ಹಳ್ಳಿಗಾಡಿನ ತೆಂಗಿನ ಎಣ‍್ಣೆ ದೊಡ್ಡ ಕರುಳಿನ ಕ್ಯಾನ್ಸರ್‌ನ್ನು ನಿಯಂತ್ರಿಸುತ್ತದೆ!

By: Suhani B
Subscribe to Boldsky

'ಕ್ಯಾನ್ಸರ್' ಎಂಬ ಪದವು ತುಂಬಾ ಸಾಮಾನ್ಯವಾಗಿದೆ ಈ ಮಾರಣಾಂತಿಕ ರೋಗವು ಎಷ್ಟು ವ್ಯಾಪಕವಾಗಿ ಹರಡಿದೆ ಎಂಬ ಕಾರಣದಿಂದಾಗಿ ದಿನಗಳು ಮಾರ್ಪಟ್ಟಿದೆ! ಕ್ಯಾನ್ಸರ್‌ನ ಚಿಂತನೆಯು ಖಂಡಿತವಾಗಿಯೂ ವ್ಯಕ್ತಿಯಲ್ಲಿ ಒಂದು ತರಹದ ಭಯದ ಭಾವನೆ. ಏಕೆಂದರೆ ಇದರ ಲಕ್ಷಣಗಳು ತುಂಬಾ ಅಪಾಯಕಾರಿ. ಈ ಕಾಯಿಲೆಯು ತುಂಬಾ ಭಯಾನಕವಾಗಿದೆ ಮತ್ತು ಅನೇಕ ಸಂದರ್ಭಗಳಲ್ಲಿ, ಕ್ಯಾನ್ಸರ್ ವ್ಯಕ್ತಿಯ ಜೀವವನ್ನೇ ತೆಗೆದುಕೊಳ್ಳುತ್ತದೆ!

ಕ್ಯಾನ್ಸರ್ ಎಂಬುದು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಅಸಹಜ ಜೀವಕೋಶಗಳು ದೇಹದಲ್ಲಿ ಬೆಳೆದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಮತ್ತು ಕ್ಯಾನ್ಸರ್ ಯುಕ್ತ ಗಡ್ಡೆಗಳು ದೊಡ್ಡ ಗಾತ್ರದಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ.ಇದರ ಪರಿಣಾಮ ಅಂಗಾಂಶಗಳು ಮತ್ತು ಅಂಗಗಳನ್ನು ನಾಶಮಾಡುವುದು, ಅಂಗಗಳ ವಿಫಲತೆ ಅಂತಿಮವಾಗಿ ಉಂಟಾಗುತ್ತದೆ. ಕ್ಯಾನ್ಸರ್ಯುಕ್ತ ಗಡ್ಡೆಗಳು ಶರೀರದ ಭಾಗಗಳಲ್ಲಿದ್ದರೆ ಅದರ ವಿರುದ್ದ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ, ಚಿಕಿತ್ಸೆ ಮಾಡಬಹುದು ಆದರೆ ಬಹಳ ಕಷ್ಟವಾಗುತ್ತದೆ. 

colon cancer

ಕ್ಯಾನ್ಸರ್‌ ಲಿಂಗ ಭೇದವಿಲ್ಲದೆ ಯಾರಿಗೂ ತಗಲಬಹುದು. ಚಿಕ್ಕ ಶಿಶುವಿನಿಂದ ಹಿರಿಯ ವಯಸ್ಕರಿಗೆ,ಲಿಂಗವನ್ನು ಲೆಕ್ಕಿಸದೆ ಇದರ ಬಲಿಪಶುವಾಗಬಹುದು. ಹೆಚ್ಚಿನ ರೀತಿಯ ಕ್ಯಾನ್ಸರ್ ಗಳಲ್ಲಿ, ರೋಗಲಕ್ಷಣಗಳು ಮಾತ್ರ ಸಂಭವಿಸುತ್ತವೆ. ರೋಗವು ಅದರ ಕೊನೆಯ ಹಂತದಲ್ಲಿದ್ದಾಗ, ಅದರ ಚಿಕಿತ್ಸೆ ಬಹಳ ಕಷ್ಟವಾಗುತ್ತದೆ.

ಕ್ಯಾನ್ಸರ್ ಬಗ್ಗೆ ಮತ್ತೊಂದು ಹೆದರಿಕೆಯೆಂದರೆ ಅದು ಮತ್ತೆ ಮರುಕಳಿಸಬಹುದು. ವ್ಯಕ್ತಿಯು ಇದರ ವಿರುದ್ದ ಹೋರಾಡಲು ನಿರ್ವಹಿಸಿದರೂ ಕೂಡ ಬದುಕುವ ಅಂಶ ಕಡಿಮೆ ಇರಬಹುದು. ಕ್ಯಾನ್ಸರ್ ಯಾವುದೇ ಎಚ್ಚರಿಕೆ ಇಲ್ಲದೆ ಮತ್ತೆ ಯಾರಿಗೂ ಬರಬಹುದು. ಕೆಲವು ಸಾಮಾನ್ಯ ರೀತಿಯ ಕ್ಯಾನ್ಸರ್ ಗಳಾದ ಸ್ತನ ಕ್ಯಾನ್ಸರ್, ರಕ್ತ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಮಿದುಳಿನ ಗಡ್ಡೆ, ದೊಡ್ಡ ಕರುಳಿನ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಇತ್ಯಾದಿ. ದೊಡ್ಡ ಕರುಳಿನ ಕ್ಯಾನ್ಸರ್ ಒಂದು ವಿಧವಾಗಿದ್ದು,

ಇದು ಕರುಳಿನ ಮೇಲೆ ಪರಿಣಾಮ ಬೀರಿ ಇಲ್ಲಿ ಕ್ಯಾನ್ಸರ್ಯುಕ್ತ ಗಡ್ಡೆಗಳು ಬೆಳೆಯುತ್ತದೆ ದೊಡ್ಡ ಕರುಳಿನ ಕ್ಯಾನ್ಸರ್ ನ ಕೆಲವು ರೋಗಲಕ್ಷಣಗಳು, ಹೊಟ್ಟೆ ನೋವು, ಪೆಲ್ವಿಸ್ ಮತ್ತು ಗುದನಾಳದಲ್ಲಿ, ಮಲದಲ್ಲಿ ರಕ್ತ , ತೀವ್ರ ಅಜೀರ್ಣ ಮತ್ತು ಆಮ್ಲೀಯತೆ, ರಕ್ತಹೀನತೆ, ಸೆಳೆತ, ಆಯಾಸ, ಇತ್ಯಾದಿ. ಈಗ ನಾವು ಆರೋಗ್ಯಕರವಾಗಿ ಉಳಿಯಲು ಎಲ್ಲವನ್ನೂ ಮಾಡುತ್ತೇವೆ ಮತ್ತು ಸೇವಿಸುತ್ತೇವೆ. ಈ ಪ್ರಾಣಾಂತಿಕ ರೋಗಗಳನ್ನು ತಡೆಗಟ್ಟಬಹುದು. ನಾವು ಪ್ರತಿದಿನ ಬಳಸುವ ಈ ಸಾಮಾನ್ಯ ತೈಲದಿಂದ! 

cancer

ದೊಡ್ಡ ಕರುಳು ಕ್ಯಾನ್ಸರ್ ತಡೆಗಟ್ಟಲು ತೆಂಗಿನ ಎಣ್ಣೆ

ನಾವು ಈಗಾಗಲೇ ತಿಳಿದಿರುವಂತೆ, ತೆಂಗಿನ ಎಣ್ಣೆಯು ಕ್ಯಾನ್ಸರ್ ತಡೆಗಟ್ಟಲು ಬಹು ಉಪಯೋಗಿ. ಇದನ್ನು ಸಾಮಾನ್ಯವಾಗಿ ಉಷ್ಣವಲಯದಲ್ಲಿ ಬಳಸುತ್ತಾರೆ. ಭಾರತದದಲ್ಲಿ ಇದನ್ನು ಬಹಳ ಹೇರಳವಾಗಿ ಬಳಸುತ್ತಾರೆ ಮತ್ತು ಬಹಳ ಸುಲಭವಾಗಿ ಮತ್ತು ಅಗ್ಗವಾಗಿ ದೊರೆಯುತ್ತದೆ.ತೆಂಗಿನ ಎಣ್ಣೆಯನ್ನು

ಅಡುಗೆಗಾಗಿ ಮತ್ತು ಚರ್ಮದ ಆರೈಕೆ, ಕೂದಲು ಆರೈಕೆಗೆ ಬಳಸಲಾಗುತ್ತದೆ

ಇದರಲ್ಲಿ 'ವಿಟಮಿನ್ ಇ' ನಂತಹ ಶಕ್ತಿಶಾಲಿ ಪೋಷಕಾಂಶಗಳು ಇರುವುದರಿಂದ, ಉತ್ಕರ್ಷಣ ನಿರೋಧಕಗಳು ಮತ್ತು ಒಮೆಗಾ -3 ಕೊಬ್ಬಿನ ಆಮ್ಲಗಳು ಇವೆ.

ತೆಂಗಿನ ಎಣ್ಣೆ ಹಲವಾರು ಆರೋಗ್ಯ ಪ್ರಯೋಜನಗಳಿಗೆ ಉಪಯುಕ್ತ

ತೆಂಗಿನ ಎಣ್ಣೆ ಸೇವನೆಯಿಂದ ಕರುಳುಗಳ ಮೇಲೆ ಲೇಪನಗೊಳಿಸುತ್ತದೆ ಮತ್ತು ಸೂಕ್ಷ್ಮಜೀವಿಗಳ ಹಾನಿಕಾರಕ ಆಕ್ರಮಣದಿಂದ ಕರುಳನ್ನು ರಕ್ಷಿಸಿ ಇದು ಅಜೀರ್ಣವನ್ನು ತಡೆಗಟ್ಟುತ್ತದೆ. ಇದರ ಜೊತೆಗೆ, ತೆಂಗಿನ ಎಣ್ಣೆಯಲ್ಲಿ ಕಿಣ್ವ, ಲಾರಿಕ್ ಆಮ್ಲ ಕೂಡ ಇದೆ. ಲಾರಿಕ್ ಆಮ್ಲದಿಂದ ದೊಡ್ಡಕರುಳಿಗೆ ಉಂಟಾಗುವ 93% ಕ್ಯಾನ್ಸರ್ ಜೀವಕೋಶಗಳನ್ನು ತಡೆಯಲು, ಅಡಿಲೇಡ್ ವಿಶ್ವವಿದ್ಯಾಲಯ ಸಂಶೋಧನಾ ಅಧ್ಯಯನದ ಪ್ರಕಾರ ತಿಳಿದು ಬಂದಿದೆ.

ತೆಂಗಿನ ಎಣ್ಣೆಯಲ್ಲಿ ಕಂಡುಬರುವ ಲಾರಿಕ್ ಆಮ್ಲವು ಸಮರ್ಥವಾಗಿ, ಅಸಹಜವಾಗಿ ಬೆಳೆಯುವ ಸೂಕ್ಷ್ಮಾಣು ಜೀವಿಗಳನ್ನು ನಾಶಮಾಡುತ್ತದೆ ಅಲ್ಲದೆ, ಕಿಮೊಥೆರಪಿಯ ದುಷ್ಪರಿಣಾಮಗಳನ್ನು ಕ್ಯಾನ್ಸರ್ ರೋಗಿಗಳಲ್ಲಿ ಕಡಿಮೆ ಮಾಡಲು ತೆಂಗಿನ ಎಣ‍್ಣೆಯಿಂದ ಮಾಡಿದ ಆಹಾರ ಪದಾರ್ಥ ಸೇವನೆ ಸಹಕಾರಿ... ಹಾಗಾಗಿ ತೆಂಗಿನ ಎಣ್ಣೆಯನ್ನು ನಿಮ್ಮ ಆಹಾರಕ್ರಮದ ನಿಯಮಿತ ಭಾಗವಾಗಿ ಮಾಡಿಕೊಳ‍್ಳಿ.

English summary

This Common Oil Can Help Prevent Colon Cancer Effectively!

Cancer is a disease in which there is an abnormal multiplication of cells in the body, causing cancerous tumours. These tumours eventually grow in size and start to destroy the tissues and organs, eventually causing organ failure.
Story first published: Thursday, July 27, 2017, 9:01 [IST]
Subscribe Newsletter