For Quick Alerts
ALLOW NOTIFICATIONS  
For Daily Alerts

ನೀವೂ ನಂಬಲೇಬೇಕು, 'ಮದ್ಯ' ದಿಂದಲೂ ಸಾಕಷ್ಟು ಲಾಭಗಳಿವೆ!

ಆಲ್ಕೊಹಾಲ್ ಅಂದಾಕ್ಷಣ ಹೆಚ್ಚಿನವರು ಅಮಲು ಪದಾರ್ಥವೆಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ, ಆದರೆ ನೀವು ನಂಬುತ್ತೀರೋ, ಬಿಡುತ್ತೀರೋ ಆಲ್ಕೊಹಾಲ್‌ನಿಂದಲೂ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ...

By Arshad
|

ಮದ್ಯ ಅಥವಾ ಆಲ್ಕೊಹಾಲ್ ಅಂದಾಕ್ಷಣ ಹೆಚ್ಚಿನವರು ಅಮಲು ಪದಾರ್ಥವೆಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ವಾಸ್ತವವಾಗಿ ಮಾದಕ ಪಾನೀಯಗಳ ಹೊರತಾಗಿ ಆಲ್ಕೊಹಾಲ್ ದಿನಬಳಕೆಯ ನೂರಾರು ವಸ್ತುಗಳಲ್ಲಿ ಬಳಕೆಯಾಗುತ್ತದೆ. ಅಷ್ಟೇ ಏಕೆ, ನೂರಾರು ಔಷಧಿಗಳಲ್ಲಿಯೂ ಆಲ್ಕೊಹಾಲ್ ಬಳಕೆಯಾಗುತ್ತದೆ.

ವೈದ್ಯರು ಇಂಜೆಕ್ಷನ್ ಚುಚ್ಚುವ ಮೊದಲು ಒದ್ದೆ ಬಟ್ಟೆಯಿಂದ (alcohol swab) ಚರ್ಮವನ್ನು ಒರೆಸುತ್ತಾರಲ್ಲಾ, ಇದೂ ಸಹಾ ಆಲ್ಕೊಹಾಲ್ ದ್ರವದಿಂದ ತೋಯ್ದಿದೆ. ಚರ್ಮಕ್ಕೆ ಇದನ್ನು ಉಜ್ಜುವ ಮೂಲಕ ಚರ್ಮದಲ್ಲಿ ಸೋಂಕು ಉಂಟಾಗದಂತೆ ತಡೆಯುತ್ತದೆ. ಆಲ್ಕೊಹಾಲ್ ಅನ್ನು ಚರ್ಮಕ್ಕೆ ಮಸಾಜ್ ಮಾಡುವ ಮೂಲಕವೂ ಹಲವು ರೀತಿಯ ಪ್ರಯೋಜನಗಳಿವೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ನೈಂಟಿ ಕುಡಿದು ಮಾತ್ರೆ ತಿಂದರೆ ಡೇಂಜರ್!!

ಆಲ್ಕೊಹಾಲ್‌ನಲ್ಲಿ ಹಲವು ವಿಧಗಳಿವೆ. ಮಾದಕ ಪದಾರ್ಥಕ್ಕಾಗಿ ಬಳಸಲಾಗುವ ಆಲ್ಕೊಹಾಲ್ ಹಾಗೂ ಚರ್ಮಕ್ಕೆ ಮಸಾಜ್ ಮಾಡುವ ಆಲ್ಕೊಹಾಲ್ ಗೂ ಬಹಳ ವ್ಯತ್ಯಾಸವಿದೆ. ಚರ್ಮಕ್ಕೆ ಹಚ್ಚುವ ಆಲ್ಕೊಹಾಲ್ ಕಡಿಮೆ ಪ್ರಬಲವಾಗಿದ್ದು ಸ್ವಚ್ಛಕಾರಕ ದ್ರವದಂತೆ ಕೆಲಸ ಮಾಡುತ್ತದೆ. ಮದ್ಯಪಾನ ಸೇವಿಸುವವರ ಅತಿ ವಿಶಿಷ್ಟ ರಹಸ್ಯಗಳು!

ಇದನ್ನು ಗಾಜು, ಕಿಟಕಿ ಮೇಜುಗಳನ್ನು ಸ್ವಚ್ಛಗೊಳಿಸಲೂ, ಬಟ್ಟೆಗಳ ಮೇಲಿನ ಶಾಯಿಯ ಕಲೆಗಳನ್ನು ನಿವಾರಿಸಲೂ ಉಪಯೋಗಿಸ ಬಹುದು. ಬನ್ನಿ, ಈ ಸ್ವಚ್ಛಕಾರಕ ಗುಣವನ್ನು ಚರ್ಮಕ್ಕೆ ಮಸಾಜ್ ಮಾಡುವ ಮೂಲಕ ಯಾವ ರೀತಿಯ ಪ್ರಯೋಜನಗಳನ್ನು ಪಡೆಯ ಬಹುದು ಎಂಬುದನ್ನು ನೋಡೋಣ......


ಸ್ನಾಯುಗಳ ನೋವನ್ನು ಕಡಿಮೆಗೊಳಿಸುತ್ತದೆ

ಸ್ನಾಯುಗಳ ನೋವನ್ನು ಕಡಿಮೆಗೊಳಿಸುತ್ತದೆ

ಚರ್ಮಕ್ಕೆ ಹಚ್ಚಲೆಂದೇ rubbing alcohol ಎಂಬ ಹೆಸರಿನಲ್ಲಿ ಈ ದ್ರಮ ದೊರಕುತ್ತದೆ. ಈ ದ್ರವವನ್ನು ನೋವು ಇರುವ ಸ್ನಾಯುಗಳ ಮೇಲೆ ಹಚ್ಚಿ ತೆಳುವಾದ ಬಟ್ಟೆಯ ಪಟ್ಟೆ ಕಟ್ಟಿ ಒಂದು ಘಂಟೆ ಬಿಟ್ಟರೆ ಸಾಕು, ಸ್ನಾಯುಗಳ ನೋವು ಕಡಿಮೆಯಾಗುತ್ತದೆ. ಉತ್ತಮ ಪರಿಣಾಮ ಪಡೆಯಲು ನೋವಿರುವ ಭಾಗಕ್ಕೆ ದಿನಕ್ಕೊಂದು ಬಾರಿ ಈ ವಿಧಾನವನ್ನು ಅನುಸರಿಸಿದರೆ ಸಾಕು.

ಕಿವಿಯಲ್ಲಿ ಸಿಲುಕಿದ್ದ ನೀರನ್ನು ಹೊರಹಾಕಲು ನೆರವಾಗುತ್ತದೆ

ಕಿವಿಯಲ್ಲಿ ಸಿಲುಕಿದ್ದ ನೀರನ್ನು ಹೊರಹಾಕಲು ನೆರವಾಗುತ್ತದೆ

ಸಾಮಾನ್ಯವಾಗಿ ಈಜುಕೊಳದಿಂದ ಹೊರಬಂದವರ ಕಿವಿಗಳ ಒಳಗೆ ನೀರು ಹೋಗಿ ಸಿಲುಕಿಕೊಂಡಿದ್ದು ಸುಲಭಕ್ಕೆ ಹೊರಬರುವುದಿಲ್ಲ. ಒಂಟಿಗಾಲಿನಲ್ಲಿ ಕುಣಿದರೆ ಬಲವಂತವಾಗಿ ಹೊರಬರುತ್ತದಾದರೂ ಸುಲಭವಾಗಿಯಂತೂ ಅಲ್ಲ.

ಕಿವಿಯಲ್ಲಿ ಸಿಲುಕಿದ್ದ ನೀರನ್ನು ಹೊರಹಾಕಲು ನೆರವಾಗುತ್ತದೆ

ಕಿವಿಯಲ್ಲಿ ಸಿಲುಕಿದ್ದ ನೀರನ್ನು ಹೊರಹಾಕಲು ನೆರವಾಗುತ್ತದೆ

ಇದರ ಬದಲಿಗೆ ರಬ್ಬಿಂಗ್ ಆಲ್ಕೊಹಾಲ್‌ನ ಕೆಲವು ಹನಿಗಳನ್ನು ಬಿಳಿಯ ಶಿರ್ಕಾದ ಹೆಲವು ಹನಿಗಳೊಂದಿಗೆ ಬೆರೆಸಿ ಈ ಮಿಶ್ರಣವನ್ನು ಕಿವಿಗೆ ಬಿಡಿ. ಬಳಿಕ ನಿಧಾನವಾಗಿ ತಲೆಯನ್ನು ವಿರುದ್ದ ದಿಕ್ಕಿನಲ್ಲಿ ಬಗ್ಗಿಸಿ. ಈ ದ್ರವ ಕಿವಿಯೊಳಗೆ ಸಿಲುಕಿಕೊಂಡಿದ್ದ ನೀರನ್ನು ತನ್ನೊಂದಿಗೆ ಕರೆತಂದು ಮುಚ್ಚಿದ್ದ ಕಿವಿಯನ್ನು ತೆರೆಯುತ್ತದೆ.

ಕಾಲುಬೆರಳುಗಳ ಉಗುರಿನ ಸಂದುಗಳ ಸೋಂಕನ್ನು ನಿವಾರಿಸುತ್ತದೆ

ಕಾಲುಬೆರಳುಗಳ ಉಗುರಿನ ಸಂದುಗಳ ಸೋಂಕನ್ನು ನಿವಾರಿಸುತ್ತದೆ

ಕೆಲವು ಹನಿ ಆಲ್ಕೊಹಾಲ್ ಮತ್ತು ಕೆಲವು ಹನಿ ಬಿಳಿ ಶಿರ್ಕಾ (white vinegar) ಬೆರೆಸಿ ಹತ್ತಿಯ ಉಂಡೆಯೊಂದನ್ನು ಇದರಲ್ಲಿ ಮುಳುಗಿಸಿ ಈ ಉಂಡೆಯಿಂದ ಸೋಂಕಿಗೆ ಒಳಗಾಗಿದ್ದ ಕಾಲು ಬೆರಳುಗಳ ಉಗುರುಗಳ ಸಂಧುಗಳಲ್ಲಿ ಉಜ್ಜಿ ಈ ದ್ರವ ಸಂದುಗಳ ಒಳಗೆ ಹಾಯುವಂತೆ ಹಿಂಡಿ.

ಕಾಲುಬೆರಳುಗಳ ಉಗುರಿನ ಸಂದುಗಳ ಸೋಂಕನ್ನು ನಿವಾರಿಸುತ್ತದೆ

ಕಾಲುಬೆರಳುಗಳ ಉಗುರಿನ ಸಂದುಗಳ ಸೋಂಕನ್ನು ನಿವಾರಿಸುತ್ತದೆ

ಬಳಿಕ ಈ ಉಂಡೆಯನ್ನು ಸೋಂಕಿನ ಭಾಗಕ್ಕೆ ತಾಕುವಂತೆ ಇರಿಸಿ ಸುಮಾರು ಅರ್ಧ ಗಂಟೆ ಹಾಗೇ ಬಿಡಿ. ಬಳಿಕ ಸೋಂಕನ್ನು ಕೆರೆದು ತೆಗೆಯುವ ಸೂಕ್ತ ಉಪಕರಣ ಉಪಯೋಗಿಸಿ ಸ್ವಚ್ಛಗೊಳಿಸಿ ತೇವವನ್ನು ಹತ್ತಿಯಿಂದ ಒಣಗಿಸಿ.ಗುಣವಾಗುವವರೆಗೂ ಈ ಭಾಗದಲ್ಲಿ ನೀರು ಬೀಳದಂತೆ ಎಚ್ಚರವಹಿಸಿ.

ಚಿಕ್ಕ ಪುಟ್ಟ ಗಾಯಗಳನ್ನು ಮಾಗಿಸುತ್ತದೆ

ಚಿಕ್ಕ ಪುಟ್ಟ ಗಾಯಗಳನ್ನು ಮಾಗಿಸುತ್ತದೆ

ಆಲ್ಕೊಹಾಲ್ ದ್ರವದಿಂದ ಚಿಕ್ಕ ಪುಟ್ಟ ತರಚು ಗಾಯಗಳನ್ನು ಒರೆಸುವುದರಿಂದ ಕೊಂಚ

ಉರಿಯಾಗುತ್ತದಾದರೂ ಇದರಿಂದ ಸೋಂಕಾಗದಂತೆ ಎಚ್ಚರ ವಹಿಸಬಹುದು. ಇದಕ್ಕಾಗಿ ಆಲ್ಕೊಹಾಲ್ ಸ್ವಾಬ್ ಪಟ್ಟಿಯನ್ನು ನೇರವಾಗಿ ಉಪಯೋಗಿಸಬಹುದು. ಅಥವಾ ಕೆಲವು ಹನಿ ಆಲ್ಕೊಹಾಲ್ ಅನ್ನು ನೀರಿನೊಂದಿಗೆ ಬೆರಸಿ ಗಾಯದ ಮೇಲೆ ಆವರಿಸುವಂತೆ ಹಚ್ಚಬೇಕು.

ತುಟಿಯ ವ್ರಣವನ್ನು ಮಾಗಿಸುತ್ತದೆ

ತುಟಿಯ ವ್ರಣವನ್ನು ಮಾಗಿಸುತ್ತದೆ

ಕೊಂಚ ರಬ್ಬಿಂಗ್ ಆಲ್ಕೊಹಾಲ್ ಅನ್ನು ಹತ್ತಿಯುಂಡೆಯೊಂದರಲ್ಲಿ ಮುಳುಗಿಸಿ ಈ ಉಂಡೆಯಿಂದ ನಯವಾಗಿ ವ್ರಣವನ್ನು ಒರೆಸಿಕೊಳ್ಳಿ. ರಾತ್ರಿ ಮಲಗುವ ಮುನ್ನ ಹಚ್ಚಿಕೊಂಡು ಮಲಗಿ ಬೆಳಿಗ್ಗೆದ್ದ ಬಳಿಕ ಈ ವ್ರಣ ಒಣಗಿರುತ್ತದೆ. ಪೂರ್ಣವಾಗಿ ಒಣಗಿ ಪಕಳೆಯಂತೆ ವ್ರಣದ ಸಿಪ್ಪೆಯೆದ್ದು ಹೋಗುವವರೆಗೂ ನೀರು ತಾಕದಂತೆ ಎಚ್ಚರವಹಿಸಿ.

ಸೊಳ್ಳೆ ಕಚ್ಚಿದ ಉರಿಯನ್ನು ಶಮನಗೊಳಿಸುತ್ತದೆ

ಸೊಳ್ಳೆ ಕಚ್ಚಿದ ಉರಿಯನ್ನು ಶಮನಗೊಳಿಸುತ್ತದೆ

ಸೊಳ್ಳೆ ಕಚ್ಚಿದ ಭಾಗಕ್ಕೆ ತಕ್ಷಣವೇ ಆಲ್ಕೊಹಾಲ್ ಸ್ವಾಬ್ ನಿಂದ ಅಥವಾ ರಬ್ಬಿಂಗ್ ಆಲ್ಕೊಹಾಲ್ ದ್ರವದಲ್ಲಿ ಸೋಕಿರುವ ಹತ್ತಿಯನ್ನು ಒರೆಸಿಕೊಂಡು ಹತ್ತು ನಿಮಿಷದ ಬಳಿಕ ನೀರಿನಿಂದ ತೊಳೆದುಕೊಂಡರೆ ಉರಿ ಮತ್ತು ಊತವುಂಟಾಗದಂತೆ ತಡೆಗಟ್ಟಬಹುದು.

English summary

Surprising Health Benefits Of Rubbing Alcohol You Didn't Know

Many of us know about rubbing alcohol, but as a cleaning ingredient for glass and windows or to remove ink stains, but hardly any of us are aware that it is used to treat many health conditions as well. Check out a few of the surprising health benefits of rubbing alcohol here.
X
Desktop Bottom Promotion