪಾಡಿಕೊಳ್ಳುವುದು ಇವರ ವೈಶಿಷ್ಟ್ಯವಾಗಿದೆ. ಆಂತರಿಕವಾಗಿ ಅತ್ಯಂತ ಧೈರ್ಯಶಾಲಿಗಳೂ, ಮಹತ್ವಾಕಾಂಕ್ಷೆಗಳೂ, ಜೀವನದಲ್ಲಿ ಮುನ್ನುಗ್ಗಲು ಯಾವುದೇ ರೀತಿಯ ಗಂಡಾಂತರವನ್ನು ಎದುರಿಸಲೂ ಸಿದ್ಧರಿರುತ್ತಾರೆ. ಇದೇ ಕಾರಣಕ್ಕಾಗಿ ವಿಶ್ವದ ಖ್ಯಾತ ನಾಯಕರು ಬೂದುಬಣ್ಣದ ಕಣ್ಣುಗಳನ್ನು ಹೊಂದಿದ್ದಾರೆ. ತಮ್ಮ ಪ್ರೀತಿಯನ್ನು ಪಡೆಯಲು ಯಾವುದೇ ಮಿತಿಯನ್ನು ಪಾರುಮಾಡಲು ಇವರು ಸಿದ್ಧರಿರುತ್ತಾರೆ.

ಕಪ್ಪುಬಣ್ಣದ ಕಣ್ಣುಗಳು

ಕಪ್ಪುಬಣ್ಣದ ಕಣ್ಣುಗಳು

ಸಾಮಾನ್ಯವಾಗಿ ದೂರದಿಂದ ಕಪ್ಪು ಬಣ್ಣದಂತೆ ಕಂಡರೂ ಹತ್ತಿರದಿಂದ ಕಂಡಾಗ ಗಾಢ ಕಂದು ಬಣ್ಣವೇ ಹೆಚ್ಚಿನವರಲ್ಲಿ ಕಂಡುಬರುತ್ತದೆ. ಅಪರೂಪಕ್ಕೆ ಅಪ್ಪಟ ಕಪ್ಪು ಬಣ್ಣದ ಕಣ್ಣುಗಳನ್ನು ಹೊಂದಿರುವ ವ್ಯಕ್ತಿಗಳು ಕಂಡುಬರುತ್ತಾರೆ. ಇವರು ಅತ್ಯಂತ ಸೂಕ್ಷ್ಮಮತಿಗಳೂ, ತಮಗೆ ಸಂಬಂಧಪಟ್ಟ ವಿಷಯದ ಬಗ್ಗೆ ಅತ್ಯಂತ ಹೆಚ್ಚು ಕಾಳಜಿಯುಳ್ಳವರಾಗಿರುತ್ತಾರೆ. ಇದೇ ಕಾರಣದಿಂದ ಇವರ ಸ್ನೇಹ ಪಡೆಯುವುದು ಕೊಂಚ ಕಷ್ಟಕರವಾಗಿದೆ. ಆದರೆ ಒಮ್ಮೆ ವಿಶ್ವಾಸ ಗಳಿಸಿದ ಬಳಿಕ ತಮ್ಮ ಸ್ನೇಹಿತರಿಗಾಗಿ ಪ್ರಾಣವನ್ನೂ ಪಣವಾಗಿಡಲು ಸಿದ್ಧರಾಗುತ್ತಾರೆ. ಇವರಲ್ಲಿ ತಾಳ್ಮೆ ಕಡಿಮೆ ಇದ್ದರೂ ಸದಾ ಸಕಾರಾತ್ಮಕವಾಗಿ ಯೋಚಿಸುವುದರಿಂದ ಸಮಾಜದಲ್ಲಿ ಕೆಲವೇ ಸ್ನೇಹಿತರನ್ನು ಪಡೆದಿರುತ್ತಾರೆ.

ಹಸಿರು ಕಣ್ಣುಗಳು

ಹಸಿರು ಕಣ್ಣುಗಳು

ಹಸಿರು ಕಣ್ಣಿನ ವ್ಯಕ್ತಿಗಳು ವಿರಳವಾಗಿದ್ದು ಅತಿ ಸುಲಭವಾಗಿ ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಸ್ವಭಾವದವರಾಗಿರುತ್ತಾರೆ. ಸ್ನೇಹಿತರನ್ನು ಸಂತೋಷವಾಗಿಡಲು ತಮ್ಮ ಎಲ್ಲಾ ಸಹಕಾರವನ್ನು ನೀಡುವ ಇವರು ತಮ್ಮ ಪ್ರೇಮದ ಬಗ್ಗೆ ಮಾತ್ರ ಅತ್ಯಂತ ಹೆಚ್ಚಿನ ವ್ಯಾಕುಲರಾಗಿರುತ್ತಾರೆ. ಇದೇ ಕಾರಣದಿಂದ ತಮ್ಮ ಪ್ರೇಮಿ ಯಾರೊಂದಿಗೆ ಮಾತನಾಡಿದರೂ ಸುಲಭವಾಗಿ ಈರ್ಷ್ಯೆಗೆ ಈಡಾಗುತ್ತಾರೆ. ಈ ಈರ್ಷ್ಯೆ ಮತ್ಸರಕ್ಕೆ ತಿರುಗಿ ಸ್ನೇಹ ಹಳಸಿದ, ಕದಲ ಕದನಗಳಾಗಿರುವ ಹಲವು ನಿದರ್ಶನಗಳನ್ನು ಇತಿಹಾಸದಲ್ಲಿ ನೋಡಬಹುದಾಗಿದೆ. ಮಡೋನ್ನಾ, ಬ್ರೂಸ್ ವಿಲ್ಲಿಸ್ ಮೊದಲಾದ ಖ್ಯಾತ ನಟರು ಹಸಿರು ಕಣ್ಣುಗಳನ್ನು ಹೊಂದಿದ್ದಾರೆ.

ನೀಲಿ ಕಣ್ಣುಗಳು

ನೀಲಿ ಕಣ್ಣುಗಳು

ನಿಮ್ಮ ಕಣ್ಣುಗಳು ಯಾವ ಬಣ್ಣದಲ್ಲಿರಬೇಕೆಂದು ನೀವು ಬಯಸುತ್ತೀರಿ ಎಂಬ ಪ್ರಶ್ನೆಗೆ ಅತ್ಯಂತ ಹೆಚ್ಚಿನ ವೋಟುಗಳು ನೀಲಿ ಬಣ್ಣಕ್ಕೆ ಬಿದ್ದಿವೆ. ನೀಲಿಗಣ್ಣಿನ ವ್ಯಕ್ತಿಗಳು ಸುಲಭವಾಗಿ ಎಲ್ಲಾರ ಚಿತ್ತ ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಅಂತೆಯೇ ತಮ್ಮ ಸುತ್ತಮುತ್ತಲನ್ನು ಸೂಕ್ಷ್ಮವಾಗಿ ಗಮನಿಸುವ ಮತ್ತು ಅಗತ್ಯವುಳ್ಳವರಿಗೆ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರ ನೀಡುವ ಮೂಲಕ ಹೆಚ್ಚಿನ ಸ್ನೇಹಿತರನ್ನೂ ಸಮಾಜದಲ್ಲಿ ಉತ್ತಮ ಹೆಸರು ಮತ್ತು ವಿಶ್ವಾಸವನ್ನೂ ಗಳಿಸುತ್ತಾರೆ. ಸುಪರ್ ಮ್ಯಾನ್ ಪಾತ್ರ ನಿರ್ವಹಿಸಿದ ಕಾರ್ಲ್ ಕೆಂಟ್ ಸಹಾ ನೀಲಿಗಣ್ಣನ್ನು ಹೊಂದಿದ್ದು ವಿಶ್ವದ ಅತ್ಯಂತ ಆಕರ್ಷಕ ವ್ಯಕ್ತಿ ಎಂಬ ಹೆಗ್ಗಳಿಕೆ ಪಡೆಯಲು ಅವರ ಕಣ್ಣಿನ ಬಣ್ಣ ಪ್ರಮುಖ ಪಾತ್ರ ವಹಿಸಿದೆ.

ಬೆಕ್ಕಿನ ಕಣ್ಣು (Hazel Eyes)

ಬೆಕ್ಕಿನ ಕಣ್ಣು (Hazel Eyes)

ಬೂದು ಮತ್ತು ಕಂದು ಬಣ್ಣಗಳು ಸರಿಯಾಗಿ ಮಿಶ್ರಣವಾಗದೇ ಕಲಸು ಕಲಸಾಗಿರುವ ಮೂಲಕ ಬೆಕ್ಕಿನ ಕಣ್ಣುಗಳಂತೆ ತೋರುವ ಕಣ್ಣಿನ ವ್ಯಕ್ತಿಗಳು ಆಕರ್ಷಕರಾಗಿದ್ದರೂ ಅವರ ಸ್ನೇಹ ಸಂಪಾದಿಸುವುದು ಅಷ್ಟು ಸುಲಭವಲ್ಲ. ಆದರೆ ವಾಸ್ತವಾಗಿ ಈ ವ್ಯಕ್ತಿಗಳು ಅತ್ಯಂತ ಸೂಕ್ಷ್ಮಮತಿಗಳೂ, ಸ್ನೇಹಪರರೂ, ದಯಾಮಯಿಗಳೂ ಆಗಿರುತ್ತಾರೆ. ಆದರೆ ಪ್ರತಿಯೊಬ್ಬ ಬೆಕ್ಕಿನ ಕಣ್ಣಿನ ವ್ಯಕ್ತಿಯ ಗುಣಸ್ವಭಾವಗಳು ಒಂದೇ ತರಹ ಇರುವುದಿಲ್ಲ. ಸಾಧಾರಣವಾಗಿ ತಮ್ಮ ಚಟುವಟಿಕೆಗಳಿಗೆ ತಕ್ಷಣವೇ ಫಲಿತಾಂಶವನ್ನು ಬಯಸುವ ಇವರಿಗೆ ತಾಳ್ಮೆ ಮತ್ತು ಸಹನೆ ಕಡಿಮೆ ಇರುತ್ತದೆ. ಇದೇ ಕಾರಣದಿಂದ ತಾಳ್ಮೆ ಬಯಸುವ ವ್ಯಕ್ತಿಗಳ ನಡುವೆ ಇವರು ಹೆಚ್ಚಾಗಿ ವ್ಯವಹರಿಸುವುದಿಲ್ಲ.

English summary

Things Your Eye Colour Says About You

It is often said that the eyes are the windows to a person's soul. As with our soul, no two people have the same eye colour. Peering into the eyes of a person can reflect his emotions and the mood that he/she is in. But apart from projecting, what does your eye colour say about you?
X
Desktop Bottom Promotion