For Quick Alerts
ALLOW NOTIFICATIONS  
For Daily Alerts

ಕಣ್ಣುಗಳ ಆರೋಗ್ಯಕ್ಕೆ ಇರಲಿ, ಎಂದಿಗೂ 'ಸ್ಪೆಷಲ್' ಆರೈಕೆ!

ಕಣ್ಣುಗಳ ಆರೋಗ್ಯವನ್ನು ಸತತವಾಗಿ ತಪಾಸಣೆಗೊಳಿಸುತ್ತಾ ಬದಲಾವಣೆಗಳನ್ನು ಗಮನಿಸುತ್ತಾ ಇರಬೇಕು. ಕಣ್ಣಿನ ದೃಷ್ಟಿಯಲ್ಲಿ ಕೊಂಚ ಏರುಪೇರಾದರೂ ಕೂಡಲೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಿ....

By Arshad
|

ಒಂದು ಕಾಲದಲ್ಲಿ ಕನ್ನಡಕ ಹಾಕಿಕೊಂಡವರೆಂದರೆ ಪುಸ್ತಕದ ಹುಳಗಳು ಎಂದು ಕರೆದು ಹೀಯಾಳಿಸಲಾಗುತ್ತಿತ್ತು. ಆದರೆ ಇಂದಿನ ದಿನದಲ್ಲಿ ಕಣ್ಣುಗಳಿಗೆ ವಿಪರೀತ ಶ್ರಮ ನೀಡುವ ಕಂಪ್ಯೂಟರ್, ಮೊಬೈಲು ಮತ್ತು ಇತರ ದೃಶ್ಯಮಾಧ್ಯಮ ಸಲಕರಣೆಗಳನ್ನು ಸತತವಾಗಿ ವೀಕ್ಷಿಸುವುದರಿಂದ ಕಣ್ಣುಗಳಿಗೆ ವಿಪರೀತ ದಣಿವು ಮತ್ತು ಘಾಸಿಯುಂಟಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಸ್ಪೆಷಲ್ ಆರೈಕೆ ಹೀಗಿರಲಿ

ವಿಶೇಷವಾಗಿ ಕಂಪ್ಯೂಟರ್ ಪರದರೆಯ ತೀಕ್ಷ್ಣ ಕಿರಣಗಳನ್ನು ಸತತವಾಗಿ ವೀಕ್ಷಿಸುವುದರಿಂದ ಕಣ್ಣಿನ ನರ ಮತ್ತು ಇತರ ಅಂಗಾಂಶಗಳು ತಮ್ಮ ಸಾಮರ್ಥ್ಯಕ್ಕೂ ಮೀರಿ ಘಾಸಿಗೊಳ್ಳುತ್ತವೆ. ಆದರೆ ಇವುಗಳಿಂದಲೇ ನಮ್ಮ ಉದ್ಯೋಗವೂ, ಜೀವನವೂ ನಡೆಯುವುದರಿಂದ ಇದರಿಂದ ಬಿಡುಗಡೆ ಪಡೆಯುವಂತೆಯೂ ಇಲ್ಲ. ಜೇನು ಕಣ್ಣಿನ ಆರೋಗ್ಯಕ್ಕೂ ಉತ್ತಮ ಎಂದರೆ ಅಚ್ಚರಿ ಅಲ್ಲವೇ?

ಹಾಗಾಗಿ ಕಣ್ಣುಗಳ ಆರೋಗ್ಯವನ್ನು ಸತತವಾಗಿ ತಪಾಸಣೆಗೊಳಿಸುತ್ತಾ ಬದಲಾವಣೆಗಳನ್ನು ಗಮನಿಸುತ್ತಾ ಇರಬೇಕು. ಆದರೆ ಕೆಲವು ಬದಲಾವಣೆಗಳು ನಮಗೆ ಅರಿವಿಲ್ಲದಂತೆಯೇ ಆಗಿದ್ದು ಅಚ್ಚರಿ ಮೂಡಿಸುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ....


ದೃಷ್ಟಿ ಮಂಜಾಗುವುದು

ದೃಷ್ಟಿ ಮಂಜಾಗುವುದು

ಒಂದು ವೇಳೆ ಸಮೀಪದ ಅಥವಾ ದೂರದ ವಸ್ತುಗಳು ಕೊಂಚ ಮಂಜಾಗಿ ಕಾಣುತ್ತಿದ್ದರೆ, ವಸ್ತುಗಳ ಅಂಚುಗಳು ಎರಡೆರಡಾಗಿ ಕಾಣಿಸುತ್ತಿದ್ದರೆ, ಅಥವಾ ವಸ್ತುವಿನ ನೆರಳಿನಂತಹದ್ದು ಕೊಂಚವೇ ಪಕ್ಕದಲ್ಲಿ ಕಾಣುವಂತಿದ್ದರೆ ಇದು ದೃಷ್ಟಿನರದ ಸಾಮರ್ಥ್ಯ ಕಡಿಮೆಯಾಗಿರುವುದನ್ನು ಅಥವಾ ನಿಮಗೆ ಅಧಿಕ ರಕ್ತದೊತ್ತಡ ಬಾಧಿಸಿರುವುದನ್ನು ಸೂಚಿಸುತ್ತದೆ.

ಒಣಗಿದ ಕಣ್ಣುಗಳು

ಒಣಗಿದ ಕಣ್ಣುಗಳು

ನಮ್ಮ ಕಣ್ಣುಗಳ ಮೇಲೆ ಸದಾ ಕಣ್ಣೀರಿನ ಪಸೆ ಇರಲೇ ಬೇಕು. ಇದೇ ಕಾರಣಕ್ಕೆ ನಾವು ಕಣ್ಣು ಮಿಟುಕಿಸುತ್ತಾ ಇರುತ್ತೇವೆ. ಒಂದು ವೇಳೆ ಈ ಪಸೆ ಇಲ್ಲವಾದರೆ ಉರಿ ಕಾಣಿಸಿಕೊಳ್ಳುತ್ತದೆ. ಸೋಪು ಕಣ್ಣಿಗೆ ಹೋದಾಗ ಇದು ಕಣ್ಣೀರನ್ನು ಪಕ್ಕಕ್ಕೆ ಸರಿಸಿ ಕಣ್ಣಿನ ಭಾಗವನ್ನು ಗಾಳಿಗೆ ತೆರೆಯುವುದರಿಂದಲೇ ನಮಗೆ ಭಾರೀ ಉರಿಯಾಗುತ್ತದೆ.

computer vision syndrome

computer vision syndrome

ಕಣ್ಣಿನಲ್ಲಿ ಕಣ್ಣೀರಿನ ಪಸೆ ಕಡಿಮೆಯಾದರೂ ಉರಿ ಕಾಣಿಸಿಕೊಳ್ಳುತ್ತದೆ.

ಕೊಂಚವೂ ಉರಿ ಇದ್ದರೂ ಕಣ್ಣೀರಿನ ಪ್ರಮಾಣ ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಈ ತೊಂದರೆಗೆ ಬಹುತೇಕ ಕಂಪ್ಯೂಟರ್ ಪರದೆಯ ಸತತ ವೀಕ್ಷಣೆ ಕಾರಣವಾಗಿದ್ದು ಈ ತೊಂದರೆಗೆ CVS - computer vision syndrome ಎಂದು ಕರೆಯಲಾಗುತ್ತದೆ.

ಕಣ್ಣುಗಳಲ್ಲಿ ಅಗತ್ಯಕ್ಕೂ ಹೆಚ್ಚು ನೀರು ಕಾಣಿಸಿಕೊಳ್ಳುವುದು

ಕಣ್ಣುಗಳಲ್ಲಿ ಅಗತ್ಯಕ್ಕೂ ಹೆಚ್ಚು ನೀರು ಕಾಣಿಸಿಕೊಳ್ಳುವುದು

ಒಂದು ವೇಳೆ ನಿಮ್ಮ ಕಣ್ಣುಗಳಲ್ಲಿ ಮೊಸಳೆ ಕಣ್ಣೀರು ಸದಾ ಸುರಿಯುತ್ತಿದ್ದರೆ ಇದಕ್ಕೆ ಕಣ್ಣೀರಿನ ಗ್ರಂಥಿಗಳು ಮುಚ್ಚಿರುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಗ್ರಂಥಿಗಳು ಭಾವನಾತ್ಮಕ ಸ್ಥಿತಿಯಲ್ಲಿ ಕಣ್ಣೀರು ಸುರಿಸಿದರೂ ಇತರ ಸಮಯದಲ್ಲಿ ಕಣ್ಣೀರನ್ನು ಹೀರಿಕೊಳ್ಳುತ್ತವೆ. ಒಂದು ವೇಳೆ ಇವು ಮುಚ್ಚಿದ್ದರೆ ಸ್ರವಿಸಿದ ಕಣ್ಣೀರು ಇಂಗದೇ ಹೊರಹರಿದು ಮೊಸಳೆ ಕಣ್ಣೀರಾಗುತ್ತದೆ. ಒಂದು ವೇಳೆ ಈ ಸ್ಥಿತಿ ಇದ್ದರೆ ತಕ್ಷಣ ನೇತ್ರತಜ್ಞರನ್ನು ಭೇಟಿಯಾಗುವ ಅವಶ್ಯಕತೆ ಇದೆ.

 ಪ್ರಖರ ಬೆಳಕನ್ನು ನೋಡಲು ಅಸಾಧ್ಯವಾಗುವುದು

ಪ್ರಖರ ಬೆಳಕನ್ನು ನೋಡಲು ಅಸಾಧ್ಯವಾಗುವುದು

ಒಂದು ವೇಳೆ ನೀವು ವಾಹನವನ್ನು ರಾತ್ರಿ ಚಲಾಯಿಸುತ್ತಿದ್ದು ಮುಂದಿನ ವಾಹನದ ಬೆಳಕನ್ನು ನೋಡಲು ಸಾಧ್ಯವಾಗದೇ ಮುಚ್ಚಿಕೊಳ್ಳುವಂತಹ ಸಂದರ್ಭ ಎದುರಾದರೆ ಅಥವಾ ಮನೆಯ ಸಾಮಾನ್ಯ ಬಲ್ಬ್ ಹಾಗೂ ಟ್ಯೂಬ್ ಲೈಟುಗಳ ಬೆಳಕನ್ನೂ ನೇರವಾಗಿ ನೋಡಲು ಅಸಾಧ್ಯವಾದರೆ ಇದು ನಿಮ್ಮ ದೃಷ್ಟಿನರ ತೀಕ್ಷ್ಣ ಬೆಳಕನ್ನು ಸ್ವೀಕರಿಸುವ ಕ್ಷಮತೆಯನ್ನು ಕಳೆದುಕೊಂಡಿರುವುದನ್ನು ತೋರಿಸುತ್ತದೆ.

ಕಣ್ಣುರೆಪ್ಪೆ ಊದಿಕೊಳ್ಳುವುದು

ಕಣ್ಣುರೆಪ್ಪೆ ಊದಿಕೊಳ್ಳುವುದು

ಒಂದು ವೇಳೆ ನಿಮ್ಮ ಕಣ್ಣುಗಳ ರೆಪ್ಪೆಗಳು ಊದಿಕೊಂಡಿದ್ದರೆ ಇದು ಕಣ್ಣುಗಳ ಒಳಭಾಗ ಅಥವಾ ಕಣ್ಣುರೆಪ್ಪೆಗಳ ಕೆಳಭಾಗದಲ್ಲಿ ಸೋಂಕು ಉಂಟಾಗಿರುವುದನ್ನು ಸೂಚಿಸುತ್ತದೆ. ತಕ್ಷಣವೇ ನೇತ್ರತಜ್ಞರ ಬಳಿ ಹೋಗದೇ ಇದ್ದರೆ ಇದು ದೃಷ್ಟಿಯನ್ನೇ ಕಸಿದುಕೊಳ್ಳಬಹುದು.

ಕಣ್ಣುಗಳು ಕೆಂಪಗಾಗಿರುವುದು

ಕಣ್ಣುಗಳು ಕೆಂಪಗಾಗಿರುವುದು

ಸಾಮಾನ್ಯವಾಗಿ ವೆಲ್ಡಿಂಗ್ ಕೆಲಸ ಮಾಡುವವರ ಕಣ್ಣು ಮರುದಿನ ಕೆಂಪಗಾಗಿರುತ್ತದೆ. ಇದೇ ರೀತಿ ಅತಿ ಒತ್ತಡದಲ್ಲಿ ಹೆಚ್ಚು ಕಾಲ ಕೆಲಸ ಮಾಡುವವರ ಕಣ್ಣುಗಳೂ ಕೆಂಪಾಗಾಗಿರುತ್ತವೆ ಅಥವಾ ಚಿಕ್ಕ ಕೆಂಪು ಗೀರುಗಳಂತೆ ಕಣ್ಣುಗಳ ಒಳಗೆ ಸ್ಪಷ್ಟವಾಗಿ ಕಾಣುತ್ತವೆ. ಇದರೊಂದಿಗೆ ಕಣ್ಣುಗಳಲ್ಲಿ ತುರಿಕೆಯೂ ಇದ್ದರೆ ಇದು ಮದ್ರಾಸ್ ಐ ಅಥವಾ ಕಣ್ಣುಬೇನೆ (conjunctivitis) ಯ ಸಂಕೇತವಿರಬಹುದು.ಕಣ್ಣಿನ ಸೋಂಕಿಗೆ ಕಾರಣವಾಗಿರುವ ಮದ್ರಾಸ್ ಕಣ್ಣಿನ ಲಕ್ಷಣಗಳೇನು?

English summary

Surprising Symptoms Of Eye Diseases You Must Never Ignore!

In today's world, it is impossible for most people to function without computers, phones and other visual electronic gadgets. There have been numerous studies that have shown that working on the computer for too long and using your phones often, can seriously harm the optic nerves and damage the eye tissues. So, we must closely keep a tab on the changes happening in our eyes or vision, in order to detect disorders early. Here are a few surprising symptoms of eye diseases we must never ignore.
X
Desktop Bottom Promotion