For Quick Alerts
ALLOW NOTIFICATIONS  
For Daily Alerts

ಕಣ್ಣಿನ ಆರೋಗ್ಯಕ್ಕೆ ಸ್ಪೆಷಲ್ ಆರೈಕೆ ಹೀಗಿರಲಿ

|

ಕಣ್ಣು ತುಂಬಾ ಸೂಕ್ಷ್ಮ ಮತ್ತು ಪ್ರಮುಖ ಅಂಗವಾದ್ದರಿಂದ ಇದರೆಡೆಗಿನ ನಿರ್ಲಕ್ಷ್ಯ ಸಲ್ಲದು. ಕಣ್ಣಿನ ಮೇಲಿನ ಅತಿಯಾದ ಒತ್ತಡ ಕಣ್ಣು ನೋವಿಗೆ ಕಾರಣವಾಗಬಹುದು. ಆದ್ದರಿಂದ ಕಣ್ಣಿಗೂ ಸ್ಪೆಷಲ್ ಕೇರ್ ಅಗತ್ಯವಿದೆ. ಕೆಲವು ಸಿಂಪಲ್ ಸಲಹೆಗಳನ್ನು ಪಾಲಿಸಿದರೆ ಕಣ್ಣಿನ ಆರೋಗ್ಯವನ್ನು ಸುಲಭವಾಗಿ ಕಾಪಾಡಿಕೊಳ್ಳಬಹುದು.

* ನಿಯಮಿತ ಚೆಕ್-ಅಪ್ ನೀವು ಉತ್ತಮ ದೃಷ್ಟಿಯನ್ನು ಹೊಂದಿದ್ದರೂ ಮತ್ತು ಓದುವಿಕೆಯಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ, ಕನಿಷ್ಠ ವರ್ಷಕ್ಕೊಮ್ಮೆಯಾದರೂ ದೃಷ್ಟಿಯನ್ನು ಪರೀಕ್ಷಿಸಿ. ಇದು ಕಣ್ಣಿನ ಸಂಬಂಧಿತ ವಿವಿಧ ಕಾಯಿಲೆಗಳನ್ನು ಪತ್ತೆ ಮಾಡಲು ಮತ್ತು ಸರಿಯಾದ ಚಿಕಿತ್ಸೆ ನೀಡಿ ಇದನ್ನು ತಡೆಯಲು ಉತ್ತಮ ಮಾರ್ಗವಾಗಿದೆ.

Special Care For Eyes

* ಕಣ್ಣು ಮಿಟುಕಿಸುವುದು ನಿರಂತರವಾಗಿ ನಿಮ್ಮ ಕಣ್ಣುಗಳನ್ನು ಮಿಟುಕಿಸುತ್ತಿರುವುದು ನಿಮ್ಮ ಕಣ್ಣುಗಳನ್ನು ಫ್ರೇಶ್ ಆಗಿಡಲು ಮತ್ತು ಕಣ್ಣಿನ ಸುಸ್ತು/ನೋವನ್ನು ತಪ್ಪಿಸಲು ಬಹಳ ಸರಳ ಮಾರ್ಗವಾಗಿದೆ. ಕಂಪ್ಯೂಟರ್ ಬಳಕೆದಾರರು ಹೀಗೆ ತಮ್ಮ ಕಣ್ಣುಗಳನ್ನು ಪ್ರತಿ ಮೂರು ನಾಲ್ಕು ಸೆಕೆಂಡುಗಳಿಗೊಮ್ಮೆ ಮಿಟುಕಿಸುತ್ತಿರುವುದು ಒಳ್ಳೆಯದು.

* ನಿಮ್ಮ ಎರಡು ಕೈಗಳನ್ನು ಒಂದಕ್ಕೊಂದು (ಅಂಗೈ) ಉಜ್ಜಿ. ಆಗ ಬಿಸಿ ಅಥವಾ ಶಾಖ ಉತ್ಪತ್ತಿಯಾಗುತ್ತದೆ. ಈಗ ನಿಮ್ಮ ಕೈಗಳನ್ನು ಕಣ್ಣುಗಳಿಗೆ ಒತ್ತಿ. ಇದು ನಿಮ್ಮ ಕಣ್ಣುಗಳ ಸುಸ್ತನ್ನು ಶಮನ ಮಾಡಲು ಉತ್ತಮ ಕ್ರಮ. ಕಣ್ಣಿಗೆ ನೀಡಬಹುದಾದ ಇನ್ನೊಂದು ಉತ್ತಮವಾದ ವ್ಯಾಯಾಮವೆಂದರೆ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮಗಿಷ್ಟವಾದ ವಿಷಯವನ್ನು ನೆನಪಿಸಿಕೊಳ್ಳಿ. ನಿಮಗೆ ಇಷ್ಟವಾದ ಜಗತ್ತಿಗೆ ಪ್ರವೇಶಿಸುತ್ತಿದ್ದಂತೆ ನಿಮ್ಮ ಕಣ್ಣಿಗೆ ಖುಷಿಯ ಅನುಭವವಾಗುತ್ತದೆ.

* ನಾವು ವಸ್ತುಗಳನ್ನು ಅತ್ಯಂತ ನಿಕಟವಾಗಿ ನೋಡಲು ಅಭ್ಯಾಸ ಮಾಡಿಕೊಂಡಿರುತ್ತೇವೆ. ನೀವು ವಾಕಿಂಗ್ ಮಾಡುವಾಗ ಅಥವಾ ಕುಳಿತುಕೊಂಡಿರುವಾಗ ನಿಮ್ಮ ಸುತ್ತಮುತ್ತಲಿನ ದೂರದ ವಸ್ತುಗಳನ್ನು ನೋಡುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ.

* ಬೆಳಿಗ್ಗೆ ಅಥವಾ ಸಂಜೆ ಸೂರ್ಯನ ಕಿರಣ ಕಣ್ಣಿನ ಮೇಲೆ ಬೀಳುವುದರಿಂದ ಬಿಗಿಯಾದ ನರ ಸ್ನಾಯುಗಳ ಬಿಡಿಬಿಡಿಯಾಗಿ ಕಣ್ಣುಗಳು ಉತ್ತಮ ದೃಷ್ಟಿಯನ್ನು ಪಡೆಯಲು ಸಹಾಯವಾಗುತ್ತದೆ.

* ನಿಮ್ಮ ಕಾರು ಅಥವಾ ನಿಮ್ಮ ಕಛೇರಿಯಿಂದ ಹವಾನಿಯಂತ್ರಿತ ಗಾಳಿ ನಿಮ್ಮ ಕಣ್ಣುಗಳಲ್ಲಿ ಎಲ್ಲಾ ತೇವಾಂಶ ಎಳೆದುಕೊಳ್ಳಲು ಯಾವತ್ತಿಗೂ ಬಿಡಬೇಡಿ. ನಿಮ್ಮ ಮುಖ ಆದಷ್ಟು ಹವಾನಿಯಂತ್ರಿತ ಫಲಕದ ಕೆಳಕ್ಕೆ ಅಥವಾ ದೂರವಿರಲಿ.

* ಕಣ್ಣಿನ ಗಾಯಗಳು ನಿಮ್ಮ ಕಣ್ಣಿನ ದೃಷ್ಟಿಯ ಮೇಲೆ ಗಂಭೀರ ಪರಿಣಾಮ ಬೀರಬಲ್ಲದು. ಆದ್ದರಿಂದ ಯಾವಾಗಲೂ, ರಾಸಾಯನಿಕ ಕೆಲಸ ಮಾಡುವಾಗ, ಆಟವಾಡುವಾಗ, ಪಟಾಕಿ ಸಿಡಿಸುವಾಗ, ಅಥವಾ ಈಜುವಾಗ ಸುರಕ್ಷತೆಯ ಕನ್ನಡಕಗಳನ್ನು ಧರಿಸಲು ಮರೆಯದಿರಿ.

* ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ಕಣ್ಣಿನ ದೃಷ್ಟಿ ಮತ್ತು ಇತರ ಕಣ್ಣಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ನೀವು ಸನ್ ಗ್ಲಾನ್ ಗಳನ್ನು ಕೊಂಡುಕೊಳ್ಳುವಾಗ ಅದು 100% ಸೂರ್ಯನ ನೇರಳಾತೀತ ಕಿರಣಗಳನ್ನು ತಪ್ಪಿಸುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಿ.

English summary

Special Care For Eyes

Eyes are the most sensitive organ of our body. They require special care as they are very delicate and important part. Here are some tips which help you to get rid from eye problem.
Story first published: Monday, November 11, 2013, 14:32 [IST]
X
Desktop Bottom Promotion